ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಅಪರಿಚಿತರು ನಿಗೂಢ ಬರಹದ ಪೋಸ್ಟರ್ (Threatening poster) ಒಂದನ್ನು ಅಂಟಿಸಿದ್ದು, ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಸ್ಥಳೀಯರ ಭೀತಿಗೂ ಕಾರಣವಾಗಿದೆ. ಈ ಪೋಸ್ಟರ್ ಇರುವ ಫೋಟೊಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral news) ಆಗಿದೆ.
ಅಂಕೋಲಾ ಪಟ್ಟಣದ ಬಂಡೀಬಜಾರದ ಸ್ಪೋರ್ಟ್ಸ್ ಅಂಗಡಿಯೊಂದರ ಗೋಡೆಯ ಮೇಲೆ ಮೂರು ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಇದನ್ನು ಬೆಳಗ್ಗೆ ಸ್ಥಳೀಯರು ಗಮನಿಸಿದ್ದು, ಬಳಿಕ ಈ ಸುದ್ದಿ ಪಟ್ಟಣದಾದ್ಯಂತ ಹರಡಿದೆ. ಬಿಳಿ ಹಾಳೆಯ ಮೇಲೆ ಕೆಂಪು ಬಣ್ಣದ ಮಾರ್ಕರ್‌ನಿಂದ ಇಂಗ್ಲಿಷ್ ಹಾಗೂ ಕನ್ನಡ ಮಿಶ್ರಿತವಾಗಿ ಬರೆದಿರುವ ಬರಹ ನಿಗೂಢವಾಗಿದ್ದು ಓದಿದರೆ ಸರಿಯಾಗಿ ಅರ್ಥವಾಗುತ್ತಿಲ್ಲ.
ಇದನ್ನೂ ಓದಿ: Video Viral: ಅಯ್ಯೋ ಭಗವಂತ, ಆನೆ ಓಡೋಡಿ ಬಂದೇ ಬಿಡ್ತು, ಇನ್ನೇನು ಗತಿ?; ವಿಚಾರವಾದಿ ಭಗವಾನ್ ಜಸ್ಟ್ ಸೇವ್!
ಬರಹದ ಮೇಲೆ ಸಂಗ್ಲಾನಿ ವೆಲ್‌ಫೇರ್ ಟ್ರಸ್ಟ್ ಎಂದು ಬರೆದಿದ್ದು, ಅದರ ಕೆಳಗೆ ಬ್ರಾಕೆಟ್‌ನಲ್ಲಿ ಪಾಕಿಸ್ತಾನ ಕಾಂಟ್ರ್ಯಾಕ್ಟ್ ಎಂದು ಬರೆಯಲಾಗಿದೆ. ಬರಹದಲ್ಲಿ ಪಟ್ಟಣದ ಪಿ.ಎಂ ಹೈಸ್ಕೂಲ್, ಜೈಹಿಂದ್ ಹೈಸ್ಕೂಲ್ ಹೆಸರನ್ನು ಉಲ್ಲೇಖಿಸಲಾಗಿದೆ. ಅಲ್ಲದೆ, “ಕೆಎಲ್‌ಇ ಕಾಲೇಜ್, ಉರ್ದು ವೆಲ್‌ಫೇರ್ ಟ್ರಸ್ಟ್‌ನಿಂದ ಹಣ ಕಮಾಯಿಸಿ”, “ಇಂಡಿಯಾ ಫಾರೆಸ್ಟ್ ಮಾರಿದ್ದಾರೆ”, “20 ವರ್ಷದಲ್ಲಿ ಎಲ್ಲವೂ ನೆಲ ಸಮ ಆಗುತ್ತಿದೆ”, “ಪಿಎಂ ಹೈಸ್ಕೂಲ್‌ಗೆ ಹೋಗಿ, ವೇಸ್ಟೇಜ್ ಫೈನಾನ್ಸ್ ಸಿಗುತ್ತದೆ” ಎಂಬಿತ್ಯಾದಿಯಾಗಿ ಅರ್ಥ ಇಲ್ಲದಂತೆ ಬರೆಯಲಾಗಿದೆ. ಫಾರೆಸ್ಟ್, ಪೊಲೀಸ್ ಶಬ್ದಗಳನ್ನೂ ಬರೆಯಲಾಗಿದೆ. ಕೊನೆಯಲ್ಲಿ ಇಂತಿ ನಿಮ್ಮ ನಾಗರಿಕ ಎಂದು ಬರೆದಿದ್ದು ಯಾವುದೇ ಹೆಸರನ್ನು ಉಲ್ಲೇಖಿಸಿಲ್ಲ.
ನೂರು ಬಿಲಿಯನ್ ಡಾಲರ್
ಇನ್ನೊಂದು ಪೋಸ್ಟರ್‌ನಲ್ಲಿ ಬರೆದಿರುವ ಸಾಲುಗಳು ಅಲ್ಪ ಸ್ವಲ್ಪ ಅಳಿಸಿ ಹೋಗಿದೆ. ಮೂರನೇ ಪೋಸ್ಟರ್‌ನಲ್ಲಿ ಹೈಸ್ಕೂಲ್ ಗರ್ಲ್ಸ್ ಆ್ಯಂಡ್ ಬಾಯ್ಸ್ ಎಂದು ಬರೆಯಲಾಗಿದೆ. ನೂರು ಬಿಲಿಯನ್ ಡಾಲರ್ ಎಂದೂ ಬರೆಯಲಾಗಿದೆ. ಮೇಲ್ನೋಟಕ್ಕೆ ಯಾರೋ ಮಾನಸಿಕ ಅಸ್ವಸ್ಥರು ಬರೆದು ಅಂಟಿಸಿದಂತಿದೆ. ಆದರೆ, ತನಿಖೆ ಬಳಿಕವೇ ಸತ್ಯಾಂಶ ತಿಳಿದುಬರಬೇಕಿದೆ.
ಇದನ್ನೂ ಓದಿ: ಟ್ರೀಟ್ಮೆಂಟ್ ತಗೊಳ್ಳೋದಾದ್ರೆ ತಗೊಳ್ಳಿ; ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರನೇ ಡಾಕ್ಟರ್!
ಆತಂಕದಲ್ಲಿ ಸ್ಥಳೀಯ ಜನತೆ
ಇದನ್ನು ಯಾರು ಬರೆದಿದ್ದಾರೋ ಗೊತ್ತಿಲ್ಲ. ಆದರೆ, ಬರಹದಲ್ಲಿ ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸಲಾಗಿದೆ. ಜತೆಗೆ ಕಾಂಟ್ರ್ಯಾಕ್ಟ್ ಎಂದು ಬರೆಯಲಾಗಿದೆ. ಇದು ಕಾಂಟ್ರ್ಯಾಕ್ಟ್ ಎಂದೋ, ಸ್ಪೆಲ್ಲಿಂಗ್ ಮಿಸ್ಟೇಕ್ ಆಗಿ ಕಾಂಟ್ಯಾಕ್ಟ್ ಎಂದು ಬರೆಯಲು ಹೋಗಿರಬಹುದೋ? ಒಂದೂ ಅರ್ಥವಾಗುತ್ತಿಲ್ಲ. ಈ ಪ್ರಕರಣವನ್ನು ಇಷ್ಟಕ್ಕೇ ಬಿಡದೆ ಸೂಕ್ತ ತನಿಖೆ ನಡೆಸಿ ಪೋಸ್ಟರ್ ಬರೆದು ಅಂಟಿಸಿದವರನ್ನು ಪತ್ತೆ ಹಚ್ಚಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.