Site icon Vistara News

Leopard Attack | ಕೆ.ಆರ್.ನಗರದಲ್ಲಿ ಚಿರತೆ ದಾಳಿಯಿಂದ ಮೂವರಿಗೆ ಗಾಯ; ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ

Leopard

ಮೈಸೂರು: ಮೊದಲೆಲ್ಲ ಕಾಡಂಚಿನ ಗ್ರಾಮಗಳಲ್ಲಿ ಮಾತ್ರ ವನ್ಯಜೀವಿಗಳ ಹಾವಳಿ ಇತ್ತು. ಇತ್ತೀಚೆಗೆ ಗ್ರಾಮ, ಪಟ್ಟಣ, ನಗರ ಪ್ರದೇಶಗಳಲ್ಲೂ ಚಿರತೆಗಳು ಕಾಣಿಸಿಕೊಳ್ಳುವುದು ಹಾಗೂ ಜನದಟ್ಟಣೆ ನಡುವೆಯೇ ಸಂಚರಿಸಿ ಆತಂಕ ಮೂಡಿಸುವ ವಿದ್ಯಮಾನಗಳು ಮೇಲಿಂದ ಮೇಲೆ ನಡೆಯುತ್ತಿವೆ. ಈ ನಡುವೆ ಕೆ.ಆರ್.ನಗರ ಪಟ್ಟಣದಲ್ಲಿ ಶುಕ್ರವಾರ ಬೆಳಗ್ಗೆ ಚಿರತೆ ದಾಳಿಯಲ್ಲಿ (Leopard Attack) ಉಪ ವಲಯ ಅರಣ್ಯಾಧಿಕಾರಿ ಸೇರಿ ಮೂವರಿಗೆ ಗಂಭೀರ ಗಾಯಗಳಾಗಿವೆ.

ಕೆ.ಆರ್.ನಗರದ ಮುಳ್ಳೂರು ರಸ್ತೆಯ ಕನಕನಗರ ಬಡಾವಣೆಯ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್‌ ಸವಾರನ ಮೇಲೆ ಮೊದಲಿಗೆ ಚಿರತೆ ದಾಳಿ ಮಾಡಿ ನೆಲಕ್ಕುರುಳಿಸಿದೆ. ಈ ವೇಳೆ ಅದನ್ನು ಓಡಿಸಲು ಯತ್ನಿಸಿದ ಡಿಆರ್‌ಎಫ್‌ಒ ಮಂಜುನಾಥ್‌ ಮೇಲೆ ದಾಳಿ ಮಾಡಿದೆ. ನಂತರ ಮತ್ತೊಬ್ಬರ ಮೇಲೆ ಎರಗಿ ಗಾಯಗೊಳಿಸಿದೆ. ಬಳಿಕ ಅಡ್ಡಾದಿಡ್ಡಿಯಾಗಿ ಓಡಾಡಿ ಸಾರ್ವಜನಿಕರಿಗೆ ಆತಂಕ ಉಂಟು ಮಾಡಿತು. ಇದಕ್ಕೂ ಮುನ್ನ ಸುತ್ತಮುತ್ತಲಿನ ಮನೆಗಳ ಕಾಂಪೌಂಡ್‌ ಹತ್ತಲು ಯತ್ನಿಸಿದ್ದರಿಂದ ಜನರು ದಿಕ್ಕಾಪಾಲಾಗಿ ಓಡಿದರು.

ಚಿರತೆ ಬಂದಿದ್ದರಿಂದ ರಸ್ತೆಗಳಲ್ಲಿ ಸಾರ್ವಜನಿಕರು ಓಡಾಡಲೂ ಭಯಪಟ್ಟುಕೊಳ್ಳುವ ಸನ್ನಿವೇಶ ನಿರ್ಮಾಣವಾಗಿತ್ತು. ಹೀಗಾಗಿ ತೀವ್ರ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ರಾಜ್​ಪ್ರಕಾಶ್ ಶಾಲೆ ಸಮೀಪದ ಪೊದೆಯಲ್ಲಿ ಅವಿತು ಕುಳಿತಿದ್ದ ಚಿರತೆಯನ್ನು ಬಲೆ ಬೀಸಿ ಹಿಡಿಯುವಲ್ಲಿ ಯಶಸ್ವಿಯಾದರು. ಬಳಿಕ ಬೋನಿಗೆ ಹಾಕಿ ಸ್ಥಳಾಂತರ ಮಾಡಲಾಯಿತು.

ಇದನ್ನೂ ಓದಿ | TT on fire | ಕ್ಷಣಾರ್ಧದಲ್ಲಿ ಧಗಧಗಿಸಿದ ಟಿಟಿ, ಚಾಲಕನ ಸಮಯಪ್ರಜ್ಞೆಯಿಂದ 10 ಮಂದಿ ಪವಾಡಸದೃಶ ಪಾರು

Exit mobile version