ಬೆಂಗಳೂರು: ಬೆಂಗಳೂರು ಸದ್ಯ ವಿಶ್ವ ಮಟ್ಟದಲ್ಲಿ ಜನಪ್ರಿಯವಾಗಿದೆ. ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಎಂದೇ ಗುರುತಿಸಿಕೊಂಡಿದೆ. ಜತೆಗೆ ಬೆಂಗಳೂರು ಆಹಾರ ಪ್ರಿಯರ ನೆಚ್ಚಿನ ತಾಣವೂ ಹೌದು. ಇಲ್ಲಿ ಸಿಗುವ ವೈವಿಧ್ಯಮಯ ಆಹಾರಕ್ಕೆ, ಆತಿಥ್ಯಕ್ಕೆ ಬಹುತೇಕರು ಮನ ಸೋಲುತ್ತಾರೆ. ಈ ಮಧ್ಯೆ ಪ್ರಪಂಚದ ಟಾಪ್ 1,000 ರೆಸ್ಟೋರೆಂಟ್ (Top Restaurant) ಪಟ್ಟಿಯಲ್ಲಿ ನಮ್ಮ ಬೆಂಗಳೂರಿನ ರೆಸ್ಟೋರೆಂಟ್‌ಗಳು ಸ್ಥಾನ ಪಡೆದಿವೆ.
ಯಾವೆಲ್ಲ ರೆಸ್ಟೋರೆಂಟ್‌ಗಳು?
ಫ್ರಾನ್ಸ್ ಮೂಲದ ರೆಸ್ಟೋರೆಂಟ್ ಮಾರ್ಗದರ್ಶಿ ಮತ್ತು ಶ್ರೇಯಾಂಕ ಕಂಪನಿ ಲಾ ಲಿಸ್ಟೆ (La Liste) ಇತ್ತೀಚೆಗೆ 2024ರ ‘ವಿಶ್ವದ ಅಗ್ರ 1,000 ರೆಸ್ಟೋರೆಂಟ್ʼಗಳ(Top 1,000 Restaurants In the World) ಪಟ್ಟಿಯನ್ನು ಪ್ರಕಟಿಸಿದೆ. ಅದರಲ್ಲಿ ಭಾರತದ ವಿವಿಧ ರೆಸ್ಟೋರೆಂಟ್‌ಗಳು ಸ್ಥಾನ ಪಡೆದಿವೆ. ಆ ಪೈಕಿ ಬೆಂಗಳೂರಿನ ಹಲವು ಹೋಟೆಲ್‌ಗಳಿವೆ ಎನ್ನುವುದು ವಿಶೇಷ. ನವದೆಹಲಿಯ ಇಂಡಿಯನ್ ಆಕ್ಸೆಂಟ್ (95 ಅಂಕ) ದೇಶದಲ್ಲೇ ನಂಬರ್ 1 ಎನಿಸಿಕೊಂಡಿದೆ. ಬೆಂಗಳೂರಿನ ಕರಾವಳ್ಳಿ (86 ಅಂಕ), ಜಮಾವರ್- ಲೀಲಾ ಪ್ಯಾಲೇಸ್ (83 ಅಂಕ) ಮತ್ತು ಲೆ ಸಿರ್ಕ್ ಸಿಗ್ನೇಚರ್- ದಿ ಲೀಲಾ ಪ್ಯಾಲೇಸ್ (82.5 ಅಂಕ) ರೆಸ್ಟೋರೆಂಟ್‌ಗಳು ಅತ್ಯುತ್ತಮ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಇನ್ನು ದೆಹಲಿಯ ದಮ್ ಪುಖ್ತ್ (84 ಅಂಕ), ಮೆಗು-ಲೀಲಾ ಪ್ಯಾಲೇಸ್ (82 ಅಂಕ), ಬುಖಾರ- ಐಟಿಸಿ ಮೌರ್ಯ (79 ಅಂಕ), ಮುಂಬೈಯ ಯೌಚಾ (84 ಅಂಕ) ಮತ್ತು ಜಿಯಾ (78.5 ಅಂಕ) ರೆಸ್ಟೋರೆಂಟ್‌ಗಳೂ ಆಯ್ಕೆಯಾಗಿವೆ. ಜತೆಗೆ ಹೈದರಾಬಾದ್‌ನಿಂದ ಅದಾ-ಫಲಕ್ನುಮಾ ಪ್ಯಾಲೇಸ್ (84 ಅಂಕ) ರೆಸ್ಟೋರೆಂಟ್ ಹೆಸರನ್ನು ಕೂಡ ಪಟ್ಟಿಗೆ ಪರಿಗಣಿಸಲಾಗಿದೆ.
ಅಲ್ಲದೆ ಮುಂಬೈಯ ವಸಾಬಿ ಬೈ ಮೊರಿಮೊಟೊ- ದಿ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್, ದಿ ಟೇಬಲ್, ಮಾಸ್ಕ್, ದಿ ಬಾಂಬೆ ಕ್ಯಾಂಟೀನ್, ಇಜುಮಿ ಬಾಂದ್ರಾ, ಒ ಪೆಡ್ರೊ, ಅಮೇರಿಕಾನೊ ಮತ್ತು ಸೀಫಾ ಸ್ಥಾನ ಪಡೆದಿವೆ. ಜತೆಗೆ ಬೆಂಗಳೂರಿನ ಬೆಂಗಳೂರು ಊಟಾ ಕಂಪನಿ, ಫಾರ್ಮ್ಲೂರು, ಲುಪಾ ಮತ್ತು ಫಲಕ್ ಕೂಡ ಇದೆ. ಕೋಲ್ಕತ್ತಾದ ಬಾನ್ ಥಾಯ್ ಮತ್ತು ಸಿಯೆನ್ನಾ ಸ್ಟೋರ್ & ಕೆಫೆ, ಚೆನ್ನೈನ ಅವರ್ತನಾ ಮತ್ತು ಗೋವಾದ ಅವಿನಾಶ್ ಮಾರ್ಟಿನ್ಸ್ ಮತ್ತು ಬೊಮ್ರಾಸ್ ಮತ್ತಿತರ ರೆಸ್ಟೋರೆಂಟ್‌ಗಳ ಹೆಸರು ಉಲ್ಲೇಖವಾಗಿದೆ ಎಂದು ಮೂಲಗಳು ತಿಳಿಸಿವೆ.
ಜಗತ್ತಿನ ಟಾಪ್ ಟೆನ್
ಅಮೇರಿಕದ ಲೆ ಬರ್ನಾರ್ಡಿನ್, ಇಂಗ್ಲೆಂಡ್‌ನ ಎಲ್’ ಎನ್ಕ್ಲೂಮ್-ಸಿಮೋನ್ ರೋಗನ್, ಫ್ರಾನ್ಸ್‌ನ ಗೈ ಸವೊಯ್, ಲಾ ವಾಗ್ಯೂ ಡಿಓರ್-ಲೆ ಚೇವಲ್ ಬ್ಲಾಂಕ್, ಜರ್ಮನಿಯ ಶೆವರ್ಝವಾಡ್‌ಸ್ಟುಬಿ, ಚೀನಾದ ಲುಂಗ್ ಕಿಂಗ್ ಹೀನ್, ಜಪಾನ್‌ನ ಸುಶಿ ಸೈಟೊ, ಸ್ಪೈನ್‌ನ ಅಟ್ರಿಯೊ, ಸ್ವಿಜರ್‌ಲ್ಯಾಂಡ್‌ನ ಚೇವಲ್ ಬ್ಲಾಂಕ್ ಬೈ ಪೀಟರ್ ಕ್ನೋಗ್ಲ್, ಇಟಲಿಯ ಡ ವೆಟೊರಿಯೊ ಟಾಪ್ 10ರಲ್ಲಿ ಸ್ಥಾನ ಪಡೆದಿವೆ. ಈ ಪೈಕಿ ಮೊದಲ ಏಳು ಸಂಸ್ಥೆಗಳು 99.5 ಅಂಕಗಳನ್ನು ಪಡೆದಿವೆ.
ಭಾರತೀಯ ಪ್ರತಿಭೆಗೆ ಸಂದ ಗೌರವ
ಲಾ ಲಿಸ್ಟ್ 2024ರ ‘ವರ್ಷದ ಹೊಸ ಪ್ರತಿಭೆಗಳಲ್ಲಿ’ ಒಬ್ಬರಾಗಿ ಬಾಣಸಿಗರಾದ ಮುಂಬೈಯ ವಾಣಿಕಾ ಚೌಧರಿ (ನೂನ್ ಮತ್ತು ಸೀಕ್ವೆಲ್ ಖ್ಯಾತಿ) ಆಯ್ಕೆಯಾಗಿರುವುದು ವಿಶೇಷ.
ಟಾಪ್ 1,000 ರೆಸ್ಟೋರೆಂಟ್‌ಗಳ ಪಟ್ಟಿ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: Death Threat: ಮೋದಿ, ಯೋಗಿಗೆ ಜೀವ ಬೆದರಿಕೆ; ಕರೆ ಮಾಡಿದ ಕಮ್ರಾನ್ ಖಾನ್ ಯಾರು?