Site icon Vistara News

Traffic Rules | ಆಂಬ್ಯುಲೆನ್ಸ್‌ ಸೈರನ್‌ ಹಾಕಿ ಕಾರು ಡ್ರೈವ್; ಮಾಜಿ ಸಂಸದ ಶಿವರಾಮೇಗೌಡ ಅಳಿಯನಿಗೆ ದಂಡ!

Traffic Rules

ಬೆಂಗಳೂರು: ‌ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್‌ ಕಿರಿಕಿರಿ ಮೊದಲಿನಿಂದಲೂ ಇದೆ. ಇದರ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆ. ತುರ್ತು ಸಂದರ್ಭದಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಆಂಬ್ಯುಲೆನ್ಸ್‌ಗಳಿಗೆ ಸೈರನ್‌ ಬಳಸಲು ಅವಕಾಶವಿದೆ. ಆದರೆ, ತಾನು ಪ್ರಭಾವಿ ಎನ್ನುವ ಕಾರಣಕ್ಕೆ ಸ್ಯಾಂಡಲ್‌ವುಡ್‌ ನಟರೊಬ್ಬರು ಆಂಬ್ಯುಲೆನ್ಸ್‌ ಸೈರನ್‌ ಅನ್ನು ಹಾಕಿಕೊಂಡು ದಟ್ಟ ಸಂಚಾರದ ನಡುವೆ ಸಾಗಿದ್ದು ವಿವಾದಕ್ಕೆ ಕಾರಣವಾಗಿದ್ದಲ್ಲದೆ, ಟ್ರಾಫಿಕ್‌ (Traffic Rules) ಪೊಲೀಸರು ದಂಡ ವಿಧಿಸಿದ್ದಾರೆ.

ಹೀಗೆ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದ ಹಿನ್ನೆಲೆಯಲ್ಲಿ ಮಾಜಿ ಸಂಸದ ಶಿವರಾಮೇಗೌಡ ಅವರ ಅಳಿಯ ಹಾಗೂ ಸ್ಯಾಂಡಲ್‌ವುಡ್‌ ನಟ ರಾಜೀವ್ ರಾಥೋಡ್ ಅವರಿಗೆ ದಂಡ ಬಿದ್ದಿದೆ.

ಟ್ರಾಫಿಕ್‌ ರೂಲ್ಸ್‌ ಬ್ರೇಕ್‌

ವಿಜಯನಗರದಲ್ಲಿ ರಾಜೀವ್‌ ರಾಥೋಡ್‌ ತಮ್ಮ ಆಡಿ ಕ್ಯೂ 7 ಕಾರಿನಲ್ಲಿ ಮನಬಂದಂತೆ ಸೈರನ್‌ ಹಾಕಿಕೊಂಡು ಸಂಚರಿಸಿದ್ದಾರೆ. ಟಿಂಟೆಡ್‌ ಗ್ಲಾಸ್ ಜತೆಗೆ ಆಂಬ್ಯುಲೆನ್ಸ್ ಸೈರನ್ ಹಾಕಿಕೊಂಡು ಓಡಾಡಿದ್ದು, ಸಾರ್ವಜನಿಕರು ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೊ ಚಿತ್ರೀಕರಿಸಿಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣ ಸೇರಿದಂತೆ ಇನ್ನಿತರ ಕಡೆ ಹಂಚಿಕೆಯಾಗಿದೆ. ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ವಿಜಯನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಟನಿಂದ ಸಂಚಾರಿ ಪೊಲೀಸರು ದಂಡ ಕಟ್ಟಿಸಿಕೊಂಡಿದ್ದಾರೆ.

ಇದನ್ನೂ ಓದಿ | ಕುಡಿದು ವಾಹನ ಚಲಾಯಿಸಿದ ಚಾಲಕ, ಬಿಬಿಎಂಪಿ ಜಂಟಿ ಆಯುಕ್ತರ ಕಾರು ಅಪಘಾತ

Exit mobile version