ಹುಬ್ಬಳ್ಳಿ: ಈ ಬಾರಿಯ ಚುನಾವಣೆಯಲ್ಲಿ (Karnataka Election) ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆಡಳಿತದ ಮಾದರಿ ಜಾರಿಗೆ ಬರಲಿದೆ. ಯುಪಿಯಲ್ಲಿ ಇಬ್ಬರು ಅಣ್ಣತಮ್ಮಂದಿರ ಎನ್‌ಕೌಂಟರ್ ಆಯ್ತು. ಹೀಗಾಗಿ ಕೆಲವರು ಜೈಲಿನಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಅಲ್ಲಿ ವಾಹನಗಳು ಪಲ್ಟಿಯಾಗುತ್ತಲೇ ಇರುತ್ತವೆ. ರೌಡಿಗಳ ಹೆಣವಾಗುತ್ತಲೇ ಇರುತ್ತಾರೆ. ಹಾಗೇ ಕರ್ನಾಟಕದಲ್ಲಿ ಯಾರಾದರೂ ಹಾರಾಡಿದರೆ ಎನ್‌ಕೌಂಟರ್ ಖಚಿತ ಎಂದು ಬಸನಗೌಡ ಪಾಟೀಲ ಯತ್ನಾಳ್ ವಿವಾದಾತ್ಮಕ ಭಾಷಣ ಮಾಡಿದ್ದಾರೆ.
ಕುಂದಗೋಳದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಆರ್. ಪಾಟೀಲ್ ಪರ ಮತಯಾಚನೆ ವೇಳೆ ಮಾತನಾಡಿದ ಬಸನಗೌಡ ಪಾಟೀಲ ಯತ್ನಾಳ್, ಕ್ವಂಯ್ಕ್ ಅಂದ್ರೆ ಎನ್‌ಕೌಂಟರ್, ಭಾರತದ ಮತ್ತು ಹಿಂದುಗಳ ವಿರುದ್ಧ ಮಾತನಾಡಿದ್ರೆ ಢಂಢಂ, ರೋಡ್ ಮೇಲೆಯೇ ಡಿಶ್ಕ್ಯಾಂವ್ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Karnataka Election: ಪ್ರಧಾನಿ ನರೇಂದ್ರ ಮೋದಿಗೆ ರಾಹುಲ್ ಗಾಂಧಿ ಕೇಳಿದ 3 ಪ್ರಶ್ನೆ ಏನು?; ಭಾಷಣ ಕಡಿಮೆ ಮಾಡಲು ಹೇಳಿದ್ದೇಕೆ?
ಟಿಪ್ಪು ಸುಲ್ತಾನ್ ಹರಾಂ ಕೋರ್. ಯಾವ ಟಿಪ್ಪು ಸುಲ್ತಾನ ರೀ? ಲಕ್ಷಾಂತರ ಹಿಂದುಗಳನ್ನು ಕೊಂದಿದ್ದಾನೆ. ನಮ್ಮ ಸರ್ಕಾರ ಬಂದರೆ ಅವನ ಫೋಟೊ ತೆಗೆದು ಸಂಗೊಳ್ಳಿ ರಾಯಣ್ಣ, ಬಾಬಾ ಸಾಹೇಬ್ ಅಂಬೇಡ್ಕರ್ ಫೋಟೊ ಹಾಕ್ತೀವಿ ಎಂದು ಟಿಪ್ಪು ಸುಲ್ತಾನ್ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ ಹುಚ್ಚ ಅಲ್ಲ, ಅರೆಹುಚ್ಚ; ಯತ್ನಾಳ್
ʻʻರಾಹುಲ್ ಗಾಂಧಿ ಹುಚ್ಚ ಅಲ್ಲ, ಅರೇ ಹುಚ್ಚ ಅಂತಾನೇ ಕರೆಯಬೇಕುʼʼ ಎಂದಿರುವ ಯತ್ನಾಳ್, ಅವರು ಆಲೂಗಡ್ಡೆಯಿಂದ ಚಿನ್ನ ತೆಗೆಯತ್ತೇನೆ ಅಂತಾರೆ, ಚೀನಾ ರಾಯಭಾರಿ ಜತೆಗೆ ಸಭೆ ಮಾಡುತ್ತಾರೆ, ದೇಶ ವಿರೋಧಿಗಳ ಜತೆಗೆ ಕೈಜೋಡಿಸತ್ತಾರೆ. ಹಾಗಿರುವಾಗ ಅವರನ್ನು ಬುದ್ಧಿವಂತ ಅಂತ ಕರೆಯಬೇಕಾʼʼ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.
ಈ ರೀತಿ ವರ್ತನೆ ಮಾಡುವವರನ್ನು ದೊಡ್ಡ ಬುದ್ಧಿವಂತ ಅಂತ ಕರೆಯಬೇಕಾ ಅಥವಾ ಹುಚ್ಚ ಅಲ್ಲಾ ಅರೇ ಹುಚ್ಚ ಅಂತ ಕರೆಯಬೇಕಾ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: New financial rules : ಮ್ಯೂಚುವಲ್ ಫಂಡ್‌ನಿಂದ ಎಲ್ಪಿಜಿ ದರದ ತನಕ ಹೊಸ ಬದಲಾವಣೆ ಏನು? ಇಲ್ಲಿದೆ ಡಿಟೇಲ್ಸ್
ಕೆಲವು ದಿನಗಳ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಅವರನ್ನು ವಿಷದ ಹಾವು ಎಂದು ಸಂಬೋಧಿಸಿದಾಗ, ಹಾಗಿದ್ದರೆ ಸೋನಿಯಾ ಗಾಂಧಿ ಅವರನ್ನು ವಿಷ ಕನ್ಯೆ ಎಂದು ಕರೆಯಬಹುದಾ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಕೇಳಿದ್ದರು. ರಾಹುಲ್ ಗಾಂಧಿಯನ್ನು ಅಂದು ಅವರು ಹುಚ್ಚ ಎಂದಿದ್ದರು. ಈ ಹೇಳಿಕೆಗಳನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿತ್ತು. ಇದೀಗ ಅವರು ಮತ್ತೊಮ್ಮೆ ರಾಹುಲ್ ಗಾಂಧಿ ಅವರನ್ನು ಅರೆಹುಚ್ಚ ಎಂದು ಹೇಳುವ ಮೂಲಕ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.