Site icon Vistara News

ವಿಸ್ತಾರ TOP 10 NEWS: ಕೊನೆಗೂ ಹೊರಬಿದ್ದ ಬಿಜೆಪಿ ಪಟ್ಟಿಯಿಂದ, ಅಮುಲ್‌ ಎಮ್‌ಡಿ ಸ್ಪಷ್ಟನೆವರೆಗಿನ ಪ್ರಮುಖ ಸುದ್ದಿಗಳಿವು

vistara top 10 news bjp veterans retirement to amul MD clarification and more news

#image_title

1. Karnataka Election: 189 ಅಭ್ಯರ್ಥಿಗಳ ಪಟ್ಟಿ ಘೋಷಿಸಿದ ಬಿಜೆಪಿ: 52 ಹೊಸಬರು; ಇಬ್ಬರು ಎರಡು ಕಡೆ ಸ್ಪರ್ಧೆ
ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ಪಕ್ಷಗಳಿಗಿಂತ ತಡವಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯನ್ನು ಬಿಜೆಪಿ ಕೊನೆಗೂ ಮಾಡಿದೆ. ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಪ್ರಭಾರಿ ಅರುಣ್‌ ಸಿಂಗ್‌ 189 ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿದ್ದಾರೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

2. BJP Karnataka: ರಾಜಕೀಯದಿಂದ ಕೆ.ಎಸ್‌. ಈಶ್ವರಪ್ಪ ನಿವೃತ್ತಿ: ಜೆ.ಪಿ. ನಡ್ಡಾಗೆ ಪತ್ರ ಬರೆದ ಹಿರಿಯ ನಾಯಕ
ರಾಜ್ಯ ಬಿಜೆಪಿಯ ಆರಂಭದಿಂದಲೂ ಜತೆಯಲ್ಲೇ ಇರುವ ಹಾಗೂ ಬಹುತೇಕ ಎಲ್ಲ ಬಿಜೆಪಿ ಸರ್ಕಾರಗಳಲ್ಲೂ ಸಚಿವರಾಗಿದ್ದ ಕೆ.ಎಸ್‌. ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. BJP Karnataka: ವರಿಷ್ಠರ ಸೂಚನೆಯಿಂದ ಆಘಾತವಾಗಿದೆ: ಚುನಾವಣೆಯಿಂದ ಹಿಂದೆ ಸರಿಯಲ್ಲ ಎಂದ ಜಗದೀಶ್‌ ಶೆಟ್ಟರ್‌
ಈ ಬಾರಿ ವಿಧಾನಸಭೆ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಬಿಜೆಪಿ ವರಿಷ್ಠರು ಸೂಚನೆ ನೀಡಿರುವುದನ್ನು ಕೆ.ಎಸ್‌. ಈಶ್ವರಪ್ಪ ಒಪ್ಪಿದ್ದಾರಾದರೂ, ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ನಿರಾಕರಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Karnataka Elections 2023 : ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದರೆ ಗೆಲ್ಲಲ್ಲ; ನೇರ ದಾಳಿಗೆ ಇಳಿದರೇ ಕುಮಾರಸ್ವಾಮಿ?
ಹಾಸನ ವಿಧಾನಸಭಾ ಚುನಾವಣೆ (Karnataka Elections 2023) ಟಿಕೆಟನ್ನು ಕಾರ್ಯಕರ್ತನಿಗೇ ನೀಡಲಾಗುವುದು ಎಂದು ಪದೇಪದೆ ಹೇಳುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರು, ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಒಂದು ವೇಳೆ ಭವಾನಿ ರೇವಣ್ಣ ಅವರು ಸ್ಪರ್ಧೆ ಮಾಡಿದರೆ ಹಾಸನದಲ್ಲಿ ಗೆಲ್ಲುವುದಿಲ್ಲ ಎಂದೂ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. ‌Amul : ನಂದಿನಿ ಜತೆ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ: ಅಮುಲ್‌ ಎಂಡಿ
ಕರ್ನಾಟಕದಲ್ಲಿ ಸಹಕಾರ ಕ್ಷೇತ್ರದ ಡೇರಿ ಬ್ರಾಂಡ್‌ ಆಗಿರುವ ನಂದಿನಿ ಜತೆಗೆ ‌ಅಮುಲ್ (Amul) ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಯೇನ್‌ ಮೆಹ್ತಾ ತಿಳಿಸಿದ್ದಾರೆ. ಹೇಗೆ ಗುಜರಾತ್‌ನಲ್ಲಿ ಅಮುಲ್‌ ಸಹಕಾರ ಕ್ಷೇತ್ರದ ರೈತರ ಸಂಸ್ಥೆಯಾಗಿದೆಯೋ, ಅದೇ ರೀತಿ ಕರ್ನಾಟಕದಲ್ಲಿ ಕರ್ನಾಟಕ ಮಿಲ್ಕ್‌ ಫೆಡರೇಷನ್‌ನ (KMF) ಬ್ರಾಂಡ್‌ ನಂದಿನಿಯಾಗಿದೆ.(milk production) ಈ ಎರಡು ಸಹಕಾರಿ ಬ್ರಾಂಡ್‌ಗಳ ನಡುವೆ ಸ್ಪರ್ಧೆಯ ಸಾಧ್ಯತೆಯೇ ಇಲ್ಲ ಎಂದು ಅವರು ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Monsoon 2023: ಈ ವರ್ಷ ದೇಶದಲ್ಲಿ ವಾಡಿಕೆ ಮಳೆ; ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ
ಪ್ರಸಕ್ತ ವರ್ಷ ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆಯಾಗಿರುವ ಸ್ಕೈಮೆಟ್ ಎರಡು ದಿನಗಳ ಹಿಂದೆ ವರದಿ ನೀಡಿತ್ತು. ಇದೀಗ ಭಾರತೀಯ ಹವಾಮಾನ ಇಲಾಖೆ(IMD) ಕೂಡ ಪ್ರಸಕ್ತ ವರ್ಷದ ಮಳೆಗಾಲದ ಬಗ್ಗೆ ಮುನ್ಸೂಚನೆ ನೀಡಿದೆ. ಈ ಬಾರಿಯ ಮಳೆಗಾಲದಲ್ಲಿ ವಾಡಿಕೆ ಮಳೆಯಾಗಲಿದೆ. ಅಂದರೆ, ಅತಿ ಹೆಚ್ಚು ಅಥವಾ ಅತಿ ಕಡಿಮೆ ಮಳೆ ಆಗುವುದಿಲ್ಲ. ದೇಶಾದ್ಯಂತ ಹದವಾಗಿ ಸಾಮಾನ್ಯ ಪ್ರಮಾಣದಲ್ಲಿ ಮಳೆಯಾಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Rahul Gandhi: ಅನರ್ಹಗೊಂಡ ಬಳಿಕ ಮೊದಲ ಬಾರಿಗೆ ವಯನಾಡ ಕ್ಷೇತ್ರಕ್ಕೆ ರಾಹುಲ್ ಭೇಟಿ, ಸತ್ಯಮೇವ ಜಯತೆ ರೋಡ್ ಶೋ
ಲೋಕಸಭೆಯಿಂದ ಅನರ್ಹಗೊಂಡ ಬಳಿಕ ಇದೇ ಮೊದಲ ಬಾರಿಗೆ ತಾವು ಪ್ರತಿನಿಧಿಸುತ್ತಿದ್ದ ಕೇರಳದ ವಯನಾಡ (Wayanad) ಕ್ಷೇತ್ರಕ್ಕೆ ರಾಹುಲ್ ಗಾಂಧಿ (Rahul Gandhi) ಅವರು ಮಂಗಳವಾರ ಭೇಟಿ ನೀಡಿದರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ, ರಾಹುಲ್‌ಗೆ ಸಾಥ್ ನೀಡಿದರು. ಇದೇ ವೇಳೆ, ರಾಹುಲ್ ಗಾಂಧಿ ಬೆಂಬಲಿಗರು ಕಲ್ಪೆಟ್ಟಾ ಪಟ್ಟಣದಲ್ಲಿ ಸತ್ಯಮೇವ ಜಯತೆ ಹೆಸರಿನಲ್ಲಿ ರೋಡ್ ಶೋ ಕೂಡ ನಡೆಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Cow Urine: ಗೋಮೂತ್ರ ನೇರ ಕುಡಿಯಲು ಸೂಕ್ತವಲ್ಲ, ಅದರಲ್ಲಿವೆ ಅಪಾಯಕಾರಿ ಬ್ಯಾಕ್ಟೀರಿಯಾಗಳು: ಸಂಶೋಧನಾ ವರದಿ
ಗೋಮೂತ್ರವು (Gaumutra) ಮಾನವರ ನೇರ ಸೇವನೆಗೆ ಸೂಕ್ತವಲ್ಲ. ಗೋಮೂತ್ರವು ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನು ಹೊಂದಿವೆ ಎಂದು ದೇಶದ ಪ್ರಮುಖ ಪ್ರಾಣಿ ಸಂಶೋಧನಾ ಸಂಸ್ಥೆಯಾಗಿರುವ ಬರೇಲಿ ಮೂಲದ ಐಸಿಎಆರ್-ಇಂಡಿಯನ್ ವೆಟರ್ನರಿ ರಿಸರ್ಚ್ ಇನ್‌ಸ್ಟಿಟ್ಯೂಟ್ (IVRI – ICAR Indian Veterinary Research Institute) ಸಂಸ್ಥೆ ವರದಿ ಹೇಳಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. ಭಾರತದಲ್ಲಿ ಮುಸ್ಲಿಮರ ಸಂಖ್ಯೆ ಬೆಳೆಯುತ್ತಲೇ ಇದೆ, ಪಾಕ್​ನಲ್ಲಿ ಅಲ್ಪಸಂಖ್ಯಾತರು ನಾಶವಾಗುತ್ತಿದ್ದಾರೆ: ಸಚಿವೆ ನಿರ್ಮಲಾ ಸೀತಾರಾಮನ್​
1947ರಿಂದ ಈಚೆಗೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಬೆಳೆಯುತ್ತಿದ್ದರೆ, ಅತ್ತ ಪಾಕಿಸ್ತಾನದಲ್ಲಿ ಅಲ್ಲಿನ ಅಲ್ಪಸಂಖ್ಯಾತರು ನಶಿಸುತ್ತಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ವಾಷಿಂಗ್ಟನ್ ಡಿಸಿಯಲ್ಲಿರುವ ಪೀಟರ್ಸನ್ ಇನ್​ಸ್ಟಿಟ್ಯೂಟ್ ಆಫ್​ ಇಂಟರ್​ನ್ಯಾಷನಲ್​ ಎಕನಾಮಿಕ್ಸ್​ನಲ್ಲಿ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. IPL 2023: ಪಿತ್ತ ನೆತ್ತಿಗೇರಿಸಿದ ಆರ್​ಸಿಬಿ ಅಭಿಮಾನಿಗಳು; ವಾರ್ನಿಂಗ್​ ಕೊಟ್ಟ ಗಂಭೀರ್​
ಕನ್ನಡಿಗ ಕೆ.ಎಲ್​.ರಾಹುಲ್​ ಸಾರಥ್ಯದ ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ಆರ್‌ಸಿಬಿ ಒಂದು ವಿಕೆಟ್​ ಅಂತರದಿಂದ ಸೋಲು ಕಂಡಿತು. ಇದೇ ಖುಷಿಯಲ್ಲಿ ಲಕ್ನೋ ತಂಡ ಚಿನ್ನಸ್ವಾಮಿ ಮೈದಾನದಲ್ಲಿ ಗೆಲುವಿನ ಸಂಭ್ರಮಾಚರಣೆಯಲ್ಲಿ ತೊಡಗಿತ್ತು. ಆದರೆ ಆರ್​ಸಿಬಿ ಅಭಿಮಾನಿಗಳು ಆರ್​ಸಿಬಿ…ಆರ್​ಸಿಬಿ ಎಂದು ಜೋರಾಗಿ ಕೂಗುವ ಮೂಲಕ ಸಂಭ್ರಮಾಚರಣೆಗೆ ಅಡ್ಡಿ ಪಡಿಸುತ್ತಿದ್ದರು. ಇದೇ ವೇಳೆ ಕೋಪಗೊಂಡ ಲಕ್ನೋ ತಂಡದ ಮೆಂಟರ್​ ಗೌತಮ್​ ಗಂಭೀರ್​ ಅವರು ಸಿಟ್ಟಿಗೆದ್ದು ಅಭಿಮಾನಿಗಳಿಗೆ ಸುಮ್ಮನಿರುವಂತೆ ಕೈ ಸನ್ನೆ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. Anand Mahindra: ಹಣ್ಣು ಮಾರುವ ಹಾಲಕ್ಕಿ ಮಹಿಳೆಯ ಪರಿಸರ ಪ್ರೇಮ; ಸ್ವಚ್ಛ ಭಾರತ್‌ನ ಹೀರೊಗಳು ಇವರೇ ಎಂದು ಕೊಂಡಾಡಿದ ಆನಂದ್‌ ಮಹೀಂದ್ರ
  2. KEA Recruitment 2023 : ಆಹಾರ ನಿಗಮದಲ್ಲಿ ನೇಮಕ; ವಿದ್ಯಾರ್ಹತೆ, ಸ್ಪರ್ಧಾತ್ಮಕ ಪರೀಕ್ಷೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ!
  3. Bigg Boss Malayalam : ಬಿಗ್‌ಬಾಸ್‌ ವೇದಿಕೆ ಮೇಲೆ ಸಿಟ್ಟಾಗಿ ಅರ್ಧದಲ್ಲೇ ಶೋ ಬಿಟ್ಟು ಹೋದ ಮೋಹನ್‌ಲಾಲ್‌! ನಡೆದಿದ್ದು ಏನು?
  4. Cubbon Park: ಕಬ್ಬನ್ ಪಾರ್ಕ್‌ನಲ್ಲಿ ಇನ್ನು ಪ್ರೇಮಿಗಳು ದೂರಾ…ದೂರಾ…
  5. ರಾಜ ಮಾರ್ಗ ಅಂಕಣ : ಶ್ರೀರಾಮನ ಹಾಗೆ ಬದುಕುವುದು ಕಷ್ಟ; ನಿಜ ಅಂದ್ರೆ ರಾವಣ ಆಗುವುದು ಕೂಡಾ ಅಷ್ಟೇ ಕಷ್ಟ!
Exit mobile version