KFCSC Recruitment 2023 Here is complete information about Eligibility, Competitive ExamKEA Recruitment 2023 : ಆಹಾರ ನಿಗಮದಲ್ಲಿ ನೇಮಕ; ವಿದ್ಯಾರ್ಹತೆ, ಸ್ಪರ್ಧಾತ್ಮಕ ಪರೀಕ್ಷೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ! - Vistara News

ಉದ್ಯೋಗ

KEA Recruitment 2023 : ಆಹಾರ ನಿಗಮದಲ್ಲಿ ನೇಮಕ; ವಿದ್ಯಾರ್ಹತೆ, ಸ್ಪರ್ಧಾತ್ಮಕ ಪರೀಕ್ಷೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ!

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA Recruitment 2023) ಕೆಎಫ್‌ಸಿಎಸ್‌ಸಿಯಲ್ಲಿನ ಹಿರಿಯ ಮತ್ತು ಕಿರಿಯ ಸಹಾಯಕರ ಹುದ್ದೆಗಳಿಗೆ ಸದ್ಯವೇ ಅರ್ಜಿ ಆಹ್ವಾನಿಸಲಿದೆ. ಈ ಹುದ್ದೆಗಳಿಗೆ ಯಾರು ಅರ್ಜಿ ಸಲ್ಲಿಸಬಹುದು? ನೇಮಕ ಹೇಗೆ ನಡೆಯಲಿದೆ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

KFCSC Recruitment 2023 Here is complete information about Eligibility, Competitive Exam
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ವಿವಿಧ ನಿಗಮ, ಮಂಡಳಿಗಳಲ್ಲಿ ಹಾಗೂ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ (KEA Recruitment 2023) ನಡೆಸಲಿದೆ. ಒಟ್ಟು 757 ಹುದ್ದೆಗಳಿಗೆ ನೇಮಕ ನಡೆಯಲಿದ್ದು, ಏ. 15 ರಂದು ಅಧಿಸೂಚನೆ ಪ್ರಕಟವಾಗಲಿದೆ.

kfcsc recruitment

KFCSC Recruitment 2023  Here is complete information about Eligibility, Competitive Exam
KFCSC Recruitment 2023 KFCSC Recruitment 2023 Here is complete information about Eligibility, Competitive Exam

ಇದರಲ್ಲಿ ಮುಖ್ಯವಾಗಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದಲ್ಲಿನ ಒಟ್ಟು 386 ಹುದ್ದೆಗಳಿಗೆ ನೇಮಕ (KFCSC Recruitment 2023) ಮಾಡಿಕೊಳ್ಳಲಾಗುತ್ತಿದೆ. ಈ ನೇಮಕಕ್ಕೆ 2022 ರ ಜೂನ್‌ 29 ರಂದೇ ಸರ್ಕಾರ ಅನುಮತಿ ನೀಡಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕ ನೇಮಕ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಸುಮಾರು ಒಂದು ವರ್ಷದ ನಂತರ ಈ ನೇಮಕ ಪ್ರಕ್ರಿಯೆಯನ್ನು ಕೆಇಎ ಆರಂಭಿಸುತ್ತಿದೆ.

ಇದರಲ್ಲಿ ಹಿರಿಯ ಸಹಾಯಕರ ಹುದ್ದೆ 57 ಮತ್ತು ಕಿರಿಯ ಸಹಾಯಕರ ಹುದ್ದೆ 263. ಈ ಹುದ್ದೆಗಳಿಗೆ ಎಷ್ಟು ವೇತನ ನೀಡಲಾಗುತ್ತದೆ? ವಿದ್ಯಾರ್ಹತೆ ಏನು ಎಂಬುದನ್ನು ನೋಡೋಣ.

ಹಿರಿಯ ಸಹಾಯಕರ ಹುದ್ದೆ

ವಿದ್ಯಾರ್ಹತೆ ಏನು? : ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಯಾವುದೇ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ಸರ್ಕಾರವು ಅಂತಹ ಪರೀಕ್ಷೆಗೆ ಸಮಾನವೆಂದು ಅಂಗೀಕರಿಸಿದ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಗಮನಿಸಿ: ಡಿಪ್ಲೊಮಾ, ಹಿಂದಿ ಸಭಾಗಳಿಂದ ಪಡೆದ ರತ್ನಾ, ವಿಶಾರದ, ಪಂಡಿತ್‌ ಇತ್ಯಾದಿ ವಿದ್ಯಾರ್ಹತೆಯನ್ನು ಪದವಿಗೆ ತತ್ಸಮಾನವೆಂದು KCS (Recruitment to the Ministerial Post) Rule 1978ರ ನಿಯಮಗಳಲ್ಲಿ ಅಧಿಸೂಚಿಸಿರುವುದಿಲ್ಲವಾದ್ದರಿಂದ, ಇವು ಪದವಿಗೆ ಸಮಾನವಾಗುವುದಿಲ್ಲ. ಆದ್ದರಿಂದ ಈ ವಿದ್ಯಾರ್ಹತೆಯ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸುವಂತಿಲ್ಲ.

ವೇತನ ಶ್ರೇಣಿ: ರೂ. 14,550-350-15,600-400-17,200-450-19,000-500-21,000-600-24,600-700-26,700.
ಪಿಂಚಣಿ ಸೌಲಭ್ಯ ಇರುವುದಿಲ್ಲ.

ಕಿರಿಯ ಸಹಾಯಕರ ಹುದ್ದೆ

ವಿದ್ಯಾರ್ಹತೆ ಏನು? : ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ನಡೆಸುವ ಪದವಿ ಪೂರ್ವ ಪರೀಕ್ಷೆ ಅಥವಾ ತತ್ಸಮಾನ ವಿದ್ಯಾರ್ಹತೆಗಳಾದ ಐಟಿಐ ಮತ್ತು ಇತರೆ ಮೂರು ವರ್ಷದ ಡಿಪ್ಲೊಮೊ ಕೋರ್ಸ್‌.

ಗಮನಿಸಿ: ಮುಕ್ತ ವಿಶ್ವವಿದ್ಯಾಲಯಗಳು ನಡೆಸುವ 10+2 ಪರೀಕ್ಷೆಯನ್ನು ಈ ಹುದ್ದೆಗೆ ನಿಗದಿತ ವಿದ್ಯಾರ್ಹತೆ ಎಂದು ಪರಿಗಣಿಸಲಾಗುವುದಿಲ್ಲ.

ವೇತನ ಶ್ರೇಣಿ: ರೂ. 11,600-200-12,000-250-13,000-300-14,200-350-15,600-400-17,200-450-19,000-500-21,000
ಪಿಂಚಣಿ ಸೌಲಭ್ಯ ಇರುವುದಿಲ್ಲ.

ವಯೋಮಿತಿ ಎಷ್ಟು?

ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಸಾಮಾನ್ಯ ಅಭ್ಯರ್ಥಿಗೆ ಗರಿಷ್ಠ ವಯೋಮಿತಿ 35 ವರ್ಷ. ಪ್ರವರ್ಗ- 2ಎ, 2ಬಿ, 3ಎ,3ಬಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 38 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 40 ವರ್ಷ ನಿಗದಿಪಡಿಸಲಾಗುತ್ತದೆ.

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ಹಾಗೂ ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 750 ರೂ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ರ ಅಭ್ಯರ್ಥಿಗಳಿಗೆ 500ರೂ. ನಿಗದಿಪಡಿಸಲಾಗುತ್ತದೆ. ಅರ್ಜಿ ಸಲ್ಲಿಸುವಾಗ ಚಲನ್‌ ಪಡೆದು ಇ-ಅಂಚೆ ಕಚೇರಿ ಮೂಲಕ ಶುಲ್ಕವನ್ನು ಪಾವತಿಸಲು ಅವಕಾಶ ನೀಡಲಾಗುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here ) ಮಾಡಿ.

ನೇಮಕ ಹೇಗೆ?

ಆಹಾರ ಮತ್ತು ನಾಗರೀಕ ಸರಬರಾಜು ನಿಗಮ(ನಿ)ದಲ್ಲಿನ ಹಿರಿಯ ಸಹಾಯಕರ ಮತ್ತು ಕಿರಿಯ ಸಹಾಯಕರ ಹುದ್ದೆಗಳನ್ನು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಮತ್ತು ಆಯ್ಕೆ) (ಸಾಮಾನ್ಯ) ನಿಯಮಗಳು 2014ರಡಿ ನಿರ್ದಿಷ್ಟಪಡಿಸಲಾದ ಮತ್ತು ಕರ್ನಾಟಕ ನಾಗರೀಕ ಸೇವೆಗಳು (ಲಿಪಿಕ ಹುದ್ದೆಗಳ ನೇಮಕಾತಿ) ನಿಯಮಗಳು 1978ರಡಿ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಲಾಗುತ್ತದೆ.

ಪರೀಕ್ಷೆ ಹೀಗಿರುತ್ತದೆ;

KFCSC Recruitment 2023

KFCSC Recruitment 2023  Here is complete information about Eligibility, Competitive Exam
KFCSC Recruitment 2023 KFCSC Recruitment 2023 Here is complete information about Eligibility, Competitive Exam

ಪಠ್ಯಕ್ರಮ ಹೇಗಿರುತ್ತದೆ?

ಹಿರಿಯ ಸಹಾಯಕರ ಹುದ್ದೆ;

  1. ಸಾಮಾನ್ಯ ಕನ್ನಡ ಅಥವಾ ಸಾಮಾನ್ಯ ಇಂಗ್ಲಿಷ್‌ ಪತ್ರಿಕೆಯು ಸಾಮಾನ್ಯವಾಗಿ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವ ವಿದ್ಯಾರ್ಥಿಗೆ ಇರಬೇಕಾದ ಕನಿಷ್ಠ ವಿದ್ಯಾಮಟ್ಟಕ್ಕೆ ಸಮನಾಗಿರುವುದು. ಇದರ ಮೂಲಕ ಅಭ್ಯರ್ಥಿಯ ಕನ್ನಡ / ಇಂಗ್ಲಿಷ್‌ ವ್ಯಾಕರಣ, ಶಬ್ದ ಸಂಪತ್ತು, ಕಾಗುಣಿತ (Spelling) ಸಮನಾರ್ಥಕ ಪದಗಳು, ವಿರುದ್ಧಾರ್ಥಕ ಪದಗಳು ಇವುಗಳ ಪರಿಜ್ಞಾನ, ಇಂಗ್ಲಿಷ್‌ / ಕನ್ನಡ ಭಾಷೆಯನ್ನು ಅರಿಯುವ ಮತ್ತು ಗ್ರಹಿಸುವ ಅಭ್ಯರ್ಥಿಯ ಶಕ್ತಿಯ ಮತ್ತು ಅದರ ಸರಿಯಾದ ಹಾಗೂ ತಪ್ಪು ಬಳಕೆ ಇತ್ಯಾದಿಗಳನ್ನು ಪರಿಶೀಲಿಸುವ ಅಭ್ಯರ್ಥಿಯ ಸಾಮರ್ಥ್ಯ ಇವುಗಳನ್ನು ಪರೀಕ್ಷಿಸಲು ಉದ್ದೇಶಿಸಲಾಗಿದೆ.
  2. ಅಭ್ಯರ್ಥಿಗಳು ಸಾಮಾನ್ಯ ಕನ್ನಡ ಅಥವಾ ಸಾಮಾನ್ಯ ಇಂಗ್ಲಿಷ್‌ ಪತ್ರಿಕೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡತಕ್ಕದ್ದು. ಒಮ್ಮೆ ಆಯ್ಕೆ ಮಾಡಿದ ನಂತರ ಬದಲಾವಣೆಗೆ ಅವಕಾಶ ಇರುವುದಿಲ್ಲ.
  3. ಸಾಮಾನ್ಯ ಜ್ಞಾನ ಪತ್ರಿಕೆಯು ಸಾಮಾನ್ಯವಾಗಿ ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವ ವಿದ್ಯಾರ್ಥಿಗೆ ಇರಬೇಕಾದ ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟ ಕನಿಷ್ಠ ವಿದ್ಯಾಮಟ್ಟಕ್ಕೆ ಸಮನಾಗಿರುವುದು ಮತ್ತು ಇದು ಭಾರತದ ಸಂವಿಧಾನ, ಭಾರತದ ಇತಿಹಾಸ, ಮತ್ತು ಸಂಸ್ಕೃತಿ, ಭಾರತದ ಸಾಮಾನ್ಯ ಹಾಗೂ ಆರ್ಥಿಕ, ಭೂಗೋಳ ಶಾಸ್ತ್ರ, ಇತ್ತೀಚಿನ ಘಟನೆಗಳು, ದೈನಿಕ ಜೀವನದಲ್ಲಿ ವಿಜ್ಞಾನ ಮತ್ತು ಒಬ್ಬ ವಿದ್ಯಾವಂತ ವ್ಯಕ್ತಿಯು ದೈನಂದಿನ ಜೀವನದಲ್ಲಿ ಗಮನಿಸಬಹುದಾದಂತಹ ವಿಷಯಗಳು. ಇವುಗಳ ಮೇಲಿನ ಪ್ರಶ್ನೆಗಳನ್ನು
    ಒಳಗೊಂಡಿರುತ್ತದೆ.

ಕಿರಿಯ ಸಹಾಯಕರ ಹುದ್ದೆ;

  1. ಸಾಮಾನ್ಯ ಕನ್ನಡ ಅಥವಾ ಸಾಮಾನ್ಯ ಇಂಗ್ಲಿಷಿ ಪತ್ರಿಕೆಯು ಸಾಮಾನ್ಯವಾಗಿ ಪಿ.ಯು.ಸಿ. ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವ ವಿದ್ಯಾರ್ಥಿಗೆ ಇರಬೇಕಾದ ಕನಿಷ್ಠ ವಿದ್ಯಾಮಟ್ಟಕ್ಕೆ ಸಮನಾಗಿರುವುದು. ಇದರ ಮೂಲಕ ಅಭ್ಯರ್ಥಿಯ ಕನ್ನಡ ಮತ್ತು ಇಂಗ್ಲಿಷ್‌ ವ್ಯಾಕರಣ ಶಬ್ದ ಸಂಪತ್ತು, ಕಾಗುಣಿತ (Spelling) ಸಮನಾರ್ಥಕ ಪದಗಳು, ವಿರುದ್ಧಾರ್ಥಕ ಪದಗಳು ಇವುಗಳ ಪರಿಜ್ಞಾನ, ಇಂಗ್ಲಿಷ್‌/ಕನ್ನಡ ಭಾಷೆಯನ್ನು ಅರಿಯುವ ಮತ್ತು ಗ್ರಹಿಸುವ ಅಭ್ಯರ್ಥಿಯ ಶಕ್ತಿಯ ಮತ್ತು ಅದರ ಸರಿಯಾದ ಹಾಗೂ ತಪ್ಪು ಬಳಕೆ ಇತ್ಯಾದಿಗಳನ್ನು ಪರಿಶೀಲಿಸುವ ಅಭ್ಯರ್ಥಿಯ ಸಾಮರ್ಥ್ಯ ಇವುಗಳನ್ನು ಪರೀಕ್ಷಿಸಲು ಉದ್ದೇಶಿಸಲಾಗಿದೆ.
  2. ಅಭ್ಯರ್ಥಿಗಳು ಸಾಮಾನ್ಯ ಕನ್ನಡ ಅಥವಾ ಸಾಮಾನ್ಯ ಇಂಗ್ಲಿಷ್‌ ಪತ್ರಿಕೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡತಕ್ಕದ್ದು. ಒಮ್ಮೆ ಆಯ್ಕೆ ಮಾಡಿದ ನಂತರ ಬದಲಾವಣೆಗೆ ಅವಕಾಶ ಇರುವುದಿಲ್ಲ.
  3. ಸಾಮಾನ್ಯ ಜ್ಞಾನ ಪತ್ರಿಕೆಯು ಸಾಮಾನ್ಯವಾಗಿ ಪಿ.ಯು.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಇರಬೇಕಾದ ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟ ಕನಿಷ್ಠ ವಿದ್ಯಾಮಟ್ಟಕ್ಕೆ ಸಮನಾಗಿರುವುದು ಮತ್ತು ಇದು ಭಾರತದ ಸಂವಿಧಾನ, ಭಾರತದ ಇತಿಹಾಸ ಮತ್ತು ಸಂಸ್ಕೃತಿ, ಸಾಮಾನ್ಯ ಅರ್ಥಶಾಸ್ತ್ರ, ಭೂಗೋಳ ಶಾಸ್ತ್ರ, ಇತ್ತೀಚಿನ ಘಟನೆಗಳು, ದೈನಿಕ ಜೀವನದಲ್ಲಿ ವಿಜ್ಞಾನ ಮತ್ತು ಒಬ್ಬ ವಿದ್ಯಾವಂತ ವ್ಯಕ್ತಿಯು ದೈನಂದಿನ ಜೀವನದಲ್ಲಿ ಗಮನಿಸಬಹುದಾದಂತಹ ವಿಷಯಗಳು ಇವುಗಳ ಮೇಲಿನ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

ಈ ನೇಮಕದ ಕುರಿತ ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ವಿಳಾಸ: https://cetonline.karnataka.gov.in/kea

ಇದನ್ನೂ ಓದಿ: KEA Recruitment 2023 : ಕೆಇಎಯಿಂದ 757 ಹುದ್ದೆಗಳಿಗೆ ನೇಮಕ ಖಚಿತ; ಏಪ್ರಿಲ್‌ 17 ರಿಂದ ಅರ್ಜಿ ಸಲ್ಲಿಕೆ ಶುರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಉದ್ಯೋಗ

Job Alert: ವಿಜ್ಞಾನಿಯಾಗಬೇಕೆ? ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ನಲ್ಲಿದೆ ಅವಕಾಶ; ಆನ್‌ಲೈನ್‌ ಮೂಲಕ ಅಪ್ಲೈ ಮಾಡಿ

Job Alert: ನೀವು ಬೆಂಗಳೂರಿನಲ್ಲಿ ಉದ್ಯೋಗ ಅರಸುತ್ತಿದ್ದೀರಾ? ಹಾಗಾದರೆ ಭಾರತ ಸರ್ಕಾರದ ಮಿನಿಸ್ಟ್ರಿ ಆಫ್‌ ಟೆಕ್ಸ್‌ಟೈಲ್ಸ್‌ ಅಧೀನದಲ್ಲಿ ಕಾರ್ಯನಿರ್ವಹಿಸುವ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಉತ್ತಮ ಅವಕಾಶ ಒದಗಿಸುತ್ತಿದೆ. ಸಿಎಸ್‌ಬಿ ತನ್ನಲ್ಲಿ ಖಾಲಿ ಇರುವ 122 ಸೈಂಟಿಸ್ಟ್‌ ಬಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಸೆಪ್ಟೆಂಬರ್‌ 5.

VISTARANEWS.COM


on

Job Alert
Koo

ಬೆಂಗಳೂರು: ನೀವು ಬೆಂಗಳೂರಿನಲ್ಲಿ ಉದ್ಯೋಗ ಅರಸುತ್ತಿದ್ದೀರಾ? ಹಾಗಾದರೆ ಭಾರತ ಸರ್ಕಾರದ ಮಿನಿಸ್ಟ್ರಿ ಆಫ್‌ ಟೆಕ್ಸ್‌ಟೈಲ್ಸ್‌ ಅಧೀನದಲ್ಲಿ ಕಾರ್ಯನಿರ್ವಹಿಸುವ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ (Central Silk Board) ಉತ್ತಮ ಅವಕಾಶ ಒದಗಿಸುತ್ತಿದೆ. ಸಿಎಸ್‌ಬಿ ತನ್ನಲ್ಲಿ ಖಾಲಿ ಇರುವ 122 ಸೈಂಟಿಸ್ಟ್‌ ಬಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (CSB Recruitment 2024). ಸ್ನಾತಕೋತ್ತರ ಪದವಿ (Master’s Degree) ಪಡೆದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಸೆಪ್ಟೆಂಬರ್‌ 5 (Job Alert).

ವಿದ್ಯಾರ್ಹತೆ ಮತ್ತು ಹುದ್ದೆಗಳ ವಿವರ

ಸಿಎಸ್‌ಬಿಯ ಈ ವಿಜ್ಞಾನಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಅಂಗೀಕೃತ ಶಿಕ್ಷಣ ಮಂಡಳಿ ಅಥವಾ ವಿಶ್ವ ವಿದ್ಯಾನಿಲಯದಿಂದ ವಿಜ್ಞಾನ / ಕೃಷಿ ವಿಜ್ಞಾನ (Science/Agricultural Science) ವಿಷಯದಲ್ಲಿ ಸ್ನಾತಕೋತ್ತರ ಪದವಿ (Master’s Degree) ಪಡೆದಿರಬೇಕು. ಸಾಮಾನ್ಯ ವರ್ಗಕ್ಕೆ-50, ಎಸ್‌ಸಿ-20, ಎಸ್‌ಟಿ-9, ಒಬಿಸಿ-31, ಇಡಬ್ಲ್ಯುಎಸ್‌-12 ಮತ್ತು ಪಿಡಬ್ಲ್ಯುಬಿಡಿ ವರ್ಗಕ್ಕೆ 8 ಹುದ್ದೆಗಳಿವೆ.

ವಯೋಮಿತಿ ಮತ್ತು ಅರ್ಜಿ ಶುಲ್ಕ

ಸಿಎಸ್‌ಬಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 35 ವರ್ಷ ಮೀರಬಾರದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಲಭ್ಯ.

ಆಯ್ಕೆ ವಿಧಾನ ಮತ್ತು ಮಾಸಿಕ ಸಂಬಳ

ಜೆಆರ್‌ಎಫ್‌ ಹಾಗೂ ಎಸ್‌ಆರ್‌ಎಫ್‌ ಅಥವಾ ಪಿಎಚ್‌ಡಿ ಪ್ರವೇಶಕ್ಕಾಗಿ ಇಂಡಿಯನ್ ಕೌನ್ಸಿಲ್ ಆಫ್‌ ಅಗ್ರಿಕಲ್ಚರ್ ರಿಸರ್ಚ್‌ (ICAR) ನಡೆಸುವ ಆಲ್‌ ಇಂಡಿಯಾ ಕಾಂಪಿಟೇಟಿವ್ ಎಕ್ಸಾಮ್‌ (AICE) ಅನ್ನು ಬರೆದಿರಬೇಕು. ಈ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್‌ ಮಾಡಿ, ನೇಮಕ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದವರಿಗೆ 56,100 ರೂ. – 1,77,500 ರೂ. ಮಾಸಿಕ ವೇತನ ಲಭ್ಯ.

ಅರ್ಜಿ ಶುಲ್ಕ

ಅರ್ಜಿ ಶುಲ್ಕವಾಗಿ ಸಾಮಾನ್ಯ ವಿಭಾಗ / ಒಬಿಸಿ / ಇಡಬ್ಲ್ಯುಎಸ್‌ / ಮಾಜಿ ಯೋಧರು 1,000 ರೂ. ಪಾವತಿಸಬೇಕು. ಅರ್ಜಿ ಶುಲ್ಕವನ್ನು ಪೋಸ್ಟ್‌ ಆಫೀಸ್‌ ಮೂಲಕ ಪಾವತಿಸಬೇಕು. ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಬಿಡಿ / ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಸುಲ್ಕವಿಲ್ಲ.

CSB Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://karnemaka.kar.nic.in/CSB_rec_24/)
  • SUBMIT APPLICATION
  • ಇಲ್ಲಿ ಕಂಡುಬರುವ ಅಪ್ಲಿಕೇಷನ್‌ ಫಾರಂ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ.
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಭವಿಷ್ಯದ ಅಗತ್ಯಗಳಿಗೆ ಅಪ್ಲಿಕೇಷನ್‌ ಫಾರಂನ ಪ್ರಿಂಟ್‌ಔಟ್‌ ತೆಗೆದಿಡಿ.

ಹೆಚ್ಚಿನ ವಿವರಗಳಿಗೆ ಹೆಲ್ಪ್‌ಲೈನ್‌ ನಂಬರ್‌: 011-4075 9000, 011-6922770ಗೆ ಕರೆ ಮಾಡಿ ಅಥವಾ ಇಬೇಲ್‌ ಐಡಿ: icar@nta.ac.in ಮೇಲ್‌ ಮಾಡಿ.

ಅಧಿಕೃತ ವೆಬ್‌ಸೈಟ್‌ ವಿಳಾಸ: csb.gov.in

ಇದನ್ನೂ ಓದಿ: RRB Recruitment 2024: ಗುಡ್‌ನ್ಯೂಸ್‌; ಬರೋಬ್ಬರಿ 14,298 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ ಇಲಾಖೆ

Continue Reading

ವಿದೇಶ

IBM: ಐಬಿಎಂನಲ್ಲಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತ; ಚೀನಾದ ಕಚೇರಿ ಬೆಂಗಳೂರಿಗೆ ಸ್ಥಳಾಂತರ

IBM: ಅಮೆರಿಕ ಮೂಲದ ಐಟಿ ದಿಗ್ಗಜ ಸಂಸ್ಥೆ ಇಂಟರ್‌ನ್ಯಾಷನಲ್ ಬಿಸಿನೆಸ್ ಮಷಿನ್ಸ್ ಚೀನಾದ ಪ್ರಮುಖ ಸಂಶೋಧನಾ ವಿಭಾಗವನ್ನು ಮುಚ್ಚಲು ನಿರ್ಧರಿಸಿದೆ. ಇದರಿಂದ 1,000ಕ್ಕೂ ಮಂದಿ ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳಲಿದ್ದಾರೆ. ಕಂಪನಿಯು ಬೆಂಗಳೂರಿನಲ್ಲಿ ಕಚೇರಿ ತೆರೆಯಲಿದೆ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

IBM
Koo

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕ ಮೂಲದ ಐಟಿ ದಿಗ್ಗಜ ಸಂಸ್ಥೆ ಇಂಟರ್‌ನ್ಯಾಷನಲ್ ಬಿಸಿನೆಸ್ ಮಷಿನ್ಸ್ (IBM) ಚೀನಾದ ಪ್ರಮುಖ ಸಂಶೋಧನಾ ವಿಭಾಗವನ್ನು ಮುಚ್ಚಲು ನಿರ್ಧರಿಸಿದೆ. ಇದರಿಂದ 1,000ಕ್ಕೂ ಮಂದಿ ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳಲಿದ್ದಾರೆ (Layoffs). ಕಂಪನಿಯು ಬೆಂಗಳೂರಿನಲ್ಲಿ ಕಚೇರಿ ತೆರೆಯಲಿದೆ ಎಂದು ಮೂಲಗಳು ತಿಳಿಸಿವೆ.

ಐಬಿಎಂ ಚೀನಾದಲ್ಲಿರುವ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಟೆಸ್ಟಿಂಗ್‌ ಶಾಖೆಗಳನ್ನು ಮುಚ್ಚಲು ನಿರ್ಧರಿಸಿದೆ ಎಂದು ವರದಿಯೊಂದು ಹೇಳಿದೆ. ಆರ್ಥಿಕ ಕುಸಿತದ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಜತೆಗೆ ಚೀನಾ ಸ್ಥಳೀಯ ಕಂಪನಿಗಳ ಪರವಾಗಿದೆ ಎಂಬ ಆತಂಕದಿಂದಾಗಿ ವಿದೇಶಿ ಹೂಡಿಕೆ ಭಾಗಶಃ ನಿಧಾನಗೊಂಡಿರುವುದು ಕೂಡ ಕಚೇರಿ ಸ್ಥಳಾಂತರಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಕಚೇರಿ ತೆರೆಯುವ ಸಾಧ್ಯತೆ ಇದೆ. ವಿಶ್ವದ ಅತಿದೊಡ್ಡ ತಂತ್ರಜ್ಞಾನ ಸೇವೆಗಳ ಕಂಪನಿಯಾದ ಐಬಿಎಂ ಸದ್ಯ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಉದ್ಯೋಗ ಕಡಿತ

ಐಬಿಎಂ ಕೆಲವು ತಿಂಗಳ ಹಿಂದೆಯೂ ಉದ್ಯೋಗ ಕಡಿತಗೊಳಿಸಿತ್ತು. ಮಾರ್ಕೆಟಿಂಗ್ ಮತ್ತು ಸಂವಹನ ವಿಭಾಗದಲ್ಲಿ ಉದ್ಯೋಗ ಕಡಿತಗೊಂಡಿತ್ತು. ಐಬಿಎಂನ ಮುಖ್ಯ ಸಂವಹನ ಅಧಿಕಾರಿ ಜೊನಾಥನ್ ಅಡಾಶೆಕ್ ಅವರು ಇಲಾಖೆಯ ಉದ್ಯೋಗಿಗಳೊಂದಿಗೆ ನಡೆಸಿದ ಸಭೆಯಲ್ಲಿ ವಜಾಗೊಳಿಸುವ ನಿರ್ಧಾರವನ್ನು ಪ್ರಕಟಿಸಿದ್ದರು. ಐಬಿಎಂ 3,900 ಜನರನ್ನು ಕೆಲಸದಿಂದ ತೆಗೆಯಲಿರುವುದಾಗಿ ಜನವರಿಯಲ್ಲಿ ಹೇಳಿತ್ತು. ಈ ಕಾರ್ಯದಿಂದ ಸಂಸ್ಥೆಗೆ 400 ಮಿಲಿಯನ್ ಡಾಲರ್ (33,12,92,00,000 ರೂ.) ಹಣ ಉಳಿತಾಯವಾಗಿದೆ ಎಂದು ಅಂದಾಜಿಸಲಾಗಿದೆ. ಈ ಹಣವನ್ನು ಪುನಾರಚನೆ ಕಾರ್ಯಗಳಿಗೆ ಬಳಸಲಾಗುವುದು ಎಂದು ಅಂದು ಐಬಿಎಂನ ಚೀಫ್ ಫೈನಾನ್ಷಿಯಲ್ ಆಫೀಸರ್ ಜೇಮ್ಸ್ ಕೆವನಾಘ್ ತಿಳಿಸಿದ್ದರು.

2022ರಿಂದ ಈಚೆಗೆ ವಿವಿಧ ಟೆಕ್ ಕಂಪನಿಗಳ ಬಹಳಷ್ಟು ಉದ್ಯೋಗಿಗಳು ಉದ್ಯೋಗ ಕಳೆದುಕೊಂಡಿದ್ದಾರೆ. ಈ ವರ್ಷ 204 ಟೆಕ್ ಕಂಪನಿಗಳು ಉದ್ಯೋಗ ಕಡಿತದ ನಿರ್ಧಾರ ಕೈಗೊಂಡಿವೆ. ಇದರಿಂದ 49,978 ಮಂದಿ ಟೆಕ್ಕಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Lays off: 200 ಉದ್ಯೋಗಿಗಳ ಹಬ್ಬದ ಖುಷಿ ಕಿತ್ತುಕೊಂಡ ಎಲ್‌&ಟಿ ಟೆಕ್ನಾಲಜಿ ಸರ್ವೀಸ್!

Continue Reading

ಉದ್ಯೋಗ

Job Alert: ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌ನಲ್ಲಿದೆ ಉದ್ಯೋಗಾವಕಾಶ; ಐಟಿಐ, ಡಿಪ್ಲೋಮಾ ಪಾಸಾದವರು ಅರ್ಜಿ ಸಲ್ಲಿಸಿ

Job Alert: ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌ ಖಾಲಿ ಇರುವ ವಿವಿಧ ಗ್ರೂಪ್ ‘ಸಿ’ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಐಟಿಐ ಟ್ರೈನಿ, ಆಫೀಸ್‌ ಅಸಿಸ್ಟಂಟ್‌ ಸೇರಿ ಸುಮಾರು 100 ಹುದ್ದೆಗಳು ಖಾಲಿ ಇದ್ದು, ಐಟಿಐ, ಪದವಿ, ಡಿಪ್ಲೋಮಾ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಸೆಪ್ಟೆಂಬರ್‌ 4 .

VISTARANEWS.COM


on

Job Alert
Koo

ಬೆಂಗಳೂರು: ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌ (Bharat Earth Movers Limited) ಖಾಲಿ ಇರುವ ವಿವಿಧ ಗ್ರೂಪ್ ‘ಸಿ’ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (BEML Recruitment 2024). ಬೆಮೆಲ್‌ (ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌) ರಕ್ಷಣೆ ಮತ್ತು ಏರೋಸ್ಪೇಸ್‌ ವಲಯದಲ್ಲಿ ನಾನಾ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಗಣಿಗಾರಿಕೆ ಮತ್ತು ನಿರ್ಮಾಣ ವಲಯದ ಯಂತ್ರೋಪಕರಣಗಳನ್ನು ಉತ್ಪಾದಿಸುತ್ತದೆ. ಮೆಟ್ರೊ, ರೈಲ್ವೆ ವಲಯದಲ್ಲೂ ಸಕ್ರಿಯವಾಗಿದೆ. ಹೀಗಾಗಿ ಉದ್ಯೋಗ ಅರಸುವವರಿಗೆ ಇದೊಂದು ಅತ್ಯುತ್ತಮ ಅವಕಾಶ. ಐಟಿಐ ಟ್ರೈನಿ, ಆಫೀಸ್‌ ಅಸಿಸ್ಟಂಟ್‌ ಸೇರಿ ಸುಮಾರು 100 ಹುದ್ದೆಗಳು ಖಾಲಿ ಇದ್ದು, ಐಟಿಐ, ಪದವಿ, ಡಿಪ್ಲೋಮಾ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಸೆಪ್ಟೆಂಬರ್‌ 4 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಐಟಿಐ ಟ್ರೈನಿ-ಫಿಟ್ಟರ್‌- 7 ಹುದ್ದೆ, ವಿದ್ಯಾರ್ಹತೆ: ಐಟಿಐ
ಐಟಿಐ ಟ್ರೈನಿ-ಟರ್ನರ್- 11 ಹುದ್ದೆ, ವಿದ್ಯಾರ್ಹತೆ: ಐಟಿಐ
ಐಟಿಐ ಟ್ರೈನಿ-ಮೆಕ್ಯಾನಿಷ್ಟ್‌- 10 ಹುದ್ದೆ, ವಿದ್ಯಾರ್ಹತೆ: ಐಟಿಐ
ಐಟಿಐ ಟ್ರೈನಿ-ಎಲೆಕ್ಟ್ರಿಷಿಯನ್‌- 8 ಹುದ್ದೆ, ವಿದ್ಯಾರ್ಹತೆ: ಐಟಿಐ
ಐಟಿಐ ಟ್ರೈನಿ-ವೆಲ್ಡರ್‌- 18 ಹುದ್ದೆ, ವಿದ್ಯಾರ್ಹತೆ: ಐಟಿಐ
ಆಫೀಸ್‌ ಅಸಿಸ್ಟಂಟ್‌ ಟ್ರೈನಿ-46 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ, ಪದವಿ. ಎಲ್ಲ ಹುದ್ದೆಗಳಿಗೆ 3 ವರ್ಷಗಳ ಕಾರ್ಯಾನುಭವ ಕಡ್ಡಾಯ.

ವಯೋಮಿತಿ ಮತ್ತು ಅರ್ಜಿ ಶುಲ್ಕ

ಅರ್ಜಿ ಸಲ್ಲಿಕೆಯ ಗರಿಷ್ಠ ವಯೋಮಿತಿ 32 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ. ಅರ್ಜಿ ಶುಲ್ಕವಾಗಿ ಸಾಮಾನ್ಯ / ಇಡಬ್ಲ್ಯುಎಸ್‌ / ಒಬಿಸಿ ಅಭ್ಯರ್ಥಿಗಳು 200 ರೂ. ಅನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು. ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ.

ಆಯ್ಕೆ ವಿಧಾನ

ಕಂಪ್ಯೂಟರ್‌ ಆಧಾರಿತ ಲಿಖಿತ ಪರೀಕ್ಷೆ, ಟ್ರೇಡ್‌ ಟೆಸ್ಟ್‌ ಮತ್ತು ಸಂದರ್ಸನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://kps14.exmegov.com/).
  • ಹೆಸರು ನೋಂದಾಯಿಸಿ ಲಾಗಿನ್‌ ಆಗಿ.
  • ಇಲ್ಲಿ ಕಂಡುಬರುವ ಅಪ್ಲಿಕೇಷನ್‌ ಫಾರಂ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ.
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಭವಿಷ್ಯದ ಅಗತ್ಯಗಳಿಗೆ ಅಪ್ಲಿಕೇಷನ್‌ ಫಾರಂನ ಪ್ರಿಂಟ್‌ಔಟ್‌ ತೆಗೆದಿಡಿ.

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ವಿಳಾಸ: bemlindia.inಗೆ ಭೇಟಿ ನೀಡಿ ಅಥವಾ ಇಮೇಲ್‌ ವಿಳಾಸ recruitment@bemlltd.inಗೆ ಮೇಲ್‌ ಕಳುಹಿಸಿ.

ಇದನ್ನೂ ಓದಿ: RRB Recruitment 2024: ಗುಡ್‌ನ್ಯೂಸ್‌; ಬರೋಬ್ಬರಿ 14,298 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ ಇಲಾಖೆ

Continue Reading

ವಾಣಿಜ್ಯ

Unified Pension Scheme: ಏಕೀಕೃತ ಪಿಂಚಣಿ ಯೋಜನೆ; ನೌಕರರಿಗೆ ಸಿಗುವ ಟಾಪ್‌ 9 ಪ್ರಯೋಜನಗಳಿವು

ಕೇಂದ್ರ ಸರ್ಕಾರ ಅನುಮೋದನೆ ನೀಡಿರುವ ಏಕೀಕೃತ ಪಿಂಚಣಿ ಯೋಜನೆಯನ್ನು (Unified Pension Scheme) ಅರ್ಥೈಸಿಕೊಳ್ಳಲು ನೆರವಾಗುವ ಕೆಲವು ಪ್ರಮುಖ ಅಂಶಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಹಂಚಿಕೊಂಡಿದ್ದಾರೆ. 2004ರ ಜನವರಿ 1ರ ಅನಂತರ ಸೇವೆಗೆ ಸೇರಿದವರಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ. ಈ ಯೋಜನೆ ಕುರಿತ ಮತ್ತಷ್ಟು ವಿವರಗಳನ್ನು ಇಲ್ಲಿ ಕೊಡಲಾಗಿದೆ.

VISTARANEWS.COM


on

By

Unified Pension Scheme
Koo

ನಿವೃತ್ತಿಯ ಬಳಿಕ ಸರ್ಕಾರಿ ನೌಕರರಿಗೆ (central government employees) ಆರ್ಥಿಕ ಭದ್ರತೆ ಮತ್ತು ಸ್ಥಿರತೆಯನ್ನು ಒದಗಿಸುವ ಉದ್ದೇಶದಿಂದ 23 ಲಕ್ಷ ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ʼಏಕೀಕೃತ ಪಿಂಚಣಿ ಯೋಜನೆʼಗೆ (Unified Pension Scheme) ಕೇಂದ್ರ ಸರ್ಕಾರ ಶನಿವಾರ ಅನುಮೋದನೆ ನೀಡಿದೆ. 2004ರ ಜನವರಿ 1ರ ಅನಂತರ ಸೇವೆಗೆ ಸೇರಿದವರಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ. ಈ ಯೋಜನೆ ಕುರಿತ ಮತ್ತಷ್ಟು ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಯುಪಿಎಸ್‌ ವೈಶಿಷ್ಟ್ಯಗಳೇನು?

1. ಖಚಿತ ಪಿಂಚಣಿ

ಕನಿಷ್ಠ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ ಉದ್ಯೋಗಿಗಳು ನಿವೃತ್ತಿಯ ಹಿಂದಿನ 12 ತಿಂಗಳುಗಳಲ್ಲಿ ಪಡೆದ ಸರಾಸರಿ ಮೂಲ ವೇತನದ ಶೇ. 50ರಷ್ಟು ಖಚಿತವಾದ ಪಿಂಚಣಿಯನ್ನು ಪಡೆಯುತ್ತಾರೆ. 25 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದವರ ಪಿಂಚಣಿಯು ಅವರ ಅವಧಿಗೆ ಅನುಗುಣವಾಗಿರುತ್ತದೆ. ಕನಿಷ್ಠ ಅರ್ಹತಾ ಸೇವಾ ಅವಧಿಯನ್ನು 10 ವರ್ಷಗಳಿಗೆ ನಿಗದಿಪಡಿಸಲಾಗಿದೆ.

2. ಖಚಿತವಾದ ಕುಟುಂಬ ಪಿಂಚಣಿ

ಅಪಘಾತದಿಂದ ನೌಕರ ಮರಣ ಹೊಂದಿದರೆ ಅವರ ಸಂಗಾತಿಯು ಅಥವಾ ಅವಲಂಬಿತರು ಕುಟುಂಬ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ಮರಣದ ಮೊದಲು ಉದ್ಯೋಗಿ ಪಡೆಯುತ್ತಿದ್ದ ಪಿಂಚಣಿಯ ಶೇ. 60ರಷ್ಟು ಅವರ ಸಂಗಾತಿಗೆ ಕುಟುಂಬ ಪಿಂಚಣಿಯಾಗಿ ದೊರೆಯುತ್ತದೆ.

3. ಖಚಿತವಾದ ಕನಿಷ್ಠ ಪಿಂಚಣಿ

ಕನಿಷ್ಠ 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನೌಕರರಿಗೆ ನಿವೃತ್ತಿಯ ಅನಂತರ ತಿಂಗಳಿಗೆ 10,000 ರೂ. ಕನಿಷ್ಠ ಪಿಂಚಣಿಯ ಖಾತರಿ ಇದೆ.

4. ಹಣದುಬ್ಬರ ಸೂಚ್ಯಂಕ

ಖಚಿತ ಮತ್ತು ಕುಟುಂಬ ಪಿಂಚಣಿ ಎರಡೂ ಹಣದುಬ್ಬರ ಸೂಚ್ಯಂಕಕ್ಕೆ ಒಳಪಟ್ಟಿರುತ್ತವೆ. ಈ ಹೊಂದಾಣಿಕೆಯು ಪಿಂಚಣಿಗಳು ಹಣದುಬ್ಬರಕ್ಕೆ ಅನುಗುಣವಾಗಿರುವುದನ್ನು ಖಚಿತಪಡಿಸುತ್ತದೆ.

5. ದರ ಏರಿಕೆ ಪರಿಹಾರ

ಸೇವೆಯಲ್ಲಿರುವ ಉದ್ಯೋಗಿಗಳಂತೆಯೇ ಯುಪಿಎಸ್ ಅಡಿಯಲ್ಲಿ ನಿವೃತ್ತರಾದ ಕೈಗಾರಿಕಾ ಕಾರ್ಮಿಕರಿಗೆ (AICPI-IW) ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿ ದರ ಏರಿಕೆ ಪರಿಹಾರವನ್ನು ಪಡೆಯುತ್ತಾರೆ.


6. ನಿವೃತ್ತಿಯ ಮೇಲೆ ಒಟ್ಟು ಮೊತ್ತ

ಗ್ರಾಚ್ಯುಟಿ ಜೊತೆಗೆ ಉದ್ಯೋಗಿಗಳು ನಿವೃತ್ತಿಯ ಸಮಯದಲ್ಲಿ ಒಂದು ದೊಡ್ಡ ಮೊತ್ತದ ಪಾವತಿಯನ್ನು ಸ್ವೀಕರಿಸುತ್ತಾರೆ. ಈ ಪಾವತಿಯು ವೇತನ ಮತ್ತು ತುಟ್ಟಿ ಭತ್ಯೆ ಸೇರಿ ನಿವೃತ್ತಿಯ ದಿನಾಂಕ ಪೂರ್ಣಗೊಂಡ ಪ್ರತಿ ಆರು ತಿಂಗಳ ಸೇವೆಗೆ ಉದ್ಯೋಗಿಯ ಮಾಸಿಕ ವೇತನದ 1/10 ಭಾಗವಾಗಿರುತ್ತದೆ. ಈ ಒಟ್ಟು ಮೊತ್ತದ ಪಾವತಿಯು ಖಚಿತವಾದ ಪಿಂಚಣಿಯ ಪ್ರಮಾಣವನ್ನು ಕಡಿಮೆ ಮಾಡುವುದಿಲ್ಲ.

7. ಸರ್ಕಾರದ ಕೊಡುಗೆ

ಈ ಪಿಂಚಣಿ ಯೋಜನೆಯಡಿ ಸರ್ಕಾರವು ತನ್ನ ಕೊಡುಗೆಯನ್ನು ಶೇ. 14ರಿಂದ ಶೇ.18.5ಕ್ಕೆ ಹೆಚ್ಚಿಸುತ್ತಿದೆ. ಆದರೆ ನೌಕರರ ಕೈಯಿಂದ ಈಗಿರುವ ಪ್ರಮಾಣದಷ್ಟೇ ಹಣ ಈ ಯೋಜನೆಗೆ ಸಂದಾಯವಾಗುತ್ತದೆ. ಹಾಗಾಗಿ ಇದರಿಂದ ನೌಕರರಿಗೆ ಹೆಚ್ಚು ಪ್ರಯೋಜನ ಸಿಗುವಂತಾಗುತ್ತದೆ.


8. ನಿವೃತ್ತಿ ಹೊಂದಿದವರಿಗೂ ಅನ್ವಯ

ಏಕೀಕೃತ ಪಿಂಚಣಿ ಯೋಜನೆಯ ನಿಬಂಧನೆಗಳು ರಾಷ್ಟ್ರೀಯ ಪಿಂಚಣಿ ಯೋಜನೆ ಹೊಂದಿರುವ ಹಿಂದಿನ ನಿವೃತ್ತರಿಗೆ ಅಂದರೆ ಈಗಾಗಲೇ ನಿವೃತ್ತಿ ಹೊಂದಿದವರಿಗೂ ಅನ್ವಯಿಸುತ್ತದೆ. ಹಿಂದಿನ ಅವಧಿಯ ಬಾಕಿಯನ್ನು ಪಿಪಿಎಫ್ ದರಗಳಲ್ಲಿ ಬಡ್ಡಿಯೊಂದಿಗೆ ಪಾವತಿಸಲಾಗುತ್ತದೆ.

ಇದನ್ನೂ ಓದಿ: Unified pension scheme: ಕೇಂದ್ರ ಸರ್ಕಾರದ ಯುಪಿಎಸ್ ಪಿಂಚಣಿ ಯೋಜನೆಗೆ ರಾಜ್ಯ ಸರ್ಕಾರಿ ನೌಕರರ ಸಂಘಗಳ ವಿರೋಧ

9. ಏಕೀಕೃತ ಪಿಂಚಣಿ ಯೋಜನೆಗೆ ಸೇರುವ ಆಯ್ಕೆ

ಅಸ್ತಿತ್ವದಲ್ಲಿರುವ ಎನ್‌ಪಿಎಸ್, ವಿಆರ್‌ಎಸ್ ಜೊತೆಗೆ ಎನ್‌ಪಿಎಸ್ ಜೊತೆಗೆ ಭವಿಷ್ಯದ ಉದ್ಯೋಗಿಗಳು ಯುಪಿಎಸ್‌ಗೆ ಸೇರುವ ಆಯ್ಕೆಯನ್ನು ಹೊಂದಿರುತ್ತಾರೆ. ಈ ಆಯ್ಕೆಯನ್ನು ಒಮ್ಮೆ ಮಾಡಿಕೊಂಡರೆ ಅದೇ ಅಂತಿಮವಾಗಿರುತ್ತದೆ. ಕೇಂದ್ರ ಸರ್ಕಾರದಿಂದ ಯುಪಿಎಸ್ ಅನ್ನು ಜಾರಿಗೊಳಿಸಲಾಗುತ್ತಿದೆ. ಇದನ್ನು ರಾಜ್ಯ ಸರ್ಕಾರಗಳೂ ಅಳವಡಿಸಿಕೊಳ್ಳಬಹುದಾಗಿದೆ. ಆದರೆ ಕೇಂದ್ರದಂತೆ ರಾಜ್ಯ ಸರ್ಕಾರವೂ ಹೆಚ್ಚುವರಿ ಮೊತ್ತ ಪಾವತಿಸಬೇಕಾಗುತ್ತದೆ.

Continue Reading
Advertisement
Karnataka Weather Forecast
ಮಳೆ3 ಗಂಟೆಗಳು ago

Karnataka Weather : ವಾರಾಂತ್ಯದಲ್ಲಿ ರಾಜ್ಯಾದ್ಯಂತ ಸಾಧಾರಣ ಮಳೆ ಮುನ್ಸೂಚನೆ

Dina Bhavishya
ಭವಿಷ್ಯ4 ಗಂಟೆಗಳು ago

Dina Bhavishya : ದಿನದ ಮಟ್ಟಿಗೆ ಖರ್ಚು ಹೆಚ್ಚು; ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Use nandini ghee compulsorily in temple prasadam Order of the Department of Religious Endowments
ಕರ್ನಾಟಕ15 ಗಂಟೆಗಳು ago

Nandini ghee: ದೇವಸ್ಥಾನಗಳ ಪ್ರಸಾದದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನೇ ಬಳಸಿ; ಧಾರ್ಮಿಕ ದತ್ತಿ ಇಲಾಖೆ ಆದೇಶ

Temporary additional coaches to be attached to 34 trains for Dasara 2024
ಬೆಂಗಳೂರು16 ಗಂಟೆಗಳು ago

Dasara 2024: ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ದಸರಾ ಹಬ್ಬಕ್ಕೆ 34 ರೈಲುಗಳಿಗೆ ತಾತ್ಕಾಲಿಕ ಹೆಚ್ಚುವರಿ ಬೋಗಿಗಳ ಜೋಡಣೆ

Theft case
ಬೆಂಗಳೂರು16 ಗಂಟೆಗಳು ago

Theft case : ಮಧ್ಯರಾತ್ರಿಯಲ್ಲಿ ವಕೀಲನಿಗೆ ಚಾಕು ತೋರಿಸಿ ಸುಲಿಗೆ ಮಾಡಿ ಬೆದರಿಕೆ ಹಾಕಿದ ಖದೀಮರು

Also test the prasadam of the holy places of the state Pralhad Joshi urges state government
ಬೆಂಗಳೂರು19 ಗಂಟೆಗಳು ago

Tirupati laddu Row : ತಿರುಪತಿ ಲಡ್ಡು ಬಳಿಕ ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದವನ್ನೂ ಪರೀಕ್ಷೆಗೊಳಪಡಿಸಿ; ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹ

Road Accident
ಬೆಂಗಳೂರು20 ಗಂಟೆಗಳು ago

Road Accident : ಚಾಲಕ ಕಾರಿನೊಳಗೆ ಮಲಗಿದ್ದಾಗಲೇ ನಡುರಾತ್ರಿ ಹೊತ್ತಿ ಉರಿದ ಕಾರು! ಅಗ್ನಿ ಅವಘಡಕ್ಕೆ ಕಾರಣ ನಿಗೂಢ!

Road Accident
ಕೋಲಾರ20 ಗಂಟೆಗಳು ago

Road Accident: ಅಪರಿಚಿತ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಸವಾರನ ತಲೆಯೇ ಕಟ್‌! ಭೀಕರ ದೃಶ್ಯಕ್ಕೆ ಬೆಚ್ಚಿ ಬಿದ್ದ ಜನರು

Good news for the children of yellow board drivers Do this to get a scholarship under Vidyanidhi
ಬೆಂಗಳೂರು ಟೆಕ್ ಸಮ್ಮಿಟ್21 ಗಂಟೆಗಳು ago

Students Scholarship : ಯೆಲ್ಲೋ ಬೋರ್ಡ್‌ ವಾಹನ ಚಾಲಕರ ಮಕ್ಕಳಿಗೆ ಗುಡ್‌ ನ್ಯೂಸ್‌; ವಿದ್ಯಾನಿಧಿಯಡಿ ಸ್ಕಾಲರ್‌ಶಿಪ್‌ ಪಡೆಯಲು ಹೀಗೆ ಮಾಡಿ

allegations of rape honeytrap Mla Munirathna arrested again by Kaggalipura police as soon as he came out of jail
ರಾಜಕೀಯ21 ಗಂಟೆಗಳು ago

MLA Muniratna: ಅತ್ಯಾಚಾರ, ಹನಿಟ್ರ್ಯಾಪ್‌ ಆರೋಪ; ಜೈಲಿನಿಂದ ಹೊರಬರುತ್ತಿದ್ದಂತೆ ಶಾಸಕ ಮುನಿರತ್ನ ಮತ್ತೆ ಅರೆಸ್ಟ್‌

Kannada Serials
ಕಿರುತೆರೆ11 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ11 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್3 ವಾರಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್3 ವಾರಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ4 ವಾರಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ1 ತಿಂಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 ತಿಂಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 ತಿಂಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 ತಿಂಗಳುಗಳು ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌