Site icon Vistara News

ವಿಸ್ತಾರ TOP 10 NEWS: ಸಿಎಂ ಆಯ್ಕೆ ಕಗ್ಗಂಟಿನ 4ನೇ ದಿನದಿಂದ, ಮುಂದಿನ 5 ವರ್ಷ ಬಹಳ ಕಷ್ಟ ಎಂದ ವಿಶ್ವಸಂಸ್ಥೆವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-congress-deliberations-over-cm-selection-continues-to-un-warning-against-global-warming-and-more-news

#image_title

ಬೆಂಗಳೂರು: ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಂದು ನಾಲ್ಕನೇ ದಿನವೂ ಕಾಂಗ್ರೆಸ್‌ ಸಿಎಂ ಆಯ್ಕೆ ಕಸರತ್ತು ಮುಂದುವರಿದಿದೆ. ಎಲ್ಲರನ್ನೂ ಒಬ್ಬೊಬ್ಬರಾಗಿ ಕರೆದು ಮಾತನಾಡಿಸುತ್ತಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯಾವುದೇ ಅವಸರ ತೋರುತ್ತಿಲ್ಲ. ಈ ನಡುವೆ ಮುಂದಿನ ಐದು ವರ್ಷ ಬಿಸಿಲ ತಾಪ ಹೆಚ್ಚಾಗಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Karnataka Election 2023 : ಮುಖ್ಯಮಂತ್ರಿ ನೇಮಕ ಅಂತಿಮವಾಗಿಲ್ಲ ಎಂದ ಸುರ್ಜೇವಾಲಾ; ಕಾಂಗ್ರೆಸ್‌ನಲ್ಲಿ ಗೊಂದಲವೋ ಗೊಂದಲ
ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರೆಂಬುದನ್ನು ಇನ್ನೂ ನಿರ್ಧಾರವಾಗಿಲ್ಲ (Karnataka Election 2023). ನಿರ್ಧಾರವಾದ ಮೇಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಪ್ರಕಟಿಸಲಿದ್ದಾರೆ.ಮುಂದಿನ 48 ರಿಂದ 72 ಗಂಟೆಗಳ ಒಳಗೆ ಕರ್ನಾಟಕದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಕಾಂಗ್ರೆಸ್‌ ಪಕ್ಷದ ಕರ್ನಾಟಕದ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Karnataka CM: ರಾಹುಲ್‌, ಖರ್ಗೆ ಜತೆ 4 ಗಂಟೆ ಮಾತುಕತೆ; ಪಟ್ಟು ಸಡಿಲಿಸದ ಡಿ.ಕೆ ಶಿವಕುಮಾರ್‌
ರಾಜ್ಯದ ಮುಖ್ಯಮಂತ್ರಿ (Karnataka CM) ಸ್ಥಾನದ ವಿಚಾರದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಮತ್ತು ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರು ನಡೆಸಿದ ಒಟ್ಟು ನಾಲ್ಕು ಗಂಟೆಗಳ ಮಾತುಕತೆ ಯಾವ ಫಲವನ್ನೂ ನೀಡಿಲ್ಲ. ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್‌ (DK Shivakumar) ಅವರು ಕೊಡುವುದಿದ್ದರೆ ಮುಖ್ಯಮಂತ್ರಿ ಸ್ಥಾನ ಕೊಡಿ, ಇಲ್ಲದಿದ್ದರೆ ಏನೂ ಬೇಡ ಎಂಬ ತಮ್ಮ ಹಠದಿಂದ ಒಂದಿಂಚೂ ಹಿಂದೆ ಸರಿದಿಲ್ಲ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Karnataka CM: ಸಿದ್ದರಾಮಯ್ಯ ಸಿಎಂ‌ ಎಂದು ಘೋಷಿಸಿದ ಪುಷ್ಪಾ ಅಮರನಾಥ್‌, ಅಶೋಕ್‌ ಪಟ್ಟಣ್‌ಗೆ ನೋಟಿಸ್
ರಾಜ್ಯದ ಮುಂದಿನ ಮುಖ್ಯಮಂತ್ರಿ (Karnataka CM) ಯಾರು ಎಂಬ ವಿಚಾರದಲ್ಲಿ ಹೈಕಮಾಂಡ್‌ (Congress High command) ಮಟ್ಟದಲ್ಲಿ ಇನ್ನೂ ತೀವ್ರ ಚರ್ಚೆ ನಡೆಯುತ್ತಿರುವ ಮಧ್ಯೆಯೇ ಸಿದ್ದರಾಮಯ್ಯ (Siddaramaiah) ಅವರನ್ನು ಸಿಎಂ ಎಂದು ಹೈಕಮಾಂಡ್‌ ಘೋಷಣೆ ಮಾಡಿದೆ ಎಂಬ ಸುಳ್ಳು ಮಾಹಿತಿಯನ್ನು ಹರಿಬಿಟ್ಟ ಇಬ್ಬರು ಕಾಂಗ್ರೆಸ್‌ ನಾಯಕರಿಗೆ ನೋಟಿಸ್‌ ನೀಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Karnataka CM: ಒಬ್ಬೊಬ್ಬರಾಗಿ ಸರಣಿ ಪಟಾಕಿ ಸಿಡಿಸುತ್ತಿರುವ 17 ವಲಸಿಗರು: ಸಿದ್ದರಾಮಯ್ಯ ಪರವೋ? ವಿರುದ್ಧವೋ?
ಒಂದೆಡೆ 135 ಸ್ಥಾನ ಗಳಿಸಿದ ಕಾಂಗ್ರೆಸ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನಡುವೆ ಸಿಎಂ ಗಾದಿಗೆ ಹಗ್ಗಜಗ್ಗಾಟ ನಡೆಯುತ್ತಿದ್ದರೆ ಇತ್ತ ಕಾಂಗ್ರೆಸ್‌-ಜೆಡಿಎಸ್‌ನಿಂದ ಬಿಜೆಪಿಗೆ ವಲಸೆ ಬಂದ ತಂಡ ದ ಸದಸ್ಯರು ಒಬ್ಬೊಬ್ಬರಾಗಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಕುರಿತು ಕುತೂಹಲಕಾರಿಯಾಗಿ ಟ್ವೀಟ್‌ ಮಾಡುತ್ತಿರುವ ಸದಸ್ಯರ ಮಾತುಗಳು ಯಾವ ಕಾರಣಕ್ಕೆ ಎನ್ನುವ ರಹಸ್ಯವನ್ನು ಹೊರಗೆಡವುತ್ತಿಲ್ಲ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Karnataka CM : ನೂತನ ಮುಖ್ಯಮಂತ್ರಿ ಆಯ್ಕೆಗೆ ಅರ್ಜೆಂಟೇನಿಲ್ಲ; ಹಾಗಾದರೆ ಡೆಡ್‌ಲೈನ್‌ ಯಾವಾಗ?
ರಾಜ್ಯದ ನೂತನ ಮುಖ್ಯಮಂತ್ರಿಯನ್ನು (Karnataka CM) ಆಯ್ಕೆ ಮಾಡಲು ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ ಪರದಾಡುತ್ತಿದೆ. ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಹಗ್ಗಜಗ್ಗಾಟ ರಾಜ್ಯದ ಜನತೆಯಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಆದಷ್ಟು ಬೇಗ ಈ ಪ್ರಕ್ರಿಯೆಯನ್ನು ನಡೆಸಬೇಕೆಂದು ಪಕ್ಷದ ಉನ್ನತ ನಾಯಕರ ಮೇಲೆ ಒತ್ತಡ ಹೇರಲಾಗುತ್ತಿದೆ. ಆದರೆ ಮುಖ್ಯಮಂತ್ರಿಯನ್ನು ತುರ್ತಾಗಿ ಆಯ್ಕೆ ಮಾಡಬೇಕಾದ ಅನಿವಾರ್ಯತೆಯೇನೂ ಇಲ್ಲ. ಇನ್ನು ಒಂದು ವಾರಗಳ ಕಾಲಾವಕಾಶವಿದೆ ಎನ್ನುತ್ತಿದ್ದಾರೆ ಸಂವಿಧಾನ ತಜ್ಞರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. ಕರೆಂಟ್‌ ಬಿಲ್‌ ಕಟ್ಟುವುದಿಲ್ಲ ಎಂದು ಮೀಟರ್‌ಗೆ ಬೋರ್ಡ್‌ ಹಾಕಿದ ಸಾಮಾಜಿಕ ಕಾರ್ಯಕರ್ತ!
ಕಾಂಗ್ರೆಸ್‌ ಪಕ್ಷ‌ (Congress party) ಅಧಿಕಾರಕ್ಕೆ ಬಂದರೆ ವಿದ್ಯುತ್‌ ಬಿಲ್‌ ಬಿಲ್‌ (Electricity bill) ಕಟ್ಟಬೇಕಾಗಿಲ್ಲ ಎಂಬ ಪ್ರಣಾಳಿಕೆ ಘೋಷಣೆ (Congress manifesto) ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಹಲವಾರು ಮಂದಿ ಈ ಬಾರಿ ಕರೆಂಟ್‌ ಬಿಲ್‌ ಕಟ್ಟುವುದಿಲ್ಲ ಎಂದು ಹೇಳಿದರೆ, ನಮಗೆ ಬಿಲ್ಲೇ ಕೊಡಬೇಡಿ ಎಂದು ಕೆಲವರು ಮೀಟರ್‌ ರೀಡರ್‌ಗೆ ಹೇಳುತ್ತಿದ್ದಾರೆ, ಈ ನಡುವೆ ಉಡುಪಿಯ ಸಾಮಾಜಿಕ ಕಾರ್ಯಕರ್ತರೊಬ್ಬರು ತಮ್ಮ ಮನೆಯ ವಿದ್ಯುತ್‌ ಮೀಟರ್‌ ಮೇಲೆ ʻಕರೆಂಟ್ ಬಿಲ್ ಕಟ್ಟುವುದಿಲ್ಲʼ ಎಂಬ ಬೋರ್ಡ್‌ ಅಳವಡಿಸಿದ್ದಾರೆ! ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. ರೈತರಿಗೆ ಕೇಂದ್ರ ಸಿಹಿ ಸುದ್ದಿ; ಮುಂಗಾರು ಹಂಗಾಮಿಗೆ ರಸಗೊಬ್ಬರಕ್ಕೆ 1.08 ಲಕ್ಷ ಕೋಟಿ ರೂ. ಸಬ್ಸಿಡಿ
ಕೇಂದ್ರ ಸರ್ಕಾರವು ರೈತರಿಗೆ ಸಿಹಿ ಸುದ್ದಿ ನೀಡಿದೆ. 2023-24ನೇ ಸಾಲಿನ ಮುಂಗಾರು ಹಂಗಾಮಿಗೆ ರಸಗೊಬ್ಬರಕ್ಕೆ 1.08 ಕೋಟಿ ರೂಪಾಯಿ ಸಬ್ಸಿಡಿ ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯು ಅನುಮೋದನೆ ನೀಡಿದೆ. ಇದರಿಂದ ದೇಶದ 12 ಕೋಟಿಗೂ ಅಧಿಕ ರೈತರಿಗೆ ಅನುಕೂಲವಾಗಲಿದೆ. ರಸಗೊಬ್ಬರದ ಬೆಲೆಯೇರಿಕೆಯನ್ನು ತಡೆಯಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. ಮುಂದಿನ 5 ವರ್ಷ ಕಂಡು ಕೇಳರಿಯದ ಬಿಸಿಲ ತಾಪ, ವಿಶ್ವಸಂಸ್ಥೆಯ ಎಚ್ಚರಿಕೆ
ದೇಶದ ಬಹುತೇಕ ಕಡೆ ಬೇಸಿಗೆ ಅಬ್ಬರ ಹೆಚ್ಚಿದೆ. ಹೊರಗೆ ಹೋಗಲು ಆಗದ, ಮನೆಯಲ್ಲಿ ಕೂತರೂ ಬೆವರುವ ಸ್ಥಿತಿ ಎದುರಾಗಿದೆ. ಮೈ ಎಂಬುದು ಬೆವರಿನ ಕಾರ್ಖಾನೆಯಾಗಿದೆ. ಯಾವಾಗ ಬೇಸಿಗೆ ಮುಗಿಯುತ್ತದೆಯೋ ಎಂದು ಕ್ಯಾಲೆಂಡರ್‌ ನೋಡುವಂತಾಗಿದೆ. ಮಳೆಗಾಗಿ ಆಕಾಶದತ್ತ ಕಣ್ಣು ಹಾಯಿಸುವಂತಾಗಿದೆ. ಇದರ ಬೆನ್ನಲ್ಲೇ, 2023-2027ರವರೆಗೆ ಇತಿಹಾಸದಲ್ಲಿ ಕಂಡು ಕೇಳರಿಯದಷ್ಟು ಹೆಚ್ಚಿನ ತಾಪಮಾನ ಇರಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ. ಇದು ಭೀತಿ ಹುಟ್ಟಿಸುವಂತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. IPL 2023: ಟ್ರೋಲ್​ಗಳ ಬಗ್ಗೆ ಮೌನ ಮುರಿದ ಕೆ.ಎಲ್​ ರಾಹುಲ್​
ಬಲ ತೊಡೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಕೆ ಕಾಣುತ್ತಿರುವ ಟೀಮ್​ ಇಂಡಿಯಾದ ಆಟಗಾರ, ಕನ್ನಡಿಗ ಕೆ.ಎಲ್​ ರಾಹುಲ್​ ಅವರು ಇದೇ ಮೊದಲ ಬಾರಿಗೆ ತಮ್ಮ ವಿರುದ್ಧದ ಟ್ರೋಲ್ ಬಗ್ಗೆ ಮೌನ ಮುರಿದ್ದಿದ್ದಾರೆ. ಆರ್‌ಸಿಬಿ ಎದುರಿನ ಐಪಿಎಲ್‌ ಪಂದ್ಯದ ವೇಳೆ ಕ್ಷೇತ್ರರಕ್ಷಣೆ ನಡೆಸುತ್ತಿದ್ದಾಗ ರಾಹುಲ್‌ ತೊಡೆಯ ನೋವಿಗೆ ಸಿಲುಕಿ ಮೈದಾನದಲ್ಲಿ ಕುಸಿದು ಬಿದ್ದಿದ್ದರು. ಬಳಿಕ ಅವರಿಗೆ ಶಸ್ತ್ರಚಿಕಿತ್ಸೆ ಮಾಡಕಲಾಗಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ಮಗು ಮಾಡಿಕೊಳ್ಳಬೇಕು, ಜೈಲಲ್ಲಿರುವ ಪತಿಯನ್ನು ಬಿಡಿ ಎಂದು ಮಹಿಳೆ ಮನವಿ; ಹೊರಡಲು ತುದಿಗಾಲಲ್ಲಿ ನಿಂತ ಕೈದಿ!
ಏಳು ವರ್ಷಗಳಿಂದ ಜೈಲಲ್ಲಿರುವ ನನ್ನ ಪತಿಯನ್ನು ಪೆರೋಲ್​ ಆಧಾರದ ಮೇಲೆ ಹೊರಗೆ ಕಳಿಸಿ. ನನಗೆ ಅವನಿಂದ ಮಗು ಪಡೆಯಬೇಕಾಗಿದೆ ಎಂದು ಪತ್ನಿ (Gwalior woman) ಜೈಲಾಧಿಕಾರಿ ಎದುರು ಮನವಿ ಇಟ್ಟಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್​ ಸೆಂಟ್ರಲ್ ಜೈಲಿ (Gwalior Central Jail)ನಲ್ಲಿರುವ ದಾರಾ ಸಿಂಗ್​ ಜಾತವ್​ ಈಗ ಪೆರೋಲ್​ ಪಡೆದು ಹೊರಗೆ ಹೋಗಲು ತುದಿಗಾಲಿನಲ್ಲಿ ನಿಂತಿದ್ದಾನೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version