Site icon Vistara News

ವಿಸ್ತಾರ TOP 10 NEWS: ಪವರ್‌ ಶೇರಿಂಗ್‌ ಹೇಳಿಕೆಗೆ ‌ಡಿಕೆಶಿ ಆಕ್ರೋಶದಿಂದ, ಚೆನ್ನೈ ಫೈನಲ್‌ಗೆ ಲಗ್ಗೆವರೆಗಿನ ಪ್ರಮುಖ ಸುದ್ದಿಗಳಿವು

vistara top 10 news DCM DK Shivakumar anger over statements to modi australia tour and more news

#image_title

1. Karnataka CM: ‌ಸಿದ್ದು ಪೂರ್ಣಾವಧಿ ಸಿಎಂ; ವರಿಷ್ಠರು ಹೇಳಿದ್ದನ್ನೇ ಹೇಳಿದ್ದು ಎಂದ ಎಂಬಿಪಿ; ಡಿಸ್ಟರ್ಬ್‌ ಆದ್ರಾ ಡಿಕೆಶಿ?
ಮುಖ್ಯಮಂತ್ರಿಯಾಗಿ (Karnataka CM) ಅಧಿಕಾರ ವಹಿಸಿಕೊಂಡಿರುವ ಸಿದ್ದರಾಮಯ್ಯ (Siddaramaiah) ಅವರು ಮುಂದಿನ 2.5 ವರ್ಷಕ್ಕೆ ಅಧಿಕಾರವನ್ನು ಬಿಟ್ಟುಕೊಡುವ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿತ್ತಾದರೂ ಇದನ್ನು ಸೋಮವಾರ (ಮೇ 22) ಅಲ್ಲಗಳೆದಿದ್ದ ಸಚಿವ ಎಂ.ಬಿ. ಪಾಟೀಲ್‌, ಐದು ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ ಎಂದು ಹೇಳಿದ್ದರು. ಇದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಅವರ ಕೋಪಕ್ಕೆ ಕಾರಣವಾಗಿದೆ. ಅಲ್ಲದೆ, ಮಂಗಳವಾರವೂ (ಮೇ 23) ಈ ಮಾತನ್ನೇ ಪುನುರುಚ್ಚಾರ ಮಾಡಿರುವ ಎಂ.ಬಿ. ಪಾಟೀಲ್‌ (MB Patil), ಪಕ್ಷದ ವರಿಷ್ಠರು ಹೇಳಿದ್ದನ್ನೇ ನಾನು ಹೇಳಿದ್ದೇನೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಣೆ ಮಾಡಿರುವ ಡಿ.ಕೆ. ಶಿವಕುಮಾರ್‌, “ಡೋಂಟ್‌ ಡಿಸ್ಟರ್ಬ್‌ ಮಿ” ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Karnataka CM: ನಾನು ತೀಕ್ಷ್ಣವಾಗಿ ಮಾತನಾಡಬಲ್ಲೆ, ಆದರೆ ಬೇಡವೆಂದ ಡಿಕೆಸು; ಎಐಸಿಸಿ ಅಧ್ಯಕ್ಷರು ನೋಡ್ಕೋತಾರೆ ಅಂದ್ರು ಡಿಕೆಶಿ
ಹೆಚ್ಚಿನ ಓದಿಗಾಗಿ: Karnataka CM: ಯಾರೂ ಅನಗತ್ಯ ಹೇಳಿಕೆ ನೀಡಬೇಡಿ, ನಾವು ನೋಡ್ಕೋತೀವಿ: ಸಿದ್ದು, ಡಿಕೆಶಿ ಬಣಕ್ಕೆ ಸುರ್ಜೆವಾಲ ಎಚ್ಚರಿಕೆ

2. D.K. Shivakumar: ಕೇಸರಿ ಬಟ್ಟೆ ಹಾಕ್ಕೊಂಡು ಇಲಾಖೆಗೆ ಅವಮಾನ ಮಾಡಿದ್ದೀರ; ಕೇಸರೀಕರಣಕ್ಕೆ ಅವಕಾಶವಿಲ್ಲ: ಪೊಲೀಸರಿಗೆ ಡಿಕೆಶಿ ವಾರ್ನಿಂಗ್‌
ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸ್ ಇಲಾಖೆಯನ್ನು ಕೇಸರೀಕರಣ ಮಾಡಲು ಹೊರಟಿದ್ದೀರಾ ನೀವು? ನಮ್ಮ ಸರ್ಕಾರದಲ್ಲಿ ಇದಕ್ಕೆ ಅವಕಾಶ ಕೊಡೊಲ್ಲ ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Assembly session: ಸ್ಪೀಕರ್‌ಗಿರಿಗೆ ಒಪ್ಪಿದ ಯು.ಟಿ ಖಾದರ್‌; ಮುಸ್ಲಿಂ ಸಮುದಾಯದ ಮೊದಲ ಸ್ಪೀಕರ್, 2 ವರ್ಷದ ಶರತ್ತು
ಹಿರಿಯ ಶಾಸಕರು ಸ್ವೀಕರಿಸಲು ಒಪ್ಪದ ವಿಧಾನಸಭೆ ಸ್ಪೀಕರ್‌ ಸ್ಥಾನವನ್ನು ಅಲಂಕರಿಸಲು ಉಳ್ಳಾಲ ಶಾಸಕ ಯು.ಟಿ ಖಾದರ್‌‌ (UT Khader) ಒಪ್ಪಿದ್ದಾರೆ. ಹರಸಾಹಸಪಟ್ಟು ಅವರ ಮನವೊಲಿಸಲು ಕೈ ಮುಖಂಡ ಕೆ.ಸಿ ವೇಣುಗೋಪಾಲ್‌ ಸಫಲರಾಗಿದ್ದಾರೆ. ಇಂದು ಸ್ಪೀಕರ್‌ ಸ್ಥಾನಕ್ಕೆ ನಾಮಪತ್ರವನ್ನು ಖಾದರ್‌ ಸಲ್ಲಿಸಲಿದ್ದಾರೆ. ಆದರೆ ಎರಡು ವರ್ಷ ಮಾತ್ರ ಸ್ಪೀಕರ್‌ ಆಗಿರುವುದಾಗಿಯೂ, ನಂತರ ಸಚಿವ ಸ್ಥಾನ ನೀಡಬೇಕು ಎಂಬ ಅವರ ಶರತ್ತಿಗೆ ಹೈಕಮಾಂಡ್‌ ಒಪ್ಪಿದೆ ಎನ್ನಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Assembly Session: ಸ್ಪೀಕರ್‌ ಆಗಿದ್ದವರು ಸೋಲ್ತಾರೆ ಎನ್ನೋದು ಮೂಢನಂಬಿಕೆ: ನಂಬೋಲ್ಲ ಎಂದ ಯು.ಟಿ. ಖಾದರ್‌

4. Narendra Modi: ಮೋದಿಯನ್ನು ಬಾಸ್‌ ಎಂದ ಆಸ್ಟ್ರೇಲಿಯಾ ಪ್ರಧಾನಿ; ಅಮೆರಿಕ ರಾಕ್‌ಸ್ಟಾರ್‌ ಜನಪ್ರಿಯತೆಗೆ ಹೋಲಿಕೆ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಸ್ಟ್ರೇಲಿಯಾದಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ. ಅದರಲ್ಲೂ, ಸಿಡ್ನಿಯ ಫುಟ್ಬಾಲ್‌ ಮೈದಾನದಲ್ಲಿ ಸುಮಾರು 20 ಸಾವಿರ ಅನಿವಾಸಿ ಭಾರತೀಯರು ಮೋದಿ (Narendra Modi) ಅವರನ್ನು ಕಂಡು ಪುಳಕಿತರಾಗಿದ್ದಾರೆ. ಮೋದಿ ಅವರ ನಿರರ್ಗಳ ಭಾಷಣ ಕೇಳಿ ಮಂತ್ರಮುಗ್ಧಗೊಂಡಿದ್ದಾರೆ. ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್‌ ಅವರು ವೇದಿಕೆ ಮೇಲೆ ನಿಂತಾಗ, ಸ್ಟೇಡಿಯಂ ತುಂಬ ಮೋದಿ ಮೋದಿ ಘೋಷಣೆ ಮೊಳಗಿದೆ. ಜನರ ಘೋಷಣೆ ಕಂಡ ಆಸ್ಟ್ರೇಲಿಯಾ ಪ್ರಧಾನಿ, ನರೇಂದ್ರ ಮೋದಿ ಅವರನ್ನು ಬಾಸ್‌ ಎಂದು ಕರೆದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Narendra Modi: ಆಸ್ಟ್ರೇಲಿಯಾದಲ್ಲಿ ಮೋದಿ ಮೋಡಿ, ಬ್ರಿಸ್ಬೇನ್‌ನಲ್ಲಿ ಶೀಘ್ರವೇ ಕಾನ್ಸುಲೇಟ್‌ ಸ್ಥಾಪನೆ ಘೋಷಣೆ

5. UPSC Result 2022 : ಯುಪಿಎಸ್‌ಸಿ ಫಲಿತಾಂಶ ಪ್ರಕಟ; ಇಶಿತಾ ಕಿಶೋರ್‌ ಟಾಪರ್
ಕೇಂದ್ರ ಲೋಕಸೇವಾ ಆಯೋಗವು 2022ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶ (UPSC Result 2022) ಪ್ರಕಟಸಿದ್ದು, ಒಟ್ಟು 933 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇವರಲ್ಲಿ 345 ಮಂದಿ ಸಾಮಾನ್ಯ ಅಭ್ಯರ್ಥಿಗಳಾಗಿದ್ದರೆ, 99 ಮಂದಿ ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯುಎಸ್‌) ಅಭ್ಯರ್ಥಿಗಳಾಗಿದ್ದಾರೆ. 263 ಮಂದಿ ಒಬಿಸಿ, 154 ಮಂದಿ ಎಸ್‌ಸಿ, 72 ಮಂದಿ ಎಸ್‌ಟಿ ಅಭ್ಯರ್ಥಿಗಳಾಗಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: UPSC Result 2022: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕರ್ನಾಟಕದ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆ

6. 2000 Notes Withdrwan : ನೋಟು ಬದಲಿಸಲು ಯಾವುದೇ ದಾಖಲೆ, ಅರ್ಜಿ ಬೇಕಿಲ್ಲ: ಬ್ಯಾಂಕ್‌ಗಳು ಹೇಳಿದ್ದೇನು?
ಆರ್‌ಬಿಐ ಚಲಾವಣೆಯಿಂದ ಹಿಂತೆಗೆದುಕೊಂಡಿರುವ 2,000 ರೂ. ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಬದಲಿಸಲು ಮೇ 23ರಿಂದ ವ್ಯವಸ್ಥೆ ಕಲ್ಪಿಸಲಾಗಿದೆ. (2000 Notes Withdrwan) ಜನತೆ ಯಾವುದೇ ದಾಖಲೆಯ ಅಗತ್ಯ ಇಲ್ಲದೆಯೇ 2000 ರೂ. ನೋಟುಗಳನ್ನು ಬದಲಿಸಬಹುದು ಎಂದು ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ (Punjab National Bank) ಮಂಗಳವಾರ ತಿಳಿಸಿದೆ. 2023ರ ಸೆಪ್ಟೆಂಬರ್‌ 30 ತನಕ ವಿನಿಮಯ ಮಾಡಬಹುದು. ಬಳಿಕ ಕೂಡ ನೋಟಿಗೆ ಮಾನ್ಯತೆ ಇರುತ್ತದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೂಡ (SBI) 2000 ರೂ. ನೋಟು ವಿನಿಮಯಕ್ಕೆ ಯಾವುದೇ ಅರ್ಜಿ ಬೇಕಿಲ್ಲ ಎಂದು ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ:

7. Viral Video: ಕಾರು-ಫ್ಲೈಟ್​​ ಬಿಟ್ಟು, ರಾತ್ರಿ ಟ್ರಕ್​​ನಲ್ಲಿ ಚಂಡಿಗಢಕ್ಕೆ ಹೋದ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi)ಯವರು ಟ್ರಕ್​ ಸವಾರಿ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ದೆಹಲಿಯಿಂದ ಚಂಡಿಗಢ್​ಗೆ ತೆರಳುತ್ತಿದ್ದ ರಾಹುಲ್ ಗಾಂಧಿ, ಹರಿಯಾಣದ ಅಂಬಾಲಾದಿಂದ ಟ್ರಕ್​ ಹತ್ತಿ ಹೋಗಿದ್ದಾರೆ. ರಾತ್ರಿಯಿಡೀ ಕೆಲಸ ಮಾಡುವ ಟ್ರಕ್​, ಲಾರಿ ಚಾಲಕರ ಕಷ್ಟ-ಸಮಸ್ಯೆಗಳನ್ನು ಆಲಿಸುವ ಸಲುವಾಗಿ ರಾಹುಲ್ ಗಾಂಧಿ ಹೀಗೆ ಟ್ರಕ್​​ನಲ್ಲಿ ಪ್ರಯಾಣ ಬೆಳೆಸಿದ್ದಾರೆ ಎಂದು ಹೇಳಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. IPL 2023: ಗುಜರಾತ್‌ ವಿರುದ್ಧ 15 ರನ್‌ ಜಯ; 10ನೇ ಬಾರಿ ಫೈನಲ್‌ ಪ್ರವೇಶಿಸಿದ ಚೆನ್ನೈ
ಗುಜರಾತ್‌ ಟೈಟನ್ಸ್ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು 15 ರನ್‌ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ 10ನೇ ಬಾರಿ ಐಪಿಎಲ್‌ ಫೈನಲ್‌ ಪ್ರವೇಶಿಸಿದೆ. ಮೊದಲು ಬ್ಯಾಟ್‌ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 172 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಗುಜರಾತ್‌ ಟೈಟನ್ಸ್‌‌ ತಂಡವು 20 ಓವರ್‌ಗಳಲ್ಲಿ 157 ರನ್‌ ಗಳಿಸಲಷ್ಟೇ ಶಕ್ತವಾಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. ವಿಸ್ತಾರ Explainer: Aritificial Intelligence : ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ನಿಮ್ಮ ಉದ್ಯೋಗವನ್ನು ಕಸಿದುಕೊಳ್ಳಲಿದೆಯೇ?
ಕೃತಕ ಬುದ್ದಿಮತ್ತೆ ಅಥವಾ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಅನೇಕ ಉದ್ಯೋಗಗಳನ್ನು ಕಸಿಯಲಿದೆ ಎಂಬ ಆತಂಕ ಸೃಷ್ಟಿಸಿದೆ. ಕಾರಣವೇನು? ಆ ಉದ್ಯೋಗಗಳು ಯಾವುದು? ಇಲ್ಲಿದೆ ವಿವರ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ಒಂದೇ ಸಲಕ್ಕೆ 5 ಹೆಣ್ಣುಮಕ್ಕಳಿಗೆ ಜನ್ಮ ನೀಡಿದ ಮಹಿಳೆ; ಫೋಟೋ ಶೇರ್ ಮಾಡಿದ ಆಸ್ಪತ್ರೆ
ಅವಳಿ-ಜವಳಿ, ತ್ರಿವಳಿ ಮಕ್ಕಳು ಹುಟ್ಟುವುದು ಈಗೀಗ ಸಾಮಾನ್ಯ ಆಗುತ್ತಿದೆ. ಆದರೆ ಜಾರ್ಖಂಡ್​​ನ ರಾಂಚಿಯಲ್ಲಿರುವ ರಿಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ಮಹಿಳೆಯೊಬ್ಬರು ಐವರು ಮಕ್ಕಳಿಗೆ ಜನ್ಮ (Woman gave birth to five Children)ನೀಡಿದ್ದಾರೆ. ಸದ್ಯ ತಾಯಿ ಮತ್ತು ಮಕ್ಕಳು ಎಲ್ಲರೂ ಆರೋಗ್ಯವಾಗಿದ್ದು, ರಿಮ್ಸ್ ಆಸ್ಪತ್ರೆ ಟ್ವಿಟರ್​ನಲ್ಲಿ ಐದೂ ಶಿಶುಗಳ ಫೋಟೋವನ್ನು ಹಂಚಿಕೊಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version