Artificial Intelligence: Will Artificial Intelligence Take Your Job?ವಿಸ್ತಾರ Explainer: Aritificial Intelligence : ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ನಿಮ್ಮ ಉದ್ಯೋಗವನ್ನು ಕಸಿದುಕೊಳ್ಳಲಿದೆಯೇ?

EXPLAINER

ವಿಸ್ತಾರ Explainer: Aritificial Intelligence : ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ನಿಮ್ಮ ಉದ್ಯೋಗವನ್ನು ಕಸಿದುಕೊಳ್ಳಲಿದೆಯೇ?

Aritificial Intelligence ಕೃತಕ ಬುದ್ದಿಮತ್ತೆ ಅಥವಾ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಅನೇಕ ಉದ್ಯೋಗಗಳನ್ನು ಕಸಿಯಲಿದೆ ಎಂಬ ಆತಂಕ ಸೃಷ್ಟಿಸಿದೆ. ಕಾರಣವೇನು? ಆ ಉದ್ಯೋಗಗಳು ಯಾವುದು? ಇಲ್ಲಿದೆ ವಿವರ.

VISTARANEWS.COM


on

Artificial Intelligence Will Artificial Intelligence Take Your Job?
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಕೋವಿಡ್‌ ಬಿಕ್ಕಟ್ಟಿನ ಸಂದರ್ಭ ಅನೇಕ ಉದ್ಯೋಗಗಳು ನಷ್ಟವಾಗಿತ್ತು. ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದೆ ಎನ್ನುವಾಗಲೇ ಅತಿ ದೊಡ್ಡ ಆತಂಕವೊಂದು ಕೃತಕ ಬುದ್ದಿಮತ್ತೆ ಅಥವಾ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ (Artificial Intelligence) ಕ್ಷೇತ್ರದಿಂದ ಬಂದಿದೆ. ಈ ಟೆಕ್ನಾಲಜಿ ಐಟಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಜಗತ್ತಿನಾದ್ಯಂತ ಲಕ್ಷಾಂತರ ಉದ್ಯೋಗಗಳನ್ನು ಕಸಿದುಕೊಳ್ಳಲಿದೆ ಎಂಬ ಭೀತಿ ಅಕ್ಷರಶಃ ಆವರಿಸಿದೆ. ChatGPT ಮತ್ತು Generative artificial intelligence (Gen-AI) ಕಾರ್ಪೊರೇಟ್‌ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಮೈಕ್ರೊಸಾಫ್ಟ್‌ ಬೆಂಬಲಿತ ಓಪನ್‌ ಎಐ (Open-AI) ಕಳೆದ ವರ್ಷ ನವೆಂಬರ್‌ನಲ್ಲಿ ChatGPT ಅನ್ನು ಬಿಡುಗಡೆಗೊಳಿಸಿದ ಬಳಿಕ ಅನೇಕ ಆತಂಕಗಳಿಗೆ ಕಾರಣವಾಗಿದೆ.

‌ChatGPT: ಎರಡೇ ತಿಂಗಳಲ್ಲಿ 10 ಕೋಟಿ ಡೌನ್‌ಲೋಡ್! ಚಾಟ್‌ ಜಿಪಿಟಿ ಆ್ಯಪ್‌ ಬಿಡುಗಡೆಯಾದ ಎರಡೇ ತಿಂಗಳಿನಲ್ಲಿ 10 ಕೋಟಿ ಸಕ್ರಿಯ ಬಳಕೆದಾರರು ಡೌನ್‌ಲೋಡ್‌ ಮಾಡಿದ್ದರು. ಇದರೊಂದಿಗೆ ಚಾಟ್‌ ಜಿಪಿಟಿ (ChatGPT) ಸೃಜನಶೀಲತೆಯ ಹೊಸ ಯುಗಾರಂಭವಾಗಿದೆ. ಜತೆಗೆ Interactive AI ನಾನಾ ಇಂಡಸ್ಟ್ರಿಗಳಲ್ಲಿ ಅನೇಕ ಉದ್ಯೋಗಗಳ ಮೇಲೆ ಹಿಂದೆಂದೂ ಕಂಡರಿಯದಷ್ಟು ಪ್ರಭಾವ ಬೀರಲಿದೆ.

ChatGPT ಮೊಟ್ಟ ಮೊದಲಿಗೆ ಸಾರ್ವಜನಿಕರ ಬಳಕೆಗೆ ಲಭ್ಯವಾಗಿರುವ ಎಐ ಆ್ಯಪ್‌ ಆಗಿದ್ದರೆ, ಅದೇ ಮಾದರಿಯಲ್ಲಿ ಮತ್ತೆ ಹಲವಾರು ಆ್ಯಪ್‌ಗಳು ಬಿಡುಗಡೆಯಾಗಿವೆ. ಆಗುತ್ತಿವೆ. ಗೂಗಲ್‌ನಿಂದ BARD, ಮೈಕ್ರೊಸಾಫ್ಟ್‌ನಿಂದ Bing ಚೀನಾದ Baidu app ನಿಂದ ChatSoni̧c Ernie ಚಾಟ್‌ ಜಿಪಿಟಿ ಮಾದರಿಯ ಇತರ ಎಐ ಆ್ಯಪ್‌ಗಳಿಗೆ ಉದಾಹರಣೆಯಾಗಿದೆ.

30 ಕೋಟಿ ಉದ್ಯೋಗ ನಷ್ಟ ಸಂಭವ: ಗೋಲ್ಡ್‌ಮನ್‌ ಸ್ಯಾಕ್ಸ್‌

ಗೋಲ್ಡ್‌ಮನ್‌ ಸ್ಯಾಕ್ಸ್‌ ಪ್ರಕಾರ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಟೂಲ್‌ಗಳ ಪರಿಣಾಮ ಜಗತ್ತಿನಾದ್ಯಂತ 30 ಕೋಟಿ ಉದ್ಯೋಗಗಳು ನಷ್ಟವಾಗಲಿದೆ.

ಇದು ಖಂಡಿತವಾಗಿಯೂ Inflection point̤ ಕಂಪ್ಯೂಟರ್‌, ಇಂಟರ್‌ನೆಟ್‌ ಸಂಶೋಧಿಸಿದಾಗ ಆಗಿರುವಂತೆ ಚಾಟ್‌ ಜಿಪಿಟಿ ಹೊರಹೊಮ್ಮಿದೆ ಎನ್ನುತ್ತಾರೆ ತಜ್ಞರು. ಇದು ಬ್ಲೂ ಕಲರ್‌ ಜಾಬ್‌ಗಳ ಬದಲಿಗೆ ಹೆಚ್ಚಾಗಿ ವೈಟ್‌ ಕಲರ್‌ ಜಾಬ್‌ಗಳನ್ನು ಕಿತ್ತುಕೊಳ್ಳಲಿದೆ. ಹಾಗಾದರೆ ಏನಿದು Gen-AI?

ಏನಿದು ಚಾಟ್‌ ಜಿಪಿಟಿ & Gen-AI? ಇದರಿಂದ ಕಲೆ, ಸಂಗೀತದ ಸೃಷ್ಟಿಯೂ ಸಾಧ್ಯ!

Generative AI ಅಂದರೆ ಒಂದು ವಿಧದದ ಕೃತಕ ಬುದ್ದಿಮತ್ತೆ ಅಥವಾ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್.‌ ಈ ಹಿಂದಿನ ಡೇಟಾ ಇಲ್ಲವೇ ಮಾಹಿತಿಯನ್ನು ಆಧರಿಸಿ ಹೊಸ ವಿಷಯವನ್ನು (Content) ಉತ್ಪಾದಿಸುವುದು. ಸಂಗೀತ, ಕಲೆಗಳಿಗೂ ಈಗ ಎಐ ನಂಟಿದೆ!

ಚಾಟ್‌ ಜಿಪಿಟಿ ಎಂದರೆ (ChatGPT) Text ಮತ್ತು ಭಾಷೆ ಆಧರಿಸಿದ Gen-AI ಆಗಿದೆ. ‌ಇದರ ಫುಲ್‌ ಫಾರ್ಮ್‌ ಹೀಗಿದೆ- ( Chat Generative Pre-trained Transformer) ಕಲಾ ಸೃಷ್ಟಿಗೆ DALL-E2, ಸಂಗೀತಕ್ಕೆ AIVA , Soundful, Murf ̤ai ಇತ್ಯಾದಿ ಎಐ ಆ್ಯಪ್‌ಗಳಿವೆ.

ChatGPT ಎಂದರೆ ಹೆಚ್ಚು ಸುಧಾರಿತ ಚಾಟ್ ಬೋಟ್. ಅದು ದೊಡ್ಡ ಪ್ರಮಾಣದ ಇನ್‌ಪುಟ್‌ ಟೆಕ್ಸ್ಟ್‌ ‌ಗಳನ್ನು (Input text) ಆಧರಿಸಿ ಹೊಸ ಕಂಟೆಂಟ್‌ ಅನ್ನೇ ಸೃಷ್ಟಿಸಬಲ್ಲುದು. ಹಾಗೂ ಅದು ಬಹುತೇಕ ಮನುಷ್ಯರೇ ಸೃಷ್ಟಿಸಿದಂತೆ ಇರುವುದು. ಇದು ಗೂಗಲ್‌ ಸರ್ಚ್‌ ಎಂಜಿನ್‌ ಕೂಡ ಮಾಡಲಾರದಷ್ಟು ಸಹಜ ಕಂಟೆಂಟ್‌ಗಳನ್ನು ನಾನಾ ಭಾಷೆಗಳಲ್ಲಿ ಕೊಡಬಲ್ಲುದು. ಆದ್ದರಿಂದ ಜನರಿಗೆ ಉಪಯುಕ್ತ ಎನ್ನಿಸಲಿದೆ.

ಗೂಗಲ್‌ನಲ್ಲಿ ಸರ್ಚ್‌ ಮಾಡಿದಾಗ ನಿಮಗೆ ನಾನಾ ಲಿಂಕ್‌ಗಳ ಆಯ್ಕೆ ಸಿಗುತ್ತದೆ. ಆದರೆ ಚಾಟ್‌ ಜಿಪಿಟಿಯಲ್ಲಿ ನಿಮಗೆ ಬೇಕಾದಂತೆ ಸಿದ್ಧಪಡಿಸಿಟ್ಟ ಮಾಹಿತಿ ಸಿಗುತ್ತದೆ. ಅಂದರೆ ರೆಡಿಮೇಡ್‌ ಬಟ್ಟೆಯ ಹಾಗೆ. ವಸ್ತ್ರವನ್ನು ಖರೀದಿಸಿ ಬಟ್ಟೆ ಹೊಲಿದುಕೊಳ್ಳಬೇಕಾದ ಅಗತ್ಯ ಇಲ್ಲ. ಸಿದ್ಧಪಡಿಸಿಟ್ಟ ಆಹಾರದ ಹಾಗೆಯೂ ಎನ್ನಬಹುದು. ಸುದೀರ್ಘ ಲೇಖನ, ವಿವರಣೆ, ಕೋಡ್-ಮ್ಯೂಸಿಕ್‌ಗಳನ್ನು ಇದು ಸೃಷ್ಟಿಸಬಲ್ಲುದು.

ಚಾಟ್‌ ಜಿಪಿಟಿ ಉಚಿತವೇ? ದರ ಇದೆಯೇ?

ಚಾಟ್‌ ಜಿಪಿಟಿ (ChatGPT) ಉಚಿತವಾಗಿ chat.openai.com ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಪೇಯ್ಡ್‌ ವರ್ಶನ್‌ ChatGPTPlus ಎಂಬ ಎಐ ಆ್ಯಪ್‌ ಬಳಕೆದಾರರಿಗೆ ಮಾಸಿಕ 20 ಡಾಲರ್‌ (ಅಂದಾಜು 1,650 ರೂ.) ಶುಲ್ಕದಲ್ಲಿ ದೊರೆಯುತ್ತದೆ. ChatGPT-4 ಇತ್ತೀಚಿನ ವರ್ಶನ್.‌

GEN -AI ಪರಿಣಾಮ ಬೀರಬಲ್ಲ 10 ಉದ್ಯೋಗಗಳು ಯಾವುವು?

  1. ಸಾಫ್ಟ್‌ವೇರ್‌
  2. ಗ್ರಾಫಿಕ್‌ ಡಿಸೈನಿಂಗ್‌ & ವೆಬ್‌ ಡೆವಲಪ್‌ಮೆಂಟ್‌
  3. ಕಸ್ಟಮರ್‌ ಸರ್ವೀಸ್‌
  4. ಕಾನೂನು &ಅಕೌಂಟಿಂಗ್‌ ಸೇವೆ
  5. ಹಣಕಾಸು
  6. ಮಾಧ್ಯಮ
  7. ಮಾರ್ಕೆಟ್‌ ರೀಸರ್ಚ್‌ & ಅನಾಲಿಸಿಸ್‌
  8. ಅನುವಾದ
  9. ಬೋಧನೆ(ಶಿಕ್ಷಣ)
  10. ಎಚ್‌ ಆರ್‌ ನೇಮಕಾತಿ

ಉದ್ಯೋಗಿಗಳು, ಉದ್ಯೋಗಾಕಾಂಕ್ಷಿಗಳು ಏನು ಮಾಡಬಹುದು?

ಎಐ ತಂತ್ರಜ್ಞಾನದ ಬಗ್ಗೆ ಅಪ್‌ ಡೇಟ್‌ ಆಗಿರುವುದು ಮುಖ್ಯ. ಎಐ ಸಂಬಂಧಿತ ಉನ್ನತ ಶಿಕ್ಷಣ, ಕೌಶಲ ಪಡೆಯುವುದು ಸೂಕ್ತ. Gen-AI ಟೂಲ್ಸ್‌ ಬಗ್ಗ ತಿಳಿದುಕೊಳ್ಳುವುದು ಉತ್ತಮ.

ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆಯೇ?

ಎಐ ಟ್ರೈನರ್ಸ್‌, ಎಐ ಎತಿಕ್ಸ್‌ ಎಕ್ಸ್‌ಪರ್ಟ್ಸ್‌, ಎಐ ಸಿಸ್ಟಮ್‌ ಮ್ಯಾನೇಜರ್ಸ್‌, ಡೇಟಾ ಅನ್ನೊಶನ್‌ ಸ್ಪೆಶಲಿಸ್ಟ್‌, ಹ್ಯೂಮನ್‌ ಎಐ ಇಂಟರಾಕ್ಷನ್‌ ಸ್ಪೆಶಲಿಸ್ಟ್‌, ಎಐ ಸೇಲ್ಸ್‌ ಸ್ಪೆಶಲಿಸ್ಟ್‌, ಎಐ ಪ್ರಾಡಕ್ಟ್‌ ಮ್ಯಾನೇಜರ್ಸ್‌, ಪ್ರಾಮ್ಟ್‌ ಎಂಜಿನಿಯರ್ಸ್‌. ಈ ಹುದ್ದೆಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

EXPLAINER

ವಿಸ್ತಾರ Explainer: ಕಚ್ಚಲು ಶುರು ಮಾಡಿದ ಕಚ್ಚತೀವು ವಿಚಾರ; ಏನಿದು ತಗಾದೆ? ಶ್ರೀಲಂಕೆಗೆ ಇಂದಿರಾ ಗಾಂಧಿ ಬಿಟ್ಟುಕೊಟ್ಟದ್ದೇಕೆ?

ವಿಸ್ತಾರ Explainer: ಭಾರತದ ತೀರದಿಂದ ಕೇವಲ 20 ಕಿಮೀ ದೂರದಲ್ಲಿರುವ, ಜನವಸತಿ ಇಲ್ಲದ, 1.9 ಚದರ ಕಿಮೀ ವಿಸ್ತೀರ್ಣದ ಕಚ್ಚತೀವು ದ್ವೀಪ (Katchatheevu Island) ಈಗ ರಾಜಕೀಯ ವಿವಾದದ ಕೇಂದ್ರಬಿಂದು.

VISTARANEWS.COM


on

Katchatheevu island 2
Koo

ಭಾರತ ಹಾಗೂ ಶ್ರೀಲಂಕೆಯ ನಡುವೆ ಇರುವ ಕಚ್ಚತೀವು ಎಂಬ ದ್ವೀಪ (Katchatheevu Island) ಈಗ ರಾಷ್ಟ್ರ ರಾಜಕಾರಣದಲ್ಲಿ ಸದ್ದು ಮಾಡುತ್ತಿದೆ. ಇದು ಪ್ರಾರಂಭವಾದದ್ದು ತಮಿಳುನಾಡಿನಲ್ಲಿ ಮೊನ್ನೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ತಮ್ಮ ಭಾಷಣದಲ್ಲಿ ಮಾಡಿದ ಒಂದು ಉಲ್ಲೇಖದಿಂದ. ಈ ವಿವಾದ ಹಾಗೂ ಕಚ್ಚತೀವು ದ್ವೀಪದ ಪೂರ್ವೇತಿಹಾಸಗಳ ಬಗ್ಗೆ ಒಂದು ಸಮಗ್ರ ನೋಟ ಇಲ್ಲಿದೆ.

1974ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರು ಶ್ರೀಲಂಕಾಕ್ಕೆ ಹಸ್ತಾಂತರಿಸಿದ ವಿವಾದಿತ ಕಚ್ಚತೀವು ದ್ವೀಪದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದೀಗ ಕಚ್ಚತೀವು ದ್ವೀಪದ ಸುತ್ತಲಿನ ಚರ್ಚೆ ಪ್ರಸ್ತುತ ತಮಿಳುನಾಡು ರಾಜಕೀಯದಲ್ಲಿಯೂ ಅದರಾಚೆಗೂ ಬಿಸಿಬಿಸಿಯಾಗಿ ಚರ್ಚೆಯಾಗುತ್ತಿದೆ.

ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಕಾಂಗ್ರೆಸ್ ಹೇಗೆ “ಉದಾರವಾಗಿ” ಬಿಟ್ಟುಕೊಟ್ಟಿತು ಎಂಬುದರ ಕುರಿತು ಪಿಎಂ ಮೋದಿ ಸಾಮಾಜಿಕ ಮಾಧ್ಯಮ ಸೈಟ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಇದು ಪ್ರತಿಯೊಬ್ಬ ಭಾರತೀಯನನ್ನೂ ಕೋಪಗೊಳಿಸಿತು. ಇದರಿಂದ, ನಾವು ಎಂದಿಗೂ ಕಾಂಗ್ರೆಸ್ ಅನ್ನು ನಂಬಲು ಸಾಧ್ಯವಿಲ್ಲ ಎಂಬ ವಿಚಾರ ಜನರ ಮನದಲ್ಲಿ ಉಳಿದುಬಿಟ್ಟಿದೆ” ಎಂದು ಅವರು ಹೇಳಿದ್ದಾರೆ. ಇದಕ್ಕೆ ಪೂರಕವಾದ ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆಯ ಹಳೆಯ ವರದಿಯ ಸಾಕ್ಷಿಯನ್ನು ಮುಂದಿಟ್ಟಿದ್ದಾರೆ.

ಇದೇ ವೇಗದಲ್ಲಿ ಅವರು ಡಿಎಂಕೆಯನ್ನೂ ಟೀಕಿಸಿದ್ದಾರೆ. “ತಮಿಳುನಾಡಿನ ಹಿತಾಸಕ್ತಿಗಳನ್ನು ಕಾಪಾಡಲು ಡಿಎಂಕೆ ಮಾತು ಹೊರತುಪಡಿಸಿ ಬೇರೆ ಏನನ್ನೂ ಮಾಡಿಲ್ಲ. ಕಚ್ಚತೀವಿನಲ್ಲಿ ಹೊರಹೊಮ್ಮುತ್ತಿರುವ ಹೊಸ ವಿವರಗಳು ಡಿಎಂಕೆಯ ದ್ವಂದ್ವ ನೀತಿಯನ್ನು ಸಂಪೂರ್ಣವಾಗಿ ಬಿಚ್ಚಿಟ್ಟಿವೆ. ಕಾಂಗ್ರೆಸ್ ಮತ್ತು ಡಿಎಂಕೆ ಕುಟುಂಬ ಘಟಕಗಳು. ಅವರು ತಮ್ಮ ಸ್ವಂತ ಪುತ್ರರು ಮತ್ತು ಹೆಣ್ಣುಮಕ್ಕಳು ಬೆಳೆಯಲು ಮಾತ್ರ ಕಾಳಜಿ ವಹಿಸುತ್ತಾರೆ. ಬೇರೆಯವರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಕಚ್ಚತೀವು ಮೇಲಿನ ಅವರ ನಿರ್ದಯತೆ ನಮ್ಮ ಬಡ ಮೀನುಗಾರರು ಮತ್ತು ಮೀನುಗಾರ ಮಹಿಳೆಯರ ಹಿತಾಸಕ್ತಿಗಳಿಗೆ ಹಾನಿ ಮಾಡಿದೆ” ಎಂದು ಅವರು ಹೇಳಿದ್ದಾರೆ.

ಅಣ್ಣಾಮಲೈ ಹೊರತೆಗೆದ ಸತ್ಯ

ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಅವರು ಆರ್‌ಟಿಐ ಅರ್ಜಿಯ ಮೂಲಕ ಶ್ರೀಲಂಕಾ ಕಚ್ಚತೀವು ದ್ವೀಪವನ್ನು ಹೇಗೆ ತನ್ನದಾಗಿಸಿಕೊಂಡಿತು ಎಂದು ವಿವರಿಸುವ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಭಾರತದ ತೀರದಿಂದ ಕೇವಲ 20 ಕಿಮೀ ದೂರದಲ್ಲಿರುವ, 1.9 ಚದರ ಕಿಮೀ ವಿಸ್ತೀರ್ಣದ ಈ ದ್ವೀಪದ ಮೇಲೆ ಲಂಕೆ ಮೊದಲಿಂದಲೂ ಹಕ್ಕು ಸಾಧಿಸುತ್ತಿತ್ತು. ಭಾರತ ಅದನ್ನು ನಿರಾಕರಿಸುತ್ತಿತ್ತು.

ಸ್ವಾತಂತ್ರ್ಯದ ನಂತರ ಶ್ರೀಲಂಕಾ ತನ್ನ ಹಕ್ಕುಗಳನ್ನು ಒತ್ತಿಹೇಳಿತು ಮತ್ತು ತನ್ನ ಅನುಮತಿಯಿಲ್ಲದೆ ಭಾರತೀಯ ನೌಕಾಪಡೆಯು ದ್ವೀಪದಲ್ಲಿ ಕಾಲಿಡಲು ಅನುಮತಿಸಲಿಲ್ಲ. ಆಗಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಈ ವಿಷಯವನ್ನು ಅಷ್ಟು ಮಹತ್ವದ್ದಲ್ಲ ಎಂದು ತಳ್ಳಿಹಾಕಿದರು. “ನಾನು ಈ ಚಿಕ್ಕ ದ್ವೀಪಕ್ಕೆ ಯಾವುದೇ ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ಮತ್ತು ಅದರ ಮೇಲಿನ ನಮ್ಮ ಹಕ್ಕುಗಳನ್ನು ಬಿಟ್ಟುಕೊಡಲು ನನಗೆ ಯಾವುದೇ ಹಿಂಜರಿಕೆಯಿಲ್ಲ” ಎಂದು ನೆಹರು ಮೇ 10, 1961 ರಂದು ಹೇಳಿದರು.

ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಉಲ್ಲೇಖಿಸಿದಂತೆ, 1968ರಲ್ಲಿ ನೆಹರೂ ಅವರ ನಿರ್ಣಯವನ್ನು ಕಾಮನ್‌ವೆಲ್ತ್ ಕಾರ್ಯದರ್ಶಿ ವೈ.ಡಿ ಗುಂಡೆವಿಯಾ ಅವರು ಸಿದ್ಧಪಡಿಸಿದ್ದು, ಸಂಸತ್ತಿನ ಅನೌಪಚಾರಿಕ ಸಲಹಾ ಸಮಿತಿಯೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಇದನ್ನು “ಹಿನ್ನೆಲೆಯವರು” ಎಂದು ಹಂಚಿಕೊಂಡಿವೆ.

ʼಹಿನ್ನೆಲೆಯವರುʼ ದ್ವೀಪದ ಬಗ್ಗೆ ಭಾರತಕ್ಕೆ ಆಸಕ್ತಿ ಇಲ್ಲದಿರುವ “ನಿರ್ಧಾರ”ವನ್ನು ಬಹಿರಂಗಪಡಿಸಿದರು. 1974ರಲ್ಲಿ ಭಾರತ ತನ್ನ ಹಕ್ಕನ್ನು ಬಿಟ್ಟೇಕೊಟ್ಟಿತು. “ಭಾರತದ ಅಥವಾ ಶ್ರೀಲಂಕಾದ ಸಾರ್ವಭೌಮತ್ವದ ಹಕ್ಕುಗಳ ಬಲದ ಬಗ್ಗೆ ಯಾವುದೇ ಸ್ಪಷ್ಟವಾದ ತೀರ್ಮಾನವನ್ನು ತೆಗೆದುಕೊಳ್ಳಲಾಗಿಲ್ಲ” ಎಂದು MEA ಹೇಳಿದೆ.

ಈಸ್ಟ್ ಇಂಡಿಯಾ ಕಂಪನಿಯು ರಾಮನಾಡಿನ ರಾಜನಿಗೆ ಇಲ್ಲಿ ನೀಡಿದ ಜಮೀನ್ದಾರಿ ಹಕ್ಕುಗಳ ಸ್ಪಷ್ಟ ಉಲ್ಲೇಖವಿದೆ. ಭಾರತ ಇದರ ಮೇಲೆ ಭಾರತವು ಬಲವಾದ ಹಕ್ಕನ್ನು ಹೊಂದಿತ್ತು ಎಂದು 1960ರಲ್ಲಿ ಭಾರತದ ಅಟಾರ್ನಿ ಜನರಲ್ ಎಂ.ಸಿ ಸೆಟಲ್ವಾಡ್ ಹೇಳಿದ್ದರು. ಇದರ ಹೊರತಾಗಿಯೂ ಭಾರತ ಈ ನಿರ್ಧಾರಕ್ಕೆ ಬಂದಿತ್ತು.

ದ್ವೀಪ, ಇಲ್ಲಿನ ಮೀನುಗಾರಿಕೆ ಮತ್ತು ಅದರ ಸುತ್ತಲಿನ ಇತರ ಸಂಪನ್ಮೂಲಗಳು ಸೇರಿದಂತೆ ರಾಜನು 875ರಿಂದ 1948ರವರೆಗೆ ಕಚ್ಚತೀವಿನಲ್ಲಿ ಈ ಹಕ್ಕುಗಳನ್ನು ಅನುಭವಿಸಿದರು. ಜಮೀನ್ದಾರಿ ವ್ಯವಸ್ಥೆಯನ್ನು ರದ್ದುಗೊಳಿಸಿದ ನಂತರ ಮದ್ರಾಸ್ ರಾಜ್ಯ ಇದನ್ನು ನೋಡಿಕೊಳ್ಳುತ್ತಿತ್ತು.

ದ್ವೀಪದ ಸ್ವಾಮ್ಯದ ಬಗ್ಗೆ ಹೇಗೆ ಭಾರತ ಖಚಿತವಾಗಿರಲಿಲ್ಲ ಎಂಬುದನ್ನು ದಾಖಲೆಗಳು ತೋರಿಸಿವೆ. ಎಂಇಎ ಜಂಟಿ ಕಾರ್ಯದರ್ಶಿ ಕೆ. ಕೃಷ್ಣ ರಾವ್ ಅವರು, “ಭಾರತವು ಮೀನುಗಾರಿಕೆ ಹಕ್ಕುಗಳನ್ನು ಇಲ್ಲಿ ಪಡೆದುಕೊಳ್ಳಲು ಕಾನೂನು ಬೆಂಬಲ ಹೊಂದಿರುವ ಪ್ರಕರಣವಿದು” ಎಂದು ತೀರ್ಮಾನಿಸಿದರು.

ಈ ವಿಚಾರ ಹೇಗೆ ರಾಜಕೀಯವಾಯಿತು?

1968ರಲ್ಲಿ ತಮ್ಮ ದ್ವೀಪವನ್ನು ಶ್ರೀಲಂಕಾ ತನ್ನದೆಂದು ನಕ್ಷೆಯಲ್ಲಿ ತೋರಿಸಿತು. ಆ ಸಂದರ್ಭದಲ್ಲಿ ಶ್ರೀಲಂಕಾದ ಪ್ರಧಾನಿ ದುದ್ಲೆ ಸೇನಾನಾಯಕೆ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಕ್ಕಾಗಿ ಪ್ರತಿಪಕ್ಷಗಳು ಇಂದಿರಾ ಗಾಂಧಿ ಸರ್ಕಾರದ ಮೇಲೆ ವಾಗ್ದಾಳಿ ಮಾಡಿದವು. ಇಂದಿರಾ ಗಾಂಧಿ ಮತ್ತು ಸೇನಾನಾಯಕೆ ನಡುವೆ ಒಪ್ಪಂದದ ಮಾತುಕತೆ ನಡೆಯುತ್ತಿದೆ ಎಂಬ ಅನುಮಾನವನ್ನು ಪ್ರತಿಪಕ್ಷಗಳು ಸಂಸತ್ತಿನಲ್ಲಿ ಎತ್ತಿದವು.

ಒಪ್ಪಂದದ ಕುರಿತಾದ ಆರೋಪಗಳನ್ನು ಕಾಂಗ್ರೆಸ್ ತಳ್ಳಿಹಾಕಿತು. “ದ್ವೀಪವು ವಿವಾದಿತ ಸ್ಥಳ”ವಾಗಿರುವುದರಿಂದ ಮತ್ತು “ಉತ್ತಮ ದ್ವಿಪಕ್ಷೀಯ ಸಂಬಂಧಗಳ ಅಗತ್ಯವಿರುವುದರಿಂದ” “ಭಾರತ ಬಾಂಧವ್ಯವನ್ನು ಸಮತೋಲನ ಮಾಡಬೇಕಿ”ರುವುದರಿಂದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿತು.

1973ರಲ್ಲಿ ವಿವಾದಿತ ದ್ವೀಪದ ಬಗ್ಗೆ ಕೊಲಂಬೊದಲ್ಲಿ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಗಳು ನಡೆದವು. ಒಂದು ವರ್ಷದ ನಂತರ, ಭಾರತದ ಹಕ್ಕು ತ್ಯಜಿಸುವ ನಿರ್ಧಾರವನ್ನು ವಿದೇಶಾಂಗ ಕಾರ್ಯದರ್ಶಿ ಕೇವಲ್ ಸಿಂಗ್ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರಿಗೆ ತಿಳಿಸಿದರು. ದ್ವೀಪವು ಜಾಫ್ನಾಪಟ್ಟಣಂ, ಡಚ್ ಮತ್ತು ಬ್ರಿಟಿಷ್ ನಕ್ಷೆಗಳ ಸಾಮ್ರಾಜ್ಯದ ಭಾಗವಾಗಿದೆ ಎಂದು ತೋರಿಸುವ “ದಾಖಲೆಗಳ” ಆಧಾರದ ಮೇಲೆ ಶ್ರೀಲಂಕಾ “ಅತ್ಯಂತ ಬಲವಾದ ಹಕ್ಕುಸ್ವಾಮ್ಯ” ಹೊಂದಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಒತ್ತಿ ಹೇಳಿದರು.

1925ರಿಂದ ಶ್ರೀಲಂಕಾವು ಭಾರತದ ಪ್ರತಿಭಟನೆಯಿಲ್ಲದೆ ತನ್ನ ಸಾರ್ವಭೌಮತ್ವವನ್ನು ಅಲ್ಲಿ ಪ್ರತಿಪಾದಿಸಿದೆ ಎಂದು ಅವರು ಹೇಳಿದರು. 1970ರಲ್ಲಿ ಆಗಿನ ಅಟಾರ್ನಿ ಜನರಲ್ ಅವರು “ಕಚ್ಚತೀವು ಮೇಲಿನ ಸಾರ್ವಭೌಮತ್ವವು ಸಿಲೋನ್‌ಗೆ ಇದೆ, ಭಾರತದೊಂದಿಗೆ ಇಲ್ಲ” ಎಂದು ಉಲ್ಲೇಖಿಸಿದರು. 1974ರಲ್ಲಿ ಭಾರತ ಸರ್ಕಾರವು ದ್ವೀಪವನ್ನು ಶ್ರೀಲಂಕಾಕ್ಕೆ ದ್ವಿಪಕ್ಷೀಯ ಒಪ್ಪಂದದಲ್ಲಿ ಹಸ್ತಾಂತರಿಸಿತು.

ದ್ವೀಪದ ಇತಿಹಾಸ

ಕಚ್ಚತೀವು ಪಾಕ್ ಜಲಸಂಧಿಯಲ್ಲಿ ಜನವಸತಿ ಇಲ್ಲದ ದ್ವೀಪವಾಗಿದೆ. ಇದು 14ನೇ ಶತಮಾನದಲ್ಲಿ ಜ್ವಾಲಾಮುಖಿ ಸ್ಫೋಟಗಳಿಂದ ರೂಪುಗೊಂಡಿತು. ಇಲ್ಲಿನ 285 ಎಕರೆ ಭೂಮಿಯಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಡಳಿತ ನಡೆಸಿದ್ದವು.

ಮಧ್ಯಕಾಲೀನ ಅವಧಿಯಲ್ಲಿ, ದ್ವೀಪವು ಶ್ರೀಲಂಕಾದ ಜಾಫ್ನಾ ಸಾಮ್ರಾಜ್ಯದಿಂದ ನಿಯಂತ್ರಿಸಲ್ಪಟ್ಟಿತು. 17ನೇ ಶತಮಾನದಲ್ಲಿ, ರಾಮೇಶ್ವರಂನಿಂದ ವಾಯುವ್ಯಕ್ಕೆ ಸುಮಾರು 55 ಕಿಮೀ ದೂರದಲ್ಲಿರುವ ರಾಮನಾಥಪುರಂ ಮೂಲದ ರಾಮನಾಡ್ ಜಮೀನ್ದಾರರಿಗೆ ನಿಯಂತ್ರಣವನ್ನು ನೀಡಲಾಯಿತು. 1921ರಲ್ಲಿ, ಶ್ರೀಲಂಕಾ ಮತ್ತು ಭಾರತ ಎರಡೂ ಮೀನುಗಾರಿಕೆಗಾಗಿ ಹಕ್ಕು ಸಾಧಿಸಿದವು. ವಿವಾದ ಇತ್ಯರ್ಥವಾಗಲಿಲ್ಲ.

20ನೇ ಶತಮಾನದ ಆರಂಭದಲ್ಲಿ ರಚಿಸಿದ ಕ್ಯಾಥೋಲಿಕ್ ದೇವಾಲಯ ಸೇಂಟ್ ಆಂಥೋನಿ ಚರ್ಚ್, ದ್ವೀಪದಲ್ಲಿನ ಏಕೈಕ ಕಟ್ಟಡವಾಗಿದೆ. ಭಾರತ ಮತ್ತು ಶ್ರೀಲಂಕಾ ಎರಡರಿಂದಲೂ ಇಲ್ಲಿ ಕ್ರಿಶ್ಚಿಯನ್ ಪಾದ್ರಿಗಳು ಸೇವೆಯನ್ನು ನಡೆಸುತ್ತಾರೆ. ಎರಡೂ ದೇಶಗಳ ಭಕ್ತರು ವಾರ್ಷಿಕ ಉತ್ಸವದ ಸಮಯದಲ್ಲಿ ಇಲ್ಲಿಗೆ ತೀರ್ಥಯಾತ್ರೆ ಮಾಡುತ್ತಾರೆ. ಕಳೆದ ವರ್ಷ 2,500 ಭಾರತೀಯರು ಉತ್ಸವಕ್ಕಾಗಿ ರಾಮೇಶ್ವರಂನಿಂದ ಕಚ್ಚತೀವಿಗೆ ಭೇಟಿ ನೀಡಿದ್ದರು.

ಇದನ್ನೂ ಓದಿ: Narendra Modi: ಲಂಕಾಗೆ ಕಚ್ಚತೀವು ದ್ವೀಪ ಬಿಟ್ಟ ಕಾಂಗ್ರೆಸ್‌ ನಂಬಿಕೆಗೆ ಅರ್ಹವಲ್ಲ; ಮೋದಿ ವಾಗ್ದಾಳಿ

Continue Reading

EXPLAINER

New Tax Rules: ನಾಳೆಯಿಂದ ಹೊಸ ತೆರಿಗೆ ನಿಯಮ ಜಾರಿ; ಏನೆಲ್ಲ ಬದಲು? ಸ್ಲ್ಯಾಬ್‌ ಹೇಗಿದೆ?

New Tax Rules: ದೇಶಾದ್ಯಂತ ಏಪ್ರಿಲ್‌ 1ರಿಂದ ಹೊಸ ತೆರಿಗೆ ಪದ್ಧತಿಯ ನಿಯಮಗಳು ಜಾರಿಗೆ ಬರಲಿವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡನೆ ವೇಳೆ ಪ್ರಸ್ತಾಪಿಸಿದಂತೆ ಹೊಸ ಹಣಕಾಸು ವರ್ಷದಲ್ಲಿ ಹೊಸ ನಿಯಮಗಳು ಜಾರಿಗೆ ಬರಲಿವೆ. ಯಾವೆಲ್ಲ ನಿಯಮ ಜಾರಿಗೆ ಬರಲಿವೆ? ಯಾವ ತೆರಿಗೆ ಪದ್ಧತಿ ಒಳ್ಳೆಯದು ಎಂಬುದರ ಮಾಹಿತಿ ಇಲ್ಲಿದೆ.

VISTARANEWS.COM


on

New Tax Rules
Koo

ನವದೆಹಲಿ: ದೇಶಕ್ಕೆ ದೇಶವೇ ಹೊಸ ಹಣಕಾಸು ವರ್ಷಕ್ಕೆ (New Financial Year) ಕಾಲಿಡುತ್ತಿದೆ. ಇನ್ನು, ಕಳೆದ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಘೋಷಿಸಿದಂತೆ ಏಪ್ರಿಲ್‌ 1ರಿಂದ ತೆರಿಗೆ ನಿಯಮಗಳಲ್ಲಿ ಭಾರಿ ಬದಲಾವಣೆಗಳು ಆಗಲಿವೆ. ಹೊಸ ತೆರಿಗೆ ನಿಯಮಗಳು (New Tax Rules) ಸೋಮವಾರದಿಂದಲೇ ಜಾರಿಗೆ ಬರಲಿವೆ. ಹಾಗಾದರೆ, ಹೊಸ ತೆರಿಗೆ ಪದ್ಧತಿಯಲ್ಲಿ ಏನೆಲ್ಲ ಬದಲಾವಣೆಗಳು ಆಗಲಿವೆ? ತೆರಿಗೆ ವಿನಾಯಿತಿ ಮೊತ್ತ ಎಷ್ಟು? ಎಷ್ಟು ಗಳಿಕೆಗೆ ಎಷ್ಟು ತೆರಿಗೆ ಕಡಿತವಾಗುತ್ತದೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ತಿಳಿದುಕೊಳ್ಳಬೇಕಾದ ಸಿಂಪಲ್ ಅಂಶಗಳು

  • ಹೊಸ ತೆರಿಗೆ ನಿಯಮ ಜಾರಿಗೆ ಬಂದರೂ ಹಳೆಯ ತೆರಿಗೆ ಪದ್ಧತಿ ಜಾರಿಯಲ್ಲಿ ಇರಲಿದೆ. ನಮಗೆ ಬೇಕಾದ ತೆರಿಗೆ ಪದ್ಧತಿಯನ್ನು ನಾವು ಆಯ್ಕೆ ಮಾಡಿಕೊಳ್ಳಬಹುದು
  • ಹೊಸ ತೆರಿಗೆ ಪದ್ಧತಿ ಅಳವಡಿಸಿಕೊಂಡವರಿಗೂ 50 ಸಾವಿರ ರೂ. ಸ್ಟಾಂಡರ್ಡ್‌ ಡಿಡಕ್ಷನ್‌ ಇರಲಿದೆ. ಇದು ಹಳೆಯ ಹಾಗೂ ಹೊಸ ಪದ್ಧತಿಗೂ ಅನ್ವಯವಾಗಲಿದೆ
  • 5 ಕೋಟಿ ರೂಪಾಯಿಗಿಂತ ಹೆಚ್ಚಿನ ಆದಾಯ ಇರುವವರಿಗೆ ಹೊಸ ತೆರಿಗೆ ಪದ್ಧತಿ ಅನ್ವಯ ಸರ್‌ಚಾರ್ಜ್‌ಅನ್ನು ಶೇ.37ರಿಂದ 25ಕ್ಕೆ ಇಳಿಕೆ ಮಾಡಲಾಗಿದೆ

ಹೊಸ ತೆರಿಗೆ ಪದ್ಧತಿಯ ಸ್ಲ್ಯಾಬ್‌ ಹೀಗಿದೆ

ಆದಾಯವಿಧಿಸುವ ತೆರಿಗೆ
0-3 ಲಕ್ಷ ರೂ.ತೆರಿಗೆ ಇರಲ್ಲ
3-6 ಲಕ್ಷ ರೂ.5%
6-9 ಲಕ್ಷ ರೂ.10%
9-12 ಲಕ್ಷ ರೂ.15%
12-15 ಲಕ್ಷ ರೂ. 20%
15 ಲಕ್ಷ ರೂ.ಗಿಂತ ಹೆಚ್ಚು30%

ಇದನ್ನೂ ಓದಿ: Money Guide: ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಲು ಎಷ್ಟು ಬಗೆಯ ಫಾರ್ಮ್‌ಗಳಿವೆ? ನಿಮಗೆ ಯಾವುದು ಸೂಕ್ತ? ಚೆಕ್‌ ಮಾಡಿ

ಹೊಸ ತೆರಿಗೆ ಎಂದರೆ ಇಷ್ಟೇ…

ಹೊಸ ತೆರಿಗೆ ಪದ್ಧತಿಯಲ್ಲಿ ಗರಿಷ್ಠ ಎಂದರೆ, 7.5 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಅನ್ವಯವಾಗುವುದಿಲ್ಲ. 7 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ಇರುವುದಿಲ್ಲ. ಇನ್ನು, 50 ಸಾವಿರ ರೂ. ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತ ಸೇರಿ 7.5 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ಪಾವತಿಸಬೇಕಿಲ್ಲ. ಆದರೆ, 7.51 ಲಕ್ಷ ರೂ. ಆದಾಯ ನಿಮ್ಮದಿದ್ದರೆ, ನೀವು ಇಡೀ ಆದಾಯಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಹಾಗಾಗಿ, 7.5 ಲಕ್ಷ ರೂ.ಗಿಂತ ಹೆಚ್ಚು ಸಂಬಳ ಇರುವವರು ಹೊಸ ತೆರಿಗೆ ಪದ್ಧತಿ ಅಳವಡಿಸಿಕೊಳ್ಳಲು ಒಮ್ಮೆ ಯೋಚಿಸಬೇಕು.

ಹಳೆಯ ತೆರಿಗೆಯ ಡಿಡಕ್ಷನ್‌ಗಳು ಏನೇನು?

ಹಳೆಯ ತೆರಿಗೆ ಪದ್ಧತಿಯಲ್ಲಿ ಹಲವು ಡಿಡಕ್ಷನ್‌ಗಳ ಲಾಭ ಪಡೆಯಬಹುದಾದ ಕಾರಣ ಹೆಚ್ಚಿನ ಆದಾಯ ಇರುವವರು ಈಗಲೂ ಇದೇ ಒಳ್ಳೆಯದು ಎಂದು ಅಭಿಪ್ರಾಯಪಡುತ್ತಿದ್ದಾರೆ. ಹಳೆಯ ತೆರಿಗೆ ಪದ್ಧತಿಯ 80C ಅಡಿಯಲ್ಲಿ ಹೂಡಿಕೆ ಮಾಡಿದ್ದರೆ 1.5 ಲಕ್ಷ ರೂ.ವರೆಗೆ ಡಿಡಕ್ಷನ್‌ ಪಡೆಯಬಹುದು. ಇನ್ನು ಜೀವ ವಿಮಾ ಹೂಡಿಕೆಯಲ್ಲಿ 1.5 ಲಕ್ಷ ರೂ., ಹೆಂಡತಿ-ಮಕ್ಕಳಿಗೆ ಆರೋಗ್ಯ ವಿಮೆ ಮಾಡಿಸಿದ್ದರೆ 25 ಸಾವಿರ ರೂ. ಡಿಡಕ್ಷನ್‌ನ ಲಾಭ ಪಡೆಯಬಹುದು. 60 ವರ್ಷ ದಾಟಿದ ಮನೆಯ ಹಿರಿಯರಿಗೆ ವಿಮೆ ಮಾಡಿಸಿದ್ದರೂ 50 ಸಾವಿರ ರೂ. ಡಿಡಕ್ಷನ್‌ ಇರಲಿದೆ. ಸ್ಡಾಂಡರ್ಡ್‌ ಡಿಡಕ್ಷನ್‌ ಕೂಡ 50 ಸಾವಿರ ರೂ. ಇರಲಿದೆ.

ಜೀವ ವಿಮಾ ತೆರಿಗೆ ನಿಯಮ ಬದಲು

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಘೋಷಿಸಿರುವ ಪ್ರಕಾರ, ಏಪ್ರಿಲ್ 1, 2023ರಂದು ಅಥವಾ ನಂತರ ವಿತರಿಸಲಾದ ಜೀವ ವಿಮಾ ಪಾಲಿಸಿಗಳ ಮೆಚ್ಯೂರಿಟಿ ಆದಾಯ ಮತ್ತು ಒಟ್ಟು ಪ್ರೀಮಿಯಂ 5 ಲಕ್ಷ ರೂ.ಗಿಂತ ಹೆಚ್ಚಿದ್ದರೆ ಅದು ತೆರಿಗೆಗೆ ಒಳಪಟ್ಟಿರುತ್ತದೆ. ಸರ್ಕಾರೇತರ ಉದ್ಯೋಗಿಗಳಿಗೆ ರಜೆ ನಗದೀಕರಣ ತೆರಿಗೆ ವಿನಾಯಿತಿ ಮಿತಿಯನ್ನು 2022ರಿಂದ 3 ಲಕ್ಷ ರೂ.ಗಳಿಂದ ಈಗ 25 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

EXPLAINER

ವಿಸ್ತಾರ Explainer: Moscow Attack: ಯಾವುದಿದು ಐಸಿಸ್‌-ಕೆ? ಮಾಸ್ಕೋ ಮೇಲೆ ಈ ಉಗ್ರರು ದಾಳಿ ನಡೆಸಿದ್ದೇಕೆ?

ISIS-K ಎಂದು ಕರೆಯಲ್ಪಡುವ ಇಸ್ಲಾಮಿಕ್ ಸ್ಟೇಟ್‌ನ ಅಫ್ಘಾನ್ ಶಾಖೆಯ ಕಿರಾತಕರ ಬಗ್ಗೆ ವಿವರ ಹಾಗೂ ರಷ್ಯಾದ ಮೇಲೆ ದಾಳಿ (Moscow Attack) ಮಾಡಿರುವುದರ ಹಿಂದೆ ಅವರ ಉದ್ದೇಶಗಳ ಬಗ್ಗೆ ಮಾಹಿತಿ ಇಲ್ಲಿದೆ:

VISTARANEWS.COM


on

moscow attack isis k
Koo

ವಾಷಿಂಗ್ಟನ್: ರಷ್ಯಾದ ಪ್ರಮುಖ ನಗರ ಮಾಸ್ಕೋ ಸಂಗೀತ ಹಾಲ್‌ನಲ್ಲಿ ನಡೆದ ಭಯಾನಕ ಗ್ರೆನೇಡ್‌ ಹಾಗೂ ಗುಂಡಿನ ದಾಳಿಯನ್ನು (Moscow Attack) ಇಸ್ಲಾಮಿಕ್ ಸ್ಟೇಟ್ (Islamic state) ಭಯೋತ್ಪಾದಕರು ನಡೆಸಿರುವುದು ಖಚಿತವಾಗಿದೆ. ಐಸಿಸ್‌-ಕೆ (ISIS-K) ಕೈವಾಡವನ್ನು ದೃಢೀಕರಿಸುವ ಗುಪ್ತಚರ ಮಾಹಿತಿಯನ್ನು ಅಮೆರಿಕ ಬೇಹುಗಾರಿಕೆ ಇಲಾಖೆ ಖಚಿತಪಡಿಸಿದೆ.

ISIS-K ಎಂದು ಕರೆಯಲ್ಪಡುವ ಇಸ್ಲಾಮಿಕ್ ಸ್ಟೇಟ್‌ನ ಅಫ್ಘಾನ್ ಶಾಖೆಯ ಕಿರಾತಕರ ಬಗ್ಗೆ ವಿವರ ಹಾಗೂ ರಷ್ಯಾದ ಮೇಲೆ ದಾಳಿ ಮಾಡಿರುವುದರ ಹಿಂದೆ ಅವರ ಉದ್ದೇಶಗಳ ಬಗ್ಗೆ ಮಾಹಿತಿ ಇಲ್ಲಿದೆ:

ISIS-K ಎಂದರೇನು?

ISIS-K ಎಂದರೆ ಇಸ್ಲಾಮಿಕ್‌ ಸ್ಟೇಟ್‌ ಖೊರಾಸನ್.‌ ಖೊರಾಸನ್‌ ಎಂದರೆ ಇರಾನ್, ತುರ್ಕಮೆನಿಸ್ತಾನ್ ಮತ್ತು ಅಫ್ಘಾನಿಸ್ತಾನದ ಭಾಗಗಳನ್ನು ಒಳಗೊಂಡಿರುವ ಪ್ರದೇಶದ ಹಳೆಯ ಪದ. 2014ರ ಕೊನೆಯಲ್ಲಿ ಪೂರ್ವ ಅಫ್ಘಾನಿಸ್ತಾನದಲ್ಲಿ ಇದು ಸ್ಥಾಪನೆಯಾಯಿತು ಮತ್ತು ಜಿಹಾದಿಸ್ಟರ ತೀವ್ರ ಕ್ರೂರತೆಗೆ ಕುಖ್ಯಾತಿ ಪಡೆಯಿತು.

ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಗುಂಪಿನ ಅತ್ಯಂತ ಸಕ್ರಿಯ ಪ್ರಾದೇಶಿಕ ಅಂಗಸಂಸ್ಥೆಗಳಲ್ಲಿ ಒಂದಾದ ISIS-K, 2018ರ ಸುಮಾರಿಗೆ ತನ್ನ ಸದಸ್ಯತ್ವ ಸಂಖ್ಯೆಯಲ್ಲಿ ಕುಸಿತವನ್ನು ಕಂಡಿದೆ. ತಾಲಿಬಾನ್ ಮತ್ತು ಅಮೆರಿಕದ ಪಡೆಗಳು ಇದರ ಮೇಲೆ ದಾಳಿಯೆಸಗಿ ಭಾರೀ ನಷ್ಟವನ್ನುಂಟುಮಾಡಿವೆ. 2021ರಲ್ಲಿ ಅಫ್ಘಾನಿಸ್ತಾನದಿಂದ ಅಮೆರಿಕ ಪಡೆಗಳು ಹಿಂದೆಗೆದವು. ಇದಾದ ಬಳಿಕ ಅಫ್ಘಾನಿಸ್ತಾನ ಸೇರಿದತೆ ಈ ಪ್ರಾಂತ್ಯದಲ್ಲಿ ಐಸಿಸ್-ಕೆದಂತಹ ಉಗ್ರಗಾಮಿ ಗುಂಪುಗಳ ವಿರುದ್ಧದ ಗುಪ್ತಚರ ಮಾಹಿತಿ ಪಡೆಯುವ ವ್ಯವಸ್ಥೆ ಹಿನ್ನಡೆ ಕಂಡಿತು.

ಗುಂಪು ಯಾವ ದಾಳಿಗಳನ್ನು ನಡೆಸಿದೆ?

ISIS-K ಅಫ್ಘಾನಿಸ್ತಾನದ ಒಳಗೆ ಮತ್ತು ಹೊರಗೆ ಮಸೀದಿಗಳ ಮೇಲೂ ಸೇರಿದಂತೆ ಹಲವಾರು ಮಾರಕ ದಾಳಿಗಳ ಇತಿಹಾಸವನ್ನು ಹೊಂದಿದೆ. ಈ ವರ್ಷದ ಆರಂಭದಲ್ಲಿ ಇರಾನ್‌ನಲ್ಲಿ ಅವಳಿ ಬಾಂಬ್‌ ದಾಳಿಗಳನ್ನು ನಡೆಸಿ ಸುಮಾರು 100 ಜನರನ್ನು ಕೊಂದಿತು. ಸೆಪ್ಟೆಂಬರ್ 2022ರಲ್ಲಿ ISIS-K ಉಗ್ರಗಾಮಿಗಳು ಕಾಬೂಲ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯಲ್ಲಿ ಮಾರಣಾಂತಿಕ ಆತ್ಮಹತ್ಯಾ ಬಾಂಬ್ ದಾಳಿ ಮಾಡಿದರು.

Moscow attack

2021ರಲ್ಲಿ ಕಾಬೂಲ್‌ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಗುಂಡಿನ ದಾಳಿಗೆ ಈ ಗುಂಪು ಕಾರಣವಾಗಿದೆ. ಅಮೆರಿಕದ ಪಡೆಗಳ ಹಿಂದೆಗೆತದಿಂದ ಅಸ್ತವ್ಯಸ್ತವಾಗಿದ್ದ ದೇಶದಿಂದ ಪಡೆಗಳ ಸ್ಥಳಾಂತರದ ಸಮಯದಲ್ಲಿ ಈ ದಾಳಿ ನಡೆದಿದ್ದು, 13 ಯುಎಸ್ ಸೈನಿಕರು ಮತ್ತು ಹಲವಾರು ನಾಗರಿಕರ ಬಲಿ ಪಡೆದಿತ್ತು.

ಈ ತಿಂಗಳ ಆರಂಭದಲ್ಲಿ, ಮಧ್ಯಪ್ರಾಚ್ಯದ ಹೊಣೆ ಹೊತ್ತಿರುವ ಅಮೆರಿಕದ ಉನ್ನತ ಜನರಲ್ ಒಬ್ಬರು, ಐಸಿಸ್-ಕೆ ಅಫ್ಘಾನಿಸ್ತಾನದ ಹೊರಗೆ, ಅಮೆರಿಕ ಮತ್ತು ಪಾಶ್ಚಿಮಾತ್ಯ ಹಿತಾಸಕ್ತಿಗಳ ಮೇಲೆ “ಆರು ತಿಂಗಳೊಳಗೆ ಮತ್ತು ಯಾವುದೇ ಎಚ್ಚರಿಕೆಯಿಲ್ಲದೆ” ದಾಳಿ ಮಾಡಬಹುದು ಎಂದು ಹೇಳಿದ್ದರು.

ರಷ್ಯಾದ ಮೇಲೆ ಏಕೆ ದಾಳಿ?

ಶುಕ್ರವಾರ ರಷ್ಯಾದಲ್ಲಿ ISIS-K ನಡೆಸಿದ ದಾಳಿಯು ಭಯಾನಕವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ಗುಂಪು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ತೀವ್ರವಾಗಿ ದ್ವೇಷಿಸುತ್ತಿದೆ. “ಐಎಸ್ಐಎಸ್-ಕೆ ಕಳೆದ ಎರಡು ವರ್ಷಗಳಿಂದ ರಷ್ಯಾದಲ್ಲಿ ಸ್ಥಿರವಾಗಿದೆ. ಪುಟಿನ್ ಅನ್ನು ಆಗಾಗ್ಗೆ ಟೀಕಿಸುತ್ತಿದೆ” ಎಂದು ವಾಷಿಂಗ್ಟನ್ ಮೂಲದ ಸಂಶೋಧನಾ ಗುಂಪು ಸೌಫನ್ ಸೆಂಟರ್‌ನ ಕಾಲಿನ್ ಕ್ಲಾರ್ಕ್ ಹೇಳಿದ್ದಾರೆ.

ವಾಷಿಂಗ್ಟನ್ ಮೂಲದ ವಿಲ್ಸನ್ ಸೆಂಟರ್‌ನ ಮೈಕೆಲ್ ಕುಗೆಲ್‌ಮನ್ ಅವರು, “ನಿರಂತರವಾಗಿ ಮುಸ್ಲಿಮರ ಮೇಲೆ ದಬ್ಬಾಳಿಕೆ ಎಸಗುವ ಚಟುವಟಿಕೆಗಳಲ್ಲಿ ರಷ್ಯಾ ಭಾಗಿಯಾಗಿದೆ ಎಂದು ಐಸಿಸ್‌ ಭಾವಿಸಿದೆ” ಎಂದು ಹೇಳುತ್ತಾರೆ. ಮಾಸ್ಕೋ ವಿರುದ್ಧ ತಮ್ಮದೇ ಆದ ದ್ವೇಷದ ಭಾವನೆಯನ್ನು ಹೊಂದಿರುವ ಹಲವಾರು ಮಧ್ಯ ಏಷ್ಯಾದ ಉಗ್ರಗಾಮಿಗಳ ತಂಡಗಳು ಈ ಗುಂಪಿನ ಸದಸ್ಯರಾಗಿವೆ.

ಇದನ್ನೂ ಓದಿ: Moscow Attack: ಮಾಸ್ಕೋದಲ್ಲಿ ಐಸಿಸ್ ಉಗ್ರರ ಭಯಾನಕ ದಾಳಿ; 40 ಸಾವು; ಸಂಗೀತ ಕೇಳಲು ಬಂದವರ ಮೇಲೆ ಯದ್ವಾತದ್ವಾ ಗುಂಡಿಕ್ಕಿದರು

Continue Reading

ಪ್ರಮುಖ ಸುದ್ದಿ

Lok Sabha Election 2024: ಮತದಾರರ ಪಟ್ಟಿಯಲ್ಲಿ ಈಗಲೂ ನಿಮ್ಮ ಹೆಸರು ಸೇರಿಸಬಹುದು; ಹೀಗೆ!

Lok Sabha Election 2024: ನೀವು ಹೊಸ ಮತದಾರರಾಗಿದ್ದರೆ, ಈಗಲೂ ನಿಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಅವಕಾಶವಿದೆ. ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿಸಲು ಹಂತ ಹಂತವಾದ ಮಾರ್ಗದರ್ಶಿ ಇಲ್ಲಿದೆ.

VISTARANEWS.COM


on

new voters lok sabha election 2024
Koo

ಲೋಕಸಭೆ ಚುನಾವಣೆಯ (Lok Sabha Election 2024) ವೇಳಾಪಟ್ಟಿ ಪ್ರಕಟವಾಗಿ, ನೀತಿ ಸಂಹಿತೆಯೂ (Model Code of Conduct) ಜಾರಿಯಾಗಿ, ರಾಜಕೀಯ ಪಕ್ಷಗಳೂ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಇದು ಪ್ರಜಾತಂತ್ರದ (Democracy) ಅತಿ ದೊಡ್ಡ ಹಬ್ಬ. ಇದರಲ್ಲಿ ನಾವೂ ನೀವೂ ಎಲ್ಲರೂ ಪಾಲ್ಗೊಳ್ಳಬೇಕಲ್ಲವೇ? ಮತ ಹಾಕಬೇಕಿದ್ದರೆ ಮುಖ್ಯವಾಗಿ ಬೇಕಿರುವುದು ನೀವು ಭಾರತೀಯ ಪ್ರಜೆಯಾಗಿರಬೇಕು (Indian Citizen) ಹಾಗೂ ಮತದಾರರ ಯಾದಿಯಲ್ಲಿ (Voter’s List) ನಿಮ್ಮ ಹೆಸರಿರಬೇಕು. ಒಂದು ವೇಳೆ ನೀವು ಹೊಸ ಮತದಾರರಾಗಿದ್ದರೆ, ಈಗಲೂ ನಿಮ್ಮ ಹೆಸರನ್ನು ಪಟ್ಟಿಯಲ್ಲಿ ಸೇರಿಸಲು ಅವಕಾಶವಿದೆ.

ಚುನಾವಣಾ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿಸಲು ಹಂತ ಹಂತವಾದ ಮಾರ್ಗದರ್ಶಿ ಇಲ್ಲಿದೆ.

ನಿಮ್ಮ ಅರ್ಹತೆಯನ್ನು ಪರಿಶೀಲಿಸಿ

ದಾಖಲಾತಿ ಪ್ರಕ್ರಿಯೆಗೆ ಮುಂದುವರಿಯುವ ಮೊದಲು, ನೀವು ಮತದಾರರ ನೋಂದಣಿಗೆ ಅರ್ಹತಾ ಮಾನದಂಡಗಳನ್ನು ಪೂರೈಸುತ್ತೀರಾ ಎಂಬುದನ್ನು ಪರಿಶೀಲಿಸಿ. ಮೊದಲನೆಯದಾಗಿ, ನೀವು ಭಾರತೀಯ ನಾಗರಿಕರಾಗಿರಬೇಕು. ಈ ವರ್ಷದ ಜನವರಿ 1ಕ್ಕೆ 18 ವರ್ಷ ತುಂಬಿರಬೇಕು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು. ನೀವು ಭಾರತೀಯ ಪ್ರಜೆ ಎಂಬುದಕ್ಕೆ ಅಗತ್ಯವಾದ ದಾಖಲೆ ಇರಬೇಕು.

ಆನ್‌ಲೈನ್ ನೋಂದಣಿ

ಚುನಾವಣಾ ಆಯೋಗವು ಆನ್‌ಲೈನ್ ನೋಂದಣಿ ಸೌಲಭ್ಯಗಳನ್ನು ಪರಿಚಯಿಸುವ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ (NVSP) ವೆಬ್‌ಸೈಟ್‌ಗೆ ಹೋಗಿ; ಅಥವಾ ಮತದಾರರ ಸಹಾಯವಾಣಿಗೆ ಕರೆ ಮಾಡಿ; ಅಥವಾ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.

ನಿಮ್ಮ ಹೆಸರನ್ನು ಹೇಗೆ ಸೇರಿಸುವುದು?

ಫಾರ್ಮ್ ಸಲ್ಲಿಕೆ: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸಲು ಆನ್‌ಲೈನ್‌ನಲ್ಲಿ ಅರ್ಜಿ ಫಾರ್ಮ್ 6 ಅನ್ನು ಭರ್ತಿ ಮಾಡಿ. ನಿಖರವಾದ ವೈಯಕ್ತಿಕ ವಿವರಗಳನ್ನು ಒದಗಿಸಿ. ಉದಾಹರಣೆಗೆ ಹೆಸರು, ಹುಟ್ಟಿದ ದಿನಾಂಕ, ವಿಳಾಸ ಮತ್ತು ಪೋಷಕ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

ಡಾಕ್ಯುಮೆಂಟ್ ಪರಿಶೀಲನೆ: ಅಪ್ಲೋಡ್ ಮಾಡಿದ ಎಲ್ಲಾ ದಾಖಲೆಗಳನ್ನು ನಿಮ್ಮ ಬಳಿ ಇಟ್ಟುಕೊಂಡು, ಪರಿಶೀಲನೆಯ ಸಂದರ್ಭದಲ್ಲಿ ಖಚಿತಪಡಿಸಿಕೊಳ್ಳಿ. ಸಾಮಾನ್ಯವಾಗಿ ಸ್ವೀಕರಿಸುವ ದಾಖಲೆಗಳೆಂದರೆ ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಅಥವಾ ಸರ್ಕಾರ ನೀಡಿದ ಇತರ ಯಾವುದೇ ಗುರುತಿನ ಕಾರ್ಡ್.

ಕ್ಷೇತ್ರ ಪರಿಶೀಲನೆ: ನಿಮ್ಮ ಅರ್ಜಿಯನ್ನು ಸಲ್ಲಿಸಿದ ನಂತರ, ಬೂತ್ ಮಟ್ಟದ ಅಧಿಕಾರಿ‌ (BLO) ನೀವು ಒದಗಿಸಿದ ಮಾಹಿತಿಯನ್ನು ಪರಿಶೀಲಿಸುತ್ತಾರೆ. ಪರಿಶೀಲನಾ ಪ್ರಕ್ರಿಯೆಯ ಸಮಯದಲ್ಲಿ ನೀವು ನೀಡಿದ ವಿಳಾಸದಲ್ಲಿ ನಿವಾಸಿಯಾಗಿರುವುದನ್ನು ಖಚಿತಪಡಿಸಬೇಕು.

ಅರ್ಜಿಯ ಮೇಲ್ವಿಚಾರಣೆ ಮಾಡಿ: ನಿಮ್ಮ ಅರ್ಜಿ ಏನಾಗಿದೆ ಎಂಬುದನ್ನು ಟ್ರ್ಯಾಕ್ ಮಾಡಲು NVSP ವೆಬ್‌ಸೈಟ್ ಅಥವಾ ಮತದಾರರ ಸಹಾಯವಾಣಿ ಅಪ್ಲಿಕೇಶನ್ ಬಳಸಬಹುದು.

ತಿದ್ದುಪಡಿ ಮತ್ತು ನವೀಕರಣ: ನಿಮ್ಮ ಮತದಾರರ ಚೀಟಿಯಲ್ಲಿ ಯಾವುದೇ ದೋಷಗಳು ಇದ್ದಲ್ಲಿ ಅಥವಾ ಬದಲಾವಣೆ ಬೇಕಿದ್ದಲ್ಲಿ ಸೂಕ್ತ ಮಾಹಿತಿ ಹಾಗೂ ದಾಖಲೆಯೊಂದಿಗೆ ತಿದ್ದುಪಡಿಗಳಿಗಾಗಿ ಅದೇ ಕ್ಷೇತ್ರದಲ್ಲಿದ್ದರೆ ಫಾರ್ಮ್ 8 ಅನ್ನು ಬಳಸಬಹುದು. ಅಥವಾ ಕ್ಷೇತ್ರ ವರ್ಗಾವಣೆಗಾಗಿ ಫಾರ್ಮ್ 8A ಅನ್ನು ಬಳಸಬಹುದು.

ಭೌತಿಕ ದಾಖಲಾತಿ ಕೇಂದ್ರಗಳು: ಸಾಂಪ್ರದಾಯಿಕ ನೋಂದಣಿ ಮಾರ್ಗವನ್ನು ಬಯಸಿದರೆ ನೀವು ಹತ್ತಿರದ ಚುನಾವಣಾ ನೋಂದಣಿ ಅಧಿಕಾರಿ (ERO) ಕಚೇರಿ ಅಥವಾ ಮತದಾರರ ಅನುಕೂಲ ಕೇಂದ್ರಕ್ಕೆ (VFC) ಭೇಟಿ ನೀಡಿ ನಿಮ್ಮ ಅರ್ಜಿಯನ್ನು ಭೌತಿಕವಾಗಿ ಸಲ್ಲಿಸಬಹುದು.

ಡೆಡ್‌ಲೈನ್ ಅರಿವು: ದಾಖಲಾತಿಗಾಗಿ ಅಂತಿಮ ದಿನಾಂಕದ ಬಗ್ಗೆ ಗಮನವಿರಲಿ. ಮತದಾರರ ಪಟ್ಟಿಯನ್ನು ಸಾಮಾನ್ಯವಾಗಿ ಚುನಾವಣಾ ದಿನಾಂಕಕ್ಕೆ ಕೆಲವು ವಾರಗಳ ಮೊದಲು ಮುಕ್ತಾಯಗೊಳಿಸಲಾಗುತ್ತದೆ. ಗಡುವನ್ನು ತಪ್ಪಿಸಿಕೊಂಡರೆ ಈ ಬಾರಿಯ ಚುನಾವಣೆಯಲ್ಲಿ ನಿಮ್ಮ ಮತದಾನದ ಹಕ್ಕು ಚಲಾಯಿಸಲು ಸಾಧ್ಯವಾಗದೆ ಇರಬಹುದು.

ಜಾಗೃತಿ ಮೂಡಿಸಿ: ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಸ್ನೇಹಿತರು, ಕುಟುಂಬ ಮತ್ತು ಸಮುದಾಯದ ಸದಸ್ಯರನ್ನು ಪ್ರೋತ್ಸಾಹಿಸಿ.

ಮತದಾನದಲ್ಲಿ ಸಾಮೂಹಿಕ ಭಾಗವಹಿಸುವಿಕೆಯು ನಮ್ಮ ರಾಷ್ಟ್ರದ ಪ್ರಜಾಪ್ರಭುತ್ವದ ರಚನೆಯನ್ನು ಬಲಪಡಿಸುತ್ತದೆ. ಈ ಮೇಲಿನ ಸರಳ ಹಂತಗಳನ್ನು ಅನುಸರಿಸುವ ಮೂಲಕ ನೀವು ಲೋಕಸಮರದಲ್ಲಿ ನಿಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಬಹುದು. ನಮ್ಮ ಮತದಾನದ ಹಕ್ಕನ್ನು ಜವಾಬ್ದಾರಿಯುತವಾಗಿ ಚಲಾಯಿಸೋಣ ಮತ್ತು ಭಾರತದ ಉಜ್ವಲ ಭವಿಷ್ಯವನ್ನು ರೂಪಿಸೋಣ.

ಇದನ್ನೂ ಓದಿ: Election Ambassabor : ಮತದಾನ ರಾಯಭಾರಿಗಳಾಗಿ ಬಿಗ್‌ ಬಾಸ್‌ ಕಾರ್ತಿಕ್‌, ನಟ ನಾಗಭೂಷಣ್‌ ಆಯ್ಕೆ

Continue Reading
Advertisement
Viral News
ವೈರಲ್ ನ್ಯೂಸ್16 mins ago

Viral News: ಪಿಟ್‌ಬುಲ್‌ ದಾಳಿಯಿಂದ ಬಾಲಕನ್ನು ರಕ್ಷಿಸಿದ ಬೀದಿ ನಾಯಿಗಳು; ವಿಡಿಯೊ ಇಲ್ಲಿದೆ

2nd puc result 2024
ಪ್ರಮುಖ ಸುದ್ದಿ1 hour ago

2nd PUC Result: ದ್ವಿತೀಯ ಪಿಯುಸಿಯಲ್ಲಿ ಶೇ.84.59 ಮಂದಿ ಪಾಸ್;‌ ದ.ಕ, ಉಡುಪಿ ಮೊದಲೆರಡು ಸ್ಥಾನ; ಫಲಿತಾಂಶ ಇಲ್ಲಿದೆ ನೋಡಿ

Bade Miyan Chote Miyan
ಸಿನಿಮಾ1 hour ago

Bade Miyan Chote Miyan: ಈದ್ ಹಬ್ಬಕ್ಕೆ ‘ಬಡೆ ಮಿಯಾನ್ ಚೋಟೆ ಮಿಯಾನ್’ ತೆರೆಗೆ; ಅಕ್ಷಯ್ ಕುಮಾರ್‌ ಚಿತ್ರ ನಾಳೆ ರಿಲೀಸ್‌

Arvind Kejriwal
ದೇಶ2 hours ago

Arvind Kejriwal: ದೆಹಲಿ ಹೈಕೋರ್ಟ್‌ನಿಂದ ಸಿಕ್ಕಿಲ್ಲ ರಿಲೀಫ್‌; ಸುಪ್ರೀಂ ಕೋರ್ಟ್‌ ಕದ ತಟ್ಟಿದ ಅರವಿಂದ್ ಕೇಜ್ರಿವಾಲ್

mandya crime rowdysheeter murder case
ಕ್ರೈಂ2 hours ago

Murder Case: ಮಂಡ್ಯದ ಬೀದಿಯಲ್ಲಿ ರೌಡಿಶೀಟರ್‌ ಕೊಚ್ಚಿ ಕೊಲೆ

koppal murcer case and self harming
ಕೊಪ್ಪಳ3 hours ago

Murder Case: ಪತ್ನಿಯನ್ನು ಕೊಂದ, ತಾನೂ ನೇಣು ಹಾಕಿಕೊಂಡ

lok sabha election 2024 MES candidates belagavi canara
ಪ್ರಮುಖ ಸುದ್ದಿ4 hours ago

Lok Sabha Election 2024: ಲೋಕಸಭೆ ಕಣದಲ್ಲಿ ಕನ್ನಡಿಗರಿಗೆ ಸವಾಲು ಹಾಕಿದ ನಾಡದ್ರೋಹಿ ಎಂಇಎಸ್!

Road Accident
ಬೆಂಗಳೂರು4 hours ago

Road Accident: ಬೈಕಿಗೆ ಟಾಟಾ ಏಸ್‌ ಡಿಕ್ಕಿ; ರಾಜಕಾಲುವೆಗೆ ಬಿದ್ದ ಬೈಕ್:‌ 2 ಅಪಘಾತಗಳಲ್ಲಿ ಮೂವರು ಸಾವು

bus accident chattisgarh
ಪ್ರಮುಖ ಸುದ್ದಿ4 hours ago

Bus Accident: ಬಸ್‌ ಕಂದಕಕ್ಕೆ ಉರುಳಿ 12 ಕಾರ್ಮಿಕರ ಸಾವು; ಪ್ರಧಾನಿ ಮೋದಿ ಸಂತಾಪ

Health Benefits of Walnuts
ಆರೋಗ್ಯ5 hours ago

Health Benefits of Walnuts: ವಾಲ್‌ನಟ್‌ ತಿಂದರೆ ಆಗುವ ಪ್ರಯೋಜನಗಳು ಹಲವು!

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ7 hours ago

Dina Bhavishya : ಈ ರಾಶಿಯವರಿಗೆ ಹೂಡಿಕೆ ವ್ಯವಹಾರದಲ್ಲಿ ಅಧಿಕ ಲಾಭ

Ugadi 2024
ಬಾಗಲಕೋಟೆ22 hours ago

Ugadi 2024 : ಬೀಳಗಿಯ ಎಕ್ಕೆ ಎಲೆ ಭವಿಷ್ಯ; ಈಶಾನ್ಯ, ಪಶ್ಚಿಮ ಭಾಗದಲ್ಲಿ ಭಾರಿ ಕಂಟಕ!

ugadi 2024
ಧಾರವಾಡ23 hours ago

Ugadi 2024 : ಹನುಮನಕೊಪ್ಪದಲ್ಲಿ ಭವಿಷ್ಯ ನುಡಿದ ಬೊಂಬೆ! ಮುಂದಿನ ಪ್ರಧಾನಿ ಯಾರಾಗ್ತಾರೆ?

Dina Bhavishya
ಭವಿಷ್ಯ1 day ago

Dina Bhavishya : ನೂತನ ಸಂವತ್ಸರದಲ್ಲಿ ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya : ಅತಿರೇಕದ ಮಾತು ಈ ರಾಶಿಯವರಿಗೆ ಒಳ್ಳೆಯದಲ್ಲ

Rockstar Bull of bull festival king fame passes away
ಹಾವೇರಿ3 days ago

Rockstar Bull: ಹೋರಿ ಹಬ್ಬದ ಕಿಂಗ್ ಖ್ಯಾತಿಯ ರಾಕ್‌ ಸ್ಟಾರ್‌ ಬುಲ್‌ ಇನ್ನಿಲ್ಲ; ಬೊಮ್ಮಾಯಿ ಕಂಬನಿ

dina bhavishya read your daily horoscope predictions for April 7 2024
ಭವಿಷ್ಯ3 days ago

Dina Bhavishya: ಇಂದು ಈ ರಾಶಿಯವರು ಮುಂದಿನ ನಿರ್ಣಯ ತೆಗೆದುಕೊಳ್ಳಲು ಒಳ್ಳೇ ಸಮಯ!

Lok Sabha Election 2024 CM Siddaramaiah launches Congress Prajadhvani Yatra
Lok Sabha Election 20244 days ago

Lok Sabha Election 2024: ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಗೆ ಚಾಲನೆ; ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಲು ಸಿದ್ದರಾಮಯ್ಯ ಕರೆ

R Ashok pressmeet against CM Siddaramaiah and Congress Government
Lok Sabha Election 20244 days ago

Karnataka Drought: ಬರ ಪರಿಹಾರದಲ್ಲಿ ಸಿಎಂ ಸಿದ್ದರಾಮಯ್ಯ ಮಾಡಿದ ತಪ್ಪುಗಳ ಪಟ್ಟಿಯನ್ನೇ ಇಟ್ಟ ಆರ್.‌ ಅಶೋಕ್!

Video Viral Assulat on KSRTC Driver in Karwar
ಕ್ರೈಂ4 days ago

Video Viral: ಬಸ್‌ಗೆ ಜಾಗ ಕೊಡದೇ ಸ್ಕೂಟಿ ಓಡಿಸಿದ; ವಿಡಿಯೊ ಮಾಡಿದ ಚಾಲಕನಿಗೆ ಯದ್ವಾತದ್ವ ಹೊಡೆದ!

ಟ್ರೆಂಡಿಂಗ್‌