ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ ʼಗಂಧದ ಗುಡಿʼ ಸಿನಿಮಾ ಥಿಯೇಟರ್‌ಗಳಿಗೆ ಅಪ್ಪಳಿಸಿದೆ, ಅಭಿಮಾನಿಗಳ ಹರ್ಷ ಮುಗಿಲುಮುಟ್ಟಿದೆ. ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ದೇಶ, ವಿದೇಶಗಳಲ್ಲಿ ಒಂದೂವರೆ ಕೋಟಿ ಜನರು ಕೋಟಿ ಕಂಠ ಗಾಯನದಲ್ಲಿ ಭಾಗವಹಿಸಿದ್ದಾರೆ, ನಕ್ಸಲರ ಕುರಿತು ಪ್ರಧಾನಿ ಮೋದಿ ಮಾತನಾಡಿದ್ದು, ಪೊಲೀಸರಿಗೆ ದೇಶಾದ್ಯಂತ ಸಮಾನ ಸಮವಸ್ತ್ರದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೃಹತ್ ಪ್ರಮಾಣದ SSC ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ, ವೈದ್ಯರಿಗೆ ಬಯೋಮೆಟ್ರಿಕ್ ಕಡ್ಡಾಯ ಎಂದು ರಾಜ್ಯ ಸರ್ಕಾರ ತಿಳಿಸಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. Gandhada Gudi | ಗಂಧದ ಗುಡಿ ಅಪ್ಪು ಕೊನೆಯ ಚಿತ್ರ ಅಲ್ಲ, ಇದು ಆರಂಭ: ಶಿವರಾಜ್‌ಕುಮಾರ್
ರಾಜ್ಯಾದ್ಯಂತ ಅಕ್ಟೋಬರ್ 28 ಶುಕ್ರವಾರ ʻಗಂಧದ ಗುಡಿʼ (Gandhada Gudi) ಸಿನಿಮಾ ಪ್ರದರ್ಶನ ಕಾಣುತ್ತಿದೆ. ಅಪ್ಪು ಅಭಿಮಾನಿಗಳ ಸಂಭ್ರಮ ಮುಗಿಲಿಗೇರಿದೆ. ತುಮಕೂರಿನ ಜೈ ಭಾರತ್ ಚಿತ್ರಮಂದಿರದಲ್ಲಿ ಗಜರಾಜನ ಜತೆ ಅಪ್ಪು ಫ್ಯಾನ್ಸ್ ಸ್ಟೆಪ್ ಹಾಕಿದ್ದಾರೆ. ಶಿವಮೊಗ್ಗದಲ್ಲಿ ಬಾಳೆ ದಿಂಡಿನ ಮಂಟಪ ಮಾಡಿ, ಆ ಮಂಟಪದಲ್ಲಿ ಪುನೀತ್ ರಾಜಕುಮಾರ್ ಭಾವಚಿತ್ರ ಇಟ್ಟು ವಿಶೇಷವಾಗಿ ಪೂಜೆ ಸಲ್ಲಿಸಿದ್ದಾರೆ. ಗಂಧದ ಗುಡಿ ಅಪ್ಪು ಅವರ ಕೊನೆಯ ಸಿನಿಮಾವಲ್ಲ. ಇದು ಆರಂಭ. ಅಪ್ಪು ಯಾವಾಗಲೂ ನಮ್ಮ ಜತೆ ಇರುತ್ತಾರೆ. ಸಿನಿಮಾದಲ್ಲಿಯೇ ನೋಡುವ ಹಾಗೇ ಪ್ರಕೃತಿ ಬಗ್ಗೆ ನಾವು ಅರಿತುಕೊಳ್ಳಬೇಕು. ಇದು ಎಲ್ಲರೂ ನೋಡಲೇಬೇಕಾದ ಸಿನಿಮಾ ಎಂದು ನಟ ಶಿವರಾಜ್ ಕುಮಾರ್ ಹೇಳಿಕೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: ಅಪ್ಪು ಅಭಿಮಾನದ ಹೊಳೆ | ತುಂಬಿ ತುಳುಕಿದ ಗಂಧದ ಗುಡಿ
2. ಕೋಟಿ ಕಂಠ ಗಾಯನ | ಒಂದೂವರೆ ಕೋಟಿ ಜನರ ಗಾಯನ, ಗಿನ್ನೆಸ್ ದಾಖಲೆಯ ಪ್ರಯತ್ನ
ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಕೋಟಿ ಕಂಠ ಗಾಯನ” ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ೧.೫೦ ಕೋಟಿ ಜನರು ಕನ್ನಡದ ಹಾಡಿಗೆ ಧ್ವನಿಯಾಗಿದ್ದಾರೆ. ಇದೇ ವೇಳೆ, ಕಾರ್ಯಕ್ರಮ ಗಿನ್ನೆಸ್ ದಾಖಲೆಯಾಗುವ ಸಾಧ್ಯತೆಯಿದೆ.
೫೦ ದೇಶ, ೨೯ ರಾಜ್ಯಗಳು ಸೇರಿದಂತೆ ವಿಶ್ವದ ಉದ್ದಗಲದಿಂದ ಸ್ಪಂದನೆ ವ್ಯಕ್ತವಾಗಿದ್ದು ಕಂಠೀರವ ಸ್ಟೇಡಿಯಂನಲ್ಲಿ ಸುಮಾರು ೫೦ ಸಾವಿರ ನಾಗರಿಕರು, ವಿದ್ಯಾರ್ಥಿಗಳು, ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವ ಸುನಿಲ್ ಕುಮಾರ್, ಆರ್.ಅಶೋಕ, ಕೇಂದ್ರದ ಮಾಜಿ ಸಚಿವ ಸದಾನಂದ ಗೌಡ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Invest Karnataka 2022 | ಆರು ಲಕ್ಷ ಕೋಟಿ ರೂ. ಹೂಡಿಕೆ ನಿರೀಕ್ಷೆ
3. Twitter | ಎಲಾನ್ ಮಸ್ಕ್ ತೆಕ್ಕೆಗೆ ಟ್ವಿಟರ್, ಸಿಇಒ ಪರಾಗ್ ಅಗ್ರವಾಲ್ ವಜಾ
ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟರ್ (Twitter ) ಅನ್ನು ಉದ್ಯಮಿ ಎಲಾನ್ ಮಸ್ಕ್ ಅವರು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಹಾಗೂ ಇದರ ಬೆನ್ನಲ್ಲೇ ಟ್ವಿಟರ್‌ನ ಭಾರತೀಯ ಮೂಲದ ಸಿಇಒ ಪರಾಗ್ ಅಗ್ರವಾಲ್, ಕಾನೂನು ಮತ್ತು ನೀತಿ ವಿಭಾಗದ ಮುಖ್ಯಸ್ಥೆ ವಿಜಯಾ ಗದ್ದೆ ಸೇರಿದಂತೆ ಪ್ರಮುಖರನ್ನು ವಜಾಗೊಳಿಸಿದ್ದಾರೆ. ಒಟ್ಟು 44 ಶತಕೋಟಿ ಡಾಲರ್ (ಅಂದಾಜು 3.60 ಲಕ್ಷ ಕೋಟಿ ರೂ.) ಮೌಲ್ಯದ ಮೆಗಾ ಡೀಲ್ ಇದಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. PM Modi | ಪೆನ್, ಗನ್ -ಎರಡೂ ಬಗೆಯ ನಕ್ಸಲರನ್ನು ಬಗ್ಗು ಬಡಿಯುತ್ತೇವೆ: ಪ್ರಧಾನಿ ಮೋದಿ
ದೇಶದ ಆಂತರಿಕ ಭದ್ರತೆಯನ್ನು ಇನ್ನಷ್ಟು ಬಲಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಕ್ಸಲಿಸಂ ಮತ್ತು ಅದರ ಎಲ್ಲ ಸ್ವರೂಪಗಳನ್ನೂ ಬೇರು ಸಹಿತ ಕಿತ್ತೊಗೆಯಬೇಕಾದ ಅಗತ್ಯತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹರ್ಯಾಣದ ಸೂರಜ್ಕುಂಡ್ನಲ್ಲಿ ನಡೆದ ಚಿಂತನ ಶಿಬಿರದಲ್ಲಿ ವರ್ಚ್ಯುವಲ್ ಆಗಿ ಅವರು ಮಾತನಾಡಿದರು.
ಅರ್ಬನ್ ನಕ್ಸಲರು, ಮಾವೋವಾದಿಗಳವಿರುದ್ಧವೂ ನಮ್ಮ ಹೋರಾಟ ಗಟ್ಟಿಯಾಗಬೇಕು. ಅವರು ಗನ್ ಹಿಡಿದು ಬರುವ ನಕ್ಸಲರೇ ಆಗಿರಲಿ, ಪೆನ್ ಹಿಡಿದು ನಕ್ಸಲಿಸಂ ಮಾಡುತ್ತಿರುವವರೇ ಆಗಿರಲಿ-ಅವರನ್ನೆಲ್ಲ ಸಂಪೂರ್ಣ ಬಗ್ಗುಬಡಿಯುತ್ತೇವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Seer suicide | ಬಂಡೇ ಮಠದ ಶ್ರೀಗಳನ್ನು trap ಮಾಡಿದ ಯುವತಿ ಫೋಟೊ ಲೀಕ್, ಷಡ್ಯಂತ್ರದಲ್ಲಿ ಇನ್ನೊಬ್ಬ ಸ್ವಾಮೀಜಿ?
ಕಂಚುಗಲ್ ಬಂಡೇ ಮಠದ ಶ್ರೀ ಬಸವ ಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಒಂದು ಕಡೆ ಶ್ರೀಗಳನ್ನು ಟ್ರ್ಯಾಪ್‌ನಲ್ಲಿ ಬೀಳಿಸಿದ ಯುವತಿಯ ಫೋಟೊ ಲೀಕ್ ಆಗಿದ್ದರೆ, ಇನ್ನೊಂದು ಕಡೆ ಈ ಷಡ್ಯಂತ್ರದ ಹಿಂದೆ ಇನ್ನೊಬ್ಬ ಸ್ವಾಮೀಜಿ ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಅವರನ್ನು ಒಂದೆರಡು ದಿನದಲ್ಲಿ ಬಂಧಿಸುವ ಸಾಧ್ಯತೆಗಳಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Bharat Jodo | ಸಿದ್ದು ಆರೋಗ್ಯ ಸೂಪರ್, ಡಿಕೆಶಿ ಕಾಳಜಿ ಅಪಾರ: ರಾಹುಲ್ ಗಾಂಧಿ Candid ಮಾತುಗಳು
ಕಾಂಗ್ರೆಸ್ ವತಿಯಿಂದ ಆಯೋಜಿಸಿರುವ ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ 21 ದಿನ ಸಾಗಿ ಇದೀಗ ಬೇರೆ ರಾಜ್ಯಗಳತ್ತ ಸಾಗಿದೆ. ಸುಮಾರು ಒಂದು ಸಾವಿರ ಕಿಲೋಮೀಟರ್ ಸಾಗಿದ ಯಾತ್ರೆಯಲ್ಲಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದು ರಾಹುಲ್ ಗಾಂಧಿಯವರ ಫಿಟ್‌ನೆಸ್. ಯಾತ್ರೆ ಪೂರ್ಣಗೊಂಡ ನಂತರದಲ್ಲಿ ಕಾಂಗ್ರೆಸ್ ನಾಯಕರ ಜತೆಗೆ ಅನೌಪಚಾರಿಕವಾಗಿ ರಾಹುಲ್ ಗಾಂಧಿ ಮಾತನಾಡಿದ್ದಾರೆ. ಈ ವೇಳೆ ಅನೇಕ ಸ್ವಾರಸ್ಯಕರ ಅಂಶಗಳನ್ನು ಹಂಚಿಕೊಂಡಿದ್ದಾರೆ. ಈ ಸಮಯದಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಲ್ಲಿ ಪರಸ್ಪರ ಅಭಿಪ್ರಾಯ ಕೇಳುವುದೂ ಸೇರಿ ಸ್ವಾರಸ್ಯಕರ ಚರ್ಚೆ ನಡೆಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. PM Modi | ಒಂದು ದೇಶ, ಒಂದು ಪೊಲೀಸ್ ಸಮವಸ್ತ್ರ ಪ್ರಸ್ತಾಪಿಸಿದ ಪ್ರಧಾನಿ ಮೋದಿ; ಚರ್ಚಿಸಲು ರಾಜ್ಯಗಳಿಗೆ ಸೂಚನೆ
ಕಾನೂನು ಮತ್ತು ಸುವ್ಯವಸ್ಥೆ ಎನ್ನುವುದು ಆಯಾ ರಾಜ್ಯಗಳ ಜವಾಬ್ದಾರಿಯೇ ಆಗಿದ್ದರೂ, ಅದು ಇಡೀ ರಾಷ್ಟ್ರದ ಸಮಗ್ರತೆ ಮತ್ತು ಏಕತೆಗೆ ಸಂಬಂಧಪಟ್ಟ ವಿಷಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ರಾಜ್ಯಗಳು ಪರಸ್ಪರರಿಂದ ಕಲಿಯಬೇಕು. ಒಂದು ರಾಜ್ಯವನ್ನು ನೋಡಿ, ಮತ್ತೊಂದು ರಾಜ್ಯಗಳು ಸ್ಫೂರ್ತಿ ಪಡೆಯಬೇಕು. ದೇಶದ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದ ಪ್ರಧಾನಿ ಮೋದಿ ಇದೇ ಹೊತ್ತಲ್ಲಿ ‘ಒಂದು ದೇಶ, ಒಂದೇ ಪೊಲೀಸ್ ಸಮವಸ್ತ್ರ’ ಪರಿಕಲ್ಪನೆಯನ್ನು ಪ್ರಸ್ತಾಪಿಸಿದರು. ಹೀಗೆ ರಾಷ್ಟ್ರಾದ್ಯಂತ ಎಲ್ಲ ರಾಜ್ಯಗಳ ಪೊಲೀಸರೂ ಒಂದೇ ಮಾದರಿಯವ ಯೂನಿಫಾರ್ಮ್ ಧರಿಸುವಂತೆ ನಿಯಮ ಜಾರಿ ಸಂಬಂಧ ಎಲ್ಲ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳೂ ಚರ್ಚಿಸಬೇಕು’ ಎಂದು ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Vladimir Putin | ಪ್ರಧಾನಿ ಮೋದಿ ಮಹಾನ್ ದೇಶಭಕ್ತ, ಭಾರತಕ್ಕಿದೆ ಅದ್ಭುತ ಭವಿಷ್ಯ ಎಂದ ರಷ್ಯಾ ಅಧ್ಯಕ್ಷ ಪುಟಿನ್
ಭಾರತದ ವಿದೇಶಾಂಗ ನೀತಿಯನ್ನು ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶ್ಲಾಘಿಸಿದ್ದಾರೆ. ಹಾಗೇ ಭಾರತ ಮತ್ತು ರಷ್ಯಾ ದೇಶಗಳು ಅತ್ಯುತ್ತಮ ಸಂಬಂಧ ಹೊಂದಿವೆ. ನಮ್ಮ ರಾಷ್ಟ್ರಗಳ ಮಧ್ಯೆ ಯಾವುದೇ ವಿಚಾರದಲ್ಲಿ, ಯಾವುದೇ ಸಮಸ್ಯೆಗಳೂ ಇಲ್ಲ ಎಂದೂ ಹೇಳಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಒಬ್ಬ ಮಹಾನ್ ದೇಶಭಕ್ತ ಎಂದು ಪುಟಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. SSC Recruitment 2022 | ಎಸ್‌ಎಸ್‌ಸಿಯಿಂದ 24,369 ಕಾನ್ಸ್‌ಟೇಬಲ್ ನೇಮಕ; SSLC ಆದವರಿಗೆ ಭರ್ಜರಿ ಅವಕಾಶ
ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗವು (ಎಸ್‌ಎಸ್‌ಸಿ) ಕೇಂದ್ರೀಯ ಶಸ್ತ್ರಾಸ್ತ್ರ ಪೊಲೀಸ್ ಪಡೆ(CAPFs) ಮತ್ತು ವಿಶೇಷ ರಕ್ಷಣಾ ಪಡೆ (SSF) ಯಲ್ಲಿನ ಕಾನ್ಸ್‌ಟೇಬಲ್ ಹುದ್ದೆ (ಜನರಲ್ ಡ್ಯೂಟಿ) ಹಾಗೂ ಅಸ್ಸಾಂ ರೈಫಲ್ಸ್‌ನಲ್ಲಿ ರೈಫಲ್‌ಮೆನ್ ಮತ್ತು ಮಾದಕದ್ರವ್ಯ ನಿಯಂತ್ರಣ ಬ್ಯುರೋದಲ್ಲಿನ ಸಿಪಾಯಿ ಹುದ್ದೆಗಳ ನೇಮಕಕ್ಕೆ (SSC Recruitment 2022) ಅಧಿಸೂಚನೆ ಹೊರಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Biometric to doctor| ಸರ್ಕಾರಿ ವೈದ್ಯರ ಖಾಸಗಿ ಪ್ರಾಕ್ಟೀಸ್‌ಗೆ ಬ್ರೇಕ್ ಹಾಕಲು ಬರಲಿದೆ ಬಯೋಮೆಟ್ರಿಕ್
ಖಾಸಗಿಯಾಗಿ ಪ್ರಾಕ್ಟೀಸ್ ಮಾಡುವ ಸರ್ಕಾರಿ ವೈದ್ಯರಿಗೆ ಕಡಿವಾಣ ಹಾಕಲು ಆಸ್ಪತ್ರೆಯಲ್ಲಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ ಮಾಡುವ ಬಗ್ಗೆ ಚಿಂತನೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿಯಾಗಿ ಪ್ರಾಕ್ಟೀಸ್ ಮಾಡುವ ವೈದ್ಯರಿಗೆ ಕಡಿವಾಣ ಹಾಕುವ ಆಲೋಚನೆ ಸರ್ಕಾರದ ಮಟ್ಟದಲ್ಲಿದೆ ಎಂದರು. ʻʻಬಯೋಮೆಟ್ರಿಕ್ ಅನುಷ್ಠಾನಕ್ಕೆ ತರುತ್ತೇವೆ. ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ವೈದ್ಯರು ಬಯೋಮೆಟ್ರಿಕ್ ಮಾಡಬೇಕು. ಅವರಿಗೆ ಜಿಯೋ ಟ್ಯಾಗ್ ನೀಡಲು ಚಿಂತನೆ ನಡೆದಿದೆʼʼ ಎಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳು
🟢GM Mustard | ಕೃಷಿ ಕ್ಷೇತ್ರದಲ್ಲಿ ಮತ್ತೆ ಕುಲಾಂತರಿ ಬಿರುಗಾಳಿ; ಬಿಟಿ ಸಾಸಿವೆಗೆ ಅನುಮತಿ
🟡T20 World Cup | ಮಿಸ್ಟರ್ ಬೀನ್ಗಾಗಿ ಜಿಂಬಾಬ್ವೆ-ಪಾಕ್ ಪ್ರಧಾನಿಗಳ ಟ್ವಿಟರ್ ಸಮರ
🟠Vokkaliga Reservation | ಮೀಸಲಾತಿಗೆ ಆಗ್ರಹಿಸಿ ಬೀದಿಗಿಳಿದ ಒಕ್ಕಲಿಗ ಸಮುದಾಯ; ಮದ್ದೂರಲ್ಲಿ ಪ್ರತಿಭಟನೆ
🔴DMK Leader | ಬಿಜೆಪಿಯಲ್ಲಿರುವ ನಟಿಯರನ್ನು ಐಟಂ ಎಂದು ಕರೆದು, ಕ್ಷಮೆ ಕೋರಿದ ಡಿಎಂಕೆ ನಾಯಕ