DMK Leader | ಬಿಜೆಪಿಯಲ್ಲಿರುವ ನಟಿಯರನ್ನು ಐಟಂ ಎಂದು ಕರೆದು, ಕ್ಷಮೆ ಕೋರಿದ ಡಿಎಂಕೆ ನಾಯಕ - Vistara News

ದೇಶ

DMK Leader | ಬಿಜೆಪಿಯಲ್ಲಿರುವ ನಟಿಯರನ್ನು ಐಟಂ ಎಂದು ಕರೆದು, ಕ್ಷಮೆ ಕೋರಿದ ಡಿಎಂಕೆ ನಾಯಕ

ಬಿಜೆಪಿಯಲ್ಲಿರುವ ನಟ-ನಟಿಯರನ್ನು ಐಟಂ ಎಂದು ಕರೆದು ಬಳಿಕ ಕ್ಷಮೆಯಾಚಿಸಿದ ಡಿಎಂಕೆಯ ನಾಯಕ (DMK Leader) ಸೈದಾಯಿ ಸಾದಿಕ್.

VISTARANEWS.COM


on

DMK Leader
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚೆನ್ನೈ: ಸಿನಿಮಾ ನಟ-ನಟಿಯರಾಗಿದ್ದುಕೊಂಡು ಬಿಜೆಪಿ ನಾಯಕರಾಗಿ ಗುರುತಿಸಿಕೊಂಡಿದ್ದವರ ವಿರುದ್ದ ಅವಮಾನಕಾರ ರೀತಿಯಲ್ಲಿ ಮಾತನಾಡಿದ್ದ ದ್ರಾವಿಡ್ ಮುನ್ನೆತ್ರ ಕಳಗಮ್(ಡಿಎಂಕೆ) ನಾಯಕ (DMK Leader) ಸೈದಾಯಿ ಸಾದಿಕ್ ಅವರು ಕ್ಷಮೆ ಕೋರಿದ್ದಾರೆ. ಬಿಜೆಪಿ ನಾಯಕರಾಗಿರುವ ಎಲ್ಲ ನಟ-ನಟಿಯರು ಐಟಮ್‌ಗಳೆಂದು ಹೇಳಿದ್ದರು. ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದು ಈಗ ಬಿಜೆಪಿಯ ನಾಯಕಿಯಾಗಿರುವ ಖುಷ್ಬೂ ಅವರು ಸೈದಾಯಿ ಸಾದಿಕ್ ಹೇಳಿಕೆಯನ್ನು ಡಿಎಂಕೆ ನಾಯಕಿ ಕನ್ನಿಮೋಳಿ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು. ಆಗ ಕನ್ನಿಮೋಳಿ ಅವರು ಕ್ಷಮೆ ಕೋರಿದ್ದರು. ಇಷ್ಟಾದ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದ ಸೈದಾಯಿ ಸಾದಿಕ್ ಅವರೂ ಕ್ಷಮೆ ಕೋರಿದ್ದಾರೆ.

ನಟಿ ಖುಷ್ಬೂ ಸೇರಿದಂತೆ ಇನ್ನಾವುದೇ ನಟ-ನಟಿಯರನ್ನು ಹೀಯಾಳಿಸುವ ಉದ್ದೇಶವು ತಮ್ಮ ಹೇಳಿಕಯಲ್ಲಿ ಇರಲಿಲ್ಲ. ಆದರೆ, ಇದೇ ವೇಳೆ, ಬಿಜೆಪಿ ನಾಯಕರು ಮಾಡುವ ಟೀಕೆಗಳಿಗೆ ಯಾಕೆ ನೀವೆಲ್ಲ ಪ್ರತಿಕ್ರಿಯಿಸುವುದಿಲ್ಲ ಎಂದೂ ಅವರು ಹೇಳಿದ್ದಾರೆ. ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ ಅವರು ಡಿಎಂಕೆ ಸಚಿವರನ್ನು ಹಂದಿಗಳು, ಪ್ರಾಣಿಗಳು ಎಂದು ಜರಿದಿದ್ದರು. ಪತ್ರಕರ್ತರನ್ನು ಮಂಗಳಿಗೆ ಹೋಲಿಸಿದ್ದರು. ಈ ನಾಯಕರೇಕೆ(ನಟಿಯರು, ನಟರು) ಅವರನ್ನು ಪ್ರಶ್ನಿಸುವುದಿಲ್ಲ ಎಂದು ಸೈದಾಯಿ ಸಾದಿಕ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ | A Raja | ಹಿಂದೂಗಳಾಗಿರುವ ತನಕ ನೀವು ಶೂದ್ರರೇ, ಡಿಎಂಕೆ ಸಂಸದ ಎ. ರಾಜಾ ವಿವಾದಾತ್ಮಕ ಹೇಳಿಕೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

ಬಾಲಕಿಯ ಒಳ ವಸ್ತ್ರ ಕಳಚಿ ಬೆತ್ತಲೆಗೊಳಿಸುವುದು ಅತ್ಯಾಚಾರ ಯತ್ನವಲ್ಲ ಎಂದ ಹೈಕೋರ್ಟ್! ನಿಮ್ಮ ಅಭಿಪ್ರಾಯವೇನು?

ವ್ಯಕ್ತಿಯು ಬಾಲಕಿಯನ್ನು ವಿವಸ್ತ್ರಗೊಳಿಸಿದರೆ ಅದು ಅತ್ಯಾಚಾರಕ್ಕೆ ಯತ್ನ ಮಾಡಿದಂತೆ ಆಗುವುದಿಲ್ಲ. ಮೊದಲು ವ್ಯಕ್ತಿಯ ತಲೆಯಲ್ಲಿ ಅತ್ಯಾಚಾರದ ಯೋಚನೆ ಇರಬೇಕು. ಬಾಲಕಿಯ ಜತೆ ಲೈಂಗಿಕ ಸಂಪರ್ಕ ಸಾಧಿಸಲು ಮುಂದಾಗಿರಬೇಕು. ಇಲ್ಲದಿದ್ದರೆ ಅದು ಅತ್ಯಾಚಾರಕ್ಕೆ ಯತ್ನ ಮಾಡಿದಂತೆ ಆಗುವುದಿಲ್ಲ. ಬಾಲಕಿಯನ್ನು ವಿವಸ್ತ್ರಗೊಳಿಸಿದರೆ 376 ಹಾಗೂ 511 ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ವಿಧಿಸಲು ಆಗುವುದಿಲ್ಲ ಎಂದು ಕೋರ್ಟ್‌ ಹೇಳಿದೆ.

VISTARANEWS.COM


on

Court Order
Koo

ಜೈಪುರ: ಬಾಲಕಿಯ ಒಳಉಡುಪನ್ನು ತೆಗೆದು, ಆಕೆಯನ್ನು ಬೆತ್ತಲೆಗೊಳಿಸುವುದು ಅತ್ಯಾಚಾರಕ್ಕೆ ನಡೆಸಿದ ಯತ್ನವಲ್ಲ ಎಂಬುದಾಗಿ ರಾಜಸ್ಥಾನ ಹೈಕೋರ್ಟ್‌ (Rajasthan High Court) ತೀರ್ಪು ನೀಡಿದೆ. ಸುಮಾರು 33 ವರ್ಷಗಳ ಹಿಂದಿನ ಪ್ರಕರಣದ ಕುರಿತು ಆದೇಶ ಹೊರಡಿಸಿದ ನ್ಯಾಯಾಲಯವು, ಯಾವುದೇ ವ್ಯಕ್ತಿಯು ಅಪ್ರಾಪ್ತೆಯ ಒಳಉಡುಪು ಬಿಚ್ಚಿ, ಆಕೆಯನ್ನು ವಿವಸ್ತ್ರಗೊಳಿಸಿದರೆ, ಅದನ್ನು ಅತ್ಯಾಚಾರಕ್ಕೆ ಯತ್ನ (Attempt To Rape) ಮಾಡಿದ ಪ್ರಕರಣ ಆಗುವುದಿಲ್ಲ ಎಂದು ನ್ಯಾಯಮೂರ್ತಿ ಅನೂಪ್‌ ಕುಮಾರ್‌ ಧಾಂಡ್‌ ಅವರ ಏಕಸದಸ್ಯ ಪೀಠವು ತಿಳಿಸಿತು.

ಸುಮಾರು 33 ವರ್ಷಗಳ ಹಿಂದೆ ಅಂದರೆ, 1991ರ ಮಾರ್ಚ್‌ 9ರಂದು ವ್ಯಕ್ತಿಯೊಬ್ಬ 6 ವರ್ಷದ ಬಾಲಕಿಯನ್ನು ಕರೆದುಕೊಂಡು ಹೋಗಿ, ಆಕೆಯನ್ನು ವಿವಸ್ತ್ರಗೊಳಿಸಿದ್ದ. ಟೋಂಕ್‌ ಜಿಲ್ಲೆಯ ತೋಡಾರೈಸಿಂಗ್‌ ಪ್ರದೇಶದಲ್ಲಿ ರಾತ್ರಿ 8 ಗಂಟೆಗೆ ಬಾಲಕಿಯನ್ನು ಧರ್ಮಶಾಲೆಯೊಂದಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ಬಾಲಕಿಯ ಅಂಡರ್‌ವೇರ್‌ ಬಿಚ್ಚಿ, ಆಕೆಯನ್ನು ಬೆತ್ತಲೆಗೊಳಿಸಿದ್ದ. ಇದಾದ ಬಳಿಕ ಬಾಲಕಿಯು ಜೋರಾಗಿ ಕಿರುಚಿದ ಕಾರಣ ಗ್ರಾಮಸ್ಥರು ಬಂದು ಬಾಲಕಿಯನ್ನು ರಕ್ಷಿಸಿದ್ದರು.

Physical Abuse

ಪ್ರಕರಣದ ಬಳಿಕ ನನ್ನ ಮೊಮ್ಮಗಳ ಮೇಲೆ ಸುವಾಲಾಲ್‌ ಎಂಬಾತ (ಪ್ರಕರಣದ ವೇಳೆ ವ್ಯಕ್ತಿಗೆ 25 ವರ್ಷ ವಯಸ್ಸು) ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂಬುದಾಗಿ ಬಾಲಕಿಯ ಅಜ್ಜ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಇದಾದ ಬಳಿಕ ಪ್ರಕರಣವು ಗಂಭೀರ ಸ್ವರೂಪ ಪಡೆದು, ಜಿಲ್ಲಾ ನ್ಯಾಯಾಲಯವು ಸುವಾಲಾಲ್‌ನನ್ನು ಅಪರಾಧಿ ಎಂದು ಘೋಷಿಸಿ, ಜೈಲು ಶಿಕ್ಷೆ ವಿಧಿಸಿತ್ತು. ವಿಚಾರಣೆ ವೇಳೆಯೇ ಸುವಾಲಾಲ್‌ ಎರಡೂವರೆ ತಿಂಗಳು ಜೈಲು ವಾಸ ಅನುಭವಿಸಿದ್ದರು.

ಹೈಕೋರ್ಟ್‌ ಆದೇಶವೇನು?

ಯಾವುದೇ ವ್ಯಕ್ತಿಯು ಬಾಲಕಿಯನ್ನು ವಿವಸ್ತ್ರಗೊಳಿಸಿದರೆ ಅದು ಅತ್ಯಾಚಾರಕ್ಕೆ ಯತ್ನ ಮಾಡಿದಂತೆ ಆಗುವುದಿಲ್ಲ. ಮೊದಲು ವ್ಯಕ್ತಿಯ ತಲೆಯಲ್ಲಿ ಅತ್ಯಾಚಾರದ ಯೋಚನೆ ಇರಬೇಕು. ಬಾಲಕಿಯ ಜತೆ ಲೈಂಗಿಕ ಸಂಪರ್ಕ ಸಾಧಿಸಲು ಮುಂದಾಗಿರಬೇಕು. ಇಲ್ಲದಿದ್ದರೆ ಅದು ಅತ್ಯಾಚಾರಕ್ಕೆ ಯತ್ನ ಮಾಡಿದಂತೆ ಆಗುವುದಿಲ್ಲ. ಬಾಲಕಿಯನ್ನು ವಿವಸ್ತ್ರಗೊಳಿಸಿದರೆ 376 ಹಾಗೂ 511 ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ವಿಧಿಸಲು ಆಗುವುದಿಲ್ಲ. ಆದರೆ, ಬಾಲಕಿಯನ್ನು ಬೆತ್ತಲೆಗೊಳಿಸಿದರೆ, ಅದು ಆಕೆಯ ಘನತೆಗೆ ಧಕ್ಕೆ ತಂದಂತೆ. ಸೆಕ್ಷನ್‌ 354ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ತಿಳಿಸಿತು. ಜಿಲ್ಲಾ ನ್ಯಾಯಾಲಯದ ಆದೇಶವನ್ನು ಬದಲಾಯಿಸಿ, ಸೆಕ್ಷನ್‌ 354ರ ಅಡಿಯಲ್ಲಿ ಮಾತ್ರ ಅಪರಾಧಿ ಎಂದು ಘೋಷಿಸಿತು.

ಇದನ್ನೂ ಓದಿ: Arvind Kejriwal: ದೆಹಲಿ ಹೈಕೋರ್ಟ್‌ನಿಂದ ಸಿಕ್ಕಿಲ್ಲ ರಿಲೀಫ್‌; ಸುಪ್ರೀಂ ಕೋರ್ಟ್‌ ಕದ ತಟ್ಟಿದ ಅರವಿಂದ್ ಕೇಜ್ರಿವಾಲ್

Continue Reading

ಪ್ರಮುಖ ಸುದ್ದಿ

300 ಕೋಟಿ ರೂ. ಆಸ್ತಿಗಾಗಿ 1 ಕೋಟಿ ರೂ. ಸುಪಾರಿ ಕೊಟ್ಟು ಮಾವನನ್ನೇ ಕೊಲ್ಲಿಸಿದ ದುಷ್ಟ ಸೊಸೆ!

ಹಣಕ್ಕಾಗಿ ಹೆಣವೂ ಬಾಯಿ ಬಿಡುತ್ತದೆ ಎಂಬ ಮಾತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಹಣಕ್ಕಾಗಿ ಹೆಣಗಳು ಬೀಳುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಮಹಾರಾಷ್ಟ್ರದಲ್ಲಿ ಮಾವನ 300 ಕೋಟಿ ರೂ. ಆಸ್ತಿಯನ್ನು ಕಬಳಿಸಲು ಸೊಸೆಯು ಒಂದು ಕೋಟಿ ರೂ. ಸುಪಾರಿ ಕೊಟ್ಟು, ಮಾವನನ್ನು ಕೊಲೆ ಮಾಡಿಸಿದ್ದಾಳೆ. ಮೊದಲು ಹಿಂಟ್‌ ಆ್ಯಂಡ್‌ ರನ್‌ ಪ್ರಕರಣ ಆಗಿದ್ದ ಇದು ಈಗ ಕೊಲೆ ಪ್ರಕರಣವಾಗಿ ತಿರುವು ಪಡೆದುಕೊಂಡಿದೆ.

VISTARANEWS.COM


on

Mumbai
Koo

ಮುಂಬೈ: ಒಂದು ವಾರದ ಹಿಂದೆ ಮಹಾರಾಷ್ಟ್ರದ (Maharashtra) ನಾಗ್ಪುರದಲ್ಲಿ (Nagpur) ನಡೆದ ಹಿಂಟ್‌ ಆ್ಯಂಡ್‌ ರನ್‌ ಕೇಸ್‌ಗೆ (Hit And Run Case) ಹೊಸದೊಂದು ಟ್ವಿಸ್ಟ್‌ ಸಿಕ್ಕಿದೆ. ಹಿಂಟ್‌ ಆ್ಯಂಡ್‌ ರನ್‌ಗೆ 82 ವರ್ಷದ ವ್ಯಕ್ತಿಯು ಕಳೆದ ವಾರ ಬಲಿಯಾಗಿದ್ದರು. ಆದರೆ, ಪೊಲೀಸ್‌ ತನಿಖೆಯ ಬಳಿಕ ಭೀಕರ ಮಾಹಿತಿಯೊಂದು ಬಯಲಾಗಿದೆ. ಮಾವನ 300 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಡೆಯಲು ಸೊಸೆಯೇ 1 ಕೋಟಿ ರೂ. ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾಳೆ ಎಂಬ ಸಂಗತಿಯು ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಹೌದು, ನಾಗ್ಪುರ ಪ್ಲಾನಿಂಗ್‌ ಡಿಪಾರ್ಟ್‌ನಲ್ಲಿ ಸಹಾಯಕ ನಿರ್ದೇಶಕಿಯಾಗಿರುವ ಅರ್ಚನಾ ಮನೀಶ್‌ ಪುಟ್ಟೇವಾರ್ ಎಂಬ ಮಹಿಳೆಯು ಸುಪಾರಿ ಕೊಟ್ಟು ತಮ್ಮ ಮಾವ, 82 ವರ್ಷದ ಪುರುಷೋತ್ತಮ್‌ ಪುಟ್ಟೇವಾರ್ ಅವರನ್ನು ಕೊಲೆ ಮಾಡಿಸಿದ್ದಾರೆ ಎಂಬ ಸಂಗತಿಯು ಪೊಲೀಸರ ತನಿಖೆಯಿಂದ ಬಯಲಾಗಿದೆ. “ಮಾವನ ಹತ್ಯೆಗಾಗಿ ಮಹಿಳೆಯು ಸುಪಾರಿ ಕೊಟ್ಟಿದ್ದಾರೆ. ಹಲವು ದುಷ್ಕರ್ಮಿಗಳಿಗೆ 1 ಕೋಟಿ ರೂ. ಕೊಟ್ಟ ಅವರು, ಹಳೆಯ ಕಾರು ಖರೀದಿಸಿ, ಮಾವನಿಗೆ ಡಿಕ್ಕಿ ಹೊಡೆಸಿ ಕೊಂದು ಬಿಡಿ. ಆದರೆ, ಅದು ಅಪಘಾತದ ರೀತಿ ಆಗಿರಬೇಕು ಎಂಬುದಾಗಿ ಸೂಚಿಸಿದ್ದರು” ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ ಎಂಬುದಾಗಿ ಪಿಟಿಐ ವರದಿ ಮಾಡಿದೆ.

ಅರ್ಚನಾ ಮನೀಶ್‌ ಪಟ್ಟೇವಾರ್‌ ಅವರು ಪತಿಯ ಕಾರಿನ ಚಾಲಕನಾಗಿರುವ ಬಾಗ್ಡೆ, ಇತರ ಆರೋಪಿಗಳಾದ ನೀರಜ್‌ ನಿಮ್ಜೆ ಹಾಗೂ ಸಚಿನ್‌ ಧಾರ್ಮಿಕ್‌ ಎಂಬುವರಿಗೆ ಹಣ ಕೊಟ್ಟು ಸಂಚು ರೂಪಿಸಿದ್ದಾರೆ. ಇವರ ಸಂಚು ಬಯಲಾದ ಬಳಿಕ ಮೂವರನ್ನು ಬಂಧಿಸಿದ ಪೊಲೀಸರು, ಭಾರತೀಯ ದಂಡ ಸಂಹಿತೆ (IPC), ಮೋಟಾರು ವಾಹನಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಇವರಿಂದ ಎರಡು ಕಾರು, ಮೊಬೈಲ್‌ಗಳು ಹಾಗೂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಪುರುಷೋತ್ತಮ್‌ ಪುಟ್ಟೇವಾರ್‌ ಅವರ ಪತ್ನಿ ಶಕುಂತಲಾ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಆಸ್ಪತ್ರೆಯಲ್ಲಿದ್ದರು. ಇವರನ್ನು ಭೇಟಿಯಾದ ಪುರುಷೋತ್ತಮ್‌ ಪುಟ್ಟೇವಾರ್‌ ಅವರು ಮನೆಗೆ ವಾಪಸಾಗುವಾಗ ಕಾರು ಡಿಕ್ಕಿಯಾಗಿ ಮೃತಪಟ್ಟಿದ್ದರು. ಕಾರು ಹಿಂದಿನಿಂದ ಗುದ್ದಿತ್ತು. ಇದೊಂದು ಹಿಂಟ್‌ ಆ್ಯಂಡ್‌ ರನ್‌ ಕೇಸ್‌ ಎಂದೇ ಭಾವಿಸಲಾಗಿತ್ತು. ಆದರೆ, ಪೊಲೀಸರು ತನಿಖೆ ನಡೆಸಿದಾಗ ಸೊಸೆಯೇ ಕೊಲೆಗೆ ಸಂಚು ರೂಪಿಸಿದ್ದು ಬಯಲಾಗಿದೆ. ಅರ್ಚನಾ ಅವರ ಪತಿಯು ವೃತ್ತಿಯಲ್ಲಿ ವೈದ್ಯರಾಗಿದ್ದು, ಪತ್ನಿಯ ಸಂಚು ತಿಳಿದು ಅವರಿಗೆ ಶಾಕ್‌ ಆಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Murder case : ಹಿರಿಯ ಸ್ವಾಮೀಜಿ ಕೊಂದ‌ ಆರೋಪಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

Continue Reading

ದೇಶ

Narendra Modi: ಆಂಧ್ರದಲ್ಲಿ ಮೆಗಾ ಸ್ಟಾರ್‌, ಪವರ್‌ ಸ್ಟಾರ್‌ ಜತೆ ‘ಪೊಲಿಟಿಕಲ್‌ ಸ್ಟಾರ್’‌ ಮೋದಿ; Video ನೋಡಿ

Narendra Modi: ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಹಾಗೂ ಉಪ ಮುಖ್ಯಮಂತ್ರಿಯಾಗಿ ಜನಸೇನಾ ಪಕ್ಷದ ಮುಖ್ಯಸ್ಥ ಪವನ್‌ ಕಲ್ಯಾಣ್‌ ಅವರು ಪ್ರಮಾಣವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಸೇರಿ ಹಲವು ಗಣ್ಯರು ಭಾಗವಹಿಸಿದ್ದರು. ಇದೇ ವೇಳೆ, ಮೋದಿ ಅವರು ಚಿರಂಜೀವಿ ಹಾಗೂ ಪವನ್‌ ಕಲ್ಯಾಣ್‌ ಜತೆಗೂಡಿ ಒಗ್ಗಟ್ಟು ಪ್ರದರ್ಶಿಸಿದರು.

VISTARANEWS.COM


on

Narendra Modi
Koo

ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಟಿಡಿಪಿಯ ಎನ್‌.ಚಂದ್ರಬಾಬು ನಾಯ್ಡು (N Chandrababu Naidu), ಉಪ ಮುಖ್ಯಮಂತ್ರಿಯಾಗಿ ಜನಸೇನಾ ಪಕ್ಷದ ಮುಖ್ಯಸ್ಥ ಪವನ್‌ ಕಲ್ಯಾಣ್‌ (Pawan Kalyan) ಅವರು ಬುಧವಾರ (ಜೂನ್‌ 12) ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೂ ಭಾಗಿಯಾದರು. ಅಷ್ಟೇ ಅಲ್ಲ, ನರೇಂದ್ರ ಮೋದಿ ಅವರು ವೇದಿಕೆ ಮೇಲೆ ಮೆಗಾ ಸ್ಟಾರ್‌ ಚಿರಂಜೀವಿ, ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಅವರ ಕೈ ಹಿಡಿದು, ಅವರ ಕೈಗಳನ್ನು ಒಮ್ಮೆಲ್ಲೆ ಎತ್ತಿ ಹಿಡಿಯುವ ಮೂಲಕ ಗಮನ ಸೆಳೆದರು. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ವಿಜಯವಾಡದಲ್ಲಿರುವ ಮೇಧಾ ಐಟಿ ಪಾರ್ಕ್‌ ಬಳಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಎನ್‌.ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇದಾದ ಬಳಿಕ ಮೋದಿ ಅವರು ನಾಯ್ಡು ಅವರಿಗೆ ಶುಭ ಕೋರಿದರು. ನಂತರ ಪವನ್‌ ಕಲ್ಯಾಣ್‌ ಅವರು ತಮ್ಮ ಸಹೋದರ ಚಿರಂಜೀವಿ ಕೂಡ ಇಲ್ಲೇ ಇದ್ದಾರೆ ಎಂದು ಮೋದಿ ಅವರಿಗೆ ಹೇಳಿದರು. ಆಗ ಮೋದಿ ಅವರು ಚಿರಂಜೀವಿ ಬಳಿ ಹೋಗಿ, ಅವರ ಹಾಗೂ ಪವನ್‌ ಕಲ್ಯಾಣ್‌ ಕೈ ಹಿಡಿದು ವೇದಿಕೆಗೆ ಕರೆತಂದರು. ಬಳಿಕ ಮೂವರೂ ಕೈ ಎತ್ತಿದರು. ಆ ಮೂಲಕ ಒಗ್ಗಟ್ಟಿನ ಬಲ ಪ್ರದರ್ಶನ ಮಾಡಿದರು.

ಇದರ ಮಧ್ಯೆಯೇ ಚಂದ್ರಬಾಬು ನಾಯ್ಡು ಅವರು ನರೇಂದ್ರ ಮೋದಿ ಅವರ ಕಾಲು ಮುಟ್ಟಿ ನಮಸ್ಕರಿಸಲು ಮುಂದಾದರು. ಚಂದ್ರಬಾಬು ನಾಯ್ಡು ಅವರು ನರೇಂದ್ರ ಮೋದಿ ಅವರಿಗಿಂತ ಒಂದು ವರ್ಷ ದೊಡ್ಡವರು. ಹೀಗಿದ್ದರೂ ಮೋದಿ ಅವರ ಮೇಲಿನ ಗೌರವದಿಂದಾಗಿ ಅವರ ಕಾಲು ಮುಟ್ಟಿ ನಮಸ್ಕರಿಸಲು ಚಂದ್ರಬಾಬು ನಾಯ್ಡು ಮುಂದಾದರು. ಆದರೆ, ಇದಕ್ಕೆ ನರೇಂದ್ರ ಮೋದಿ ಅವರು ಅವಕಾಶ ಕೊಡದೆ, ಚಂದ್ರಬಾಬು ನಾಯ್ಡು ಅವರನ್ನು ತಬ್ಬಿಕೊಂಡು, ನೂತನ ಸರ್ಕಾರಕ್ಕೆ ಶುಭ ಹಾರೈಸಿದರು.

ಪ್ರಮಾಣವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್‌ ಶಾ, ನಿತಿನ್‌ ಗಡ್ಕರಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ, ನಟರಾದ ಚಿರಂಜೀವಿ, ರಜನಿಕಾಂತ್‌, ಮಾಜಿ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. ನಾಲ್ಕನೇ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಚಂದ್ರಬಾಬು ನಾಯ್ಡು ಅವರು ದಾಖಲೆ ಬರೆದರು.

ಇದನ್ನೂ ಓದಿ: ಒಡಿಶಾಗೆ ಬಿಜೆಪಿಯ ಮೋಹನ್‌ ಚರಣ್‌ ಮಾಝಿ, ಅರುಣಾಚಲಕ್ಕೆ ಪೆಮಾ ಖಂಡು ಸಿಎಂ; ಖಂಡು ನಾಳೆ ಪದಗ್ರಹಣ

Continue Reading

ದೇಶ

Terror attack : ಉಗ್ರರ ದಾಳಿ; ತನ್ನ ಪ್ರಾಣ ತ್ಯಾಗ ಮಾಡಿ ಪ್ರಯಾಣಿಕರ ಜೀವ ಉಳಿಸಿದ ಬಸ್‌ ಚಾಲಕ

Terror attack: ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಬಸ್ ಮೇಲೆ ಭಯೋತ್ಪಾಕರು ದಾಳಿ ನಡೆಸಿ ಘಟನೆಯಲ್ಲಿ 9 ಮಂದಿ ಹಿಂದೂ ಯಾತ್ರಿಕರು ಪ್ರಾಣ ಕಳೆದುಕೊಂಡಿದ್ದರು. ಬಸ್ ಚಾಲಕ ತನ್ನ ಪ್ರಾಣವನ್ನು ತ್ಯಾಗ ಮಾಡಿ ಪ್ರಯಾಣಿಕರ ಜೀವವನ್ನು ಉಳಿಸಿದ ಹೃದಯಸ್ಪರ್ಶಿ ಸನ್ನಿವೇಶದ ಬಗ್ಗೆ ಬಸ್‌ ಮಾಲೀಕ ಈಗ ವಿವರವಾದ ಮಾಹಿತಿ ನೀಡಿದ್ದಾರೆ.

VISTARANEWS.COM


on

Terror attack
Koo

ಜಮ್ಮು ಮತ್ತು ಕಾಶ್ಮೀರ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು (Terror attack) ದಾಳಿ ನಡೆಸಿದ ಘಟನೆಯನ್ನು ನಾವು ಹಲವು ಬಾರಿ ಕೇಳಿದ್ದೇವೆ ಮತ್ತು ಟಿವಿಯಲ್ಲಿ ಕೂಡ ನೋಡುತ್ತಿರುತ್ತೇವೆ. ಅಲ್ಲಿನ ಜನರ ಜೀವನ ಬಹಳ ಶೋಚನೀಯವಾಗಿದೆ. ತಮ್ಮ ಮೇಲೆ ಯಾವಾಗ ಸಂಕಷ್ಟ ಬಂದು ಎರಗುತ್ತದೆಯೋ ಎಂಬ ಜೀವಭಯದಲ್ಲೇ ಅಲ್ಲಿನ ಜನ ಇರುತ್ತಾರೆ. ಇಂಥದೊಂದು ಘಟನೆ ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ನಡೆದಿದೆ. ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್‌ ಮೇಲೆ ಭಯೋತ್ಪಾಕರು ಭಾನುವಾರ ಗುಂಡಿನ ದಾಳಿ ನಡೆಸಿದ್ದು, ಇದರ ಪರಿಣಾಮ ಬಸ್ ಆಳವಾದ ಕಮರಿಗೆ ಬಿದ್ದ ಘಟನೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ನಡೆದಿದೆ. ಈ ವೇಳೆ ಉಗ್ರರ ಗುಂಡೇಟು ಬಿದ್ದರೂ ವಿಚಲಿತನಾಗದೆ ಬಸ್ ನಿಲ್ಲಿಸದೆ ಯಾತ್ರಿಕರ ಪ್ರಾಣ ಉಳಿಸಿ ತನ್ನ ಪ್ರಾಣ ತ್ಯಾಗ ಮಾಡಿರುವುದು ದೇಶದೆಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

ಶಿವಖೋರಿ ದೇವಸ್ಥಾನದಿಂದ ಪೋನಿ ಪ್ರದೇಶದ ಟೆಯಾರ್ತ್ ಗ್ರಾಮದ ಬಳಿಯ ಕತ್ರಾದಲ್ಲಿರುವ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ತೆರಳುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ಹೊಂಚು ಹಾಕಿ ಗುಂಡು ಹಾರಿಸಿದ್ದರು. ಇದರ ಪರಿಣಾಮ ಒಂಬತ್ತು ಜನರು ಸಾವನಪ್ಪಿದ್ದು, 42 ಮಂದಿ ಗಾಯಗೊಂಡಿದ್ದರು. ಗುಂಡೇಟಿನ ನಡುವೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಬಿದ್ದಿತ್ತು.

ಈ ಕುರಿತು ಬಸ್ ಕಂಪನಿಯ ಮಾಲೀಕ ರಂಜಿತ್ ಸಿಂಗ್ ಈಗ ವಿವರವಾಗಿ ಮಾತನಾಡಿದ್ದು, “ಸಂಜೆ 5 ಗಂಟೆಗೆ ನಮ್ಮ ವಾಹನದ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ನಮಗೆ ಕರೆ ಬಂದಿತ್ತು. ಈ ಬಗ್ಗೆ ವಿಚಾರಣೆ ನಡೆಸಿದಾಗ ಅದು ಭಯೋತ್ಪಾದಕರ ದಾಳಿ ಎಂದು ತಿಳಿದು ಬಂತು. ಭಯೋತ್ಪಾದಕ ಬಸ್ ಹತ್ತಿ ಪ್ರಯಾಣಿಕರನ್ನು ಕೆಳಗಿಳಿಸುವಂತೆ ಚಾಲಕನಿಗೆ ಹೇಳಿದ. ಆಗ ಆ ವ್ಯಕ್ತಿ ಭಯೋತ್ಪಾದಕ ಎಂದು ತಿಳಿದ ಚಾಲಕ ಪ್ರಯಾಣಿಕರನ್ನು ಇಳಿಸಲು ನಿರಾಕರಿಸಿ ವೇಗವಾಗಿ ಬಸ್ ಓಡಿಸಿದ. ಆಗ ಭಯೋತ್ಪಾದಕ ಚಾಲಕನ ಮೇಲೆ ಗುಂಡಿ ಹಾರಿಸಿದ. ನಂತರ ಕಂಡಕ್ಟರ್ ಸ್ಟೀರಿಂಗ್ ಹಿಡಿದುಕೊಂಡಾಗ ಆತನ ಮೇಲೂ ಗುಂಡು ಹಾರಿಸಲಾಯಿತು. ಇದರಿಂದ ಬಸ್ ಆಯತಪ್ಪಿ ಕಮರಿಗೆ ಬಿತ್ತು. ಚಾಲಕ ಬುದ್ಧಿವಂತಿಕೆ ತೋರಿಸದಿದ್ದರೆ ಬಸ್‌ನಲ್ಲಿದ್ದ ಯಾವ ಪ್ರಯಾಣಿಕರೂ ಬದುಕಿರುತ್ತಿರಲಿಲ್ಲ. ಯಾಕೆಂದರೆ ಅವರು ಬಸ್‌ಗೆ ಬೆಂಕಿ ಹಚ್ಚುವ ಸಾಧ್ಯತೆ ಇತ್ತು. ಚಾಲಕನ ಬುದ್ಧಿವಂತಿಕೆಯಿಂದ 40 ಮಂದಿ ಪ್ರಯಾಣಿಕರ ಪ್ರಾಣ ಉಳಿದಿದೆ” ಎಂದು ಹೇಳಿದರು.

ಈ ದಾಳಿಯ ಹಿಂದೆ ಭಯೋತ್ಪಾದಕರ ಗುಂಪು ಲಷ್ಕರ್-ಎ-ತೊಯ್ಬಾ ಕೈವಾಡವಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ. ದಾಳಿಯ ಬಗ್ಗೆ ತನಿಖೆ ನಡೆಸಲು ಪೊಲೀಸರು ಹನ್ನೊಂದು ತಂಡಗಳನ್ನು ರಚಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಆರು ಜನರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: Murder Case: 300 ಕೋಟಿಯ ಆಸ್ತಿಗಾಗಿ ಮಾವನ ಕೊಲೆಗೆ ಸುಪಾರಿ ಕೊಟ್ಟ ಸೊಸೆ!

ಬಸ್ ತಿರುವಿನಲ್ಲಿ ಬಂದಾಗ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಇದು ರಾಜೌರಿ ಮತ್ತು ಪೂಂಚ್ ದಾಳಿಗಳ ಮಾದರಿಯಲ್ಲಿ ಕಂಡುಬಂದಿದೆ ಎನ್ನಲಾಗಿದೆ. ಭಯೋತ್ಪಾದಕರು ನಿಧಾನಗತಿಯಲ್ಲಿ ಬರುವ ವಾಹನಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಾರೆ ಎನ್ನಲಾಗಿದೆ.

Continue Reading
Advertisement
Court Order
ದೇಶ21 mins ago

ಬಾಲಕಿಯ ಒಳ ವಸ್ತ್ರ ಕಳಚಿ ಬೆತ್ತಲೆಗೊಳಿಸುವುದು ಅತ್ಯಾಚಾರ ಯತ್ನವಲ್ಲ ಎಂದ ಹೈಕೋರ್ಟ್! ನಿಮ್ಮ ಅಭಿಪ್ರಾಯವೇನು?

Virat Kohli
ಕ್ರೀಡೆ50 mins ago

Virat Kohli: ಟಿ20 ವಿಶ್ವಕಪ್​ನಲ್ಲಿ ಮೊದಲ ಗೋಲ್ಡನ್​ ಡಕ್ ಸಂಕಟಕ್ಕೆ ಸಿಲುಕಿದ ವಿರಾಟ್​ ಕೊಹ್ಲಿ

Mumbai
ಪ್ರಮುಖ ಸುದ್ದಿ1 hour ago

300 ಕೋಟಿ ರೂ. ಆಸ್ತಿಗಾಗಿ 1 ಕೋಟಿ ರೂ. ಸುಪಾರಿ ಕೊಟ್ಟು ಮಾವನನ್ನೇ ಕೊಲ್ಲಿಸಿದ ದುಷ್ಟ ಸೊಸೆ!

ICC T20 Rankings
ಕ್ರೀಡೆ2 hours ago

ICC T20 Rankings: ಅಗ್ರಸ್ಥಾನದಲ್ಲೇ ಮುಂದುವರಿದ ಟೀಮ್​ ಇಂಡಿಯಾ; ಕುಸಿತ ಕಂಡ ಪಾಕ್

Rain News
ಪ್ರಮುಖ ಸುದ್ದಿ2 hours ago

Rain News: ವಿಜಯನಗರ, ಕೊಪ್ಪಳ ಜಿಲ್ಲೆಯಲ್ಲಿ ಮಳೆ ಆರ್ಭಟ; ಕೆರೆಯಂತಾದ ರಸ್ತೆಗಳು!

Chellagurki Shri Yerrithathanavara Maharathotsava in Ballari
ಧಾರ್ಮಿಕ2 hours ago

Ballari News: ಭಕ್ತಿ ಭಾವದಿಂದ ನಡೆದ ಚೇಳ್ಳಗುರ್ಕಿ ಶ್ರೀ ಎರ‍್ರಿತಾತ ಮಹಾರಥೋತ್ಸವ

Narendra Modi
ದೇಶ2 hours ago

Narendra Modi: ಆಂಧ್ರದಲ್ಲಿ ಮೆಗಾ ಸ್ಟಾರ್‌, ಪವರ್‌ ಸ್ಟಾರ್‌ ಜತೆ ‘ಪೊಲಿಟಿಕಲ್‌ ಸ್ಟಾರ್’‌ ಮೋದಿ; Video ನೋಡಿ

Terror attack
ದೇಶ2 hours ago

Terror attack : ಉಗ್ರರ ದಾಳಿ; ತನ್ನ ಪ್ರಾಣ ತ್ಯಾಗ ಮಾಡಿ ಪ್ರಯಾಣಿಕರ ಜೀವ ಉಳಿಸಿದ ಬಸ್‌ ಚಾಲಕ

Uttara Kannada MP Vishweshwara hegde kageri spoke in Thanksgiving ceremony for bjp party workers in banavasi
ಉತ್ತರ ಕನ್ನಡ2 hours ago

Uttara Kannada News: ಉ.ಕ ಜಿಲ್ಲೆ ಬಿಜೆಪಿ ಕಾರ್ಯಕರ್ತರ ಕ್ಷೇತ್ರ ಎಂಬುದು ಮತ್ತೊಮ್ಮೆ ಸಾಬೀತು: ಕಾಗೇರಿ

chandrababu naidu takes oath as andhra chief minister mlc TA Sharavana Congratulated
ಬೆಂಗಳೂರು2 hours ago

TA Sharavana: ಆಂಧ್ರಪ್ರದೇಶ ಸಿಎಂ ಆಗಿ ಚಂದ್ರಬಾಬು ನಾಯ್ಡು ಪದಗ್ರಹಣ; ಶರವಣ ಅಭಿನಂದನೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ1 day ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ1 day ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ1 day ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ2 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ5 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ5 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌