Site icon Vistara News

ವಿಸ್ತಾರ TOP 10 NEWS : ಮನ್‌ ಕಿ ಬಾತ್‌ನಲ್ಲಿ ಕರ್ನಾಟಕ ಕಲರವದಿಂದ, ಮೈಸೂರಿನಲ್ಲಿ ವಿಷ್ಣು ಸ್ಮಾರಕ ಲೋಕಾರ್ಪಣೆವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-Karnataka praised in mann ki baat to vishnuvardhan memorial inauguration and more news of the day

#image_title

1. Mann Ki Baat : ಚಿಕ್ಕಬಳ್ಳಾಪುರದ ತಮಟೆ ವಾದಕ ಮುನಿವೆಂಕಟಪ್ಪ ಸೇರಿ ಪದ್ಮಶ್ರೀ ಪುರಸ್ಕೃತರನ್ನು ಸ್ಮರಿಸಿದ ಪ್ರಧಾನಿ ಮೋದಿ
ಈ ಸಲ ಗಣರಾಜ್ಯೋತ್ಸವದಿನದಂದು ಹಲವಾರು ಪ್ರಥಮಗಳ ಸಾಧನೆಯನ್ನು (Mann Ki Baat) ದಾಖಲಿಸಲಾಯಿತು. ಕರ್ತವ್ಯಪಥದಲ್ಲಿ ಸಿಆರ್‌ಪಿಎಫ್‌ನ ಒಂಟೆಗಳ ತುಕಡಿಯನ್ನು ಮಹಿಳಾ ಅಧಿಕಾರಿಗಳು ವಹಿಸಿದ್ದರು. ಈ ಸಲದ ಪದ್ಮ ಪ್ರಶಸ್ತಿಯನ್ನು ನಾನಾ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿರುವ ಗಣ್ಯರಿಗೆ ನೀಡಲಾಗಿದೆ. ತಳ ಸಮುದಾಯದಲ್ಲಿ ಸಮಾಜದ ಅಭಿವೃದ್ಧಿಗೆ, ಕಲೆ, ಸಂಸ್ಕೃತಿಗೆ ಕೊಡುಗೆ ಸಲ್ಲಿಸಿದವರಿಗೆ, ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಸಮಾಜ ಸುಧಾರಣೆಗೆ ಯತ್ನಿಸಿದವರಿಗೂ ಪದ್ಮ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನೆಚ್ಚಿನ ಮನ್‌ ಕಿ ಬಾತ್‌ನಲ್ಲಿ ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Mann Ki Baat: ಇ-ವೇಸ್ಟ್‌ನಿಂದ ಅಮೂಲ್ಯ ಲೋಹ ತೆಗೆಯುವ ಟೆಕ್ನಿಕ್‌, ಬೆಂಗಳೂರಿನ ಇ-ಪರಿಸರಕ್ಕೆ ಮೋದಿ ಮೆಚ್ಚುಗೆ
ಹೆಚ್ಚಿನ ಓದಿಗಾಗಿ: Mann Ki Baat : Aland Bhutai: ಕಲಬುರಗಿಯ ತಡಕಲ್‌ನ ಆಳಂದ ಭೂತಾಯಿ ರೈತರ ಕಂಪನಿಯನ್ನು ಪ್ರಶಂಸಿಸಿದ ಪ್ರಧಾನಿ ಮೋದಿ
ಹೆಚ್ಚಿನ ಓದಿಗಾಗಿ: Mann Ki Baat : ಬೀದರ್‌ನ ಹುಲಸೂರಿನಲ್ಲಿರುವ ಮಿಲೆಟ್‌ ಪ್ರೊಡ್ಯೂಸರ್‌ ಕಂಪನಿಯ ಸಾಧನೆಗೆ ಪ್ರಧಾನಿ ಮೋದಿ ಪ್ರಶಂಸೆ

2. BBC Documentary: ದೇಶದ ಜನರ ಮಧ್ಯೆ ಒಡಕು ಮೂಡಿಸಲು ಯತ್ನ, ಸಾಕ್ಷ್ಯಚಿತ್ರದ ಬೆನ್ನಲ್ಲೇ ಮೋದಿ ಹೇಳಿಕೆ
ಗೋದ್ರಾ ಹತ್ಯಾಕಾಂಡಕ್ಕೆ ನರೇಂದ್ರ ಮೋದಿ (Narendra Modi) ಅವರೇ ಕಾರಣ ಎಂಬುದಾಗಿ ಬಿಂಬಿಸಿರುವ ಬಿಬಿಸಿ ಡಾಕ್ಯುಮೆಂಟರಿ (BBC Documentary) ಕುರಿತು ಭಾರತದಲ್ಲಿ ಚರ್ಚೆಗಳು ನಡೆಯುತ್ತಿರುವ, ಜಾಗತಿಕವಾಗಿ ಸುದ್ದಿಯಾಗಿರುವ ಬೆನ್ನಲ್ಲೇ, “ಭಾರತದಲ್ಲಿ ಜನರ ಮನಸ್ಸುಗಳನ್ನು ಒಡೆಯಲು ಯತ್ನಿಸಲಾಗುತ್ತಿದೆ” ಎಂದು ನರೇಂದ್ರ ಮೋದಿ ಹೇಳಿದ್ದಾರೆ. ನ್ಯಾಷನಲ್‌ ಕೆಡೆಟ್‌ ಕಾರ್ಪ್ಸ್‌ (NCC) 75ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Pakistan: ಕಾಶ್ಮೀರ ಮರೆತು, ಭಾರತದ ಜತೆ ಸ್ನೇಹ ಸಂಪಾದಿಸಿ ಎಂದ ಸೌದಿ ಅರೆಬಿಯಾ; ಪಾಕಿಸ್ತಾನಕ್ಕೆ ಮುಖಭಂಗ
ಅಂತಾರಾಷ್ಟ್ರೀಯವಾಗಿ ಪಾಕಿಸ್ತಾನಕ್ಕೆ (Pakistan) ಮತ್ತೊಂದು ಮುಖಭಂಗವಾಗಿದೆ. ಕಾಶ್ಮೀರ ಸಮಸ್ಯೆಯನ್ನು (Kashmir issue) ಮರೆತು, ಭಾರತದೊಂದಿಗೆ ಸ್ನೇಹದಿಂದ ವರ್ತಿಸಿ ಎಂದು ಸೌದಿ ಅರೆಬಿಯಾ ಪಾಕಿಸ್ತಾನಕ್ಕೆ ಕಿವಿಮಾತು ಹೇಳಿದೆ ಎಂದು ವರದಿಯಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತವು ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ್ದರ ಬಗ್ಗೆ ಅನಗತ್ಯವಾಗಿ ವಿವಾದವನ್ನು ಮಾಡುವುದು ಬಿಟ್ಟು ಬಿಡಿ ಎಂದು ಸೌದಿ ಅರೆಬಿಯಾ (saudi arabia) ಮತ್ತು ಯುಎಇ (UAE) ಸಲಹೆ ನೀಡಿದೆ ಎಂದು ತಿಳಿದು ಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. JDS Politics : ಜೆಡಿಎಸ್‌ನಲ್ಲಿ ಕುಮಾರಸ್ವಾಮಿ ನಿರ್ಧಾರವೇ ಅಂತಿಮ, ನಮ್ಮಿಬ್ಬರನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದ ರೇವಣ್ಣ
ಕುಮಾರಣ್ಣ ನಮ್ಮ ಸರ್ವೋಚ್ಚ ನಾಯಕ. ಎಚ್‌.ಡಿ.ದೇವೇಗೌಡರು, ಎಚ್‌.ಡಿ. ಕುಮಾರಸ್ವಾಮಿ ಹಾಗೂ ಜಿಲ್ಲೆಯ ಶಾಸಕರು ಕುಳಿತು ಟಿಕೆಟ್‌ ನೀಡುವ ಬಗ್ಗೆ ತೀರ್ಮಾನ ಮಾಡುತ್ತಾರೆ. ನಾನು ಬದುಕಿರುವವರೆಗೂ ಕುಮಾರಸ್ವಾಮಿ ಹಾಗೂ ನಾನು ಹೊಡೆದಾಡುವ ಪ್ರಶ್ನೆಯೇ ಇಲ್ಲ, ನಮ್ಮಿಬ್ಬರನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ (JDS Politics) ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. B.S. Yediyurappa : ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುವ ಕುರಿತು ಬಿ.ಎಸ್‌. ಯಡಿಯೂರಪ್ಪ ಮಹತ್ವದ ಘೋಷಣೆ
ಮತ್ತೊಮ್ಮೆ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಕುರಿತು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ (B.S. Yediyurappa) ಮಹತ್ವದ ಘೋಷಣೆ ಮಾಡಿದ್ದಾರೆ. ಯಾವುದೇ ಕಾರಣಕ್ಕೆ ತಾವು ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Vishnuvardhan: ವಿಷ್ಣುವರ್ಧನ್ ಸ್ಮಾರಕವನ್ನು ಉದ್ಘಾಟಿಸಿದ ಸಿಎಂ ಬೊಮ್ಮಾಯಿ: ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಆಗ್ರಹಿಸಿದ ಅಭಿಮಾನಿಗಳು
ಮೈಸೂರಿನ ಎಚ್‌.ಡಿ ಕೋಟೆ ರಸ್ತೆಯ ಹಾಲಾಳು ಗ್ರಾಮದಲ್ಲಿ ನಿರ್ಮಾಣವಾಗಿರುವ ಸಾಹಸ ಸಿಂಹ ವಿಷ್ಣುವರ್ಧನ್ ( Vishnuvardhan ) ಅವರ ಸ್ಮಾರಕವನ್ನು ಭಾನುವಾರ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ನಂತರ ಫೋಟೊ ಗ್ಯಾಲರಿ ವೀಕ್ಷಣೆ ಮಾಡಿ ವಿಷ್ಣುವರ್ಧನ್ ಅವರ 7 ಅಡಿ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದರು . ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ್, ಪುತ್ರಿ ಕೀರ್ತಿ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Vishnuvardhan : ವಿಷ್ಣುವರ್ಧನ್‌ಗೆ ಕರ್ನಾಟಕ ರತ್ನ ಪ್ರಶಸ್ತಿ: ಸಿಎಂ ಬಸವರಾಜ ಬೊಮ್ಮಾಯಿ ಸಕಾರಾತ್ಮಕ ಸ್ಪಂದನೆ

7. U19 T20 World Cup : ಉದ್ಘಾಟನಾ ಆವೃತ್ತಿಯ ವಿಶ್ವ ಕಪ್​ ಗೆದ್ದು ದಾಖಲೆ ನಿರ್ಮಿಸಿದ ಭಾರತ ವನಿತೆಯರ ಕ್ರಿಕೆಟ್​ ತಂಡ
ಭಾರತ 19ರ ವಯೋಮಿತಿಯ ವನಿತೆಯರ ತಂಡ ಉದ್ಘಾಟನಾ ಆವೃತ್ತಿಯ ವಿಶ್ವ ಕಪ್​ (U19 T20 World Cup) ತನ್ನದಾಗಿಸಿಕೊಳ್ಳುವ ಮೂಲಕ ಇತಿಹಾಸ ಬರೆದಿದೆ. ಈ ಮೂಲಕ ಹಿರಿಯರ ತಂಡಕ್ಕೆ ಸಾಧ್ಯವಾಗದ ಸಾಧನೆಯನ್ನು ಕಿರಿಯರ ತಂಡ ಮಾಡಿದೆ. ಶಫಾಲಿ ವರ್ಮಾ ನೇತೃತ್ವದ ಭಾರತ ತಂಡ ಇಲ್ಲಿ ನಡೆದ (ಜನವರಿ 29ರಂದು) ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್​ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿ ಟ್ರೋಫಿ ಎತ್ತಿ ಹಿಡಿಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Khalistani Sleeper Cells: ದೆಹಲಿಯಲ್ಲಿ ಖಲಿಸ್ತಾನಿ ಉಗ್ರರ ಸ್ಲೀಪರ್​ ಸೆಲ್​; ದೊಡ್ಡ ದಾಳಿಗೆ ಸಂಚು ನಡೆಯುತ್ತಿರುವ ಶಂಕೆ!
ಖಲಿಸ್ತಾನಿ ಉಗ್ರರ ಸ್ಲೀಪರ್​​ ಸೆಲ್​​ಗಳು ದೆಹಲಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಸಕ್ರಿಯವಾಗಿದೆ ಎಂದು ಗುಪ್ತಚರ ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದಾಗಿ ಇಂಡಿಯಾ ಟುಡೆ ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ. ಪಶ್ಚಿಮ ದೆಹಲಿಯ ಹಲವು ಪ್ರದೇಶಗಳಲ್ಲಿ ಇತ್ತೀಚೆಗೆ ಖಲಿಸ್ತಾನ ಪರ ಪೋಸ್ಟರ್​​ಗಳು, ಖಲಿಸ್ತಾನಿ ಉಗ್ರರ ಬರಹಗಳು ಕಾಣಿಸಿಕೊಳ್ಳುತ್ತಿವೆ. ಈ ವಿಷಯವನ್ನು ಪೊಲೀಸರು ಗಂಭೀರ ತನಿಖೆಗೆ ಕೈಗೆತ್ತಿಕೊಂಡಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Female Ownership : ಕರ್ನಾಟಕದ ಶೇ.68 ಆಸ್ತಿಗಳಿಗೆ ಮಹಿಳೆಯರು ಮಾಲೀಕರು : ವಿಶ್ವ ಬ್ಯಾಂಕ್‌ ಅಧ್ಯಯನ
ಮಹಿಳಾ ಸಬಲೀಕರಣದ ಕುರಿತು ಹೆಚ್ಚಾಗುತ್ತಿರುವ ಜಾಗೃತಿ, ಸರ್ಕಾರದ ಉತ್ತೇಜನ ಕ್ರಮಗಳು ಸೇರಿ ಕರ್ನಾಟಕದ ಶೇ.67.6 ಆಸ್ತಿಗಳಿಗೆ ಮಹಿಳೆಯರೂ ಮಾಲೀಕರಾಗಿದ್ದಾರೆ (Female Ownership). ಮಹಿಳೆಯರೇ ಪೂರ್ಣ ಮಾಲೀಕರಾಗಿರುವ ಹಾಗೂ ಜಂಟಿ ಮಾಲೀಕತ್ವ ಹೊಂದಿರುವ ಆಸ್ತಿಗಳನ್ನು ಪರಿಗಣಿಸಿ ವಿಶ್ವಬ್ಯಾಂಕ್‌ ಸಮೂಹದ ಅಧ್ಯಯನ ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Viral Video: ರೈಲ್ವೆ ಸಚಿವರ ಕ್ಲೀನಿಂಗ್ ವಿಡಿಯೋ ವೈರಲ್!, ಈಗ ವಂದೇ ಭಾರತ್ ಟ್ರೈನ್‌ಗಳಲ್ಲಿ ಸ್ವಚ್ಛತಾ ವ್ಯವಸ್ಥೆ ಬದಲು
ವಂದೇ ಭಾರತ್ ರೈಲುಗಳಲ್ಲಿ (Vande Bharat Train) ಪ್ರಯಾಣಿಕರು ಸ್ವಚ್ಛತೆಯನ್ನು ಕಾಪಾಡುತ್ತಿಲ್ಲ ಎಂಬ ಮಾಧ್ಯಮಗಳ ವರದಿಯ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ರೈಲ್ವೆ ಇಲಾಖೆಯ, ಸ್ವಚ್ಛತೆ ಕೈಗೊಳ್ಳುವ ವ್ಯವಸ್ಥೆಯನ್ನು ಬದಲಿಸಿದೆ. ವಿಮಾನಗಳಲ್ಲಿ ಕೈಗೊಳ್ಳಲಾಗುವ ಸ್ವಚ್ಛತೆಯ ರೀತಿಯಲ್ಲಿ ರೈಲುಗಳಲ್ಲಿ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಸೂಚಿಸಿದ್ದಾರೆ. ಇದೇ ವೇಳೆ, ಬದಲಾದ ಸ್ವಚ್ಛತಾ ವ್ಯವಸ್ಥೆಯ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿದ್ದು, ಸಾಕಷ್ಟು ವೈರಲ್ ಆಗಿದೆ.‌ ವೈರಲ್‌ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

  1. Odisha Health Minister Dies: ಎಎಸ್‌ಐ ಗುಂಡೇಟಿನಿಂದ ಗಾಯಗೊಂಡಿದ್ದಒಡಿಶಾ ಸಚಿವ ನಬಾ ದಾಸ್‌ ನಿಧನ
  2. Kshatriya Convention : ಕ್ಷತ್ರಿಯ ಸಮಾಜದ ಜತೆಗೆ ಸರ್ಕಾರ ಸದಾ ಇರುತ್ತದೆ: ಸಿಎಂ ಬಸವರಾಜ ಬೊಮ್ಮಾಯಿ ಭರವಸೆ
  3. Gujarat riots | ಗುಜರಾತ್‌ ಹತ್ಯಾಕಾಂಡ ಹಿಂದುಗಳ ಪರಾಕ್ರಮ: ವಿವಾದಾತ್ಮಕ ಹೇಳಿಕೆ ನೀಡಿದ ವಿಹಿಂಪ ನಾಯಕ ಶರಣ್‌ ಪಂಪ್‌ವೆಲ್‌
  4. Kerala Governor: ನನ್ನನ್ನು ಹಿಂದೂ ಎಂದು ಕರೆಯಿರಿ: ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್
  5. Actor Mandeep Roy : ಹಿರಿಯ ನಟ ಮನ್‌ದೀಪ್ ರಾಯ್‌ ನಿಧನ
  6. Giant Wheel Accident: ಜೈಂಟ್ ವ್ಹೀಲ್‌ಗೆ ಸಿಕ್ಕಿ ಪೂರಾ ಕಿತ್ತು ಬಂದ ಬಾಲಕಿ ತಲೆಕೂದಲು: ಶ್ರೀರಂಗಪಟ್ಟಣದಲ್ಲಿ ಅವಘಡ
  7. ಸಂಡೇ ರೀಡ್‌ | ಕ್ಯಾಪ್ಟನ್‌ ಗೋಪಿನಾಥ್‌ ಜೀವನದ ಒಳʼಹರಿವುʼ ತೆರೆದಿಡುವ ಪುಸ್ತಕ ʼನಮ್ಮ ಭಾರತʼ
  8. ಸಾಲಭಂಜಿಕೆ ಅಂಕಣ: ಎರಡು ಕವಿತೆಗಳಲ್ಲಿ ಒಂದೇ ಹಾಡು
  9. ಪೋಸ್ಟ್‌ ಬಾಕ್ಸ್‌ 143 ಅಂಕಣ: ತರ್ಕವಿಲ್ಲ, ಅರ್ಥವಿಲ್ಲ, ಬರಿಯ ಪ್ರೀತಿಗೀತ!
Exit mobile version