Site icon Vistara News

ವಿಸ್ತಾರ Top 10 News: ದಾಖಲೆ ಬರೆದ ಮೋದಿ ರೋಡ್‌ ಶೋ, ಕೈಗೆ ಬಲ ತುಂಬಿದ ಸೋನಿಯಾ: ಪ್ರಮುಖ ಸುದ್ದಿಗಳ ಸಂಚಯ

#image_title

1. ದಾಖಲೆ ಬರೆದ ಮೋದಿ ರೋಡ್ ಶೋ: ನಮೋ ಬೆಂಗಳೂರು ಸಂಚಾರಕ್ಕೆ 10 ಲಕ್ಷ ಜನರು ಸಾಕ್ಷಿ
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಂಗಳೂರಿನಲ್ಲಿ ನಡೆಸಿದ 26.5 ಕಿ.ಮೀ. ರೋಡ್‌ ಶೋ ಹೊಸ ದಾಖಲೆ ಬರೆಯಿತು. ಇದನ್ನು ಸುಮಾರು 10 ಲಕ್ಷ ಜನರು ವೀಕ್ಷಿಸಿದರು. 13 ವಿಧಾನಸಭಾ ಕ್ಷೇತ್ರದಲ್ಲಿ ಹಾದುಹೋದ ಈ ರೋಡ್‌ ಶೋ ಇಡೀ ಬೆಂಗಳೂರಿನಲ್ಲಿ ಸಂಚಲನ ಮೂಡಿಸಿತು.
ಪ್ರಮುಖ ವರದಿಗಳು : 1. ಮುಗಿಲುಮುಟ್ಟಿದ ʻಮೋದಿ ಮೋದಿʼ ಘೋಷಣೆ, ತೂರಿಬಂದ ಮೊಬೈಲ್
2. 13 ಕ್ಷೇತ್ರಗಳಲ್ಲಿ ಹಾದು ಹೋದ ಮೋದಿ ರೋಡ್‌ ಶೋ; ಬೆಂಗಳೂರಿನಾದ್ಯಂತ ಸಂಚಲನ
3. ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ; ಜನರ ಸಂಭ್ರಮದ ಕಲರ್‌ಫುಲ್‌ ಚಿತ್ರಗಳು ಇಲ್ಲಿವೆ
4. ರಾಮಕೃಷ್ಣ ಮಠದ ಸ್ವಾಮೀಜಿಗಳಿಂದ ಪುಸ್ತಕ ಉಡುಗೊರೆ; ಭಕ್ತಿಯಿಂದ ಸ್ವೀಕರಿಸಿದ ಮೋದಿ

2. ಕಾಂಗ್ರೆಸ್​ಗೆ ಲಿಂಗಾಯತರು ತಕ್ಕ ಪಾಠ ಕಲಿಸುತ್ತಾರೆ ಎಂದು ಗುಡುಗಿದ ಮೋದಿ
ಬೆಂಗಳೂರಿನಲ್ಲಿ ಮೆಗಾ ರೋಡ್‌ ಶೋ ನಡೆಸಿದ ನರೇಂದ್ರ ಮೋದಿ ಬಾದಾಮಿ ಮತ್ತು ಹಾವೇರಿಯಲ್ಲಿ ಬೃಹತ್‌ ಸಮಾವೇಶಗಳಲ್ಲಿ ಭಾಗಿಯಾದರು. ಇಲ್ಲಿ ಕಾಂಗ್ರೆಸ್‌ನ ಗ್ಯಾರಂಟಿಗಳನ್ನು ಲೇವಡಿ ಮಾಡಿದರು. ಕಾಂಗ್ರೆಸ್‌ಗೆ ಲಿಂಗಾಯತರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು. ಬಾದಾಮಿ ಬಿಟ್ಟು ಓಡಿದ ಸಿದ್ದರಾಮಯ್ಯ ಎಂದು ಗೇಲಿ ಮಾಡಿದರು.
1. ಬಿಜೆಪಿಗಾಗಿ ಕರ್ನಾಟಕದ ಜನರೇ ಚುನಾವಣೆ ಮಾಡುತ್ತಿದ್ದಾರೆ ಎಂದ ಪ್ರಧಾನಿ ಮೋದಿ
2. ಕಾಂಗ್ರೆಸ್‌ ಗ್ಯಾರಂಟಿ ಸುಳ್ಳು, ನಂಬಿದರೆ ಮುಳ್ಳು; ಬೊಮ್ಮಾಯಿ ತವರಲ್ಲಿ ಮೋದಿ ಅಬ್ಬರ
3. ಭಾನುವಾರ ರಾಜಧಾನಿಯಲ್ಲಿ ನಡೆಯಲಿದೆ ಇನ್ನೊಂದು ನಮೋ ಮೆಗಾ ರೋಡ್‌ ಶೋ

3. ಮೋದಿ ಅಲೆ ನಡುವೆಯೂ ಕಾಂಗ್ರೆಸ್​​ಗೆ ಹುರುಪು ತುಂಬಿದ ಸೋನಿಯಾ
ಕಳೆದ ಎರಡು ದಿನಗಳಿಂದ ಮೋದಿಮಯವಾಗಿದ್ದ ರಾಜ್ಯ ಚುನಾವಣಾ ಕಣಕ್ಕೆ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಪ್ರವೇಶ ಮಾಡುವ ಮೂಲಕ ಕೈ ಪಾಳಯಕ್ಕೆ ಹುರುಪು ತುಂಬಿದರು. ಅವರು ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವಂತೆ ಮನವಿ ಮಾಡಿದರು. ಈ ನಡುವೆ, ಭಾನುವಾರ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಬೆಂಗಳೂರಿನಲ್ಲಿ ಕೊನೆಯ ಕಸರತ್ತು ನಡೆಸಲಿದ್ದಾರೆ.
ಈ ವರದಿ ಓದಿ: ಲೂಟಿ ಸರ್ಕಾರ ಬಿಡಿ, ಕಾಂಗ್ರೆಸ್‌ಗೆ ಮತ ಕೊಡಿ; ಹುಬ್ಬಳ್ಳಿಯಲ್ಲಿ ಸೋನಿಯಾ ಗಾಂಧಿ ಕರೆ

4. ಎಸ್​ಡಿಪಿಐ, ಕಾಂಗ್ರೆಸ್​ ಮೈತ್ರಿಗೆ ಸಿಕ್ತು ಹೊಸ ಸಾಕ್ಷ್ಯ: ಉಡುಪಿಯಲ್ಲಿ ಕೈ ಅಭ್ಯರ್ಥಿಗೆ ಎಸ್‌ಡಿಪಿಐ ಬೆಂಬಲ
ಮಹತ್ವದ ಬೆಳವಣಿಗೆಯಲ್ಲಿ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ(ಎಸ್‌ಡಿಪಿಐ)ವು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದೆ. ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿರುವ ಪ್ರಸಾದ್‌ ಕಾಂಚನ್‌ ಅವರಿಗೆ ಬೆಂಬಲ ನೀಡಿದೆ. ಕಾಂಗ್ರೆಸ್‌ ಬಜರಂಗ ದಳ ನಿಷೇಧ ಮಾಡುವ ಭರವಸೆ ನೀಡಿದ ಬೆನ್ನಿಗೇ ಈ ವಿದ್ಯಮಾನ ನಡೆದಿದೆ. ಈ ಮೂಲಕ ಕಾಂಗ್ರೆಸ್‌-ಎಸ್‌ಡಿಪಿಐ ಒಳಮೈತ್ರಿ ಬಯಲಾಗಿದೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

5. ಖರ್ಗೆ ಕುಟುಂಬದ ಸರ್ವನಾಶ ಮಾಡ್ತೀನಿ ಅಂದ್ರಾ ಬಿಜೆಪಿ ಅಭ್ಯರ್ಥಿ ಮಣಿಕಂಠ?
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತವರ ಕುಟುಂಬದವರ ಹತ್ಯೆಗೆ ಸಂಚು ರೂಪಿಸಲಾಗಿದ್ದು, ಅವರಿಗೆ ಜೀವ ಬೆದರಿಕೆ ಇದೆ ಎಂದು ಕಾಂಗ್ರೆಸ್‌ ಗಂಭೀರ ಆರೋಪ ಮಾಡಿದ್ದು, ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್‌ ಈ ಬಗ್ಗೆ ಮಾತನಾಡಿದ್ದಾರೆನ್ನಲಾದ ಆಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ವರದಿ: ಮಣಿಕಂಠನ ಆಡಿಯೊ ಅಸಲಿಯೇ ಅಲ್ಲ, ಕಟ್‌ ಆ್ಯಂಡ್ ಪೇಸ್ಟ್‌ ಎಂದ ಅಣ್ಣಾಮಲೈ

6. ಕರಾವಳಿ, ಮಲೆನಾಡಲ್ಲಿ ಯೋಗಿ ಹವಾ; ಬಜರಂಗದಳ ನಿಷೇಧ​ ಸಂಚಿಗೆ ಆಕ್ರೋಶ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಶನಿವಾರ ಕರಾವಳಿ ಮತ್ತು ಮಲೆನಾಡಿನಲ್ಲಿ ಚುನಾವಣಾ ಪ್ರಚಾರದ ಮೂಲಕ ಧೂಳೆಬ್ಬಿಸಿದರು. ಹಿಂದುತ್ವ ಮತ್ತು ಬಿಜೆಪಿಯ ಭದ್ರಕೋಟೆಯಾಗಿರುವ ಎರಡೂ ಭಾಗಗಳಲ್ಲಿ ಹಿಂದುತ್ವದ ಫೈರ್‌ ಬ್ರಾಂಡ್‌ನ ನಾಯಕನನ್ನು ಕರೆತಂದು ಬಿಜೆಪಿ ಪ್ರಚಾರ ನಡೆಸಿದೆ. ಬಜರಂಗದಳ ಬ್ಯಾನ್‌ ಮಾಡುವುದು ಸಾಧ್ಯವೇ ಇಲ್ಲ ಎಂದು ಈ ಸಂದರ್ಭದಲ್ಲಿ ಸವಾಲು ಹಾಕಿದರು. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

7. ಎಲೆಕ್ಷನ್​ ಹೊತ್ತಲ್ಲೇ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಐಟಿ ರೇಡ್​: 20 ಕೋಟಿ ಮೌಲ್ಯದ ನಗ, ನಗದು ಜಪ್ತಿ
ವಿಧಾನಸಭಾ ಚುನಾವಣೆ ಮತದಾನಕ್ಕೆ ಕೇವಲ ನಾಲ್ಕು ದಿನ ಬಾಕಿ ಇದೆ. ಈ ವೇಳೆ ಹಣದ ವಹಿವಾಟು ಜಾಸ್ತಿಯಾಗುತ್ತದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರು ಹಾಗೂ‌ ಮೈಸೂರಿನಲ್ಲಿ ಫೈನಾನ್ಶಿಯರ್‌ಗಳ ಮನೆಗಳ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ದಾಳಿ ನಡೆಸಿ 20 ಕೋಟಿ ರೂ. ಮೌಲ್ಯದ ನಗದು ಮತ್ತು ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. NEET Exam 2023: ಮೇ 7ಕ್ಕೆ ನೀಟ್‌ ಪರೀಕ್ಷೆ; ಎಷ್ಟು ಗಂಟೆಯೊಳಗೆ ಪರೀಕ್ಷಾ ಕೇಂದ್ರದಲ್ಲಿರಬೇಕು?
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮೇ 7ರಂದು ನೀಟ್‌ ಪರೀಕ್ಷೆಯನ್ನು ನಡೆಸುತ್ತಿದೆ. ಈ ಬಾರಿ ದೇಶಾದ್ಯಂತ 499 ನಗರಗಳಲ್ಲಿರುವ ವಿವಿಧ ಕೇಂದ್ರಗಳು ಸೇರಿದಂತೆ ಭಾರತದ ಹೊರಗಿನ 14 ನಗರಗಳಲ್ಲೂ ನೀಟ್‌ ಪರೀಕ್ಷೆಯನ್ನು (NEET Exam 2023) ನಡೆಸಲಾಗುತ್ತಿದೆ. ಪರೀಕ್ಷೆಗೆ ಸಂಬಂಧಿಸಿದ ಎಲ್ಲ ವಿವರಗಳಿಗೆ ಈ ಲಿಂಕ್ ‌ಕ್ಲಿಕ್‌ ಮಾಡಿ

9. ಖಲಿಸ್ತಾನಿ ಕಮಾಂಡೊ ಫೋರ್ಸ್‌ ಮುಖ್ಯಸ್ಥ ಪರಮ್‌ಜಿತ್‌ ಸಿಂಗ್‌ ಪಂಜ್ವಾರ್‌ ಪಾಕಿಸ್ತಾನದಲ್ಲಿ ಹತ್ಯೆ
ಖಲಿಸ್ತಾನಿ ಉಗ್ರ ಎಂದು ಪರಿಗಣಿಸಲ್ಪಟ್ಟಿದ್ದ, ಖಲಿಸ್ತಾನ್​ ಕಮಾಂಡೋ ಫೋರ್ಸ್​ (KCF)ನ ಮುಖ್ಯಸ್ಥನಾಗಿದ್ದ ಪರಮ್​ಜಿತ್​ಸಿಂಗ್​ ಪಂಜ್ವಾರ್ ಅಲಿಯಾಸ್ ಮಲಿಕ್ ಸರ್ದಾರ್ ಸಿಂಗ್​​ನನ್ನು ಶನಿವಾರ (ಏಪ್ರಿಲ್‌ 7) ಪಾಕಿಸ್ತಾನದ ಲಾಹೋರ್​​ನ ಜೋಹಾರ್​ ಪಟ್ಟಣದಲ್ಲಿ ಹತ್ಯೆ ಮಾಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. Viral News: 185 ಕಾಲೇಜುಗಳ ಆಫರ್ ಪಡೆದು ಗಿನ್ನೆಸ್‌ ದಾಖಲೆ ಬರೆದ 16 ವರ್ಷದ ವಿದ್ಯಾರ್ಥಿ!
ಅಮೆರಿಕದ ಮಹಾ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ 185 ಕಾಲೇಜುಗಳಲ್ಲಿ ಅಡ್ಮಿಶನ್‌ಗೆ ಆಹ್ವಾನ ಪಡೆದಿದ್ದು, 1 ಕೋಟಿ ಡಾಲರ್‌ ಸ್ಕಾಲರ್‌ಶಿಪ್‌ ಆಫರ್‌ ಪಡೆದಿದ್ದಾನೆ! ಗಿನ್ನೆಸ್‌ ದಾಖಲೆ ಪುಸ್ತಕದಲ್ಲಿ (Guinness world record) ತನ್ನ ಹೆಸರು ಬರೆಸಿಕೊಂಡಿರುವ ಇವನಿಗಿನ್ನೂ 16 ವರ್ಷ! ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version