1. ರಕ್ಕಸ ಮಳೆಗೆ ಮುಳುಗಿದ ಬೆಂಗಳೂರು: ಅಂಡರ್ ಪಾಸ್‌ನಲ್ಲಿ ಕಾರು ಮುಳುಗಿ ಯುವತಿ ಸಾವು
ರಾಜಧಾನಿ ಬೆಂಗಳೂರಿನಲ್ಲಿ ಸುರಿದ ರಕ್ಕಸ ಮಳೆ ಯುವತಿಯೊಬ್ಬಳ ಪ್ರಾಣವನ್ನೇ ಕಸಿದಿದೆ. ಬೆಂಗಳೂರಿನಲ್ಲಿ ಉದ್ಯೋಗ ಪಡೆದಿದ್ದ ಬಾನುರೇಖಾ ಆಂಧ್ರದ ವಿಜಯವಾಡಾದಲ್ಲಿರುವ ತಮ್ಮ ಕುಟುಂಬಿಕರನ್ನು ಕರೆಸಿಕೊಂಡು ಕಾರಿನಲ್ಲಿ ಬೆಂಗಳೂರು ಸುತ್ತಿಸುತ್ತಿದ್ದರು. ಈ ನಡುವೆ ಒಮ್ಮೆಗೇ ಸುರಿದ ಭಾರಿ ಮಳೆಯಿಂದಾಗಿ ಕೆ.ಆರ್ ಸರ್ಕಲ್ ಅಂಡರ್ ಪಾಸ್‌ನಲ್ಲಿ ನೀರು ತುಂಬಿತ್ತು. ಇದನ್ನು ಅರಿಯದೆ ಕಾರು ನುಗ್ಗಿದ ಪರಿಣಾಮವಾಗಿ ಅದು ಮುಳುಗಿತು. ಕಾರಿನಲ್ಲಿದ್ದ ಏಳು ಮಂದಿಯಲ್ಲಿ ಆರು ಮಂದಿ ಪೂರ್ಣ ಮುಳುಗಿದ ಕಾರಿನಿಂದ ಹೇಗೋ ಹೊರಬಂದು ಟಾಪ್‌ನಲ್ಲಿ ನಿಂತರೆ ಕಾರಿನೊಳಗೆ ಸಿಕ್ಕಿ ಹಾಕಿಕೊಂಡ ಭಾನುರೇಖಾ (22) ಪ್ರಾಣ ಕಳೆದುಕೊಂಡರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: ಯುವತಿ ಕುಟಂಬಕ್ಕೆ 5 ಲಕ್ಷ ರೂ.: ಅವೈಜ್ಞಾನಿಕ ಅಂಡರ್ ಪಾಸ್ ಸರಿಪಡಿಸುತ್ತೇವೆ: ಸಿಸಿದ್ದರಾಮಯ್ಯ
ಪೂರಕ ಸುದ್ದಿ: ರಾಜ್ಯದಲ್ಲಿ ಇನ್ನೂ ಎರಡು ದಿನ ವರುಣಾರ್ಭಟ; ಯಾವ್ಯಾವ ಜಿಲ್ಲೆಗಳಿಗೆ ಅಲರ್ಟ್?
2. ರಾಜ್ಯಾದ್ಯಂತ ರಣಭೀಕರ ಮಳೆ: ಕೆಲವೇ ನಿಮಿಷದ ವರ್ಷಧಾರೆಗೆ ಮೂವರು ಬಲಿ, ಭಾರಿ ನಾಶ
ರಾಜ್ಯದ ವಿವಿಧೆಡೆ ಭಾನುವಾರ ಸುರಿದ ಭಾರಿ ಮಳೆ ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ. ಹಲವೆಡೆ ಬಿರುಸಿನ ಮಳೆಗೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿದ್ದು, ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಬೆಂಗಳೂರಿನಲ್ಲಿ ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಿ ಯುವತಿಯೊಬ್ಬರು ಮೃತಪಟ್ಟಿದ್ದರೆ, ಕಾಫಿನಾಡಿನಲ್ಲಿ ಮರ ಬಿದ್ದು ಬೈಕ್ ಸವಾರರೊಬ್ಬರು ಕೊನೆಯುಸಿರೆಳೆದಿದ್ದಾರೆ. ಅದೇ ರೀತಿ ಕೊಪ್ಪಳದಲ್ಲಿ ಸಿಡಿಲು ಬಡಿದು ಬಾಲಕ ಮೃತಪಟ್ಟಿದ್ದಾನೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3. ಪೂರ್ಣಾವಧಿ ಸಂಪುಟ ರಚನೆವರೆಗೆ ಹಾಲಿ ಸಚಿವರಿಗೆ ಖಾತೆ ಡೌಟು, ಯಾವುದೂ ಸದ್ಯಕ್ಕಿಲ್ಲ!
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಹಾಗೂ ಎಂಟು ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ, ಹೊಸ ಸಚಿವರಿಗೆ ಖಾತೆ ಹಂಚಿಕೆ ಸದ್ಯಕ್ಕೆ ನಡೆಯುವ ಸಾಧ್ಯತೆಗಳಿಲ್ಲ. ಅದರ ನಡುವೆ ಮುಂದಿನ ಹಂತದ ಸಂಪುಟ ವಿಸ್ತರಣೆಯೂ ವಿಳಂಬವಾಗುವ ಸಾಧ್ಯತೆ ಕಂಡುಬಂದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. ಬಿಜೆಪಿ ಸರ್ಕಾರದ ಅವಧಿಯ ಎಲ್ಲ ಹಗರಣಗಳ ಸಮಗ್ರ ತನಿಖೆಗೆ ಸರ್ಕಾರ ಸಿದ್ಧತೆ
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಪಿಎಸ್‌ಐ ಹಗರಣ 40% ಹಗರಣವೂ ಸೇರಿದಂತೆ ಎಲ್ಲ ಹಗರಣಗಳ ತನಿಖೆಯನ್ನು ಕಾಂಗ್ರೆಸ್ ಸರ್ಕಾರ ನಡೆಸಲಿದೆ ಎಂದು ನೂತನ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ. ವಿಸ್ತಾರ ನ್ಯೂಸ್ ಜತೆಗೆ ಮಾತನಾಡಿದ ಅವರು, ಪಿಎಸ್‌ಐ , ಬಿಟ್ ಕಾಯಿನ್ ಸೇರಿದಂತೆ ಪ್ರತಿಯೊಂದು ಇಲಾಖೆಯಲ್ಲಿ ನಡೆದಿರುವ ಹಗರಣವನ್ನು ಬಯಲಿಗೆಳೆಯಲಾಗುವುದು ಎಂದು ಹೇಳಿದರು. ಪೂರ್ಣ ವರದಿಗೆ ಕ್ಲಿಕ್ ಮಾಡಿ
5. ನಂಗೂ ಸಿದ್ದರಾಮಯ್ಯಗೂ ಹಿಡಿಸಿಹಾಕೋ ಕೆಲಸ ಮಾಡಬೇಡಿ: ಡಿಕೆಶಿ ಖಡಕ್ ವಾರ್ನಿಂಗ್
ʻʻಇಲ್ಲಿ ವ್ಯಕ್ತಿಗಿಂತಲೂ ಪಕ್ಷ ಮುಖ್ಯ. ನಾವೆಲ್ಲರೂ ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡಬೇಕು. ಗಾಂಧಿ ಕುಟುಂಬದವರು, ಮಲ್ಲಿಕಾರ್ಜುನ ಖರ್ಗೆ ಅವರು ಏನು ಹೇಳಿದ್ದಾರೋ ಅದೇ ನಮಗೆ ವೇದ ವಾಕ್ಯʼʼ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಅದರ ಜತೆಗೇ ಇನ್ನೊಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಅದೇನೆಂದರೆ ನನ್ನ ಮತ್ತು ಸಿದ್ದರಾಮಯ್ಯ ನಡುವೆ ಸಿಕ್ಕಿಸಿಹಾಕೋ ಕೆಲಸಕ್ಕೆ ಬರ್ಬೇಡಿ ಅಂತ! ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ಕಾಂಗ್ರೆಸ್ ಗ್ಯಾರಂಟಿ ಯೋಜನೆ ಜಾರಿ ಮಾಡೋದು ಗ್ಯಾರಂಟಿ ಎಂದ ಯಡಿಯೂರಪ್ಪ!
ಕಾಂಗ್ರೆಸ್‌ನವರು ಶನಿವಾರ ಸಂಪುಟ ಸಭೆಯಲ್ಲಿ ಗ್ಯಾರಂಟಿ ಜಾರಿ ಬಗ್ಗೆ ಒಪ್ಪಿಗೆ ಪಡೆದಿದ್ದಾರೆ. ಈಗಾಗಲೇ ಗ್ಯಾರಂಟಿಗಳಿಗೆ ಸಂಬಂಧಿಸಿದಂತೆ ಸರ್ಕಾರಿ ಆಜ್ಞೆಗಳನ್ನು ಹೊರಡಿಸಿದ್ದಾರೆ. ನಾನು ಅನಗತ್ಯವಾಗಿ ಟೀಕೆ ಟಿಪ್ಪಣಿ ಮಾಡಲು ಹೋಗಲ್ಲ. ಅವರು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ವಿಶ್ವಾಸ ನನಗೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ಸೋಲಿಗೆ 10 ಕಾರಣ ಹುಡುಕಿದ ಬಿಜೆಪಿ: ಮೊದಲ 3 ಸ್ಥಾನದಲ್ಲಿ 40%, ಲಿಂಗಾಯತ, ಗ್ಯಾರಂಟಿ
ಚುನಾವಣೆಯಲ್ಲಿ ಆಗಿರುವ ಹೀನಾಯ ಸೋಲಿನ ವಿಶ್ಲೇಷಣೆ ಮಾಡಿರುವ ಕರ್ನಾಟಕ ಬಿಜೆಪಿ 10 ಕಾರಣಗಳನ್ನು ಪಟ್ಟಿ ಮಾಡಿದೆ. ಅದರಲ್ಲಿ 40% ಕಮಿಷನ್ ಆರೋಪ ಮತ್ತು ಲಿಂಗಾಯತ ವಿವಾದಕ್ಕೆ ಸ್ಪಷ್ಟ ತಿರುಗೇಟು ನೀಡಲು ವಿಫಲವಾಗಿದ್ದು ಹಾಗೂ ಕಾಂಗ್ರೆಸ್‌ನ ಗ್ಯಾರಂಟಿಗಳಿಗೆ ಟಾಪ್‌ನಲ್ಲಿವೆ. ಪೂರ್ಣ ವರದಿಗೆ ಲಿಂಕ್ ಕ್ಲಿಕ್ ಮಾಡಿ
8.G20 Meeting: ಕಾಶ್ಮೀರದಲ್ಲಿ ಸೋಮವಾರದಿಂದ ಜಿ20 ಸಭೆ; ಹೇಗಿದೆ ಸಿದ್ಧತೆ? ಹೇಗಿದೆ ಭದ್ರತೆ?
ಕಲ್ಲು ತೂರಾಟ, ಉಗ್ರರ ದಾಳಿ, ಪಾಕಿಸ್ತಾನದ ಪರ ಘೋಷಣೆಗಳೇ ಕೇಳಿಸುತ್ತಿದ್ದ ಜಮ್ಮು-ಕಾಶ್ಮೀರದಲ್ಲಿ ಬದಲಾವಣೆಯ ಯುಗ ಆರಂಭವಾಗಿದೆ. ಅದರಲ್ಲೂ, ಸೋಮವಾರದಿಂದ ಎರಡು ದಿನಗಳವರೆಗೆ ಜಿ-20 ಶೃಂಗಸಭೆ (G20 Meeting) ನಡೆಯಲಿದ್ದು, 2019ರಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಸಭೆಗೆ ಶ್ರೀನಗರ ಸಾಕ್ಷಿಯಾಗಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. TikTok: ಹತ್ತು ಗಂಟೆ ಕಾಲ ಟಿಕ್‌ಟಾಕ್ ನೋಡಿ, ಹಣ ಗಳಿಸಿ! ಅರ್ಜಿ ಸಲ್ಲಿಸಲು ಮೇ 31 ಕೊನೆ ದಿನ
ಬಹುತೇಕ ಎಲ್ಲರೂ ಸೋಷಿಯಲ್ ಮೀಡಿಯಾ ಆ್ಯಪ್‌ಗಳನ್ನು ಬಳಸುತ್ತಾರೆ. ಟೈಮ್ ಪಾಸ್ ಮಾಡುವುದಕ್ಕಾಗಿ ಹೆಚ್ಚಿನವರು ಈ ಆ್ಯಪ್‌ಗಳನ್ನು ಮೊರೆ ಹೋಗುತ್ತಾರೆ. ಆದರೆ, ಹೀಗ ಟೈಮ್ ಪಾಸ್ ಮಾಡುತ್ತಲೇ ಹಣ ಗಳಿಸುವುದಾದರೆ ಹೇಗೆ? ಹೌದು, ಟಿಕ್‌ಟಾಕ್‌ನಲ್ಲಿ (TikTok) 10 ಗಂಟೆಗಳ ಸ್ಕ್ರಾಲಿಂಗ್ ಮಾಡುತ್ತ ಕಾಲ ಕಳೆದರೆ ಅಂಥವರಿಗೆ ಹಣವನ್ನು ನೀಡುವ ಆಫರ್‌ವನ್ನು ಕಂಪನಿಯೊಂದು ನೀಡಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಮುಸ್ಲಿಂ ಜತೆ ಬಿಜೆಪಿ ನಾಯಕನ ಪುತ್ರಿ ವಿವಾಹ, ಜಾಲತಾಣಗಳಲ್ಲಿ ಆಕ್ರೋಶದ ಬೆನ್ನಲ್ಲೇ ಮದುವೆ ರದ್ದು
ಉತ್ತರಾಖಂಡ ಬಿಜೆಪಿ ನಾಯಕನ ಪುತ್ರಿಯು ಮುಸ್ಲಿಂ ಯುವಕನ ಜತೆ ಮದುವೆಯಾಗುವ ಕುರಿತ ಮದುವೆ ಆಮಂತ್ರಣ ಪತ್ರಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಭಾರಿ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಬಿಜೆಪಿ ನಾಯಕ ತಮ್ಮ ಮಗಳ ಮದುವೆಯನ್ನೇ ರದ್ದುಗೊಳಿಸಿದ್ದಾರೆ. ಉತ್ತರಾಖಂಡದ ಪೌರಿ ಗರ್ವಾಲ್ ಮುಖಂಡ ಯಶಪಾಲ್ ಬೇನಮ್ ಅವರು ಮದುವೆಯನ್ನೇ ರದ್ದುಗೊಳಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
vistara-top-10-news: Major developments of the day