Three killed in rain fury, Massive disaster has been created across the KarnatakaKarnataka Rain: ರಾಜ್ಯದಲ್ಲಿ ಅಬ್ಬರಿಸಿದ ವರ್ಷ; ಮಳೆ ಅನಾಹುತಕ್ಕೆ ಮೂವರು ಬಲಿ Vistara News
Connect with us

ಕರ್ನಾಟಕ

Karnataka Rain: ರಾಜ್ಯದಲ್ಲಿ ಅಬ್ಬರಿಸಿದ ವರ್ಷ; ಮಳೆ ಅನಾಹುತಕ್ಕೆ ಮೂವರು ಬಲಿ

Karnataka Rain: ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ತುಮಕೂರು ಭಾಗದಲ್ಲಿ ಸುರಿದ ಭಾರಿ ಮಳೆ ಸಾಕಷ್ಟು ಅನಾಹುತ ಸೃಷ್ಟಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

VISTARANEWS.COM


on

Karnataka Rain Heavy rains lash parts of Karnataka
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಿಕ್ಕಹಳ್ಳ ಬಳಿ ಮರ ಬಿದ್ದು ಸ್ಕೂಟರ್‌ ಸವಾರರೊಬ್ಬರು ಮೃತಪಟ್ಟಿದ್ದಾರೆ.
Koo

ಬೆಂಗಳೂರು: ರಾಜ್ಯದ ವಿವಿಧೆಡೆ ಭಾನುವಾರ ಸುರಿದ ಭಾರಿ ಮಳೆ (Karnataka Rain) ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ. ಹಲವೆಡೆ ಬಿರುಸಿನ ಮಳೆಗೆ ವಿದ್ಯುತ್‌ ಕಂಬಗಳು, ಮರಗಳು ಧರೆಗುರುಳಿದ್ದು, ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಬೆಂಗಳೂರಿನಲ್ಲಿ ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಿ ಯುವತಿಯೊಬ್ಬರು ಮೃತಪಟ್ಟಿದ್ದರೆ, ಕಾಫಿನಾಡಿನಲ್ಲಿ ಮರ ಬಿದ್ದು ಬೈಕ್‌ ಸವಾರರೊಬ್ಬರು ಕೊನೆಯುಸಿರೆಳೆದಿದ್ದಾರೆ. ಅದೇ ರೀತಿ ಕೊಪ್ಪಳದಲ್ಲಿ ಸಿಡಿಲು ಬಡಿದು ಬಾಲಕ ಮೃತಪಟ್ಟಿದ್ದಾನೆ. ಇದಷ್ಟೇ ಅಲ್ಲದೆ ಮಳೆಯಿಂದ ಹಲವು ರೀತಿಯ ಅನಾಹುತಗಳು ನಡೆದಿವೆ.

ಬೆಂಗಳೂರಲ್ಲಿ ಬಿರುಗಾಳಿ ಮಳೆ; ಅಂಡರ್‌ಪಾಸ್‌ನಡಿ ಸಿಲುಕಿ ಮಹಿಳೆ ಸಾವು, ಆರು ಮಂದಿ ಪಾರು

ಬೆಂಗಳೂರು: ಭಾರಿ ಮಳೆಯಿಂದ ನಗರದ ಕೆ.ಆರ್‌. ಸರ್ಕಲ್ ಬಳಿಯ ಅಂಡರ್ ಪಾಸ್‌ ಜಲಾವೃತವಾಗಿತ್ತು. ಆ ಮಾರ್ಗದಲ್ಲಿ ಬಂದ ಕಾರೊಂದು ನೀರಿನಲ್ಲಿ ಮುಳುಗಡೆಯಾಗಿದ್ದರಿಂದ ಒಳಗೆ ಚಾಲಕ ಸೇರಿ ಏಳು ಜನ ಸಿಲುಕಿಕೊಂಡಿದ್ದರು. ಹೀಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಆರು ಮಂದಿಯನ್ನು ರಕ್ಷಣೆ ಮಾಡಿದ್ದು, ಒಬ್ಬ ಯುವತಿ ಮೃತಪಟ್ಟಿದ್ದಾರೆ.

ಹೈದರಾಬಾದ್‌ನಿಂದ ಬೆಂಗಳೂರಿಗೆ ಕಾರಿನಲ್ಲಿ ಬಂದಿದ್ದ ಆರು ಮಂದಿ ಅಂಡರ್‌ಪಾಸ್‌ ನಡಿ ಸಿಲುಕಿದ್ದರು. ಸ್ಥಳೀಯರು ಹಾಗೂ ಪೊಲೀಸರು ಸೇರಿ ಸಿಲುಕಿದವರನ್ನು ರಕ್ಷಣೆ ಮಾಡಿದರು. ಇದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯೊಬ್ಬಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅವರ ಸ್ಥಿತಿ ಗಂಭೀರವಾಗಿದ್ದರಿಂದ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ | Bengaluru Rain: ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಿ ಯುವತಿ ಮೃತ್ಯು, ಆರು ಮಂದಿ ರಕ್ಷಣೆ; ಹೇಗಿತ್ತು ಕಾರ್ಯಾಚರಣೆ?

ಬಿರುಗಾಳಿ ಮಳೆ, ಮೂಡಿಗೆರೆಯಲ್ಲಿ ಸ್ಕೂಟರ್ ಮೇಲೆ ಮರ ಬಿದ್ದು ಸವಾರ ಸಾವು

rain fall in mudigere heavy rain

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆಯಲ್ಲಿ ಸ್ಕೂಟರ್‌ ಮೇಲೆ ಮರ ಬಿದ್ದಿದ್ದರಿಂದ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿಕ್ಕಹಳ್ಳ ಬಳಿ ನಡೆದ ದುರಂತದಲ್ಲಿ ಮೃತಪಟ್ಟವರನ್ನು ವೇಣುಗೋಪಾಲ್ (45) ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ಭಾರಿ ಮಳೆಯಾಗುತ್ತಿದ್ದಾಗ ವೇಣುಗೋಪಾಲ್ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಈ ವೇಳೆ ಒಂದರ ಹಿಂದೆ ಒಂದರಂತೆ ಏಕಕಾಲಕ್ಕೆ ಮೂರು ಮರಗಳು ಬಿದ್ದಿವೆ, ಹೀಗಾಗಿ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಹೊರಟ್ಟಿ, ಬಣಕಲ್, ಬಾಳೂರು ಭಾಗದಲ್ಲಿ ಭಾರೀ ಮಳೆಯಾಗಿದೆ. ಹೀಗಾಗಿ ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ಕೊಪ್ಪಳದಲ್ಲಿ ಸಿಡಿಲು ಬಡಿದು ಬಾಲಕ ಮೃತ್ಯು

ಕೊಪ್ಪಳ: ತಾಲೂಕಿನ ಶಿವಪುರ ಗ್ರಾಮದಲ್ಲಿ ಸಿಡಿಲು ಬಡಿದು ಬಾಲಕನೊಬ್ಬ ಮೃತಪಟ್ಟಿದ್ದಾನೆ. ಶ್ರೀಕಾಂತ ದೊಡ್ಡನಗೌಡ್ರ ಮೇಟಿ (16) ಮೃತ ಬಾಲಕ. ಮಧ್ಯಾಹ್ನ ಸಿಡಿಲು ಬಡಿದಿದ್ದರಿಂದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದ. ಹೀಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲು ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಬಾಲಕ ಸಾವಿಗೀಡಾಗಿದ್ದಾನೆ.

rain fall in koppal
ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ 15 ನಿಮಿಷಕ್ಕೂ ಹೆಚ್ಚು ಕಾಲ ಆಲಿಕಲ್ಲು ಮಳೆ ಸುರಿಯಿತು

ಚಿಕ್ಕಬಳ್ಳಾಪುರದಲ್ಲಿ ನೆಲಕಚ್ಚಿದ ಬಾಳೆಗಿಡಗಳು

rain fall in chikkaballapur

ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಭಾನುವಾರ ಮಧ್ಯಾಹ್ನ ಸುರಿದ ಭಾರಿ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಚಿಕ್ಕಬಳ್ಳಾಪುರ, ಚಿಂತಾಮಣಿ, ಬಾಗೇಪಲ್ಲಿ, ಶಿಡ್ಲಘಟ್ಟ, ಗೌರಿಬಿದನೂರಿನಲ್ಲಿ ಮಳೆ‌ ಆರ್ಭಟ‌ಕ್ಕೆ ರೇಷ್ಮೆ ಸಾಕಾಣಿಕೆದಾರರ ಬದುಕು ಅಸ್ತವ್ಯಸ್ತವಾಗಿದೆ. ಭಾರಿ ಮಳೆಗೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮ ಶೀಗೆಹಳ್ಳಿ ಗ್ರಾಮದ ರೈತರ ನಾಲ್ಕೈದು ಹುಲ್ಲಿನ ಬಣವೆಗಳು ಗಾಳಿಗೆ ಹಾರಿ ಹೋಗಿವೆ. ಇನ್ನು ಅಶ್ವತ್ಥಪ್ಪ ಎಂಬುವವರ ರೇಷ್ಮೆ ಸಾಕಾಣಿಕೆ ಮನೆಗೆ ಹಾಕಿದ್ದ ಸಿಮೆಂಟ್ ತಗಡುಗಳು ಹಾರಿ ಹೋಗಿವೆ. ಹಾಗೆಯೇ ಶ್ರೀನಿವಾಸ್ ಎಂಬುವವರು ಅರ್ಧ ಎಕರೆಯಲ್ಲಿ ಬೆಳೆದಿದ್ದ ಬಾಳೆ ಗಿಡಗಳು ಸಂಪೂರ್ಣ ನೆಲಕಚ್ಚಿವೆ. ಮತ್ತೊಂದೆಡೆ ಮರ ಬಿದ್ದು ಶ್ರೀನಿವಾಸ್ ಎಂಬುವವರ ಟ್ರ್ಯಾಕ್ಟರ್‌ ಜಖಂಗೊಂಡಿದೆ.

ಚಿತ್ರದುರ್ಗ, ತುಮಕೂರಿನಲ್ಲಿ ಬಿರುಸಿನ ಮಳೆ

ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯಲ್ಲಿ ಭಾನುವಾರ ಬಿರುಸಿನ ಮಳೆಯಾಗಿದೆ. ತುಮಕೂರು ಜಿಲ್ಲೆಯ ತಿಪಟೂರು, ತುರುವೇಕೆರೆ ಭಾಗದಲ್ಲಿ ಬಿರುಗಾಳಿ ಸಹಿತ ಮಳೆ ಸುರಿಯಿತು. ಇನ್ನು ಚಿತ್ರದುರ್ಗ ಜಿಲ್ಲೆಯ ಹಲವೆಡೆ ಸತತ 3 ಗಂಟೆ ಮಳೆಯಾಯಿತು. ಇದರಿಂದ ಬಿಸಿಲ ಬೇಗೆಗೆ ಬೇಸತ್ತಿದ್ದ ಮಂದಿಗೆ ವರುಣ ತಂಪೆರೆದಿದ್ದಾನೆ. ಹೊಸದುರ್ಗ, ಹಿರಿಯೂರು ತಾಲೂಕಿನಲ್ಲಿ ಗಾಳಿ ಸಹಿತ ಮಳೆಗೆ ಹಲವೆಡೆ ಮರಗಳು ಧರೆಗುರುಳಿವೆ.

ಇದನ್ನೂ ಓದಿ | Bengaluru Rain: ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಿ ಯುವತಿ ಮೃತ್ಯು, ಆರು ಮಂದಿ ರಕ್ಷಣೆ; ಹೇಗಿತ್ತು ಕಾರ್ಯಾಚರಣೆ?

ಕೋಲಾರ- ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಬೃಹತ್ ಮರ ರಸ್ತೆಗೆ ಬಿದ್ದು ಸಂಚಾರಕ್ಕೆ ಅಡಚಣೆ

heavy rain in kolar

ಕೋಲಾರ: ಜಿಲ್ಲೆಯಲ್ಲಿ ಸತತ ಒಂದು ಗಂಟೆ ಕಾಲ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಕೋಲಾರ- ಚಿಕ್ಕಬಳ್ಳಾಪುರ ಮಾರ್ಗದ ಧನ್ಮಟ್ನಹಳ್ಳಿ ಗ್ರಾಮದ ಬಳಿ ರಸ್ತೆಗೆ ಅಡ್ಡಲಾಗಿ ಬೃಹತ್ ಮರ ಬಿದ್ದ ಹಿನ್ನೆಲೆಯಲ್ಲಿ ಒಂದು ಗಂಟೆ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ನಂತರ ಗ್ರಾಮಸ್ಥರ ನೆರವಿನಿಂದ ಮರವನ್ನು ತೆರವು ಮಾಡಲಾಯಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ಕರ್ನಾಟಕ

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ನೋಡುಗನನ್ನು ಓದುಗನನ್ನಾಗಿಸುವ ಪ್ರಯತ್ನ: ನಾಗತಿಹಳ್ಳಿ‌ ಚಂದ್ರಶೇಖರ್

ಮುದ್ರಣ ಹಾಗೂ ಡಿಜಿಟಲ್‌- ಟಿವಿ ಇವೆರಡರ ಹಿತವಾದ ಸಮ್ಮಿಶ್ರಣ ಮಾಡಿ ಓದುಗ- ನೋಡುಗರಿಗೆ ನೀಡಬೇಕು ಎಂಬ ಆಶಯದಿಂದ ನಾವು ಕಥಾಸ್ಪರ್ಧೆಯನ್ನು ನಡೆಸಿದ್ದೇವೆ ಎಂದು ಹರಿಪ್ರಕಾಶ್‌ ಕೋಣೆಮನೆ ಹೇಳಿದ್ದಾರೆ.

VISTARANEWS.COM


on

Edited by

vistara kathaspardhe prize distribution1
Koo

ಬೆಂಗಳೂರು: ಕನ್ನಡ ಸಾರಸ್ವತ ಲೋಕವನ್ನು ಒಳಗೊಳ್ಳುವ ಯತ್ನ, ನೋಡುಗನನ್ನು ಓದುಗನನ್ನಾಗಿಸುವ ಪ್ರಯತ್ನ ವಿಸ್ತಾರ ನ್ಯೂಸ್ ಟಿವಿ ಮಾಧ್ಯಮದಿಂದ ಆಗುತ್ತಿರುವುದು ಸ್ತುತ್ಯರ್ಹ ಎಂದು ಖ್ಯಾತ ಕತೆಗಾರ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಹೇಳಿದರು.

ದಾಖಲೆ ಮೊತ್ತದ ʼವಿಸ್ತಾರ ನ್ಯೂಸ್‌ ಯುಗಾದಿ ಕಥಾಸ್ಪರ್ಧೆ-2023’ರ ಬಹುಮಾನ ವಿಜೇತರನ್ನು ಘೋಷಿಸಿದ ಬಳಿಕ ಅವರು ಮಾತನಾಡಿದರು. ಬೆಂಗಳೂರಿನ ಕ್ವೀನ್ಸ್‌ ರಸ್ತೆಯ ಹೋಟೆಲ್‌ ಮ್ಯಾಸ್ಟಿಫ್‌ನಲ್ಲಿ ಸಮಾರಂಭ ನೆರವೇರಿತು. ಮೊದಲ ಬಹುಮಾನವನ್ನು ಚಂದ್ರಶೇಖರ ಡಿ.ಆರ್.‌, ಎರಡನೇ ಬಹುಮಾನವನ್ನು ದಾದಾಪೀರ್‌ ಜೈಮನ್‌, ಮೂರನೇ ಬಹುಮಾನವನ್ನು ಪೂರ್ಣಿಮಾ ಮಾಳಗಿಮನಿ ತಮ್ಮದಾಗಿಸಿಕೊಂಡರು.

ಕಥೆಗಳಿಗೆ ದೃಶ್ಯ ಮಾಧ್ಯಮ ಸದಾ ಉಪಕೃತವಾಗಿರುತ್ತದೆ. ಕಥೆಗಳೇ ಮನರಂಜನೆಯ ಜೀವಾಳ. ಕಥೆ ಹಾಗೂ ಟಿವಿ ಮಾಧ್ಯಮ ಎರಡರ ವ್ಯಾಕರಣವೂ ಭಿನ್ನ. ದೃಶ್ಯ ಮಾಧ್ಯಮ ಅಬ್ಬರದಿಂದ ಹೇಳುವುದನ್ನು ಕಥೆ ಸೌಮ್ಯವಾಗಿ, ಪಿಸುಮಾತಿನಲ್ಲಿ, ದೃಶ್ಯ ಮಾಧ್ಯಮದ ತೋರಿಕೆಯ ನಡುವೆ ಕಥೆ ಸಂಕೋಚ ಹಾಗೂ ಧ್ಯಾನದಲ್ಲಿ ಹೇಳುತ್ತದೆ. ದೃಶ್ಯ ಮಾಧ್ಯಮ ಪ್ರಕಟಿಸಿದರೆ ಸಾಹಿತ್ಯ ಏಕಾಂತದಲ್ಲಿ ಅರಳುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಪ್ರೇಕ್ಷಕನನ್ನು ಓದುಗನನ್ನಾಗಿಸಿ, ಓದುಗನನ್ನು ಪ್ರೇಕ್ಷಕನನ್ನಾಗಿಸುವ ಕಠಿಣ ಕಾಯಕದ ಸುವರ್ಣ ಸೇತುವೆಯಾಗಿ ವಿಸ್ತಾರ ನ್ಯೂಸ್‌ ಕೆಲಸ ಮಾಡುತ್ತಿದೆ. ಸಾರಸ್ವತ ಲೋಕವನ್ನು ಟಿವಿ ಮಾಧ್ಯಮದಲ್ಲಿ ಒಳಗೊಳ್ಳುವ ಈ ಯತ್ನ ಸಫಲವಾಗಲಿ ಎಂದು ನಾಗತಿಹಳ್ಳಿ ಹಾರೈಸಿದರು.

vistara kathaspardhe prize distribution
ವಿಸ್ತಾರ ಕಥಾಸ್ಪರ್ಧೆಯ ಟಾಪ್‌ 25 ಕಥೆಗಾರರು ಮತ್ತು ಅತಿಥಿಗಳು

ವಿಸ್ತಾರ ನ್ಯೂಸ್‌ ಟಿವಿ ವಾಹಿನಿಯ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಕಥಾಸ್ಪರ್ಧೆಯ ಆಶಯವನ್ನು ವಿವರಿಸಿದರು. ಸಾಹಿತ್ಯ, ಸಂಸ್ಕೃತಿ ಇವುಗಳಿಗೆ ಆಧುನಿಕ ಮಾಧ್ಯಮದಲ್ಲಿ ಮನ್ನಣೆ ದೊರೆಯುತ್ತಿಲ್ಲ ಎಂದು ಕೂಗು ಕೇಳಿಬರುತ್ತಿರುವುದರ ನಡುವೆಯೇ ನಾವು ಅವುಗಳಿಗೆ ಪ್ರಾಧಾನ್ಯ ನೀಡುವ, ಹಲವು ಅಭಿಪ್ರಾಯಗಳಿಗೆ ಧ್ವನಿಯಾಗುವ ಕಾಯಕವನ್ನು ಮಾಡುತ್ತಿದ್ದೇವೆ. ಮುದ್ರಣ ಹಾಗೂ ಡಿಜಿಟಲ್‌- ಟಿವಿ ಇವೆರಡರ ಹಿತವಾದ ಸಮ್ಮಿಶ್ರಣ ಮಾಡಿ ಓದುಗ- ನೋಡುಗರಿಗೆ ನೀಡಬೇಕು ಎಂಬ ಆಶಯದಿಂದ ನಾವು ಕಥಾಸ್ಪರ್ಧೆಯನ್ನು ನಡೆಸಿದ್ದೇವೆ. ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾದ ಕಥಾಸ್ಪರ್ಧೆಯ ಫಲಿತಾಂಶವು ಹಲವು ತಿಂಗಳ ಪರಿಶ್ರಮದ ಫಲವಾಗಿದೆ ಎಂದು ಅವರು ವಿವರಿಸಿದರು.

ಕಥೆ ಬರೆಯುವುದಕ್ಕಿಂತಲೂ ದೊಡ್ಡ ಸಮುದಾಯಕ್ಕೆ ಕತೆ ಹೇಳುವುದನ್ನು ಹೆಚ್ಚು ಇಷ್ಟಪಡುತ್ತೇನೆ. ಕಥೆಗಾರನಾಗುವುದರ ಜತೆಗೆ ಉತ್ತಮ ಮನುಷ್ಯನಾಗಿರಲೂ ಪ್ರಯತ್ನಿಸುತ್ತಿದ್ದೇನೆ ಎಂದು ಪ್ರಥಮ ಬಹುಮಾನಿತ ಕಥೆಗಾರ ಚಂದ್ರಶೇಖರ ಡಿ.ಆರ್‌ ನುಡಿದರು. ಕಥೆಗಳನ್ನು ಹಂಚಿಕೊಳ್ಳುವ ಮೂಲಕ ನಾವು ಇನ್ನಷ್ಟು ಕ್ರಿಯಾಶೀಲವಾಗುತ್ತೇವೆ. ಈ ಕ್ರಿಯಾಶೀಲತೆಗೆ ವಿಸ್ತಾರ ಸ್ಪರ್ಧೆ ಮತ್ತಷ್ಟು ಹುರುಪು ತುಂಬಿದೆ ಎಂದು ದ್ವಿತೀಯ ಬಹುಮಾನಿತ ದಾದಾಪೀರ್‌ ಜೈಮನ್‌ ನುಡಿದರು. ವಿಸ್ತಾರ ಸ್ಪರ್ಧೆಗೆ ಬಂದ ಸಾವಿರ ಕಥೆಗಳು ಸಾವಿರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ. ಅಷ್ಟು ವೈವಿಧ್ಯಮಯವಾದ ಕಥಾಲೋಕ ಕನ್ನಡದಲ್ಲಿದೆ ಎಂದು ತೃತೀಯ ಬಹುಮಾನಿತ ಕಥೆಗಾರ್ತಿ ಪೂರ್ಣಿಮಾ ಮಾಳಗಿಮನಿ ನುಡಿದರು.

ಹೊಸ ಕತೆಗಾರರನ್ನು ಗುರುತಿಸುವಲ್ಲಿ ಕನ್ನಡ ಸಾಹಿತ್ಯಲೋಕ ಹಿಂದೆ ಬಿದ್ದಿಲ್ಲ. ಉತ್ತಮ ಸಾಹಿತ್ಯ ಪ್ರಕಟಿಸುವಾಗ ನಾವು ಹಣ ಖರ್ಚಾಗುತ್ತದೆಂದು ಹಿಂದುಳಿದಿಲ್ಲ. ಯುವ ಸಾಹಿತಿಗಳು ಬೆಳೆಯಬೇಕು ಎಂಬುದು ನಮ್ಮ ಆಶಯ ಎಂದು ಬಹುಮಾನ ಆಯೋಜಕರಲ್ಲಿ ಒಬ್ಬರಾದ ಶ್ರೀ ಸಿದ್ದಲಿಂಗೇಶ್ವರ ಬುಕ್‌ ಡಿಪೋ ಮತ್ತು ಪ್ರಕಾಶನದ ಮಾಲಿಕ ಬಸವರಾಜ ಕೊನೇಕ ಹೇಳಿದರು. ಬಹುಮಾನ ಪ್ರಾಯೋಜಕರುಗಳಾದ ತ್ಯಾಗರಾಜ ಕೋ ಆಪರೇಟಿವ್‌ ಬ್ಯಾಂಕ್‌ ಅಧ್ಯಕ್ಷ ಡಾ. ಎಂ. ಆರ್‌ ವೆಂಕಟೇಶ್‌, ವಿ2 ಹೋಲ್ಡಿಂಗ್ಸ್‌ ಹೌಸಿಂಗ್‌ ಡೆವಲಪ್‌ಮೆಂಟ್‌ ಪ್ರೈ. ಲಿ. ಎಂ.ಡಿ ಡಾ.ಪಿ.ಎಲ್‌ ವೆಂಕಟರಾಮ ರೆಡ್ಡಿ ಸ್ಪರ್ಧೆಯ ಯಶಸ್ಸಿಗೆ ಶುಭ ಹಾರೈಸಿದರು.

vistara kathaspardhe prize distribution
ದಾದಾಪೀರ್‌ ಜೈಮನ್‌ ಚಂದ್ರಶೇಖರ ಡಿಆರ್‌ ಪೂರ್ಣಿಮಾ ಮಾಳಗಿಮನಿ

ಮೊದಲ ಬಹುಮಾನದ ಮೊತ್ತ ರೂ. 55,000, ಎರಡನೇ ಬಹುಮಾನ ರೂ. 25,000 ರೂ., ಮೂರನೇ ಬಹುಮಾನ 10,000 ರೂ. ಹಾಗೂ ತಲಾ 2,000 ರೂ. ಮೊತ್ತದ ಮೆಚ್ಚುಗೆ ಬಹುಮಾನಗಳನ್ನು 5 ಮಂದಿಗೆ ವಿತರಿಸಲಾಯಿತು. ಕವಿ, ವಿಮರ್ಶಕಿ ಲಲಿತಾ ಸಿದ್ದಬಸವಯ್ಯ, ಕಾದಂಬರಿಕಾರ ಹಾಗೂ ವಿಮರ್ಶಕ ಬಿ. ಜನಾರ್ದನ ಭಟ್‌ ಅವರು ಈ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದ್ದರು. ಟಾಪ್‌ 25 ಪಟ್ಟಿಗೆ ಆಯ್ಕೆಯಾದ ಕತೆಗಾರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಸಂಸ್ಥೆಯ ಆಡಳಿತ ನಿರ್ದೇಶಕ ಹಾಗೂ ಚೇರ್‌ಮನ್‌ ಎಚ್‌.ವಿ. ಧರ್ಮೇಶ್‌, ವಿಸ್ತಾರ ಟಿವಿಯ ಎಕ್ಸಿಕ್ಯೂಟಿವ್‌ ಎಡಿಟರ್‌ ಶರತ್‌ ಎಂ.ಎಸ್‌, ವಿಸ್ತಾರ ನ್ಯೂಸ್‌ನ ನಿರ್ದೇಶಕ (ಬ್ಯುಸಿನೆಸ್‌) ವಿನಯ್‌ ಶೇಷಗಿರಿ, ಸಿಒಒ ಪರಶುರಾಮ್‌, ವಿಸ್ತಾರ ನ್ಯೂಸ್‌ ಡಿಜಿಟಲ್‌ ವಿಭಾಗದ ಸಂಪಾದಕ ರಮೇಶ್‌ ಕುಮಾರ್‌ ನಾಯಕ್‌, ಸ್ಪೆಷಲ್‌ ಆಪರೇಷನ್ ಎಡಿಟರ್‌ ಕಿರಣ್‌ ಕುಮಾರ್‌ ಡಿ.ಕೆ, ವಿಸ್ತಾರ ಮನರಂಜನಾ ವಾಹಿನಿ ಕಂಟೆಂಟ್‌ ಹೆಡ್‌ ಕುಸುಮಾ ಆಯರಹಳ್ಳಿ ಉಪಸ್ಥಿತರಿದ್ದರು.‌ ಎ.ಕೃಷ್ಣ ಭಟ್‌ ಕಾರ್ಯಕ್ರಮ ನಿರ್ವಹಿಸಿದರು.

ಕಥಾಸ್ಪರ್ಧೆ ಬಹುಮಾನಿತರು:

ಪ್ರಥಮ: ಸೋಮನ ಕುಣಿತ- ಚಂದ್ರಶೇಖರ ಡಿ.ಆರ್
ದ್ವಿತೀಯ: ಅಂತಃಕಾರಣದ ಟಿಪ್ಪಣಿಗಳು- ದಾದಾಪೀರ್‌ ಜೈಮನ್‌
ತೃತೀಯ: ಅದು ಅವರ ಪ್ರಾಬ್ಲಮ್- ಪೂರ್ಣಿಮಾ ಮಾಳಗಿಮನಿ

ಮೆಚ್ಚುಗೆ: ಹುಣಿಸೆ ಹೂವು- ದೀಪದ ಮಲ್ಲಿ
ಮೆಚ್ಚುಗೆ: ಪಿಂಕ್‌ ಟ್ರಂಪೆಟ್- ಚೈತ್ರಿಕಾ ಹೆಗಡೆ
ಮೆಚ್ಚುಗೆ: ಪರವೇಶ್ಮಸ್ಥನ ಫಿಕ್ಹ್‌ ಪ್ರಸಂಗ- ಬಿ.ಎಂ ಹನೀಫ್‌
ಮೆಚ್ಚುಗೆ: ಕಿತ್ತಳೆ ಚಿಟ್ಟೆ- ಮಂಜುನಾಯಕ್‌ ಚೆಳ್ಳೂರು
ಮೆಚ್ಚುಗೆ: ನೆಲೆ- ದೀಪಾ ಹಿರೇಗುತ್ತಿ

Continue Reading

ಕರ್ನಾಟಕ

Tumkur News: ಹೆಜ್ಜೇನು ದಾಳಿ; ಮೂವರು ಮಕ್ಕಳು ಸೇರಿ 9 ಮಂದಿಗೆ ಗಾಯ

Tumkur News: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಎಚ್. ಬಸವನಹಳ್ಳಿಯಲ್ಲಿ ನಡೆದ ಹೆಜ್ಜೇನು ದಾಳಿಯಲ್ಲಿ 9 ಮಂದಿಗೆ ಗಾಯಗಳಾಗಿವೆ.

VISTARANEWS.COM


on

Edited by

person injured in bee attack
Koo

ತುಮಕೂರು: ಹೊಲದಲ್ಲಿ ಕೆಲಸ ಮಾಡುವಾಗ ಹೆಜ್ಜೇನು ದಾಳಿ ಮಾಡಿದ್ದರಿಂದ ಮೂವರು ಮಕ್ಕಳು ಸೇರಿ ಒಟ್ಟು 9 ಜನರು ಗಾಯಗೊಂಡಿರುವ ಘಟನೆ ಜಿಲ್ಲೆಯ (Tumkur News) ಮಧುಗಿರಿ ತಾಲೂಕಿನ ಎಚ್. ಬಸವನಹಳ್ಳಿಯಲ್ಲಿ ನಡೆದಿದೆ. ಹೊಲದಲ್ಲಿ ಕೆಲಸ ಮಾಡುವಾಗ ಏಕಾಏಕಿ ಹೆಜ್ಜೇನು ದಾಳಿ ಮಾಡಿದೆ. ಹೀಗಾಗಿ ಗಾಬರಿಗೊಂಡು ದಿಕ್ಕಾಪಾಲಾಗಿ ಜನರು ಓಡಿದ್ದಾರೆ. ಆದರೂ ಜೇನು ನೊಣಗಳು ಬೆನ್ನತ್ತಿ ಕಚ್ಚಿವೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ

ಬೆಂಗಳೂರು: ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ. ಗೌರಿಬಿದನೂರು ಮೂಲದ ನಗರಗೆರೆಯ ರಾಮಕೃಷ್ಣ (19) ಮೃತ ಯುವಕ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕೈಕಾಲು ಕಟ್ಟಿ ವೃದ್ಧೆಯ ಬರ್ಬರ ಹತ್ಯೆ

ಬೆಂಗಳೂರು: ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಕೈಕಾಲು ಕಟ್ಟಿ ವೃದ್ಧೆಯ ಬರ್ಬರ ಹತ್ಯೆ ಮಾಡಿರುವ ಘಟನೆ ನಡೆದಿದೆ. ಕಮಲಮ್ಮ (80) ಕೊಲೆಯಾದವರು. ಕೈಕಾಲು‌ ಕಟ್ಟಿ, ಬಾಯಿಗೆ ಪ್ಲಾಸ್ಟರ್ ಹಾಕಿ ದುಷ್ಕರ್ಮಿಗಳು ಕೊಲೆ ಮಾಡಿದ್ದು, ವೃದ್ಧೆಯ ಬಳಿಯಿದ್ದ ಚಿನ್ನಾಭರಣ, ಬೆಲೆಬಾಳುವ ವಸ್ತುಗಳನ್ನು ಕಸಿದು ಪರಾರಿಯಾಗಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Drowned in Pond: ಸೆಕೆ ತಾಳಲಾರದೆ ಕೆರೆಯಲ್ಲಿ ಈಜಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಸಾವು

ಮೃತ ಕಮಲಮ್ಮಗೆ ಮೂವರು ಮಕ್ಕಳು ಇದ್ದು, ಅವರು ಒಂಟಿಯಾಗಿ ವಾಸವಿದ್ದರು. ಮೂವರು ಮಕ್ಕಳು ಬೇರೆ ಬೇರೆ ಕಡೆ ವಾಸವಿದ್ದು, ಆರು ತಿಂಗಳ ಹಿಂದೆಯಷ್ಟೇ ಪತಿ ನಾಗರಾಜ್ ಮೃತಪಟ್ಟಿದ್ದರು. ನಂತರ ಒಂಟಿಯಾಗಿ ಕಮಲಮ್ಮ ವಾಸವಿದ್ದರು. ಹಂತಕರ ಸುಳಿವು ಪತ್ತೆಗೆ ಶ್ವಾನದಳ, ಎಫ್‌ಎಸ್ಎಲ್‌ ತಂಟ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.

Continue Reading

ಕರ್ನಾಟಕ

Adichunchanagiri Mutt: ಆದಿಚುಂಚನಗಿರಿ ಶ್ರೀಗಳ ಆಶೀರ್ವಾದ ಪಡೆದ ಯುಪಿಎಸ್‌ಸಿ ಸಾಧಕರು

Adichunchanagiri Mutt: ಯುಪಿಎಸ್‌ಸಿ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ರಾಜ್ಯದ ಆಕಾಶ್‌ ಎ.ಎಲ್‌, ಚೆಲುವರಾಜು. ಆರ್‌, ಬಿ.ಎಸ್‌. ಧನುಷ್‌ ಕುಮಾರ್‌ ಹಾಗೂ ಡಾ.ವರುಣ್‌ ಕೆ.ಗೌಡ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದರು.

VISTARANEWS.COM


on

Edited by

UPSC aspirants in Adichunchanagiri mutt
Koo

ಬೆಂಗಳೂರು: ಆದಿಚುಂಚನಗಿರಿ ಮಠಕ್ಕೆ (Adichunchanagiri Mutt) ಯುಪಿಎಸ್‌ಸಿ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ರಾಜ್ಯದ ಆಕಾಶ್‌ ಎ.ಎಲ್‌, ಚೆಲುವರಾಜು. ಆರ್‌, ಬಿ.ಎಸ್‌. ಧನುಷ್‌ ಕುಮಾರ್‌ ಹಾಗೂ ಡಾ.ವರುಣ್‌ ಕೆ.ಗೌಡ ಭೇಟಿ ನೀಡಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

ಯುಪಿಎಸ್‌ಸಿ ಮುಖ್ಯ ಪರೀಕ್ಷೆಯಲ್ಲಿ ರಾಜ್ಯದ 25ಕ್ಕೂ ಹೆಚ್ಚು ಅಭ್ಯರ್ಥಿಗಳು ತೇರ್ಗಡೆಯಾಗಿ ಉತ್ತಮ ರ‍್ಯಾಂಕ್‌ ಪಡೆದಿದ್ದಾರೆ. ಹೀಗಾಗಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ರಾಜ್ಯದ ಅಭ್ಯರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಶ್ರೀ ನಿರ್ಮಲಾನಂದನಾಥ ಶ್ರೀಗಳು, ನಾಗರಿಕ ಸೇವೆ ಮೂಲಕ ಉನ್ನತ ಸ್ಥಾನಕ್ಕೇರಬೇಕು ಎಂದು ಮಠಕ್ಕೆ ಆಗಮಿಸಿದ್ದ ನಾಲ್ವರು ಅಭ್ಯರ್ಥಿಗಳಿಗೆ ಶುಭ ಹಾರೈಸಿದರು. ಈ ವೇಳೆ ಮುಖಂಡ ನಂಜೇಗೌಡ ನಂಜುಂಡ ಹಾಗೂ ಮಠದ ಸಿಬ್ಬಂದಿ ಉಪಸ್ಥಿತರಿದ್ದರು.

ಇದನ್ನೂ ಓದಿ | UPSC Prelims 2023: ಮೇ 28ರಂದು ಬೆಂಗಳೂರಿನಲ್ಲಿ ಬೆಳಗ್ಗೆ 6ರಿಂದಲೇ ಮೆಟ್ರೋ ಸಂಚಾರ ಆರಂಭ

UPSC aspirants with nirmalananda swamiji in bangalore

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಹಾಸನ ಜಿಲ್ಲೆ ಅರಸೀಕೆರೆಯ ಬಿ.ಎಸ್‌.ಧನುಷ್‌ ಕುಮಾರ್‌ 501 ರ‍್ಯಾಂಕ್‌, ಬೆಂಗಳೂರಿನ ರಾಜ್‌ ಕುಮಾರ್‌ ಅಕಾಡೆಮಿಯ ಅಭ್ಯರ್ಥಿಗಳಾದ ಆಕಾಶ್‌ ಎ.ಎಲ್‌. 210, ಚೆಲುವರಾಜು. ಆರ್‌ 238, ಡಾ.ವರುಣ್‌ ಕೆ.ಗೌಡ 594 ರ‍್ಯಾಂಕ್‌ ಪಡೆದಿದ್ದಾರೆ.

Continue Reading

ಕರ್ನಾಟಕ

Praveen Nettaru: ಆಕ್ರೋಶದ ಬೆನ್ನಲ್ಲೇ ಔದಾರ್ಯ ಮೆರೆದ ಸಿದ್ದರಾಮಯ್ಯ; ನೆಟ್ಟಾರು ಪತ್ನಿ ಮರುನೇಮಕಕ್ಕೆ ನಿರ್ಧಾರ

Praveen Nettaru: ವಿಶೇಷ ಪ್ರಕರಣವೆಂದು ಪರಿಗಣಿಸಿ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿಯನ್ನು ಗ್ರೂಪ್‌ ಸಿ ಹುದ್ದೆಗೆ ರಾಜ್ಯ ಸರ್ಕಾರ ಮರು ನೇಮಕ ಮಾಡಿದೆ.

VISTARANEWS.COM


on

Edited by

Praveen Nettarus wife nutan kumari
Koo

ಬೆಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪತ್ನಿಯನ್ನು (Praveen Nettaru) ಗ್ರೂಪ್‌ ಸಿ ಹುದ್ದೆಗೆ ಮರುನೇಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಹೊಸ ಸರ್ಕಾರ ರಚನೆಯಾದ ಬೆನ್ನಲ್ಲೇ ಬೊಮ್ಮಾಯಿ ಸರ್ಕಾರದಲ್ಲಿ ನೇಮಕ ಮಾಡಿದ್ದ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಇದಕ್ಕೆ ಬಿಜೆಪಿ ಹಾಗೂ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ರಾಜ್ಯ ಸರ್ಕಾರ ಮರು ನೇಮಕ ಮಾಡಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಸಿಎಂ‌ ಸಿದ್ದರಾಮಯ್ಯ ಅವರು, ಹೊಸ ಸರ್ಕಾರ ಬಂದ ನಂತರ ಹಿಂದಿನ ಸರ್ಕಾರ ನೇಮಕ ಮಾಡಿಕೊಂಡಿದ್ದ ತಾತ್ಕಾಲಿಕ ನೌಕರರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡುವುದು ಒಂದು ಸಹಜ ಪ್ರಕ್ರಿಯೆ. ಪ್ರವೀಣ್ ನೆಟ್ಟಾರು ಅವರ ಪತ್ನಿ ಮಾತ್ರವಲ್ಲ ಸುಮಾರು 150ಕ್ಕೂ ಹೆಚ್ಚು ಗುತ್ತಿಗೆ ನೌಕರರನ್ನು ಈಗಾಗಲೇ ಸೇವೆಯಿಂದ ವಜಾ ಮಾಡಲಾಗಿದೆ. ಇದರಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿಲ್ಲ. ಆದರೂ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾನವೀಯತೆ ಆಧಾರದಲ್ಲಿ ನೂತನ ಕುಮಾರಿ ಅವರ ಮರು ನೇಮಕ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Karnataka Cabinet: ಕಾಂಗ್ರೆಸ್‌ನಲ್ಲಿ ಮತ್ತೆ ಶುರುವಾಯಿತು ಮೂಲ-ವಲಸಿಗ ಜಗಳ: ಸಿಎಂ ವಿರುದ್ಧ ಹರಿಪ್ರಸಾದ್‌ ಪ್ರಹಾರ

ಬೊಮ್ಮಾಯಿ ಸರ್ಕಾರದಲ್ಲಿ ಗ್ರೂಪ್‌ ಸಿ ಹುದ್ದೆ

ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆಯ ಬಳಿಕ ಮಾನವೀಯ ದೃಷ್ಟಿಯಿಂದ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿಗೆ ಬೊಮ್ಮಾಯಿ ಸರ್ಕಾರವು ತಾತ್ಕಾಲಿಕ ನೆಲೆಯ ನೇಮಕಾತಿ ಮಾಡಿತ್ತು. ಮೊದಲಿಗೆ ಮುಖ್ಯಮಂತ್ರಿ ಸಚಿವಾಲಯದಲ್ಲಿ ಉದ್ಯೋಗ ನೀಡಲಾಗಿತ್ತು. ಗ್ರೂಪ್‌ ಸಿ ಹುದ್ದೆಗೆ ನೇಮಕಗೊಳಿಸಿ, 30,350 ರೂ. ವೇತನ ನಿಗದಿಪಡಿಸಲಾಗಿತ್ತು. ನಂತರ ನೂತನ ಕುಮಾರಿ ಅಪೇಕ್ಷೆ ಮೇರೆಗೆ ದಕ್ಷಿಣ ಕ‌ನ್ನಡ ಜಿಲ್ಲಾಡಳಿತ ಕಚೇರಿಯ ಪ್ರಾಕೃತಿಕ ವಿಕೋಪ ವಿಭಾಗದಲ್ಲಿ ಕೆಲಸ ಮಾಡಲು ಅನುಮತಿ ನೀಡಲಾಗಿತ್ತು.

ಈ ಹುದ್ದೆಯ ಅವಧಿಯು ಈ ಹಿಂದಿನ ಮುಖ್ಯಮಂತ್ರಿಗಳ ಪದಾವಧಿಯವರೆಗೆ ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ನೇಮಿಸಲಾಗಿತ್ತು. ಈಗ ಹೊಸ ಸರ್ಕಾರ ರಚನೆಯಾಗಿರುವುದರಿಂದ ಕೆಲಸದ ಅವಧಿ ಮುಕ್ತಾಯವಾಗಿತ್ತು. ಹೀಗಾಗಿ ಪ್ರವೀಣ್ ನೆಟ್ಟಾರು (Praveen Nettaru) ಪತ್ನಿ ನೂತನ ಕುಮಾರಿಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು.

2022ರ ಸೆ. 22ರಂದು ಗುತ್ತಿಗೆ ಆಧಾರದಲ್ಲಿ ಗ್ರೂಪ್ ಸಿ ಹುದ್ದೆಗೆ ನೇಮಕ ಮಾಡಲಾಗಿತ್ತು. ಹೊಸ ಸರ್ಕಾರ ಬಂದ ಕೂಡಲೇ ನೆಟ್ಟಾರ್ ಪತ್ನಿಯನ್ನು ಕೆಲಸದಿಂದ ವಜಾ ಮಾಡಿದ್ದರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಸಿದ್ದರಾಮಯ್ಯ ಸರ್ಕಾರ ಈಗ, ನೂತನ ಕುಮಾರಿ ಮರು ನೇಮಕಕ್ಕೆ ನಿರ್ಧರಿಸಿದೆ.

Continue Reading
Advertisement
vistara kathaspardhe prize distribution1
ಕರ್ನಾಟಕ8 mins ago

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ನೋಡುಗನನ್ನು ಓದುಗನನ್ನಾಗಿಸುವ ಪ್ರಯತ್ನ: ನಾಗತಿಹಳ್ಳಿ‌ ಚಂದ್ರಶೇಖರ್

BCCI MEETING
ಕ್ರಿಕೆಟ್13 mins ago

World Cup 2023 : ವಿಶ್ವ ಟೆಸ್ಟ್ ಚಾಂಪಿಯನ್​​ಷಿಪ್ ಫೈನಲ್ ವೇಳೆ ವಿಶ್ವಕಪ್ ವೇಳಾಪಟ್ಟಿ ಪ್ರಕಟ

Narendra Modi Speech At NITI Aayog Meeting
ದೇಶ25 mins ago

NITI Aayog Meeting: ವಿಕಸಿತ ಭಾರತದ ಕನಸು ಬಿತ್ತಿದ ಮೋದಿ; 11 ಸಿಎಂಗಳು ಗೈರಾದರೂ ಪ್ರಧಾನಿ ಅಭಿವೃದ್ಧಿ ಮಂತ್ರ

New parliament Building
ಪ್ರಮುಖ ಸುದ್ದಿ33 mins ago

ವಿಸ್ತಾರ ಸಂಪಾದಕೀಯ: ನೂತನ ಸಂಸತ್ ಕಟ್ಟಡ ಪ್ರಜಾತಂತ್ರವನ್ನು ಮತ್ತಷ್ಟು ಮೆರೆಸಲಿ

person injured in bee attack
ಕರ್ನಾಟಕ57 mins ago

Tumkur News: ಹೆಜ್ಜೇನು ದಾಳಿ; ಮೂವರು ಮಕ್ಕಳು ಸೇರಿ 9 ಮಂದಿಗೆ ಗಾಯ

UPSC aspirants in Adichunchanagiri mutt
ಕರ್ನಾಟಕ59 mins ago

Adichunchanagiri Mutt: ಆದಿಚುಂಚನಗಿರಿ ಶ್ರೀಗಳ ಆಶೀರ್ವಾದ ಪಡೆದ ಯುಪಿಎಸ್‌ಸಿ ಸಾಧಕರು

Suryakumar Yadav Tattoo
ಕ್ರಿಕೆಟ್1 hour ago

IPL 2023 : ತಮ್ಮ ದೇಹದಲ್ಲಿರುವ ಟ್ಯಾಟೂಗಳ ಅರ್ಥ ವಿವರಿಸಿದ ಸೂರ್ಯಕುಮಾರ್!

Narendra Modi Speech On Sengol
ದೇಶ1 hour ago

New Parliament Building: ಸೆಂಗೋಲ್‌ ಎಂಬ ರಾಜದಂಡ ಸ್ವಾತಂತ್ರ್ಯದ ಸಂಕೇತ; ಪ್ರತಿಷ್ಠಾಪನೆಗೆ ಕಾರಣ ತಿಳಿಸಿದ ಮೋದಿ

Praveen Nettarus wife nutan kumari
ಕರ್ನಾಟಕ2 hours ago

Praveen Nettaru: ಆಕ್ರೋಶದ ಬೆನ್ನಲ್ಲೇ ಔದಾರ್ಯ ಮೆರೆದ ಸಿದ್ದರಾಮಯ್ಯ; ನೆಟ್ಟಾರು ಪತ್ನಿ ಮರುನೇಮಕಕ್ಕೆ ನಿರ್ಧಾರ

Sara ali khan
ಕ್ರಿಕೆಟ್2 hours ago

ಸೋಶಿಯಲ್​ ಮೀಡಿಯಾಗಳಲ್ಲಿ ಪರಸ್ಪರ ಅನ್​ಫಾಲೊ ಮಾಡಿಕೊಂಡ ಶುಭ್​​ಮನ್​, ಸಾರಾ! ಏನಾಯಿತು ಅವರಿಗೆ?

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ19 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ3 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ5 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Teacher Transfer
ನೌಕರರ ಕಾರ್ನರ್7 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

Laxmi Hebbalkar oath taking as a minister
ಕರ್ನಾಟಕ6 hours ago

Laxmi Hebbalkar: ಸಚಿವೆಯಾಗುವುದರ ಜತೆಗೆ ಅಜ್ಜಿಯೂ ಆದ ಲಕ್ಷ್ಮಿ ಹೆಬ್ಬಾಳ್ಕರ್‌; ಒಂದೇ ದಿನ 2 ಸಿಹಿ ಸುದ್ದಿ!

HD Kumaraswamy in JDS Meeting
ಕರ್ನಾಟಕ1 day ago

H.D. Kumaraswamy: ಜೆಡಿಎಸ್‌ ವಿಸರ್ಜನೆ ಹೇಳಿಕೆಗೆ ಬದ್ಧ ಎಂದ ಎಚ್‌.ಡಿ. ಕುಮಾರಸ್ವಾಮಿ!

induction stoves
ಕರ್ನಾಟಕ1 day ago

Congress Guarantee: ಬಿಪಿಎಲ್ ಕಾರ್ಡ್‌ಗೆ ಮುಗಿಬಿದ್ದ ಜನ; ಇಂಡಕ್ಷನ್‌ ಸ್ಟವ್‌ಗೆ ಹೆಚ್ಚಿದ ಬೇಡಿಕೆ

Viral Video, Teacher and Principal are quarrel in front of School children
ದೇಶ1 day ago

Viral Video: ಶಾಲಾ ಮಕ್ಕಳ ಎದುರೇ ಹೊಡೆದಾಡಿಕೊಂಡ ಪ್ರಿನ್ಸಿಪಾಲ್, ಟೀಚರ್! ಇಲ್ಲಿದೆ ನೋಡಿ ವಿಡಿಯೋ

Horoscope Today
ಪ್ರಮುಖ ಸುದ್ದಿ2 days ago

Horoscope Today : ಮಕರ ರಾಶಿಯವರಿಗೆ ಕೌಟುಂಬಿಕವಾಗಿ ಶುಭ ಫಲ; ಇಂದಿನ ಭವಿಷ್ಯ ಇಲ್ಲಿದೆ

HD Kumaraswamy said he will take up the issue of congress guarantee
ಕರ್ನಾಟಕ2 days ago

Congress Guarantee: ನಾವು ಕಡುಬು ತಿನ್ನೋಕ ರಾಜಕಾರಣ ಮಾಡ್ತಿರೋದು?: ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ

Beware if the Congress Guarantee card is conditioned and Pratap Simha says he will fight from June 1
ಕರ್ನಾಟಕ2 days ago

Congress Guarantee: ಗ್ಯಾರಂಟಿ ಕಾರ್ಡ್‌ಗೆ ಕಂಡೀಷನ್ ಹಾಕಿದ್ರೆ ಹುಷಾರ್‌; ಜೂನ್‌ 1ರಿಂದ ಹೋರಾಟವೆಂದ ಪ್ರತಾಪ್‌ ಸಿಂಹ

Electricity bill man hit bescom staff
ಕರ್ನಾಟಕ3 days ago

Electricity Bill: ಕರೆಂಟ್‌ ಬಿಲ್‌ ಕಿರಿಕ್‌; ಬಾಕಿ ಬಿಲ್‌ ಕಟ್ಟು ಎಂದಿದ್ದಕ್ಕೆ ಚಪ್ಪಲಿಯಿಂದಲೇ ಹೊಡೆದವ ಅರೆಸ್ಟ್‌

karnataka politics it takes time to implement guarantee schemes says minister priyank kharge
ಕರ್ನಾಟಕ3 days ago

Saffronisation issue : ಬಿಜೆಪಿಯವರಿಗೆ ತೊಂದರೆ ಇದ್ರೆ ಪಾಕಿಸ್ತಾನಕ್ಕೆ ಹೋಗಲಿ; ಪ್ರಿಯಾಂಕ್‌ ಖರ್ಗೆ ವಿವಾದಿತ ಹೇಳಿಕೆ

horoscope today
ಪ್ರಮುಖ ಸುದ್ದಿ4 days ago

Horoscope Today : ಪಂಚಮಿಯ ದಿನ ಪಂಚ ರಾಶಿಯವರಿಗೆ ಶುಭ ಫಲ; ಇಲ್ಲಿದೆ ಇಂದಿನ ದಿನ ಭವಿಷ್ಯ

ಟ್ರೆಂಡಿಂಗ್‌

error: Content is protected !!