ಬೆಂಗಳೂರು: ನಾಡಿನ ಮಾಧ್ಯಮ ಲೋಕದಲ್ಲಿ ಅವಿಸ್ಮರಣೀಯ ದಿನವೆಂಬಂತೆ ವಿಸ್ತಾರ ಮೀಡಿಯಾ ಲೋಗೊ ಹಾಗೂ ವಿಸ್ತಾರ ನ್ಯೂಸ್ ವೆಬ್‌ಸೈಟ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನಾಡಿನ ಗಣ್ಯ ರಾಜಕಾರಣಿಗಳು, ಉದ್ಯಮಿಗಳು, ಸಾಹಿತಿಗಳು, ವಿದ್ಯಾರ್ಥಿಗಳು ಭಾಗವಹಿಸಿದರು. ಅಗ್ನಿಪಥ್ ನೇಮಕಾತಿಯಲ್ಲಿ ಕನ್ನಡ ಕಡೆಗಣನೆಯಾಗಿದೆ, ಉತ್ತರ ಕನ್ನಡ ಜಿಲ್ಲೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕನಸು ಈಡೇರಿಲ್ಲ, ವಿಂಡೀಸ್ ವಿರುದ್ಧ ಭಾರತಕ್ಕೆ ಸತತ ಆರನೇ ಜಯವೆಂಬ ಹೆಗ್ಗಳಿಕೆ ಸೇರಿ ದಿನಪೂರ್ತಿ ನಡೆದ ಪ್ರಮುಖ ಘಟನೆಗಳ ಗುಚ್ಛ ವಿಸ್ತಾರ TOP 10 NEWS.
1. ವಿಸ್ತಾರ ನ್ಯೂಸ್ ವೆಬ್‌ಸೈಟ್ ಮತ್ತು ಚಾನೆಲ್ ಲೋಗೊ ಅನಾವರಣ: ಸಿಎಂ ಬಸವರಾಜ ಬೊಮ್ಮಾಯಿ ಉಪಸ್ಥಿತಿ
ಕನ್ನಡ ಮಾಧ್ಯಮ ಲೋಕದಲ್ಲಿ ವಿನೂತನ ಪ್ರಯತ್ನವಾದ ವಿಸ್ತಾರ ನ್ಯೂಸ್ ವೆಬ್‌ಸೈಟ್ ಹಾಗೂ ಲೋಗೊ ಅನಾವರಣವನ್ನು ನಾಡಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆರವೇರಿಸಿದರು. ಬೆಂಗಳೂರಿನ ಎಫ್‌ಕೆಸಿಸಿಐನ ಸರ್. ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ನಾಡಿನ ವಿವಿಧ ಗಣ್ಯ ಉದ್ಯಮಿಗಳು, ಜನಪ್ರತಿನಿಧಿಗಳು, ಸಾಹಿತಿಗಳು, ಲೇಖಕರು, ವಿವಿಧ ಮಾಧ್ಯಮ ಪ್ರತಿನಿಧಿಗಳು, ಪತ್ರಿಕೋದ್ಯಮ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಅನಾವರಣಗೊಂಡಿತು. ಸಮಸಮಾಜ ನಿರ್ಮಾಣ ನಿರ್ಮಾಣ ಮಾಡುವ ಪತ್ರಿಕೋದ್ಯಮದ ಆಶಯವನ್ನು ವಿಸ್ತಾರ ನ್ಯೂಸ್ ಎತ್ತಿಹಿಡಿಯುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಆಶಯ ವ್ಯಕ್ತಪಡಿಸಿದರು.
ವಿಸ್ತಾರ ಮೀಡಿಯಾ: ಏನು, ಎತ್ತ? | ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಮುಕ್ತ ಮಾತು
2. Agneepath Recruitment 2022 | ಅಗ್ನಿಪಥ್ ಮೂಲಕ ನೇಮಕ; ಕನ್ನಡದಲ್ಲಿ ನಡೆಯೋಲ್ಲ ನೇಮಕಾತಿ ಪರೀಕ್ಷೆ
ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಕಟಿಸಿದ ನೇಮಕಾತಿ ಯೋಜನೆ ʼಅಗ್ನಿಪಥ್ʼ ಮೂಲಕ ಭಾರತೀಯ ಸೇನೆಯು ನೇಮಕ ಪ್ರಕ್ರಿಯೆಯನ್ನು ರಾಜ್ಯದಲ್ಲಿಯೂ (Agneepath Recruitment 2022) ಆರಂಭಿಸಿದೆ. ಆದರೆ ಈ ನೇಮಕಾತಿ ರ‍್ಯಾಲಿಯಲ್ಲಿ ನಡೆಸುವ ಲಿಖಿತ ಪರೀಕ್ಷೆಯನ್ನು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತ್ರ ಬರೆಯಲು ಅವಕಾಶ ನೀಡಿರುವುದು ರಾಜ್ಯದ ಅಭ್ಯರ್ಥಿಗಳಿಗೆ ನಿರಾಸೆ ಮೂಡಿಸಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
3. Multi-Specialty Hospital | ರಾಜ್ಯಕ್ಕೆ ಬೆಳಕು ಕೊಟ್ಟ ಉತ್ತರ ಕನ್ನಡಕ್ಕೆ ಇಲ್ಲ ಆರೋಗ್ಯದ ʼಬೆಳಕುʼ
ಮಾನ್ಯ ಮುಖ್ಯಮಂತ್ರಿಯವರೇ, ನಮ್ಮ ಜಿಲ್ಲೆಗೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕೊಡಿ, ನಮ್ಮ ತ್ಯಾಗಕ್ಕೊಂದು ಅರ್ಥ ಕಲ್ಪಿಸಿ. ದೇಶಕ್ಕಾಗಿ ಎಲ್ಲವನ್ನೂ ಕೊಟ್ಟ ನಮಗೆ ʼಆರೋಗ್ಯʼದ ಶ್ರೀರಕ್ಷೆ ನಿಮ್ಮಿಂದ ಸಿಗಲಿ. WeNeedEmergencyHospitalInUttarakannada (#ಉತ್ತರಕನ್ನಡ ಜಿಲ್ಲೆಗೆ ಬೇಕು ತುರ್ತುನಿಗಾ ಆಸ್ಪತ್ರೆ). ಇದು ಉತ್ತರ ಕನ್ನಡ ಜಿಲ್ಲೆಯ ಒಕ್ಕೊರಲ ಕೂಗು. ಸ್ಥಳೀಯ ಜನಪ್ರತಿನಿಧಿಗಳನ್ನು ಕೇಳಿ ಕೇಳಿ ಸುಸ್ತಾದ ಜಿಲ್ಲೆಯ ಜನ ಇದೀಗ ಮುಖ್ಯಮಂತ್ರಿಯವರಿಗೇ ಮೊರೆ ಇಡುತ್ತಿದ್ದಾರೆ. ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ ಉತ್ತರ ಕನ್ನಡಕ್ಕೆ ಸುಸಜ್ಜಿತ ಆಸ್ಪತ್ರೆ ಬೇಕು ಎಂಬ ನಿಟ್ಟಿನಲ್ಲಿ ಅಭಿಯಾನವನ್ನೇ ಮಾಡುತ್ತಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
4. Next CM | ಸಿಎಂ ಯಾರೆಂದು ಡಿಸೈಡ್ ಮಾಡೋದು ಬೆಂಗ್ಳೂರು, ಮೈಸೂರು, ಕಲಬುರಗೀಲಿ ಅಲ್ಲ; ಖರ್ಗೆ
ಕಾಂಗ್ರೆಸ್‌ನೊಳಗೆ ಸಿಎಂ ಪದವಿ (Next CM) ಕಿತ್ತಾಟ ಮುಂದುವರಿದಿರುವ ಬೆನ್ನಲ್ಲೇ ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪಕ್ಷದೊಳಗಿನ ನಾಯಕರಿಗೆ ಮೊಟಕಿದ್ದಾರೆ. ಚುನಾವಣೆಯ ಫಲಿತಾಂಶಕ್ಕೂ ಮುನ್ನವೇ ನಾನು ಸಿಎಂ-ನಾನು ಸಿಎಂ ಎಂದು ಹೇಳುವುದು ಸರಿಯಲ್ಲ ಎಂದಿದ್ದಾರೆ. ಈ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಯಾರಾಗಬೇಕು ಎಂಬುದು ಮೈಸೂರು, ಬೆಂಗಳೂರು, ಕಲಬುರಗಿಯಲ್ಲೋ ತೀರ್ಮಾನ ಆಗುವ ವಿಷಯ ಅಲ್ಲ. ಅದನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅವತ್ತಿನ ರಾಜಕೀಯ ಪರಿಸ್ಥಿತಿ ಆಧಾರದ ಮೇಲೆ ಹೈಕಮಾಂಡ್ ಯಾರಿಗೆ ನಾಯಕತ್ವ ಕೊಡಬೇಕು ಎಂಬುದನ್ನು ತೀರ್ಮಾನ ಮಾಡುತ್ತದೆ ಎಂದು ಖರ್ಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
5. Kasturirangan Report | ಪಶ್ಚಿಮಘಟ್ಟ ತಪ್ಪಲಿನ ಜನರ ನಿದ್ರೆಗೆಡಿಸಿದ ಈ ವರದಿ ಬಂದಿದ್ದಾದರೂ ಏಕೆ?
ಮುಂಬಯಿಯಲ್ಲಿ ಖಗೋಳ ವಿಜ್ಞಾನ ಓದಿ, ಅಹ್ಮದಾಬಾದ್‌ನಲ್ಲಿ ತಾರಾಲೋಕದ ತಜ್ಞರೆನಿಸಿ, ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೊ) ನೇತೃತ್ವ ವಹಿಸಿ, ದೇಶದ ಬಾಹ್ಯಾಕಾಶ ಯೋಜನೆಗಳಿಗೆ ರೆಕ್ಕೆಪುಕ್ಕ ಕಟ್ಟಿ, ‘ಚಂದ್ರಯಾನ’ದ ಮೂಲಕ ಚಂದ್ರನಲ್ಲಿಯೂ ನೀರ ಪಸೆ ಇದೆ ಎಂದು ಪತ್ತೆ ಹಚ್ಚಿ, ದೇಶದ ನೂತನ ಶಿಕ್ಷಣ ವ್ಯವಸ್ಥೆಯ ರೂವಾರಿಗಳಲ್ಲಿ ಒಬ್ಬರೆನಿಸಿದ, ಶ್ರೀಯುತ ಕಸ್ತೂರಿ ರಂಗನ್, ಪಶ್ಚಿಮ ಘಟ್ಟದಲ್ಲಿನ ಪರಿಸರ ಸಂರಕ್ಷಿಸುವ ಕುರಿತು ಈ ವರದಿ (Kasturirangan Report) ನೀಡಿದ್ದಾದರೂ ಏಕೆ? (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
6. State Highway Scam | ₹224 ಕೋಟಿ ವೆಚ್ಚದ ಹೆದ್ದಾರಿ ಕಾಮಗಾರಿಯಲ್ಲಿ ಭಾರಿ ಭ್ರಷ್ಟಾಚಾರ!
ಶಿವಮೊಗ್ಗ ಜಿಲ್ಲೆಯಲ್ಲಿ ರಾಜ್ಯ ಹೆದ್ದಾರಿ (State Highway Scam) ಉನ್ನತೀಕರಣ ಕಾಮಗಾರಿಯಲ್ಲಿ ಬಹು ದೊಡ್ಡ ಅವ್ಯವಹಾರ ನಡೆದಿದೆ. 224 ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ಬೃಹತ್ ಕಾಮಗಾರಿಯಲ್ಲಿ ನಕಲಿ ಅಳತೆ ಸೃಷ್ಟಿಸಿ ಅಕ್ರಮವಾಗಿ ಬಿಲ್ ಮಾಡಿ ಸರ್ಕಾರಕ್ಕೆ ಮೋಸ ಎಸಗಲಾಗಿದೆ. ಮೂರು ವರ್ಷಗಳ ಹಿಂದೆಯೇ ಅಕ್ರಮದ ವಿರುದ್ಧ ಲೋಕಾಯುಕ್ತಕ್ಕೆ ದೂರು ದಾಖಲಾಗಿದ್ದರೂ ಆರೋಪಿತ ಅಧಿಕಾರಿಗಳು ನಿರಾತಂಕವಾಗಿ ಸೇವೆಯಲ್ಲಿ ಮುಂದುವರಿದಿದ್ದಾರೆ. ಇದೀಗ ತನಿಖೆ ನಡೆದು 7 ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದಾರೆಂದು ಲೋಕಾಯುಕ್ತ ತನಿಖಾ ವರದಿ ಸಲ್ಲಿಸಿದ್ದರೂ ಇವರ ವಿರುದ್ಧ ಯಾವುದೇ ಕ್ರಮವಾಗಿಲ್ಲ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
7. Bengal SSC Scam | ಆಪ್ತೆ ಮನೆಯಲ್ಲಿ 20 ಕೋಟಿ ರೂ. ಪತ್ತೆ; ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಅರೆಸ್ಟ್
ಪಶ್ಚಿಮ ಬಂಗಾಳದ ಕೈಗಾರಿಕೆ, ವಾಣಿಜ್ಯ ಮತ್ತು ಉದ್ಯಮ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿಯವರನ್ನು ಇ.ಡಿ. ಅಧಿಕಾರಿಗಳು ಇಂದು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಶಾಲಾ ಸೇವಾ ಆಯೋಗದ ನೇಮಕಾತಿ ಹಗರಣದಡಿ ಇ.ಡಿ. ಅಧಿಕಾರಿಗಳು ಕಳೆದ ಎರಡು ದಿನಗಳಿಂದಲೂ ರೇಡ್ ಮಾಡುತ್ತಿದ್ದಾರೆ. ಪಾರ್ಥ ಚಟರ್ಜಿಯವರನ್ನು ಕಳೆದ 26 ತಾಸುಗಳಿಂದ ವಿಚಾರಣೆಗೆ ಒಳಪಡಿಸಿದ್ದ ಇ.ಡಿ. ಇಂದು ಬೆಳಗ್ಗೆ ಬಂಧಿಸಿದೆ. ಪಾರ್ಥ ಚಟರ್ಜಿ ಟಿಎಂಸಿಯ ಪ್ರಬಲ ನಾಯಕರು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಹಗರಣ ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಡಿ ತನಿಖೆ ನಡೆಸುತ್ತಿದೆ. ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಕೂಡ ಈ ಕೇಸ್‌ನಲ್ಲಿ ಇ.ಡಿ. ವಿಚಾರಣೆಗೆ ಒಳಪಟ್ಟಿದ್ದಾರೆ. ಹಾಗೇ ಅವರನ್ನೂ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
8. ಎಲೆಕ್ಷನ್ ಹವಾ | ಮೇಲುಕೋಟೆ | ಪುಟ್ಟರಾಜು ವಿರುದ್ಧ ಮೇಲುಗೈಗೆ ಪುಟ್ಟಣ್ಣಯ್ಯ ಪುತ್ರನ ಪ್ರಯತ್ನ
ವಿಧಾನಸಭೆ ಚುನಾವಣೆಗೆ ಇನ್ನು ಒಂದು ವರ್ಷಕ್ಕೂ ಕಡಿಮೆ ಸಮಯವಿದೆ. ಈಗಾಗಲೆ ಅನೇಕ ಕ್ಷೇತ್ರಗಳಲ್ಲಿ ಚುನಾವಣೆ ಕಾವು ಏರುತ್ತಿದೆ. ಸ್ಪರ್ಧಾಕಾಂಕ್ಷಿಗಳು ತಮ್ಮ ಸ್ಪರ್ಧಾ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳುವ ಭರದಲ್ಲಿದ್ದಾರೆ. ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರದ ಸಂಪೂರ್ಣ ಮಾಹಿತಿಯನ್ನು ವಿಸ್ತಾರ ನ್ಯೂಸ್ ಪ್ರತಿನಿತ್ಯ ನೀಡುತ್ತದೆ. ಮೊದಲ ಕಂತಿನಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆ ಹಾಗೂ ಕೆ.ಆರ್. ಪೇಟೆ ಕ್ಷೇತ್ರದ ಚಿತ್ರಣ ನೀಡಲಾಗಿದೆ.
9. IND vs WI ODI: ವಿಂಡೀಸ್ ವಿರುದ್ಧ ಸತತ 6ನೇ ಜಯ ಸಾಧಿಸಿದ ಭಾರತ
ವೆಸ್ಟ್ ಇಂಡೀಸ್ ತಂಡ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುವ ಮೂಲಕ ಆ ತಂಡದ ವಿರುದ್ಧದ ಏಕದಿನ ಪಂದ್ಯದ ಗೆಲುವಿನ ಸರಣಿಯನ್ನು ೬ಕ್ಕೆ ಏರಿಸಿಕೊಂಡಿದೆ. ವಿಂಡೀಸ್ ಪ್ರವಾಸದಲ್ಲಿ ಭಾರತ ತಂಡದ ಹಿರಿಯ ಆಟಗಾರರು ಪಾಲ್ಗೊಂಡಿಲ್ಲ. ಆದಾಗ್ಯೂ ಮೊದಲ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿದೆ. ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಬೌಲಿಂಗ್‌ನಲ್ಲಿ ಎದುರಾಳಿ ತಂಡವನ್ನು ನಿಯಂತ್ರಣ ಮಾಡಲು ಪೇಚಾಡಬೇಕಾಯಿತು. ಆದರೆ, ಬೃಹತ್ ಮೊತ್ತವನ್ನು ಪೇರಿಸಿದ್ದ ಕಾರಣ ಭಾರತ ಜಯ ಗಳಿಸಲು ನೆರವಾಯಿತು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
10. BBMP | ಕಸದ ವಾಹನಗಳ ಮೇಲೆ ಬಿಬಿಎಂಪಿ ನಾಮಫಲಕ ಹಾಕುವಂತಿಲ್ಲ; ಏನಿದು ಹೊಸ ರೂಲ್ಸ್?
ನಗರದಲ್ಲಿ ವಾರಕ್ಕೊಂದು ಎಂಬಂತೆ ಕಸದ ಲಾರಿಗಳಿಂದ ಅಪಘಾತ ಸಂಭವಿಸುತ್ತಿದ್ದರಿಂದ ಬಿಬಿಎಂಪಿ (BBMP) ವಿರುದ್ಧ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ತನ್ನ ಮೇಲಿನ ಆರೋಪವನ್ನು ಕಳಚಿಕೊಳ್ಳುವ ಪ್ರಯತ್ನದ ಭಾಗವಾಗಿ, ಪಾಲಿಕೆ ವ್ಯಾಪ್ತಿಯ ಕಸದ ವಾಹನಗಳ ಮೇಲೆ ಬಿಬಿಎಂಪಿ ನಾಮಫಲಕ ಹಾಕುವಂತಿಲ್ಲ ಎಂಬ ಆದೇಶ ಹೊರಡಿಸಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)