1.ಸನಾತನ ಧರ್ಮದ ನಿರ್ನಾಮವೇ ಇಂಡಿಯಾ ಒಕ್ಕೂಟದ ಗುರಿ; ಚಾಟಿ ಬೀಸಿದ ಮೋದಿ
ಸನಾತನ ಧರ್ಮದ ನಿರ್ಮೂಲನೆ ಕುರಿತು ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ವಿವಾದಿತ ಹೇಳಿಕೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ. “ಇಂಡಿಯಾ ಒಕ್ಕೂಟದ ಉದ್ದೇಶವು ಸನಾತನ ಧರ್ಮವನ್ನು (Sanatana Dharma) ನಿರ್ಮೂಲನೆ ಮಾಡುವುದೇ ಆಗಿದೆ. ಹಾಗಾಗಿ, ಇಂತಹ ದುಷ್ಟ ಉದ್ದೇಶದ ವಿರುದ್ಧ ನಾವು ಒಗ್ಗಟ್ಟಾಗಬೇಕು” ಎಂದಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
2. 11 ಜಿಲ್ಲೆಗಳು ಸಂಪೂರ್ಣ ಬರ ಪೀಡಿತ, 161 ತಾಲೂಕುಗಳ ಪಟ್ಟಿ ಇಲ್ಲಿದೆ
ರಾಜ್ಯದ 161 ತಾಲೂಕುಗಳನ್ನು ಬರಪೀಡಿತ (Drought Taluk) ತಾಲೂಕುಗಳು ಎಂದು ಘೋಷಿಸಿ ರಾಜ್ಯ ಸರ್ಕಾರ (Karnataka State Government) ಆದೇಶ ಹೊರಡಿಸಿದೆ. ಇದರಲ್ಲಿ ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಮೈಸೂರು, ಮಂಡ್ಯ, ಕೊಪ್ಪಳ, ಶಿವಮೊಗ್ಗ, ಕಲಬುರಗಿ, ವಿಜಯಪುರ, ಧಾರವಾಡ, ವಿಜಯನಗರ ಜಿಲ್ಲೆಗಳ ಸಂಪೂರ್ಣ ತಾಲೂಕುಗಳು ಬರ ಎಂದು ಘೋಷಿಸಲ್ಪಟ್ಟಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3. ಕೇರಳದಲ್ಲಿ ನಿಫಾ ವೈರಸ್ ಹಾವಳಿ; ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ; ಲಾಕ್‌ಡೌನ್ ಜಾರಿ?
ಕೇರಳದಲ್ಲಿ ನಿಫಾ ಸೋಂಕಿನ ಹಾವಳಿ ಜಾಸ್ತಿಯಾಗುತ್ತಿದೆ. ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ನಿಫಾ ಸೋಂಕು (Nipah Virus) ತಗುಲಿದೆ. ಇದರೊಂದಿಗೆ ರಾಜ್ಯದಲ್ಲಿ ನಿಫಾ ಸೋಂಕಿಗೆ ತುತ್ತಾದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಈಗಾಗಲೇ ಇಬ್ಬರು ಸೋಂಕಿತರು ಮೃತಪಟ್ಟಿದ್ದು, ಜನರಲ್ಲಿ ಆತಂಕ ಜಾಸ್ತಿಯಾಗುತ್ತಿದೆ. ಹಾಗೆಯೇ, ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಯಾಗುತ್ತದೆ ಎಂಬ ಮಾತುಗಳು ಕೂಡ ಕೇಳಿಬಂದಿವೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: ನಿಫಾ ವೈರಸ್ ಬಗ್ಗೆ ನಿಗಾ ಇರಲಿ! ಇದರ ಲಕ್ಷಣವೇನು?
4. ಚೈತ್ರಾ ಕುಂದಾಪುರ ವಂಚನೆ ಕೇಸು: ಸ್ವಾಮೀಜಿ ಅರೆಸ್ಟ್ ಆದರೆ ದೊಡ್ಡವರು ಸಿಕ್ಕಿಬೀಳ್ತಾರಾ?
ಚೈತ್ರಾ ಕುಂದಾಪುರ (Chaitra Kundapura) ಗ್ಯಾಂಗ್‌ನಿಂದ ನಡೆಸಿರುವ ಐದು ಕೋಟಿ ರೂ. ವಂಚನೆ ಪ್ರಕರಣ ಅಂತಿಮವಾಗಿ ರಾಜಕಾರಣದ ಪಡಸಾಲೆಗೂ ಬರುತ್ತದೆಯೇ ಎನ್ನುವ ಪ್ರಶ್ನೆ ಗಂಭೀರವಾಗಿ ಕೇಳಿಬಂದಿದೆ. ಪ್ರಕರಣದಲ್ಲಿ ನೇರವಾಗಿ 1.5 ಕೋಟಿ ರೂ. ಪಡೆದುಕೊಂಡ ಅಭಿನವ ಹಾಲಶ್ರೀ ಸ್ವಾಮೀಜಿ (Abhinava Halasree Swameeji) ಅವರ ಬಂಧನ ಇನ್ನೂ ಆಗಿಲ್ಲ. ಅವರ ಬಂಧನ ಆಗ್ಲಿ ಎಲ್ಲಾ ಸತ್ಯ ಹೊರಬೀಳುತ್ತದೆ ಎಂದು ಚೈತ್ರ ಕುಂದಾಪುರ ಹೇಳಿದ್ದಕ್ಕೂ ಇನ್ನೂ ಸ್ವಾಮೀಜಿ ಬಂಧನ ಆಗದೆ ಇರುವುದಕ್ಕೂ ಏನಾದರೂ ಸಂಬಂಧವಿದೆಯಾ ಎಂಬ ಪ್ರಶ್ನೆ ಗಾಢವಾಗಿ ಕಾಡಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ 1: ವಂಚನೆ ಕಥೆ ಅತ್ಲಾಗಿರಲಿ, ಕಡುಬಡವ ಗೋವಿಂದ ಪೂಜಾರಿ ಮಹಾಸಾಧಕನಾದ Motivational ಕಥೆ ಕೇಳಿ
ಪೂರಕ ಸುದ್ದಿ 2: ಯಾರ‍್ರೀ ಆ ಚೈತ್ರಾ ಕುಂದಾಪುರ? ; ರಾಜ್ಯ ಬಿಜೆಪಿ ನಾಯಕರಿಗೆ ಮೋದಿ ಕಚೇರಿಯಿಂದಲೇ ಫೋನ್
5.ಆಧಾರ್‌ನಿಂದ ಡಿಎಲ್‌ವರೆಗೆ; ಅ.1ರಿಂದ ಎಲ್ಲದಕ್ಕೂ ಇದೊಂದೇ ಡಾಕ್ಯುಮೆಂಟ್ ಸಾಕು
ಜನನ ಹಾಗೂ ಮರಣ ನೋಂದಣಿ (ತಿದ್ದುಪಡಿ) ಕಾಯ್ದೆ ಯು (2023) ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಇದರಿಂದ ಒಂದೇ ದಾಖಲೆ ನೀಡುವ ಮೂಲಕ ಹತ್ತಾರು ದಾಖಲೆಯನ್ನು ಪಡೆಯಬಹುದಾಗಿದೆ. ಅಂದರೆ ಆಧಾರ್‌ನಿಂದ ಡಿಎಲ್‌ವರೆಗೆ ಎಲ್ಲದಕ್ಕೂ ಒಂದೇ ಡಾಕ್ಯುಮೆಂಟ್ ಸಾಕು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ಅನಂತ್ ನಾಗ್ ಎನ್‌ಕೌಂಟರ್: ಉಗ್ರರ ಗುಂಡಿಗೆ ಎದೆಯೊಡ್ಡಿದವರ ಹಿಂದಿವೆ ಹೃದಯಸ್ಪರ್ಶಿ ಕತೆಗಳು
”ನಾವು ಬೇಗನೆ ಹೊಸ ಮನೆಗೆ ಹೋಗೋಣ,” ಎಂದು ತನ್ನ 2 ವರ್ಷದ ಮಗಳಿಗೆ ಹೇಳಿ ಹೋಗಿದ್ದ ಮೇಜರ್ ಆಶೀಷ್ ಧೋನೌಕ್, ಗುಂಡಿಗೆ ಎದೆಯೊಡ್ಡುವ ಕೆಲವೇ ಗಂಟೆಗಳ ಹಿಂದೆ 6 ವರ್ಷದ ಮಗ ಹಾಗೂ 2 ವರ್ಷದ ಮಗಳೊಂದಿಗೆ ಮಾತನಾಡಿದ್ದ ಕರ್ನಲ್ ಮನಪ್ರೀತ್ ಸಿಂಗ್, ತಿಂಗಳ ಹಿಂದೆಯಷ್ಟೇ ಅಪ್ಪನಾಗಿದ್ದ ಡಿವೈಎಸ್‌ಪಿ ಹುಮಾಯೂನ್ ಭಟ್ ಅವರೀಗ ನೆನಪಷ್ಟೇ.. ದೇಶದ ಗಡಿ ರಕ್ಷಣೆಯಲ್ಲಿ ತಮ್ಮ ಪ್ರಾಣಗಳನ್ನೇ ಅರ್ಪಿಸಿ ಹುತಾತ್ಮರಾಗಿದ್ದಾರೆ. ಒಬೊಬ್ಬರ ಸಾವಿನ ಹಿಂದೆಯೂ ಒಂದೊಂದು ಕಣ್ಣೀರ ಕಥೆ ಇದೆ.. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ದೆಹಲಿಯಲ್ಲಿ ಶಿವಮೊಗ್ಗ ಮೂಲದ ಐಸಿಸ್ ಉಗ್ರ ಅರಾಫತ್ ಅಲಿ ಸೆರೆ, ತೀವ್ರ ವಿಚಾರಣೆ
ಉಗ್ರ ಸಂಘಟನೆಯಲ್ಲಿ ತೊಡಗಿಸಿಕೊಂಡು 2020ರಿಂದ ತಲೆಮರೆಸಿಕೊಂಡಿದ್ದ ಶಿವಮೊಗ್ಗ ಮೂಲದ ಅರಾಫತ್ ಅಲಿಯನ್ನು ನವ ದೆಹಲಿಯಲ್ಲಿ ಎನ್‌ಐಎ ತಂಡದ ಅಧಿಕಾರಿಗಳು ಬಂಧಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದು, ಈತ ಹಲವು ಪ್ರಕರಣಗಳಲ್ಲಿ ಬೇಕಿದ್ದಾನೆ. ವಿಚಾರಣೆ ಮೂಲಕ ಈತನಿಂದ ಇನ್ನಷ್ಟು ಮಾಹಿತಿ ಹೊರಬರಬೇಕಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿನಿಗೆ ಕಾರು ಗುದ್ದಿಸಿ ನಕ್ಕ ಪೊಲೀಸ್; ಸಾವಿಗೆ ಭಾರತ ಖಂಡನೆ
ಅಮೆರಿಕದ ಸಿಯಾಟಲ್‌ನಲ್ಲಿ ಭಾರತದ ಜಾಹ್ನವಿ ಕಂಡುಲಾ (Jaahnavi Kandula) ಎಂಬ 23 ವರ್ಷದ ವಿದ್ಯಾರ್ಥಿನಿಯು ಅಪಘಾತದಲ್ಲಿ ಮೃತಪಟ್ಟ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಜಾಹ್ನವಿ ಕಂಡುಲಾ ಅವರಿಗೆ ಪೊಲೀಸ್ ವಾಹನ ಡಿಕ್ಕಿಯಾಗಿದ್ದು, ಇದಾದ ಬಳಿಕ ಪೊಲೀಸ್ ಅಧಿಕಾರಿಯು ದರ್ಪ ತೋರಿದ ವಿಡಿಯೊ ಈಗ ವೈರಲ್ ಆಗಿದೆ. ಹಾಗೆಯೇ, ಪೊಲೀಸರ ದರ್ಪವನ್ನು ಭಾರತ ಖಂಡಿಸಿದ್ದು, ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ಕೊಹ್ಲಿ ಭೇಟಿಗಾಗಿ ಶಬರಿಯಂತೆ ಕಾದ ಲಂಕಾ ಯುವತಿ; 19 ವರ್ಷಗಳ ಬಳಿಕ ಕನಸು ನನಸು
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ(Virat Kohli) ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಪ್ರಸ್ತುತ ಏಷ್ಯಾಕಪ್(Asia Cup 2023) ಆಡುತ್ತಿರುವ ವಿರಾಟ್ ಕೊಹ್ಲಿಗೆ ಲಂಕಾದ ಅಭಿಮಾನಿಯೊಬ್ಬಳು ತಾನೇ ಮಾಡಿದ ಕೊಹ್ಲಿಯ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿ ಗಮನಸೆಳೆದಿದ್ದಾಳೆ. ಆಕೆ ಈ ಕ್ಷಣಕ್ಕಾಗಿ 17 ವರ್ಷಗಳಿಂದ ಕಾಯುತ್ತಿದ್ದಳಂತೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಟಿಆರ್‌ಪಿಯಲ್ಲಿ ಏರಿಕೆ ಕಂಡ ಅಮೃತಧಾರೆ, ಗಟ್ಟಿಮೇಳಕ್ಕೆ ನಾಲ್ಕನೇ ಸ್ಥಾನ
ʻಸೀತಾ ರಾಮ’ ಧಾರಾವಾಹಿ ಇದೀಗ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಗೆ ದಿನೇದಿನೆ ಹೆಚ್ಚು ಪೈಪೋಟಿ ನೀಡಲು ಶುರು ಮಾಡಿದೆ. ಯಾವಾಗಲೂ ‘ಗಟ್ಟಿಮೇಳ’ ಎರಡನೇ ಸ್ಥಾನವನ್ನು ಕಾದಿರಿಸಿಕೊಂಡಿತ್ತು. ಆದರೀಗ ನಾಲ್ಕನೇ ಸ್ಥಾನಕ್ಕೆ ಬಂದು ನಿಂತಿದೆ. ಅಮೃತಧಾರೆ ಧಾರಾವಾಹಿ ಟಿಆರ್‌ಪಿ ಏರಿಕೆ ಕಂಡಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ