Site icon Vistara News

ವಿಸ್ತಾರ TOP 10 NEWS | ಅಯೋಧ್ಯೆಯಲ್ಲಿ ಮೋದಿ ಮೋಡಿಯಿಂದ ಕೊಹ್ಲಿ-ಪಾಂಡ್ಯ ಜೋಡಿಯಾಟದವರೆಗಿನ ಪ್ರಮುಖ ಸುದ್ದಿಗಳಿವು

TOP 10 NEWS 23102022

ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ನಡೆಯುತ್ತಿರುವಂತೆಯೇ, ಪ್ರಧಾನಿ ನರೇಂದ್ರ ಮೋದಿ ತೆರಳಿ ದೀಪಾವಳಿ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಟಿ೨೦ ವಿಶ್ವ ಕಪ್‌ ಸೂಪರ್‌ ೧೨ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಹಾಗೂ ಹಾರ್ದಿಕ್‌ ಪಾಂಡ್ಯ ಜತೆಯಾಟದಿಂದಾಗಿ ಭಾರತ ತಂಡ ಜಯಗಳಿಸಿದ್ದು, ಆರಂಭಿಕ ಮುನ್ನಡೆ ಸಾಧಿಸಿದೆ. ನಿವೇಶನ ಕೇಳಲು ಬಂದ ಮಹಿಳೆಯ ಕೆನ್ನೆಗೆ ಸಚಿವ ಸೋಮಣ್ಣ ಹೊಡೆದಿದ್ದಾರೆ, ಭಾರತ್‌ ಜೋಡೋ ಯಾತ್ರೆ ಕರ್ನಾಟಕ ಭಾಗವನ್ನು ಮುಗಿಸಿ ತೆಲಂಗಾಣ ಪ್ರವೇಶಿಸಿದೆ, ವಿಧಾನಸಭೆ ಉಪ ಸಭಾಪತಿ ಆನಂದ ಮಾಮನಿ ನಿಧನರಾಗಿದ್ದಾರೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ರಾಮನ ಆದರ್ಶ, ಸಂವಿಧಾನದ ಆಶಯ ಪಾಲನೆಯೇ ಗುರಿ: ಅಯೋಧ್ಯೆಯಲ್ಲಿ ಮೋದಿ

ಆರನೇ ದೀಪೋತ್ಸವದ ಹಿನ್ನೆಲೆಯಲ್ಲಿ ರಾಮ ಜನ್ಮಭೂಮಿ ಅಯೋಧ್ಯೆಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಮೋದಿ (Modi In Ayodhya)ರಾಮಲಲ್ಲಾನ ದರ್ಶನದ ಜತೆಗೆ ರಾಮ ಮಂದಿರ ನಿರ್ಮಾಣದ ಕಾಮಗಾರಿಯನ್ನೂ ವೀಕ್ಷಿಸಿದ್ದಾರೆ. ಹಾಗೆಯೇ, ಶ್ರೀರಾಮನ ಭಕ್ತರನ್ನುದ್ದೇಶಿಸಿ ಮಾತನಾಡಿದ ಅವರು, “ಶ್ರೀರಾಮನ ಆದರ್ಶ ಹಾಗೂ ಸಂವಿಧಾನದ ಆಶಯಗಳ ಪಾಲನೆಯೇ ನಮ್ಮ ಆಡಳಿತದ ಗುರಿಯಾಗಿದೆ” ಎಂದು ಹೇಳಿದ್ದಾರೆ. “ರಾಮನ ಆದರ್ಶವು ಎಲ್ಲರಿಗೂ ಪ್ರೇರಣೆಯಾಗಿದೆ. ರಾಮನ ಆದರ್ಶ, ದೂರದೃಷ್ಟಿಯಂತೆ ಭಾರತವು ಏಳಿಗೆ ಹೊಂದುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಪ್ರಗತಿಯು ಹೊಸ ದಿಕ್ಕು ಪಡೆಯಲಿದೆ” ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Ayodhya | ₹20,000 ಕೋಟಿ ವೆಚ್ಚದಲ್ಲಿ ಜಾಗತಿಕ ಪ್ರವಾಸಿ, ಧಾರ್ಮಿಕ ನಗರವಾಗಲಿದೆ ಅಯೋಧ್ಯೆ!

ಅಯೋಧ್ಯೆಯಲ್ಲಿ ಈ ಸಲದ ಹಾಗೂ ಮುಂದಿನ ವರ್ಷದ ದೀಪಾವಳಿಗೆ ವಿಶೇಷ ಮಹತ್ವ ಇದೆ. ಸುಮಾರು 18 ಲಕ್ಷ ಮಣ್ಣಿನ ಹಣತೆಗಳು ಬೆಳಗಲಿದ್ದು, ದೀಪೋತ್ಸವದ ( Deepotsav in Ayodhya) ಸಂಭ್ರಮ ಇದೀಗ ಮುಗಿಲು ಮುಟ್ಟಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಗಮನಕ್ಕೆ ಐತಿಹಾಸಿಕ ನಗರಿ ಸಜ್ಜಾಗಿದೆ. ಜತೆಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಸುಮಾರು ಅರ್ಧದಷ್ಟು ಕೆಲಸಗಳು ಈಗಾಗಲೇ ನಡೆದಿವೆ. ಮುಂದಿನ ದೀಪಾವಳಿಯ ವೇಳೆಗೆ (2023ರ ಅಂತ್ಯಕ್ಕೆ) ಬಹುಶಃ ರಾಮ ಮಂದಿರ ನಿರ್ಮಾಣ ಉದ್ಘಾಟನೆಗೆ ಸಜ್ಜಾಗಲಿದೆ. ಆಗ ಇಡೀ ಅಯೋಧ್ಯೆ ಆಮೂಲಾಗ್ರವಾಗಿ ಬದಲಾಗಲಿದೆ. ಅಯೋಧ್ಯೆಯನ್ನು ಜಾಗತಿಕ ಮಹತ್ವದ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಹಾಗೂ ಉತ್ತರಪ್ರದೇಶ ಸರ್ಕಾರ ಸಂಕಲ್ಪಿಸಿವೆ. ಸುಮಾರು 20,000 ಕೋಟಿ ರೂ. ಮೌಲ್ಯದ ಯೋಜನೆಗಳು ಈಗಾಗಲೇ ಅನುಷ್ಠಾನದ ಹಂತದಲ್ಲಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. IND VS PAK | ಭಾರತದ ಮುಡಿಗೆ ಗೆಲುವಿನ ಕಿರೀಟ ಇಟ್ಟ ವಿರಾಟ್‌- ಪಾಂಡ್ಯ ಶತಕದ ಜತೆಯಾಟ

ವಿರಾಟ್‌ ಕೊಹ್ಲಿ (೮೨*), ಹಾರ್ದಿಕ್‌ ಪಾಂಡ್ಯ(೪೦) ಅವರ ಶತಕದ ಜತೆಯಾಟದ ನೆರವಿನಿಂದ ಭಾರತ ತಂಡ ಪಾಕಿಸ್ತಾನ ವಿರುದ್ಧ ಟಿ೨೦ ವಿಶ್ವ ಕಪ್‌ ಸೂಪರ್‌ ೧೨ ಪಂದ್ಯದಲ್ಲಿ ೪ ವಿಕೆಟ್‌ಗಳ ಗೆಲುವು ದಾಖಲಿಸಿ ಹಾಲಿ ವಿಶ್ವ ಕಪ್‌ ಕೂಟದಲ್ಲಿ ಶುಭಾರಂಭ ಕಂಡಿದೆ. ಈ ಮೂಲಕ ಈ ಇಬ್ಬರು ಸ್ಟಾರ್ ಬ್ಯಾಟರ್‌ಗಳು ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕ್‌ ವಿರುದ್ಧದ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲುವಿನ ಕಿರೀಟ ಇಟ್ಟರು. ಮೆಲ್ಬೋರ್ನ್‌ ಕ್ರಿಕೆಟ್‌ ಮೈದಾನದಲ್ಲಿ ನಡೆದ ಭಾನುವಾರದ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ತಾನ ಆರಂಭಿಕ ಆಘಾತದ ಹೊರತಾಗಿಯೂ ನಿಗದಿತ ೨೦ ಓವರ್‌ಗಳಲ್ಲಿ ೮ ವಿಕೆಟ್‌ ನಷ್ಟಕ್ಕೆ ೧೫೯ ರನ್‌ ಗಳಿಸಿ, 160 ರನ್‌ ಗುರಿ ನೀಡಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. IND vs PAK | ಚೇಸ್‌ ಮಾಸ್ಟರ್‌ ವಿರಾಟ್‌ ಕೊಹ್ಲಿಯ ಸಾಮರ್ಥ್ಯ ಮತ್ತೊಮ್ಮೆ ಸಾಬೀತು

ಪಾಕಿಸ್ತಾನ ತಂಡ ನೀಡಿದ್ದ (IND vs PAK) ೧೬೦ ರನ್‌ಗಳ ಗೆಲುವಿನ ಗುರಿಯೊಂದಿಗೆ ಆಡುತ್ತಿದ್ದ ಭಾರತ ತಂಡ ೩೧ ರನ್‌ಗಳಿಗೆ ನಾಲ್ಕು ವಿಕೆಟ್‌ ಕಳೆದುಕೊಂಡಿದ್ದಾಗ, ಅಭಿಮಾನಿಗಳೆಲ್ಲರೂ ಗೆಲುವಿನ ಆಸೆ ಬಿಟ್ಟಿದ್ದರು. ಆರಂಭಿಕ ಬ್ಯಾಟರ್‌ಗಳಿಗೆ ಹಿಡಿ ಶಾಪ ಹಾಕುತ್ತಾ ಪಾಕ್‌ ವಿರುದ್ಧ ಟಿ೨೦ ವಿಶ್ವ ಕಪ್‌ನಲ್ಲಿ ಮತ್ತೊಂದು ಸೋಲು ಗ್ಯಾರಂಟಿ ಎಂದು ಅಂದುಕೊಂಡಿದ್ದರು. ಆದಾಗ್ಯೂ ಕಿಂಗ್‌ ಕೊಹ್ಲಿ ಕ್ರೀಸ್‌ನಲ್ಲಿ ಇರುವುದು ಎಲ್ಲರಿಗೂ ಭರವಸೆಯ ಆಶಾಕಿರಣವಾಗಿತ್ತು. ಕೋಟ್ಯಂತದ ಭಾರತ ತಂಡದ ಅಭಿಮಾನಿಗಳ ನಿರೀಕ್ಷೆ ಸುಳ್ಳಾಗಲಿಲ್ಲ. ಅಜೇಯ ೮೨ ರನ್‌ ಬಾರಿಸಿದ ರನ್ ಮಷಿನ್‌ ವಿರಾಟ್‌ ಕೊಹ್ಲಿ ತಂಡವನ್ನು ಗೆಲ್ಲಿಸಿ ಕೊಟ್ಟು ಮಾನ ಕಾಪಾಡಿದರು. ಈ ಮೂಲಕ ಅವರು ತಾನೊಬ್ಬ ಚೇಸ್‌ ಮಾಸ್ಟರ್‌ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Deepavali 2022 | ಬಹುಸಂಸ್ಕೃತಿಯ ಬೆಳಕಲ್ಲಿ ಬಹು ದೊಡ್ಡ ಹಬ್ಬ ದೀಪಾವಳಿ

ಕತ್ತಲೆಯು ನಮ್ಮೆದುರು ಇರುವುದನೆಲ್ಲ ಮರೆಮಾಚಿದರೆ, ಹಚ್ಚಿಟ್ಟ ಹಣತೆಯು ಸುತ್ತ ಇರುವುದನೆಲ್ಲ ಬೆಳಗುತ್ತದೆ. ಕತ್ತಲ ವಿರುದ್ಧ ದೀಪವು ನಡೆಸುವ ಯುದ್ಧದಲ್ಲಿ ದೀಪಕ್ಕೇ ಗೆಲುವು ಕಟ್ಟಿಟ್ಟಬುತ್ತಿ. ಬೆಳಕಿನ ಹಬ್ಬ ದೀಪಾವಳಿ (Deepavali 2022) ಆರಂಭವಾಗಿದೆ. ದೀಪಾವಳಿ ಹಬ್ಬಕ್ಕೂ, ದೀಪಗಳಿಗೂ ಇರುವ ಮಹತ್ವವೇನು? ಏನೆಲ್ಲಾ ಆಚರಣೆಗಳಿವೆ ಎಂದು ತಿಳಿಸಿಕೊಡುವ, ಸಂಸ್ಕೃತ ಪ್ರಾಧ್ಯಾಪಕ ಡಾ. ಗಣಪತಿ ಆರ್ ಭಟ್ ಅವರ ವಿಶೇಷ ಲೇಖನ ಇಲ್ಲಿದೆ. ಪೂರ್ಣ ಲೇಖನ ಓದಲು ಇಲ್ಲಿ ಕ್ಲಿಕ್‌ ಮಾಡಿ.

6. ನಿವೇಶನ ಕೇಳಲು ಬಂದ ಮಹಿಳೆಯ ಕಪಾಳಕ್ಕೆ ಹೊಡೆದ ಸಚಿವ ವಿ. ಸೋಮಣ್ಣ

ತಮಗೆ ನಿವೇಶನ ಬೇಕು ಎಂದು ಕೇಳಲು ಬಂದ ಮಹಿಳೆಗೆ ವಸತಿ ಸಚಿವ ವಿ. ಸೋಮಣ್ಣ ಕಪಾಳಕ್ಕೆ ಹೊಡೆದಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಹಂಗಳ ಗ್ರಾಮದ ಮಹಿಳೆ ಕೆಂಪಮ್ಮ ಅವರ ಕೆನ್ನೆಗೆ ಬಾರಿಸಿದ್ದಾರೆ. ಹಂಗಳ ಗ್ರಾಮದ ೧೭೫ ಜನರಿಗೆ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಮಧ್ಯಾಹ್ನ ೩.೩೦ಕ್ಕೆ ನಿಗದಿಯಾಗಿತ್ತು. ಆದರೆ ಸಚಿವರು ಸಂಜೆ ೬.೩೦ಕ್ಕೆ ಆಗಮಿಸಿದರು. ಈ ವೇಳೆ ನಿವೇಶನದ ಹಕ್ಕುಪತ್ರ ಪಡೆಯಲು ನೂಕುನುಗ್ಗಲು ಉಂಟಾಯಿತು. ಸಮಸ್ಯೆ ಹೇಳಿಕೊಳ್ಳಲು ಸಚಿವರ ಬಳಿಗೆ ಓರ್ವ ಮಹಿಳೆ ತೆರಳಿದರು. ಈ ಸಮಯದಲ್ಲಿ ಕೋಪಗೊಂಡ ಸೋಮಣ್ಣ, ಸಿಟ್ಟಿನಿಂದ ಮಹಿಳೆಯ ಕೆನ್ನೆಗೆ ಹೊಡೆದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: ಮಹಿಳೆಯ ಕಪಾಳಕ್ಕೆ ಹೊಡೆದ ವಿ.ಸೋಮಣ್ಣ ರಾಜೀನಾಮೆಗೆ ಕಾಂಗ್ರೆಸ್‌ ಆಗ್ರಹ: Sorry ಎಂದ ಸಚಿವ

7. Bharat Jodo | ಕರ್ನಾಟಕ ಯಾತ್ರೆ ಮುಗಿಸಿದ ರಾಹುಲ್‌: ರಾಜ್ಯದ ಜನತೆಗೆ ಬರೆದ ಪತ್ರದಲ್ಲೇನಿದೆ?

ಕನ್ಯಾಕುಮಾರಿಯಿಂದ ಆರಂಭವಾಗಿ ಕರ್ನಾಟಕದಲ್ಲಿ 22 ದಿನ ಸಾಗಿದ ಭಾರತ್‌ ಜೋಡೊ ಯಾತ್ರೆಯ ಕರ್ನಾಟಕ ಅಭಿಯಾನ ಭಾನುವಾರ ಬೆಳಗ್ಗೆ ಪೂರ್ಣಗೊಂಡಿದೆ. ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಆಯೋಜಿಸಿದ್ದ ಯಾತ್ರೆಯು ಕೃಷ್ಣಾ ನದಿಯ ತಟದಿಂದ ತೆಲಂಗಾಣ ರಾಜ್ಯ ಪ್ರವೇಶಿಸಿದೆ. ನಡುವೆ ಎರಡು ದಿನ ದಸರಾ ವಿಶ್ರಾಂತಿ, ಒಂದು ದಿನ ಎಐಸಿಸಿ ಅಧ್ಯಕ್ಷರ ಆಯ್ಕೆ ಚುನಾವಣೆ, ಎರಡು ದಿನ ಆಂಧ್ರ ನಡಿಗೆ ಹೊರತುಪಡಿಸಿ ನಿರಂತರ ರಾಜ್ಯದಲ್ಲಿ ರಾಹುಲ್‌ ಗಾಂಧಿ ನಡೆದಿದ್ದಾರೆ. ಈ ಸಮಯದಲ್ಲಿನ ಅನುಭವವನ್ನು ಮೆಲುಕು ಹಾಕುವುದರ ಜತೆಗೆ ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸಿ ಪತ್ರವೊಂದನ್ನು ಬರೆದಿದ್ದಾರೆ. ಪೂರ್ಣ ಪತ್ರ ಓದಲು ಇಲ್ಲಿ ಕ್ಲಿಕ್‌ ಮಾಡಿ.
Bharat Jodo | ಕಾರ್ನರ್ ಮೀಟಿಂಗ್‌ ವೇದಿಕೆಯಲ್ಲಿ ನಟಿ ರಮ್ಯಾಗೆ ನೋ ಎಂಟ್ರಿ; ಸಿಬ್ಬಂದಿ ವಿರುದ್ಧ ಗರಂ ಆಗಿ ನಿರ್ಗಮನ

8. Anand Mamani | ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ್‌ ಮಾಮನಿ ಇನ್ನಿಲ್ಲ

ವಿಧಾನಸಭೆ ಉಪ ಸಭಾಧ್ಯಕ್ಷ, ಸವದತ್ತಿ ಯಲ್ಲಮ್ಮ ಕ್ಷೇತ್ರದ ಬಿಜೆಪಿ ಶಾಸಕ ಆನಂದ್‌ ಮಾಮನಿ (56) (Anand Mamani) ನಿಧನರಾಗಿದ್ದಾರೆ. ಹಲವು ದಿನಗಳಿಂದ ಮಾಮನಿ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಧ್ಯರಾತ್ರಿ ಮೃತಪಟ್ಟಿದ್ದಾರೆ. ಸವದತ್ತಿ ಹೊರವಲಯದ ಫಾರ್ಮ್ ಹೌಸ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಕುಟುಂಬಸ್ಥರು, ಬಂಧುಗಳು ಹಾಗೂ ಸಾವಿರಾರು ಮಂದಿ ಕಾರ್ಯಕರ್ತರ ಸಮ್ಮುಖದಲ್ಲಿ ನೆರವೇರಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Sonia Gandhi | ಸೋನಿಯಾ ಗಾಂಧಿ ಒಡೆತನದ 2 ಎನ್‌ಜಿಒಗಳ ಲೈಸೆನ್ಸ್ ರದ್ದುಗೊಳಿಸಿದ ಕೇಂದ್ರ

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ (Sonia Gandhi) ಒಡೆತನದ ಎರಡು ಸರ್ಕಾರೇತರ ಸಂಘ-ಸಂಸ್ಥೆ (NGO)ಗಳ ಪರವಾನಗಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ಅಡಿಯಲ್ಲಿ ರಾಜೀವ್‌ ಗಾಂಧಿ ಫೌಂಡೇಷನ್‌ (RGF) ಹಾಗೂ ರಾಜೀವ್‌ ಗಾಂಧಿ ಚಾರಿಟೆಬಲ್‌ ಟ್ರಸ್ಟ್‌ (RGCT)ಗಳ ಪರವಾನಗಿಯನ್ನು ಕೇಂದ್ರ ಗೃಹ ಸಚಿವಾಲಯ ರದ್ದುಗೊಳಿಸಿದೆ. ಸೋನಿಯಾ ಗಾಂಧಿ ಹಾಗೂ ಅವರ ಕುಟುಂಬಸ್ಥರಿಗೆ ಸೇರಿದ ಎನ್‌ಜಿಒಗಳು ವಿದೇಶಿ ದೇಣಿಗೆ ಪಡೆಯುವಾಗ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ 2020ರಿಂದಲೂ ತನಿಖೆ ನಡೆಸಲಾಗುತ್ತಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ತೆಲಂಗಾಣದ ಮುನುಗೋಡೆ ಉಪ ಚುನಾವಣೆಯಲ್ಲಿ TRS-BJP ಹಣಾಹಣಿ

ತೆಲಂಗಾಣದ ಮುನುಗೋಡೆ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ನವೆಂಬರ್‌ 3ಕ್ಕೆ ನಡೆಯಲಿದೆ. ಆಡಳಿತಾರೂಢ ಟಿಆರ್‌ಎಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ (Telangana battle) ನಡೆಯಲಿದೆ. ಸ್ವಾರಸ್ಯವೆಂದರೆ ಈ ಸಲ ಇಲ್ಲಿ ಜಾತಿ ಕೂಡ ನಿರ್ಣಾಯಕವಾಗುವ ಸಾಧ್ಯತೆ ಇದೆ. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಬ್ಬದ ವಾತಾವರಣ ಇದ್ದು, ಮತದಾರರನ್ನು ಸೆಳೆಯಲು ಎಲ್ಲ ಪಕ್ಷಗಳು ಕಸರತ್ತು ನಡೆಸಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

1️⃣ISRO | ದೇಶದ ಮೊದಲ ವಾಣಿಜ್ಯಿಕ ಉಡಾವಣೆ ಯಶಸ್ವಿ, 36 ಉಪಗ್ರಹ ನಭಕ್ಕೆ ಹಾರಿಸಿ ಇಸ್ರೊ ಇತಿಹಾಸ
2️⃣14 ದಿನದ ಹೋರಾಟ ಮುಗಿಸಿದ ಶಿಲ್ಪಾ: ಬೆಂಗಳೂರು ವಿವಿ ಬಸ್‌ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು
3️⃣Sunday Read | ಇವು ಬದುಕು ಬದಲಿಸುವ ಕೃತಿಗಳು, ಒಮ್ಮೆಯಾದರೂ ಓದಿ!
4️⃣ಪೋಸ್ಟ್‌ ಬಾಕ್ಸ್‌ 143 | ಕಣ್ಣೀರಿಗೆ ಸ್ಪಂದಿಸುವಾಗ ಮನುಷ್ಯ ದೇವರಾಗ್ತಾನೆ!
5️ಮನಿ ಕಹಾನಿ ಅಂಕಣ | ನಿಮ್ಮ ಸಂಬಳದಲ್ಲಿ ನೀವು ಎಷ್ಟು ಉಳಿಸುತ್ತಿದ್ದೀರಿ?

Exit mobile version