ವಿಸ್ತಾರ TOP 10 NEWS | ಅಯೋಧ್ಯೆಯಲ್ಲಿ ಮೋದಿ ಮೋಡಿಯಿಂದ ಕೊಹ್ಲಿ-ಪಾಂಡ್ಯ ಜೋಡಿಯಾಟದವರೆಗಿನ ಪ್ರಮುಖ ಸುದ್ದಿಗಳಿವು - Vistara News

ಕರ್ನಾಟಕ

ವಿಸ್ತಾರ TOP 10 NEWS | ಅಯೋಧ್ಯೆಯಲ್ಲಿ ಮೋದಿ ಮೋಡಿಯಿಂದ ಕೊಹ್ಲಿ-ಪಾಂಡ್ಯ ಜೋಡಿಯಾಟದವರೆಗಿನ ಪ್ರಮುಖ ಸುದ್ದಿಗಳಿವು

ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ನಲ್ಲಿ.

VISTARANEWS.COM


on

TOP 10 NEWS 23102022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ನಡೆಯುತ್ತಿರುವಂತೆಯೇ, ಪ್ರಧಾನಿ ನರೇಂದ್ರ ಮೋದಿ ತೆರಳಿ ದೀಪಾವಳಿ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಟಿ೨೦ ವಿಶ್ವ ಕಪ್‌ ಸೂಪರ್‌ ೧೨ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಹಾಗೂ ಹಾರ್ದಿಕ್‌ ಪಾಂಡ್ಯ ಜತೆಯಾಟದಿಂದಾಗಿ ಭಾರತ ತಂಡ ಜಯಗಳಿಸಿದ್ದು, ಆರಂಭಿಕ ಮುನ್ನಡೆ ಸಾಧಿಸಿದೆ. ನಿವೇಶನ ಕೇಳಲು ಬಂದ ಮಹಿಳೆಯ ಕೆನ್ನೆಗೆ ಸಚಿವ ಸೋಮಣ್ಣ ಹೊಡೆದಿದ್ದಾರೆ, ಭಾರತ್‌ ಜೋಡೋ ಯಾತ್ರೆ ಕರ್ನಾಟಕ ಭಾಗವನ್ನು ಮುಗಿಸಿ ತೆಲಂಗಾಣ ಪ್ರವೇಶಿಸಿದೆ, ವಿಧಾನಸಭೆ ಉಪ ಸಭಾಪತಿ ಆನಂದ ಮಾಮನಿ ನಿಧನರಾಗಿದ್ದಾರೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

Blank Blue

1. ರಾಮನ ಆದರ್ಶ, ಸಂವಿಧಾನದ ಆಶಯ ಪಾಲನೆಯೇ ಗುರಿ: ಅಯೋಧ್ಯೆಯಲ್ಲಿ ಮೋದಿ

ಆರನೇ ದೀಪೋತ್ಸವದ ಹಿನ್ನೆಲೆಯಲ್ಲಿ ರಾಮ ಜನ್ಮಭೂಮಿ ಅಯೋಧ್ಯೆಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಮೋದಿ (Modi In Ayodhya)ರಾಮಲಲ್ಲಾನ ದರ್ಶನದ ಜತೆಗೆ ರಾಮ ಮಂದಿರ ನಿರ್ಮಾಣದ ಕಾಮಗಾರಿಯನ್ನೂ ವೀಕ್ಷಿಸಿದ್ದಾರೆ. ಹಾಗೆಯೇ, ಶ್ರೀರಾಮನ ಭಕ್ತರನ್ನುದ್ದೇಶಿಸಿ ಮಾತನಾಡಿದ ಅವರು, “ಶ್ರೀರಾಮನ ಆದರ್ಶ ಹಾಗೂ ಸಂವಿಧಾನದ ಆಶಯಗಳ ಪಾಲನೆಯೇ ನಮ್ಮ ಆಡಳಿತದ ಗುರಿಯಾಗಿದೆ” ಎಂದು ಹೇಳಿದ್ದಾರೆ. “ರಾಮನ ಆದರ್ಶವು ಎಲ್ಲರಿಗೂ ಪ್ರೇರಣೆಯಾಗಿದೆ. ರಾಮನ ಆದರ್ಶ, ದೂರದೃಷ್ಟಿಯಂತೆ ಭಾರತವು ಏಳಿಗೆ ಹೊಂದುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಪ್ರಗತಿಯು ಹೊಸ ದಿಕ್ಕು ಪಡೆಯಲಿದೆ” ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Ayodhya | ₹20,000 ಕೋಟಿ ವೆಚ್ಚದಲ್ಲಿ ಜಾಗತಿಕ ಪ್ರವಾಸಿ, ಧಾರ್ಮಿಕ ನಗರವಾಗಲಿದೆ ಅಯೋಧ್ಯೆ!

ಅಯೋಧ್ಯೆಯಲ್ಲಿ ಈ ಸಲದ ಹಾಗೂ ಮುಂದಿನ ವರ್ಷದ ದೀಪಾವಳಿಗೆ ವಿಶೇಷ ಮಹತ್ವ ಇದೆ. ಸುಮಾರು 18 ಲಕ್ಷ ಮಣ್ಣಿನ ಹಣತೆಗಳು ಬೆಳಗಲಿದ್ದು, ದೀಪೋತ್ಸವದ ( Deepotsav in Ayodhya) ಸಂಭ್ರಮ ಇದೀಗ ಮುಗಿಲು ಮುಟ್ಟಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಗಮನಕ್ಕೆ ಐತಿಹಾಸಿಕ ನಗರಿ ಸಜ್ಜಾಗಿದೆ. ಜತೆಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಸುಮಾರು ಅರ್ಧದಷ್ಟು ಕೆಲಸಗಳು ಈಗಾಗಲೇ ನಡೆದಿವೆ. ಮುಂದಿನ ದೀಪಾವಳಿಯ ವೇಳೆಗೆ (2023ರ ಅಂತ್ಯಕ್ಕೆ) ಬಹುಶಃ ರಾಮ ಮಂದಿರ ನಿರ್ಮಾಣ ಉದ್ಘಾಟನೆಗೆ ಸಜ್ಜಾಗಲಿದೆ. ಆಗ ಇಡೀ ಅಯೋಧ್ಯೆ ಆಮೂಲಾಗ್ರವಾಗಿ ಬದಲಾಗಲಿದೆ. ಅಯೋಧ್ಯೆಯನ್ನು ಜಾಗತಿಕ ಮಹತ್ವದ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಹಾಗೂ ಉತ್ತರಪ್ರದೇಶ ಸರ್ಕಾರ ಸಂಕಲ್ಪಿಸಿವೆ. ಸುಮಾರು 20,000 ಕೋಟಿ ರೂ. ಮೌಲ್ಯದ ಯೋಜನೆಗಳು ಈಗಾಗಲೇ ಅನುಷ್ಠಾನದ ಹಂತದಲ್ಲಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. IND VS PAK | ಭಾರತದ ಮುಡಿಗೆ ಗೆಲುವಿನ ಕಿರೀಟ ಇಟ್ಟ ವಿರಾಟ್‌- ಪಾಂಡ್ಯ ಶತಕದ ಜತೆಯಾಟ

ವಿರಾಟ್‌ ಕೊಹ್ಲಿ (೮೨*), ಹಾರ್ದಿಕ್‌ ಪಾಂಡ್ಯ(೪೦) ಅವರ ಶತಕದ ಜತೆಯಾಟದ ನೆರವಿನಿಂದ ಭಾರತ ತಂಡ ಪಾಕಿಸ್ತಾನ ವಿರುದ್ಧ ಟಿ೨೦ ವಿಶ್ವ ಕಪ್‌ ಸೂಪರ್‌ ೧೨ ಪಂದ್ಯದಲ್ಲಿ ೪ ವಿಕೆಟ್‌ಗಳ ಗೆಲುವು ದಾಖಲಿಸಿ ಹಾಲಿ ವಿಶ್ವ ಕಪ್‌ ಕೂಟದಲ್ಲಿ ಶುಭಾರಂಭ ಕಂಡಿದೆ. ಈ ಮೂಲಕ ಈ ಇಬ್ಬರು ಸ್ಟಾರ್ ಬ್ಯಾಟರ್‌ಗಳು ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕ್‌ ವಿರುದ್ಧದ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲುವಿನ ಕಿರೀಟ ಇಟ್ಟರು. ಮೆಲ್ಬೋರ್ನ್‌ ಕ್ರಿಕೆಟ್‌ ಮೈದಾನದಲ್ಲಿ ನಡೆದ ಭಾನುವಾರದ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ತಾನ ಆರಂಭಿಕ ಆಘಾತದ ಹೊರತಾಗಿಯೂ ನಿಗದಿತ ೨೦ ಓವರ್‌ಗಳಲ್ಲಿ ೮ ವಿಕೆಟ್‌ ನಷ್ಟಕ್ಕೆ ೧೫೯ ರನ್‌ ಗಳಿಸಿ, 160 ರನ್‌ ಗುರಿ ನೀಡಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Blank Blue

4. IND vs PAK | ಚೇಸ್‌ ಮಾಸ್ಟರ್‌ ವಿರಾಟ್‌ ಕೊಹ್ಲಿಯ ಸಾಮರ್ಥ್ಯ ಮತ್ತೊಮ್ಮೆ ಸಾಬೀತು

ಪಾಕಿಸ್ತಾನ ತಂಡ ನೀಡಿದ್ದ (IND vs PAK) ೧೬೦ ರನ್‌ಗಳ ಗೆಲುವಿನ ಗುರಿಯೊಂದಿಗೆ ಆಡುತ್ತಿದ್ದ ಭಾರತ ತಂಡ ೩೧ ರನ್‌ಗಳಿಗೆ ನಾಲ್ಕು ವಿಕೆಟ್‌ ಕಳೆದುಕೊಂಡಿದ್ದಾಗ, ಅಭಿಮಾನಿಗಳೆಲ್ಲರೂ ಗೆಲುವಿನ ಆಸೆ ಬಿಟ್ಟಿದ್ದರು. ಆರಂಭಿಕ ಬ್ಯಾಟರ್‌ಗಳಿಗೆ ಹಿಡಿ ಶಾಪ ಹಾಕುತ್ತಾ ಪಾಕ್‌ ವಿರುದ್ಧ ಟಿ೨೦ ವಿಶ್ವ ಕಪ್‌ನಲ್ಲಿ ಮತ್ತೊಂದು ಸೋಲು ಗ್ಯಾರಂಟಿ ಎಂದು ಅಂದುಕೊಂಡಿದ್ದರು. ಆದಾಗ್ಯೂ ಕಿಂಗ್‌ ಕೊಹ್ಲಿ ಕ್ರೀಸ್‌ನಲ್ಲಿ ಇರುವುದು ಎಲ್ಲರಿಗೂ ಭರವಸೆಯ ಆಶಾಕಿರಣವಾಗಿತ್ತು. ಕೋಟ್ಯಂತದ ಭಾರತ ತಂಡದ ಅಭಿಮಾನಿಗಳ ನಿರೀಕ್ಷೆ ಸುಳ್ಳಾಗಲಿಲ್ಲ. ಅಜೇಯ ೮೨ ರನ್‌ ಬಾರಿಸಿದ ರನ್ ಮಷಿನ್‌ ವಿರಾಟ್‌ ಕೊಹ್ಲಿ ತಂಡವನ್ನು ಗೆಲ್ಲಿಸಿ ಕೊಟ್ಟು ಮಾನ ಕಾಪಾಡಿದರು. ಈ ಮೂಲಕ ಅವರು ತಾನೊಬ್ಬ ಚೇಸ್‌ ಮಾಸ್ಟರ್‌ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Deepavali 2022 | ಬಹುಸಂಸ್ಕೃತಿಯ ಬೆಳಕಲ್ಲಿ ಬಹು ದೊಡ್ಡ ಹಬ್ಬ ದೀಪಾವಳಿ

ಕತ್ತಲೆಯು ನಮ್ಮೆದುರು ಇರುವುದನೆಲ್ಲ ಮರೆಮಾಚಿದರೆ, ಹಚ್ಚಿಟ್ಟ ಹಣತೆಯು ಸುತ್ತ ಇರುವುದನೆಲ್ಲ ಬೆಳಗುತ್ತದೆ. ಕತ್ತಲ ವಿರುದ್ಧ ದೀಪವು ನಡೆಸುವ ಯುದ್ಧದಲ್ಲಿ ದೀಪಕ್ಕೇ ಗೆಲುವು ಕಟ್ಟಿಟ್ಟಬುತ್ತಿ. ಬೆಳಕಿನ ಹಬ್ಬ ದೀಪಾವಳಿ (Deepavali 2022) ಆರಂಭವಾಗಿದೆ. ದೀಪಾವಳಿ ಹಬ್ಬಕ್ಕೂ, ದೀಪಗಳಿಗೂ ಇರುವ ಮಹತ್ವವೇನು? ಏನೆಲ್ಲಾ ಆಚರಣೆಗಳಿವೆ ಎಂದು ತಿಳಿಸಿಕೊಡುವ, ಸಂಸ್ಕೃತ ಪ್ರಾಧ್ಯಾಪಕ ಡಾ. ಗಣಪತಿ ಆರ್ ಭಟ್ ಅವರ ವಿಶೇಷ ಲೇಖನ ಇಲ್ಲಿದೆ. ಪೂರ್ಣ ಲೇಖನ ಓದಲು ಇಲ್ಲಿ ಕ್ಲಿಕ್‌ ಮಾಡಿ.

6. ನಿವೇಶನ ಕೇಳಲು ಬಂದ ಮಹಿಳೆಯ ಕಪಾಳಕ್ಕೆ ಹೊಡೆದ ಸಚಿವ ವಿ. ಸೋಮಣ್ಣ

ತಮಗೆ ನಿವೇಶನ ಬೇಕು ಎಂದು ಕೇಳಲು ಬಂದ ಮಹಿಳೆಗೆ ವಸತಿ ಸಚಿವ ವಿ. ಸೋಮಣ್ಣ ಕಪಾಳಕ್ಕೆ ಹೊಡೆದಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಹಂಗಳ ಗ್ರಾಮದ ಮಹಿಳೆ ಕೆಂಪಮ್ಮ ಅವರ ಕೆನ್ನೆಗೆ ಬಾರಿಸಿದ್ದಾರೆ. ಹಂಗಳ ಗ್ರಾಮದ ೧೭೫ ಜನರಿಗೆ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಮಧ್ಯಾಹ್ನ ೩.೩೦ಕ್ಕೆ ನಿಗದಿಯಾಗಿತ್ತು. ಆದರೆ ಸಚಿವರು ಸಂಜೆ ೬.೩೦ಕ್ಕೆ ಆಗಮಿಸಿದರು. ಈ ವೇಳೆ ನಿವೇಶನದ ಹಕ್ಕುಪತ್ರ ಪಡೆಯಲು ನೂಕುನುಗ್ಗಲು ಉಂಟಾಯಿತು. ಸಮಸ್ಯೆ ಹೇಳಿಕೊಳ್ಳಲು ಸಚಿವರ ಬಳಿಗೆ ಓರ್ವ ಮಹಿಳೆ ತೆರಳಿದರು. ಈ ಸಮಯದಲ್ಲಿ ಕೋಪಗೊಂಡ ಸೋಮಣ್ಣ, ಸಿಟ್ಟಿನಿಂದ ಮಹಿಳೆಯ ಕೆನ್ನೆಗೆ ಹೊಡೆದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: ಮಹಿಳೆಯ ಕಪಾಳಕ್ಕೆ ಹೊಡೆದ ವಿ.ಸೋಮಣ್ಣ ರಾಜೀನಾಮೆಗೆ ಕಾಂಗ್ರೆಸ್‌ ಆಗ್ರಹ: Sorry ಎಂದ ಸಚಿವ

7. Bharat Jodo | ಕರ್ನಾಟಕ ಯಾತ್ರೆ ಮುಗಿಸಿದ ರಾಹುಲ್‌: ರಾಜ್ಯದ ಜನತೆಗೆ ಬರೆದ ಪತ್ರದಲ್ಲೇನಿದೆ?

ಕನ್ಯಾಕುಮಾರಿಯಿಂದ ಆರಂಭವಾಗಿ ಕರ್ನಾಟಕದಲ್ಲಿ 22 ದಿನ ಸಾಗಿದ ಭಾರತ್‌ ಜೋಡೊ ಯಾತ್ರೆಯ ಕರ್ನಾಟಕ ಅಭಿಯಾನ ಭಾನುವಾರ ಬೆಳಗ್ಗೆ ಪೂರ್ಣಗೊಂಡಿದೆ. ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಆಯೋಜಿಸಿದ್ದ ಯಾತ್ರೆಯು ಕೃಷ್ಣಾ ನದಿಯ ತಟದಿಂದ ತೆಲಂಗಾಣ ರಾಜ್ಯ ಪ್ರವೇಶಿಸಿದೆ. ನಡುವೆ ಎರಡು ದಿನ ದಸರಾ ವಿಶ್ರಾಂತಿ, ಒಂದು ದಿನ ಎಐಸಿಸಿ ಅಧ್ಯಕ್ಷರ ಆಯ್ಕೆ ಚುನಾವಣೆ, ಎರಡು ದಿನ ಆಂಧ್ರ ನಡಿಗೆ ಹೊರತುಪಡಿಸಿ ನಿರಂತರ ರಾಜ್ಯದಲ್ಲಿ ರಾಹುಲ್‌ ಗಾಂಧಿ ನಡೆದಿದ್ದಾರೆ. ಈ ಸಮಯದಲ್ಲಿನ ಅನುಭವವನ್ನು ಮೆಲುಕು ಹಾಕುವುದರ ಜತೆಗೆ ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸಿ ಪತ್ರವೊಂದನ್ನು ಬರೆದಿದ್ದಾರೆ. ಪೂರ್ಣ ಪತ್ರ ಓದಲು ಇಲ್ಲಿ ಕ್ಲಿಕ್‌ ಮಾಡಿ.
Bharat Jodo | ಕಾರ್ನರ್ ಮೀಟಿಂಗ್‌ ವೇದಿಕೆಯಲ್ಲಿ ನಟಿ ರಮ್ಯಾಗೆ ನೋ ಎಂಟ್ರಿ; ಸಿಬ್ಬಂದಿ ವಿರುದ್ಧ ಗರಂ ಆಗಿ ನಿರ್ಗಮನ

Blank Blue

8. Anand Mamani | ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ್‌ ಮಾಮನಿ ಇನ್ನಿಲ್ಲ

ವಿಧಾನಸಭೆ ಉಪ ಸಭಾಧ್ಯಕ್ಷ, ಸವದತ್ತಿ ಯಲ್ಲಮ್ಮ ಕ್ಷೇತ್ರದ ಬಿಜೆಪಿ ಶಾಸಕ ಆನಂದ್‌ ಮಾಮನಿ (56) (Anand Mamani) ನಿಧನರಾಗಿದ್ದಾರೆ. ಹಲವು ದಿನಗಳಿಂದ ಮಾಮನಿ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಧ್ಯರಾತ್ರಿ ಮೃತಪಟ್ಟಿದ್ದಾರೆ. ಸವದತ್ತಿ ಹೊರವಲಯದ ಫಾರ್ಮ್ ಹೌಸ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಕುಟುಂಬಸ್ಥರು, ಬಂಧುಗಳು ಹಾಗೂ ಸಾವಿರಾರು ಮಂದಿ ಕಾರ್ಯಕರ್ತರ ಸಮ್ಮುಖದಲ್ಲಿ ನೆರವೇರಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Sonia Gandhi | ಸೋನಿಯಾ ಗಾಂಧಿ ಒಡೆತನದ 2 ಎನ್‌ಜಿಒಗಳ ಲೈಸೆನ್ಸ್ ರದ್ದುಗೊಳಿಸಿದ ಕೇಂದ್ರ

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ (Sonia Gandhi) ಒಡೆತನದ ಎರಡು ಸರ್ಕಾರೇತರ ಸಂಘ-ಸಂಸ್ಥೆ (NGO)ಗಳ ಪರವಾನಗಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ಅಡಿಯಲ್ಲಿ ರಾಜೀವ್‌ ಗಾಂಧಿ ಫೌಂಡೇಷನ್‌ (RGF) ಹಾಗೂ ರಾಜೀವ್‌ ಗಾಂಧಿ ಚಾರಿಟೆಬಲ್‌ ಟ್ರಸ್ಟ್‌ (RGCT)ಗಳ ಪರವಾನಗಿಯನ್ನು ಕೇಂದ್ರ ಗೃಹ ಸಚಿವಾಲಯ ರದ್ದುಗೊಳಿಸಿದೆ. ಸೋನಿಯಾ ಗಾಂಧಿ ಹಾಗೂ ಅವರ ಕುಟುಂಬಸ್ಥರಿಗೆ ಸೇರಿದ ಎನ್‌ಜಿಒಗಳು ವಿದೇಶಿ ದೇಣಿಗೆ ಪಡೆಯುವಾಗ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ 2020ರಿಂದಲೂ ತನಿಖೆ ನಡೆಸಲಾಗುತ್ತಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ತೆಲಂಗಾಣದ ಮುನುಗೋಡೆ ಉಪ ಚುನಾವಣೆಯಲ್ಲಿ TRS-BJP ಹಣಾಹಣಿ

ತೆಲಂಗಾಣದ ಮುನುಗೋಡೆ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ನವೆಂಬರ್‌ 3ಕ್ಕೆ ನಡೆಯಲಿದೆ. ಆಡಳಿತಾರೂಢ ಟಿಆರ್‌ಎಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ (Telangana battle) ನಡೆಯಲಿದೆ. ಸ್ವಾರಸ್ಯವೆಂದರೆ ಈ ಸಲ ಇಲ್ಲಿ ಜಾತಿ ಕೂಡ ನಿರ್ಣಾಯಕವಾಗುವ ಸಾಧ್ಯತೆ ಇದೆ. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಬ್ಬದ ವಾತಾವರಣ ಇದ್ದು, ಮತದಾರರನ್ನು ಸೆಳೆಯಲು ಎಲ್ಲ ಪಕ್ಷಗಳು ಕಸರತ್ತು ನಡೆಸಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

1️⃣ISRO | ದೇಶದ ಮೊದಲ ವಾಣಿಜ್ಯಿಕ ಉಡಾವಣೆ ಯಶಸ್ವಿ, 36 ಉಪಗ್ರಹ ನಭಕ್ಕೆ ಹಾರಿಸಿ ಇಸ್ರೊ ಇತಿಹಾಸ
2️⃣14 ದಿನದ ಹೋರಾಟ ಮುಗಿಸಿದ ಶಿಲ್ಪಾ: ಬೆಂಗಳೂರು ವಿವಿ ಬಸ್‌ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು
3️⃣Sunday Read | ಇವು ಬದುಕು ಬದಲಿಸುವ ಕೃತಿಗಳು, ಒಮ್ಮೆಯಾದರೂ ಓದಿ!
4️⃣ಪೋಸ್ಟ್‌ ಬಾಕ್ಸ್‌ 143 | ಕಣ್ಣೀರಿಗೆ ಸ್ಪಂದಿಸುವಾಗ ಮನುಷ್ಯ ದೇವರಾಗ್ತಾನೆ!
5️ಮನಿ ಕಹಾನಿ ಅಂಕಣ | ನಿಮ್ಮ ಸಂಬಳದಲ್ಲಿ ನೀವು ಎಷ್ಟು ಉಳಿಸುತ್ತಿದ್ದೀರಿ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಕೊಡಗು

Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ

Kodagu News : ಈ ಬಾರಿ ಮುದ್ದಂಡ ಕುಟುಂಬಕ್ಕೆ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಜವಬ್ದಾರಿ ಹೆಗಲೇರಿದ್ದು ಪಂದ್ಯಾವಳಿಯಲ್ಲಿ ಅಚ್ಚುಕಟ್ಟಾಗಿ ಆಯೋಜಿಸುವ ಗುರಿ ಹೊಂದಿದ್ದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ 25ನೇ ವರ್ಷದ ಪಂದ್ಯಾವಳಿ ಅಯೋಜಿಸಲಾಗಿದೆ.

VISTARANEWS.COM


on

By

Kodava Family Hockey Tournament Website Launched
Koo

ಕೊಡಗು: 25ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೆಬ್ ಸೈಟ್ ಲೋಕಾರ್ಪಣೆ ಕಾರ್ಯಕ್ರಮ ಮಡಿಕೇರಿ ಹೊರ ವಲಯದ ಖಾಸಗಿ ರೆಸಾರ್ಟ್ ನಲ್ಲಿ (Kodagu News ) ನಡೆಯಿತು. ಪ್ರತಿ ವರ್ಷ ಕೂಡ ಒಂದೊಂದು ಕುಟುಂಬಗಳು ಪಂದ್ಯಾಟ ಆಯೋಜಿಸುವ ಜವಬ್ದಾರಿ ಹೊತ್ತುಕೊಳ್ಳುತ್ತೆ. ಈ ಬಾರಿ ಮುದ್ದಂಡ ಕುಟುಂಬಕ್ಕೆ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಜವಬ್ದಾರಿ ಹೆಗಲೇರಿದ್ದು ಪಂದ್ಯಾವಳಿಯಲ್ಲಿ ಅಚ್ಚುಕಟ್ಟಾಗಿ ಆಯೋಜಿಸುವ ಗುರಿ ಹೊಂದಿದ್ದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ 25ನೇ ವರ್ಷದ ಪಂದ್ಯಾವಳಿ ಅಯೋಜಿಸಲಾಗಿದೆ.

ಮೊದಲಿಗೆ ದೀಪ ಬೆಳಗುವ ಮೂಲಕ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ‌ 2025 ನೇ ಮುದಂಡ ಕ್ರಿಕೇಟ್ ಪಂದ್ಯಾವಳಿಯ ವೆಬ್ ಸೈಟ್ ಲಾಂಚ್ ಮಾಡಿದ್ದು ಎಲ್ಲಾ ರೀತಿಯ ಮಾಹಿತಿಯನ್ನ ವೆಬ್ ಸೈಟ್ ನಲ್ಲಿ ಪಡೆದುಕೊಳ್ಳಬಹುದಾಗಿದೆ.

ಹಾಕಿ ಪಂದ್ಯಾವಳಿಯ ಗೌರವ ಅಧ್ಯಕ್ಷರಾದ ಎಂಬಿ ದೇವಯ್ಯ ಮಾತನಾಡಿ ಮುದ್ದಂಡ ಕುಟುಂಬದ ಹಿರಿಯರು ಹಾಕಿ ಅಕಾಡೆಮಿ ಸಹಕಾರದಲ್ಲಿ ಈ ಬಾರಿ ಹಾಕಿ ಉತ್ಸವವನ್ನು ಯಶಸ್ವಿಯಾಗಿ ನಡೆಸಲು ನಿರ್ಧರಿಸಿದ್ದೇವೆ. ಈಗಾಗಲೇ ಸಮಿತಿಯನ್ನು ರಚನೆ ಮಾಡಿದ್ದೇವೆ. ಕೆಲಸಗಳನ್ನು ಆರಂಭಿಸಿದ್ದು, ಎಲ್ಲರು ಸಹಕಾರ ನೀಡುವಂತೆ ಮನವಿ ಮಾಡಿದರು. 25ನೇ ವರ್ಷದ ಕಾರ್ಯಕ್ರಮ ಆಯೋಜನೆಗೆ ನಮಗೆ ಸಿಕ್ಕಿರೋದು ಬಹಳ ಸಂತೋಷವಿದ್ದು ಎಲ್ಲವನ್ನು ಅಚ್ಚುಕಟ್ಟಾಗಿ ಮಾಡುವ ಗುರಿ ಹೊಂದಿದೆ.

Kodava Family Hockey Tournament Website Launched

ಕಾರ್ಯಕ್ರಮದಲ್ಲಿ ಕೊಡಗು ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ, ಸ್ಥಳೀಯ ದಿನಪತ್ರಿಕೆ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ,ಉಳ್ಳಿಯಡ ಪೂವಯ್ಯ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ,ಮುದ್ದಂಡ ಸ್ಪೋರ್ಟ್ಸ್ ಅ್ಯಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುದ್ದಂಡ ರಶಿತ್ ಸುಬ್ಬಯ್ಯ,
ಅತಿಥಿಗಳಾಗಿ ಕುಟುಂಬದ ಪಟ್ಟೆದಾರ ಡಾಲಿ ತಿಮ್ಮಯ್ಯ, ಡೀನ್ ಬೋಪಣ್ಣ, ಉಪಾಧ್ಯಕ್ಷ ಅಶೋಕ್, ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ,ಆದ್ಯ ಪೊನ್ನಣ್ಣ ,ರಂಜಿತ್ ಪೊನ್ನಪ್ಪ, ಚಂಗಪ್ಪ, ದಿವ್ಯ ಪ್ರಮುಖರು ಇದ್ದರು

Continue Reading

ಬೆಂಗಳೂರು

Bengaluru News : ಮಾಡಲಿಂಗ್‌ನಲ್ಲಿ ಗಿನ್ನಿಸ್‌ ರೆಕಾರ್ಡ್‌ ಮಾಡಲು ಹೊರಟ ಹಳ್ಳಿಹೈದ

Bengaluru News : 21 ನೇ ವಯಸ್ಸಿನಲ್ಲಿ, “ಕಿರಿಯ ಸೌಂದರ್ಯ ಸ್ಪರ್ಧೆಯ ನಿರ್ದೇಶಕ” ಗಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ.

VISTARANEWS.COM


on

By

Bengaluru News
Koo

ಬೆಂಗಳೂರು: ಬಹುನಿರೀಕ್ಷಿತ ಸೌಂದರ್ಯ ಸ್ಪರ್ಧೆ, ಮಿಸ್ಟರ್ ಅಂಡ್ ಮಿಸ್ ಐಡಲ್ ಆಫ್ ಇಂಡಿಯಾ 2024 ಕಳೆದ ಅಕ್ಟೋಬರ್ 27 ರಂದು ತರಳು ಎಸ್ಟೇಟ್‌ನ ವಿಂಟೇಜ್ ಫಾರ್ಮ್ಸ್ನಲ್ಲಿ (Bengaluru News) ನಡೆಯಿತು. ಈ ಕಾರ್ಯಕ್ರಮವನ್ನು ಕಿರಿಯ ಸೌಂದರ್ಯ ಸ್ಪರ್ಧೆಯ ನಿರ್ದೇಶಕ ಕೌಶಿಕ್ ಆರ್ ಅವರು ಕೌಶಲ್ಯದಿಂದ ನಿರ್ದೇಶಿಸಿದರು. ಅವರು ಕೇವಲ 21 ನೇ ವಯಸ್ಸಿನಲ್ಲಿ, “ಕಿರಿಯ ಸೌಂದರ್ಯ ಸ್ಪರ್ಧೆಯ ನಿರ್ದೇಶಕ” ಗಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಅಜಯ್ ಪ್ರಸಾದ್, ರಾವುಲ್, ಶರತ್, ಕಾತಿ೯ಕ್ ಮತ್ತು ಕೆಎಸ್‌ಎಚ್‌ ಗ್ರೂಪ್ಸ್‌ ( Ksh Groups) ಸಹಕಾರ ನೀಡಿದರು.

A 21-year-old man is trying to set a Guinness World Record as the director of a junior beauty pageant

ಈ ಸ್ಪರ್ಧೆಯು ಭಾರತದಾದ್ಯಂತದ ಪ್ರತಿಭಾವಂತ ಸ್ಪರ್ಧಿಗಳನ್ನು ಒಟ್ಟುಗೂಡಿಸಿ ಅವರ ಸೌಂದರ್ಯ, ಪ್ರತಿಭೆ ಮತ್ತು ವರ್ಚಸ್ಸನ್ನು ಪ್ರದರ್ಶಿಸಿತು. ಮಹತ್ವಾಕಾಂಕ್ಷಿ ಮಾದರಿಗಳಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ಮನರಂಜನಾ ಉದ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ವೇದಿಕೆಯನ್ನು ಒದಗಿಸುವುದು ಈ ಕಾರ್ಯಕ್ರಮದ ಪ್ರಾಥಮಿಕ ಉದ್ದೇಶವಾಗಿತ್ತು.

A 21-year-old man is trying to set a Guinness World Record as the director of a junior beauty pageant

ರ‍್ಯಾಂಪ್ ವಾಕ್, ನೃತ್ಯ ಮತ್ತು ಪ್ರಶ್ನೆ-ಉತ್ತರಗಳಂತಹ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸುವ ಮೂಲಕ ಸ್ಪರ್ಧಿಗಳು ಕಠಿಣ ತರಬೇತಿ ಮತ್ತು ಅಂದಗೊಳಿಸುವ ಸೆಷನ್ಗಳಿಗೆ ಒಳಗಾದರು. ಪ್ರಸಿದ್ಧ ಉದ್ಯಮ ತಜ್ಞರನ್ನು ಒಳಗೊಂಡ ತೀರ್ಪುಗಾರರ ಸಮಿತಿಯು ಸ್ಪರ್ಧಿಗಳ ಪ್ರದರ್ಶನವನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಿತು.

ಆರ್. ಸಿ. ರೋಹಿತ್ ಮಿಸ್ಟರ್ ಐಡಲ್ ಆಫ್ ಇಂಡಿಯಾ 2024 ಕಿರೀಟವನ್ನು ಪಡೆದರೆ, ವರ್ಷಿತಾ ಮಿಸ್ ಐಡಲ್ ಆಫ್ ಇಂಡಿಯಾ 2024 ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ವಿಜೇತರಿಗೆ ಪ್ರತಿಷ್ಠಿತ ಬಹುಮಾನಗಳು ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶಗಳನ್ನು ನೀಡಲಾಯಿತು. ಕೌಶಿಕ್ ಅವರ ಗಮನಾರ್ಹ ಸಾಧನೆಯು ಅವರ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಈವೆಂಟ್ ನಿರ್ವಹಣೆಯ ನವೀನ ವಿಧಾನಕ್ಕೆ ಸಾಕ್ಷಿಯಾಗಿದೆ.

21 ವರ್ಷ ವಯಸ್ಸಿನಲ್ಲಿ ರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯನ್ನು ನಿರ್ದೇಶಿಸುವ ಮೂಲಕ, ಅವರು ಯುವ ಉದ್ಯಮಿಗಳು ಮತ್ತು ಈವೆಂಟ್ ವೃತ್ತಿಪರರಿಗೆ ಹೊಸ ಮಾನದಂಡವನ್ನು ಸ್ಥಾಪಿಸಿದ್ದಾರೆ. ಈ ಪ್ರತಿಷ್ಠಿತ ಕಾರ್ಯಕ್ರಮವನ್ನು ನಿರ್ದೇಶಿಸುವ ಮತ್ತು ಇತಿಹಾಸ ನಿರ್ಮಿಸುವ ಅವಕಾಶ ದೊರೆತಿರುವುದಕ್ಕೆ ನಾನು ರೋಮಾಂಚನಗೊಂಡಿದ್ದೇನೆ ಎಂದು ಕೌಶಿಕ್ ಆರ್ ಹೇಳಿದರು.

Continue Reading

ಗದಗ

Gadag News : ಮೂವರು ಮಕ್ಕಳನ್ನು ನದಿಗೆ ಎಸೆದು, ಆತ್ಮಹತ್ಯೆ ಮಾಡಿಕೊಂಡ ತಂದೆ!

Family Dispute : ಕೌಟುಂಬಿಕ ಕಲಹಕ್ಕೆ ತಂದೆಯೊಬ್ಬ ತನ್ನ ಮೂವರು ಮಕ್ಕಳುನ್ನು ನದಿಗೆ ಎಸೆದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಗದಗದಲ್ಲಿ (Gadag News) ನಡೆದಿದೆ

VISTARANEWS.COM


on

By

Gadag News Father commits suicide by throwing three children into river
ಸಾಂದರ್ಭಿಕ ಚಿತ್ರ
Koo

ಗದಗ: ಕೌಟುಂಬಿಕ ಕಲಹಕ್ಕೆ ಬೇಸತ್ತು ತನ್ನ ಮೂವರು ಮಕ್ಕಳನ್ನು ನದಿಗೆ ಎಸೆದು, ತಂದೆಯೂ ಆತ್ಮಹತ್ಯೆ ಮಾಡಿಕೊಂಡ ಹೃದಯ‌ ವಿದ್ರಾವಕ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬಳಿಯ ತುಂಗಭದ್ರಾ ನದಿಯಲ್ಲಿ (Gadag News) ನಡೆದಿದೆ.‌

ಮುಂಡರಗಿ ತಾಲೂಕಿನ ಮುಕ್ತುಂಪುರ‌ ಗ್ರಾಮದ ನಿವಾಸಿ, ಮಂಜುನಾಥ ಅರಕೇರಿ ಹಾಗೂ ಮೂವರು ‌ಮಕ್ಕಳು‌ ನದಿ ಪಾಲಾಗಿದ್ದಾರೆ. ಪುಟ್ಟ ಮಕ್ಕಳಾದ ವೇದಾಂತ (3), ಪವನ (4), ಹಾಗೂ ಧನ್ಯಾ (6) ಮೃತ ದುರ್ದೈವಿಗಳು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಕ್ಕಳನ್ನು ಸೇತುವೆ ಮೇಲಿಂದ‌ ನದಿಗೆ ಎಸೆದು ಬಳಿಕ ಮಂಜುನಾಥ್ ತಾನೂ ಸಹ ನದಿಗೆ ಹಾರಿದ್ದಾನೆ. ಸ್ಥಳಕ್ಕೆ ಮುಂಡರಗಿ ಪೊಲೀಸರ ದೌಡಾಯಿಸಿದ್ದು, ಶೋಧ‌ ಕಾರ್ಯ ನಡೆಸಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Continue Reading

ಬೆಂಗಳೂರು

Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಗರ್‌ ವಿಂಗ್ಸ್‌; 2ನಲ್ಲಿ ಅತಿದೊಡ್ಡ ವರ್ಟಿಕಲ್‌ ಗಾರ್ಡನ್‌ ಅನಾವರಣ

Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ 2ನಲ್ಲಿ ಅತಿದೊಡ್ಡ ವರ್ಟಿಕಲ್‌ ಗಾರ್ಡನ್‌ ಅನಾವರಣಗೊಂಡಿದೆ.

VISTARANEWS.COM


on

By

Bengaluru airport
Koo

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (BLR ವಿಮಾನ ನಿಲ್ದಾಣ) ಟರ್ಮಿನಲ್‌ 2 ನಲ್ಲಿ ‘ಟೈಗರ್ ವಿಂಗ್ಸ್’ ಶೀರ್ಷಿಕೆಯ “ವರ್ಟಿಕಲ್‌ ಗಾರ್ಡನ್‌”ನನ್ನು ಅನಾವರಣಗೊಳಿಸಲಾಗಿದೆ. ಫ್ರೆಂಚ್ ದೇಶದ ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಕೇಂದ್ರದೊಂದಿಗೆ ಗುರುತಿಸಿಕೊಂಡಿರುವ ವಿಶ್ವದರ್ಜೆಯ ಸಸ್ಯಶಾಸ್ತ್ರಜ್ಞ ಪ್ಯಾಟ್ರಿಕ್ ಬ್ಲಾಂಕ್ ಅವರ ಸಹಯೋಗದೊಂದಿಗೆ ಈ ವರ್ಟಿಕಲ್‌ ಗಾರ್ಡನ್‌ನನ್ನು ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ.

ಟರ್ಮಿನಲ್ 2 (T2) ನಲ್ಲಿ ನಿರ್ಮಿಸಿರುವ ಈ ವರ್ಟಿಕಲ್‌ ಗಾರ್ಡನ್‌ 30 ಅಡಿ ಎತ್ತರ ಹಾಗೂ 160 ಅಡಿ ಅಗಲ (2 ಗೋಡೆಗಳಿದ್ದು, ಪ್ರತಿ ಗೊಡೆ 80 ಅಡಿ ಅಗಲವಿದೆ)ದಲ್ಲಿ ವಿಸ್ತೃತವಾಗಿ ಬೆಳೆಸಲಾಗಿದೆ. ಪ್ಯಾಟ್ರಿಕ್‌ ಬ್ಲಾಂಕ್‌ ಅವರು ಭಾರತದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ವರ್ಟಿಕಲ್‌ ಗಾರ್ಡನ್‌ ನಿರ್ಮಿಸಿದ್ದು ಇದೇ ಮೊದಲು, ಮೂಲಭೂತ ಸೌಕರ್ಯಗಳೊಂದಿಗೆ ಪ್ರಕೃತಿಯನ್ನು ಸೆರೆ ಹಿಡಿದಂತ ಸುಂದರ ದೃಶ್ಯಾವಳಿಂದ ಈ ಗೋಡೆ ಉದ್ಯಾನ ಕಂಗೊಳಿಸಲಿದೆ. ಈ ಮೂಲಕ ಟಿ2 ನ ಅಡಿಪಾಯದ ಮೂಲತತ್ವವನ್ನು ಉದಾರಿಸಿದೆ. ‘ಟೈಗರ್ ವಿಂಗ್ಸ್’ ನ ಈ ವರ್ಟಿಕಲ್‌ ಗಾರ್ಡನ್‌ 153 ವಿವಿಧ ಜಾತಿಗಳ 15,000 ಕ್ಕೂ ಹೆಚ್ಚು ಸಸ್ಯಗಳಿಂದ ನಿರ್ಮಿಸಲಾಗಿದೆ. ಪ್ಯಾಟ್ರಿಕ್‌ ಬ್ಲಾಂಕ್‌ ಅವರು ಕರ್ನಾಟಕ ಸೇರಿದಂತೆ ಸುತ್ತಮುತ್ತಲಿನ ಪಶ್ಚಿಮ ಘಟ್ಟಗಳ ಕಾಡುಗಳಿಗೆ ತೆರಳಿ, ಅಪರೂಪದ ಆಯ್ದ ಸಸ್ಯ ಪ್ರಭೇದಗಳನ್ನು ಸಂಗ್ರಹಿಸಿ, ಈ ಗೋಡೆ ಉದ್ಯಾನವನ್ನು ನಿರ್ಮಿಸಿದ್ದಾರೆ.

The largest vertical garden has been unveiled at Terminal 2 of the Kempegowda International Airport

ಈ ಗೋಡೆ ಉದ್ಯಾನವನ್ನು ಮಣ್ಣು ರಹಿತವಾಗಿ ನಿರ್ಮಿಸಲಾಗಿದ್ದು, ಈ ಟೆಕ್ನಾಲಜಿಯನ್ನು ಜರ್ಮನಿಯಿಂದ ಆಮದು ಮಾಡಿಕೊಳ್ಳಲಾಗಿದೆ. ಮತ್ತೊಂದು ವಿಶೇಷವೆಂದರೆ, ನಮ್ಮ ರಾಷ್ಟ್ರೀಯ ಪ್ರಾಣಿ ಹುಲಿಯ ಶಕ್ತಿ ಮತ್ತು ಅದರ ಗಾಂಭೀರ್ಯತೆಯನ್ನು ಪ್ರತಿಬಿಂಬಿಸುವಂತೆ ಈ ಗೋಡೆ ಉದ್ಯಾನ ನಿರ್ಮಾಣಗೊಂಡಿದೆ. ಅದಕ್ಕಾಗಿಯೇ ಈ ವರ್ಟಿಕಲ್‌ ಗಾರ್ಡನ್‌ಗೆ ‘ಟೈಗರ್ ವಿಂಗ್ಸ್’ ಎಂದು ಹೆಸರಿಡಲಾಗಿದೆ. ಶತಾವರಿ ಸಸ್ಯಗಳು ವಿಮಾನದ ರೆಕ್ಕೆಗಳ ಸಿಲೂಯೆಟ್ ಅನ್ನು ಗುರುತಿಸುತ್ತದೆ. ಇನ್ನು, ಕೆಂಪು, ಕಿತ್ತಳೆ, ಹಳದಿ ಮತ್ತು ಬಿಳಿ ಇಕ್ಸೋರಾ ಹೂವುಗಳು ಹುಲಿ ಬಣ್ಣಗಳನ್ನು ಪ್ರತಿನಿಧಿಸುತ್ತವೆ.

ಟೈಗರ್ ವಿಂಗ್ಸ್‌

  • ಭಾರತದಲ್ಲಿ ಪ್ಯಾಟ್ರಿಕ್ ಬ್ಲಾಂಕ್‌ ಅವರ ಅತಿದೊಡ್ಡ ಗೋಡೆ ಉದ್ಯಾನ ಇದೇ ಮೊದಲು
  • 4000 ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ.
  • 15000 ಗಿಡಗಳನ್ನು ಒಳಗೊಂಡಿದೆ
  • 150ಕ್ಕೂ ಹೆಚ್ಚು ಜಾತಿಯ ಸಸ್ಯಗಳು ಇವೆ.
  • ಮಣ್ಣುರಹಿತ ತಂತ್ರಜ್ಞಾನವನ್ನು ಬಳಸಲಾಗಿದೆ.


ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (ಬಿಐಎಎಲ್) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮರಾರ್ ಮಾತನಾಡಿ, “ಬೆಂಗಳೂರಿನಲ್ಲಿ ಸುಸ್ಥಿರತೆ, ಕಲಾತ್ಮಕತೆ ಮತ್ತು ತಾಂತ್ರಿಕ ಪ್ರಗತಿಯಲ್ಲಿ ಹೊಸ ದೃಷ್ಟಿಕೋನವನ್ನು ತರಲು ಬಯಸಿದ್ದೇವೆ. ಬಿಎಲ್‌ಆರ್‌ ವಿಮಾನ ನಿಲ್ದಾಣದಲ್ಲಿ ಪ್ಯಾಟ್ರಿಕ್‌ನ ಅವರ ಹೊಸ ವಿಧಾನದಿಂದ ಪ್ರಕೃತಿಯ ಮಡಿಲಿನಲ್ಲಿ ಸಸ್ಯಗಳನ್ನು ಬೆಳೆಯುವಂತೆಯೇ ಬೆಳೆಯಲು ಅನುವು ಮಾಡಿಕೊಟ್ಟಿದೆ. ಟರ್ಮಿನಲ್ 2 ನಾಲ್ಕು ಮೂಲ ತತ್ವಗಳಿಂದ ನಿರ್ಮಿಸಲ್ಪಟ್ಟಿದೆ, ಉದ್ಯಾನವದಲ್ಲಿ ಟರ್ಮಿನಲ್, ತಂತ್ರಜ್ಞಾನ, ಕಲೆ ಮತ್ತು ಸುಸ್ಥಿರತೆ ಈ ನಾಲ್ಕು ತತ್ವಗಳ ಮೂಲಕ ಬೆಂಗಳೂರಿನ ನೈಜ ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ ಎಂದರು.

The largest vertical garden has been unveiled at Terminal 2 of the Kempegowda International Airport

ಹೆಸರಾಂತ ಸಸ್ಯಶಾಸ್ತ್ರಜ್ಞ ಪ್ಯಾಟ್ರಿಕ್ ಬ್ಲಾಂಕ್ ಮಾತನಾಡಿ, “ಟೈಗರ್ ವಿಂಗ್ಸ್” ಪ್ರಕೃತಿ ಮತ್ತು ವಾಸ್ತುಶಿಲ್ಪದ ನಡುವಿನ ಸಂಬಂಧವನ್ನು ಸಾಕಾರಗೊಳ್ಳುವ ಸ್ವಪ್ನವಾಗಿದೆ. ವಿಶೇಷವಾದ ಭಾವನೆಯನ್ನು ಬಳಸಿಕೊಳ್ಳುವ ಮೂಲಕ, ಪ್ರಕೃತಿಯ ಮಡಿಲಿನಲ್ಲಿ ಸಸ್ಯಗಳು ಬೆಳೆಯುವ ವಾತಾವರಣವನ್ನು ಇಲ್ಲಿ ನಿರ್ಮಿಸಲಾಗಿದೆ. ಈ ಯೋಜನೆಯು ಕೇವಲ ವಿಮಾನ ನಿಲ್ದಾಣದ ದೃಶ್ಯವನ್ನು ಇನ್ನಷ್ಟು ವರ್ಧಿಸುತ್ತದೆ. ಅಷ್ಟೇ ಅಲ್ಲದೆ, ಪ್ರಯಾಣಿಕರಿಗೆ ತಮ್ಮ ಪ್ರಯಾಣದ ಅನುಭವವನ್ನು ಇನ್ನಷ್ಟು ಉಲ್ಲಾಸಗೊಳಿಸಲಿದೆ. ನಮ್ಮ ಸುತ್ತಲೂ ಪರಿಸರವೇ ತುಂಬಿರುವ ಸಂತಸ ನೀಡಲಿದೆ.

ಈ ವರ್ಟಿಕಲ್‌ ಉದ್ಯಾನವು ಹೆಚ್ಚು ನೀರಿನ-ಸಮರ್ಥವಾಗಿದೆ, ಎಚ್ಚರಿಕೆಯಿಂದ ವಿನ್ಯಾಸಗೊಳಿಸಿದ ನೀರಾವರಿ ವ್ಯವಸ್ಥೆಯನ್ನು ಬಳಸಲಾಗಿದ್ದು, ಪದರಗಳ ಮೂಲಕ ಸಸ್ಯಗಳಿಗೆ ಸರಿಯಾದ ಪ್ರಮಾಣದ ನೀರನ್ನು ಒದಗಿಸುತ್ತದೆ. ಈ ವಿಧಾನವು ಹೆಚ್ಚು ಸಮರ್ಥನೀಯವಾಗಿದ್ದು, ನೈಸರ್ಗಿಕ ಬಂಡೆ ಅಥವಾ ಕಲ್ಲಿನ ಗೋಡೆಗಳ ಮೇಲೆ ಸಸ್ಯಗಳು ಹೇಗೆ ಬೆಳೆಯುತ್ತವೆ ಎಂಬುದನ್ನು ತೋರಿಸುತ್ತದೆ. ಇಂತಹ ಸ್ಥಳಗಳಲ್ಲಿ ನೀರು ಮತ್ತು ಪೋಷಕಾಂಶಗಳು ಕಡಿಮೆ ಇದ್ದರೂ ಸಸ್ಯಗಳು ಸೊಂಪಾಗಿ ಬೆಳೆಯುತ್ತವೆ. ಬ್ಲಾಂಕ್‌ನ ಅವರ ಹೈಡ್ರೋಪೋನಿಕ್ ವಿಧಾನವು ವೈವಿಧ್ಯಮಯವಾದ ಸಸ್ಯ ಪ್ರಭೇದಗಳನ್ನು ಕಾಂಪ್ಯಾಕ್ಟ್ ಲಂಬ ಜಾಗದಲ್ಲಿ ಸಹಬಾಳ್ವೆ ಮಾಡಲು ಅನುವು ಮಾಡಿಕೊಡುತ್ತದೆ, ಇದು ಗಾಳಿಯ ಗುಣಮಟ್ಟವನ್ನು ಹೆಚ್ಚಿಸಿ, ತಂಪಾದ, ಹೆಚ್ಚು ಆಹ್ಲಾದಕರ ವಾತಾವರಣಕ್ಕೆ ಕೊಡುಗೆ ನೀಡುವ ಅಭಿವೃದ್ಧಿ ಹೊಂದುತ್ತಿರುವ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ.

ಈ ಸಸ್ಯಶಾಸ್ತ್ರೀಯ ಮೇರುಕೃತಿಯು ಭಾರತದ ವನ್ಯಜೀವಿ ಪರಂಪರೆಯನ್ನು ವೈಭವೀಕರಿಸುವುದರಲ್ಲೆ, ಆಧುನಿಕ, ಪರಿಸರ ಸ್ನೇಹಿ ಸ್ಥಳವಾಗಿ BLR ವಿಮಾನ ನಿಲ್ದಾಣದ ದೃಷ್ಟಿಯನ್ನು ಸಾಕಾರಗೊಳಿಸುತ್ತದೆ, ಕರ್ನಾಟಕದ ಜೀವವೈವಿಧ್ಯದ ಶ್ರೀಮಂತಿಕೆಯನ್ನು ಬೆಂಗಳೂರಿನ ಪ್ರಮುಖ ಟ್ರಾವೆಲ್ ಹಬ್‌ ಆಗಿ ಪರಿವರ್ತಿಸುತ್ತದೆ.

Continue Reading
Advertisement
Kodava Family Hockey Tournament Website Launched
ಕೊಡಗು1 ತಿಂಗಳು ago

Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ

Bengaluru News
ಬೆಂಗಳೂರು1 ತಿಂಗಳು ago

Bengaluru News : ಮಾಡಲಿಂಗ್‌ನಲ್ಲಿ ಗಿನ್ನಿಸ್‌ ರೆಕಾರ್ಡ್‌ ಮಾಡಲು ಹೊರಟ ಹಳ್ಳಿಹೈದ

Dina Bhavishya
ಭವಿಷ್ಯ1 ತಿಂಗಳು ago

Dina Bhavishya : ಯಾವುದಾದರೂ ಪ್ರಸಂಗಗಳಿಂದ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆ ಎಚ್ಚರಿಕೆ ಇರಲಿ

Gadag News Father commits suicide by throwing three children into river
ಗದಗ1 ತಿಂಗಳು ago

Gadag News : ಮೂವರು ಮಕ್ಕಳನ್ನು ನದಿಗೆ ಎಸೆದು, ಆತ್ಮಹತ್ಯೆ ಮಾಡಿಕೊಂಡ ತಂದೆ!

Dina Bhavishya
ಭವಿಷ್ಯ1 ತಿಂಗಳು ago

Dina Bhavishya: ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ, ಯಶಸ್ಸು ಖಂಡಿತ

Dina Bhavishya
ಭವಿಷ್ಯ1 ತಿಂಗಳು ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ

Bengaluru airport
ಬೆಂಗಳೂರು1 ತಿಂಗಳು ago

Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಗರ್‌ ವಿಂಗ್ಸ್‌; 2ನಲ್ಲಿ ಅತಿದೊಡ್ಡ ವರ್ಟಿಕಲ್‌ ಗಾರ್ಡನ್‌ ಅನಾವರಣ

Dina Bhavishya
ಭವಿಷ್ಯ1 ತಿಂಗಳು ago

Dina Bhavishya : ಈ ರಾಶಿಯವರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ

Dina Bhavishya
ಭವಿಷ್ಯ1 ತಿಂಗಳು ago

Dina Bhavishya : ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುತ್ತಾ ಕಾಲಹರಣ ಮಾಡ್ಬೇಡಿ

dina bhavishya read your daily horoscope predictions for november 4 2024
ಭವಿಷ್ಯ2 ತಿಂಗಳುಗಳು ago

Dina Bhavishya : ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಶುಭ ಸುದ್ದಿ

galipata neetu
ಕಿರುತೆರೆ1 ವರ್ಷ ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ1 ವರ್ಷ ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ1 ವರ್ಷ ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ3 ತಿಂಗಳುಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್4 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್4 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ4 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ4 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು5 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ5 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ5 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌