ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಶುಕ್ರವಾರ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, ವಿವಿಧ ಸಮುದಾಯಗಳಿಗೆ ರಾಜಕೀಯ ಸಂದೇಶವನ್ನೂ ನೀಡಿದ್ದಾರೆ. ಶಾಸಕ ಎಂ. ಪಿ. ರೇಣುಕಾಚಾರ್ಯ ಸಹೋದರ ಪುತ್ರನ ಸಾವಿನ ಪ್ರಕರಣ ಹೊಸ ತಿರುವು ಪಡೆದಿದೆ, ಸತೀಶ್ ಜಾರಕಿಹೊಳಿ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ, ವಿಶ್ವಕಪ್‌ನಿಂದ ಹೊರಬಿದ್ದ ಟೀಂ ಇಂಡಿಯಾ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ, ರಾಜೀವ್ ಗಾಂಧಿ ಹಂತಕರನ್ನು ಸುಪ್ರೀಂಕೋರ್ಟ್ ಬಿಡುಗಡೆ ಮಾಡಿದೆ ಎನ್ನುವವರೆಗಿನ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. Modi in Bengaluru | ನಾಡಪ್ರಭು ಕೆಂಪೇಗೌಡ ಪ್ರತಿಮೆ, ರಾಜ್ಯ, ದೇಶದ ಅಭಿವೃದ್ಧಿಗೆ ಸ್ಫೂರ್ತಿದಾಯಕ: ಪ್ರಧಾನಿ ನರೇಂದ್ರ ಮೋದಿ
ನಾಡಪ್ರಭು ಕೆಂಪೇಗೌಡ ಅವರ 108 ಅಡಿ ಎತ್ತರದ ಭವ್ಯ ಪ್ರತಿಮೆಯು ಕರ್ನಾಟಕ ಮತ್ತು ಭಾರತದ ಭವಿಷ್ಯದ ಪ್ರಗತಿಗೆ ಪ್ರೇರಣೆ ನೀಡಲಿದೆ (Modi in Bengaluru) ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಭಾರತದಲ್ಲಿ ತಂತ್ರಜ್ಞಾನ ಮತ್ತು ಸ್ಟಾರ್ಟಪ್‌ಗಳ ಆವಿಷ್ಕಾರಕ್ಕೆ ಬೆಂಗಳೂರು ಅಮೋಘ ಕೊಡುಗೆ ನೀಡಿದೆ. ಸ್ಟಾರ್ಟಪ್ ಎಂದರೆ ಹೊಸ ವಿಶ್ವಾಸ, ಹೊಸ ಸಂಶೋಧನೆಗೆ ಹಾದಿ ಮಾಡಿಕೊಡುತ್ತದೆ. ಈವತ್ತು ಜಾಗತಿಕ ಸ್ಟಾರ್ಟಪ್ ನಕಾಶೆಯಲ್ಲಿ ಬೆಂಗಳೂರು ತನ್ನ ಛಾಪು ಮೂಡಿಸಿದೆ. ಇಂದು ಆರಂಭವಾಗಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಒಂದೇ ಅಲ್ಲ, ಇದು ಅಭಿವೃದ್ಧಿಯ ನವ ಯುಗದ ಒಂದು ಝಲಕ್ ಮಾತ್ರ. ಭಾರತ ತನ್ನ ಮಂದಗತಿಯ, ಪ್ರಯಾಸದ ದಿನಗಳ ಬದಲಿಗೆ ವೇಗದ ಪ್ರಗತಿಯತ್ತ ಮುನ್ನಡೆಯಲಿದೆ. ಮುಂಬರುವ ದಿನಗಳಲ್ಲಿ ದೇಶಾದ್ಯಂತ 400ಕ್ಕೂ ಹೆಚ್ಚು ವಂದೇ ಭಾರತ್ ಹೈಸ್ಪೀಡ್ ರೈಲುಗಳು ಸಂಚಾರ ನಡೆಸಲಿವೆ ಎಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. Modi in Bengaluru | ಡಬ್ಬಲ್ ಎಂಜಿನ್ ಸರ್ಕಾರದಿಂದ ರಾಜ್ಯಕ್ಕೆ ಲಾಭ; ಮತ್ತೆ ಮೋದಿ ಪ್ರತಿಪಾದನೆ
ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ರಾಜ್ಯದ ಜನತೆಗೆ ಲಾಭವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರತಿಪಾದಿಸಿದ್ದಾರೆ. “ಡಬ್ಬಲ್ ಎಂಜಿನ್ ಸರ್ಕಾರʼʼ ಜಾರಿಗೆ ತಂದ ವಿವಿಧ ಯೋಜನೆಗಳನ್ನು ಪ್ರಸ್ತಾಪಿಸಿದ ಅವರು, ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಕೊಡುಗೆಗಳನ್ನು ವಿವರಿಸಿದ್ದಾರೆ. ಬೆಂಗಳೂರು ನಗರ ನಿರ್ಮಾತೃ, ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ ಬಳಿಕ ನಡೆದ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಜಲ್ ಜೀವನ್, ಮನೆ ಮನೆಗೆ ಗಂಗೆ, ಆಯುಷ್ಮಾನ್ ಭಾರತ್, ಪಿಎಂ ಕಿಸಾನ್, ಪಿಎಂ ಸ್ವನಿಧಿ ಯೋಜನೆಗಳ ರಾಜ್ಯದ ಫಲಾನುಭವಿಗಳ ಕುರಿತು ಮಾಹಿತಿ ನೀಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Modi In Bengaluru | ರಾಜ್ಯ ಸರ್ಕಾರ ಎಚ್.ಡಿ. ದೇವೇಗೌಡರಿಗೆ ಅವಮಾನ ಮಾಡಿದೆ ಎಂದ ಜೆಡಿಎಸ್, ಸಾಮಾಜಿಕ ಜಾಲತಾಣದಲ್ಲಿ ಬಿರುಸಿನ ಚರ್ಚೆ
ನಾಡಿನ ಪರಂಪರೆಗೆ ಹೊಸ ಸೇರ್ಪಡೆಯಾದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಆಹ್ವಾನಿಸದೇ ಅವಮಾನಿಸಲಾಗಿದೆ ಎಂದು ರಾಜ್ಯ ಜೆಡಿಎಸ್ ಘಟಕ ಆರೋಪಿಸಿದೆ. “ನಾಡಪ್ರಭು ಕೆಂಪೇಗೌಡರ ನಂತರ ಬೆಂಗಳೂರು ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ, ಕನ್ನಡ ನೆಲದಿಂದ ಪ್ರಧಾನಿ ಆಗಿದ್ದ ಏಕೈಕ ಕನ್ನಡಿಗರಾದ ಶ್ರೀ ಎಚ್.ಡಿ. ದೇವೇಗೌಡ ಅವರನ್ನು ಶ್ರೀ ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ರಾಜ್ಯ ಬಿಜೆಪಿ ಸರ್ಕಾರವು ಆಹ್ವಾನ ಮಾಡದಿರುವುದು ಸಮಸ್ತ ಕನ್ನಡಿಗರಿಗೆ ಮಾಡಿದ ಅಪಮಾನ” ಎಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Modi In Bengaluru | ದೇವೇಗೌಡರನ್ನು ಕರೆಯದೆ ರಾಜ್ಯ ಸರ್ಕಾರ ಸಣ್ಣತನ ತೋರಿದೆ ಎಂದ ಟಿ.ಎ.ಶರವಣ
4. Modi In Bengaluru | ಕುಲ ಕುಲ ಕುಲವೆಂದು ಹೊಡೆದಾಡದಿರಿ ಎನ್ನುತ್ತಲೇ ʼಗೌಡʼರ ಕೋಟೆಯ ಮೇಲೆ ಕಣ್ಣಿಟ್ಟ ನರೇಂದ್ರ ಮೋದಿ
ಸಂತ ಕನಕದಾಸರ ಜಯಂತಿಯಂದು ಬೆಂಗಳೂರಿಗೆ ಆಗಮಿಸಿ ಅವರ ಮಾತುಗಳನ್ನೇ ಉಲ್ಲೇಖಿಸುತ್ತ ಬೆಂಗಳೂರಿನ ಜನತೆಯ ಮನೂರೆಗೊಂಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಆದರೆ ಮೋದಿ ಮೇನಿಯಾ ಬೆಂಗಳೂರಿಗಷ್ಟೇ ಸೀಮಿತವಾಗಿತ್ತು ಎಂದುಕೊಂಡರೆ ಅದು ತಪ್ಪು. ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜಕೀಯ ಪಕ್ಷಗಳ ಪ್ರತಿ ನಡೆಯೂ ರಾಜಕೀಯ ಉದ್ದೇಶವನ್ನು ಹೊಂದಿರುತ್ತದೆ ಎನ್ನುವುದು ಖಚಿತ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಈ ಬಾರಿಯ ಪ್ರವಾಸವೂ ಅನೇಕ ರಾಜಕೀಯ ಸಂದೇಶಗಳನ್ನು ತನ್ನೊಳಗೆ ಹುದುಗಿಸಿಕೊಂಡಿದೆ. ಪೂರ್ಣ ವಿಶ್ಲೇಷಣೆಗಾಗಿ ಇಲ್ಲಿ ಕ್ಲಿಕ್ ಮಾಡಿ.
5. Chandru death| ಚಂದ್ರಶೇಖರ್ ಕಾರಿಗೆ ಹಿಂದಿನಿಂದ ಬೇರೆ ಕಾರು ಡಿಕ್ಕಿ ಹೊಡೆದಿತ್ತಾ? FSL ವರದಿ ಹೇಳೋದೇನು?
ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರ ಎಂ.ಪಿ. ರಮೇಶ್ ಅವರ ಪುತ್ರ ಚಂದ್ರಶೇಖರ್ ಅನುಮಾನಾಸ್ಪದ ಸಾವಿನ ತನಿಖೆ ಚುರುಕುಗೊಂಡಿದೆ. ಈ ನಡುವೆಯೇ ಚಂದ್ರಶೇಖರ್ ಸಾವು ಅಪಘಾತದಿಂದಲೇ ಸಂಭವಿಸಿದ್ದು ಎಂಬುದು ಬಹುತೇಕ ಖಚಿತವಾಗಿದೆ. ಆದರೆ, ಅಪಘಾತ ಆಕಸ್ಮಿಕವಾಗಿ ಆಗಿದೆಯೆ ಅಥವಾ ಬೇರೆ ಯಾರಾದರೂ ಅಪಘಾತ ಮಾಡಿಸಿದರೇ ಎನ್ನುವ ಅನುಮಾನಗಳು ಎದುರಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Fadnavis | ಸಂಭಾಜಿ ಮಹಾರಾಜ್‌ಗೆ ಸತೀಶ್ ಜಾರಕಿಹೊಳಿ ಅವಮಾನ: ಮಹಾರಾಷ್ಟ್ರ ಡಿಸಿಎಂ ಫಡ್ನವಿಸ್ ಆರೋಪ
ಹಿಂದೂ ಎಂಬ ಪದಕ್ಕೆ ಕೆಟ್ಟ ಅರ್ಥಗಳಿವೆ ಎಂದು ಹೇಳುವ ಮೂಲಕ ಇತ್ತೀಚೆಗೆ ವಿವಾದ ಸೃಷ್ಟಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತೀವ್ರ ವಿರೋಧದ ಬಳಿಕ ತಮ್ಮ ಹೇಳಿಕೆ ಹಿಂಪಡೆದು ವಿಷಾದ ವ್ಯಕ್ತಪಡಿಸಿದ್ದರು. ಆದರೆ ಈಗ ಅವರ ವಿರುದ್ಧ ಮತ್ತೊಂದು (Fadnavis) ವಿವಾದ ಸುತ್ತಿಕೊಂಡಿದೆ. ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಅವರು ಮರಾಠಾ ಇತಿಹಾಸ ಪುರುಷ ಛತ್ರಪತಿ ಸಂಭಾಜಿ ಮಹಾರಾಜ್‌ಗೆ ಅವಮಾನಿಸಿದ್ದಾರೆ ಎಂದು ಮಹಾರಾಷ್ಟ್ರದ ಡಿಸಿಎಂ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಆರೋಪಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Rajiv Gandhi Assassination | ರಾಜೀವ್ ಗಾಂಧಿ ಹತ್ಯೆ ಅಪರಾಧಿಗಳನ್ನು ಬಿಡುಗಡೆ ಮಾಡಿದ ಸುಪ್ರೀಂ ಕೋರ್ಟ್
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ (Rajiv Gandhi Assassination) ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ನಳಿನಿ, ಶ್ರೀಹರನ್, ಆರ್ ಪಿ ರವಿಚಂದ್ರನ್ ಮತ್ತು ಇತರ ನಾಲ್ವರು ಸುಪ್ರೀಂ ಕೋರ್ಟ್ ಶುಕ್ರವಾರ ಬಂಧಮುಕ್ತಗೊಳಿಸಿದೆ. ಜಸ್ಟೀಸ್ ಬಿ ಆರ್ ಗವಾಯಿ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠವು ಈ ಆದೇಶವನ್ನು ಮಾಡಿದೆ. ಕಳೆದ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ತನ್ನ ವಿಶೇಷ ಅಧಿಕಾರವನ್ನು ಬಳಸಿಕೊಂಡು, ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ 7ನೇ ಆರೋಪಿಯಾಗಿದ್ದ ಪೆರಾರಿವಲನನ್ನು ಬಿಡುಗಡೆ ಮಾಡಿತ್ತು. ಅದೇ ಆದೇಶವು ಉಳಿದ ಅಪರಾಧಿಗಳು ಅನ್ವಯವಾಗುತ್ತದೆ ಎಂದು ದ್ವಿಸದಸ್ಯ ಪೀಠವು ಅಭಿಪ್ರಾಯಪಟ್ಟಿದೆ. ತಮಿಳುನಾಡು ಸರ್ಕಾರ ಕೂಡ 2018ರಲ್ಲಿ ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ರಾಜ್ಯಪಾಲರಿಗೆ ಮಾಡಿದ್ದ ಮನವಿಯನ್ನು ಪೀಠ ಉಲ್ಲೇಖಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Team India | ಟೀಮ್ ಇಂಡಿಯಾದ ಪ್ರದರ್ಶನಕ್ಕಿಂತ ಓರಿಯೊ ಪಕೋಡಾ ಚೆನ್ನಾಗಿತ್ತು! ಹೀಗೆಂದಿದ್ದು ಯಾರು?
ಇಂಗ್ಲೆಂಡ್ ವಿರುದ್ಧದ ಟಿ೨೦ ವಿಶ್ವ ಕಪ್ ಸೆಮಿಫೈನಲ್ ಪಂದ್ಯದಲ್ಲಿ ಹೀನಾಯವಾಗಿ ಸೋತಿರುವ ಭಾರತ ತಂಡದ (Team India) ಆಟಗಾರರು ನಾನಾ ರೀತಿಯಲ್ಲಿ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ಈ ಹಣಾಹಣಿಯಲ್ಲಿ ಭಾರತದ ಪ್ರದರ್ಶನದ ಬಗ್ಗೆ ಮಂದಿ ಬಗೆಬಗೆಯಲ್ಲಿ ಮಾತಾನಾಡುತ್ತಿರುವ ಜತೆಗೆ ಇ ಕಾಮರ್ಸ್ ಸಂಸ್ಥೆಗಳು, ಫುಡ್ ಡೆಲಿವರಿ App ಗಳು ಕೂಡ ಟ್ರೋಲ್ ಮಾಡಿವೆ. ಅಂಥ ಕೆಲವು ಟ್ರೋಲ್‌ಗಳ ವಿವರ ಇಲ್ಲಿದೆ.
9. Gyanvapi Case | ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕ ಶಿವಲಿಂಗದ ರಕ್ಷಣೆ ಮುಂದುವರಿಸಲು ಸುಪ್ರೀಂ ಆದೇಶ
ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ (Gyanvapi Case) ಸಿಕ್ಕಿರುವ ಶಿವಲಿಂಗದ ರಕ್ಷಣೆಯನ್ನು ಮುಂದುವರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಮುಂದಿನ ಆದೇಶದವರೆಗೆ ಶಿವಲಿಂಗಕ್ಕೆ ರಕ್ಷಣೆ ಒದಗಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ನೇತೃತ್ವದ ಪೀಠವು ಆದೇಶ ಹೊರಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Sensex | ಜಾಗತಿಕ ಷೇರು ಪೇಟೆಯ ಚೇತರಿಕೆ, ಸೆನ್ಸೆಕ್ಸ್ 1,181 ಅಂಕ ಜಿಗಿತ
ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ (Sensex) ಶುಕ್ರವಾರ 1,181 ಅಂಕ ಜಿಗಿಯಿತು. ಅಮೆರಿಕದಲ್ಲಿ ನಿರೀಕ್ಷೆಗೂ ಮೀರಿ ಹಣದುಬ್ಬರ ತೀವ್ರತೆ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಡ್ಡಿ ದರ ಏರಿಕೆಯ ಸಾಧ್ಯತೆ ಕಡಿಮೆಯಾಗಿದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಷೇರು ಸೂಚ್ಯಂಕಗಳು ಜಿಗಿಯಿತು. ಪ್ರಮುಖ ಕರೆನ್ಸಿಗಳೆದುರು ಡಾಲರ್ ಕೂಡ ಮೌಲ್ಯವನ್ನು ಇಳಿಸಿಕೊಂಡಿತು. ಸೆನ್ಸೆಕ್ಸ್ 61,795ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 321 ಅಂಕ ಗಳಿಸಿ 18,349ಕ್ಕೆ ಸ್ಥಿರವಾಯಿತು. ಬಹುತೇಕ ಎಲ್ಲ ಕ್ಷೇತ್ರಗಳ ಷೇರುಗಳು ಲಾಭ ಗಳಿಸಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳು
1. Siddhanth Suryavanshi | ಜಿಮ್ ಮಾಡುತ್ತಿದ್ದ ವೇಳೆ ಕಿರುತೆರೆ ನಟ ಸಿದ್ಧಾಂತ್ ವೀರ್ ಸೂರ್ಯವಂಶಿ ನಿಧನ
2. Psychopath Person | ಮೃತ ಹೆಣ್ಣುಮಕ್ಕಳ ಬೆತ್ತಲೆ ಫೋಟೊ ಕ್ಲಿಕ್ಕಿಸಿ ವಿಕೃತಿ; ಮಡಿಕೇರಿ ಜಿಲ್ಲಾಸ್ಪತ್ರೆ ಸಿಬ್ಬಂದಿಯ ಕಾಮ ಚೇಷ್ಟೆ!
3. Himachal Pradesh Election | ಹಿಮಾಚಲ ಪ್ರದೇಶ ವಿಧಾನಸಭೆ ಎಲೆಕ್ಷನ್, ನಾಳೆ ಮತದಾನ, ಡಿ.8ಕ್ಕೆ ರಿಸಲ್ಟ್
4. ಮೊಗಸಾಲೆ ಅಂಕಣ | ಸಡಿಲವಾಗುತ್ತಿರುವ ರಾಜ್ಯ-ಕೇಂದ್ರ ಸಂಬಂಧ: ಜ್ವಾಲಾಮುಖಿ ಸ್ಫೋಟ?
5. ಬೆಳಕಿನ ಗರಿ ಅಂಕಣ | ಬಂಧನದಿಂದ ಬಿಡುಗಡೆಯತ್ತ ಸಾಗಿಸುವ ಸೈಕಲ್
6. ಕಲಿತ ಶಾಲೆ, ಉಳಿದುಕೊಂಡಿದ್ದ ಹಾಸ್ಟೆಲ್‌ಗೆ ಭೇಟಿ ನೀಡಿ, ಭಾವುಕರಾಗಿ ಕಣ್ಣೀರು ಹಾಕಿದ ರಾಷ್ಟ್ರಪತಿ ದ್ರೌಪದಿ ಮುರ್ಮು