ಬೆಂಗಳೂರು: ಗುಜರಾತ್‌ನ ಮೊರ್ಬಿ ತೂಗು ಸೇತುವೆ ಕುಸಿತದಿಂದ ಪ್ರಾಣ ತೆತ್ತವರ ಸಂಖ್ಯೆ ೧೫೦ನ್ನು ಸಮೀಪಿಸಿದ್ದು, ಕುಸಿದ ಸೇತುವೆಯ ಕಳೇಬರವನ್ನು ಮುಂದಾಗಿಸಿಕೊಂಡು ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ವೇದಿಕೆ ಸಿದ್ಧವಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ನಗರಸಭೆ ಚುನಾವಣೆಯ ಗೆಲುವು ಬಿಜೆಪಿಗೆ ಬೂಸ್ಟ್ ನೀಡಿದೆ. ಪುನೀತ್ ರಾಜಕುಮಾರ್ ಅವರಿಗೆ ಮಂಗಳವಾರ ʼಕರ್ನಾಟಕ ರತ್ನʼ ಪ್ರದಾನವಾಗಲಿದೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ನೆರವೇರಲಿದೆ. ಅಪ್ರಾಪ್ತ ವಯಸ್ಸಿನವರ ವಿವಾಹದ ಕುರಿತು ಹಾಗೂ ಅತ್ಯಾಚಾರಕ್ಕೊಳಗಾದವರಿಗೆ ನಡೆಸುವ ಅಮಾನವೀಯ ಟೂ ಫಿಂಗರ್ ಟೆಸ್ಟ್ ಕುರಿತು ನ್ಯಾಯಾಲಯಗಳ ಮಹತ್ವದ ಆದೇಶ ಹೊರಬಿದ್ದಿದೆ, ರಾಜ್ಯ ಸರ್ಕಾರಿ ನೌಕರರಿಗೆ ಸದ್ಯದಲ್ಲೆ ಸಿಹಿ ಸುದ್ದಿ ನೀಡುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. Morbi Bridge Collapse | ಮೃತರ ಸಂಖ್ಯೆ 141ಕ್ಕೆ ಏರಿಕೆ, ಪರಿಹಾರ ಕಾರ್ಯಾಚರಣೆ ತೀವ್ರ
ಭಾನುವಾರ ಸಂಜೆ ಸಂಭವಿಸಿದ ಮೋರ್ಬಿ ಸೇತುವೆ ದುರಂತದಲ್ಲಿ (Morbi Bridge Collapse) ಮೃತಪಟ್ಟವರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ. ಸಾವಿಗೀಡಾದವರು ಈ ಪೈಕಿ 40 ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ. ಗಾಯಗೊಂಡಿರುವ ನೂರಕ್ಕೂ ಅಧಿಕ ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೇತುವೆ ಕುಸಿದ ಪರಿಣಾಮ ಒಟ್ಟು 350 ಮಂದಿ ನದಿಯಲ್ಲಿ ಮುಳುಗಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Morbi Bridge Collapse | ಮೋರ್ಬಿ ಸೇತುವೆ ಕುಸಿತ, ಒರೆವಾ ಕಂಪನಿಯ ಅಧಿಕಾರಿಗಳು ಸೇರಿ 9 ಮಂದಿ ಬಂಧನ
2. Morbi Bridge Collapse | ಎಲ್ಲ ಕಾರ್ಯಕ್ರಮ ರದ್ದುಗೊಳಿಸಲೇ ಎನಿಸಿತ್ತು, ಸೇತುವೆ ಕುಸಿತ ಕುರಿತು ಭಾವುಕರಾದ ಮೋದಿ
ಗುಜರಾತ್‌ನ ಮೊರ್ಬಿಯಲ್ಲಿ ತೂಗುಸೇತುವೆ ಕುಸಿದಿರುವುದು (Morbi Bridge Collapse) ದೇಶಾದ್ಯಂತ ಸುದ್ದಿಯಾಗಿದೆ. ಅದರಲ್ಲೂ, ಮಹಿಳೆಯರು, ಮಕ್ಕಳು ಸೇರಿ 140 ಜನ ಮೃತಪಟ್ಟಿರುವುದು ಜನರಲ್ಲಿ ಬೇಸರ ಮೂಡಿಸಿದೆ. ಇದರ ಬೆನ್ನಲ್ಲೇ ಗುಜರಾತ್‌ನ ಬನಾಸ್ಕಾಂತದಲ್ಲಿ ಸಾರ್ವಜನಿಕ ರ‍್ಯಾಲಿ ನಡೆಸಿದ ಮೋದಿ, ಸೇತುವೆ ದುರಂತ ನೆನೆದು ಭಾವುಕರಾಗಿದ್ದಾರೆ.
“ಸೇತುವೆ ಕುಸಿತದ ಸುದ್ದಿ ಕೇಳುತ್ತಲೇ ಭಾರಿ ಖೇದವಾಯಿತು. ನಾಗರಿಕರ ಸಾವು ನನಗೆ ಅಪಾರ ಖೇದವನ್ನುಂಟು ಮಾಡಿದೆ. ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕೋ, ಬೇಡವೋ ಎಂಬ ಗೊಂದಲ ಮೂಡಿತು. ಅಷ್ಟರಮಟ್ಟಿಗೆ ಘಟನೆಯು ನನ್ನನ್ನು ವಿಚಲಿತನನ್ನಾಗಿ ಮಾಡಿದೆ” ಎಂದು ಹೇಳಿದರು. ಇದೇ ವೇಳೆ ಅವರ ಕಣ್ಣಾಲಿಗಳು ಒದ್ದೆಯಾಗಿದ್ದವು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಮಾಹಿತಿಗೆ: Morbi Bridge Collapse | ಮೋರ್ಬಿ ಬ್ರಿಡ್ಜ್ ಕುಸಿತ ದೇವರ ಸಂದೇಶವಲ್ಲವೇ? ಮೋದಿಗೆ ಸಿದ್ದು ಪ್ರಶ್ನೆ!
3. Kollegala Election | ನಗರಸಭೆ ಉಪಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು; ಕಾಂಗ್ರೆಸ್, ಬಿಎಸ್‌ಪಿಗೆ ಮುಖಭಂಗ
ತೀವ್ರ ಕುತೂಹಲ ಕೆರಳಿಸಿದ್ದ ಕೊಳ್ಳೇಗಾಲ ನಗರಸಭೆ ಉಪಚುನಾವಣೆಯಲ್ಲಿ (Kollegala Election) ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಬಿಎಸ್ಪಿ ಹಾಗೂ ಕಾಂಗ್ರೆಸ್‌ಗೆ ಭಾರಿ ಮುಖಭಂಗವಾಗಿದೆ. ಬಿಜೆಪಿಗೆ 6 ಮತ್ತು ಕಾಂಗ್ರೆಸ್‌ಗೆ 1 ಸ್ಥಾನಗಳು ಲಭ್ಯವಾಗಿವೆ. ಈ ಮೂಲಕ ಶಾಸಕ ಎನ್. ಮಹೇಶ್ ತಮ್ಮ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದು, ಮುಂದಿನ ಚುನಾವಣೆಗೆ ಸಜ್ಜಾಗಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: ಕೊಳ್ಳೇಗಾಲ ನಗರಸಭೆ ಬೈ ಎಲೆಕ್ಷನ್, ವಿಜಯಪುರ ಪಾಲಿಕೆ ಗೆಲುವು ಮುಂದಿನ ಚುನಾವಣೆಗೆ ದಿಕ್ಸೂಚಿ: ಸಿಎಂ
4. Corruption Politics | ಸಿಎಂ ಬೊಮ್ಮಾಯಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ʼದಮ್ʼ ಪಾಲಿಟಿಕ್ಸ್; ಈಗ ಡಿಕೆಶಿ ಚಾಲೆಂಜ್!
ರಾಜ್ಯದಲ್ಲೀಗ “ದಮ್” ಪಾಲಿಟಿಕ್ಸ್ ಶುರುವಾಗಿದೆ. ಬಿಜೆಪಿಯ ವಿಜಯ ಯಾತ್ರೆಯನ್ನು ದಮ್ ಇದ್ದರೆ ಕಾಂಗ್ರೆಸ್‌ನವರು ತಡೆಯಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಿಎಂಗೆ ಹಲವಾರು “ದಮ್” ಸವಾಲುಗಳನ್ನು ಹಾಕಿದ್ದಾರೆ. ಈ ಮೂಲಕ ಭ್ರಷ್ಟಾಚಾರದ (Corruption Politics) ವಿರುದ್ಧದ ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಈಗ “ದಮ್” ಪದ ಸೇರ್ಪಡೆಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. ಸಿದ್ದರಾಮಯ್ಯ ಅವರು ಈ ಸಾರಿ ಗೆಲ್ಲೋದು ಬಿಡಿ, ಟಿಕೆಟ್ ಸಿಗೋದೇ ಡೌಟು ಎಂದ ನಳಿನ್ ಕುಮಾರ್ ಕಟೀಲ್!
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗೋದು ಬಿಡಿ, ಈ ಸಾರಿ ಚುನಾವಣೆಯಲ್ಲಿ ಗೆಲ್ಲೋದೇ ಇಲ್ಲ. ಅಷ್ಟೇ ಯಾಕೆ ಅವರಿಗೆ ಈ ಬಾರಿ ಟಿಕೆಟ್ ಕೂಡಾ ಸಿಗುವುದು ಡೌಟು: ಹೀಗೆಂದು ಹೇಳಿದ್ದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: ಬಿಜೆಪಿಯವರು ಕರೆದರೆ ಹೋಗಬೇಡಿ, ನಳಿನ್ ಕುಮಾರ್ ಕಟೀಲ್ ಒಬ್ಬ ಜೋಕರ್: ಸಿದ್ದರಾಮಯ್ಯ
6. Appu Namana | ಅಪ್ಪುಗೆ ನಾಳೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ, ಲಕ್ಷಾಂತರ ಜನರ ನಿರೀಕ್ಷೆ
ನಾಡಿಗೆ ನಾಡೇ ಪ್ರೀತಿಸುವ, ಸಜ್ಜನಿಕೆಯ ಸಾಕಾರಮೂರ್ತಿ, ನಟ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರದಾನ ಮಾಡುವ ಕಾರ್ಯಕ್ರಮಕ್ಕೆ ಎಲ್ಲ ರೀತಿಯಲ್ಲೂ ಸಿದ್ಧತೆಗಳು ನಡೆಯುತ್ತಿವೆ. ಕನ್ನಡ ರಾಜ್ಯೋತ್ಸವದ ದಿನವಾದ ಮಂಗಳವಾರ ಸಂಜೆ ನಾಲ್ಕು ಗಂಟೆಗೆ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಖ್ಯಾತ ನಟರಾದ ರಜನೀಕಾಂತ್ ಮತ್ತು ಜ್ಯೂನಿಯರ್ ಎನ್‌ಟಿಆರ್ ಅವರು ಅತಿಥಿಗಳಾಗಿದ್ದಾರೆ. ಜತೆಗೆ ಇನ್ಫೋಸಿಸ್ ಫೌಂಡೇಷನ್‌ನ ಅಧ್ಯಕ್ಷೆ ಸುಧಾ ಮೂರ್ತಿ ಕೂಡಾ ಈ ವೇದಿಕೆಯನ್ನು ಅಲಂಕರಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Karnataka Highcourt | ಮುಸ್ಲಿಮ್ ಆದರೂ ಅಷ್ಟೇ, ಬಾಲಕಿಯನ್ನು ಮದ್ವೆಯಾದ್ರೆ ಅದು ಅಸಿಂಧು, ಪೋಕ್ಸೊ ಕೇಸ್ ಎದುರಿಸಲೇಬೇಕು
ಮುಸ್ಲಿಮ್ ವೈಯಕ್ತಿಕ ಕಾನೂನು ಅನುಮತಿಸಿದರೂ, ಅಪ್ರಾಪ್ತೆಯನ್ನು ಮದುವೆಯಾದರೆ, ಅಂಥ ಮದುವೆಯು ಅಸಿಂಧುವಾಗುತ್ತದೆ ಮತ್ತು ಪೋಕ್ಸೊ ಕಾಯ್ದೆಯನ್ನು ಉಲ್ಲಂಘಿಸದಂತಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ (Karnataka Highcourt) ಅಭಿಪ್ರಾಯಪಟ್ಟಿದೆ. ಅಪ್ರಾಪ್ತ ಮುಸ್ಲಿಮ್ ಹುಡುಗಿಯನ್ನು ಮದುವೆಯಾದ ವ್ಯಕ್ತಿಯ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜಸ್ಟೀಸ್ ರಾಜೇಂದ್ರ ಬಾದಾಮಿಕರ್ ಅವರಿದ್ದ ಪೀಠವು, ಪ್ರಾಯಕ್ಕೆ ಬಂದ ಅಥವಾ 15 ವರ್ಷ ವಯಸ್ಸಿನ ಅಪ್ರಾಪ್ತ ಮುಸ್ಲಿಮ್ ಬಾಲಕಿಯ ವಿವಾಹವು, ಬಾಲ್ಯ ವಿವಾಹ ನಿಷೇಧ ಕಾಯಿದೆಯನ್ನು ಉಲ್ಲಂಘಿಸುವುದಿಲ್ಲ ಎಂಬ ವಾದವನ್ನು ಅವರು ತಳ್ಳಿ ಹಾಕಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Two Finger Test | ಅತ್ಯಾಚಾರ ಕೇಸ್‌ನಲ್ಲಿ ‘ಟು ಫಿಂಗರ್ ಟೆಸ್ಟ್’ ರದ್ದುಗೊಳಿಸಿದ ಸುಪ್ರೀಂ ಕೋರ್ಟ್
ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತರ ವೈದ್ಯಕೀಯ ಪರೀಕ್ಷೆ ನಡೆಸುವ ‘ಟು ಫಿಂಗರ್ ಟೆಸ್ಟ್’ (Two Finger Test) ಅನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿದ ಪ್ರಕರಣದ ವಿಚಾರಣೆ ನಡೆಸುವ ವೇಳೆ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಹಾಗೂ ಹಿಮಾ ಕೊಹ್ಲಿ ನೇತೃತ್ವದ ನ್ಯಾಯಪೀಠವು, “ಹೆಣ್ಣುಮಕ್ಕಳ ಘನತೆ ಹಾಗೂ ಖಾಸಗಿತನಕ್ಕೆ ಟು ಫಿಂಗರ್ ಟೆಸ್ಟ್ ಧಕ್ಕೆ ತರುವಂತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. 7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ
ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯೋತ್ಸವದ ಸಂದರ್ಭದಲ್ಲಿ ಸರ್ಕಾರ ಸಿಹಿ ಸುದ್ದಿ ನೀಡುವುದು ಬಹುತೇಕ ಖಚಿತವಾಗಿದೆ. ನವೆಂಬರ್ ಮೊದಲ ವಾರದಲ್ಲಿಯೇ ಸರ್ಕಾರ ಏಳನೇ ವೇತನ ಆಯೋಗವನ್ನು (7th Pay Commission) ರಚಿಸಿ ಆದೇಶ ಹೊರಡಿಸಲಿದೆ. ಈ ಸಂಬಂಧ ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಸರವಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಈ ಕುರಿತು ಸ್ಪಷ್ಟ ಭರವಸೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Twitter | ಟ್ವಿಟರ್‌ನಲ್ಲಿ ಒಬ್ಬರು ಮಾಡಬಹುದಾದ ಕೆಲಸಕ್ಕೆ 10 ಜನರಿದ್ದಾರೆ ಎಂದ ಮಸ್ಕ್! 25% ಉದ್ಯೋಗ ಕಡಿತ ಶೀಘ್ರ?
ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟರ್‌ನಲ್ಲಿ ( Twitter) ಭಾರಿ ಉದ್ಯೋಗ ಕಡಿತದ ಸುಳಿವನ್ನು ಹೊಸ ಮಾಲೀಕ ಎಲಾನ್ ಮಸ್ಕ್ ನೀಡಿದ್ದಾರೆ. ಕಂಪನಿಯಲ್ಲಿ ಒಬ್ಬರು ಮಾಡಬಹುದಾದ ಕೋಡಿಂಗ್ ಕೆಲಸಕ್ಕೆ 10 ಮಂದಿ ಇದ್ದಾರೆ. ಇದು ಗೊಂದಲ ಸೃಷ್ಟಿಸಿದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. ಇದರೊಂದಿಗೆ ಟ್ವಿಟರ್‌ನಲ್ಲಿ ಉದ್ಯೋಗ ಕಡಿತವನ್ನು ನಿರೀಕ್ಷಿಸಲಾಗಿದೆ. ಟ್ವಿಟರ್ 2021ರ ಅಂತ್ಯದ ವೇಳೆಗೆ 7,000 ಉದ್ಯೋಗಿಗಳನ್ನು ಹೊಂದಿತ್ತು. ಇದರಲ್ಲಿ 2,000 ಉದ್ಯೋಗಿಗಳು ಮೊದಲ ಹಂತದಲ್ಲಿ ವಜಾಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Twitter | ಟ್ವಿಟರ್‌ನಲ್ಲಿ ಬ್ಲೂ ಟಿಕ್ ಮಾರ್ಕ್ ಬೇಕಿದ್ದರೆ ತಿಂಗಳಿಗೆ 1,600 ರೂ. ಶುಲ್ಕ ಅನ್ವಯ: ಎಲಾನ್ ಮಸ್ಕ್
ಮತ್ತಷ್ಟು ಪ್ರಮುಖ ಸುದ್ದಿಗಳು
🔴 Digital Rupee | ಭಾರತದ ಮೊಟ್ಟ ಮೊದಲ ಪ್ರಾಯೋಗಿಕ ಡಿಜಿಟಲ್ ಕರೆನ್ಸಿ ನವೆಂಬರ್ 1ಕ್ಕೆ ಬಿಡುಗಡೆ
🔴 Good News | ಮೈಸೂರಿನಲ್ಲಿ ಎಲ್ಆ್ಯಂಡ್‌ಟಿ ಟೆಕ್ನಾಲಜೀಸ್ ಹೊಸ ಕ್ಯಾಂಪಸ್, 1,000 ಎಂಜಿನಿಯರ್‌ಗಳ ನೇಮಕ
🔴 Home Tuition Class | ಮಂಡ್ಯ ಬಾಲಕಿ ಅತ್ಯಾಚಾರ ಬೆನ್ನಲ್ಲೇ ಅನಧಿಕೃತ ಟ್ಯೂಷನ್‌ಗೆ ಬ್ರೇಕ್; ಶಿಕ್ಷಣ ಇಲಾಖೆಯ ಹೊಸ ರೂಲ್ಸ್
🔴 Sensex | ಸೆನ್ಸೆಕ್ಸ್ 653 ಅಂಕ ಜಿಗಿತ, ಹೂಡಿಕೆದಾರರಿಗೆ 2 ಲಕ್ಷ ಕೋಟಿ ರೂ. ಲಾಭ
🔴 Seer suicide | ಬಂಡೆ ಸ್ವಾಮೀಜಿ ಆತ್ಮಹತ್ಯೆಯ ಹಿಂದೆ ಕೇಳಿಬರುತ್ತಿದೆ ಇನ್ನಷ್ಟು ಪ್ರಭಾವಿಗಳ ಹೆಸರು
🔴 ಮೊಗಸಾಲೆ ಅಂಕಣ | ಚರ್ಚಿಲ್ ಕುಳಿತಿದ್ದ ಆಸನದಲ್ಲಿ ರಿಷಿ