ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸಂಪುಟದ ಇಬ್ಬರು ಸಚಿವರು ರಾಜೀನಾಮೆ ನೀಡಿದ್ದು, ಇವರಲ್ಲಿ ಒಬ್ಬರಾದ ಮುಖ್ತಾರ್ ಅಬ್ಬಾಸ್ ನಖ್ವಿ ಅವರನ್ನು ಉಪರಾಷ್ಟ್ರಪತಿ ಹುದ್ದೆಗೆ ಕಣಕ್ಕಿಳಿಸಲಾಗುವುದೇ ಎಂಬ ಚರ್ಚೆ ನಡೆದಿದೆ. ಕರ್ನಾಟಕ ಹೈಕೋರ್ಟ್ ವಿಚಾರಣೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪೇಚಿಗೆ ಸಿಲುಕಿದ್ದಾರೆ, ಬೂಸ್ಟರ್ ಡೋಸ್ ನಡುವಿನ ಅವಧಿಯನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿದೆ, ರಾಜ್ಯದ ಕರಾವಳಿಯಲ್ಲಿ ಗುರುವಾರ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ ಎಂಬುದು ಸೇರಿ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. ಪ್ರಧಾನಿ ಮೋದಿ ಕ್ಯಾಬಿನೇಟ್‌ನ ಇಬ್ಬರು ಸಚಿವರಾದ ಮುಖ್ತಾರ್ ಅಬ್ಬಾಸ್ ನಖ್ವಿ, ಆರ್‌ಸಿಪಿ ಸಿಂಗ್ ರಾಜೀನಾಮೆ
ಕೇಂದ್ರ ಸಚಿವರಾದ ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ರಾಮ್ ಚಂದ್ರ ಪ್ರಸಾದ್ ಸಿಂಗ್ (ಆರ್‌ಸಿಪಿ ಸಿಂಗ್) ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರಿಬ್ಬರ ರಾಜ್ಯಸಭಾ ಸದಸ್ಯತ್ವದ ಅವಧಿ ಮುಗಿದ ಹಿನ್ನೆಲೆಯಲ್ಲಿ ರಾಜೀನಾಮೆ ಕೊಟ್ಟಿದ್ದಾರೆ. ಇವರಿಬ್ಬರೂ ರಾಜ್ಯಸಭೆ ಸದಸ್ಯರಾಗಿ ಕೇಂದ್ರದಲ್ಲಿ ಸಚಿವ ಸ್ಥಾನ ಪಡೆದಿದ್ದರು. ಗುರುವಾರ ಸದಸ್ಯತ್ವ ಅವಧಿ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಇಂದು ಹುದ್ದೆಯಿಂದ ಕೆಳಗಿಳಿದಿದ್ದಾರೆ. ನಖ್ವಿ ಅವರನ್ನು ಆಡಳಿತಾರೂಢ ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿಸುವ ಸಾಧ್ಯತೆಯಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
2. Vistara Exclusive | ಹೈಕೋರ್ಟ್ ವಿಡಿಯೋ ಅಪ್‌ಲೋಡ್ ಮಾಡಿ ನಿಯಮ ಉಲ್ಲಂಘಿಸಿದ ರಾಹುಲ್ ಗಾಂಧಿ
ವಿಚಾರಣೆ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರು ಮಾತನಾಡಿದ ವಿಡಿಯೋ ಹಂಚಿಕೆ ಮಾಡಿಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಹೈಕೋರ್ಟ್‌ನಲ್ಲಿ ದೂರು ದಾಖಲಾಗಿದೆ. ಹೈಕೋರ್ಟ್ ರಿಜಿಸ್ಟ್ರಾರ್‌ಗೆ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಗಿರೀಶ್ ಭಾರಧ್ವಾಜ್ ದೂರು ನೀಡಿದ್ದಾರೆ. ಮುದ್ರಣ, ಎಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಜಾಲತಾಣ ಸೇರಿದಂತೆ ಯಾವುದೇ ವ್ಯಕ್ತಿ, ಅಥವಾ ಸಂಸ್ಥೆಯೂ ವಿಡಿಯೋಗಳನ್ನು ರೆಕಾರ್ಡ್ ಮಾಡುವುದು, ಹಂಚುವುದನ್ನು ನಿಷೇಧಿಸಲಾಗಿದೆ. ನೇರಪ್ರಸಾರ ಮಾಡಿದ ವಿಡಿಯೋಗಳು ನ್ಯಾಯಾಲಯದ ಆಸ್ತಿಯಾಗಿರುತ್ತವೆ ಎಂದು ನಿಯಮ ಹೇಳುತ್ತದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
3. Booster dose ಮಧ್ಯಂತರ ಅವಧಿ 9ರಿಂದ 6 ತಿಂಗಳಿಗೆ ಇಳಿಕೆ, ಎಲ್ಲರೂ ತೆಗೆದುಕೊಳ್ಳಲು ಸಲಹೆ
ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಮತ್ತು ಹೊಸ ಮಾದರಿಗಳ ದಾಳಿ ಭೀತಿ ಹೆಚ್ಚುತ್ತಿರುವ ನಡುವೆಯೇ ಕೇಂದ್ರ ಸರ್ಕಾರ ಬೂಸ್ಟರ್ ಡೋಸ್ ನೀಡುವ ಪ್ರಕ್ರಿಯೆಗೆ ವೇಗ ನೀಡಲು ನಿರ್ಧರಿಸಿದೆ. ಇದರ ಭಾಗವಾಗಿ ಎರಡನೇ ಡೋಸ್ ಮತ್ತು ಬೂಸ್ಟರ್ ಡೋಸ್ (Booster dose) ಸ್ವೀಕಾರದ ಅವಧಿಯನ್ನು ೯ ತಿಂಗಳಿನಿಂದ ೬ ತಿಂಗಳಿಗೆ ಇಳಿಸಿದೆ. ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ಇದು ಅನ್ವಯವಾಗಲಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
೪. AAP Ka Kalyan: ಪಂಜಾಬ್ ಸಿಎಂ ಭಗವಂತ್ ಮಾನ್‌ಗೆ ನಾಳೆ ಎರಡನೇ ವಿವಾಹ, ಕೈ ಹಿಡಿಯಲಿದ್ದಾರೆ ಡಾಕ್ಟರ್ ವಧು
ಕೆಲವೇ ತಿಂಗಳ ಹಿಂದೆ ಪಂಜಾಬ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಭಗವಂತ್ ಮಾನ್ ಇದೀಗ ಜೀವನದಲ್ಲಿ ಎರಡನೇ ಬಾರಿ ವೈವಾಹಿಕ ಬದುಕಿಗೆ ಕಾಲಿಡಲು ಸಿದ್ಧರಾಗಿದ್ದಾರೆ. ಜುಲೈ ೭ರಂದು (ಗುರುವಾರ) ತಮ್ಮ ಖಾಸಗಿ ನಿವಾಸದಲ್ಲಿ ಆಪ್ತರ ಸಮ್ಮುಖದಲ್ಲಿ ಸರಳವಾಗಿ ಅವರು ವಿವಾಹವಾಗಲಿದ್ದಾರೆ. ೪೯ ವರ್ಷದ ಭಗವಂತ್ ಮಾನ್ ಮೊದಲ ಪತ್ನಿ ಇಂದ್ರಜೀತ್ ಕೌರ್ ಜೊತೆ ವಿಚ್ಚೇದನಾವಾದ 6 ವರ್ಷಗಳ ಬಳಿಕ ಎರಡನೇ ಮದುವೆಗೆ ತಯಾರಾಗಿದ್ದು, ಚಂಡಿಗಡದಲ್ಲಿರುವ ಅವರ ಖಾಸಗಿ ನಿವಾಸದಲ್ಲಿ ಮದುವೆ ಕಾರ್ಯಕ್ರಮ ನೇರವೇರಲಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
5. Weather Report: ಮುಂದಿನ 24 ಗಂಟೆ ಭಾರಿ ಮಳೆ ಸಾಧ್ಯತೆ, ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜುಲೈ 6ರಂದು ಮಧ್ಯಾಹ್ನ 1 ಗಂಟೆಯಿಂದ ಜುಲೈ 7ರಂದು ಬೆಳಗ್ಗೆ 8.30ರವರೆಗೆ ರೆಡ್ ಅಲರ್ಟ್ ಹಾಗೂ ಜುಲೈ 7ರ ಬೆಳಗ್ಗೆ 8.30ರಿಂದ ಜುಲೈ 9ರಂದು ಬೆಳಗ್ಗೆ 8.30ರವರೆಗೆ ಆರೇಂಜ್ ಅಲರ್ಟ್ ಅನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಘೋಷಿಸಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
ಹಿಮಾಚಲ ಪ್ರದೇಶದ ಕುಲುವಿನಲ್ಲಿ ಮೇಘ ಸ್ಫೋಟ, ಪಾರ್ವತಿ ನದಿಯಲ್ಲಿ ಹಠಾತ್ ಪ್ರವಾಹ, ನಾಲ್ವರ ಸಾವು
೬. LPG Price rise| ಅಡುಗೆ ಅನಿಲ ಸಿಲಿಂಡರ್ ದರದಲ್ಲಿ 50 ರೂ. ಹೆಚ್ಚಳ
ಸಾರ್ವಜನಿಕ ವಲಯದ ತೈಲ ಕಂಪನಿಗಳು ಅಡುಗೆ ಅನಿಲ ದರದಲ್ಲಿ ಮತ್ತೆ ಏರಿಕೆ ಮಾಡಿದ್ದು, ಬಳಕೆದಾರರಿಗೆ ದುಬಾರಿ ಹೊರೆ ಬೀಳುವಂತಾಗಿದೆ. ೧೪.೨ ಕೆಜಿ ಎಲ್ಪಿಜಿ ಸಿಲಿಂಡರ್ ದರದಲ್ಲಿ ಜುಲೈ ೬ರಿಂದ ಅನ್ವಯವಾಗುವಂತೆ ೫೦ ರೂ. ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ದರ ೧,೦೫೫ ರೂ.ಗೆ ವೃದ್ಧಿಸಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
7. ಗ್ರಾಹಕರ ಹಣ ಎಗರಿಸಿದ, ಗ್ರಾಹಕ ನ್ಯಾಯಾಲಯಕ್ಕೆ ಹೋದ: ಚಂದ್ರಶೇಖರ ಗುರೂಜಿ ಹತ್ಯೆಗೆ ಹೊಸ ಟ್ವಿಸ್ಟ್
ಹಾಡಗಹಗಲೆ, ಅನೇಕ ಜನರ ಕಣ್ಮುಂದೆಯೇ ನಡೆದ ʻಸರಳ ವಾಸ್ತುʼ ಖ್ಯಾತಿಯ ಚಂದ್ರಶೇಖರ ಗುರೂಜಿ ಹಂತಕರ ವಿಚಾರಣೆ ಮುಂದುವರಿದಿರುವಂತೆ ಹೊಸ ಹೊಸ ವಿಚಾರಗಳು ಹೊರ ಬರುತ್ತಿವೆ. ಇದೀಗ ಎಫ್‌ಐಆರ್ ಮೂಲಕ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಗುರೂಜಿ ಅಣ್ಣನ ಮಗ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸರಳ ವಾಸ್ತು ಸಂಸ್ಥೆಯ ಗ್ರಾಹಕರ ಹಣವನ್ನು ಆರೋಪಿಗಳು ದುರುಪಯೋಗಪಡಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಹತ್ಯೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗುರೂಜಿ ಅವರ ಅಂತ್ಯಕ್ರಿಯೆಯನ್ನು ಹುಬ್ಬಳ್ಳಿ ಸಮೀಪದ ಸುಳ್ಳ ಗ್ರಾಮದಲ್ಲಿರುವ ಗುರೂಜಿ ಅವರ ಜಮೀನಿನಲ್ಲಿ ಬುಧವಾರ ಸಂಜೆ ನೆರವೇರಿಸಲಾಯಿತು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)̇
8. ಈಗ ಹಿಂದು; ಮತ್ತೆ ಹುಟ್ಟಿದ ಮೇಲೆ ಆ ಧರ್ಮ ಆಚರಿಸೋಣ: ದೇವನೂರು ಪುಸ್ತಕ್ಕೆ ಗೂಳಿಹಟ್ಟಿ ಆಕ್ರೋಶ
ಈಗ ಹಿಂದು ಧರ್ಮದಲ್ಲಿ ಹುಟ್ಟಿದ್ದೇನೆ, ಇದನ್ನು ಆಚರಿಸುತ್ತೇನೆ. ಸತ್ತು ಮತ್ತೆ ಹುಟ್ಟಿದ ನಂತರ ಬೇಕಾದರೆ ಆ ಧರ್ಮ ಆಚರಿಸೋಣ ಎಂದು ಮಾಜಿ ಸಚಿವ ಹಾಗೂ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ. ಗೌರಿ ಮೀಡಿಯಾ ಟ್ರಸ್ಟ್ ಪ್ರಕಟಿಸಿರುವ, ಸಾಹಿತಿ ದೇವನೂರು ಮಹಾದೇವ ಅವರ ʻಆರ್‌ಎಸ್‌ಎಸ್-ಆಳ ಮತ್ತು ಅಗಲʼ ಪುಸ್ತಕದಲ್ಲಿ ತಮ್ಮ ಹಾಗೂ ಕುಟುಂಬದ ಕುರಿತು ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ಗೂಳಿಹಟ್ಟಿ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ ʻಆರ್‌ಎಸ್‌ಎಸ್- ಆಳ ಮತ್ತು ಅಗಲʼ ಎಂಬ ಪುಸ್ತಕದಲ್ಲಿ, ಮತಾಂತರ ನಿಷೇಧ ಕಾಯ್ದೆಯ ಮರ್ಮ ಎಂಬ ಶೀರ್ಷಿಕೆಯ ಲೇಖನವಿದೆ. ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣ ಮಸೂದೆ 2021 ಅನ್ನು ವಿಮರ್ಶೆಗೆ ಒಳಪಡಿಸಲಾಗಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
೯. ಎಲ್ಲೆಂದರಲ್ಲಿ ಚಾಪೆ ಹಾಸಿ ನಮಾಜ್ ಮಾಡುವಂತಿಲ್ಲ ಎಂದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್!
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಚಾಮರಾಜಪೇಟೆ ಈದ್ಗಾ ಮೈದಾನದ ಬಳಿಯ ರಸ್ತೆ ಸಂಪರ್ಕವನ್ನು ಕಡಿತ ಮಾಡುವುದು, ಸಿಗ್ನಲ್‌ಗಳ ಸಹಿತ ಎಲ್ಲೆಂದರಲ್ಲಿ ಚಾಪೆ ಹಾಸಿ ಪ್ರಾರ್ಥನೆ ಸಲ್ಲಿಸುವುದಕ್ಕೆ ಅವಕಾಶವಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ಇದೇ ವೇಳೆ, ಸಾರ್ವಜನಿಕರ ಬಳಕೆಗೆ ಚಾಮರಾಜಪೇಟೆ ಈದ್ಗಾ ಮೈದಾನ ಮುಕ್ತ ಮಾಡಬೇಕು ಎಂದು ನಾಗರಿಕರ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳಿಂದ ಜುಲೈ 12ರಂದು ಕರೆ ನೀಡಿರುವ ಚಾಮರಾಜಪೇಟೆ ಬಂದ್‌ಗೆ ಅನುಮತಿ ಇಲ್ಲ ಎಂದು ಪೋಲಿಸ್ ಇಲಾಖೆ ತಿಳಿಸಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
10. ವಿಸ್ತಾರ Explainer: ರಾಜೀನಾಮೆ ನೀಡಿದ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಆಗುವರೇ?
ಬ್ರಿಟನ್‌ನ ಹಣಕಾಸು ಸಚಿವ ಸ್ಥಾನಕ್ಕೆ ರಿಷಿ ಸುನಕ್ ರಾಜೀನಾಮೆ ನೀಡಿದ್ದಾರೆ. ಅಲ್ಲಿನ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿ ಎಂದು ಕೆಲವು ತಿಂಗಳ ಹಿಂದೆ ಹೊಗಳಿಸಿಕೊಂಡಿದ್ದ ರಿಷಿ ಅವರಿಗೂ ಬೋರಿಸ್‌ಗೂ ಯಾಕೆ ಭಿನ್ನಮತ ಮೂಡಿತು? ಬ್ರಿಟನ್‌ನ ಪ್ರಧಾನಿಯಾಗುವ ಇನ್ಫಿ ಮೂರ್ತಿ ಅಳಿಯನ ಕನಸು ನನಸಾಗುವುದಿಲ್ಲವೇ? ರಿಷಿ ಅವರ ಮುಂದಿನ ಹಾದಿ ಏನು? (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)