Site icon Vistara News

ವಿಸ್ತಾರ TOP 10 NEWS | ಪುನೀತ ಪರ್ವದಲ್ಲಿ ಹರ್ಷ; ದ್ವೇಷ ಭಾಷಣದ ಕುರಿತು ಸುಪ್ರೀಂ ಬೇಸರ: ಮತ್ತಷ್ಟು ಪ್ರಮುಖ ಸುದ್ದಿಗಳು

TOP 10 NEWS 21102022

ಬೆಂಗಳೂರು: ಪುನೀತ್‌ ರಾಜಕುಮಾರ್‌ ಅಗಲಿ ಅನೇಕ ತಿಂಗಳುಗಳೇ ಕಳೆದಿದ್ದರೂ ಜನರ ಮನಸ್ಸಿನಲ್ಲಿ ಅಪ್ಪು ಜೀವಂತವಾಗಿದ್ದಾರೆ ಎಂಬುದಕ್ಕೆ ಪುನೀತ ಪರ್ವ ಸಾಕ್ಷಿಯಾಗಿದೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಒತ್ತಾಯದ ಹೋರಾಟ ನಿರ್ಣಾಯಕ ಘಟ್ಟ ಮುಟ್ಟಿದೆ, ಮಕ್ಕಳ ಕಲಿಕೆ ಕುರಿತು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ವಿಶೇಷ ಅಂಶ ಪ್ರಕಟಿಸಿದೆ, ಕೇದಾರನಾಥದಲ್ಲಿ ಮೋದಿ ವಿವಿಧ ಯೋಜನೆಗಳನ್ನು ಉದ್ಘಾಟಿಸಿದ್ದಾರೆ, ದ್ವೇಷ ಭಾಷಣ ನಿಯಂತ್ರಣ ಆಗುತ್ತಿಲ್ಲ ಎನ್ನುವುದರ ಕುರಿತು ಸುಪ್ರೀಂಕೋರ್ಟ್‌ ಬೇಸರ ವ್ಯಕ್ತಪಡಿಸಿದೆ, ಸೇನಾ ಹೆಲಿಕಾಪ್ಟರ್‌ ಪತನವಾಗಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Puneeth Parva | ನಾನು ಇರುವವರೆಗೂ ಅಪ್ಪು ಹಾಡು ಹೃದಯದಲ್ಲಿರುತ್ತೆ, ರಾಘಣ್ಣ ಭಾವುಕ ನುಡಿ

ಪುನೀತ್‌ ರಾಜಕುಮಾರ್‌ ಅಭಿನಯದ ಕೊನೆಯ ಸಿನಿಮಾ ಗಂಧದ ಗುಡಿ ಚಿತ್ರದ ಪ್ರಿ ರಿಲೀಸ್‌ ಇವೆಂಟ್‌ ಪುನೀತ ಪರ್ವ (Puneeth Parva) ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಅಪ್ಪು ಬಾಲನಟನಾಗಿ ಮಾಡಿದ ಪಾತ್ರಗಳನ್ನು ಮಕ್ಕಳು ಮಾಡುವ ಮೂಲಕ ಪುನೀತ್‌ ರಾಜಕುಮಾರ್‌ ಅವರ ಅಮೋಘ ನಟನೆಯನ್ನು ನೆನಪಿಸಿದರು. ಇನ್ನು ರಾಘವೇಂದ್ರ ರಾಜಕುಮಾರ್‌ ಅವರು, ಪುನೀತ್‌ ರಾಜಕುಮಾರ್‌ ಹಾಡಿದ ಮೊದಲ ಹಾಡಾದ “ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ” ಎಂಬ ಹಾಡನ್ನು ಹಾಡಿದರು. ಇದಕ್ಕೂ ಮೊದಲು ಪುನೀತ್‌ ರಾಜಕುಮಾರ್‌ ಅವರು ಐದು ವರ್ಷದವರಿದ್ದಾಗಲೇ ಈ ಹಾಡನ್ನು ಹೇಗೆ ಹಾಡಿದರು, ರಾಜಕುಮಾರ್‌ ಅವರು ಹೇಗೆ ಅವರು ಹಾಡುವಂತೆ ಮಾಡಿದರು, ಹಾಡುವುದನ್ನು ಕಲಿಸಿದರು ಎಂಬುದನ್ನು ಮೆಲುಕು ಹಾಕಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ. ಇನ್ನಷ್ಟು ಸುದ್ದಿಗಳು:
ಕಾಣದಂತೆ ಮಾಯವಾದನು ಹಾಡು, ಅಪ್ಪು ವಿನಮ್ರತೆ ತುಂಬ ಇಷ್ಟ, ಇನ್ಫಿ ಸುಧಾಮೂರ್ತಿ ಸ್ಮರಣೆ
ಅಪ್ಪುವಿನ ಮಾಸ್‌ ಡೈಲಾಗ್‌ ಹೇಳಿದ ಧ್ರುವ ಸರ್ಜಾ: ದುನಿಯಾ ವಿಜಯ್‌ ಭಾವುಕ
ನನಗೆ ಡಾನ್ಸ್‌ ಕಲಿಸಿದ್ದೇ ಅಪ್ಪು, ಅವರು ಎಂದಿಗೂ ಜೀವಂತ: ಒಡನಾಟ ನೆನೆದ ರಮ್ಯಾ
ಅಪ್ಪುವಿನ ಡ್ಯಾನ್ಸ್‌ಗೆ ನಾನು ದೊಡ್ಡ ಅಭಿಮಾನಿ ಅಂದ್ರು ಶಿವಣ್ಣ: ವೇದಿಕೆಯಲ್ಲಿ ನಟರ ಸಮಾಗಮ!

2. ಡಿ.12ಕ್ಕೆ ಪಂಚಮಸಾಲಿ ನಡಿಗೆ ವಿಧಾನಸೌಧದ ಒಳಗೆ: ಜಯಮೃತ್ಯುಂಜಯ ಶ್ರೀ ಘೋಷಣೆ

“ಪಂಚಮಸಾಲಿ ನಡಿಗೆ ವಿಧಾನಸೌಧದ ಒಳಗೆ” ಎಂದು ಗುಡುಗಿದ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ, ಡಿಸೆಂಬರ್ ೧೨ನೇ ತಾರೀಖಿನಂದು ೨೫ ಲಕ್ಷ ಪಂಚಮಸಾಲಿಗಳು ಒಟ್ಟಿಗೆ ಸೇರಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಮೂಲಕ ಪಂಚಸಾಲಿ ಸಮುದಾಯದವರಿಗೆ ೨ಎ ಮೀಸಲಾತಿಯನ್ನು ಘೋಷಿಸುವಂತೆ ಸರ್ಕಾರದ ಮೇಲೆ ಒತ್ತಡವನ್ನು ಹಾಕಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿಗಾಗಿ ಹುಕ್ಕೇರಿಯಲ್ಲಿ ಏರ್ಪಡಿಸಲಾಗಿದ್ದ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, ಒಂದು ಸಮಾಜಕ್ಕೆ ಮೀಸಲಾತಿ ನೀಡಿ ಪಂಚಮಸಾಲಿ ಸಮುದಾಯವನ್ನು ಕಡೆಗಣನೆ ಮಾಡಲಾಗಿದೆ ಎಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: ಪಂಚಮಸಾಲಿ POLITICS | ಹುಕ್ಕೇರಿಯಲ್ಲಿ ಎ.ಬಿ. ಪಾಟೀಲ್‌ ಗೆಲ್ಲಿಸಿ ಎಂದ ಕಾಶಪ್ಪನವರ ಮಾತಿಗೆ ಸಿಟ್ಟಿಗೆದ್ದ ಕತ್ತಿ ಪುತ್ರ

3. NCF | 3-6 ವರ್ಷದ ಮಕ್ಕಳ ಕಲಿಕೆಗೆ ಪಠ್ಯಪುಸ್ತಕ ಬೇಕಿಲ್ಲ; ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲಿ ಉಲ್ಲೇಖ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ಅವರು ಗುರುವಾರ (ಅ.20), 3-8ವರ್ಷದ ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ತಯಾರಿಸಲಾದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCF)-2022ನ್ನು ಉದ್ಘಾಟಿಸಿದರು. ಹೀಗೆ ಪುಟ್ಟಮಕ್ಕಳಿಗಾಗಿ ರೂಪಿಸಲಾದ ಈ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲಿ ಹಲವು ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಮೂರರಿಂದ ಆರು ವರ್ಷದವರೆಗಿನ ವಯಸ್ಸಿನ ಮಕ್ಕಳ ಕಲಿಕೆಯಲ್ಲಿ ಯಾವುದೇ ಪಠ್ಯಪುಸ್ತಕಗಳು ಇರಬಾರದು. ಅವರಿಗೆ ಕಲಿಕೆಗೆ ಪೂರಕವಾದ ಆಟಿಕೆಗಳು, ಆಟಗಳು, ಪ್ರಾತ್ಯಕ್ಷಿಕೆಗಳು, ಅವರದ್ದೇ ಮಾತೃಭಾಷೆ, ಭಾರತದ ಮಹಾನ್​ ನಾಯಕರ ಕಥೆಗಳ ಮೂಲಕ ಬೋಧನೆ ಮಾಡಬೇಕು. ಅದರಲ್ಲೂ ಅವರಿಗೆ ಅರ್ಥವಾಗುವ ರೀತಿಯಲ್ಲಿ ಸಾಂಪ್ರದಾಯಿಕ ಬೋಧನೆ ಮಾಡಬೇಕು ಎಂದು ಹೇಳಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. PM Modi in Uttarakhand | ಕೇದಾರನಾಥದಲ್ಲಿ ಪೂಜೆ, ವಿವಿಧ ಯೋಜನೆಗಳ ಉದ್ಘಾಟನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಬೆಳಗ್ಗೆ ಉತ್ತರಾಖಂಡಕ್ಕೆ ತೆರಳಿದ್ದಾರೆ. ಅವರು ಎರಡು ದಿನಗಳ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದು, ಕೇದಾರನಾಥ ಮತ್ತು ಬದರಿನಾಥದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ/ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಪ್ರಮುಖವಾಗಿ 9.7 ಕಿಮೀ ಉದ್ದದ ಗೌರಿಕುಂಡ-ಕೇದಾರನಾಥ ರೋಪ್​ವೇ, ಹಿಂದು ಯಾತ್ರಾಸ್ಥಳಗಳಾದ ರಿಷಿಕೇಶ, ಜೋಶಿಮಠ್​​, ಬದ್ರಿನಾಥವನ್ನು ಡೆಹ್ರಾಡೂನ್​​ ಮತ್ತು ಚಂಡಿಗಢ್​​ ಜತೆ ಸಂಪರ್ಕಿಸುವಂತೆ ವಿಸ್ತರಣೆ ಮಾಡಲಾಗಿರುವ ರಾಷ್ಟ್ರೀಯ ಹೆದ್ದಾರಿ 7ನ್ನು, ಪ್ರಯಾಗ್​ರಾಜ್​ನಿಂದ ಗೌರಿಕುಂಡದವರೆಗೆ ವಿಸ್ತರಿಸಲಾದ ರಾಷ್ಟ್ರೀಯ ಹೆದ್ದಾರಿ 107ನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಇದಕ್ಕೂ ಮೊದಲು ಹಿಮಾಚಲಿ ಟೋಪಿ ಧರಿಸಿ ಕೇದಾರನಾಥನ ದರ್ಶನವನ್ನು ಮೋದಿ ಪಡೆದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Helicopter Crashed | ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ, 2 ಶವ ಪತ್ತೆ

ಅರುಣಾಚಲ ಪ್ರದೇಶದ ಮಿಗ್ಗಿಂಗ್ ಎಂಬಲ್ಲಿ ಶುಕ್ರವಾರ ಬೆಳಗ್ಗೆ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್(ಎಎಲ್ಎಚ್) ಪತನವಾಗಿದೆ(Helicopter Crashed). ದುರ್ಗಮ ಪ್ರದೇಶದಿಂದ ಕೂಡಿರುವ ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ನಡೆದಿದ್ದು, ಇದುವರೆಗೆ ಇಬ್ಬರ ಶವ ಪತ್ತೆಯಾಗಿದೆ. ಪತನಕ್ಕೀಡಾದ ಹೆಲಿಕಾಪ್ಟರ್‌ನಲ್ಲಿ ಐವರು ಪ್ರಯಾಣಿಸುತ್ತಿದ್ದರು. ಕಾಪ್ಟರ್ ಪತನಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಉಳಿದವರಿಗಾಗಿ ಹೆಚ್ಚಿನ ಶೋಧ ನಡೆಸಲಾಗುತ್ತಿದೆ. ಹೆಲಿಕಾಪ್ಟರ್‌ನ ಅವಶೇಷಗಳು ಕೂಡ ಸಿಕ್ಕಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. ಧರ್ಮದ ಹೆಸರಿನಲ್ಲಿ ನಾವು ಎಂತಹ ಸ್ಥಿತಿಗೆ ಬಂದು ತಲುಪಿದ್ದೇವೆ? ಸುಪ್ರೀಂ ಬೇಸರ

ದೇಶದಲ್ಲಿ ದ್ವೇಷ ಭಾಷಣದ (Hate Speech) ಕುರಿತು ಆಗಾಗ ತೀವ್ರ ಚರ್ಚೆಗಳು ನಡೆಯುತ್ತವೆ. ದ್ವೇಷ ಭಾಷಣ ಮಾಡುವ ರಾಜಕಾರಣಿಗಳು ಸೇರಿ ಹಲವರ ವಿರುದ್ಧ ಸಾರ್ವಜನಿಕವಾಗಿಯೂ ಆಕ್ರೋಶ ವ್ಯಕ್ತವಾಗುತ್ತದೆ. ಹೀಗಿದ್ದರೂ ದ್ವೇಷಣ ಮಾಡುವವರ ಸಂಖ್ಯೆ ಇಳಿಕೆಯಾಗಿಲ್ಲ. ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ, “ಧರ್ಮದ ಹೆಸರಿನಲ್ಲಿ ನಾವು ಎಂತಹ ಸ್ಥಿತಿಗೆ ಬಂದು ತಲುಪಿದ್ದೇವೆ” ಎಂದು ಸುಪ್ರೀಂ ಕೋರ್ಟ್‌ ಬೇಸರ ವ್ಯಕ್ತಪಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. ಟನ್‌ ಕಬ್ಬಿಗೆ ₹5,500 ನಿಗದಿಗೆ ಪಟ್ಟು; ಸುವರ್ಣಸೌಧ ಮುತ್ತಿಗೆಗೆ ಯತ್ನಿಸಿದ ರೈತರು

ಪ್ರತಿ ಟನ್ ಕಬ್ಬಿಗೆ (Sugar Cane) 5500 ರೂಪಾಯಿ ದರ ನಿಗದಿ ಮಾಡುವಂತೆ ಒತ್ತಾಯಿಸಿ ಕಬ್ಬು ಬೆಳಗಾರರು ಹಮ್ಮಿಕೊಂಡಿರುವ ಪ್ರತಿಭಟನೆ ತೀವ್ರತೆ ಪಡೆದುಕೊಂಡಿದ್ದು, ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ರೈತರನ್ನು ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್‌ಗೇಟ್ ಬಳಿಯೇ ತಡೆದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ಹತ್ತರಗಿ ಟೋಲ್‌ಗೇಟ್ ಬಳಿ ತಡೆದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶವನ್ನು ಹೊರಹಾಕಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. ಮುರುಘಾಶ್ರೀ ಪ್ರಕರಣ | ಮತ್ತೆ 14 ದಿನ ನ್ಯಾಯಾಂಗ ಬಂಧನ; ನವೆಂಬರ್‌ 3ರವರೆಗೆ ಜೈಲು

ಮಠದ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿನಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧಿತರಾಗಿರುವ ಮುರುಘಾ ಶರಣರ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆಯಾಗಿದೆ. ಜಾಮೀನು ಅರ್ಜಿ ವಿಚಾರಣೆ ನಡೆಸಿದ ಚಿತ್ರದುರ್ಗ 2ನೇ ಅಪರ & ಸತ್ರ ನ್ಯಾಯಾಲಯವು, ನವೆಂಬರ್ 3ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ. ಇನ್ನು ಈ ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ಮಹಿಳಾ ವಾರ್ಡನ್ ರಶ್ಮಿ ನ್ಯಾಯಾಂಗ ಬಂಧನವೂ ವಿಸ್ತರಣೆಯಾಗಿದೆ. ಒಟ್ಟಾರೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿದಂತಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Britain PM | ಸುನಕ್, ಬೋರಿಸ್, ಪೆನ್ನಿ: ಬ್ರಿಟನ್ ಪಿಎಂ ಯಾರು?: ಯಾರು ಹಿತವರು?

ರಾಜಕೀಯ ಅಸ್ಥಿರತೆಯ ನಡುವೆ ಲಿಜ್ ಟ್ರಸ್ ಅವರು ಕೇವಲ 45 ದಿನಗಳಲ್ಲಿ ಬ್ರಿಟನ್ ಪ್ರಧಾನಿ (Britain PM) ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಜತೆಗೆ, ಅತಿ ಕಡಿಮೆ ಅವಧಿಯ ಪ್ರಧಾನಿ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ. ಅಕ್ಟೋಬರ್ 31ರೊಳಗೆ ಬ್ರಿಟನ್ ಪಿಎಂ (Britain PM) ಯಾರೆಂಬುದು ಗೊತ್ತಾಗಲಿದೆ. ರಿಷಿ ಸುನಕ್, ಬೋರಿಸ್ ಜಾನ್ಸನ್ ಮತ್ತು ಪೆನ್ನಿ ಮೋರ್ಡಾಂಟ್ ಅವರ ಮಧ್ಯೆ ಸ್ಪರ್ಧೆ ಸಾಧ್ಯತೆ ಇದೆ. ಈ ಕುರಿತು ಮಲ್ಲಿಕಾರ್ಜುನ ತಿಪ್ಪಾರ ಅವರ ವಿಶ್ಲೇಷಣೆ ಇಲ್ಲಿದೆ. ವಿಶ್ಲೇಷಣೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

10. ಮೊಗಸಾಲೆ ಅಂಕಣ | ಏಳು ಸುತ್ತಿನ ಕೋಟೆಯೊಳಗೆ ಮಲ್ಲಿಕಾರ್ಜುನ ಖರ್ಗೆ

ಮೂರು ವರ್ಷದಿಂದ ಚರ್ಚೆಯಲ್ಲಿದ್ದ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಅಂತೂಇಂತೂ ಎಂಬಂತೆ ಸುಖಾಂತ್ಯ ಕಂಡಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ನಿರೀಕ್ಷೆಯಂತೆ ಎಂ. ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿ ಬಹುಮತದೊಂದಿಗೆ ಆಯ್ಕೆಯಾಗಿದ್ದಾರೆ. ಎಐಸಿಸಿಗೆ ರಾಹುಲ್‌ ಗಾಂಧಿ, ಅಶೋಕ್‌ ಗೆಹ್ಲೋಟ್‌ ಬಳಿಕ ಸೋನಿಯಾ ಗಾಂಧಿಯವರ ಮೂರನೇ ಆಯ್ಕೆಯಾಗಿದ್ದವರು ಮಲ್ಲಿಕಾರ್ಜುನ ಖರ್ಗೆ. ಅಧ್ಯಕ್ಷರಾದ ಬಳಿಕ ಅವರ ಮುಂದೆ ಈಗ ನೂರೆಂಟು ಸವಾಲುಗಳಿವೆ. ಈ ಕುರಿತು ಹಿರಿಯ ಪತ್ರಕರ್ತ ಎಂ.ಕೆ. ಭಾಸ್ಕರ ರಾವ್‌ ಅವರು ಚರ್ಚಿಸಿದ್ದಾರೆ. ಪೂರ್ಣ ಲೇಖನ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

Twitter | ಟ್ವಿಟರ್‌ನ 75% ಉದ್ಯೋಗಿಗಳ ವಜಾಕ್ಕೆ ಮಸ್ಕ್‌ ಚಿಂತನೆ, ಉದ್ಯೋಗ ಕಡಿತ ಇಲ್ಲ ಎಂದ ಕಂಪನಿ
Kantara Cinema | ಮುಂದಿನ ವರ್ಷ ಆಸ್ಕರ್‌ಗೆ ಕಾಂತಾರ ಸಿನಿಮಾ ಕಳುಹಿಸಿ ಎಂದ ನಟಿ ಕಂಗನಾ
ಸಮರಾಂಕಣ | ಭಾರತೀಯ ಸೈನ್ಯದ ಆಧುನಿಕ ಯುದ್ಧ ತಂತ್ರಗಳಿಗೆ ನೆರವಾಗಲಿದೆಯಾ 5ಜಿ ತಂತ್ರಜ್ಞಾನ?

Exit mobile version