Site icon Vistara News

ವಿಸ್ತಾರ TOP 10 NEWS | 67 ಗಣ್ಯರಿಗೆ ರಾಜ್ಯೋತ್ಸವ ಗರಿಯಿಂದ ಗುಜರಾತ್‌ ಅವಘಡದಲ್ಲಿ 60ಕ್ಕೂ ಹೆಚ್ಚು ಸಾವಿನವರೆಗಿನ ಪ್ರಮುಖ ಸುದ್ದಿಗಳಿವು

TOP 10 NEWS 30102022

ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ ನಿಮಿತ್ತ ರಾಜ್ಯ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಗೌರವಕ್ಕೆ 67 ಗಣ್ಯರನ್ನು ಘೋಷಣೆ ಮಾಡಲಾಗಿದೆ. ಗುಜರಾತ್‌ನಲ್ಲಿ ತೂಗು ಸೇತುವೆ ಕುಸಿತದ ದುರ್ಘಟನೆಯಲ್ಲಿ 60ಕ್ಕೂ ಹೆಚ್ಚು ಜನರು ನೀರುಪಾಲಾಗಿದ್ದಾರೆ. ಪತ್ರಕರ್ತರಿಗೆ ಲಂಚ ವಿವಾದ ಇದೀಗ ರಾಜಕೀಯ ತಿರುವು ಪಡೆದಿದೆ, ಭಗತ್‌ ಸಿಂಗ್‌ ಪಾತ್ರದ ರಿಹರ್ಸಲ್‌ ಮಾಡಲು ಹೋಗಿ ಬಾಲಕನೊಬ್ಬ ನೇಣುಬಿಗಿದುಕೊಂಡಿದ್ದಾನೆ, ದಕ್ಷಿಣ ಕೊರಿಯಾ ಕಾಲ್ತುಳಿತದಲ್ಲಿ 150ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ, ದಕ್ಷಿಣ ಕೊರಿಯಾ ವಿರುದ್ಧ ಭಾರತ ಪುರುಷರ ಕ್ರಿಕೆಟ್‌ ತಂಡ ಸೋಲನುಭವಿಸಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ರಾಜ್ಯೋತ್ಸವ ಪ್ರಶಸ್ತಿ | ಕೆ. ಶಿವನ್‌, ದತ್ತಣ್ಣ, ಅವಿನಾಶ್‌ ಸೇರಿ 67 ಸಾಧಕರಿಗೆ ರಾಜ್ಯೋತ್ಸವ; 10 ಸಂಸ್ಥೆಗಳಿಗೆ ʼಅಮೃತʼ ಗೌರವ
ಇಸ್ರೋ ಮಾಜಿ ನಿರ್ದೇಶಕ ಶಿವನ್‌, ಹಿರಿಯ ಸಾಹಿತಿ ಅ.ರಾ.ಮಿತ್ರ, ಪ್ರೊ.ಕೃಷ್ಣೇಗೌಡ, ಇಂಗ್ಲಿಷ್‌ ಕಡಲ್ಗಾಲುವೆ ಈಜಿದ ವಿಕಲಚೇತನ ಕ್ರೀಡಾಪಟು ರಾಘವೇಂದ್ರ ಅಣ್ವೇಕರ್‌, ಸೇರಿ ಒಟ್ಟು 67 ಸಾಧಕರಿಗೆ ರಾಜ್ಯ ಸರ್ಕಾರವು 2022ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಘೊಷಣೆ ಮಾಡಿದೆ. ಕಳೆದ ವರ್ಷದಂತೆಯೇ ಈ ವರ್ಷವೂ 10 ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿಯನ್ನೂ ಘೋಷಣೆ ಮಾಡಲಾಗಿದೆ.
ಪ್ರಶಸ್ತಿಯು ತಲಾ 5 ಲಕ್ಷ ರೂ. ನಗದು ಹಾಗೂ 25 ಗ್ರಾಂ ಚಿನ್ನದ ನಾಣ್ಯವನ್ನು ಒಳಗೊಂಡಿರಲಿದೆ. ನವೆಂಬರ್‌ 1ರಂದು ರಾಜ್ಯೋತ್ಸವ ದಿನದ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Morbi Bridge Collapse | ಸೇತುವೆ ಕುಸಿತದಲ್ಲಿ ಮೃತರ ಸಂಖ್ಯೆ 60ಕ್ಕೆ, 143 ವರ್ಷದ ಸೇತುವೆ ಕುಸಿಯಲು ಕಾರಣವೇನು?
ಗುಜರಾತ್‌ನ ಮೊರ್ಬಿ ಜಿಲ್ಲೆಯ ಮಚ್ಚು (Machchu) ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗುಸೇತುವೆ ಕುಸಿತದಲ್ಲಿ (Morbi Bridge Collapse) ಮೃತಪಟ್ಟವರ ಸಂಖ್ಯೆ 60ಕ್ಕೆ ಏರಿಕೆಯಾಗಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರು ಮೊರ್ಬಿಗೆ ತೆರಳಿದ್ದು, ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಈಗಾಗಲೇ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ದುರಂತದಲ್ಲಿ 70ಕ್ಕೂ ಅಧಿಕ ಜನ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರವು ಮೃತರ ಕುಟುಂಬಸ್ಥರಿಗೆ ಪರಿಹಾರವನ್ನೂ ಘೋಷಿಸಿದ್ದಾರೆ. ಸಾವಿನ ಸಂಖ್ಯೆ ಜಾಸ್ತಿಯಾಗಲಿದೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. BJP OBC Convention | ಹಿಂದುಳಿದವರ ಮತ ಪಡೆದು ರಾಜ್ಯವೇ ಹಿಂದುಳಿಯುವಂತೆ ಮಾಡಿದ ಕಾಂಗ್ರೆಸ್: ಸಿಎಂ ಬೊಮ್ಮಾಯಿ
ಹಲವು ವರ್ಷಗಳಿಂದರಾಜ್ಯದಲ್ಲಿಹಿಂದುಳಿದ ವರ್ಗದವರನ್ನು ಕತ್ತಲಲ್ಲಿಡುವ ಕಾರ್ಯ ನಡೆದಿತ್ತು. ಹಿಂದುಳಿದವರ ಮತ ಪಡೆದು ರಾಜ್ಯವೇ ಹಿಂದುಳಿಯುವ ಹಾಗೆ ಕಾಂಗ್ರೆಸ್ ಮಾಡಿದೆ. ಆದರೆ, ರಾಜ್ಯದಲ್ಲಿ ಬದಲಾವಣೆ ಕಾಲ ಬಂದಿದೆ. ಹಿಂದುಳಿದ ವರ್ಗಗಳ ಏಳಿಗೆಗೆ ಬಿಜೆಪಿ(BJP OBC convention) ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಕೆಸರಟಗಿ ರದ್ದೇವಾಡಗಿ ಲೇಔಟ್‌ನಲ್ಲಿ ಭಾನುವಾರ ಆಯೋಜಿಸಿದ್ದ ಹಿಂದುಳಿದ ವರ್ಗಗಳ ವಿರಾಟ್‌ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರೋದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಬಿ.ಎಸ್‌.ಯಡಿಯೂರಪ್ಪ

4. ಪತ್ರಕರ್ತರಿಗೆ ಲಂಚ ವಿವಾದ: ಕಾಂಗ್ರೆಸ್‌ ಜಂಟಿ ಆರೋಪಕ್ಕೆ BJP ಜಂಟಿ ಪ್ರತ್ಯುತ್ತರ
ರಾಜ್ಯದಲ್ಲಿ ಕೆಲ ಮಾಧ್ಯಮ ಪ್ರತಿನಿಧಿಗಳಿಗೆ ದೀಪಾವಳಿ ಸ್ವೀಟ್‌ ಬಾಕ್ಸ್‌ನಲ್ಲಿ ಸಿಎಂ ಕಚೇರಿಯಿಂದ ಹಣ ನೀಡಲಾಗಿದೆ ಎಂಬ ಆರೋಪದ ಕುರಿತು ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್‌ ನಡುವೆ ಜಟಾಪಟಿ ನಡೆದಿದೆ. ಮೊದಲಿಗೆ ಕಾಂಗ್ರೆಸ್‌ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ಆರೋಪಗಳ ಸುರಿಮಳೆ ಮಾಡಿದರು. ಇದಕ್ಕೆ ಪ್ರತಿಯಾಗಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಕಂದಾಯ ಸಚಿವ ಆರ್‌. ಅಶೊಕ್‌ ಹಾಗೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಸುದ್ದಿಗೋಷ್ಠಿ ನಡೆಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: ಪತ್ರಕರ್ತರಿಗೆ ಲಂಚ ಎನ್ನುವುದು ಕಾಂಗ್ರೆಸ್‌ ಟೂಲ್‌ಕಿಟ್‌ನ ಸುಳ್ಳು ಎಂದ ಸಿಎಂ ಬೊಮ್ಮಾಯಿ: ಕಾಂಗ್ರೆಸ್‌ಗೆ ನೋಟಿಸ್‌

5. Seer Suicide | ಬಂಡೇಮಠ ಶ್ರೀಗಳ ಆತ್ಮಹತ್ಯೆ ಪ್ರಕರಣ; ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿಗೆ 14 ದಿನ ನ್ಯಾಯಾಂಗ ಬಂಧನ
ಕಂಚುಗಲ್ ಬಂಡೇಮಠ ಬಸವಲಿಂಗ ಸ್ವಾಮೀಜಿ (Seer Suicide) ಆತ್ಮಹತ್ಯೆ ಪ್ರಕರಣ ಸಂಬಂಧ ಬಂಧಿತರಾಗಿರುವ ಮೂವರು ಆರೋಪಿಗಳಲ್ಲಿ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.
ಬಂಡೇಮಠದ ಬಸವಲಿಂಗ ಸ್ವಾಮೀಜಿ ಹಾಗೂ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ ಇಬ್ಬರು ದೊಡ್ಡಪ್ಪ, ಚಿಕ್ಕಪ್ಪನ ಮಕ್ಕಳಾಗಿದ್ದು, ಮೊದಲಿನಿಂದಲೂ ಜಮೀನು ವಿಚಾರವಾಗಿ ಇಬ್ಬರ ನಡುವೆ ತಕರಾರು ನಡೆಯುತ್ತಿತ್ತು ಎನ್ನಲಾಗಿದೆ. ಜಾಗದ ವಿಚಾರವು ಕೋರ್ಟ್‌ನಲ್ಲಿತ್ತು, ಇದೇ ವಿಚಾರವಾಗಿ ಇಬ್ಬರ ನಡುವೆ ಸಾಕಷ್ಟು ಬಾರಿ ಜಗಳವೂ ಆಗಿತ್ತೆಂದು ತಿಳಿದು ಬಂದಿದೆ. ಮೊದಲಿನಿಂದಲೂ ಮನಸ್ತಾಪ ಇದ್ದ ಕಾರಣದಿಂದ ಹನಿಟ್ರ್ಯಾಪ್‌ ಮಾಡಿಸಿರುವ ಶಂಕೆ ವ್ಯಕ್ತವಾಗಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. ಭಗತ್‌ ಸಿಂಗ್‌ ಪಾತ್ರದ ರಿಹರ್ಸಲ್‌ ಮಾಡಲು ಹೋಗಿ ನೇಣು ಬಿಗಿದುಕೊಂಡ ಬಾಲಕ
ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಶಾಲೆಯಲ್ಲಿ ಭಗತ್‌ ಸಿಂಗ್‌ ಪಾತ್ರವನ್ನು ನಿರ್ವಹಣೆ ಮಾಡಲು ರಿಹರ್ಸಲ್‌ ಮಾಡಲು ಹೋಗಿ ಏಳನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಎಸ್‌ಎಲ್‌ವಿ ಶಾಲೆಯಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಸಂಜಯ್‌ ಗೌಡ( 12) ಮೃತ ದುರ್ದೈವಿ. ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಶಾಲೆಯಲ್ಲಿ ವಿವಿಧ ಪಾತ್ರಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. ಚಿತ್ರದುರ್ಗದ ನಗರದ ಕೆಳಗೋಟೆ ಬಡಾವಣೆಯ ನಿವಾಸಿಯಾಗಿದ್ದ ಸಂಜಯ್‌ ಭಗತ್‌ ಸಿಂಗ್‌ ಪಾತ್ರ ಮಾಡುವುದಿತ್ತು. ಶಾಲೆಯಲ್ಲಿ ರಿಹರ್ಸಲ್‌ ಮಾಡಿದ್ದರ ಜತೆಗೆ ಮನೆಯಲ್ಲೂ ರಿಹರ್ಸಲ್‌ ಮಾಡಲು ಮುಂದಾಗಿದ್ದ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Suicide attempt | ಶಾಸಕರ ಹೆಸರಲ್ಲಿ ಡೆತ್‌ನೋಟ್‌ ಬರೆದು ಮಹಿಳೆ ಆತ್ಮಹತ್ಯೆಗೆ ಯತ್ನ
ಶಾಸಕರ ಹೆಸರಲ್ಲಿ ಡೆತ್‌ನೋಟ್ ಬರೆದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಶಕುಂತಲಾ ಮನಸೂರ ಎಂಬುವವರು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ (Suicide attempt) ಯತ್ನಿಸಿದವರು. ಕರ್ನಾಟಕ ಮಹರ್ಷಿ ವಾಲ್ಮಿಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಕಿರಿಯ ಸಹಾಯಕಿ ಆಗಿ ಕೆಲಸ ಮಾಡುತ್ತಿದ್ದ ಶಕುಂತಲಾ ಅವರನ್ನು ಲಂಚ ತೆಗೆದುಕೊಂಡ ಆರೋಪದ ಮೇಲೆ ಕಳೆದ ನಾಲ್ಕು ತಿಂಗಳ ಹಿಂದೆ ಕೆಲಸದಿಂದ ತೆಗೆದುಹಾಕಲಾಗಿತ್ತು.
ಸಚಿವ ಶ್ರೀರಾಮುಲು ಶನಿವಾರ ಧಾರವಾಡಕ್ಕೆ ಬಂದಾಗ, ಅಮಾನತು ತೆರವುಗೊಳಿಸುವಂತೆ ಮನವಿ ಕೊಡಲು ಮಹಿಳೆ ಬಂದಿದ್ದರು. ಶ್ರೀರಾಮುಲು ಸಿಗದೇ ಇದ್ದಾಗ ಧಾರವಾಡದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರಿಗೆ ಮನವಿ ಕೊಡಲು ಹೋಗಿದ್ದರು. ಈ ವೇಳೆ ಶಾಸಕರು ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. IND vs SA | ನೀರಸ ಬ್ಯಾಟಿಂಗ್‌, ಕಳಪೆ ಫೀಲ್ಡಿಂಗ್‌; ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡಕ್ಕೆ 5 ವಿಕೆಟ್‌ ಸೋಲು
ಬ್ಯಾಟಿಂಗ್‌ ವಿಭಾಗದ ವೈಫಲ್ಯ ಹಾಗೂ ಪ್ರಮುಖ ಘಟ್ಟದಲ್ಲಿ ಕಳಪೆ ಫೀಲ್ಡಿಂಗ್‌ ಮಾಡಿದ ಭಾರತ ತಂಡ ಟಿ೨೦ ವಿಶ್ವ ಕಪ್‌ನ ಗುಂಪು ೨ರ ತನ್ನ ೩ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (IND vs SA) ವಿರುದ್ಧ 5 ವಿಕೆಟ್‌ಗಳ ಸೋಲಿಗೆ ಒಳಗಾಯಿತು. ಈ ಮೂಲಕ ಸೂರ್ಯಕುಮಾರ್‌ ಯಾದವ್‌ ಅವರ ಏಕಾಂಗಿ ಹೋರಾಟ ವ್ಯರ್ಥಗೊಂಡಿತು. ಈ ಹಣಾಹಣಿ ಗೆದ್ದ ದಕ್ಷಿಣ ಆಫ್ರಿಕಾ ತಂಡ ಗುಂಪು ಹಂತದ ಅಂಕಪಟ್ಟಿಯಲ್ಲಿ ೫ ಅಂಕಗಳೊಂದಿಗೆ ಮೊದಲ ಸ್ಥಾನಕ್ಕೇರಿದರೆ, ಭಾರತ ೪ ಅಂಕಗಳೊಂದಿಗೆ ಅಗ್ರ ಸ್ಥಾನ ಕಳೆದುಕೊಂಡಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. South Korea stampede| ದಕ್ಷಿಣ ಕೊರಿಯಾದಲ್ಲಿ ಪಾರ್ಟಿ ವೇಳೆ ಕಾಲ್ತುಳಿತ, ಮೃತರ ಸಂಖ್ಯೆ151 ಕ್ಕೆ ಏರಿಕೆ
ದಕ್ಷಿಣ ಕೊರಿಯಾದಲ್ಲಿ ಹಾಲೊವೀನ್‌ ಪಾರ್ಟಿ (Halloween Party) (ಭೂತದ ವೇಷ ಧರಿಸಿ ಪಾರ್ಟಿ ಮಾಡುವುದು) ವೇಳೆ ಕಾಲ್ತುಳಿತ ಉಂಟಾಗಿದೆ. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 151 ಕ್ಕೆ ಏರಿಕೆಯಾಗಿದೆ. ಕನಿಷ್ಠ 270 ಮಂದಿ ಕಣ್ಮರೆಯಾಗಿದ್ದಾರೆ. ಗಾಯಾಳುಗಳನ್ನು ಹಾಗೂ ಹೃದಯಾಘಾತಕ್ಕೀಡಾದವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲು ಕೂಡ ಅಧಿಕಾರಿಗಳಿಗೆ ಕಷ್ಟವಾಗಿದೆ. ಘಟನೆಯಲ್ಲಿ 150ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ.‌ ಈ ದುರ್ಘಟನೆಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಸೇರಿದಂತೆ ವಿಶ್ವ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. C-295 Planes | ಸೇನೆಗಾಗಿ ಸರಕು ಸಾಗಣೆ ವಿಮಾನ ಉತ್ಪಾದನೆ ಘಟಕಕ್ಕೆ ಮೋದಿ ಶಿಲಾನ್ಯಾಸ, ಆತ್ಮನಿರ್ಭರಕ್ಕೆ ಬಲ
ಗುಜರಾತ್‌ನ ವಡೋದರಾದಲ್ಲಿ ಭಾರತದ ವಾಯುಪಡೆಗಾಗಿ ಸರಕು ಸಾಗಣೆ ವಿಮಾನಗಳನ್ನು ಉತ್ಪಾದಿಸುವ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದ್ದಾರೆ. ದೇಶದಲ್ಲಿಯೇ ಮೊದಲ ಬಾರಿಗೆ ಖಾಸಗಿ ಕಂಪನಿಯೊಂದು ವಾಯುಪಡೆಗಾಗಿ ವಿಮಾನಗಳನ್ನು ಉತ್ಪಾದಿಸಲಾಗುತ್ತಿದ್ದು, ಇದು ಆತ್ಮನಿರ್ಭರ ಭಾರತಕ್ಕೆ ಪೂರಕವಾಗಿದೆ ಎಂದು ಮೋದಿ ಹೇಳಿದ್ದಾರೆ. ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್ಸ್ (Tata Advanced Systems-TASL)‌ ಸಿ-295 ವಿಮಾನಗಳನ್ನು (C-295 Planes) ವಡೋದರಾದ ಘಟಕದಲ್ಲಿ ಉತ್ಪಾದಿಸಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

🔴30-40% ಲಂಚಕ್ಕೆ ಬೇಡಿಕೆ: ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಗುತ್ತಿಗೆದಾರ
🔴Textbook Controversy | ಸರ್ಕಾರದಿಂದ ಮತ್ತೊಂದು U-Turn: ತೆಗೆದಿದ್ದ ಪಠ್ಯ ಮತ್ತೆ ಬೋಧನೆಗೆ ಆದೇಶ
🔴 Pothole | ಬೆಂಗಳೂರು ರಸ್ತೆ ಗುಂಡಿಯಿಂದಾಗಿ ಬೈಕ್‌ ಸವಾರ ಸಾವು
🔴 Mann ki baat | ವೃಕ್ಷ ಸಂರಕ್ಷಕ, ಕನ್ನಡ ಹೋರಾಟಗಾರ ಸುರೇಶ್‌ ಕುಮಾರ್‌ಗೆ ಪ್ರಧಾನಿ ಮೋದಿ ಶ್ಲಾಘನೆ
🔴 General Consent To CBI | ಸಿಬಿಐಗೆ ನೀಡಿದ್ದ ಮುಕ್ತ ಸಮ್ಮತಿ ಹಿಂಪಡೆದ ತೆಲಂಗಾಣ ಸರ್ಕಾರ, ಕೇಂದ್ರಕ್ಕೆ ಸೆಡ್ಡು
🔴 ಶಬ್ದ ಸ್ವಪ್ನ ಅಂಕಣ | ಪಾಡು ಹಾಡು
🔴 Hori Habba 2022 | ಶಿವಮೊಗ್ಗದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯ ಅವಘಡ: ಇಬ್ಬರು ಯುವಕರ ಸಾವು
🔴 ಪ್ರಣಾಮ್‌ ಭಾರತ್‌ ಅಂಕಣ | ಒಂದು ಬೊಗಸೆ ಏಲಕ್ಕಿ
🔴 ಪೋಸ್ಟ್‌ ಬಾಕ್ಸ್‌ 143 | ಕಣ್ಣಲ್ಲೇ ಇದೆ ಎಲ್ಲಾ ಕಾಗದ

Exit mobile version