Site icon Vistara News

ವಿಸ್ತಾರ TOP 10 NEWS | ಜಾರಕಿಹೊಳಿ ʼಕೀಳುʼ ಮಾತು ಹಿಂಪಡೆತದಿಂದ 7ನೇ ವೇತನ ಆಯೋಗ ರಚನೆವರೆಗಿನ ಪ್ರಮುಖ ಸುದ್ದಿಗಳಿವು

top 10 news 9-11-2022

ಬೆಂಗಳೂರು: ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬ ಗಾದೆ ಮಾತಿದ್ದರೂ ರಾಜಕಾರಣಿಗಳು ನಾಲಿಗೆ ಹರಿಯಬಿಟ್ಟು ಅದನ್ನು ಹಿಂಪಡೆಯುವ ಚಾಳಿ ಮುಂದುವರಿದಿದೆ. ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ 7ನೇ ವೇತನ ಆಯೋಗವನ್ನು ರಾಜ್ಯ ಸರ್ಕಾರ ರಚಿಸಿದೆ, ಮುರುಘಾ ಶರಣರ ವಿರುದ್ಧ ಹಲವು ಕಲಂಗಳಡಿ ಕಠಿಣ ಕೇಸ್‌ ಹಾಕಿ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ, ನೀರವ್‌ ಮೋದಿ ಭಾರತಕ್ಕೆ ಹಸ್ತಾಂತರ ಸನ್ನಿಹಿತವಾಗಿದೆ, ವಿಶ್ವಕಪ್‌ ಫೈನಲ್‌ನಲ್ಲಿ ಪಾಕಿಸ್ತಾನದೊಂದಿಗೆ ಮುಖಾಮುಖಿಯಾಗುವ ಅವಕಾಶ ಭಾರತಕ್ಕಿದೆ, ಸಿದ್ದರಾಮಯ್ಯ ಕುರಿತು ಕುರುಬ ಸಮುದಾಯದ ಮುಖಂಡರ ವಿವಾದಾತ್ಮಕ ಹೇಳಿಕೆ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ʻಹಿಂದು ಕೀಳುʼ ಹೇಳಿಕೆ ವಾಪಸ್‌ ಪಡೆದ ಸತೀಶ್‌ ಜಾರಕಿಹೊಳಿ: ಮುಖ್ಯಮಂತ್ರಿಗೆ ಪತ್ರ
ಪರ್ಶಿಯನ್‌ ಭಾಷೆಯ ಮೂಲಕ ಹಿಂದು ಶಬ್ದದ ವ್ಯಾಖ್ಯಾನ ಮಾಡಲು ಹೋಗಿ ಭಾರಿ ಆಕ್ರೋಶಕ್ಕೆ ಗುರಿಯಾದ ಮತ್ತು ಪಕ್ಷಕ್ಕೂ ಮುಜುಗರ ಉಂಟು ಮಾಡಿದ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯುವುದಾಗಿ ಪ್ರಕಟಿಸಿದ್ದಾರೆ. ಜತೆಗೆ ಯಾರಿಗಾದರೂ ನೋವಾಗಿದ್ದರೆ ವಿಷಾದಿಸುವುದಾಗಿ ಹೇಳಿದ್ದಾರೆ. ಹೀಗೆ ಹಿಂಪಡೆಯುವುದಾಗಿ ಹೇಳುವ ಪತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದು ಅಚ್ಚರಿ ಮೂಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Swabhinami Hindu | ಸತೀಶ್‌ ಜಾರಕಿಹೊಳಿ ‘ಕೀಳು ಹಿಂದು’ ಹೇಳಿಕೆಗೆ ರಾಜ್ಯಾದ್ಯಂತ ಭುಗಿಲೆದ್ದ ಆಕ್ರೋಶ

೨. ಪರಿಶಿಷ್ಟ ಬಾಲಕಿ ಮೇಲೆ ದೌರ್ಜನ್ಯ, ಧಾರ್ಮಿಕ ಸಂಸ್ಥೆ ದುರ್ಬಳಕೆ: ಮುರುಘಾ ಶ್ರೀ ವಿರುದ್ಧ ಟೈಟ್‌ ಚಾರ್ಜ್‌ಶೀಟ್‌
ಚಿತ್ರದುರ್ಗ ಮುರುಘಾ ಮಠದ ಹಾಸ್ಟೆಲ್‌ನಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ನಾಲ್ವರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿ ಬಂಧಿತರಾಗಿರುವ ಮುರುಘಾ ಶರಣರಿಗೆ ಪೋಕ್ಸೋ ಜತೆಗೆ ಈಗ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ಕಾಯಿದೆಯ ಕಂಟಕವೂ ಎದುರಾಗಿದೆ. ಮುರುಘಾಶ್ರೀ ಪ್ರಕರಣದ ಚಾರ್ಜ್‌ಶೀಟ್‌ “ವಿಸ್ತಾರ ನ್ಯೂಸ್‌”ಗೆ ಲಭ್ಯವಾಗಿದ್ದು, ಧಾರ್ಮಿಕ ಸಂಸ್ಥೆಯ ದುರ್ಬಳಕೆ ಆರೋಪವೂ ಗಂಭೀರವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ

ಇನ್ನೊಂದು ಸುದ್ದಿ | ಮುರುಘಾಶ್ರೀ ವಿರುದ್ಧ ಸುಳ್ಳು ದೂರು ಕೊಡಲು ಬಾಲಕಿಗೆ ಪ್ರಚೋದನೆ; ಆಡಿಯೊ ವೈರಲ್!

೩. 7ನೇ ವೇತನ ಆಯೋಗ ರಚನೆಯ ಘೋಷಣೆ; ಅಧ್ಯಕ್ಷರಾಗಿ ಸುಧಾಕರ್‌ ರಾವ್‌ ನೇಮಕ
ರಾಜ್ಯ ಸರ್ಕಾರಿ ನೌಕರರಿಗೆ ಕೊನೆಗೂ ರಾಜ್ಯ ಸರ್ಕಾರ ಶುಭ ಸುದ್ದಿ ನೀಡಿದೆ. ನೌಕರರು ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಏಳನೇ ವೇತನ ಆಯೋಗವನ್ನು (7th Pay Commission) ರಚಿಸಿ ಆದೇಶ ಹೊರಡಿಸಲಿದೆ. ಈ ವಿಷಯವನ್ನು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ದಾವಣಗೆರೆಯಲ್ಲಿ ಫೋಷಿಸಿದ್ದಾರೆ.
ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ್ ರಾವ್‌ ಈ ವೇತನ ಆಯೋಗದ ಅಧ್ಯಕ್ಷರಾಗಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: 7th Pay Commission | 7 ವೇತನ ಆಯೋಗ ರಚನೆ ಘೋಷಣೆ; ಸರಕಾರಿ ನೌಕರರ ಹರ್ಷ

೪. ನೀರವ್‌ ಮೋದಿ ಅರ್ಜಿ ವಜಾಗೊಳಿಸಿದ ಬ್ರಿಟನ್‌ ಹೈಕೋರ್ಟ್‌, ಭಾರತಕ್ಕೆ ಹಸ್ತಾಂತರ ಸನ್ನಿಹಿತ
ದೇಶಭ್ರಷ್ಟ ಆರ್ಥಿಕ ಅಪರಾಧಿ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (Punjab National Bank) ಸಾವಿರಾರು ಕೋಟಿ ರೂ. ವಂಚಿಸಿ ದೇಶ ತೊರೆದಿರುವ ವಜ್ರದ ವ್ಯಾಪಾರಿ ನೀರವ್‌ ಮೋದಿ (Nirav Modi) ಅವರನ್ನು ಶೀಘ್ರವೇ ಭಾರತಕ್ಕೆ ಹಸ್ತಾಂತರಿಸುವ ಕಾಲ ಸನ್ನಿಹಿತವಾಗಿದೆ. ಭಾರತಕ್ಕೆ ಹಸ್ತಾಂತರಗೊಳಿಸುವ ಆದೇಶ ಪ್ರಶ್ನಿಸಿ ನೀರವ್‌ ಮೋದಿ ಸಲ್ಲಿಸಿದ್ದ ಅರ್ಜಿಯನ್ನು ಲಂಡನ್‌ ಹೈಕೋರ್ಟ್‌ ನಿರಾಕರಿಸಿದ್ದು, ಶೀಘ್ರವೇ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

೫. Poster War | ಚುನಾವಣಾ ಪ್ರಚಾರ ಜೋರು, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್-ಬಿಜೆಪಿ ಪೋಸ್ಟರ್ ವಾರ್!
ನ.12ರಂದು ಮತದಾನ ನಡೆಯಲಿರುವ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೋಸ್ಟರ್ ವಾರ್ ಜೋರಾಗಿದೆ(Poster War). ಶಿಮ್ಲಾದ ಮಾಲ್‌ ರೋಡ್‌ನಲ್ಲಿರುವ ಮಲ್ಟಿ ಸ್ಟೋರಿ ಬಿಲ್ಡಿಂಗ್ ಈಗ ರಾಜಕೀಯ ಪಕ್ಷಗಳ ಪೋಸ್ಟರ್ ವಾರ್‌ಗೆ ವೇದಿಕೆಯನ್ನು ಒದಗಿಸಿದೆ. ಉಭಯ ಪಕ್ಷಗಳು ಪರಸ್ಪರ ದೋಷಾರೋಪಣೆ ಅಭಿವ್ಯಕ್ತಿಸುವ ಪೋಸ್ಟರ್‌ಗಳನ್ನು ಇಲ್ಲಿ ಕಾಣಬಹುದು! ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

೬. ಕಿವೀಸ್​ ಬೆಂಡೆತ್ತಿದ ಬಾಬರ್​ ಪಡೆ; ಫೈನಲ್​ಗೇರಿದ ಪಾಕಿಸ್ತಾನ, ಸೆಮಿ ಫೈನಲ್ ನಲ್ಲಿ ಭಾರತ ಗೆದ್ದರೆ ಮುಖಾಮುಖಿ
ಬೌಲಿಂಗ್​ ಮತ್ತು ಬ್ಯಾಟಿಂಗ್​ನಲ್ಲಿ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರಿದ ಪಾಕಿಸ್ತಾನ(PAK VS NZ ) ತಂಡ ಟಿ20 ವಿಶ್ವ ಕಪ್​ನ ಸೆಮಿಫೈನಲ್​ ಸಮರದಲ್ಲಿ ಬಲಿಷ್ಠ ನ್ಯೂಜಿಲೆಂಡ್​​ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿ ಫೈನಲ್​ ಪ್ರವೇಶಿಸಿದೆ. ಕೂಟದ ಆರಂಭಿಕ ಪಂದ್ಯದಲ್ಲಿ ಹೀನಾಯವಾಗಿ ಸೋತು ಎಲ್ಲೆಡೆ ಟೀಕೆಗೆ ಗುರಿಯಾಗಿದ್ದ ಪಾಕ್​ ಬಳಿಕ ಫಿನಿಕ್ಸ್​ನಂತೆ ಎದ್ದು ಬಂದು ಇದೀಗ ಫೈನಲ್​ ತಲುಪಿ ನಿರಾಳವಾಗಿದೆ. ಗುರುವಾರ ಭಾರತ ಮತ್ತು ಇಂಗ್ಲೆಂಡ್​ ವಿರುದ್ಧದ ಪಂದ್ಯದ ವಿಜೇತರನ್ನು ಪಾಕ್​ ಫೈನಲ್​ನಲ್ಲಿ ಎದುರಿಸಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

. ಈ ಟಗರು 10 ಕುರಿ‌ಗಳ ಹಿಂದೆ ಹೋಗುತ್ತೆ, ಮುರುಘಾಶ್ರೀಯಂತೆ ಇವನೂ ಕಳ್ಳ: ಸಿದ್ದರಾಮಯ್ಯ ಬಗ್ಗೆ ಮುಕುಡಪ್ಪ ಪಿಸುಮಾತು!
ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ಕುರುಬ ಸಮಾಜದ ಹಿರಿಯ ಮುಖಂಡ, “ಹಿಂದʼ ಅಧ್ಯಕ್ಷ ಕೆ. ಮುಕುಡಪ್ಪ ಹಗುರವಾಗಿ ಮಾತನಾಡಿರುವುದು ಬೆಳಕಿಗೆ ಬಂದಿದೆ. ಸಿದ್ದರಾಮಯ್ಯ ಅವರ ಖಾಸಗಿ ಸಂಗತಿಗಳ ಬಗ್ಗೆ ಅವರು ಆಕ್ಷೇಪಾರ್ಹವಾಗಿ ಮಾತನಾಡಿದ್ದಾರೆ. ಕುರುಬ ಸಮಾಜಕ್ಕೆ ರಾಜಕೀಯ ಅಧಿಕಾರ ನೀಡುವಂತೆ ಕರೆಯಲಾಗಿದ್ದ ಪ್ರತಿಕಾಗೋಷ್ಠಿಗೂ ಮುನ್ನ ಸಿದ್ದರಾಮಯ್ಯ ಅವರ ವಿರುದ್ಧ ಮುಕುಡಪ್ಪ ಪಿಸು ಮಾತನಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

೮. ಮಳಲಿ ಮಸೀದಿ ವಿವಾದ | ಮಸೀದಿ ಅರ್ಜಿ ವಜಾ, ವಿಹಿಂಪ ಹೋರಾಟಕ್ಕೆ ಮೊದಲ ಜಯ, ಜ್ಞಾನವಾಪಿ ಮಾದರಿ ವಿಚಾರಣೆಗೆ ವೇದಿಕೆ ಸಜ್ಜು?
ಮಂಗಳೂರು ಹೊರವಲಯದ ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿ ವಿಶ್ವ ಹಿಂದೂ ಪರಿಷತ್‌ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ. ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್‌ನಲ್ಲಿ ಬುಧವಾರ ನಡೆದ ವಿಚಾರಣೆ ವೇಳೆ ಮಳಲಿ ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ ಅರ್ಜಿಯನ್ನು ವಜಾ ಮಾಡಿದೆ. ಈ ಪ್ರಕರಣದ ವಿಚಾರಣೆ ನಡೆಸಲು ಸಿವಿಲ್‌ ಕೋರ್ಟ್‌ಗೆ ಅಧಿಕಾರ ವ್ಯಾಪ್ತಿ ಇಲ್ಲ ಎಂದು ಮಸೀದಿ ಆಡಳಿತ ಮಂಡಳಿ ವಾದಿಸಿತ್ತು. ಆದರೆ, ಈಗ ಈ ವಾದವನ್ನು ಕೋರ್ಟ್‌ ತಳ್ಳಿ ಹಾಕಿದೆ. ಹೀಗಾಗಿ ಮುಂದಿನ ವಿಚಾರಣೆ ಸಿವಿಲ್‌ ಕೋರ್ಟ್‌ ವ್ಯಾಪ್ತಿಯಲ್ಲೇ ನಡೆಯಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

೯. ಈ ದೇಶ ಡಾ. ಮನಮೋಹನ್ ಸಿಂಗ್‌ಗೆ ಋಣಿಯಾಗಿದೆ! ಗಡ್ಕರಿ ಹೀಗೆ ಹೇಳಿದ್ದು ಏಕೆ?
ಉದಾರ ಆರ್ಥಿಕ ಸುಧಾರಣೆಗಾಗಿ ದೇಶವು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಋಣಿಯಾಗಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಬಣ್ಣಿಸಿದರು. ಟಿಐಒಎಲ್‌ ಅವಾರ್ಡ್ಸ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ವಿತ್ತ ಮಂತ್ರಿಯಾಗಿ 1991ರಲ್ಲಿ ಜಾರಿಗೆ ತಂದ ಆರ್ಥಿಕ ಸುಧಾರಣೆಗಳು ಭಾರತದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿದವು. ಉದಾರ ಆರ್ಥಿಕತೆಯಾಗಿ ಬೆಳೆಯಲು ಸಾಧ್ಯವಾಯಿತು ಎಂದರು. ಪೂರ್ಣ ವರದಿಗೆ ಕ್ಲಿಕ್‌ ಮಾಡಿ
ಇನ್ನೊಂದು ಸುದ್ದಿ | 2024ಕ್ಕೆ ಮೊದಲೇ ಭಾರತದ ರಸ್ತೆಗಳು ಅಮೆರಿಕದಂತೆ ಆಗಲಿವೆ: ನಿತಿನ್‌ ಗಡ್ಕರಿ

೧೦. Nepal earthquake | ನೇಪಾಳದಲ್ಲಿ ಭೂಕಂಪ, 6 ಸಾವು, ದೆಹಲಿಯಲ್ಲೂ ನಡುಗಿದ ಭೂಮಿ
6.6 ರಿಕ್ಟರ್‌ ಮಾಪಕದಷ್ಟು ತೀವ್ರತೆಯ ಭೂಕಂಪನ ಇಂದು ಮುಂಜಾನೆ ನೇಪಾಳದಲ್ಲಿ ಉಂಟಾಗಿದ್ದು, ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ. ದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ಈ ಭೂಕಂಪನದ ಕೇಂದ್ರ ಭಾರತದ ಉತ್ತರ ಪ್ರದೇಶ ರಾಜ್ಯದ ಫಿಲಿಭಿತ್‌ ನಗರದಿಂದ ಈಶಾನ್ಯಕ್ಕೆ 158 ಕಿಲೋಮೀಟರ್‌ ದೂರದಲ್ಲಿ ಹಾಗೂ 10 ಕಿಲೋಮೀಟರ್‌ ಆಳದಲ್ಲಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಆಸಕ್ತಿಕರ ಸುದ್ದಿಗಳು

🔴 ಸಮರಾಂಕಣ | ವಿಮಾನದ ಚಕ್ರಗಳ ಹಿಂದೆ ಅಡಗಿದೆ ಅದ್ಭುತ ವಿಜ್ಞಾನ
🔴 CJI D Y Chandrachud | ಸುಪ್ರೀಂ ಕೋರ್ಟ್‌‌ನ ಸಿಜೆಐ ಆಗಿ ಅಧಿಕಾರ ಸ್ವೀಕರಿಸಿದ ಡಿ.ವೈ. ಚಂದ್ರಚೂಡ
🔴 Money Laundering | ಶಿವಸೇನೆ ನಾಯಕ ಸಂಜಯ್ ರಾವತ್‌‌ಗೆ ಜಾಮೀನು ನೀಡಿದ ಮುಂಬೈ ಕೋರ್ಟ್
🔴 The Kerala Story | ಕೇರಳ ಉಗ್ರರ ಸ್ವರ್ಗ: ದಿ ಕೇರಳ ಸ್ಟೋರಿ ಚಿತ್ರ ತಂಡದ ವಿರುದ್ಧ ಕೇಸ್!
🔴 Aruna Miller | ಭಾರತೀಯ ಮೂಲದ ಅರುಣಾ ಮಿಲ್ಲರ್ ಈಗ ಮೇರಿಲ್ಯಾಂಡ್ ಗವರ್ನರ್
🔴 2021ರಲ್ಲಿ ಅತಿಹೆಚ್ಚು ರಸ್ತೆ ಅಪಘಾತವಾದ 3ನೇ ರಾಜ್ಯ ಕರ್ನಾಟಕ; ಆ್ಯಕ್ಸಿಡೆಂಟ್ ಆಗಿದ್ದೆಷ್ಟು? ಸಾವು ಎಷ್ಟು?
🔴 ತುತ್ತಿಗಾಗಿ ಮನೆ ಮುಂದೆ ಬಂದು ಬೇಡುವ ಕಾಡಾನೆಗಳು! ಸಕಲೇಶಪುರದಲ್ಲಿ ಕರುಣಾಜನಕ ದೃಶ್ಯ
🔴 Twitter | ಟ್ವಿಟರ್‌ಗೆ ಪೇವಾಲ್! ಬಳಕೆಗೆ ದುಡ್ಡು ಕೊಡಬೇಕಾ?

Exit mobile version