Site icon Vistara News

ವಿಸ್ತಾರ TOP 10 NEWS: ಸಿದ್ದರಾಮಯ್ಯ ಕ್ಷೇತ್ರ ಗೊಂದಲದಿಂದ, ಉರಿಗೌಡ-ನಂಜೇಗೌಡರ ದಾಖಲೆವರೆಗೆ ಪ್ರಮುಖ ಸುದ್ದಿಗಳಿವು

Vistara Top 10 News

#image_title

1. ಕೋಲಾರ ಬೇಡ, ವರುಣಾದಲ್ಲೇ ನಿಲ್ಲಿ: ಸಿದ್ದರಾಮಯ್ಯಗೆ ರಾಹುಲ್‌ ಗಾಂಧಿ ಸಲಹೆ
ʻನಿಮಗೆ ಸುರಕ್ಷಿತ ಎನಿಸದೆ ಹೋದರೆ ಯಾವ ಕಾರಣಕ್ಕೂ ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯುವುದು ಬೇಡ. ಮೈಸೂರಿನ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸಿʼʼ ಎಂಬ ಸ್ಪಷ್ಟ ಸಲಹೆಯೊಂದನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕಾಗಿ ಸಿದ್ದರಾಮಯ್ಯ ಅವರು ತಮ್ಮ ಸ್ಪರ್ಧೆಯ ಬಗ್ಗೆ ಮರುಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಸೋಮವಾರ ರಾಹುಲ್‌ ಗಾಂಧಿ ಅವರ ಜತೆ ಇನ್ನೊಮ್ಮೆ ಮಾತನಾಡಿ ಕ್ಷೇತ್ರ ಫೈನಲ್‌ ಮಾಡುವುದಾಗಿ ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕೋಲಾರ ಮತ್ತು ವರುಣ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಆಸಕ್ತಿಯೂ ಇದ್ದಂತಿದೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ
ಪೂರಕ ವರದಿ ಸಿದ್ದರಾಮಯ್ಯ ಎಲ್ಲಿ ನಿಂತ್ರೂ ಗೆಲ್ಲಲ್ಲ; ಪಾಕಿಸ್ತಾನ್, ಅಫಘಾನಿಸ್ತಾನಕ್ಕೆ ಹೋಗ್ಲಿ ಅಂದ್ರು ಅಶೋಕ್‌

2. ಖಲಿಸ್ತಾನ ಪ್ರತ್ಯೇಕ ರಾಷ್ಟ್ರದ ವಿಷಬೀಜ ಬಿತ್ತುತ್ತಿರುವ ಅಮೃತ್‌ ಪಾಲ್‌ ಸಿಂಗ್‌ ಬಂಧನ
ಚಂಡೀಗಢ:
ಪಂಜಾಬ್‌ನಲ್ಲಿ ಖಲಿಸ್ತಾನಿ ಉಗ್ರ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತಿರುವ, ಹಿಂಸಾತ್ಮಕ ಕೃತ್ಯಗಳಿಗೆ ಕಾರಣವಾಗುತ್ತಿರುವ ‘ವಾರಿಸ್‌ ಪಂಜಾಬ್‌ ದೆ’ ಮುಖ್ಯಸ್ಥ ಅಮೃತ್‌ಪಾಲ್‌ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ.‌ ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ವರದಿ : ವಿಸ್ತಾರ Explainer: ಕೊನೆಗೂ ಪಂಜಾಬ್​ ಪೊಲೀಸ್​ ಬಲೆಗೆ ಬಿದ್ದ ಅಮೃತ್​ಪಾಲ್​ ಹಿನ್ನೆಲೆಯೇನು?

3. ಮಾ. 25ರಂದು ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ, 26ಕ್ಕೆ ನಿಗದಿಯಾದ ದೇವೇಗೌಡ್ರ ರೋಡ್‌ ಶೋ ರದ್ದು
ಬೆಂಗಳೂರು: ಮಾರ್ಚ್‌ 25ರಂದು ದಾವಣಗೆರೆಯಲ್ಲಿ ನಡೆಯುವ ಮಹಾ ಸಮಾವೇಶಕ್ಕೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಅವರು ಅಂದೇ ಬೆಂಗಳೂರಿನಲ್ಲಿ ಬೃಹತ್‌ ರೋಡ್‌ ಶೋ (Road Show) ಒಂದರಲ್ಲಿ ಭಾಗವಹಿಸಲಿದ್ದಾರೆ. ಈ ನಡುವೆ, ಜಾತ್ಯತೀತ ಜನತಾದಳ ಬಹು ನಿರೀಕ್ಷೆಯಿಂದ ಮಾ. 26ಕ್ಕೆ ಫಿಕ್ಸ್‌ ಮಾಡಿದ ಮಾಜಿ ಪ್ರಧಾನಿ ದೇವೇಗೌಡರ ರೋಡ್‌ ಶೋವನ್ನು ರದ್ದು ಮಾಡಿದೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

4. ಮೊದಲ ಮಳೆಗೇ ಬೆಂಗಳೂರು-ಮೈಸೂರು ದಶಪಥದ ಬಣ್ಣ ಬಟಾಬಯಲು: ದಿಕ್ಕೆಟ್ಟ ಪ್ರಯಾಣಿಕರು!
ಶುಕ್ರವಾರ ಸುರಿದ ಸಾಧಾರಣ ಮಳೆಗೇ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಅವಾಂತರವೇ ಸೃಷ್ಟಿಯಾಗಿದೆ. ರಾಮನಗರ ಸಮೀಪದ ಸಂಗಬಸವನದೊಡ್ಡಿ ಬಳಿ ಹೆದ್ದಾರಿ ಜಲಾವೃತಗೊಂಡಿತ್ತು. ಡ್ರೈನೇಜ್‌ ಕಟ್ಟಿಕೊಂಡಿದ್ದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆ ತುಂಬೆಲ್ಲಾ ನಿಂತುಕೊಂಡಿತ್ತು. ಇದರಿಂದಾಗಿ ವಾಹನ ಸವಾರರು ಕಿರಿಕಿರಿ ಅನುಭವಿಸಬೇಕಾಯಿತು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಸುವರ್ಣ ಮಂಡ್ಯ ಪುಸ್ತಕದಲ್ಲಿದೆ ಉರಿಗೌಡ- ನಂಜೇಗೌಡರ ಹೋರಾಟದ ಉಲ್ಲೇಖ!
ಮಂಡ್ಯ:
1799ರಲ್ಲಿ ನಡೆದ ನಾಲ್ಕನೇ ಆಂಗ್ಲೋ ಇಂಡಿಯನ್‌ ಯುದ್ಧದಲ್ಲಿ ಟಿಪ್ಪು ಸುಲ್ತಾನ್‌ನ್ನು ಅಂತಿಮವಾಗಿ ಕೊಂದು ಹಾಕಿದ್ದರು ಮಂಡ್ಯದ ಉರಿ ಗೌಡ ಮತ್ತು ನಂಜೇಗೌಡ ಎಂಬ ಒಕ್ಕಲಿಗ ಯೋಧರು ಎಂಬ ಬಿಜೆಪಿಯ ಇತ್ತೀಚಿಗಿನ ವಾದಕ್ಕೆ ಸಂಬಂಧಿಸಿ ಕೆಲವೊಂದು ಮಾಹಿತಿಗಳು ಸಿಕ್ಕಿವೆ. ಇದು ಬಿಜೆಪಿಗೆ ಒಂದು ದೊಡ್ಡ ಅಸ್ತ್ರವಾಗಿ ಪರಿಣಮಿಸಿದೆ. 2006ರಲ್ಲಿ ಪ್ರಕಟವಾದ ಸುವರ್ಣ ಮಂಡ್ಯ ಪುಸ್ತಕವನ್ನು ಬಿಜೆಪಿ ಮುಂದಿಟ್ಟಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ವರದಿ:ದಾಖಲೆ ಸಿಕ್ಕಿದೆ, ಮಂಡ್ಯದಲ್ಲಿ ಉರಿ ಗೌಡ-ನಂಜೇಗೌಡ ಪ್ರತಿಮೆ ಮಾಡ್ತೇವೆ ಎಂದ ಕರಂದ್ಲಾಜೆ
ಪೂರಕ ವರದಿ: ಮುನಿರತ್ನ ನಿರ್ಮಾಣ, ಸಿ.ಎನ್‌. ಅಶ್ವತ್ಥನಾರಾಯಣ್‌ ಕಥೆ; ಮೇ 18ರಂದು ಉರಿಗೌಡ- ನಂಜೇಗೌಡ ಸಿನಿಮಾಕ್ಕೆ ಮುಹೂರ್ತ!

6. ಆಲಿಕಲ್ಲು ಮಳೆಗೆ ನೆಲಕಚ್ಚಿದ ಬೆಳೆ; ರೈತರು ಕಂಗಾಲು, ಗೋಳು ಕೇಳುವವರ‍್ಯಾರು?
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು ಮಾತ್ರವಲ್ಲದೆ, ರೈತರಿಗೂ ಸಂಕಷ್ಟವನ್ನು ತಂದೊಡ್ಡಿದೆ. ಕಲಬುರಗಿ, ಕೋಲಾರ, ಯಾದಗಿರಿ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಕೃಷಿಗೆ ಭಾರಿ ಹಾನಿಯಾಗಿದೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

7. ಜಿಮ್ಸ್‌ನಲ್ಲಿ 7 ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾಕೆಯ ಮೇಲೆ ಅತ್ಯಾಚಾರ; ವಿಡಿಯೊ ಮಾಡಿ ಹಿಡಿದುಕೊಟ್ಟ ವ್ಯಕ್ತಿ
ಇಲ್ಲಿನ ಜಿಮ್ಸ್‌ ಆಸ್ಪತ್ರೆಯಲ್ಲಿ ಕಳೆದ ಏಳು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಅಪರಿಚಿತ ಅಸ್ವಸ್ಥೆಯೊಬ್ಬಳ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿರುವ ಕೃತ್ಯ ಬೆಳಕಿಗೆ ಬಂದಿದೆ. ಈ ದೃಶ್ಯವನ್ನು ಕಂಡವರೊಬ್ಬರು ಆತನನ್ನು ಹಿಡಿದು ಆಸ್ಪತ್ರೆ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. ಭಾರತ-ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯ ನಡೆಯುವುದು ಅನುಮಾನ; ಕಾರಣ ಏನು?
ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯವನ್ನು ಗೆದ್ದಿರುವ ಭಾರತ ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದೆ. ಆದರೆ ಈ ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ಚಿನ್ನದ ಬೆಲೆಯಲ್ಲಿ ದಾಖಲೆಯ ಏರಿಕೆ; 10 ಗ್ರಾಮ್‌ಗೆ 59,420 ರೂ.
ಮೆರಿಕದಲ್ಲಿ ಬ್ಯಾಂಕ್​ ಬಿಕ್ಕಟ್ಟು ಪ್ರಾರಂಭವಾದ ಬೆನ್ನಲ್ಲೇ, ಬಹು ಸರಕು ವಿನಿಮಯ ಕೇಂದ್ರ (MCX)ದಲ್ಲಿ ಚಿನ್ನದ ಬೆಲೆ ಶುಕ್ರವಾರ (ಮಾರ್ಚ್​ 17) 10 ಗ್ರಾಂ ಗೆ 59,420 ರೂಪಾಯಿಗೆ ತಲುಪಿತ್ತು. ಇದು ಈವರೆಗಿನ ಗರಿಷ್ಠ ಮಟ್ಟದ ಬೆಲೆ ಎಂದು ಹೇಳಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ವಿಸ್ತಾರ ಅಂಕಣ: ಭಾರತದ ಬಹುತ್ವ ಕಾಪಾಡಲು ಹಿಂದು ರಾಷ್ಟ್ರವಲ್ಲದೆ ಮತ್ಯಾವ ಹಾದಿ?!
ಇಲ್ಲಿ ವೈವಿಧ್ಯತೆ ಇದೆ. ವಿಗ್ರಹಾರಾಧನೆ, ಪುರಾಣ, ನಾಸ್ತಿಕತೆ, ಆಜ್ಞೇಯವಾದ, ಆಧುನಿಕ ವಿಜ್ಞಾನ- ಹೀಗೆ ಎಲ್ಲದಕ್ಕೂ ಹಿಂದೂ ಧರ್ಮದಲ್ಲಿ ಸ್ಥಾನವಿದೆ. ಅದಕ್ಕೇ ಹೇಳುವುದು: ಭಾರತ ಹಿಂದೂ ರಾಷ್ಟ್ರವಾಗಿ ಉಳಿದರಷ್ಟೆ ಬಹುತ್ವ ಉಳಿಯುತ್ತದೆ. ಸ್ವಾಮಿ ವಿವೇಕಾನಂದರ ಈ ಮಾತು ಇಂದು ಅರ್ಥಪೂರ್ಣ ಎಂದಿದ್ದಾರೆ ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ತಮ್ಮ ವಿಸ್ತಾರ ಅಂಕಣದಲ್ಲಿ. ಪೂರ್ಣ ಲೇಖನಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version