Karnataka Elections : ಕೋಲಾರ ಬೇಡ, ವರುಣಾದಲ್ಲೇ ನಿಲ್ಲಿ: ಸಿದ್ದರಾಮಯ್ಯಗೆ ರಾಹುಲ್‌ ಗಾಂಧಿ ಸ್ಪಷ್ಟ ಸಲಹೆ - Vistara News

ಕರ್ನಾಟಕ

Karnataka Elections : ಕೋಲಾರ ಬೇಡ, ವರುಣಾದಲ್ಲೇ ನಿಲ್ಲಿ: ಸಿದ್ದರಾಮಯ್ಯಗೆ ರಾಹುಲ್‌ ಗಾಂಧಿ ಸ್ಪಷ್ಟ ಸಲಹೆ

ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸಲು ಬಯಸಿ ಅರ್ಜಿ ಸಲ್ಲಿಸಿದ್ದರೂ ಅಲ್ಲಿ ಅವರ ಗೆಲುವು ಕಷ್ಟವೆಂಬ ವರದಿಗಳ ಹಿನ್ನೆಲೆಯಲ್ಲಿ ವರುಣಾದಲ್ಲಿ ಸ್ಪರ್ಧಿಸುವಂತೆ ರಾಹುಲ್‌ ಗಾಂಧಿ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

VISTARANEWS.COM


on

Rahul gandhi siddaramaiah
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ʻನಿಮಗೆ ಸುರಕ್ಷಿತ ಎನಿಸದೆ ಹೋದರೆ ಯಾವ ಕಾರಣಕ್ಕೂ ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯುವುದು ಬೇಡ. ಮೈಸೂರಿನ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸಿʼʼ ಎಂಬ ಸ್ಪಷ್ಟ ಸಲಹೆಯೊಂದನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸಿದ್ದರಾಮಯ್ಯ (Siddaramaiah) ಅವರಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಶುಕ್ರವಾರ ನಡೆದ ಕಾಂಗ್ರೆಸ್‌ನ ಕೇಂದ್ರೀಯ ಚುನಾವಣಾ ಸಮಿತಿ ಸಭೆಯಲ್ಲಿ ಸಿದ್ದರಾಮಯ್ಯ ಅವರು ಸ್ಪರ್ಧಿಸುವ ಕ್ಷೇತ್ರದ ತೀರ್ಮಾನ ಆಗಬೇಕಾಗಿತ್ತು. ಕೋಲಾರ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರು ಮಾತ್ರ ಅರ್ಜಿ ಹಾಕಿದ್ದರು. ಆದರೆ, ಚುನಾವಣಾ ಸಮಿತಿ ಸಭೆಯ ವೇಳೆ ರಾಹುಲ್‌ ಗಾಂಧಿ ಅವರು ಕೋಲಾರದ ಸ್ಪರ್ಧೆಯನ್ನು ಮರುಪರಿಶೀಲಿಸುವಂತೆ ಸಲಹೆ ನೀಡಿದ್ದರಿಂದ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಹೀಗಾಗಿ ಯುಗಾದಿ ದಿನದಂದು ಪ್ರಕಟವಾಗಲಿರುವ ಮೊದಲ ಪಟ್ಟಿಯಲ್ಲಿ ಕೋಲಾರದ ಅಭ್ಯರ್ಥಿ ಪ್ರಕಟವಾಗುವ ಸಾಧ್ಯತೆಗಳಿಲ್ಲ.

ಸಿದ್ದರಾಮಯ್ಯ ಅವರ ವಿಚಾರದಲ್ಲಿ ರಿಸ್ಕ್‌ ತೆಗೆದುಕೊಳ್ಳುವುದು ಬೇಡ. ಅವರು ಗೆದ್ದು ಬರುವ ಖಾತ್ರಿ ಇರುವ ಕ್ಷೇತ್ರವನ್ನೇ ಆಯ್ಕೆ ಮಾಡಬೇಕು ಎನ್ನುವ ಸಲಹೆಯನ್ನು ರಾಹುಲ್‌ ಗಾಂಧಿ ಈ ಸಂದರ್ಭದಲ್ಲಿ ನೀಡಿದರು ಎನ್ನಲಾಗಿದೆ. ಒಂದು ವೇಳೆ ಕೋಲಾರದಿಂದಲೇ ಸ್ಪರ್ಧಿಸುವುದಾದರೆ ಅದಕ್ಕಿರುವ ಎಲ್ಲ ಸಮೀಕರಣಗಳನ್ನು ಪರಿಶೀಲಿಸಬೇಕು. ನಾಯಕರೆಲ್ಲರೂ ಸೇರಿ ಗೆಲ್ಲಿಸಬೇಕು. ಅಷ್ಟಾದರೂ ದೊಡ್ಡ ಲೀಡ್‌ ಪಡೆಯಲು ಕಷ್ಟವಾಗಬಹುದು ಎಂದಿದ್ದರೆ ಅವರು ಈ ಹಿಂದೆ ಸ್ಪರ್ಧಿಸಿ ಗೆದ್ದಿರುವ ವರುಣಾ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡರೆ ಒಳ್ಳೆಯದು ಎಂದು ರಾಹುಲ್‌ ಹೇಳಿದ್ದಾರೆ ಎನ್ನಲಾಗಿದೆ.

ಕೋಲಾರದಲ್ಲಿ ಸ್ಪರ್ಧೆ ಮಾಡಿದರೆ ಸ್ವತಃ ಸಿದ್ದರಾಮಯ್ಯ ಅವರು ತಮ್ಮ ಗೆಲುವಿಗಾಗಿ ಹೋರಾಟ ಮಾಡಬೇಕಾಗುತ್ತದೆ. ಇದು ಇತರ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತದೆ. ಅವರ ಚರಿಷ್ಮಾದಿಂದ ಗೆಲ್ಲಿಸಬಲ್ಲ ಕೆಲವೊಂದು ಕ್ಷೇತ್ರಗಳಲ್ಲಿ ಅವರನ್ನು ಬಳಸಿಕೊಳ್ಳಲು ಸಾಧ್ಯವಾಗದೆ ಹೋಗಬಹುದು. ಇದು ಒಟ್ಟಾರೆಯಾಗಿ ಪಕ್ಷಕ್ಕೆ ನಷ್ಟ ಉಂಟು ಮಾಡಲಿದೆ ಎಂಬ ಅಭಿಪ್ರಾಯವನ್ನು ರಾಹುಲ್‌ ಗಾಂಧಿ ವ್ಯಕ್ತಪಡಿಸಿದರು ಎನ್ನಲಾಗಿದೆ.

ವರುಣಾವೇ ಸೇಫ್‌ ಯಾಕೆ?

ಸಿದ್ದರಾಮಯ್ಯ ಅವರು ವರುಣದಿಂದ 2008ರಿಂದ ನಿರಂತರ ಗೆಲುವು ಸಾಧಿಸಿದ್ದಾರೆ. ಇಲ್ಲಿ ಎಲ್ಲ ವರ್ಗಗಳು ಸಿದ್ದರಾಮಯ್ಯ ಪರವಾಗಿವೆ. ಕಾಂಗ್ರೆಸ್‌ನಲ್ಲಿ ಕೂಡಾ ಒಗ್ಗಟ್ಟಿದೆ. ಇಲ್ಲಿ ಈಗ ಮಗ ಯತೀಂದ್ರ ಅವರೇ ಶಾಸಕರಾಗಿದ್ದು, ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಹೀಗಾಗಿ ಅದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಗೆಲ್ಲಬಹುದು. ಇಲ್ಲಿನ ಉಸ್ತುವಾರಿಯನ್ನು ಮಗ ಯತೀಂದ್ರ ಅವರಿಗೆ ನೀಡಿ ಸಿದ್ದರಾಮಯ್ಯ ಅವರಿಗೆ ರಾಜ್ಯದೆಲ್ಲೆಡೆ ಪ್ರಚಾರ ನಡೆಸಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಲಾಯಿತು.

ಆದರೆ, ಇದರಿಂದ ಯತೀಂದ್ರ ಅವರ ರಾಜಕೀಯಕ್ಕೆ ಹಿನ್ನಡೆ ಆದೀತು ಎಂಬ ಅಭಿಪ್ರಾಯವಿದ್ದರೂ ಅವರಿಗೆ ಒಂದು ಅವಧಿಯ ಬ್ರೇಕ್‌ ನೀಡಿದರೆ ಸಮಸ್ಯೆ ಆಗದು ಎಂಬ ಅಭಿಪ್ರಾಯವೂ ಇದೆ. ಹೀಗಾಗಿ ರಾಹುಲ್‌ ಗಾಂಧಿ ಕೂಡಾ ವರುಣಾದ ಸಲಹೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಇಷ್ಟೆಲ್ಲದರ ನಡುವೆ ಸಿದ್ದರಾಮಯ್ಯ ಅವರು ಕೋಲಾರ ಮತ್ತು ವರುಣಾ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಆಸೆಯನ್ನೂ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಕೋಲಾರ ನಾಯಕರ ಜತೆ ಸಭೆ

ಇತ್ತ ದಿಲ್ಲಿಯಿಂದ ಬೆಂಗಳೂರಿಗೆ ಮರಳಿ ಬಂದಿರುವ ಸಿದ್ದರಾಮಯ್ಯ ಅವರು ಮಧ್ಯಾಹ್ನ ಕೋಲಾರದ ಪ್ರಮುಖ ಕಾಂಗ್ರೆಸ್‌ ನಾಯಕರ ಸಭೆಯನ್ನು ಕರೆದಿದ್ದಾರೆ. ಅಲ್ಲಿನ ವಾಸ್ತವಿಕ ಸ್ಥಿತಿ ಏನು? ಸೋಲು ಗೆಲುವಿನ ಸಾಧ್ಯತೆ ಎಷ್ಟು ಎನ್ನುವ ವಿಚಾರದಲ್ಲಿ ಚರ್ಚೆಗಳನ್ನು ನಡೆಸಿ ಒಂದು ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ.

ಇದನ್ನೂ ಓದಿ : Karnataka Elections 2023 : ಕೋಲಾರದ ಸ್ಪರ್ಧೆಯಿಂದ ಹಿಂದೆ ಸರಿದರಾ ಸಿದ್ದರಾಮಯ್ಯ? ರಾಹುಲ್‌ ಸಲಹೆ ಏನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Lok Sabha Election 2024: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಐಡಿ ರೇಡ್;‌ 2 ದಿನದಲ್ಲಿ 21.15 ಕೋಟಿ ರೂ. ಚಿನ್ನಾಭರಣ ವಶ!

Lok Sabha Election 2024: ಉದ್ಯಮಿಗಳು, ಚಿನ್ನಾಭರಣ ಮಳಿಗೆ ಮಾಲೀಕರ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹದಿನಾರು ಕಡೆ ಸೇರಿ ರಾಜ್ಯದ ಇಪ್ಪತ್ತಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿಯನ್ನು ನಡೆಸಲಾಗಿದೆ. ಆದರೆ, ಬೆಂಗಳೂರು ದಕ್ಷಿಣ ಕ್ಷೇತ್ರವೊಂದರಲ್ಲೇ ಕೋಟ್ಯಂತರ ರೂಪಾಯಿ ಮೌಲ್ಯದ ದಾಖಲೆಗಳು ಇಲ್ಲದ ಚಿನ್ನಾಭರಣಗಳು ಪತ್ತೆಯಾಗಿವೆ.

VISTARANEWS.COM


on

Lok Sabha Election 2024 ID raid in Bengaluru South Lok Sabha constituency 21.15 crore Gold ornaments seized in 2 days
Koo

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಹಣದ ಹರಿವು ಹೆಚ್ಚಳವಾಗಿರುತ್ತದೆ. ಕೆಲವು ಕಡೆ ಅಕ್ರಮಗಳು ನಡೆಯುವ ಸಾಧ್ಯತೆಗಳು ಇರುತ್ತವೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ದಿನದಲ್ಲಿ ಬೆಂಗಳೂರಿನ ಹದಿನಾರು ಕಡೆ ಐಟಿ ಅಧಿಕಾರಿಗಳು ದಾಳಿ (IT Raid) ನಡೆಸಿದ್ದರು. ಈ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಪತ್ತೆಯಾಗಿವೆ. ಒಟ್ಟಾರೆ 21.15 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಳಲಾಗಿದೆ.

ಉದ್ಯಮಿಗಳು, ಚಿನ್ನಾಭರಣ ಮಳಿಗೆ ಮಾಲೀಕರ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹದಿನಾರು ಕಡೆ ಸೇರಿ ರಾಜ್ಯದ ಇಪ್ಪತ್ತಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿಯನ್ನು ನಡೆಸಲಾಗಿದೆ. ಆದರೆ, ಬೆಂಗಳೂರು ದಕ್ಷಿಣ ಕ್ಷೇತ್ರವೊಂದರಲ್ಲೇ ಕೋಟ್ಯಂತರ ರೂಪಾಯಿ ಮೌಲ್ಯದ ದಾಖಲೆಗಳು ಇಲ್ಲದ ಚಿನ್ನಾಭರಣಗಳು ಪತ್ತೆಯಾಗಿವೆ.

2 ದಿನಗಳಲ್ಲಿ 16 ಕಡೆ ದಾಳಿ; ಸಿಕ್ಕ ಚಿನ್ನ, ನಗದು ಎಷ್ಟು?

1) 3 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 4 ಕೆಜಿ 400 ಗ್ರಾಂ ಚಿನ್ನಾಭರಣ ಪತ್ತೆ
– ಶಂಕರಪುರ (ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ)

2) 3 ಕೋಟಿ 39 ಲಕ್ಷ ರೂಪಾಯಿ ಮೌಲ್ಯದ 4 ಕೆಜಿ 800 ಗ್ರಾಂ ಚಿನ್ನ ಪತ್ತೆ
ಶಾರದಾದೇವಿ ರಸ್ತೆ (ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ)

3) 2 ಕೋಟಿ 13 ಲಕ್ಷ ರೂಪಾಯಿ ಮೌಲ್ಯದ 3 ಕೆಜಿ 400 ಗ್ರಾಂ ಪತ್ತೆ
ಮರ್ಕೈಂಟಲ್ ಬ್ಯಾಂಕ್ (ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ)

4) 5 ಕೋಟಿ 33 ಲಕ್ಷ ರೂಪಾಯಿ ಮೌಲ್ಯದ 7 ಕೆಜಿ 598 ಗ್ರಾಂ ಚಿನ್ನ ಪತ್ತೆ
ಜಯನಗರ 3ನೇ ಬ್ಲಾಕ್ (ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ)

5) 84 ಲಕ್ಷ ಮೌಲ್ಯದ 1 ಕೆಜಿ 200 ಗ್ರಾಂ ಚಿನ್ನದ ಗಟ್ಟಿ ಪತ್ತೆ
ಸಾರಸ್ವತ ಬ್ಯಾಂಕ್, ಚಾಮರಾಜಪೇಟೆ (ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ)

6) 3 ಲಕ್ಷ 34 ಸಾವಿರ ರೂಪಾಯಿ ಮೌಲ್ಯದ 6.38 ಕ್ಯಾರೆಟ್ ವಜ್ರ ಪತ್ತೆ
ಅಂಚೆ ಕಚೇರಿ ಬಳಿ, ಬಸವನಗುಡಿ (ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ)

7) 3 ಲಕ್ಷದ 14 ಸಾವಿರ ಮೌಲ್ಯದ 5.99 ಕ್ಯಾರೆಟ್ ವಜ್ರ ಪತ್ತೆ
ಮಾತಾ ಶಾರದಾ ದೇವಿ ರಸ್ತೆ (ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ)

8) 6 ಕೋಟಿ 40 ಲಕ್ಷ ಮೌಲ್ಯದ 202.83 ಕ್ಯಾರೆಟ್ ವಜ್ರ ಪತ್ತೆ
ಜಯನಗರ (ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ)

ಇದನ್ನೂ ಓದಿ: VVPAT Verification: ಇವಿಯಂ-ವಿವಿಪ್ಯಾಟ್‌ ತಾಳೆ ಪ್ರಕರಣ; ಇಂದು ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಸೇರಿದಂತೆ ಹಲವು ಕಡೆ ದಾಳಿ ನಡೆದಿದ್ದು, ಈ ಕ್ಷೇತ್ರವೊಂದರಲ್ಲೇ ಸರಿ ಸುಮಾರು 21.15 ಕೋಟಿ ರೂಪಾಯಿಯಷ್ಟು ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಎಷ್ಟು ನಗದು ಪತ್ತೆಯಾಗಿದೆ ಎಂಬ ಬಗ್ಗೆ ಇನ್ನೂ ಐಟಿ ಅಧಿಕಾರಿಗಳು ಮಾಹಿತಿಯನ್ನು ಹಂಚಿಕೊಂಡಿಲ್ಲ.

Continue Reading

ವಿಜ್ಞಾನ

Zero Shadow Day: ಇಂದು ಬೆಂಗಳೂರಿನಲ್ಲಿ ನೆರಳೇ ಮೂಡುವುದಿಲ್ಲ; ಅದ್ಯಾಕೆ? ಏನಿದು ʼಶೂನ್ಯ ನೆರಳಿನ ದಿನʼ ?

Zero Shadow Day: ಎಲ್ಲರೂ ನಮ್ಮನ್ನು ತೊರೆದರೂ ನೆರಳು ಯಾವತ್ತೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ ಎನ್ನುವ ಮಾತಿದೆ. ಆದರೆ ಈ ಮಾತು ಇಂದು ಕೆಲವು ನಿಮಿಷಗಳ ಮಟ್ಟಿಗೆ ಬೆಂಗಳೂರಿಗರ ಪಾಲಿಗೆ ಸುಳ್ಳಾಗಲಿದೆ. ಅಂದರೆ ಮಧ್ಯಾಹ್ನ ನೆರಳೇ ಮೂಡುವುದಿಲ್ಲ. ಇದನ್ನು ʼಶೂನ್ಯ ನೆರಳಿನ ದಿನʼ ಎನ್ನುತ್ತಾರೆ. ಇದು ಯಾಕೆ ಸಂಭವಿಸುತ್ತದೆ? ಏನಿದರ ವೈಶಿಷ್ಟ್ಯ? ಮುಂತಾದ ವಿವರ ಇಲ್ಲಿದೆ.

VISTARANEWS.COM


on

Zero Shadow Day
Koo

ಬೆಂಗಳೂರು: ಇಂದು (ಏಪ್ರಿಲ್‌ 24) ಬೆಂಗಳೂರಿಗರು ವಿಶಿಷ್ಟ ವಿದ್ಯಾಮಾನವೊಂದಕ್ಕೆ ಸಾಕ್ಷಿಯಾಗಲಿದ್ದಾರೆ. ಪ್ರತಿ ಕ್ಷಣವೂ ನಿಮ್ಮೊಂದಿಗೆ ಇರುವ ನೆರಳು ಕೆಲ ಹೊತ್ತು ನಿಮ್ಮನ್ನು ಬಿಟ್ಟು ದೂರ ಹೋಗಲಿದೆ. ಅಂದರೆ ಯಾವುದೇ ಲಂಬ ವಸ್ತುವೂ ನೆರಳನ್ನು ಹೊಂದಿರುವುದಿಲ್ಲ! ಇದನ್ನೇ ʼಶೂನ್ಯ ನೆರಳಿನ ದಿನʼ (Zero Shadow Day) ಎಂದು ಕರೆಯುತ್ತಾರೆ. ಇದು ಹೇಗೆ ರೂಪುಗೊಳ್ಳುತ್ತದೆ? ಏನಿದರ ವೈಶಿಷ್ಟ್ಯ ? ಮುಂತಾದ ನಿಮ್ಮ ಕುತೂಹಲಗಳಿಗೆ ಇಲ್ಲಿದೆ ಉತ್ತರ.

ಮಧ್ಯಾಹ್ನ 12.17ರಿಂದ 12.23ರ ನಡುವೆ ಈ ವಿದ್ಯಾಮಾನ ಸಂಭವಿಸಲಿದ್ದು, ಈ ವೇಳೆ ಸೂರ್ಯನ ಸ್ಥಾನವು ನಿಖರವಾಗಿ ಉತ್ತುಂಗದಲ್ಲಿರುತ್ತದೆ. ಹೀಗಾಗಿ ಎಲ್ಲ ವಸ್ತುಗಳ ನೆರಳು ಕಣ್ಮರೆಯಾಗುತ್ತದೆ. ಬೆಂಗಳೂರಿನ ಕೋರಮಂಗಲದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ಈ ಸಂದರ್ಭಕ್ಕಾಗಿ ತನ್ನ ಕ್ಯಾಂಪಸ್‌ನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಏನಿದು ʼಶೂನ್ಯ ನೆರಳಿನ ದಿನʼ ?

ಸೂರ್ಯನು ಮಧ್ಯಾಹ್ನ ನಡು ನೆತ್ತಿಯ ಮೇಲಿರುವಾಗ ಲಂಬವಾಗಿರುವ ವಸ್ತುವಿಗೆ ಸ್ವಲ್ಪ ಮಾತ್ರವಾದರೂ ನೆರಳು ಇದ್ದೇ ಇರುತ್ತದೆ. ಆದರೆ ನಾಳೆ ಅಂಥ ಯಾವುದೇ ನೆರಳು ಇರುವುದಿಲ್ಲ. ಉಷ್ಣವಲಯದ ಸ್ಥಳಗಳಲ್ಲಿ (ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಯ ನಡುವೆ) ವರ್ಷಕ್ಕೆ ಎರಡು ಬಾರಿ ಶೂನ್ಯ ನೆರಳು ದಿನ ಸಂಭವಿಸುತ್ತದೆ.

ಸೂರ್ಯನ ಸುತ್ತ ಭೂಮಿಯ ಪರಿಭ್ರಮಣೆಯ ಅಕ್ಷವು ತನ್ನ ಸಮತಲದಿಂದ 23.5 ಡಿಗ್ರಿಗಳಷ್ಟು ಬಾಗಿದೆ. ಇದರಿಂದ ವಿವಿಧ ಋತುಗಳು ಸಂಭವಿಸುತ್ತವೆ. ಇದರಿಂದಾಗಿ ಸೂರ್ಯನು ದಿನದ ಅತ್ಯುನ್ನತ ಬಿಂದುವಿನಲ್ಲಿರುವಾಗ, ಉತ್ತರಾಯಣದಲ್ಲಿ ಆಕಾಶ ಸಮಭಾಜಕದ ದಕ್ಷಿಣದ 23.5 ಡಿಗ್ರಿಗಳಿಂದ ಸಮಭಾಜಕದ ಉತ್ತರಕ್ಕೆ 23.5 ಡಿಗ್ರಿಗಳಿಗೆ ಚಲಿಸುತ್ತಾನೆ ಮತ್ತು ದಕ್ಷಿಣಾಯನದಲ್ಲಿ ಇದರ ವಿರುದ್ಧಕ್ಕೆ ಚಲಿಸುತ್ತಾನೆ. ಈ ಪರಿಭ್ರಮಣ ಚಲನೆಯಿಂದಾಗಿ, ಒಂದು ಶೂನ್ಯ ನೆರಳು ದಿನವು ಉತ್ತರಾಯಣದಲ್ಲಿ (ಸೂರ್ಯ ಉತ್ತರದ ಕಡೆಗೆ ಚಲಿಸುವಾಗ) ಬರುತ್ತದೆ ಮತ್ತು ಇನ್ನೊಂದು ದಕ್ಷಿಣಾಯನದಲ್ಲಿ (ಸೂರ್ಯನು ದಕ್ಷಿಣಕ್ಕೆ ಚಲಿಸುವಾಗ) ಬರುತ್ತದೆ. 23.5 ಡಿಗ್ರಿ ಉತ್ತರ ಮತ್ತು 23.5 ಡಿಗ್ರಿ ದಕ್ಷಿಣ ಅಕ್ಷಾಂಶಗಳ ನಡುವೆ ವಾಸಿಸುವ ಜನರಿಗೆ, ಸೂರ್ಯನ ಅವನತಿಯು ಅವರ ಅಕ್ಷಾಂಶಕ್ಕೆ ಎರಡು ಬಾರಿ ಸಮನಾಗಿರುತ್ತದೆ.

ಮಹತ್ವ

ಇದು ಸೂರ್ಯನ ನಿಖರವಾದ ಸ್ಥಾನವನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ. ಜತೆಗೆ ವಿಜ್ಞಾನಿ ಮತ್ತು ಖಗೋಳಶಾಸ್ತ್ರಜ್ಞರಿಗೆ ಸೂರ್ಯನ ಬೆಳಕಿನ ನಡವಳಿಕೆ ಮತ್ತು ಭೂಮಿಯ ವಾತಾವರಣದ ಮೇಲೆ ಅದು ಬೀರುವ ಪರಿಣಾಮಗಳ ಬಗ್ಗೆ ಸಂಶೋಧನೆ ನಡೆಸಲು ಅವಕಾಶವನ್ನು ಕಲ್ಪಿಸುತ್ತದೆ. ಸಾಮಾನ್ಯವಾಗಿ ಶೂನ್ಯ ನೆರಳು ಸುಮಾರು ಒಂದೂವರೆ ನಿಮಿಷ ಕಾಲ ಅನುಭವಕ್ಕೆ ಬರುತ್ತದೆ.

ಎಲ್ಲೆಲ್ಲಿ , ಯಾವಾಗ?

ಶೂನ್ಯ ನೆರಳಿನ ದಿನ ದೇಶದ ವಿವಿಧ ನಗರಗಳಲ್ಲಿ ವರ್ಷದಲ್ಲಿ ಎರಡು ಬಾರಿ ಅನುಭವಕ್ಕೆ ಬರುತ್ತದೆ. ಅದು ಯಾವಾಗ ಎನ್ನುವ ವಿವರ ಇಲ್ಲಿದೆ.

  • ಕನ್ಯಾಕುಮಾರಿ: ಏಪ್ರಿಲ್ 10 ಮತ್ತು ಸೆಪ್ಟೆಂಬರ್ 1 (ಮಧ್ಯಾಹ್ನ: 12.21, 12.22)
  • ಬೆಂಗಳೂರು: ಏಪ್ರಿಲ್ 24 ಮತ್ತು ಆಗಸ್ಟ್ 18 (ಮಧ್ಯಾಹ್ನ: 12.17, 12.25)
  • ಹೈದರಾಬಾದ್: ಮೇ 9 ಮತ್ತು ಆಗಸ್ಟ್ 5 (ಮಧ್ಯಾಹ್ನ: 12.12, 12.19)
  • ಮುಂಬೈ: ಮೇ 15 ಮತ್ತು ಜೂನ್ 27 (ಮಧ್ಯಾಹ್ನ: 12.34, 12.45)
  • ಭೋಪಾಲ್: ಜೂನ್ 13 ಮತ್ತು ಜೂನ್ 28 (ಮಧ್ಯಾಹ್ನ: 12.20, 12.23)

ಇದನ್ನೂ ಓದಿ: Water From Air: ಗಾಳಿಯಿಂದಲೇ ನೀರು ಉತ್ಪಾದನೆ! ಬೆಂಗಳೂರು ಸ್ಟಾರ್ಟಪ್‌ನ ಕ್ರಾಂತಿಕಾರಿ ಹೆಜ್ಜೆ!

Continue Reading

ಕ್ರೈಂ

Jai Sriram Slogan: ಜೈ ಶ್ರೀರಾಮ್‌ ಹೇಳಿದ್ದಕ್ಕೆ ಮುಸ್ಲಿಂ ಯುವಕರಿಂದ ಹಲ್ಲೆ; ಇನ್ನೊಂದು ಘಟನೆ

Jai Sriram Slogan: ಬಾರ್‌ನಲ್ಲಿ ʼಜೈ ಶ್ರೀರಾಮ್‌ʼ ಎಂದು ಕೂಗಿದಾಗ 20 ಜನ ಮುಸ್ಲಿಂ ಯುವಕರು ಘೇರಾಯಿಸಿ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

VISTARANEWS.COM


on

jai sriram slogan koppal crime news
Koo

ಕೊಪ್ಪಳ: ʼಜೈ ಶ್ರೀರಾಮ್ʼ ಎಂದ (Jai Sriram Slogan) ವ್ಯಕ್ತಿಯ ಮೇಲೆ ಮುಸ್ಲಿಂ ಯುವಕರು ಹಲ್ಲೆ (Assault Case) ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಕೊಪ್ಪಳ (Koppal news) ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ ಶೈನ್ ಬಾರ್‌ನಲ್ಲಿ ಈ ಘಟನೆ (Crime news) ನಡೆದಿದ್ದು, ಮದ್ಯ ಸೇವನೆಯ ವೇಳೆ ʼಜೈ ಶ್ರೀರಾಮ್‌ʼ ಎಂದಿದ್ದಕ್ಕೆ ಹಲ್ಲೆ ನಡೆಸಲಾಗಿದೆ ಎಂಬುದು ಆರೋಪ.

ಶ್ರೀರಾಮ ನಗರದ ಕುಮಾರ್ ರಾಠೋಡ್ ಎಂಬವರ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಹಲ್ಲೆಯಲ್ಲಿ ಗಾಯಗೊಂಡಿರುವ ಕುಮಾರ್ ರಾಠೋಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾರ್‌ನಲ್ಲಿ ʼಜೈ ಶ್ರೀರಾಮ್‌ʼ ಎಂದು ಕೂಗಿದಾಗ 20 ಜನ ಮುಸ್ಲಿಂ ಯುವಕರು ಘೇರಾಯಿಸಿ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಶ್ರೀರಾಮನವಮಿ (Sri Ram Navami) ಸಂದರ್ಭದಲ್ಲಿ ಜೈ ಶ್ರೀರಾಮ್‌ ಘೋಷಣೆ ಕೂಗಿದ್ದ ಯುವಕರನ್ನು ಅಡ್ಡಗಟ್ಟಿ ಕೆಲ ಮುಸ್ಲಿಂ ಯುವಕರು ಗೂಂಡಾಗಿರಿ ನಡೆಸಿದ್ದ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನಡೆದಿತ್ತು. ಹಿಂದು ಯುವಕರ ಮೇಲೆ ಹಲ್ಲೆ ಪ್ರಕರಣ ಸಂಬಂಧ ಡಿ. ಪವನ್ ಕುಮಾರ್ ನೀಡಿದ ದೂರಿನ ಮೇರೆಗೆ ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಕೆಲವರನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿದೆ.

ಗುಜರಿ ಅಂಗಡಿ ಮಾಲೀಕನಿಗೆ ಬೆದರಿಸಿ ಹಣ ಪೀಕಿದ ಪೊಲೀಸ್‌ 

ಬೆಂಗಳೂರು: ಮಾರತ್ತಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಸುಳ್ಳು ಆರೋಪಗಳನ್ನು ಮಾಡಿ ಗುಜರಿ ಅಂಗಡಿ ಮಾಲೀಕನಿಂದ ಹಣ ವಸೂಲಿ (Fraud Case) ಮಾಡಿರುವ ಆರೋಪವೊಂದು ಕೇಳಿ ಬಂದಿದೆ. ಗುಜರಿ ಅಂಗಡಿ ಮಾಲೀಕ ಅಖ್ತಿರ್ ಅಲಿ ಮಂಡಲ್‌ ಎಂಬುವವರು ಈ ಸಂಬಂಧ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ಅಖ್ತರ್ ಅವರು ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ನಲ್ಲೂರಳ್ಳಿಯಲ್ಲಿ ಗುಜರಿ ಅಂಗಡಿ ಇಟ್ಟುಕೊಂಡಿದ್ದರು. ಕಳೆದ ಏಪ್ರಿಲ್ 17ರ ಮಧ್ಯಾಹ್ನ 12ಗಂಟೆಗೆ ಗುಜುರಿ ಬಳಿ ಪೊಲೀಸ್ ಸಿಬ್ಬಂದಿ, ಇನ್ಫಾರ್ಮರ್ ಎಸ್.ನಿವಾಸ್ ಎಂಬಾತನ ಜತೆಗೆ ಆಗಮಿಸಿದ್ದರು. ಹೀಗೆ ಬಂದವರೇ ನಾವು ಪೊಲೀಸರು ನೀವು ದಂಧೆ ನಡೆಸುತ್ತಿದ್ದೀರಾ? ಗಾಂಜಾ ಮಾರಾಟ ಮಾಡುತ್ತೀದ್ದೀರಾ ಎಂದು ಬೆದರಿಕೆ ಹಾಕಿದ್ದಾರೆ.

ಕೆಲಸಗಾರರ ಮೇಲೆ ಹಲ್ಲೆ ಮಾಡಿ ಅಖ್ತರ್ ಬಳಿ ಸುಮಾರು 2 ಲಕ್ಷ ರೂ. ಹಣವನ್ನು ಇನ್ಫಾರ್ಮರ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಮೊದಲು 20 ಸಾವಿರ ನಗದು ಪಡೆದುಕೊಂಡು ಬಳಿಕ ಬ್ಯಾಂಕ್ ಖಾತೆಯಿಂದ 80 ಸಾವಿರ ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಹೋಗುವಾಗ ಬೆದರಿಕೆ ಹಾಕಿ ಎಟಿಎಂ ಕಾರ್ಡ್ ಹಾಗೂ ಪಿನ್ ನಂಬರ್‌ ಪಡೆದುಕೊಂಡಿದ್ದಾರೆ. ಬಳಿಕ ಎಟಿಎಂನಿಂದ 50 ಸಾವಿರ ಹಣ ಡ್ರಾ ಮಾಡಿಕೊಂಡಿದ್ದಾರೆ.

ಮರುದಿನ ವಾಪಸ್‌ ಗುಜುರಿ ಅಂಗಡಿಗೆ ಬಂದಿದ್ದ ಆರೋಪಿಗಳು, ಎಟಿಎಂ ಕಾರ್ಡ್ ಕೊಟ್ಟು ಮತ್ತೆ 50 ಸಾವಿರ ಹಣ ಪಡೆದುಕೊಂಡು ಹೋಗಿದ್ದಾರೆ. ಮತ್ತೊಮ್ಮೆ 50 ಸಾವಿರ ರೂ. ಕೊಡಬೇಕು ಇಲ್ಲದಿದ್ದರೆ ಬೈಕ್ ತೆಗೆದುಕೊಂಡು ಹೋಗುವುದಾಗಿ ಬೆದರಿಕೆ ಹಾಕಿದ್ದಾರೆ. ಇವರ ಕಾಟ ತಾಳಲಾರದೆ ಅಖ್ತಿರ್‌ ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ನಿವಾಸ್ ಎಂಬಾತನನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಮೂವರು ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾಗಿ ವೈಟ್ ಫೀಲ್ಡ್ ಡಿಸಿಪಿ ಶಿವಕುಮಾರ್ ಗುಣಾರೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Road Accident : ಮಿಡ್‌ನೈಟ್‌ನಲ್ಲಿ ರಸ್ತೆ ಕಾಣದೆ ಡಿವೈಡರ್‌ಗೆ ಬೈಕ್‌ ಡಿಕ್ಕಿ; ಹಾರಿ ಬಿದ್ದ ಸವಾರ ಸ್ಥಳದಲ್ಲೇ ಸಾವು

Continue Reading

ಬೀದರ್‌

Lok Sabha Election 2024: ಪೋಸ್ಟರ್‌ ಮೂಲಕ ಸಚಿವ ಭಗವಂತ ಖೂಬಾ ಅವಹೇಳನ, ದೂರು

Lok Sabha Election 2024: ಇತ್ತೀಚಿಗೆ Viral Thoughts ಎನ್ನುವ ಫೇಸ್‌ಬುಕ್‌ ಪೇಜ್‌ನಲ್ಲಿ ಖೂಬಾ ಬಗ್ಗೆ ಪೋಸ್ಟ್‌ಗಳು ಹರಿದಾಡಿದ್ದವು. ಪೇಜ್‌ನಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಬಗ್ಗೆ ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಲಾಗಿತ್ತು. ʼವಾಂಟೆಡ್ʼ ಮತ್ತು ʼಗೂಂಡಾʼ ಎಂಬ ಅಸಭ್ಯ ಪದ ಬಳಕೆ ಮಾಡಲಾಗಿತ್ತು.

VISTARANEWS.COM


on

bhagavanth khuba poster lok sabha election 2024
Koo

ಬೀದರ್: ಲೋಕಸಭೆ ಚುನಾವಣೆ (Lok Sabha Election 2024) ಬೀದರ್‌ ಕ್ಷೇತ್ರ ಬಿಜೆಪಿ ಅಭ್ಯರ್ಥಿ (Bidar constituency BJP Candidate) ಹಾಗೂ ಕೇಂದ್ರ ಸಚಿವ (central minister) ಭಗವಂತ ಖೂಬಾ (Bhagavanth Khuba) ವಿರುದ್ಧ ಅವಹೇಳನಕಾರಿ ಪೋಸ್ಟ್ (Derogatory post) ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ. ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೂಕ್ತ ಕಾನೂನು ಕ್ರಮಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಇತ್ತೀಚಿಗೆ Viral Thoughts ಎನ್ನುವ ಫೇಸ್‌ಬುಕ್‌ ಪೇಜ್‌ನಲ್ಲಿ ಖೂಬಾ ಬಗ್ಗೆ ಪೋಸ್ಟ್‌ಗಳು ಹರಿದಾಡಿದ್ದವು. ಪೇಜ್‌ನಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಬಗ್ಗೆ ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಲಾಗಿತ್ತು. ʼವಾಂಟೆಡ್ʼ ಮತ್ತು ʼಗೂಂಡಾʼ ಎಂಬ ಅಸಭ್ಯ ಪದ ಬಳಕೆ ಮಾಡಲಾಗಿತ್ತು. ಇದರಿಂದ ಸಾಮಾಜಿಕ ಜಾಲತಾಣಗಳ ನಿಯಮ ಉಲ್ಲಂಘನೆ ಮಾಡಿದ್ದು, ಕ್ರಮ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಪೋಸ್ಟರ್‌ಗಳು ಅನಾಮಿಕವಾಗಿದ್ದು, ಇವುಗಳಲ್ಲಿ “ಖೂಬಾ ಸೋಲಿಸಿ ಬೀದರ್‌ ಉಳಿಸಿ” ಎಂದು ಕರೆ ಕೊಡಲಾಗಿದೆ. ʼಅಹಂಕಾರಿ ಖೂಬಾʼ ಎಂದು ಕರೆಯಲಾಗಿದೆ. ಸಚಿವರಾಗಿ ದುರ್ವರ್ತನೆ ತೋರಿದ್ದಾರೆ ಹೊರತು ಕ್ಷೇತ್ರಕ್ಕಾಗಿ ಯಾವುದೇ ಕೆಲಸ ಮಾಡಿಲ್ಲ ಎಂದು ಬರೆಯಲಾಗಿದೆ. ಹಲವರು ಪೋಸ್ಟರ್‌ನ ಭಾಷೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

“ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷಿಸಬೇಕು” ಎಂದ ಅನ್ವರ್‌ ವಿರುದ್ಧ ಆಕ್ರೋಶ

ತಿರುವನಂತಪುರಂ: ಲೋಕಸಭಾ ಚುನಾವಣೆಯ (Lok Sabha Election 2024) ಕಾವು ಹೆಚ್ಚಾಗುತ್ತಿದ್ದಂತೆ ವೈಯಕ್ತಿಕ ಟೀಕೆಯೂ ಹದ್ದು ಮೀರುತ್ತಿದೆ. ಇದೀಗ ಕೇರಳದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಸಿಪಿಎಂ ಬೆಂಬಲಿತ ಸ್ವತಂತ್ರ ಶಾಸಕ ಪಿ.ವಿ.ಅನ್ವರ್‌ (PV Anwar) ಆಡಿರುವ ಲೇವಡಿಯ ಮಾತು ಭಾರೀ ವಿವಾದ ಸೃಷ್ಟಿಸಿದೆ. ʼʼನೆಹರೂ ವಂಶಸ್ಥರಿಂದ ನಿರೀಕ್ಷಿಸುವ ಗುಣಮಟ್ಟವನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರದರ್ಶಿಸುತ್ತಿಲ್ಲ. ಹೀಗಾಗಿ ಅವರ ಡಿಎನ್‌ಎಯನ್ನು ಪರೀಕ್ಷಿಸಬೇಕುʼʼ ಎಂದು ಪಿ.ವಿ.ಅನ್ವರ್‌ ಹೇಳಿದ್ದಾರೆ.

ಪಾಲಕ್ಕಾಡ್‌ನಲ್ಲಿ ಸಿಪಿಐ(ಎಂ) ಆಯೋಜಿಸಿದ್ದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಪಿ.ವಿ.ಅನ್ವರ್, ”ರಾಹುಲ್‌ ಗಾಂಧಿ ಅವರು ಗಾಂಧಿ ಎಂಬ ಸರ್‌ನೇಮ್‌ ಅನ್ನೂ ಬಳಸಲಾಗದ ನಾಲ್ಕನೇ ದರ್ಜೆಯ ವ್ಯಕ್ತಿ. ನೆಹರೂ ವಂಶದ ವ್ಯಕ್ತಿಗೆ ಈ ರೀತಿ ಮಾತನಾಡಲು ಸಾಧ್ಯವೇ? ಆ ವಿಚಾರದಲ್ಲಿ ನನಗೆ ಸಂಶಯವಿದೆʼʼ ಎಂದು ನಾಲಿಗೆ ಹರಿಯಬಿಟ್ಟಿದ್ದಾರೆ. “ನಾನು ರಾಹುಲ್ ಗಾಂಧಿ ಅವರ ಕ್ಷೇತ್ರವಾದ ವಯನಾಡ್‌ನ ಭಾಗವಾಗಿದ್ದೇನೆ. ನಾನು ಅವರನ್ನು ಗಾಂಧಿ ಎಂಬ ಉಪನಾಮದಿಂದ ಕರೆಯಲು ಸಾಧ್ಯವಿಲ್ಲ. ಅವರು ಗಾಂಧಿ ಉಪನಾಮದಿಂದ ಕರೆಯಲು ಅರ್ಹರಲ್ಲದ ನಾಗರಿಕನಾಗಿ ಮಾರ್ಪಟ್ಟಿದ್ದಾರೆ. ಇದನ್ನು ನಾನು ಹೇಳುತ್ತಿಲ್ಲ. ಕಳೆದ ಎರಡು ದಿನಗಳಿಂದ ಭಾರತದ ಜನರು ಇದನ್ನು ಹೇಳುತ್ತಿದ್ದಾರೆʼʼ ಎಂದು ನಿಲಂಬೂರು ಕ್ಷೇತ್ರದ ಶಾಸಕ ಅನ್ವರ್ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ರಾಹುಲ್‌ ಗಾಂಧಿ ಮತನಾಡಿ, ʼʼಪಿಣರಾಯಿ ವಿಜಯನ್ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದರೂ, ಕೇಂದ್ರ ಏಜೆನ್ಸಿಗಳು ಅವರನ್ನು ಏಕೆ ವಿಚಾರಣೆ ನಡೆಸುತ್ತಿಲ್ಲ?ʼʼ ಎಂದು ಪ್ರಶ್ನಿಸಿದ್ದರು. ಇದರಿಂದ ಕೆರಳಿದ ಅನ್ವರ್ ಈ ರೀತಿ ವೈಕ್ತಿಕ ತೇಜೋವಧೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನಿಂದ ಖಂಡನೆ

ಸದ್ಯ ಅನ್ವರ್‌ ಹೇಳಿಕೆ ಕೋಲಾಹಲ ಎಬ್ಬಿಸಿದೆ. ಅವರ ವಿರುದ್ಧ ಕಾಂಗ್ರೆಸ್‌ ಕೆಂಡಾಮಂಡಲವಾಗಿದ್ದು, ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಸಿಪಿಎಂ ಹಾಗೂ ಬೆಂಬಲಿತ ನಾಯಕರು ರಾಹುಲ್ ಗಾಂಧಿ ಅವರ ವಿರುದ್ಧ ವೈಯಕ್ತಿಕ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಜನರು ಉತ್ತರ ನೀಡಲಿದ್ದಾರೆ ಎಂದಿದೆ.

ರಾಜ್ಯ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಎಂ.ಎಂ.ಹಸನ್ ಮಾತನಾಡಿ, ʼʼಅನ್ವರ್‌ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕುʼʼ ಎಂದು ಆಗ್ರಹಿಸಿದ್ದಾರೆ. “ಪಿ.ವಿ.ಅನ್ವರ್ ಗೋಡ್ಸೆಯ ಹೊಸ ಅವತಾರ. ಗಾಂಧೀಜಿಯನ್ನು ಕೊಂದ ಗೋಡ್ಸೆಯ ಗುಂಡುಗಳಿಗಿಂತ ಅನ್ವರ್ ಅವರ ಮಾತುಗಳು ಮಾರಕವಾಗಿವೆ. ಅನ್ವರ್ ಅವರು ಜನಪ್ರತಿನಿಧಿಯೊಬ್ಬರು ಆಡಬಾರದ ಮಾತುಗಳನ್ನು ಆಡಿದ್ದಾರೆʼʼ ಎಂದು ಹೇಳಿದ್ದಾರೆ.

ʼʼರಾಹುಲ್ ಗಾಂಧಿಯನ್ನು ನಿರಂತರವಾಗಿ ಟೀಕಿಸುತ್ತಿರುವ ಪಿಣರಾಯಿ ವಿಜಯನ್ ಅವರು ಇದೀಗ ಪಿ.ವಿ.ಅನ್ವರ್ ಅವರನ್ನು ಕಾಂಗ್ರೆಸ್ ವಿರುದ್ಧ ಮಾತನಾಡುವಂತೆ ತಯಾರು ಮಾಡಿದ್ದಾರೆ. ಅನ್ವರ್ ಮುಖ್ಯಮಂತ್ರಿಯ ಆತ್ಮಹತ್ಯಾ ದಳವಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಹಸನ್ ಟೀಕಿಸಿದ್ದಾರೆ.

ಇತ್ತ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿದ್ದಾರೆ. ರಾಹುಲ್ ಗಾಂಧಿ ಗಂಭೀರ ರಾಜಕಾರಣಿ ಅಲ್ಲ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಶರಿಯಾ ಕಾನೂನು ಜಾರಿ; ಯೋಗಿ ಆದಿತ್ಯನಾಥ್ ವಾಗ್ದಾಳಿ

Continue Reading
Advertisement
Lok Sabha Election 2024 ID raid in Bengaluru South Lok Sabha constituency 21.15 crore Gold ornaments seized in 2 days
ಕರ್ನಾಟಕ9 mins ago

Lok Sabha Election 2024: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಐಡಿ ರೇಡ್;‌ 2 ದಿನದಲ್ಲಿ 21.15 ಕೋಟಿ ರೂ. ಚಿನ್ನಾಭರಣ ವಶ!

Train Ticket Cancellation
ದೇಶ18 mins ago

Train Ticket Cancellation: ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ಆರ್‌ಎಸಿ ಟಿಕೆಟ್‌ ರದ್ದು ಪಡಿಸಿದರೆ ಇನ್ನು ಮುಂದೆ ಕೇವಲ 60 ರೂ. ಕಡಿತ

sam pitroda narendra modi
ಪ್ರಮುಖ ಸುದ್ದಿ24 mins ago

Wealth Redistribution: ಸಂಪತ್ತು ಮರು ಹಂಚಿಕೆ ವಿವಾದದ ಬೆಂಕಿಗೆ ತುಪ್ಪ ಸುರಿದ ಸ್ಯಾಮ್ ಪಿತ್ರೊಡಾ; ಕಾಂಗ್ರೆಸ್‌ಗೆ ಫಜೀತಿ!

Rajkumar Birth Anniversary Dodmane family visited Rajkumar Samadhi
ಸಿನಿಮಾ49 mins ago

Rajkumar Birth Anniversary: ರಾಜ್ ಕುಮಾರ್ ಸಮಾಧಿಗೆ ಆಗಮಿಸಿ ಪೂಜೆ ಸಲ್ಲಿಸಿದ ದೊಡ್ಮನೆ ಕುಟುಂಬ

Zero Shadow Day
ವಿಜ್ಞಾನ1 hour ago

Zero Shadow Day: ಇಂದು ಬೆಂಗಳೂರಿನಲ್ಲಿ ನೆರಳೇ ಮೂಡುವುದಿಲ್ಲ; ಅದ್ಯಾಕೆ? ಏನಿದು ʼಶೂನ್ಯ ನೆರಳಿನ ದಿನʼ ?

Karan Johar receives Director of the Year award from Vice President of India
ಬಾಲಿವುಡ್1 hour ago

Karan Johar: ಉಪ ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸಿದ ಕರಣ್ ಜೋಹರ್

VVPAT Verification
ದೇಶ2 hours ago

VVPAT Verification: ಇವಿಯಂ-ವಿವಿಪ್ಯಾಟ್‌ ತಾಳೆ ಪ್ರಕರಣ; ಇಂದು ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು

board exam tension viral news
ವೈರಲ್ ನ್ಯೂಸ್2 hours ago

Board Exam Result: 93.5% ಫಲಿತಾಂಶ ನೋಡಿ ಮೂರ್ಛೆ ಹೋದ ವಿದ್ಯಾರ್ಥಿ! ಐಸಿಯುಗೆ ದಾಖಲು

Kannada New Movie Dadasaheb Phalke Film Festival Kenda Movie
ಸ್ಯಾಂಡಲ್ ವುಡ್3 hours ago

Kannada New Movie:ʻದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್’ಗೆ ಆಯ್ಕೆಯಾದ ಕನ್ನಡದ ʻಕೆಂಡʼ ಸಿನಿಮಾ!

Naga Chaitanya and Sobhita Dhulipala holidaying together
ಟಾಲಿವುಡ್3 hours ago

Naga Chaitanya: ವಕೇಶನ್‌ ಮೂಡ್‌ನಲ್ಲಿ ಸಮಂತಾ ಮಾಜಿ ಪತಿ! ಶೋಭಿತಾ ಜತೆ ಕಾಡಿನಲ್ಲಿ ಸುತ್ತಾಟ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ7 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು2 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌