Site icon Vistara News

Modi In Karnataka | ಯುಪಿಎ ಸರ್ಕಾರದಿಂದಾಗಿ ನೀರಾವರಿ ಯೋಜನೆ ಕರ್ನಾಟಕದ ಕೈತಪ್ಪಿತ್ತು: ಸಿಎಂ ಬೊಮ್ಮಾಯಿ ಆರೋಪ

modi-in-karnataka-big irrigation project left out of karnataka because of upa govt says cm bommai

ಯಾದಗಿರಿ: ಎಐಬಿಪಿ (Accelerated Irrigation Benefit Program) ಯೋಜನೆಯ ನಿಬಂಧನೆಯನ್ನು ಬದಲಾಯಿಸುವ ಮೂಲಕ ಕರ್ನಾಟಕಕ್ಕೆ ಲಭಿಸಬೇಕಿದ್ದ ನೀರಾವರಿ ಯೋಜನೆಯನ್ನು ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ತಪ್ಪಿಸಿತ್ತು ಎಂದು ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಯಾದಗಿರಿಯ ಕೋಡೆಕಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೂಲಕ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನಡೆಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜಾ ವೆಂಕಟಪ್ಪ ನಾಯಕ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿದ ನಾಡು. ಪ್ರಧಾನಿ ನರೇಂದ್ರ ಮೋದಿಯವರು, ಒಂದು ಹನಿ ನೀರಿಗೆ ಅತಿ ಹೆಚ್ಚು ಬೆಳೆ ಬೆಳೆಯಬೇಕು ಎಂಬ ಕನಸು ಕಂಡಿದ್ದರು. 2011ರಿಂದ ಬಿಜೆಪಿ ಸರ್ಕಾರದ ಈ ಯೋಜನೆ ಆರಂಭವಾಗಿತ್ತು. ಯುಪಿಎ ಸರ್ಕಾರ, AIBP ಕಾನೂನನ್ನು ಬದಲಾಯಿಸಿತು. ಆದ್ಧರಿಂದ ಕರ್ನಾಟಕಕ್ಕೆ ಈ ಯೋಜನೆ ಬರಲು ತಡವಾಯಿತು. 2015ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಎಐಬಿಪಿಯಲ್ಲಿ ಮತ್ತೆ ಕರ್ನಾಟಕವನ್ನು ಸೇರಿಸಿದ್ದರಿಂದ ಅನುಕೂಲವಾಯಿತು. ಇದೆಲ್ಲದರ ಶ್ರೇಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದರು.

ನಮ್ಮ ರಾಜ್ಯಕ್ಕೆ 1,011 ಕೋಟಿ ರೂ. ಹಣವನ್ನು ಕೇಂದ್ರದಿಂದ ನೀಡಲಾಗಿದೆ. 60:40 ಅನುಪಾತದಲ್ಲಿ ಈ ಹಣ ಬಿಡುಗಡೆ ಆಯಿತು. 4.5 ಲಕ್ಷವಿರುವ ಎನ್‌ಎಲ್‌ಬಿಸಿ ಯೋಜನೆಯ ಕೊನೆಯ ಭಾಗಕ್ಕೆ ನೀರು ಮುಟ್ಟುತ್ತಿರಲಿಲ್ಲ. ಈಗ ಎಲ್ಲ ಶಾಖಾ ಕಾಲುವೆಗಳಿಗೆ ನೀರು ಮುಟ್ಟಿಸುವ ಕೆಲಸ ಆಗುತ್ತಿದೆ. ಇದರಿಂದಾಗಿ ನಮ್ಮ ನಾಲೆಗಳಲ್ಲಿ ಶೇ.20 ಹೆಚ್ಚು ನೀರನ್ನು ಕೊಂಡೊಯ್ಯಲು ಸಾಧ್ಯವಾಗಿದೆ.

ಸ್ಕಾಡಾ ಯೋಜನೆಯ ಕಾರಣಕ್ಕೆ ನೀರಿನ ಉಳಿತಾಯವಾಗುತ್ತದೆ ಹಾಗೂ ಎಷ್ಟು ನೀರು ಹೋಗುತ್ತದೆ ಎಂಬ ಲೆಕ್ಕವೂ ಸಿಗುತ್ತದೆ. ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರಿಗೆ ನೀರು ಸಿಗುತ್ತದೆ. ಈ ಯೋಜನೆ ಏಷ್ಯಾದಲ್ಲೆ ಅತಿ ದೊಡ್ಡ ಸ್ಕಾಡಾ ಇರುವ ನಾರಾಯಣಪುರ ಎಡದಂಡೆ ಕಾಲುವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ನಾಡಿಗೆ ಪ್ರಧಾನಿ ಸಮರ್ಪಣೆ ಮಾಡಿದ್ದಾರೆ. ನೀರಿನ ನಿರ್ವಹಣೆ, ಜಲಜೀವನ್‌ ಮಿಷನ್‌ ಸೇರಿ ಅನೇಕ ಯೋಜನೆಗಳು ಕಾರ್ಯಗತವಾಗಿವೆ ಎಂದರು.

ನೀರಾವರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಈ ದೇಶದ ಬಡವರ ಕಲ್ಯಾಣಕ್ಕಾಗಿ, ದೀಣ ದಲಿತರ ಕಲ್ಯಾಣಕ್ಕಾಗಿ, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ, ಎಲ್ಲ ಸಮುದಾಯಗಳನ್ನೂ ಏಳಿಗೆ ಮಾಡುವ ರೀತಿಯಲ್ಲಿ ಅನೇಕ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ರೂಪಿಸಿದ್ದಾರೆ. ಭ್ರಷ್ಟಾಚಾರ ಮುಕ್ತವಾದ ಆಡಳಿತವನ್ನು ನೀಡುತ್ತಿದ್ದಾರೆ ಎಂದರು.

ಇದನ್ನೂ ಓದಿ | Modi In Karnataka | ನನ್ನನ್ನು ಕಂಡರೆ ನರೇಂದ್ರ ಮೋದಿಗೆ ಭಯ ಎಂದ ಮಾಜಿ ಸಿಎಂ ಸಿದ್ದರಾಮಯ್ಯ!

Exit mobile version