Modi In Karnataka | ಯುಪಿಎ ಸರ್ಕಾರದಿಂದಾಗಿ ನೀರಾವರಿ ಯೋಜನೆ ಕರ್ನಾಟಕದ ಕೈತಪ್ಪಿತ್ತು: ಸಿಎಂ ಬೊಮ್ಮಾಯಿ ಆರೋಪ Vistara News

ಪ್ರಮುಖ ಸುದ್ದಿ

Modi In Karnataka | ಯುಪಿಎ ಸರ್ಕಾರದಿಂದಾಗಿ ನೀರಾವರಿ ಯೋಜನೆ ಕರ್ನಾಟಕದ ಕೈತಪ್ಪಿತ್ತು: ಸಿಎಂ ಬೊಮ್ಮಾಯಿ ಆರೋಪ

ವಿಶೇಷವಾಗಿ ನೀರಾವರಿ ಯೋಜನೆಗೆ ಕೇಂದ್ರದ ಮೋದಿ ಸರ್ಕಾರ ಬಹಳಷ್ಟು ಸಹಕಾರ ನೀಡಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಶ್ಲಾಘಿಸಿದರು.

VISTARANEWS.COM


on

modi-in-karnataka-big irrigation project left out of karnataka because of upa govt says cm bommai
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಯಾದಗಿರಿ: ಎಐಬಿಪಿ (Accelerated Irrigation Benefit Program) ಯೋಜನೆಯ ನಿಬಂಧನೆಯನ್ನು ಬದಲಾಯಿಸುವ ಮೂಲಕ ಕರ್ನಾಟಕಕ್ಕೆ ಲಭಿಸಬೇಕಿದ್ದ ನೀರಾವರಿ ಯೋಜನೆಯನ್ನು ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ತಪ್ಪಿಸಿತ್ತು ಎಂದು ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಯಾದಗಿರಿಯ ಕೋಡೆಕಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೂಲಕ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನಡೆಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜಾ ವೆಂಕಟಪ್ಪ ನಾಯಕ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿದ ನಾಡು. ಪ್ರಧಾನಿ ನರೇಂದ್ರ ಮೋದಿಯವರು, ಒಂದು ಹನಿ ನೀರಿಗೆ ಅತಿ ಹೆಚ್ಚು ಬೆಳೆ ಬೆಳೆಯಬೇಕು ಎಂಬ ಕನಸು ಕಂಡಿದ್ದರು. 2011ರಿಂದ ಬಿಜೆಪಿ ಸರ್ಕಾರದ ಈ ಯೋಜನೆ ಆರಂಭವಾಗಿತ್ತು. ಯುಪಿಎ ಸರ್ಕಾರ, AIBP ಕಾನೂನನ್ನು ಬದಲಾಯಿಸಿತು. ಆದ್ಧರಿಂದ ಕರ್ನಾಟಕಕ್ಕೆ ಈ ಯೋಜನೆ ಬರಲು ತಡವಾಯಿತು. 2015ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಎಐಬಿಪಿಯಲ್ಲಿ ಮತ್ತೆ ಕರ್ನಾಟಕವನ್ನು ಸೇರಿಸಿದ್ದರಿಂದ ಅನುಕೂಲವಾಯಿತು. ಇದೆಲ್ಲದರ ಶ್ರೇಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದರು.

ನಮ್ಮ ರಾಜ್ಯಕ್ಕೆ 1,011 ಕೋಟಿ ರೂ. ಹಣವನ್ನು ಕೇಂದ್ರದಿಂದ ನೀಡಲಾಗಿದೆ. 60:40 ಅನುಪಾತದಲ್ಲಿ ಈ ಹಣ ಬಿಡುಗಡೆ ಆಯಿತು. 4.5 ಲಕ್ಷವಿರುವ ಎನ್‌ಎಲ್‌ಬಿಸಿ ಯೋಜನೆಯ ಕೊನೆಯ ಭಾಗಕ್ಕೆ ನೀರು ಮುಟ್ಟುತ್ತಿರಲಿಲ್ಲ. ಈಗ ಎಲ್ಲ ಶಾಖಾ ಕಾಲುವೆಗಳಿಗೆ ನೀರು ಮುಟ್ಟಿಸುವ ಕೆಲಸ ಆಗುತ್ತಿದೆ. ಇದರಿಂದಾಗಿ ನಮ್ಮ ನಾಲೆಗಳಲ್ಲಿ ಶೇ.20 ಹೆಚ್ಚು ನೀರನ್ನು ಕೊಂಡೊಯ್ಯಲು ಸಾಧ್ಯವಾಗಿದೆ.

ಸ್ಕಾಡಾ ಯೋಜನೆಯ ಕಾರಣಕ್ಕೆ ನೀರಿನ ಉಳಿತಾಯವಾಗುತ್ತದೆ ಹಾಗೂ ಎಷ್ಟು ನೀರು ಹೋಗುತ್ತದೆ ಎಂಬ ಲೆಕ್ಕವೂ ಸಿಗುತ್ತದೆ. ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರಿಗೆ ನೀರು ಸಿಗುತ್ತದೆ. ಈ ಯೋಜನೆ ಏಷ್ಯಾದಲ್ಲೆ ಅತಿ ದೊಡ್ಡ ಸ್ಕಾಡಾ ಇರುವ ನಾರಾಯಣಪುರ ಎಡದಂಡೆ ಕಾಲುವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ನಾಡಿಗೆ ಪ್ರಧಾನಿ ಸಮರ್ಪಣೆ ಮಾಡಿದ್ದಾರೆ. ನೀರಿನ ನಿರ್ವಹಣೆ, ಜಲಜೀವನ್‌ ಮಿಷನ್‌ ಸೇರಿ ಅನೇಕ ಯೋಜನೆಗಳು ಕಾರ್ಯಗತವಾಗಿವೆ ಎಂದರು.

ನೀರಾವರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಈ ದೇಶದ ಬಡವರ ಕಲ್ಯಾಣಕ್ಕಾಗಿ, ದೀಣ ದಲಿತರ ಕಲ್ಯಾಣಕ್ಕಾಗಿ, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ, ಎಲ್ಲ ಸಮುದಾಯಗಳನ್ನೂ ಏಳಿಗೆ ಮಾಡುವ ರೀತಿಯಲ್ಲಿ ಅನೇಕ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ರೂಪಿಸಿದ್ದಾರೆ. ಭ್ರಷ್ಟಾಚಾರ ಮುಕ್ತವಾದ ಆಡಳಿತವನ್ನು ನೀಡುತ್ತಿದ್ದಾರೆ ಎಂದರು.

ಇದನ್ನೂ ಓದಿ | Modi In Karnataka | ನನ್ನನ್ನು ಕಂಡರೆ ನರೇಂದ್ರ ಮೋದಿಗೆ ಭಯ ಎಂದ ಮಾಜಿ ಸಿಎಂ ಸಿದ್ದರಾಮಯ್ಯ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Aadhaar update: ಆಧಾರ್‌ ಕಾರ್ಡ್‌ ಉಚಿತ ಅಪ್ಡೇಟ್‌ಗೆ 4 ದಿನ ಮಾತ್ರವೇ ಅವಕಾಶ! ಹೀಗೆ ಮಾಡಿ ನವೀಕರಿಸಿ

Aadhaar update: ಈ ಡಿಸೆಂಬರ್ 14ರವರೆಗೆ ನೀವು ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಹೆಸರು, ವಿಳಾಸ ಮತ್ತು ಹುಟ್ಟಿದ ದಿನಾಂಕವನ್ನು ಉಚಿತವಾಗಿ ನವೀಕರಿಸಬಹುದಾಗಿದೆ. ಇನ್ನೂ ಅಪ್ಡೇಟ್‌ ಮಾಡಿಲ್ಲವಾದರೆ ಕೂಡಲೇ ಮಾಡಲು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಸೂಚಿಸಿದೆ. ಇದರ ನಂತರ, ನೀವು ಶುಲ್ಕ ಪಾವತಿಸಿ ಅಪ್ಡೇಟ್‌ ಮಾಡಿಕೊಳ್ಳಬೇಕು.

VISTARANEWS.COM


on

Aadhaar update
Koo

ಬೆಂಗಳೂರು: ನೀವೀಗ ನಿಮ್ಮ ಆಧಾರ್‌ ಕಾರ್ಡ್‌ನಲ್ಲಿ (Aadhaar Card) ತಮ್ಮ ವಿವರಗಳನ್ನು ಯಾವುದೇ ಶುಲ್ಕವಿಲ್ಲದೆ ನವೀಕರಿಸಬಹುದು (Aadhaar update for free). ಆದರೆ, ಈ ಸೌಲಭ್ಯ ಇನ್ನು ನಾಲ್ಕು ದಿನ ಮಾತ್ರವೇ ಅವಕಾಶ ಇದೆ. ಅಂದರೆ, ಡಿಸೆಂಬರ್‌ 14ರ ವರೆಗೆ ಉಚಿತ ಅಪ್ಡೇಟ್‌ಗೆ ಅವಕಾಶ ಕಲ್ಪಿಸಲಾಗಿದೆ.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆನ್‌ಲೈನ್ ಆಧಾರ್ ನವೀಕರಣಗಳಿಗಾಗಿ (online Aadhaar update) ಇಟ್ಟಿದ್ದ ರೂ. 50ರ ಸಾಮಾನ್ಯ ಶುಲ್ಕವನ್ನು ಡಿ.14ರವರೆಗೆ ಮನ್ನಾ ಮಾಡಿದೆ. ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಮುಂತಾದ ವಿವರಗಳನ್ನು ನವೀಕರಿಸಬಹುದು. ಇನ್ನೂ ಅಪ್ಡೇಟ್‌ ಮಾಡಿಲ್ಲವಾದರೆ ಕೂಡಲೇ ಮಾಡಲು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಸೂಚಿಸಿದೆ. ಇದರ ನಂತರ, ನೀವು ಶುಲ್ಕ ಪಾವತಿಸಿ ಅಪ್ಡೇಟ್‌ ಮಾಡಿಕೊಳ್ಳಬೇಕು.

ಆದರೆ ಭಾವಚಿತ್ರ, ಐರಿಸ್ ಅಥವಾ ಇತರ ಬಯೋಮೆಟ್ರಿಕ್ (Biometric details) ವಿವರಗಳನ್ನು ನವೀಕರಿಸಲು ಬಯಸಿದರೆ, ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕು ಮತ್ತು ಅಗತ್ಯ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಏಕೆಂದರೆ ಬಯೋಮೆಟ್ರಿಕ್ ಅಪ್‌ಡೇಟ್‌ಗಳಿಗೆ ಫಿಂಗರ್‌ಪ್ರಿಂಟ್‌ಗಳು, ಐರಿಸ್ ಮತ್ತು ಇತರ ಬಯೋಮೆಟ್ರಿಕ್ ಡೇಟಾ ಸ್ಕ್ಯಾನಿಂಗ್ ಅಗತ್ಯವಿದೆ. ಇದನ್ನು ದಾಖಲಾತಿ ಕೇಂದ್ರಗಳಲ್ಲಿ ಲಭ್ಯವಿರುವ ಬಯೋಮೆಟ್ರಿಕ್ ಸ್ಕ್ಯಾನಿಂಗ್ ಯಂತ್ರಗಳೊಂದಿಗೆ ಮಾತ್ರ ಮಾಡಬಹುದು. ಜತೆಗೆ ವಂಚನೆ ತಡೆಯಲು ಕೂಡ ಬಯೋಮೆಟ್ರಿಕ್ ಪರಿಶೀಲನೆ ಅಗತ್ಯವಿದೆ.

ಆಧಾರ್ ಏಕೆ ನವೀಕರಿಸಬೇಕು?

ಆಧಾರ್‌ನ ಆಡಳಿತ ಮಂಡಳಿ UIDAI, ಪ್ರಜೆಗಳು ತಮ್ಮ ಆಧಾರ್ ವಿವರಗಳನ್ನು ಪ್ರತಿ 10 ವರ್ಷಗಳಿಗೊಮ್ಮೆ ನವೀಕರಿಸುವುದನ್ನು ಕಡ್ಡಾಯಗೊಳಿಸಿದೆ. ಡೇಟಾಬೇಸ್‌ನಲ್ಲಿನ ಡೇಟಾ ನಿಖರವಾಗಿದೆ ಮತ್ತು ನವೀಕೃತವಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕಿದೆ.

ಮದುವೆ, ವಾಸಸ್ಥಾನ ಬದಲಾವಣೆ ಇತ್ಯಾದಿ ಜೀವನ ಘಟನೆಗಳಿಂದ ವ್ಯಕ್ತಿ ಹೆಸರು ಮತ್ತು ವಿಳಾಸದಂತಹ ಮೂಲಭೂತ ಜನಸಂಖ್ಯಾ ವಿವರಗಳನ್ನು ಬದಲಾಯಿಸಬೇಕಾಗಬಹುದು. ವಿಳಾಸ ಮತ್ತು ಮೊಬೈಲ್ ಸಂಖ್ಯೆ ಹೊಸ ಸ್ಥಳಗಳಿಗೆ ವಲಸೆ ಹೋದಾಗ ಬದಲಾಗಬಹುದು.

ಇದರ ಜೊತೆಗೆ ಮಕ್ಕಳ ಆಧಾರ್ ವಿವರಗಳನ್ನು ನವೀಕರಿಸಲು ಸರ್ಕಾರ ಈಗ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಈ ಮಾರ್ಗಸೂಚಿಗಳ ಪ್ರಕಾರ, ಮಗುವಿಗೆ 15 ವರ್ಷ ವಯಸ್ಸಾದಾಗ ನವೀಕರಣಕ್ಕಾಗಿ ಎಲ್ಲ ಬಯೋಮೆಟ್ರಿಕ್‌ಗಳನ್ನು ಒದಗಿಸಬೇಕು. ಇದು ಮಗುವಿನ ಆಧಾರ್ ಡೇಟಾ ನಿಖರವಾಗಿದೆ ಮತ್ತು ನವೀಕೃತವಾಗಿದೆ ಎಂದು ಖಚಿತಪಡಿಸಿಕೊಳ್ಳುತ್ತದೆ.

ಯಾಕೆ ಮುಖ್ಯ?

  • ವಂಚನೆ ಮತ್ತು ಆಧಾರ್ ದುರುಪಯೋಗವನ್ನು ತಡೆಗಟ್ಟಲು.
  • ಆಧಾರ್ ದೃಢೀಕರಣದ ಯಶಸ್ಸಿನ ಪ್ರಮಾಣವನ್ನು ಹೆಚ್ಚಿಸಲು.
  • ಸರ್ಕಾರವು ಒದಗಿಸುವ ಆಧಾರ್-ಸಂಬಂಧಿತ ಸೇವೆಗಳನ್ನು ಸುಧಾರಿಸಲು.

ಆನ್‌ಲೈನ್‌ನಲ್ಲಿ ಆಧಾರ್ ಅಪ್‌ಡೇಟ್‌ ಮಾಡುವುದು ಹೇಗೆ?

UIDAI ವೆಬ್‌ಸೈಟ್‌ಗೆ ಹೋಗಿ, ಅಲ್ಲಿ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಸೃಷ್ಟಿಸಿಕೊಳ್ಳಿ. ಲಾಗ್ ಇನ್ ಆಗಿ ಅಪ್‌ಡೇಟ್‌ ವಿನಂತಿ ಸಲ್ಲಿಸಿದರೆ, UIDAI ವಿನಂತಿಯನ್ನು ಪರಿಶೀಲಿಸುತ್ತದೆ ಮತ್ತು 15 ದಿನಗಳಲ್ಲಿ ಆಧಾರ್ ವಿವರಗಳನ್ನು ನವೀಕರಿಸುತ್ತದೆ.

ಇದನ್ನೂ ಓದಿ: Health Card: ಸರ್ಕಾರದ ಹೊಸ ಹೆಲ್ತ್‌ ಕಾರ್ಡ್‌; ದೇಶದ ಎಲ್ಲೆಡೆ ಸಿಗಲಿದೆ Treatment! ಏನಿದರ ವಿಶೇಷತೆ?

UIDAI ವೆಬ್‌ಸೈಟ್‌ಗೆ ಇಲ್ಲಿ ಕ್ಲಿಕ್‌ ಮಾಡಿ ಹೋಗಿ.

  • ಅಲ್ಲಿ My Aadhar ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಡ್ರಾಪ್-ಡೌನ್ ಮೆನುವಿನಿಂದ “Update Your Aadhaar” ಆಯ್ಕೆ ಮಾಡಿ.
  • `Update Aadhaar Details (Online)” ಪುಟದಲ್ಲಿ, “Proceed to Update Aadhaar” ಕ್ಲಿಕ್ ಮಾಡಿ.
  • ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಪರಿಶೀಲನೆ ಕೋಡ್ ಅನ್ನು ನಮೂದಿಸಿ. ನಂತರ “Send OTP” ಕ್ಲಿಕ್ ಮಾಡಿ.
  • ನೀವು ಸ್ವೀಕರಿಸಿದ OTP ಅನ್ನು ನಮೂದಿಸಿ ಮತ್ತು “Login” ಕ್ಲಿಕ್ ಮಾಡಿ.
  • ಮುಂದಿನ ಪುಟದಲ್ಲಿ, ನೀವು ನವೀಕರಿಸಲು ಬಯಸುವ ವಿವರಗಳನ್ನು ಆಯ್ಕೆ ಮಾಡಿ ಮತ್ತು ಹೊಸ ವಿವರಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
  • ಅಗತ್ಯ ಬದಲಾವಣೆಗಳನ್ನು ಮಾಡಿದ ನಂತರ, “Submit” ಕ್ಲಿಕ್ ಮಾಡಿ.
  • ಅಗತ್ಯವಿರುವ ಸ್ಕ್ಯಾನ್ ಮಾಡಿದ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ ಮತ್ತು “Submit Update Request” ಕ್ಲಿಕ್ ಮಾಡಿ.
  • ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ SMS ಮೂಲಕ ನವೀಕರಣ ವಿನಂತಿ ಸಂಖ್ಯೆ (URN) ಸ್ವೀಕರಿಸುತ್ತೀರಿ. ಟ್ರ್ಯಾಕಿಂಗ್‌ಗಾಗಿ ಈ URN ಅನ್ನು ಇರಿಸಿಕೊಳ್ಳಿ.
  • ನಿಮ್ಮ ನವೀಕರಣ ವಿನಂತಿಯ ಸ್ಥಿತಿಯನ್ನು ಪರಿಶೀಲಿಸಲು, myaadhaar.uidai.gov.in/ಗೆ ಭೇಟಿ ನೀಡಿ ಮತ್ತು “Check Enrolment & Update Status” ಕ್ಲಿಕ್ ಮಾಡಿ.
  • ನಿಮ್ಮ ನವೀಕರಣ ವಿನಂತಿಯ ಸ್ಥಿತಿಯನ್ನು ವೀಕ್ಷಿಸಲು ನಿಮ್ಮ URN ಸಂಖ್ಯೆ ಮತ್ತು ಕ್ಯಾಪ್ಚಾವನ್ನು ನಮೂದಿಸಿ.
Continue Reading

ದೇಶ

ತೆಲಂಗಾಣದಲ್ಲಿ ಎರಡು ಗ್ಯಾರಂಟಿಗಳಿಗೆ ಚಾಲನೆ ನೀಡಿದ ಸಿಎಂ ರೇವಂತ್ ರೆಡ್ಡಿ

VISTARANEWS.COM


on

CM Revanth Reddy launches two guarantee Schemes in Telangana
Koo

ಹೈದ್ರಾಬಾದ್: ತೆಲಂಗಾಣ ಮುಖ್ಯಮಂತ್ರಿಯಾಗುತ್ತಿದ್ದಂತೆ(Telangana Chief Minister), ಚುನಾವಣಾ ಪೂರ್ವ ಭರವಸೆ ನೀಡಿದ್ದ ಎಲ್ಲ ಆರೂ ಗ್ಯಾರಂಟಿಗಳ (Six Guarantee) ಯೋಜನೆ ಜಾರಿಗೆ ರೇವಂತ್ ರೆಡ್ಡಿ (CM Revanth Reddy) ಅವರು ಒಪ್ಪಿಗೆ ನೀಡಿದ್ದರು. ಆ ಪೈಕಿ , ಹೆಣ್ಣು ಮಕ್ಕಳಿಗೆ ಉಚಿತ ಬಸ್ ಸೇವೆ (Free Bus service for woman) ಮತ್ತು ಬಡವರಿಗೆ ಹತ್ತು ಲಕ್ಷ ರೂ.ವರೆಗೂ ವಿಮೆ (Health Insurance) ಒದಗಿಸುವ ಯೋಜನೆಗಳನ್ನು ಲಾಂಚ್ ಮಾಡದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರ ಜನ್ಮ ದಿನದಂದೆ ಈ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ.

ವಿಧಾನಸೌಧದ ಆವರಣದಲ್ಲಿ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ, ಹಲವು ಸಚಿವರು, ನೂತನ ವಿಧಾನಸಭೆಯಲ್ಲಿ ಹಂಗಾಮಿ ಸ್ಪೀಕರ್ ಆಗಿರುವ ಎಐಎಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿ ಹಾಗೂ ಇತರ ಗಣ್ಯರ ಸಮ್ಮುಖದಲ್ಲಿ ರೇವಂತ್ ರೆಡ್ಡಿ ಎರಡು ಯೋಜನೆಗಳಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು, ತೆಲಂಗಾಣ ರಾಜ್ಯ ರಚನೆಯ ಭರವಸೆಯನ್ನು ಸೋನಿಯಾ ಗಾಂಧಿ ಅವರು ಈಡೇರಿಸಿದ ರೀತಿಯಲ್ಲಿ, ಕಾಂಗ್ರೆಸ್ ಸರ್ಕಾರವು 100 ದಿನಗಳಲ್ಲಿ ಆರು ಚುನಾವಣಾ ‘ಗ್ಯಾರಂಟಿ’ಗಳನ್ನು ಜಾರಿಗೊಳಿಸುವ ಮೂಲಕ ತೆಲಂಗಾಣವನ್ನು ಜನರ ಕಲ್ಯಾಣ ಮತ್ತು ಅಭಿವೃದ್ಧಿಗೆ ಹೆಸರುವಾಸಿಯಾದ ರಾಜ್ಯವನ್ನಾಗಿ ಮಾಡಲು ಶ್ರಮಿಸುತ್ತದೆ ಎಂದು ಹೇಳಿದರು.

2009ರ ಡಿಸೆಂಬರ್ 9 ರಂದು ಆಗಿನ ಯುಪಿಎ ಸರ್ಕಾರ ತೆಲಂಗಾಣ ರಚನೆಯನ್ನು ಘೋಷಿಸಿದ್ದರಿಂದ ಡಿಸೆಂಬರ್ 9 ತೆಲಂಗಾಣಕ್ಕೆ ಹಬ್ಬದ ದಿನವಾಗಿದೆ ಎಂದು ಅವರು ಇದೇ ವೇಳೆ ಬಣ್ಣಿಸಿದರು. ಜನರ ಆಶೆಯಂತೆ ತೆಲಂಗಾಣ ರಾಜ್ಯವನ್ನು ಸಾಕಾರಗೊಳಿಸಿದವರು ಸೋನಿಯಾ ಗಾಂಧಿ ಎಂದು ಅವರು ಹೇಳಿದರು.

ರಾಜೀವ್ ಆರೋಗ್ಯ ಹೆಲ್ತ್ ಯೋಜನೆಯಡಿ ಬಡವರಿಗೆ ಹತ್ತು ಲಕ್ಷ ರೂ.ವರೆಗೂ ವಿಮೆ ದೊರೆಯಲಿದೆ. ಮಹಾಲಕ್ಷ್ಮೀ ಯೋಜನೆಯಡಿ ತೆಲಂಗಾಣ ರಾಜ್ಯ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ಈ ಸಂದರ್ಭದಲ್ಲಿ ರೇವಂತ್ ರೆಡ್ಡಿ ಅವರು ರಾಜ್ಯ ಸರ್ಕಾರದ ಪರವಾಗಿ ಬಾಕ್ಸರ್ ನಿಖತ್ ಜರೀನ್ ಅವರಿಗೆ ಎರಡು ಕೋಟಿ ರೂಪಾಯಿ ಚೆಕ್ ಅನ್ನು ಪ್ರೋತ್ಸಾಹಕವಾಗಿ ಹಸ್ತಾಂತರಿಸಿದರು. ನಿಖತ್ ಝರೀನ್ ಎರಡು ಕೋಟಿ ರೂ.ಗಳ ಪ್ರೋತ್ಸಾಹಧನಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ಗೆ ತಯಾರಿ ನಡೆಸಲು ಇದು ಸಹಾಯ ಮಾಡುತ್ತದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: ರೇವಂತ್ ರೆಡ್ಡಿ ಅಂದು ಎಬಿವಿಪಿ ನಾಯಕ; ಇಂದು ಕಾಂಗ್ರೆಸ್‌ನಿಂದ ತೆಲಂಗಾಣ ಸಿಎಂ!

Continue Reading

ಅಂಕಣ

ಸೈಬರ್‌ ಸೇಫ್ಟಿ ಅಂಕಣ: ‘ಡೀಪ್ ಫೇಕ್’ ತಂತ್ರಜ್ಞಾನದಿಂದ ಸೆಕ್ಸ್‌ಟಾರ್ಷನ್

ಡೀಪ್‌ಫೇಕ್ (Deep fake) ತಂತ್ರಜ್ಞಾನ ಸುಧಾರಿತ ಆಳವಾದ ಕಲಿಕೆಯ ತಂತ್ರಗಳನ್ನು ಬಳಸಿಕೊಂಡು ನಿಮ್ಮ ಆಡಿಯೋ, ವಿಡಿಯೋ ಮತ್ತು ಚಿತ್ರಗಳನ್ನು ತನಗೆ ಬೇಕಾದಂತೆ ವಿಕೃತವಾಗಿ (Sextortion) ಬದಲಿಸುತ್ತದೆ. ಹಾಗಾಗಿ ಈಗಲೇ ಸೋಶಿಯಲ್‌ ಮೀಡಿಯಾದಲ್ಲಿ (Social media) ನಿಮ್ಮ ಫೊಟೋ, ವಿಡಿಯೋ ಸರಿಯಾಗಿ ಭದ್ರ ಮಾಡಿಕೊಳ್ಳಿ.

VISTARANEWS.COM


on

sextortion
Koo
cyber safty logo

ಸಾಮಾಜಿಕ ಜಾಲತಾಣಗಳಲ್ಲಿ (social media) ಹಂಚಿಕೊಳ್ಳುವ ನಮ್ಮ ಫೋಟೊ, ವೀಡಿಯೊಗಳನ್ನು ಕ್ರಿಮಿನಲ್‌ಗಳು ವಿರೂಪಗೊಳಿಸಿ ದುರುಪಯೋಗಿಸುವ ಬಗ್ಗೆ ಕಳೆದೆರಡು ವಾರ ಓದಿರಬಹುದು. ಜೊತೆಗೆ ನೀವು ಹಂಚಿಕೊಳ್ಳುವುದನ್ನು ಯಾರೆಲ್ಲಾ ನೋಡಬಹುದು ಎಂದು ನಿಯಂತ್ರಿಸುವುದೂ ನಿಮ್ಮ ಕೈಯಲ್ಲಿಯೇ ಇರುವ ಬಗ್ಗೆಯೂ ತಿಳಿಸಿದ್ದೆ. ಹಾಗೆ ಎಲ್ಲರೂ ನಿಮ್ಮ ಫೇಸ್‌ಬುಕ್, ಇನ್ಸ್‌ಟಾಗ್ರಾಂ ಖಾತೆಗಳನ್ನು ಭದ್ರಗೊಳಿಸಿಕೊಂಡಿದ್ದೀರಾ? ನಿಮ್ಮ ಸಂತೋಷದ ಕ್ಷಣಗಳನ್ನು ನೆನಪಿಸಲು ಇರುವ ಫೋಟೊ ಮತ್ತು ವೀಡಿಯೊಗಳು ನಿಮಗೆ ದುಃಸ್ವಪ್ನವಾಗಿ ಕಾಡಬಾರದಲ್ವಾ?

ಈಗಂತೂ ತಂತ್ರಜ್ಞಾನದ ದಾಪುಗಾಲಿನ ಓಟದಿಂದಾಗಿ ಎಲ್ಲಾಕಡೆ ಅನುಕ್ಷಣವೂ ಹೊಸತನ. ನಾವು ವ್ಯವಹರಿಸುವ ರೀತಿಯಿರಬಹದು, ಸಂವಹಿಸುವ ವಿಧಾನವಿರಬಹುದು. ಎಲ್ಲಾ ಬದಲಾಗುತ್ತಲೇ ಇದೆ. ಬದಲಾವಣೆ ಜಗದ ನಿಯಮ. ಆದರೆ ಸೈಬರ್‌ ಲೋಕದಲ್ಲಂತೂ ಬದಲಾವಣೆಯೇ ನಿತ್ಯ, ನಿರಂತರ. ಹಾಗೆಯೇ ಸೈಬರ್ ಕ್ರೈಮ್‌ಗಳೂ (cyber crime) ದಿನದಿಂದ ದಿನಕ್ಕೆ ಹೆಚ್ಚಿನ ಮಜಲಿಗೆ ಹೋಗುತ್ತಿವೆ.

ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ, ಸೈಬರ್ ಅಪರಾಧಿಗಳು ಉಕ್ರೇನಿಯನ್ ಟೆಲಿವಿಷನ್ ಚಾನೆಲ್ ಅನ್ನು ಹ್ಯಾಕ್ ಮಾಡಿದರು ಮತ್ತು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಶರಣಾಗುವುದನ್ನು ತೋರಿಸಿದರು. ಡೀಪ್ ಫೇಕ್ (Deep fake) ತಂತ್ರಜ್ಞಾನವನ್ನು ಬಳಸಿಕೊಂಡು ನಕಲಿ ವಿಡಿಯೋವನ್ನು ರಚಿಸಲಾಗಿದೆ.

ಕೆಲವು ವರ್ಷಗಳ ಹಿಂದೆ, ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮನೋಜ್ ತಿವಾರಿ ಹರ್ಯಾನ್ವಿ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡುವ ಆಳವಾದ ನಕಲಿ ವೀಡಿಯೊವನ್ನು ರಚಿಸಲಾಗಿದೆ ಎಂದು ವರದಿಯಾಗಿದೆ. 2020ರಲ್ಲಿ ದೆಹಲಿಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುನ್ನ ಈ ವಿಡಿಯೋವನ್ನು ವಿವಿಧ ವಾಟ್ಸಾಪ್ ಗ್ರೂಪ್‌ಗಳ ಮೂಲಕ ಪ್ರಸಾರ ಮಾಡಲಾಗಿತ್ತು.

ಕಳೆದ ವಾರ ನೀವೂ ಗಮನಿಸಿರಬಹುದು. ವಿವಿಧ ಆಂಗ್ಲ ಭಾಷಾ ದಿನಪತ್ರಿಕೆಗಳಲ್ಲಿ ರಾರಾಜಿಸಿದ ಶೀರ್ಷಿಕೆ: ಉತ್ತರಪ್ರದೇಶದಲ್ಲಿ ಸೆಕ್ಸ್‌ಟಾರ್ಷನಿಸ್ಟ್‌ಗಳು (Sextortion) ನಿವೃತ್ತ ಐಪಿಎಸ್ ಅಧಿಕಾರಿಯ ಡೀಪ್‌ಫೇಕ್ ಅನ್ನು ಬಳಸಿ ಹಿರಿಯ ನಾಗರಿಕರನ್ನು ವಂಚಿಸಿದ ಪ್ರಕರಣ.

ಮೊದಲಿಗೆ ಈ ಸೆಕ್ಸ್‌ಟಾರ್ಷನಿಸ್ಟ್‌ಗಳೆಂದರೆ ಯಾರು ಅಂತ ತಿಳಿಯೋಣ. ಯಾರೊಬ್ಬರ ಖಾಸಗಿ ಲೈಂಗಿಕ ವಿಷಯವನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕುವ ಮೂಲಕ ಹಣವನ್ನು ಸುಲಿಗೆ ಮಾಡುವವರನ್ನು ಸೆಕ್ಸ್‌ಟಾರ್ಷನಿಸ್ಟ್‌ ಎನ್ನುತ್ತಾರೆ. ಈ ಅಪರಾಧಿಗಳ ಏಕಮಾತ್ರ ಗುರಿ ಸುಲಭವಾಗಿ “ಹಣ” ಮಾಡುವುದು. ಅವರು ನಿಮ್ಮ ಸಾಮಾಜಿಕ ಜೀವನವನ್ನೇ ಬುಡಮೇಲು ಮಾಡುವ ಬೆದರಿಕೆಗಳನ್ನು ಒಡ್ದಿದಾಗ ನೀವು ಅವರ ಎಲ್ಲಾ ಬೇಡಿಕೆಗಳನ್ನು ಒಪ್ಪಿ ಹಣ ಕೊಡುತ್ತೀರಿ. ಇದು ಕೂಡ ಒಂದು ರೀತಿಯ ಲೈಂಗಿಕ ದೌರ್ಜನ್ಯ. ಭೌತಿಕವಾಗಿಯಲ್ಲದಿದ್ದರೂ ಮಾನಸಿಕವಾಗಿ ನೀವು ದೌರ್ಜನ್ಯಕ್ಕೆ ಒಳಗಾದವರ ಹಾಗೆ ಕ್ಷೋಭೆಗೊಳಗಾಗುತ್ತೀರಿ.‌

ಒಮ್ಮೆ ನೀವು ಅವರಿಗೆ ಹೆದರಿ ಹಣ ಕೊಟ್ಟರೆ ಮುಗೀತು. ನಿಮ್ಮ ಮೈಗೆ ಹತ್ತಿ ಅಂಟಿಕೊಂಡ ಜಿಗಣೆಯಂತೆ ನಿಮ್ಮಿಂದ ಹಣ ಹೀರುತ್ತಲೇ ಇರುತ್ತಾರೆ. ಅವರ ಬಳಿ ಇರುವ ನಿಮ್ಮ ರಹಸ್ಯ ಬಯಲಾಗುವ ಭಯದಿಂದ ನೀವು ಅವರ ಬಲೆಯಿಂದ ಹೊರಬರಲಾರದೆ ನರಳುತ್ತೀರಿ.

ಈಗ ಪ್ರಕರಣಕ್ಕೆ ಬರೋಣ. ಬಲೆಗೆ ಬಿದ್ದ ಹಿರಿಯ ನಾಗರೀಕರ ಸೆಕ್ಸ್‌ನಲ್ಲಿ ನಿರತರಾಗಿರುವಂತಿರುವ ಚಿತ್ರವನ್ನು ಬಳಸಿ
ಪೊಲೀಸ್ ಅಧಿಕಾರಿಯಂತೆ ಮಾತಾಡಿ ಕಾನೂನು ಕ್ರಮಗಳ ಬಗ್ಗೆ ಹೆದರಿಸಿದ್ದಾರೆ. ಪಾಪ, ವೃದ್ಧರು ತಮ್ಮ ಚಿತ್ರವೇ ಅಲ್ಲದಿದ್ದರೂ ಮರ್ಯಾದೆಗೆ ಅಂಜಿದರು ಜೊತೆಗೆ ಮಾತಾಡಿದವರು ನಿಜವಾದ ಪೋಲೀಸ್ ಅಧಿಕಾರಿಯೇ ಎಂದು ನಂಬಿದರು. ಅವರು ಕೇಳಿದ ಹಣವನ್ನು ಹೇಳಿದ ಹಾಗೆ ಹಲವು ಬಾರಿ ಪಾವತಿಸಿದರು. ನಿಜವಾದ ಪೊಲೀಸ್ ಅಧಿಕಾರಿಗಳು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಡೀಪ್‌ಫೇಕ್ ತಂತ್ರಜ್ಞಾನದ ನೆರವಿನಿಂದ ಸೈಬರ್ ವಂಚನೆಯು ಅಪಾಯಕಾರಿ ಹೊಸ ಆಯಾಮವನ್ನು ಪಡೆದುಕೊಂಡಿರುವುದನ್ನು ಈ ಪ್ರಕರಣವು ಗುರುತಿಸುತ್ತದೆ. ಡೀಪ್‌ಫೇಕ್ ತಂತ್ರಜ್ಞಾನ ಸುಧಾರಿತ ಆಳವಾದ ಕಲಿಕೆಯ (advanced deep learning) ತಂತ್ರಗಳನ್ನು ಬಳಸಿಕೊಂಡು ಆಡಿಯೋ, ವಿಡಿಯೋ ಮತ್ತು ಚಿತ್ರಗಳನ್ನು ಬದಲಿಸುವ ಡಿಜಿಟಲ್ ಕುಶಲತೆಯನ್ನು ಸೂಚಿಸುತ್ತದೆ. ಅದಕ್ಕೆ ನಿಮ್ಮ ಫೊಟೋ, ವಿಡಿಯೋಗಳು ಯಾರು ನೋಡಬಹುದು ಎಂದು ಸರಿಯಾಗಿ ಭದ್ರ ಮಾಡಿಕೊಳ್ಳಿ ಅಂತ ಕಳೆದೆರಡು ವಾರಗಳಿಂದ ಹೇಳ್ತಿರೋದು.

Rashmika Mandanna Deepfake Video Goes Viral

ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಡೀಪ್‌ಫೇಕ್‌ಗಳು ಮತ್ತು ತಪ್ಪು ಮಾಹಿತಿಗಳ ಪ್ರಸರಣವನ್ನು ಎದುರಿಸಲು ನಿಯಮಾವಳಿಗಳನ್ನು ರೂಪಿಸುವ ಸರ್ಕಾರದ ಉದ್ದೇಶವನ್ನು ಘೋಷಿಸಿದ ಸಮಯದಲ್ಲಿ ಈ ಘಟನೆ ನಡೆದಿದೆ. ನಟಿ ರಶ್ಮಿಕಾ ಮಂದಣ್ಣ ಒಳಗೊಂಡ ಡೀಪ್‌ಫೇಕ್ ವೀಡಿಯೊ ಪ್ರಸಾರವಾದ ನಂತರ ಸಚಿವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಕಂಪನಿಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಫೋಟೊಗಳು, ಸೆಲ್ಫಿಗಳು, ಮತ್ತು ರೀಲ್ಸ್‌ಗಳ ನಿಯಂತ್ರಣ

ಕಳೆದ ತಿಂಗಳ ಆರಂಭದಲ್ಲಿ ಜಿ20 ರಾಷ್ಟ್ರಗಳ ವರ್ಚುವಲ್ ಶೃಂಗಸಭೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ‘ಕೃತಕ ಬುದ್ಧಿಮತ್ತೆಯ (Artificial Intelligence/AI) ಋಣಾತ್ಮಕ ಪರಿಣಾಮಗಳ’ ಬಗ್ಗೆ ಗಮನ ಸೆಳೆದರು ಮತ್ತು ಕೃತಕ ಬುದ್ಧಿಮತ್ತೆಯ ಸುರಕ್ಷಿತ ನಿಯೋಜನೆಯನ್ನು ಖಚಿತಪಡಿಸಿಕೊಳ್ಳಲು ಜಾಗತಿಕ ನಿಯಂತ್ರಣಗಳನ್ನು ಬೆಳೆಸುವ ಭಾರತದ ಬದ್ಧತೆಯ ಬಗ್ಗೆ ಹೇಳಿದ್ದರು. ಸಮಾಜವನ್ನು ಅದರ ಸಂಭಾವ್ಯ ಅಪಾಯಗಳಿಂದ ರಕ್ಷಿಸುವ ಜೊತೆಗೆ ಕೃತಕ ಬುದ್ಧಿಮತ್ತೆಯ ಉಪಯೋಗವೂ ಜನಸಾಮಾನ್ಯರಿಗೆ ದೊರಕಬೇಕು ಎಂದು ಹೇಳಿದ್ದರು.

ಇತ್ತೀಚೆಗೆ ನಮ್ಮ ಅಧ್ಯಕ್ಷೆ ದ್ರೌಪದಿ ಮುರ್ಮು ಅವರು ಕೂಡ ‘ಡೀಪ್ ಫೇಕ್ ಸಮಸ್ಯೆ’ ಯ ಬಗ್ಗೆ ಮಾತಾಡುತ್ತಾ ಪೊಲೀಸರು ತಮ್ಮ ತಂತ್ರಜ್ಞಾನವನ್ನು ನವೀಕರಿಸಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. ವಿಶ್ವದಾದ್ಯಂತ ಎಲ್ಲಾ ನಾಯಕರೂ ಹೊಸ ತಂತ್ರಜ್ಞಾನದಿಂದ ಶುರುವಾದ ತೊಂದರೆಯನ್ನು ಬಗೆಹರಿಸಲು ಒತ್ತು ಕೊಡ್ತಿದ್ದಾರೆ. ಆದರೆ ಯಾರೂ ಆ ತಂತ್ರಜ್ಞಾನವನ್ನೇ ಕೈಬಿಡುವ ಮಾತು ಆಡ್ತಿಲ್ಲ ಎನ್ನುವುದು ಮುಂದಿನ ದಾರಿಯ ಬಗ್ಗೆ ಬರವಸೆ ಮೂಡಿಸುತ್ತದೆ. ತಂತ್ರಜ್ಞಾನದ ದುರುಪಯೋಗವನ್ನು ನಿಯಂತ್ರಿಸಲು ಆಗಲಿಲ್ಲ ಆಂತ ಅದರ ಉಪಯೋಗವನ್ನೇ ನಿಲ್ಲಿಸುವುದು ನೆಗಡಿ ಜಾಸ್ತಿಯಾಯಿತು ಅಂತ ಮೂಗು ಕೊಯ್ಯಿದುಕೊಂಡಂತೆ ಅಲ್ಲವೇ?

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ನಿಮ್ಮ ಸೋಶಿಯಲ್‌ ಮೀಡಿಯಾದಿಂದಲೇ ನಿಮ್ಮ ಸುರಕ್ಷತೆಗೆ ಅಪಾಯ!

Continue Reading

ಕರ್ನಾಟಕ

Yuva Nidhi Scheme: ಜನವರಿಯಲ್ಲೇ ಯುವನಿಧಿ ಜಾರಿ; ಅರ್ಹತೆ ಯಾರಿಗಿದೆ? ಈ ದಾಖಲೆ ನಿಮ್ಮಲಿರಲಿ!

Yuva Nidhi Scheme: ರಾಜ್ಯದಲ್ಲಿ ಈಗಾಗಲೇ ಪ್ರಮುಖವಾಗಿ 4 ಗ್ಯಾರಂಟಿ ಯೋಜನೆಗಳಾದ ಗೃಹ ಜ್ಯೋತಿ, ಅನ್ನ ಭಾಗ್ಯ, ಶಕ್ತಿ, ಗೃಹಲಕ್ಷ್ಮಿ ಯೋಜನೆಗಳು ಜನರನ್ನು ತಲುಪಿವೆ. ಈಗ ಐದನೇ ಗ್ಯಾರಂಟಿಯಾಗಿರುವ ಯುವನಿಧಿ ಜನವರಿಯಲ್ಲಿ ಜಾರಿಗೆ ಬರಲಿದೆ ಎಂದು ಸಿಎಂ ಸಿದ್ದರಾಮಯ್ಯ ಈಚೆಗೆ ಹೇಳಿದ್ದರು. ಬರುವ ಜನವರಿಯಲ್ಲಿ ಯುವ ನಿಧಿ ಜಾರಿಯಾಗಲಿದ್ದು, ಫಲಾನುಭವಿಗಳು ಅಗತ್ಯ ದಾಖಲೆಗಳನ್ನು ಈಗಲೇ ಸಿದ್ಧಪಡಿಸಿಟ್ಟುಕೊಳ್ಳಬೇಕು ಎಂದು ಹೇಳಲಾಗಿದೆ.

VISTARANEWS.COM


on

Yuva Nidhi Scheme
Koo

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ (Congress Government) ಸಂಪೂರ್ಣ ಬಹುಮತಗಳೊಂದಿಗೆ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ. ಇದಕ್ಕೆ ಮುಖ್ಯ ಕಾರಣ ಗ್ಯಾರಂಟಿ (Congress Guarantee Scheme) ಯೋಜನೆಗಳಾಗಿವೆ. ಘೋಷಣೆ ಮಾಡಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಈಗಾಗಲೇ ನಾಲ್ಕನ್ನು ಅನುಷ್ಠಾನಕ್ಕೆ ತರಲಾಗಿದೆ. ಐದನೇ ಯೋಜನೆಯಾದ “ಯುವ ನಿಧಿ”ಗೆ (Yuva Nidhi Scheme) ಈಗ ಮುಹೂರ್ತ ನಿಗದಿಯಾಗಿದೆ. ಮುಂದಿನ 2024ರ ಜನವರಿಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಆದರೆ, ದಿನಾಂಕ ನಿಗದಿ ಮಾತ್ರ ಬಾಕಿ ಇದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಸಹ ಈಚೆಗೆ ಹೇಳಿದ್ದರು. ಆದರೆ, ಇದಕ್ಕೆ ಯಾರಿಗೆ ಅರ್ಹತೆ ಇದೆ? ಯಾವ ಅರ್ಹತೆ ಉಳ್ಳವರಿಗೆ ಎಷ್ಟು ಹಣ ಸಿಗುತ್ತದೆ? ಯಾವೆಲ್ಲ ದಾಖಲೆಗಳು ಬೇಕು ಎಂಬ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ನಮ್ಮ ಸರ್ಕಾರವು ನುಡಿದಂತೆ ನಡೆಯುತ್ತಿದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದ 143 ಕಾರ್ಯಕ್ರಮಗಳಲ್ಲಿ 83 ಯೋಜನೆಗಳು ಜಾರಿಯಾಗಿವೆ. ಪ್ರಮುಖವಾಗಿ 4 ಗ್ಯಾರಂಟಿ ಯೋಜನೆಗಳಾದ ಗೃಹ ಜ್ಯೋತಿ, ಅನ್ನ ಭಾಗ್ಯ, ಶಕ್ತಿ, ಗೃಹಲಕ್ಷ್ಮಿ ಯೋಜನೆಗಳು ಜನರನ್ನು ತಲುಪಿವೆ. ಈಗ ಐದನೇ ಗ್ಯಾರಂಟಿಯಾಗಿರುವ ಯುವನಿಧಿ ಜನವರಿಯಲ್ಲಿ ಜಾರಿಗೆ ಬರಲಿದೆ ಎಂದು ಸಿಎಂ ಸಿದ್ದರಾಮಯ್ಯ ಈಚೆಗೆ ಹೇಳಿದ್ದರು.

ಏನಿದು ಯುವನಿಧಿ ಯೋಜನೆ?

ಕರ್ನಾಟಕದ ನಿರುದ್ಯೋಗಿ ಯುವಕರ ಕಲ್ಯಾಣಕ್ಕಾಗಿ ಯುವ ನಿಧಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಈ ಯೋಜನೆಯಲ್ಲಿ ನಿರುದ್ಯೋಗಿ ಯುವಕರಿಗೆ ಮಾಸಿಕ ನಿರುದ್ಯೋಗ ಭತ್ಯೆಯನ್ನು ನೀಡಲಾಗುತ್ತದೆ. ಅಂದರೆ, ಇದು ಅವರಿಗೆ ಈ ಮೂಲಕ ಉದ್ಯೋಗವನ್ನು ಹುಡುಕಲು ನೆರವಾಗುವ ಉದ್ದೇಶವನ್ನು ಯುವ ನಿಧಿ ಯೋಜನೆ ಹೊಂದಿದೆ. ಈ ಸಮಯದಲ್ಲಿ ಸಾಕಷ್ಟು ಖರ್ಚುಗಳು ಇರುತ್ತವೆ. ಈ ನೆರವು ನೀಡುವುದರಿಂದ ನಿರುದ್ಯೋಗಿಗಳ ಕೆಲವೊಂದು ಖರ್ಚುಗಳು ನೀಗುತ್ತವೆ ಎಂಬ ಉದ್ದೇಶದಿಂದ ಜಾರಿಗೆ ತರುತ್ತಿರುವುದಾಗಿ ಕಾಂಗ್ರೆಸ್‌ ಹೇಳಿಕೊಂಡಿದೆ.

ಯುವ ನಿಧಿಯಿಂದ ಯಾರಿಗೆ ಎಷ್ಟು ಹಣ ಸಿಗುತ್ತದೆ?

  • ನಿರುದ್ಯೋಗಿ ಪದವೀಧರ ಯುವಜನತೆಗೆ ಪ್ರತಿ ತಿಂಗಳು 3,000 ರೂಪಾಯಿ ಮಾಸಿಕ ನಿರುದ್ಯೋಗ ಭತ್ಯೆ
  • ನಿರುದ್ಯೋಗಿ ಡಿಪ್ಲೊಮಾ ಹೊಂದಿರುವ ಯುವಕರಿಗೆ ಪ್ರತಿ ತಿಂಗಳು 1,500 ರೂಪಾಯಿ ಮಾಸಿಕ ನಿರುದ್ಯೋಗ ಭತ್ಯೆ

ಯಾರಿಗೆ ಸಿಗಲ್ಲ ಯುವ ನಿಧಿ?

  • 2022-2023ನೇ ಸಾಲಿಗಿಂತ ಮುಂಚಿತವಾಗಿ ತೇರ್ಗಡೆಯಾಗಿ ಉದ್ಯೋಗ ಹುಡುಕುತ್ತಿರುವವರಿಗೆ
  • ಪದವಿ ಅಥವಾ ಡಿಪ್ಲೊಮಾ ಉತ್ತೀರ್ಣರಾದ ನಂತರ ಉನ್ನತ ಶಿಕ್ಷಣಕ್ಕೆ ಸೇರ್ಪಡೆಯಾಗುವವರಿಗೆ
  • ಅಪ್ರೆಂಟಿಸ್ ವೇತನದ ಫಲಾನುಭವಿಗಳಿಗೆ
  • ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವವರಿಗೆ
  • ಸ್ವಯಂ ಉದ್ಯೋಗಿಗಳಾಗಿರುವವರಿಗೆ
  • ಸರ್ಕಾರದ ಇತರೆ ಆರ್ಥಿಕ ನೆರವು ಯೋಜನೆಯ ಫಲಾನುಭವಿ.

ಯುವ ನಿಧಿ ಯೋಜನೆ ಪಡೆಯಲು ಅರ್ಹತೆ ಏನು?

  • ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು.
  • ಪದವೀಧರರಾಗಿರಬೇಕು ಅಥವಾ ಡಿಪ್ಲೊಮಾ ಪದವಿಯನ್ನು ಹೊಂದಿರಬೇಕು
  • 2022-2023ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರಬೇಕು
  • ಪದವಿ ಅಥವಾ ಡಿಪ್ಲೊಮಾಗೆ ತೇರ್ಗಡೆಯಾದ ದಿನಾಂಕದ ನಂತರ ಕನಿಷ್ಠ 180 ದಿನಗಳವರೆಗೆ ನಿರುದ್ಯೋಗಿಯಾಗಿರಬೇಕು.

ಯುವ ನಿಧಿಗೆ ಬೇಕಾದ ದಾಖಲೆಗಳ ಪಟ್ಟಿ

  • ಕರ್ನಾಟಕದ ನಿವಾಸಿ ಎಂಬ ಪುರಾವೆ
  • ಆಧಾರ್ ಕಾರ್ಡ್
  • 10ನೇ ತರಗತಿ ಅಂಕಪಟ್ಟಿ
  • ದ್ವಿತೀಯ ಪಿಯುಸಿ ಅಂಕಪಟ್ಟಿ
  • ಪದವಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ
  • ಡಿಪ್ಲೊಮಾ ಪ್ರಮಾಣಪತ್ರ
  • ಜಾತಿ ಪ್ರಮಾಣ ಪತ್ರ (ಅನ್ವಯವಾದಲ್ಲಿ)
  • ಆದಾಯ ಪ್ರಮಾಣಪತ್ರ
  • ಮೊಬೈಲ್ ನಂಬರ್
  • ಬ್ಯಾಂಕ್ ಖಾತೆ ವಿವರಗಳು
  • ಸೆಲ್ಫ್ ಡಿಕ್ಲೆರೇಷನ್ ಪ್ರತಿ

ಇದನ್ನೂ ಓದಿ: Police Constable: ನಾಳೆ ಕಾನ್ಸ್‌ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆ; ಈ ದಾಖಲೆ ಮರೆಯಬೇಡಿ!

ಎಲ್ಲಿಯವರೆಗೆ ಸಿಗಲಿದೆ ಯುವ ನಿಧಿ ಭತ್ಯೆ?

ಯುವ ನಿಧಿ ಯೋಜನೆಯಡಿ ಒಮ್ಮೆ ಫಲಾನುಭವಿಗಳಾಗಿ ಆಯ್ಕೆಯಾಗುವ ಯುವ ಜನತೆಗೆ 2 ವರ್ಷಗಳ ಅವಧಿವರೆಗೆ ಭತ್ಯೆಯನ್ನು ಪಡೆದುಕೊಳ್ಳಬಹುದಾಗಿದೆ. ಹೀಗಾಗಿ ಪದವೀಧರರಿಗೆ ಮಾಸಿಕ 3 ಸಾವಿರ ರೂ. ಹಾಗೂ ಡಿಪ್ಲೊಮಾ ಪದವೀಧರರಿಗೆ ಮಾಸಿಕ 1500 ರೂಪಾಯಿ ಕೊಡಲಾಗುತ್ತದೆ. ಆದರೆ, ಎರಡು ವರ್ಷಗಳ ಅವಧಿಯೊಳಗೆ ಅವರಿಗೆ ಕೆಲಸ ಸಿಕ್ಕರೆ, ತತ್‌ ಕ್ಷಣವೇ ಈ ಭತ್ಯೆಯನ್ನು ನಿಲ್ಲಿಸಲಾಗುತ್ತದೆ. ಇನ್ನು ಫಲಾನುಭವಿಗೆ 2 ವರ್ಷಗಳ ನಂತರ ಯೋಜನೆಯ ಹಣವನ್ನು ನೀಡಲಾಗುವುದಿಲ್ಲ.

Continue Reading
Advertisement
Aadhaar update
ಕರ್ನಾಟಕ5 mins ago

Aadhaar update: ಆಧಾರ್‌ ಕಾರ್ಡ್‌ ಉಚಿತ ಅಪ್ಡೇಟ್‌ಗೆ 4 ದಿನ ಮಾತ್ರವೇ ಅವಕಾಶ! ಹೀಗೆ ಮಾಡಿ ನವೀಕರಿಸಿ

CM Revanth Reddy launches two guarantee Schemes in Telangana
ದೇಶ13 mins ago

ತೆಲಂಗಾಣದಲ್ಲಿ ಎರಡು ಗ್ಯಾರಂಟಿಗಳಿಗೆ ಚಾಲನೆ ನೀಡಿದ ಸಿಎಂ ರೇವಂತ್ ರೆಡ್ಡಿ

sextortion
ಅಂಕಣ28 mins ago

ಸೈಬರ್‌ ಸೇಫ್ಟಿ ಅಂಕಣ: ‘ಡೀಪ್ ಫೇಕ್’ ತಂತ್ರಜ್ಞಾನದಿಂದ ಸೆಕ್ಸ್‌ಟಾರ್ಷನ್

Yuva Nidhi Scheme
ಕರ್ನಾಟಕ28 mins ago

Yuva Nidhi Scheme: ಜನವರಿಯಲ್ಲೇ ಯುವನಿಧಿ ಜಾರಿ; ಅರ್ಹತೆ ಯಾರಿಗಿದೆ? ಈ ದಾಖಲೆ ನಿಮ್ಮಲಿರಲಿ!

kaivara tatayya
ಅಂಕಣ43 mins ago

ತಾತಯ್ಯ ತತ್ವಾಮೃತಂ: ಭಕ್ತಿತತ್ವದಿಂದ ಮೋಕ್ಷ ಸಾಧನೆ

Madhu Bangarappa Beluru Gopalakrishna
ಅಂಕಣ58 mins ago

ಮೊಗಸಾಲೆ ಅಂಕಣ: ಒಣಗಿದ ಜಿಲ್ಲೆಯಲ್ಲಿ ಜೋಗದ ಬದಲು ಕಚ್ಚಾಟದ ರೋಗ

Rain News
ಉಡುಪಿ58 mins ago

Karnataka Weather : ಮೈಸೂರು ಸೇರಿ 11 ಜಿಲ್ಲೆಗಳಿಗೆ ಮಳೆ ಅಲರ್ಟ್‌!

Vistara Editorial, Let the strengthening government schools
ಕರ್ನಾಟಕ1 hour ago

ವಿಸ್ತಾರ ಸಂಪಾದಕೀಯ: ಸರ್ಕಾರಿ ಶಾಲೆಗಳ ಬಲವರ್ಧನೆಗೆ ತಜ್ಞರ ಸೂತ್ರಗಳು ಜಾರಿಯಾಗಲಿ

Dina Bhavishya
ಪ್ರಮುಖ ಸುದ್ದಿ2 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

Sphoorti Salu
ಸುವಚನ2 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Karnataka bandh Majestic
ಕರ್ನಾಟಕ3 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

galipata neetu
ಕಿರುತೆರೆ1 week ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Dina Bhavishya
ಪ್ರಮುಖ ಸುದ್ದಿ2 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ1 day ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema1 day ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema1 day ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema2 days ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ2 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ3 days ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ3 days ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

ಟ್ರೆಂಡಿಂಗ್‌