ಮುಂಬೈ: ಸಹಕಾರಿ ಬ್ಯಾಂಕ್‌ನ ನಿವೃತ್ತ ಸಿಇಒನ ನಗ್ನ ಚಿತ್ರ (Blackmail) ಬಹಿರಂಗಪಡಿಸುವುದಾಗಿ ಬೆದರಿಕೆ ಒಡ್ಡಿ 4 ಕೋಟಿ ರೂ. ಸುಲಿಗೆ ಮಾಡಿದ ಮಹಿಳೆಯನ್ನು (Women Arrest) ಪೊಲೀಸರು ಬಂಧಿಸಿದ್ದಾರೆ. ಥಾಣೆಯ 45 ವರ್ಷದ ಮಹಿಳೆಯ ವಿರುದ್ಧ ಮುಂಬೈ ನಿವಾಸಿಯಾದ 66 ವರ್ಷದ ನಿವೃತ್ತ ಬ್ಯಾಂಕ್ ಸಿಇಒ ದೂರು ದಾಖಲಿಸಿದ್ದಾರೆ.
2016ರಲ್ಲಿ ತನ್ನ ಬ್ಯಾಂಕಿನ ವಡಾಲಾ ಶಾಖೆಗೆ ಭೇಟಿ ನೀಡಿದಾಗ ಆರೋಪಿ ಮಹಿಳೆಯನ್ನು ಸಂತ್ರಸ್ತ ಮೊದಲ ಬಾರಿಗೆ ಭೇಟಿಯಾಗಿದ್ದರು. ಆರ್ಥಿಕ ತೊಂದರೆಗಳಿಂದಾಗಿ ತನಗೆ ಸಾಲದ ಅಗತ್ಯವಿದೆ ಎಂದು ಮಹಿಳೆ ಆರಂಭದಲ್ಲಿ ಇವರ ಭೇಟಿ ಮಾಡಿದ್ದಳು. ಆದರೆ ಸಾಲಕ್ಕಾಗಿ ಸಲ್ಲಿಸಿದ ದಾಖಲೆಗಳು ಸರಿಯಾಗಿಲ್ಲದ ಕಾರಣ 2017ರಲ್ಲಿ ಥಾಣೆಯ ಕೊಪ್ರಿಯ ಆನಂದ್ ನಗರ ಪ್ರದೇಶದಲ್ಲಿರುವ ಆಕೆಯ ಮನೆಗೆ ಸಮೀಕ್ಷೆ ನಡೆಸಲು ಹೋಗಲಾಗಿತ್ತು. ಅಲ್ಲಿ ಮಹಿಳೆ ಈ ಅಧಿಕಾರಿ ಜತೆ ದೈಹಿಕ ಸಂಬಂಧ ಹೊಂದಲು ಒತ್ತಾಯಿಸಿದ್ದಳು. ನಂತರ ಮಾಸಿಕ 7300 ರೂ.ಗಳ ಇಎಂಐನೊಂದಿಗೆ 3 ಲಕ್ಷ ರೂ. ಸಾಲವನ್ನು ಮಂಜೂರು ಮಾಡಲಾಯಿತು.
ಆದರೆ ಒಂದು ತಿಂಗಳ ನಂತರ ಮಹಿಳೆ ಈ ಅಧಿಕಾರಿಯನ್ನು ಬ್ಲ್ಯಾಕ್ ಮೇಲ್ ಮಾಡಲು ಪ್ರಾರಂಭಿಸಿದಳು. 8 ಕೋಟಿ ರೂ. ಪಾವತಿಸದಿದ್ದರೆ ವಾಟ್ಸಾಪ್‌ನಲ್ಲಿ ಕಳುಹಿಸಿದ ನಗ್ನ ಪೋಟೊಗಳನ್ನು ಸಂತ್ರಸ್ತನ ಕುಟುಂಬ ಮತ್ತು ಸಹದ್ಯೋಗಿಗಳಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದಳು. ಆಕೆಯ ಒತ್ತಾಯಕ್ಕೆ ಮಣಿದ ನಿವೃತ್ತ ಸಿಇಒ 5 ಲಕ್ಷ ರೂ.ಗಳನ್ನು ಪಾವತಿಸಿದ್ದಾರೆ. 2017ರಿಂದ 2023ರ ನಡುವೆ ಒಟ್ಟು 4.39 ಕೋಟಿ ರೂಗಳನ್ನು 108 ಕಂತುಗಳಲ್ಲಿ ಪಾವತಿಸಿದ್ದು, ಈ ಹಣವನ್ನು ಫ್ಲ್ಯಾಟ್ ಮಾರಾಟ, ಪಿಎಫ್ ಹಣವನ್ನು ವಾಪಾಸು ಪಡೆಯುವ ಮೂಲಕ ಹಾಗೂ ವಿವಿಧ ಕಡೆ ಸಾಲ ಮಾಡಿ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: International Yoga Day: ಈ ರಾಜಕಾರಣಿಗಳ ಯೋಗಾಸನ ನೋಡಿ ನಕ್ಕು ಬಿಡಿ; ನಗುವುದೂ ಒಂದು ಯೋಗ!
ಇಷ್ಟು ಹಣ ಸಂತ್ರಸ್ತನಿಂದ ಸುಲಿಗೆ ಮಾಡಿದರೂ ಕೂಡ ಮಹಿಳೆ ಮತ್ತೆ ಹಣಕ್ಕಾಗಿ ಬೆದರಿಕೆ ಹಾಕಿದಾಗ ಮಹಿಳೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ಮಹಿಳೆಗೆ ಹಣ ನೀಡುವ ನೆಪದಲ್ಲಿ ಪೊಲೀಸರು ಆಕೆಯನ್ನು ಸೆರೆ ಹಿಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.