Site icon Vistara News

Hindu Girl Kidnaping: ಪಾಕ್‌ನಲ್ಲಿ ಹಿಂದೂ ಬಾಲಕಿಯ ಅಪಹರಿಸಿ ಇಸ್ಲಾಂಗೆ ಮತಾಂತರ, ಬಲವಂತದ ಮದುವೆ

Hindu Girl Kidnaping

ಪಾಕಿಸ್ತಾನ : ಪಾಕಿಸ್ತಾನದ ಕರಾಚಿ ಪ್ರದೇಶದಿಂದ ಅಪ್ರಾಪ್ತ ವಯಸ್ಸಿನ ಹಿಂದೂ ಹುಡುಗಿಯನ್ನು ಅಪಹರಿಸಿ ((Hindu Girl Kidnaping) ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿ ನಂತರ ಆಕೆಯನ್ನು ಬಲವಂತವಾಗಿ ಮದುವೆಯಾದ ಆಘಾತಕಾರಿ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. 16 ವರ್ಷದ ಹುಡುಗಿಯನ್ನು ಪಾಕಿಸ್ತಾನದ ಶಹದಾಬ್ಕೋಟ್ ಪಟ್ಟಣದ ನಿವಾಸಿ ಗುಲ್ ಹಸನ್ ಅವರ ಪುತ್ರ ಸಮೀರ್ ಅಲಿ ಎಂಬಾತ ಅಪಹರಿಸಿ ಮುಸ್ಲಿಂಧರ್ಮಕ್ಕೆ ಮತಾಂತರಿಸಿ ನಂತರ ಬಲವಂತವಾಗಿ ಮದುವೆಯಾದ ಎಂದು ಆರೋಪಿಸಲಾಗಿದೆ.

ಪಾಕಿಸ್ತಾನಿ ಕ್ರಿಶ್ಚಿಯನ್ ಕಾರ್ಯಕರ್ತ ಫರಾಜ್ ಪರ್ವೈಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಾರ್ವಜನಿಕವಾಗಿ ಅನಾವರಣಗೊಳಿಸಿದ್ದಾರೆ. ಅದರ ಪ್ರಕಾರ ಸಂಗೀತಾ ಎಂಬ ಬಾಲಕಿಯನ್ನು ಸಮೀರ್ ಅಲಿ ಅಪಹರಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿ ನಂತರ ಆಕೆಯನ್ನು ಬಲವಂತವಾಗಿ ಮದುವೆಯಾಗಿದ್ದಾನೆ. ಅಷ್ಟೇ ಅಲ್ಲದೇ ಮತಾಂತರದ ನಂತರ ಆಕೆಗೆ ಹಮೀದಾ ಎಂಬ ಹೊಸ ಹೆಸರನ್ನು ನೀಡಿದ್ದಾರೆ. ಆಕೆಗೆ 15 ವರ್ಷ ವಯಸ್ಸಾಗಿದ್ದರೂ ಕೂಡ ಆರೋಪಿ ಆಕೆಯ ದಾಖಲೆಗಳನ್ನು ಪೋರ್ಜರಿ ಮಾಡಿ ಆಕೆ 19 ವರ್ಷದ ವಯಸ್ಕಳು ಎಂದು ಬಿಂಬಿಸಿ ಆಕೆ ತನ್ನನ್ನು ಮದುವೆಯಾಗಲು ಸಿದ್ಧಳಿದ್ದಾಳೆ ಎಂಬುದಾಗಿ ನಿರೂಪಿಸಿದ್ದಾನೆ.

ಅದಕ್ಕಾಗಿ ಆರೋಪಿಯು ಹುಡುಗಿಗೆ ತಾನು ವಯಸ್ಕಳು ಹಾಗೂ ತನ್ನ ಇಚ್ಛೆಯಂತೆ ಪ್ರೀತಿಯಿಂದ ಆರೋಪಿಯನ್ನು ಮದುವೆಯಾಗುತ್ತಿರುವೆ ಎಂದು ಅಫಿಡವಿಟ್‌ಗೆ ಸಹಿ ಹಾಕುವಂತೆ ಒತ್ತಾಯಿಸಿದ್ದಾನೆ. ಮತ್ತು ಆರೋಪಿಯ ವಿರುದ್ಧ ಯಾರಾದರೂ ಪೊಲೀಸರಿಗೆ ದೂರು ನೀಡಿದರೆ ಸಂತ್ರಸ್ತೆ ಇಚ್ಛೆಯಂತೆ ಮದುವೆಯಾಗುತ್ತಿರುವುದು ಎಂದು ತೋರಿಸಲು ಈ ತಯಾರಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಪಾಕಿಸ್ತಾನದಲ್ಲಿ ಹಿಂದೂ ಹುಡುಗಿಯನ್ನು ಅಪಹರಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿದ್ದು ಇದೇ ಮೊದಲಲ್ಲ. ಇತ್ತೀಚೆಗೆ ಜೂನ್ 2ರಂದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 14 ವರ್ಷದ ಹಿಂದೂ ಹುಡುಗಿಯನ್ನು ಗನ್ ತೋರಿಸಿ ಹೆದರಿಸಿ ಅಪಹರಣ ಮಾಡಿ ಬಲವಂತವಾಗಿ ಮತಾಂತರಿಸಿ ಮುಸ್ಲಿಂ ಯುವಕನ ಜೊತೆ ಮದುವೆ ಮಾಡಿಸಿದ್ದರು. ಈ ಬಗ್ಗೆ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಆಕ್ರೋಶ ವ್ಯಕ್ತವಾದ ಕಾರಣ ಪೊಲೀಸರು ಆಕೆಯನ್ನು ಪೋಷಕರ ಬಳಿ ಮರಳಿಸಿದ್ದಾರೆ. ಹಾಗೇ ತನಗಾದ ಅನ್ಯಾಯದ ಬಗ್ಗೆ ಸಂತ್ರಸ್ತೆ ಕೋರ್ಟ್‌ನಲ್ಲಿ ತಿಳಿಸಿದರೂ ನ್ಯಾಯಾಧೀಶರು ಆಕೆಗೆ ಹೆತ್ತವರೊಡನೆ ಕಳುಹಿಸಲು ನಿರಾಕರಿಸಿದರು ಎನ್ನಲಾಗಿದೆ.

ಇದನ್ನೂ ಓದಿ: Terror attack : ಉಗ್ರರ ದಾಳಿ; ತನ್ನ ಪ್ರಾಣ ತ್ಯಾಗ ಮಾಡಿ ಪ್ರಯಾಣಿಕರ ಜೀವ ಉಳಿಸಿದ ಬಸ್‌ ಚಾಲಕ

ಇಷ್ಟೆಲ್ಲಾ ದೌರ್ಜನ್ಯಗಳು ಪಾಕಿಸ್ತಾನದಲ್ಲಿ ಹಿಂದೂ ಹುಡುಗಿಯರ ಮೇಲೆ ಆಗುವುದನ್ನು ಕಂಡು ವಿಶ್ವಸಂಸ್ಥೆಯು ಖಂಡಿಸಿದೆ. ಮುಸ್ಲಿಂರು ಹಿಂದೂಗಳ ಮೇಲೆ ದೌರ್ಜನ್ಯ ಎಸಗುವುದನ್ನು ಕಂಡು ನಿರಾಶೆ ವ್ಯಕ್ತಪಡಿಸಿದೆ. ಬಲವಂತದ ವಿವಾಹ ಮತ್ತು ಧಾರ್ಮಿಕ ಮತಾಂತರಗಳಿಂದಾಗಿ ಪಾಕಿಸ್ತಾನವನ್ನು ಟೀಕಿಸಿದೆ. ಹಾಗೇ ಇಂತಹ ಪ್ರಕ್ರಿಯೆಗಳು ಇನ್ನು ಮುಂದೆ ನಡೆಯಬಾರದೆಂದು ವಿಶ್ವಸಂಸ್ಥೆ ಪಾಕಿಸ್ತಾನಕ್ಕೆ ಕರೆ ನೀಡಿದೆ. ಹಾಗೇ ಬಲವಂತದ ಮದುವೆ ಮತ್ತು ಅಪಹರಣದಿಂದ ರಕ್ಷಿಸುವ ಕಾನೂನುಗಳ ಜಾರಿಯನ್ನು ಬಲಪಡಿಸಲು ಮತ್ತು ದೇಶದ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಬದ್ಧತೆಗಳನ್ನು ಪೂರೈಸಲು ವಿಶ್ವಸಂಸ್ಥೆ ತಿಳಿಸಿದೆ.

Exit mobile version