Site icon Vistara News

IIT Bombay: ಹಿಂದೂ ದೇವರ ಅವಹೇಳನಕಾರಿ ನಾಟಕ; ಐಐಟಿ ವಿದ್ಯಾರ್ಥಿಗಳಿಗೆ ದಂಡ

IIT Bombay

ಮುಂಬೈ : ರಾಮ ಮತ್ತು ಸೀತೆ ಹಿಂದೂ(Hindu)ಗಳ ಆರಾಧ್ಯ ದೇವರು. ಹಾಗಾಗಿ ಈ ದೇವರ ಹೆಸರಿಗೆ ಅವಮಾನ ಮಾಡಿದರೆ ಯಾರೂ ಸುಮ್ಮನೆ ಇರುವುದಿಲ್ಲ. ಆದರೆ ಇದೀಗ ಐಐಟಿ ಬಾಂಬೆಯಲ್ಲಿ (IIT Bombay) ಹಿಂದೂ ದೇವರಿಗೆ ಅವಹೇಳನ ಮಾಡುವಂತಹ ನಾಟಕವಾಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ (Student) ದಂಡ ವಿಧಿಸಲಾಗಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ಬಾಂಬೆಯ ಬಯಲು ರಂಗಮಂದಿರದಲ್ಲಿ ಈ ವರ್ಷ ಮಾರ್ಚ್ 31ರಂದು ನಡೆದ ಇನ್‌ಸ್ಟಿಟ್ಯೂಟ್‌ನ ಪರ್ಫಾರ್ಮಿಂಗ್ ಆರ್ಟ್ಸ್ ಫೆಸ್ಟಿವಲ್‌ನಲ್ಲಿ “ರಾಹೋವನ್” ಶೀರ್ಷಿಕೆಯ ನಾಟಕದಲ್ಲಿ ವಿದ್ಯಾರ್ಥಿಗಳು ರಾಮಾಯಣದ ಕಥಾ ಹಂದರವನ್ನು ಹೊಂದಿರುವ ನಾಟಕವಾಡಿದ್ದರು. ಇದರಲ್ಲಿ ಹಿಂದೂ ಧರ್ಮಕ್ಕೆ ಅಗೌರವ ತೋರಿದಲ್ಲದೇ ರಾಮ ಮತ್ತು ಸೀತೆಯನ್ನು ಅವಹೇಳನ ಮಾಡಿದ್ದರು.

ಈ ನಾಟಕವನ್ನು ವಿರೋಧಿಸಿ ಕಾಲೇಜಿನ ಒಂದು ವಿಭಾಗ ಪ್ರತಿಭಟನೆ ಮಾಡಿತ್ತು. ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಎಕ್ಸ್‌ನಲ್ಲಿನ ‘ಐಐಟಿ ಬಿ ಫಾರ್ ಭಾರತ್’ ಹ್ಯಾಂಡಲ್‌ನಲ್ಲಿ ಈ ನಾಟಕವನ್ನು ಖಂಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಐಐಟಿ ವಿದ್ಯಾರ್ಥಿಯೊಬ್ಬನಿಗೆ 1.2 ಲಕ್ಷ ರೂ. ದಂಡ ವಿಧಿಸಿದೆ. ಇತರ ಏಳು ವಿದ್ಯಾರ್ಥಿಗಳಿಗೆ ತಲಾ 40,000 ರೂ. ದಂಡ ವಿಧಿಸಲಾಗಿದೆ.

ಇದನ್ನೂ ಓದಿ: Murder Case: ಅಶ್ಲೀಲ ವಿಡಿಯೊ ಚಟ; ಮಗಳನ್ನೇ ಲೈಂಗಿಕಕ್ರಿಯೆಗೆ ಒತ್ತಾಯಿಸಿ ಕೊಂದ ಪಾಪಿ ತಂದೆ

ಅಲ್ಲದೇ ನಾಟಕಕ್ಕೆ ಸಂಬಂಧಿಸಿದ ದೂರುಗಳ ಪರಿಹಾರಕ್ಕೆ ಶಿಸ್ತು ಸಭೆ ಕರೆದ ಐಐಟಿ ಅಲ್ಲಿನ ಚರ್ಚೆಗಳ ಆಧಾರದ ಮೇಲೆ ಶಿಕ್ಷಾರ್ಹ ಕ್ರಮಗಳನ್ನು ಶಿಫಾರಸು ಮಾಡಿದೆ. ಅದರಂತೆ ಜುಲೈ 20, 2024ರಂದು ವಿದ್ಯಾರ್ಥಿ ವ್ಯವಹಾರ ಡೀನ್ ಕಚೇರಿ ಯಲ್ಲಿ ರೂ. 1.2ಲಕ್ಷ ದಂಡವನ್ನು ಪಾವತಿಸಬೇಕಾಗಿ ಹೇಳಿದೆ. ಮತ್ತು ಸಂಸ್ಥೆಯ ಜಿಮ್ಖಾನಾ ಪ್ರಶಸ್ತಿಗಳಿಂದ ಯಾವುದೇ ಮಾನ್ಯತೆ ಪಡೆಯದಂತೆ ನಿರ್ಬಂಧ ಹೇರಿದರೆ ಕಿರಿಯ ಏಳು ವಿದ್ಯಾರ್ಥಿಗಳಿಗೆ 40,000 ದಂಡದ ಜೊತೆಗೆ ಹಾಸ್ಟೆಲ್ ಸೌಲಭ್ಯದಿಂದ ಅಮಾನತುಗೊಳಿಸಲಾಗಿದೆ. ಒಂದು ವೇಳೆ ದಂಡವನ್ನು ತಪ್ಪಿಸಿದರೆ ಮತ್ತಷ್ಟು ನಿರ್ಬಂಧಕ್ಕೆ ಒಳಪಡಿಸುವುದಾಗಿ ತಿಳಿಸಿದೆ.

Exit mobile version