ಮುಂಬೈ : ಅಂಬಾನಿ ಮನೆತನದ ಕುಡಿ ಅನಂತ್ ಅಂಬಾನಿಯ ವಿವಾಹವು ಜುಲೈ 12ರಂದು ರಾಧಿಕಾ ಮರ್ಚೆಂಟ್ ಅವರ ಜೊತೆ ಮುಂಬೈನಲ್ಲಿ ನಡೆಯಲಿದೆ. ವಿವಾಹಕ್ಕೂ ಮೊದಲು ಅಂಬಾನಿ ದಂಪತಿ ಹಲವಾರು ಸಮಾರಂಭಗಳನ್ನು ಏರ್ಪಡಿಸಿದ್ದರು, ವಿವಾಹ ಪೂರ್ವ ಸಮಾರಂಭಗಳಾಗಿ ಭೋಜನಕ್ಕೂಟ, ಸಂಗೀತ ಸಮಾರಂಭ, ಸಾಮೂಹಿಕ ವಿವಾಹ ಹೀಗೆ ಹಲವರು ಕಾರ್ಯಕ್ರಮಗಳು ನಡೆಸಿದ್ದರು. ಶ್ರೀಮಂತ ಮನೆತನದವರಾದರೂ ಕೂಡ ದೇವರ ಮೇಲೆ ಅಪಾರ ಭಕ್ತಿಯುಳ್ಳ ಈ ಕುಟುಂಬ ಇದೀಗ ಅನಂತ್ ಅಂಬಾನಿ ಮದುವೆಗೂ ಮುನ್ನ ತಮ್ಮ ಮುಂಬೈ ನಿವಾಸದಲ್ಲಿ ವಿಶೇಷ ಪೂಜೆಯನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಪಾಪರಾಜಿಗಳನ್ನು (ಸುದ್ದಿ ಮತ್ತು ಫೋಟೊಗಳಿಗಾಗಿ ಕಾದು ನಿಂತವರು) ಕೈಮುಗಿದು ಮಾತನಾಡಿಸಿದ ನೀತಾ ಅಂಬಾನಿ (Nita Ambani )ಅವರ ಸೌಜನ್ಯ ಹಲವರ ಮನಗೆದ್ದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಂಬಾನಿ ದಂಪತಿ ತಮ್ಮ ಮುಂಬೈ ನಿವಾಸದಲ್ಲಿ ಶಿವಶಕ್ತಿ ಪೂಜೆಯನ್ನು ಆಯೋಜಿಸಿದೆ. ಕುಟುಂಬ ಸದಸ್ಯರು ತಮ್ಮ ಪೂಜೆಯಲ್ಲಿ ಹಲವಾರು ತಾರೆಯರನ್ನು ಆಹ್ವಾನಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಅನೇಕ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಾಗಾಗಿ ವರನ ತಾಯಿ ನೀತಾ ಅಂಬಾನಿ ಹಲವಾರು ಕೆಲಸಗಳ ನಡುವೆಯೂ ಕೆಲವು ನಿಮಿಷ ಬಿಡುವು ಮಾಡಿಕೊಂಡು ಪಾಪರಾಜಿಗಳಿ ಆಸನದ ವ್ಯವಸ್ಥೆಯನ್ನು ಪರೀಕ್ಷಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಇದಕ್ಕೆ ಸಂಬಂಧಪಟ್ಟ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ, ಇದರಲ್ಲಿ ಮುಂಬೈನಲ್ಲಿ ಮಳೆಯ ಮಧ್ಯೆ ಮದುವೆಯ ಸ್ಥಳದಲ್ಲಿ ಪಾಪಾರಾಜಿಗಳನ್ನು ಆರಾಮವಾಗಿ ಇರಿಸಲಾಗಿದೆಯೇ ಎಂದು ಅವರ ಬಳಿ ಕೇಳುತ್ತಿರುವುದು ಕಂಡುಬಂದಿದೆ.
ವಿವಾಹಪೂರ್ವ ಸಮಾರಂಭದ ಹೊರಗೆ ಮೀಸಲಿಟ್ಟ ಸ್ಥಳದಲ್ಲಿ ಕುಳಿತ ಪಾಪರಾಜಿಗಳ ಬಳಿ ಬಂದ ನೀತಾ ಅಂಬಾನಿಯವರು “ನಿಮಗೆ ಆರಾಮದಾಯಕವಾಗಿದೆಯೇ? ನಾನು ನಿಮ್ಮೆಲ್ಲರಿಗೂ ಪ್ರಸಾದವನ್ನು ಕಳುಹಿಸಲಿದ್ದೇನೆ” ಎಂದು ಹಿಂದಿಯಲ್ಲಿ ಕೇಳಿದರು. ಇದಕ್ಕೆ ಪಾಪರಾಜಿಗಳು ಅವರು ಹೌದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:60ರಲ್ಲೂ ಬಳ್ಳಿಯಂತೆ ಬಳುಕುವ ನೀತಾ ಅಂಬಾನಿ ಫಿಟ್‌ನೆಸ್ ಸಿಕ್ರೆಟ್ ಹೀಗಿದೆ!
ಅನಂತ್ ಅಂಬಾನಿ ಮದುವೆ ಜುಲೈ 12ರಂದು ನಡೆಯಲಿರುವ ಕಾರಣ ಈಗಾಗಲೇ ಕುಟುಂಬ ಸದಸ್ಯರೆಲ್ಲರೂ ಅಂಬಾನಿ ನಿವಾಸಕ್ಕೆ ಆಗಮಿಸಿದ್ದಾರೆ. ಹಾಗೇ ಶ್ಲೋಕಾ ಮೆಹ್ತಾ ಅಂಬಾನಿ ಅವರ ತಾಯಿ ಮೋನಾ ಮೆಹ್ತಾ ಮತ್ತು ಆನಂದ್ ಪಿರಮಾಲ್ ಅವರ ತಾಯಿ ಸ್ವಾತಿ ಪಿರಮಾಲ್ ಮೆಹಂದಿ ಸಮಾರಂಭಕ್ಕೆ ಆಗಮಿಸಿದ್ದರು ಎನ್ನಲಾಗಿದೆ.