ವಾರಣಾಸಿ: ಮುಕೇಶ್ ಅಂಬಾನಿ ಮನೆಯಲ್ಲಿ ಈಗ ಮದುವೆಯ ಸಂಭ್ರಮ ಮನೆಮಾಡಿದೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಈಗಾಗಲೇ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇವರ ಪ್ರೀ ವೆಡ್ಡಿಂಗ್ ಶೂಟ್‌ಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಜೋಡಿಯ ಮದುವೆ ತಯಾರಿ ಕೂಡ ಜೋರಾಗಿ ನಡೆಯುತ್ತಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಕ್ಕೂ ಮೊದಲು ನೀತಾ ಅಂಬಾನಿ (Nita Ambani) ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಸೋಮವಾರ ವಾರಣಾಸಿಯಲ್ಲಿ ರಿಲಯನ್ಸ್ ಫೌಂಡೇಶನ್ ಅಧ್ಯಕ್ಷ ಮತ್ತು ಬಿಲಿಯನೇರ್ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ವಿವಾಹಕ್ಕೂ ಮುನ್ನ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ನೀತಾ ಅಂಬಾನಿ ಪವಿತ್ರ ನಗರದ ಸ್ಥಳೀಯ ಚಾಟ್ ಅಂಗಡಿಗೆ ಭೇಟಿ ನೀಡಿ ಸ್ಥಳೀಯ ಭಕ್ಷ್ಯಗಳನ್ನು ರುಚಿ ನೋಡಿದರು. ಹಾಗೂ ಅಲ್ಲಿನ ಸಿಬ್ಬಂದಿಗಳ ಜೊತೆ ಖುಷಿಯಿಂದ ಮಾತನಾಡಿದರು.
ಈ ಸಂದರ್ಭದಲ್ಲಿ ಅವರು ಮಗ ಅನಂತ್ ಅಂಬಾನಿ ಮತ್ತು ಸೊಸೆ ರಾಧಿಕಾ ಮರ್ಚೆಂಟ್ ಅವರ ವಿವಾಹ ಆಮಂತ್ರಣವನ್ನು ಶಿವನ ಪಾದಗಳಿಗೆ ಅರ್ಪಿಸಿ ಪೂಜೆ ಸಲ್ಲಿಸಿದರು. ತಮ್ಮ ಕುಟುಂಬದ ಮೇಲೆ ಶ್ರೀ ದೇವರ ಆಶೀರ್ವಾದವಿರಲಿ ಎಂದು ಬೇಡಿಕೊಂಡರು.
#WATCH | Varanasi, Uttar Pradesh: Founder and Chairperson of Reliance Foundation Nita Ambani visits a chaat shop and interacts with locals pic.twitter.com/1QIY4Ha0xs
— ANI (@ANI) June 24, 2024
ಇನ್ನು ಉತ್ತರ ಪ್ರದೇಶದ ವಾರಣಾಸಿ ನಗರದ ಚಾಟ್ ಅಂಗಡಿಯಲ್ಲಿ ನೀತಾ ಅಂಬಾನಿ ಸ್ಥಳೀಯ ಅಂಗಡಿಯವರೊಂದಿಗೆ ಮಾತುಕತೆ ನಡೆಸಿ, ತಮ್ಮಿಷ್ಟದ ಭಕ್ಷ್ಯಗಳನ್ನು ಸವಿದಿದ್ದಾರೆ. ಅವರಿಷ್ಟದ ಆಲೂ ಚಾಟ್ ಅನ್ನು ಬಹಳ ಖುಷಿಯಿಂದ ಎಲ್ಲರ ಜೊತೆ ಕುಳಿತು ಸವಿದಿದ್ದಾರೆ.
ಈ ಸಂದರ್ಭದಲ್ಲಿ ಪತಿ ಮುಕೇಶ್ ಅವರನ್ನು ನೆನಪಿಸಿಕೊಂಡ ನೀತಾ, “ಮುಕೇಶ್ ಇದನ್ನು ಖಂಡಿತಾ ಇಷ್ಟಪಡುತ್ತಿದ್ದರು’ ಎಂದಿದ್ದಾರೆ. ಮುಕೇಶ್ ಸ್ವತಃ ಚಾಟ್ ಪ್ರಿಯರಾಗಿದ್ದು ಮುಂಬಯಿಯ ಸ್ವಾತಿ ಸ್ನಾಕ್ಸ್ ಮಳಿಗೆಯಿಂದ ಕನಿಷ್ಠ ವಾರಕ್ಕೊಮ್ಮೆ ವೈವಿಧ್ಯಮಯ ತಿನಿಸುಗಳನ್ನು ಆರ್ಡರ್ ಮಾಡುತ್ತಿರುತ್ತಾರೆ.
ಇದನ್ನೂ ಓದಿ: ವೃದ್ಧ ರೋಗಿಯ ಮೇಲೆ ದರ್ಪ ತೋರಿದ ಆಸ್ಪತ್ರೆ ಸಿಬ್ಬಂದಿ; ಆಘಾತಕಾರಿ ವಿಡಿಯೊ
ಡಿಸೈನರ್ ಮನಿಷ್ ಮಲ್ಹೋತ್ರಾ ಈ ಸಂದರ್ಭದಲ್ಲಿ ನೀತಾ ಜೊತೆಗಿದ್ದರು. ಆ ಬಳಿಕ ಗಂಗಾ ನದಿ ತಟದಲ್ಲಿ ನಡೆದ ಗಂಗಾರತಿಯ ಸೊಬಗನ್ನೂ ಕಣ್ತುಂಬಿಕೊಂಡರು. ಇನ್ನು ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಮದುವೆ ಜುಲೈ 12ರಂದು ನಡೆಯಲಿದೆ.