Site icon Vistara News

Shravan 2024: ಶ್ರಾವಣ ಮಾಸದಲ್ಲಿ ಯಾವ ಹಬ್ಬ, ಯಾವ ದಿನ? ಈ ತಿಂಗಳ ಮಹತ್ವ ಏನು?

Shravan 2024


ಹಿಂದೂ ಕ್ಯಾಲೆಂಡರ್‌ನ ಪ್ರಕಾರ ಶ್ರಾವಣ ಮಾಸವು ಮಾಸಗಳಲ್ಲಿ (shravan 2024) ಐದನೇಯದಾಗಿದೆ. ಶ್ರವಣ ನಕ್ಷತ್ರ ದಿನದಂದು ಈ ಮಾಸ ಆರಂಭವಾಗುವುದರಿಂದ ಇದನ್ನು ಶ್ರಾವಣ ಮಾಸ (Shravan Masa) ಎಂದು ಕರೆಯುತ್ತಾರೆ. ಈ ಮಾಸ ಹಿಂದೂಗಳಿಗೆ ಬಹಳ ಪವಿತ್ರವಾದ ಹಾಗೂ ವಿಶೇಷವಾದ ಮಾಸವಾಗಿದೆ. ಯಾಕೆಂದರೆ ಈ ಮಾಸದಲ್ಲಿ ಜನರು ಹೆಚ್ಚಾಗಿ ಶಿವನ ಆರಾಧನೆ ಮಾಡುತ್ತಾರೆ. ಜೊತೆಗೆ ಲಕ್ಷ್ಮಿ,, ಗೌರಿಯ ಪೂಜೆ ಮಾಡಲಾಗುತ್ತದೆ. ಹಾಗೇ ಈ ಮಾಸದಲ್ಲಿ ಹಲವು ಹಬ್ಬ ಹರಿದಿನಗಳನ್ನು, ವ್ರತ ಉಪವಾಸಗಳನ್ನು ಜನರು ಆಚರಿಸುತ್ತಾರೆ. ಹಾಗಾಗಿ ಈ ಮಾಸದಲ್ಲಿ ಹಬ್ಬಗಳು ಸಾಲು ಸಾಲಾಗಿ ಬರುತ್ತಿರುತ್ತದೆ. ಅಲ್ಲದೇ ಶ್ರಾವಣ ಮಾಸ ಮಹಿಳೆಯರಿಗೆ ಬಹಳ ಪ್ರಿಯವಾದ ಮಾಸ. ಯಾಕೆಂದರೆ ಮಹಿಳೆಯರಿಗೆ ದೇವರ ಪೂಜೆ ಮಾಡಲು ಇದು ಬಹಳ ಶ್ರೇಷ್ಠವಾದ ಮಾಸವಾಗಿದೆ. ಮತ್ತು ಈ ಮಾಸದಲ್ಲಿ ಮಾಡಿದ ಪೂಜೆಗಳಿಗೆ ಬಹಳ ಬೇಗ ಫಲ ದೊರೆಯುತ್ತದೆಯಂತೆ.

ಶ್ರಾವಣ ಮಾಸ ಶುರು ಯಾವಾಗ?

ಆಷಾಢ ಮಾಸ ಮುಗಿದ ನಂತರ ಅಂದರೆ ಭೀಮನ ಅಮಾವಾಸ್ಯೆ ನಂತರ ಶ್ರಾವಣ ಮಾಸ ಪ್ರಾರಂಭವಾಗುತ್ತದೆ. ಅಂದರೆ ಹಿಂದೂ ಕ್ಯಾಲೆಂಡರ್‌ನಲ್ಲಿ 2024ರಲ್ಲಿ ಶ್ರಾವಣ ಮಾಸ ಆಗಸ್ಟ್ 5ರ ಸೋಮವಾರದಂದು ಪ್ರಾರಂಭವಾಗಿ ಸೆಪ್ಟೆಂಬರ್ 3, 2024 ಮಂಗಳವಾರದ ಅಮಾವಾಸ್ಯೆಯ ತಿಥಿಯಂದು ಕೊನೆಗೊಳ್ಳುತ್ತದೆ. ಮರುದಿನ ಭಾದ್ರಪದ ಮಾಸ ಆರಂಭವಾಗುತ್ತದೆ.

ಶ್ರಾವಣ ಮಾಸದ ವಿಶೇಷತೆ ಏನು?

ಶ್ರಾವಣ ಮಾಸದಲ್ಲಿ ಬರುವ ಎಲ್ಲಾ ದಿನಗಳು ಬಹಳ ಶುಭವೇ ಆಗಿರುತ್ತದೆ. ಈ ಮಾಸ ಧಾರ್ಮಿಕ ಕಾರ್ಯಗಳಿಗೆ ಬಹಳ ಉತ್ತಮವಾದ ಮಾಸವಾಗಿದೆ. ಈ ಮಾಸದಲ್ಲಿ ಜಪ-ತಪ, ವ್ರತ-ನಿಯಮ, ಪೂಜೆ-ಪುರಾಣಶಾಸ್ತ್ರ, ಪ್ರವಚನ, ಭಜನೆ, ಕೀರ್ತನೆ, ಸತ್ಸಾಂಗ, ಪುಣ್ಯ ಕ್ಷೇತ್ರಗಳ ದರ್ಶನ, ಯಜ್ಞ-ಯಾಗ, ಹೋಮ-ಹವನ ಮುಂತಾದವುಗಳಿಗೆ ಶ್ರೇಷ್ಠವಾಗಿದೆ. ಅಲ್ಲದೇ ಯಾವುದೇ ಶುಭ ಕಾರ್ಯಗಳನ್ನು ಮಾಡಲು ಹಾಗೂ ಹೊಸ ಕೆಲಸಗಳನ್ನು ಆರಂಭಿಸಲು ಈ ಮಾಸ ಬಹಳ ಪ್ರಶಸ್ತವಾಗಿದೆ. ಜೊತೆಗೆ ಈ ಮಾಸದಲ್ಲಿ ಹಬ್ಬಗಳು ಸಾಲುಸಾಲಾಗಿ ಬರುತ್ತವೆ.

ಶ್ರಾವಣದಲ್ಲಿ ಶಿವನ ಆರಾಧನೆ

ಇನ್ನು ಶ್ರಾವಣ ಮಾಸದಲ್ಲಿ ಶಿವನ ಆರಾಧನೆಗೆ ಹೆಚ್ಚು ಪ್ರಾಮುಖ್ಯತೆ ಇರುವುದರಿಂದ ಶ್ರಾವಣ ಮಾಸದ ಪ್ರತಿ ಸೋಮವಾರವನ್ನು ಶ್ರಾವಣ ಸೋಮವಾರ ಎಂದೇ ಕರೆಯುತ್ತಾರೆ. ಈ ಮಾಸದಲ್ಲಿ ಶಿವನಿಗೆ ವಿವಿಧ ರೀತಿಯ ಅಭಿಷೇಕಗಳನ್ನು ಮಾಡಲಾಗುತ್ತದೆ. ಯಾಕೆಂದರೆ ಸಮುದ್ರ ಮಂಥನ ನಡೆದಿದ್ದು ಶ್ರಾವಣ ಮಾಸದಲ್ಲಿ. ಆಗ ಈ ಸಮಯದಲ್ಲಿ ಹೊರಗೆ ಬಂದ ಹಾಲಾಹಲವನ್ನು ಶಿವನು ಕುಡಿಯುತ್ತಾನೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ಹಾಲಾಹಲದ ತಾಪವನ್ನು ಶಿವನಿಗೆ ಸಹಿಸಲು ಸಾಧ್ಯವಾಗದ ಕಾರಣ ದೇಹವನ್ನು ತಂಪಾಗಿಸಲು ಚಂದ್ರನನ್ನು ಹಾಗೂ ಗಂಗೆಯನ್ನು ಶಿರದಲ್ಲಿ ಧರಿಸುತ್ತಾನೆ. ಹಾಗಾಗಿ ಶ್ರಾವಣ ಮಾಸದಲ್ಲಿ ಶಿವನನ್ನು ತಂಪಾಗಿಲು ಅಭಿಷೇಕ ಮಾಡಲಾಗುತ್ತದೆ. ಇದರಿಂದ ಶಿವನ ಕೃಪೆ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಶ್ರಾವಣ ಮಾಸದಲ್ಲಿ ಆಚರಿಸುವ ಹಬ್ಬಗಳು

ಇದನ್ನೂ ಓದಿ: ಇದರ ಮಹತ್ವ ತಿಳಿದರೆ ನೀವು ಇನ್ನೆಂದೂ ಕರಿ ಬೇವಿನ ಎಲೆಯನ್ನು ಪಕ್ಕಕ್ಕೆ ಎತ್ತಿಡುವುದಿಲ್ಲ!

ಈ ಎಲ್ಲಾ ಶುಭ ದಿನಗಳು ಮತ್ತು ಹಬ್ಬಗಳಿಂದ ಶ್ರಾವಣ ಮಾಸ ತುಂಬಾ ವಿಶೇಷವಾದ ಮಾಸವಾಗಿದೆ. ಈ ಮಾಸದಲ್ಲಿ ಎಲ್ಲರೂ ಶ್ರದ್ಧೆ, ಭಕ್ತಿಯಿಂದ ದೇವರ ಆರಾಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಬಹುದು. ಹಾಗಾಗಿ ಈ ಶ್ರಾವಣ ಮಾಸವನ್ನು ಎಲ್ಲರೂ ಸಂತೋಷದಿಂದ ಬರಮಾಡಿಕೊಳ್ಳಿ.

Exit mobile version