Shravan 2024: ಶ್ರಾವಣ ಮಾಸದಲ್ಲಿ ಯಾವ ಹಬ್ಬ, ಯಾವ ದಿನ? ಈ ತಿಂಗಳ ಮಹತ್ವ ಏನು? - Vistara News

Latest

Shravan 2024: ಶ್ರಾವಣ ಮಾಸದಲ್ಲಿ ಯಾವ ಹಬ್ಬ, ಯಾವ ದಿನ? ಈ ತಿಂಗಳ ಮಹತ್ವ ಏನು?

Shravan 2024: ಶ್ರಾವಣ ಮಾಸ ಬಂದಾಗ…ಆನಂದ ತಂದಾಗ….ಹೌದು, ಶ್ರಾವಣ ಈ ಹೆಸರು ಕೇಳುತ್ತಲೆ ಖುಷಿಯಾಗುತ್ತದೆ. ಆಷಾಢದ ಆಲಸ್ಯ ಕಳೆದು ಹೊಸ ಹುರುಪು ತುಂಬುತ್ತದೆ ಈ ಶ್ರಾವಣ. ಹಬ್ಬಹರಿದಿನಗಳು ಸಾಲು ಸಾಲಾಗಿ ಶುರುವಾಗುತ್ತದೆ. ಮನಸ್ಸು ಕೂಡ ಗರಿಗೆದರುತ್ತದೆ. ಹೆಂಗಳೆಯರಿಗೆ ಈ ಮಾಸವೆಂದರೆ ತುಸು ಪ್ರೀತಿ. ವ್ರತ, ಪೂಜೆ, ಉಪಾವಾಸ ಎಂದೆಲ್ಲಾ ಬ್ಯುಸಿಯಾಗಿಬಿಡುತ್ತಾರೆ.ಅಂದಹಾಗೇ, ಈ ಶ್ರಾವಣ ಮಾಸವನ್ನು ಹೇಗೆಲ್ಲಾ ಆಚರಿಸಲಾಗುತ್ತದೆ, ಇದರ ವಿಶೇಷತೆ ಏನು ಎಂಬುದರ ಕುರಿತ ಮಾಹಿತಿ ಇಲ್ಲಿದೆ ನೋಡಿ.

VISTARANEWS.COM


on

Shravan 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಹಿಂದೂ ಕ್ಯಾಲೆಂಡರ್‌ನ ಪ್ರಕಾರ ಶ್ರಾವಣ ಮಾಸವು ಮಾಸಗಳಲ್ಲಿ (shravan 2024) ಐದನೇಯದಾಗಿದೆ. ಶ್ರವಣ ನಕ್ಷತ್ರ ದಿನದಂದು ಈ ಮಾಸ ಆರಂಭವಾಗುವುದರಿಂದ ಇದನ್ನು ಶ್ರಾವಣ ಮಾಸ (Shravan Masa) ಎಂದು ಕರೆಯುತ್ತಾರೆ. ಈ ಮಾಸ ಹಿಂದೂಗಳಿಗೆ ಬಹಳ ಪವಿತ್ರವಾದ ಹಾಗೂ ವಿಶೇಷವಾದ ಮಾಸವಾಗಿದೆ. ಯಾಕೆಂದರೆ ಈ ಮಾಸದಲ್ಲಿ ಜನರು ಹೆಚ್ಚಾಗಿ ಶಿವನ ಆರಾಧನೆ ಮಾಡುತ್ತಾರೆ. ಜೊತೆಗೆ ಲಕ್ಷ್ಮಿ,, ಗೌರಿಯ ಪೂಜೆ ಮಾಡಲಾಗುತ್ತದೆ. ಹಾಗೇ ಈ ಮಾಸದಲ್ಲಿ ಹಲವು ಹಬ್ಬ ಹರಿದಿನಗಳನ್ನು, ವ್ರತ ಉಪವಾಸಗಳನ್ನು ಜನರು ಆಚರಿಸುತ್ತಾರೆ. ಹಾಗಾಗಿ ಈ ಮಾಸದಲ್ಲಿ ಹಬ್ಬಗಳು ಸಾಲು ಸಾಲಾಗಿ ಬರುತ್ತಿರುತ್ತದೆ. ಅಲ್ಲದೇ ಶ್ರಾವಣ ಮಾಸ ಮಹಿಳೆಯರಿಗೆ ಬಹಳ ಪ್ರಿಯವಾದ ಮಾಸ. ಯಾಕೆಂದರೆ ಮಹಿಳೆಯರಿಗೆ ದೇವರ ಪೂಜೆ ಮಾಡಲು ಇದು ಬಹಳ ಶ್ರೇಷ್ಠವಾದ ಮಾಸವಾಗಿದೆ. ಮತ್ತು ಈ ಮಾಸದಲ್ಲಿ ಮಾಡಿದ ಪೂಜೆಗಳಿಗೆ ಬಹಳ ಬೇಗ ಫಲ ದೊರೆಯುತ್ತದೆಯಂತೆ.

Shravan Masa
Shravan Masa

ಶ್ರಾವಣ ಮಾಸ ಶುರು ಯಾವಾಗ?

ಆಷಾಢ ಮಾಸ ಮುಗಿದ ನಂತರ ಅಂದರೆ ಭೀಮನ ಅಮಾವಾಸ್ಯೆ ನಂತರ ಶ್ರಾವಣ ಮಾಸ ಪ್ರಾರಂಭವಾಗುತ್ತದೆ. ಅಂದರೆ ಹಿಂದೂ ಕ್ಯಾಲೆಂಡರ್‌ನಲ್ಲಿ 2024ರಲ್ಲಿ ಶ್ರಾವಣ ಮಾಸ ಆಗಸ್ಟ್ 5ರ ಸೋಮವಾರದಂದು ಪ್ರಾರಂಭವಾಗಿ ಸೆಪ್ಟೆಂಬರ್ 3, 2024 ಮಂಗಳವಾರದ ಅಮಾವಾಸ್ಯೆಯ ತಿಥಿಯಂದು ಕೊನೆಗೊಳ್ಳುತ್ತದೆ. ಮರುದಿನ ಭಾದ್ರಪದ ಮಾಸ ಆರಂಭವಾಗುತ್ತದೆ.

ಶ್ರಾವಣ ಮಾಸದ ವಿಶೇಷತೆ ಏನು?

ಶ್ರಾವಣ ಮಾಸದಲ್ಲಿ ಬರುವ ಎಲ್ಲಾ ದಿನಗಳು ಬಹಳ ಶುಭವೇ ಆಗಿರುತ್ತದೆ. ಈ ಮಾಸ ಧಾರ್ಮಿಕ ಕಾರ್ಯಗಳಿಗೆ ಬಹಳ ಉತ್ತಮವಾದ ಮಾಸವಾಗಿದೆ. ಈ ಮಾಸದಲ್ಲಿ ಜಪ-ತಪ, ವ್ರತ-ನಿಯಮ, ಪೂಜೆ-ಪುರಾಣಶಾಸ್ತ್ರ, ಪ್ರವಚನ, ಭಜನೆ, ಕೀರ್ತನೆ, ಸತ್ಸಾಂಗ, ಪುಣ್ಯ ಕ್ಷೇತ್ರಗಳ ದರ್ಶನ, ಯಜ್ಞ-ಯಾಗ, ಹೋಮ-ಹವನ ಮುಂತಾದವುಗಳಿಗೆ ಶ್ರೇಷ್ಠವಾಗಿದೆ. ಅಲ್ಲದೇ ಯಾವುದೇ ಶುಭ ಕಾರ್ಯಗಳನ್ನು ಮಾಡಲು ಹಾಗೂ ಹೊಸ ಕೆಲಸಗಳನ್ನು ಆರಂಭಿಸಲು ಈ ಮಾಸ ಬಹಳ ಪ್ರಶಸ್ತವಾಗಿದೆ. ಜೊತೆಗೆ ಈ ಮಾಸದಲ್ಲಿ ಹಬ್ಬಗಳು ಸಾಲುಸಾಲಾಗಿ ಬರುತ್ತವೆ.

Shravan Masa
Shravan Masa

ಶ್ರಾವಣದಲ್ಲಿ ಶಿವನ ಆರಾಧನೆ

ಇನ್ನು ಶ್ರಾವಣ ಮಾಸದಲ್ಲಿ ಶಿವನ ಆರಾಧನೆಗೆ ಹೆಚ್ಚು ಪ್ರಾಮುಖ್ಯತೆ ಇರುವುದರಿಂದ ಶ್ರಾವಣ ಮಾಸದ ಪ್ರತಿ ಸೋಮವಾರವನ್ನು ಶ್ರಾವಣ ಸೋಮವಾರ ಎಂದೇ ಕರೆಯುತ್ತಾರೆ. ಈ ಮಾಸದಲ್ಲಿ ಶಿವನಿಗೆ ವಿವಿಧ ರೀತಿಯ ಅಭಿಷೇಕಗಳನ್ನು ಮಾಡಲಾಗುತ್ತದೆ. ಯಾಕೆಂದರೆ ಸಮುದ್ರ ಮಂಥನ ನಡೆದಿದ್ದು ಶ್ರಾವಣ ಮಾಸದಲ್ಲಿ. ಆಗ ಈ ಸಮಯದಲ್ಲಿ ಹೊರಗೆ ಬಂದ ಹಾಲಾಹಲವನ್ನು ಶಿವನು ಕುಡಿಯುತ್ತಾನೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ಹಾಲಾಹಲದ ತಾಪವನ್ನು ಶಿವನಿಗೆ ಸಹಿಸಲು ಸಾಧ್ಯವಾಗದ ಕಾರಣ ದೇಹವನ್ನು ತಂಪಾಗಿಸಲು ಚಂದ್ರನನ್ನು ಹಾಗೂ ಗಂಗೆಯನ್ನು ಶಿರದಲ್ಲಿ ಧರಿಸುತ್ತಾನೆ. ಹಾಗಾಗಿ ಶ್ರಾವಣ ಮಾಸದಲ್ಲಿ ಶಿವನನ್ನು ತಂಪಾಗಿಲು ಅಭಿಷೇಕ ಮಾಡಲಾಗುತ್ತದೆ. ಇದರಿಂದ ಶಿವನ ಕೃಪೆ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಶ್ರಾವಣ ಮಾಸದಲ್ಲಿ ಆಚರಿಸುವ ಹಬ್ಬಗಳು

  • ಈ ಮಾಸದಲ್ಲಿ ನಾಗರ ಪಂಚಮಿ, ವರಮಹಾಲಕ್ಷ್ಮಿ ವ್ರತ, ಮಂಗಳ ಗೌರಿ ವ್ರತ, ರಕ್ಷಾಬಂಧನ, ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಮುಂತಾದ ಹಬ್ಬಗಳನ್ನು ಆಚರಿಸಲಾಗುತ್ತದೆ.
Shravan Masa
Shravan Masa
  • ಮಂಗಳಗೌರಿ ವ್ರತ : ಶ್ರಾವಣ ಮಾಸದ ಮೊದಲಿಗೆ ಮಂಗಳವಾರ ಬರುವುದರಿಂದ ಮಂಗಳ ಗೌರಿಯ ವ್ರತ ಮಾಡುತ್ತಾರೆ. ಇದನ್ನು ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಮಾಡಿದರೆ ಅವರ ವೈವಾಹಿಕ ಜೀವನ ಉತ್ತಮವಾಗಿರುತ್ತದೆಯಂತೆ. ಹಾಗಾಗಿ ಶ್ರಾವಣ ಮಾಸದಲ್ಲಿ ಬರುವ ಎಲ್ಲಾ ಮಂಗಳವಾರದಂದು ಮಂಗಳಗೌರಿ ವ್ರತ ಆಚರಿಸಿದರೆ ಒಳ್ಳೆಯದು.
Shravan Masa
Shravan Masa
  • ನಾಗರ ಪಂಚಮಿ: ಶ್ರಾವಣ ಮಾಸದ ಪ್ರಾರಂಭವಾದ 5ನೇ ದಿನಕ್ಕೆ ಅಂದರೆ ಆಗಸ್ಟ್ 9ರಂದು ನಾಗರ ಪಂಚಮಿ ಹಬ್ಬ ಬರಲಿದೆ. ಈ ದಿನ ಜನರು ತಾವು ನಂಬಿದಂತಹ ನಾಗ ದೇವರಿಗೆ ಪೂಜೆ ಸಲ್ಲಿಸುತ್ತಾರೆ.
Shravan Masa
Shravan Masa
  • ವರಮಹಾಲಕ್ಷ್ಮಿ ವ್ರತ : ಶ್ರಾವಣ ಅಮಾವಾಸ್ಯೆಯ 2ನೇ ಶುಕ್ರವಾರದಂದು ಅಂದರೆ ಆಗಸ್ಟ್ 16ರಂದು ಆಚರಿಸಲಾಗುತ್ತದೆ. ಈ ದಿನ ಮಹಿಳೆಯರು ಲಕ್ಷ್ಮಿದೇವಿಯನ್ನು ಕಳಸದ ಮೇಲೆ ಪ್ರತಿಷ್ಠಾಪನೆ ಮಾಡಿ ಜರಿ ಸೀರೆ ಉಡಿಸಿ, ಧನ, ಚಿನ್ನದ ಆಭರಣಗಳಿಂದ ದೇವಿಯನ್ನು ಅಲಂಕರಿಸಿ ಪೂಜೆ ಮಾಡಿ ವರವನ್ನು ಬೇಡಿಕೊಳ್ಳುತ್ತಾರೆ.
Shravan Masa
Shravan Masa
  • ಸಂಪತ್ ಗೌರಿ ವ್ರತ : ಇದನ್ನು ಶ್ರಾವಣ ಮಾಸದಲ್ಲಿ ಬರುವ ಪ್ರತಿ ಶುಕ್ರವಾರದಂದು ಆಚರಿಸಲಾಗುತ್ತದೆ. ಈ ದಿನ ಸಂಪತ್ತಿನ ದೇವತೆ ಲಕ್ಷ್ಮಿದೇವಿಯನ್ನು ಪೂಜಿಸಲಾಗುತ್ತದೆ.
Shravan Masa
Shravan Masa
  • ಶ್ರಾವಣ ಶನಿವಾರ: ಈ ದಿನ ಲಕ್ಷ್ಮಿ ಮತ್ತು ವೆಂಕಟೇಶ್ವರನನ್ನು ಆರಾಧಿಸುತ್ತಾರೆ. ಹಾಗೇ ಕೆಲವರು ಶ್ರಾವಣ ಶನಿವಾರದಂದು ಉಪವಾಸ ವ್ರತವನ್ನು ಆಚರಿಸುತ್ತಾರೆ. ಹಾಗೇ ಈ ದಿನ ಆಂಜನೇಯ ಸ್ವಾಮಿಯ ಪೂಜೆ ಹಾಗೂ ಶನಿ ಶಾಂತಿ ಪೂಜೆಗೆ ಬಹಳ ಉತ್ತಮ ಎನ್ನಲಾಗಿದೆ.
Shravan Masa
Shravan Masa
  • ರಕ್ಷಾ ಬಂಧನ : ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾಬಂಧನವನ್ನು ಆಚರಿಸುತ್ತಾರೆ. ಇದನ್ನು ನೂಲು ಹುಣ್ಣಿಮೆಯಂದು ಕರೆಯುತ್ತಾರೆ. ಈ ದಿನ ಸಹೋದರಿಯರು ತಮ್ಮ ಸಹೋದರನ ಕೈಗೆ ರಕ್ಷಾ ಬಂಧನವನ್ನು ಕಟ್ಟಿ ಒಳಿತಾಗಲಿ ಎಂದು ಹಾರೈಸುತ್ತಾರೆ. ಮತ್ತು ಉಪನಯನವಾದವರು ಈ ದಿನ ಉಪಕರ್ಮವನ್ನು ಆಚರಿಸಬೇಕು. ಅಂದರೆ ಜನೀವಾರವನ್ನು ಬದಲಾಯಿಸಿ ಹೊಸ ಜನೀವಾರವನ್ನು ಧರಿಸಬೇಕು. ಈ ವರ್ಷ ಆಗಸ್ಟ್ 19ರಂದು ರಕ್ಷಾ ಬಂಧನವನ್ನು ಆಚರಿಸುತ್ತಾರೆ.
Shravan Masa
Shravan Masa
  • ಶ್ರೀಕೃಷ್ಣ ಜನ್ಮಾಷ್ಟಮಿ: ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಮಹಾವಿಷ್ಣು ಕಂಸನ ಸಂಹಾರಕ್ಕಾಗಿ ಶ್ರೀಕೃಷ್ಣನ ಅವತಾರದಲ್ಲಿ ಜನ್ಮ ತಾಳುತ್ತಾನೆ. ಹಾಗಾಗಿ ಈ ವರ್ಷ ಆಗಸ್ಟ್ 26ರಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ಇದರ ಮಹತ್ವ ತಿಳಿದರೆ ನೀವು ಇನ್ನೆಂದೂ ಕರಿ ಬೇವಿನ ಎಲೆಯನ್ನು ಪಕ್ಕಕ್ಕೆ ಎತ್ತಿಡುವುದಿಲ್ಲ!

ಈ ಎಲ್ಲಾ ಶುಭ ದಿನಗಳು ಮತ್ತು ಹಬ್ಬಗಳಿಂದ ಶ್ರಾವಣ ಮಾಸ ತುಂಬಾ ವಿಶೇಷವಾದ ಮಾಸವಾಗಿದೆ. ಈ ಮಾಸದಲ್ಲಿ ಎಲ್ಲರೂ ಶ್ರದ್ಧೆ, ಭಕ್ತಿಯಿಂದ ದೇವರ ಆರಾಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಬಹುದು. ಹಾಗಾಗಿ ಈ ಶ್ರಾವಣ ಮಾಸವನ್ನು ಎಲ್ಲರೂ ಸಂತೋಷದಿಂದ ಬರಮಾಡಿಕೊಳ್ಳಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಪ್ರಮುಖ ಸುದ್ದಿ

Actor Darshan: ರೇಣುಕಾಸ್ವಾಮಿ ಸಾಯೋವರೆಗೂ ಶೆಡ್‌ನಲ್ಲೇ ಇದ್ದರಾ ನಟ ದರ್ಶನ್! ಚಾರ್ಜ್ ಶೀಟ್‌ನಲ್ಲಿ ಏನೆಲ್ಲ ಇದೆ ಗೊತ್ತಾ?

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಮುಂದಿನ ಪ್ರಕ್ರಿಯೆಗಳು ಕೂಡ ಮುಂದುವರೆಯುತ್ತಿದ್ದು‌ ಕೊಲೆಯಲ್ಲಿ ಹದಿನೇಳು ಜನ ಆರೋಪಿಗಳಿದ್ದಾರೆ. ಇದರ ಡೀಟೇಲ್ಸ್ ಇಲ್ಲಿದೆ.

VISTARANEWS.COM


on

Actor Darshan to be questioned in Parappana Agrahara jail
Koo

ರೇಣುಕಾಸ್ವಾಮಿ ಕೊಲೆ (Actor Darshan) ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಮುಂದಿನ ಪ್ರಕ್ರಿಯೆಗಳು ಕೂಡ ಮುಂದುವರೆಯುತ್ತಿದೆ.‌ ಕೊಲೆಯಲ್ಲಿ ಹದಿನೇಳು ಜನ ಆರೋಪಿಗಳಿದ್ದಾರೆ. ಕ್ರಿಮಿನಲ್ ಕಾನ್‌ಸ್ಪಿರೆಸಿ ಮಾಡಿ ಪರ್ಪೆಕ್ಟ್ ಕ್ರೈಂ ಎನಿಸಿಕೊಂಡಿರುವವರ ಕೊಲೆ ಪ್ರಕರಣ ಇದಾಗಿದೆ.‌ ಕೊಲೆಯಾದ ಬಳಿಕ ಏನೆಲ್ಲಾ ಮಾಡಬೇಕು‌ ಎಂಬಷ್ಟರ ಮಟ್ಟಿಗೆ ಯೋಚನೆ ಮಾಡಿದ್ದ ಖದೀಮರು ಕೊನೆಗೆ ಪ್ಲಾನ್ ಉಲ್ಟಾ ಹೊಡೆದ ಬಳಿ ಅಷ್ಟೂ ಜನ ಸಿಕ್ಕಿ ಬಿದ್ದಿದ್ದಾರೆ. 17 ಜನ ಆರೋಪಿಗಳು ಯಾವ ರೀತಿ ಕೊಲೆ ಪ್ರಕರಣದಲ್ಲಿ ಪಾತ್ರ ವಹಿಸಿದರು ಎಂಬುದರ ಡಿಟೇಲ್ಸ್ ಇಲ್ಲಿದೆ.

ಪವಿತ್ರಾಗೌಡ

ಕೊಲೆ ಮಾಡಲು ಮೂಲ ಕಾರಣ ಪವಿತ್ರ ಗೌಡ. ಕೃತ್ಯ ನಡೆದ ಸಮಯದಲ್ಲಿ ಅಲ್ಲೇ ಇರುವುದಕ್ಕೆ ಸಾಕ್ಷಿ ಪತ್ತೆಯಾಗಿದೆ.,
ಸಿಸಿಟಿವಿಯಲ್ಲಿ ಪವಿತ್ರಗೌಡ ಸೆರೆಯಾಗಿದ್ದಾರೆ. ಪವಿತ್ರ ಗೌಡ ಮೊಬೈಲ್ ಕೃತ್ಯದ ಸ್ಥಳದಲ್ಲಿ ಆಕ್ಟಿವ್ ಆಗಿರುವುದು ಕಂಡುಬಂದಿದೆ.

ದರ್ಶನ್

ಕಿಡ್ನಾಪ್ ಮಾಡಿಸಿದ್ದು , ಹಲ್ಲೆ ಮಾಡಿದ್ದು, ಕೊಲೆ ನಂತರ ಮುಚ್ಚಿಹಾಕಲು ಹಣ ನೀಡಿದ್ದು ದರ್ಶನ್. ಕೊಲೆ ನಡೆದ ಸ್ಥಳದಲ್ಲಿ ಇರುವುದು ಪತ್ತೆಯಾಗಿದೆ. ಸಿಸಿಟಿವಿಯಲ್ಲಿ ಕೂಡ ದರ್ಶನ್ ಸೆರೆಯಾಗಿದ್ದಾರೆ. ಕೊಲೆ ಬಳಿಕ ಸ್ಥಳದಿಂದ ಪರಾರಿಯಾರಿಯಾಗುವ ದೃಶ್ಯ ಸಹ ಇದೆ. ದರ್ಶನ್ ಬಟ್ಟೆ ಮತ್ತು ಶೂನಲ್ಲಿ ರೇಣುಕಾ ಸ್ವಾಮಿ ರಕ್ತ ಇರುವುದು ಪತ್ತೆಯಾಗಿದ್ದು, ದರ್ಶನ್ ಹಲ್ಲೆ ಮಾಡಿರುವ ಬಗ್ಗೆ ಮತ್ತು ಕೊಲೆಯಲ್ಲಿ ಭಾಗಿರುವುದು ದೃಡವಾಗಿದೆ.

ಪವನ್

ಪವಿತ್ರ ಜೊತೆಗೆ ಇದ್ದು ,ಕಿಡ್ನಾಪ್ ಮಾಡುವಾಗ ರಾಘವೇಂದ್ರ ಜೊತೆಗೆ ಸಂಪರ್ಕದಲ್ಲಿ ಇದ್ದುಕೊಂಡು ನಂತ್ರ ಹಲ್ಲೆ ಮಾಡುವ ಸ್ಥಳಕ್ಕೆ ಹೋಗಿ ಹಲ್ಲೆ ಪವನ್ ಮಾಡಿದ್ದಾನೆ. ಬೇರೊಂದು ಇನ್ಸ್ಟಾಗ್ರಾಮ್ ಅಕೌಂಟ್ ಮಾಡಿ ರೇಣುಕಾಸ್ವಾಮಿ ಜೊತೆಗೆ ಚಾಟ್ ಮಾಡಿ ಕಿಡ್ನಾಪ್ ಮಾಡುವಂತೆ ಸೂಚಿನೆ ನಿಡಿದ್ದಾನೆ. ರೇಣುಕಾಸ್ವಾಮಿ ಗೆ ಹಲ್ಲೆ ಮಾಡಿದ್ದು, ಇದೆಲ್ಲದಕ್ಕು ಸಾಕ್ಷಿ ಲಭ್ಯ ವಿದೆ.

ರಾಘವೇಂದ್ರ

ಚಿತ್ರದುರ್ಗ ದರ್ಶನ್ ಅಭಿಮಾನಿಗಳ ಸಂಘದ ಅದ್ಯಕ್ಷ, ಕಿಡ್ನಾಪ್ ಮಾಡುವಲ್ಲಿ ಪ್ರಮುಖ ಪಾತ್ರ. ಕೊಲೆಯಾದ ಸ್ಥಳದಲ್ಲಿ ಹಾಜರಿದ್ದ. ಕೊಲೆ ಬಳಿಕ ರೇಣುಕಾಸ್ವಾಮಿ ಮೈ ಮೇಲಿದ್ದ ಆಭರಣ ತೆಗೆದಿದ್ದ. ಕೊಲೆ ಮಾಡುವ ಮೊದಲು ಕಿಡ್ನಾಪ್ ಮಾಡುವಲ್ಲಿ ಸಕ್ರಿಯವಾಗಿ ಕೆಲಸ ಮಾಡಿರುವುದಕ್ಕೆ ಸಾಕ್ಷಿ ಲಭ್ಯವಾಗಿದೆ.

ನಂದೀಶ

ಹಲ್ಲೆ ಮಾಡುವಾಗ ಜೊತೆಗೆ ಇದ್ದು , ರಣೇಕಾ ಸ್ವಾಮಿಗೆ ತೀವ್ರವಾಗಿ ಹಲ್ಲೆ ಮಾಡಿದವನು. ರೇಣುಕಾಸ್ವಾಮಿ ಬಳಸಿದ್ದ ಬಟ್ಟೆಯಲ್ಲಿ ರಕ್ತವಿದೆ. ಕೊಲೆ ಬಳಿಕ ವಾಹನದಲ್ಲಿ ಮೃತ ದೇಹ ಇಟ್ಟಿದ್ದು, ದೇಹ ಹೊತ್ತುಕೊಂಡು ಬಂದಿದ್ದ ದೃಶ್ಯ ಪತ್ತೆಯಾಗಿದೆ.

ಜಗದೀಶ್ ಅಲಿಯಾಸ್ ಜಗ್ಗ

ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗದಿಂದ ಬಂದಿದ್ದ ತಂಡದ ಸದಸ್ಯ, ಚಿತ್ರದುರ್ಗದಿಂದ ಕರೆತಂದು ಕೊಲೆ ಮಾಡಿದ ಬಳಿಕ ಎಸ್ಕೇಪ್ ಆಗಿದ್ದನ್ನು. ರೇಣುಕಾಸ್ವಾಮಿ ಕಿಡ್ನಾಪ್ ನಂತರ ಕರೆತರುವಾಗ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅನುಕುಮಾರ್ ಅಲಿಯಾಸ್ ಅನು

ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗದಿಂದ ಬಂದಿದ್ದ ತಂಡದ ಸದಸ್ಯ ಈ ಅನುಕುಮಾರ್. ಚಿತ್ರದುರ್ಗದಿಂದ ಕರೆತಂದ ಕೊಲೆ ಮಾಡಿದ ಬಳಿಕ ಎಸ್ಕೇಪ್ ಆಗಿದ್ದ. ಕಿಡ್ನಾಪ್ ಸಮಯದಲ್ಲಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರವಿ ಅಲಿಯಾಸ್ ರವಿಶಂಕರ್

ಕಾರು ಚಾಲಕ, ಈತ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದಿದ್ದ. ಕೊಲೆ ಬಳಿಕ ಕಾರಿನಲ್ಲಿ ಉಳಿದ ಆರೋಪಿಗಳ ಕರೆದುಕೊಂಡು ಹೋಗಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಾಜು ಅಲಿಯಾಸ್ ಧನರಾಜ್

ದರ್ಶನ್ ನಿವಾಸದಲ್ಲಿ ಕೆಲಸ ಮಾಡಿಕೊಂಡಿದ್ದ ರಾಜರಾಜೇಶ್ವರಿ ನಗರ ನಿವಾಸಿ. ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡಿದ್ದು, ಮೃತ ದೇಹ ಸಾಗಾಣೆ ಈ ರಾಜು ಅಲಿಯಾಸ್ ಧನರಾಜ್.

ವಿನಯ್

ದರ್ಶನ್ ಆಪ್ತನಾಗಿದ್ದು ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಮಾಲಿಕ, ಈತ ಹಲ್ಲೆ ಮಾಡಿದ್ದವರ ಪೈಕಿ ಪ್ರಮುಖ ವ್ಯಕ್ತಿ. ಮನಸ್ಸಿಗೆ ಬಂದಹಾಗೆ ಹಲ್ಲೆ ಮಾಡಿದ್ದಾನೆ ಲಾಠಿ ಬೀಸಿ ಬೀಸಿ ಹೊಡೆದಿದ್ದಾನೆ. ಕೊಲೆಗು ಮೊದಲಿನಿಂದ ದರ್ಶನ್ ಜೊತೆಗೆ ಇದ್ದ. ಸ್ಟೋನಿ ಬ್ರೂಕ್‌ನಲ್ಲಿ ನಡೆದ ಕೊಲೆಗು ಮೊದಲ ಮಾತುಕತೆಯಲ್ಲಿ ಭಾಗಿದ್ದಾನೆ.

ನಾಗರಾಜು ಅಲಿಯಾಸ್ ನಾಗ

ನಟ ದರ್ಶನ್‌ನ ಅನಧಿಕೃತ ಮ್ಯಾನೇಜರ್ ಇವನನು. ಪಾರ್ಟಿ ಕುಡಿತ ಸೇರಿ ಎಲ್ಲಾ ಕಡೆ ಇರುತ್ತಿದ್ದ. ಹಲ್ಲೆ ಮಾಡುವಾಗ ಜೊತೆಗೆ ಇದ್ದು ಹಲ್ಲೆ ಮಾಡಿ ಕಾಲಿನಿಂದಲೂ ಒದ್ದಿದ್ದ. ಬೇರೆಯವರಿಗೆ ಶರಣಾಗುವಂತೆ ವ್ಯವಸ್ಥೆ ಮಾಡುವಲ್ಲಿಯೂ ಪಾತ್ರ ನಿರ್ವಹಿಸಿದ್ದಾನೆ.

ಲಕ್ಷ್ಮಣ್

ದರ್ಶನ್ ಕಾರು ಚಾಲಕ. ಕೊಲೆ ಮಾಡುವಾಗ ಸ್ಥಳದಲ್ಲಿ ಇದ್ದು ಹಲ್ಲೆ ಮಾಡಿದ್ದು, ಮೃತ ದೇಹವನ್ನು ಎಸೆಯಲು ಬೇಕಾದ ವ್ಯವಸ್ಥೆ ಮಾಡಿದ್ದು ಕೊಲೆಗೆ ಮೊದಲೆ ಜೊತೆಗೆ ಇದ್ದಿದ್ದು ಈ ಲಕ್ಷ್ಮಣ್. ಕೊಲೆಯ ನಂತ್ರ ಎ2 ಆರೋಪಿ ಜೊತೆಗೆ ಪರಾರಿಯಾಗಲು ಸಹಾಯ ಸಹ ಮಾಡಿದ್ದಾನೆ.

ದೀಪಕ್

ದರ್ಶನ್ ಆಪ್ತ. ಹಲ್ಲೆ ಮಾಡಿದ್ದು ನಂತರ ದರ್ಶನ್, ಪ್ರದೋಶ್ ಹೇಳಿದಂತೆ ಹಣವನ್ನು ನಿಕಿಲ್, ಕೇಶವಮೂರ್ತ, ಮತ್ತು ಕಾರ್ತಿಕ್‌ಗೆ ಹೇಳಿ ಒಪ್ಪಿಸಿ ಹಣ ನೀಡಿದ್ದ ತಲಾ ಐದು ಲಕ್ಷ ಹಣ ನೀಡಿದ್ದ. ಕೊಲೆ ನಡೆದ ಶೆಡ್ ಸ್ಥಳದ ಜವಾಬ್ದಾರಿ ಹೊಂದಿದ್ದ.

ಪ್ರದೂಶ್

ದರ್ಶನ್ ಜೊತೆಗೆ ಇದ್ದುಕೊಂಡು ಹಲ್ಲೆ ಮಾಡಿದವನು, ನಂತರ ದರ್ಶನ್ ಜೊತೆಗೆ ವ್ಯವಹಾರ, ಕೊಲೆ ಮಾಡಿದ್ದವರ ಖರ್ಚಿಗಾಗಿ ಮೂವತ್ತು ಲಕ್ಷ ಹಣವನ್ನು ಪಡೆದುತಂದಿದ್ದ. ಆರೋಪಿಗಳು ಭಯ ಪಟ್ಟಾಗ ಮತ್ತೆ ದರ್ಶನ್ ಬೇಟಿ ಮಾಡಿಸಿ ಮೂವರನ್ನ ಸರಂಡರ್ ಮಾಡಿಸಿದ್ದ.

ಕಾರ್ತಿಕ್ ಅಲಿಯಾಸ್ ಕಪ್ಪೆ

ಶೆಡ್‌ನಲ್ಲಿ ಕೆಲಸ ಮಾಡಿಕೊಂಡಿದ್ದ, ಹಣ ನೀಡಿದ ಬಳಿಕ ಶವ ಸಾಗಿಸಿದ್ದ. ನಂತರ ಪೊಲೀಸರ ಮುಂದೆ ಸರಂಡರ್ ಆಗಿದ್ದನು.

ಕೇಶವಮೂರ್ತಿ

ಕೊಲೆ ಮಾಡಿದ್ದ ಬಳಿಕ ಐದು ಲಕ್ಷ ಹಣ ಪಡೆದುಕೊಂಡು ಮೃತ ದೇಹವನ್ನು ಸಾಗಿಸುವ ಕೆಲಸ ಮಾಡಿದ್ದ. ಆಮೇಲೆ ಪೊಲೀಸರ ಎದುರು ಸರಂಡರ್ ಆಗಿದ್ದನು.

ನಿಕಿಲ್

ಕೊಲೆ ಮಾಡಿದ್ದ ಬಳಿಕ ಐದು ಲಕ್ಷ ಹಣ ಪಡೆದುಕೊಂಡು ಮೃತ ದೇಹವನ್ನು ಸಾಗಿಸುವ ಕೆಲಸ ಮಾಡಿದ್ದ. ಅಮೇಲೆ ಪೊಲೀಸರ ಎದುರು ಸರಂಡರ್ ಆಗಿದ್ದನು.

Continue Reading

ಬೆಂಗಳೂರು

Railway news: ಪ್ರಯಾಣಿಕರ ಗಮನಕ್ಕೆ; ಸುರಕ್ಷತಾ ಕಾಮಗಾರಿ ಹಿನ್ನೆಲೆ ಈ ರೈಲುಗಳ ಓಡಾಟ ಸ್ಥಗಿತ

railway news: ನೈರುತ್ಯ ರೈಲ್ವೆ ಪತ್ರಿಕಾ ಪ್ರಕಟಣೆ ಸಂಖ್ಯೆ 226 ಪ್ರಕಾರ ದಿನಾಂಕ: 02.09.2024ರಂದು ರೈಲುಗಳ ಭಾಗಶಃ ರದ್ದು / ಮಾರ್ಗ ಬದಲಾವಣೆಯಾಗಲಿದೆ.

VISTARANEWS.COM


on

Job Alert
Koo

ಡಾ. ಮಂಜುನಾಥ ಕನಮಡಿ
ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ
ನೈರುತ್ಯ ರೈಲ್ವೆ, ಹುಬ್ಬಳ್ಳಿ

ಬೆಂಗಳೂರು ವಿಭಾಗದ (railway news) ಪೆನುಕೊಂಡ-ಮಕ್ಕಾಜಿಪಲ್ಲಿ ನಿಲ್ದಾಣಗಳ ನಡುವೆ ಇಂಜಿನಿಯರಿಂಗ್ ಮತ್ತು ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಹಿನ್ನಲೆಯಲ್ಲಿ ಈ ಕೆಳಗಿನ ರೈಲುಗಳನ್ನು ಭಾಗಶಃ ರದ್ದು ಮತ್ತು ಬದಲಾದ ಮಾರ್ಗದ ಮೂಲಕ ಸಂಚರಿಸಲಾಗುತ್ತದೆ. ಅವುಗಳು ಈ ಕೆಳಗಿನಂತಿವೆ:

indian railway

ಭಾಗಶಃ ರದ್ದು

ರೈಲು ಸಂಖ್ಯೆ 06515 ಕೆಎಸ್ಆರ್ ಬೆಂಗಳೂರು-ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ಮೆಮು ವಿಶೇಷ ರೈಲು ಸೆಪ್ಟೆಂಬರ್ 5, 10, 11 ಮತ್ತು 12, 2024 ರಂದು ಹಿಂದೂಪುರ-ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಹಿಂದೂಪುರದಲ್ಲಿ ಕೊನೆಗೊಳ್ಳುತ್ತದೆ.

ರೈಲು ಸಂಖ್ಯೆ 06516 ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ ರೈಲು ಸೆಪ್ಟೆಂಬರ್ 5, 10, 11 ಮತ್ತು 12, 2024 ರಂದು ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ-ಹಿಂದೂಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ನಿಲ್ದಾಣದ ಬದಲು ಹಿಂದೂಪುರದಿಂದ ನಿಗದಿತ ನಿರ್ಗಮನ ಸಮಯದಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ.

ರೈಲು ಸಂಖ್ಯೆ 07693 ಗುಂತಕಲ್-ಹಿಂದೂಪುರ ಡೆಮು ವಿಶೇಷ ರೈಲು ಸೆಪ್ಟೆಂಬರ್ 9 ರಿಂದ 11, 2024 ರವರೆಗೆ ಧರ್ಮಾವರಂ-ಹಿಂದೂಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಧರ್ಮಾವರಂನಲ್ಲಿ ಕೊನೆಗೊಳ್ಳುತ್ತದೆ.

ರೈಲು ಸಂಖ್ಯೆ 07694 ಹಿಂದೂಪುರ-ಗುಂತಕಲ್ ಡೆಮು ವಿಶೇಷ ರೈಲು ಸೆಪ್ಟೆಂಬರ್ 10 ರಿಂದ 12, 2024 ರವರೆಗೆ ಹಿಂದೂಪುರ ನಿಲ್ದಾಣದ ಬದಲು ಧರ್ಮಾವರಂನಿಂದ ನಿಗದಿತ ನಿರ್ಗಮನ ಸಮಯದಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಹೀಗಾಗಿ ಹಿಂದೂಪುರ-ಧರ್ಮಾವರಂ ನಿಲ್ದಾಣಗಳ ನಡುವೆ ರದ್ದುಗೊಂಡಿರುತ್ತದೆ.

railway
railway

ರೈಲುಗಳ ಮಾರ್ಗ ಬದಲಾವಣೆ

ಸೆಪ್ಟೆಂಬರ್ 5 ಮತ್ತು 12, 2024ರಂದು ಪ್ರಾರಂಭವಾಗುವ ರೈಲು ಸಂಖ್ಯೆ 20703 ಕಾಚಿಗುಡ-ಯಶವಂತಪುರ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಧರ್ಮಾವರಂ, ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ, ಪೆನುಕೊಂಡ ಮತ್ತು ಯಶವಂತಪುರ ನಿಲ್ದಾಣಗಳ ಮೂಲಕ ಸಂಚರಿಸಲಿದೆ.

ಸೆಪ್ಟೆಂಬರ್ 5 ಮತ್ತು 12, 2024ರಂದು ಪ್ರಾರಂಭವಾಗುವ ರೈಲು ಸಂಖ್ಯೆ 22231 ಕಲಬುರಗಿ-ಎಸ್ಎಂವಿಟಿ ಬೆಂಗಳೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಅನಂತಪುರ, ಧರ್ಮಾವರಂ, ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ, ಪೆನುಕೊಂಡ ಮತ್ತು ಯಲಹಂಕ ನಿಲ್ದಾಣಗಳ ಮೂಲಕ ಸಂಚರಿಸಲಿದೆ.

ಸೆಪ್ಟೆಂಬರ್ 9, 2024ರಂದು ಹೊರಡುವ ರೈಲು ಸಂಖ್ಯೆ 12976 ಜೈಪುರ-ಮೈಸೂರು ಎಕ್ಸ್ ಪ್ರೆಸ್ ರೈಲು ಧರ್ಮಾವರಂ, ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ, ಪೆನುಕೊಂಡ ಮತ್ತು ಹಿಂದೂಪುರ ನಿಲ್ದಾಣಗಳ ಮೂಲಕ ಸಂಚರಿಸಲಿದೆ.

ಸೆಪ್ಟೆಂಬರ್ 10 ಮತ್ತು 11, 2024ರಂದು ಹೊರಡುವ ರೈಲು ಸಂಖ್ಯೆ 16572 ಬೀದರ್-ಯಶವಂತಪುರ ಎಕ್ಸ್ ಪ್ರೆಸ್ ರೈಲು ಧರ್ಮಾವರಂ, ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ, ಪೆನುಕೊಂಡ ಮತ್ತು ಹಿಂದೂಪುರ ನಿಲ್ದಾಣಗಳ ಮೂಲಕ ಸಂಚರಿಸಲಿದೆ.

ಸೆಪ್ಟೆಂಬರ್ 10 ಮತ್ತು 11, 2024ರಂದು ಹೊರಡುವ ರೈಲು ಸಂಖ್ಯೆ 16593 ಕೆಎಸ್ಆರ್ ಬೆಂಗಳೂರು-ನಾಂದೇಡ್ ಎಕ್ಸ್ ಪ್ರೆಸ್ ರೈಲು ಪೆನುಕೊಂಡ, ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ & ಧರ್ಮಾವರಂ ನಿಲ್ದಾಣಗಳ ಮೂಲಕ ಸಂಚರಿಸಲಿದೆ.

Continue Reading

ಪ್ರಮುಖ ಸುದ್ದಿ

CET/NEET: ಮೊದಲ ಬಾರಿಗೆ ಆನ್ ಲೈನ್ ಪಾವತಿ ಜಾರಿ, ಒಳ್ಳೆಯ ಪ್ರತಿಕ್ರಿಯೆ

CET/NEET: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ (CET/NEET) ಪ್ರವೇಶ ಪ್ರಕ್ರಿಯೆ ಆರಂಭವಾದ ಮೊದಲ ದಿನವೇ (ಶನಿವಾರ) ದಾಖಲೆಯ 16 ಸಾವಿರಕ್ಕೂ ಹೆಚ್ಚು ಮಂದಿ ತಮ್ಮ ಇಚ್ಛೆಯ ಛಾಯ್ಸ್ ದಾಖಲು ಮಾಡಿದ್ದಾರೆ.

VISTARANEWS.COM


on

UPSC
Koo

ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ (CET/NEET) ಪ್ರವೇಶ ಪ್ರಕ್ರಿಯೆ ಆರಂಭವಾದ ಮೊದಲ ದಿನವೇ (ಶನಿವಾರ) ದಾಖಲೆಯ 16 ಸಾವಿರಕ್ಕೂ ಹೆಚ್ಚು ಮಂದಿ ತಮ್ಮ ಇಚ್ಛೆಯ ಛಾಯ್ಸ್ ದಾಖಲು ಮಾಡಿದ್ದಾರೆ. 3000 ಕ್ಕೂ ಹೆಚ್ಚು ಮಂದಿ ಶುಲ್ಕ ಪಾವತಿ ಮಾಡಿ, ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.

ಇದೇ ಮೊದಲ ಬಾರಿಗೆ ಇಂಟರ್ ನೆಟ್ ಬ್ಯಾಂಕಿಂಗ್, ಡೆಬಿಟ್/ಕೆಡಿಟ್ ಕಾರ್ಡ್ ಮೂಲಕ ಶುಲ್ಕ ಪಾವತಿಸುವುದಕ್ಕೂ ಅವಕಾಶ ಕಲ್ಪಿಸಿದ್ದರಿಂದ ಇಡೀ ಪ್ರಕ್ರಿಯೆ ಸರಳವಾಯಿತು. ಇದರಿಂದ ಪೋಷಕರಿಗೂ ಸಂತಸವಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. ಚಲನ್‌ ಡೌನ್‌ ಲೋಡ್ ಮಾಡಿಕೊಂಡು ಬ್ಯಾಂಕಿಗೆ ಹೋಗಿ ಶುಲ್ಕ ಪಾವತಿಸುವ ವ್ಯವಸ್ಥೆ ಕೂಡ‌ ಇದ್ದು, ಅದರ ಮೂಲಕವೂ‌ 2000 ಮಂದಿ (ರಾತ್ರಿ 8ಕ್ಕೆ) ಶುಲ್ಕ ಪಾವತಿಸಿದ್ದಾರೆ. ಆನ್ ಲೈನ್ ಮೂಲಕ ಒಂದು ಸಾವಿರ ಮಂದಿ ಪಾವತಿಸಿದ್ದಾರೆ ಎಂದು ವಿವರಿಸಿದ್ದಾರೆ.

ವೈದ್ಯಕೀಯ ಕೋರ್ಸ್ ಪ್ರವೇಶ ಪಡೆದ ಕೆಲವರು‌ ತಮ್ಮ ಗರಿಷ್ಠ ಮೊತ್ತದ ಶುಲ್ಕ‌ವನ್ನೂ (6.09 ಲಕ್ಷ) ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ‌ ಮಾಡಿದ್ದಾರೆ. ಅಭ್ಯರ್ಥಿಗಳು ಅಥವಾ ಅವರ ಪೋಷಕರು ತಮ್ಮ ಬ್ಯಾಂಕಿನಿಂದ ಪಾವತಿ‌ ಮಾಡುವ ಮಿತಿಯನ್ನು ಹೆಚ್ವಿಸಿಕೊಳ್ಳಲು ಅವಕಾಶ ಇದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು‌ ಹೇಳಿದರು. ಎಚ್ ಡಿಎಫ್ ಸಿ ಬ್ಯಾಂಕ್ ತನ್ನ ಗ್ರಾಹರಿಗೆ ಒಮ್ಮೆಗೇ ಗರಿಷ್ಠ 50 ಲಕ್ಷ ರೂಪಾಯಿ ವರೆಗೆ ವರ್ಗಾಯಿಸಲು ಅವಕಾಶ ನೀಡಿದೆ. ಇದೇ ರೀತಿ ಇತರ ಬ್ಯಾಂಕ್ ಗಳೂ ಈ ನಿಟ್ಟಿನಲ್ಲಿ ಪ್ರಯತ್ನ‌ ನಡೆಸುತ್ತಿದ್ದು ಇದರಿಂದ ಎನ್ಆರ್ ಐ ಮತ್ತು ಮ್ಯಾನೇಜ್ಮೆಂಟ್ ಸೀಟುಗಳ ಶುಲ್ಕವನ್ನು ಒಮ್ನೆಗೆ ಪಾವತಿಸಲು ಅನುಕೂಲವಾಗಲಿದೆ ಎಂದಿದ್ದಾರೆ. ಹೊಸ ವ್ಯವಸ್ಥೆಯಿಂದಾಗಿ ಬ್ಯಾಂಕ್ ರಜೆ ಇತ್ಯಾದಿ ಕಾರಣಕ್ಕೆ ಶುಲ್ಕ ಪಾವತಿ ಮಾಡಲು ಸಾಧ್ಯವಾಗಲಿಲ್ಲ ಎನ್ನುವ ದೂರುಗಳು ಕಡಿಮೆ ಆಗಬಹುದು. ನಾಳೆ ಭಾನುವಾರ ಇದ್ದರೂ ಶುಲ್ಕ ಪಾವತಿಗೆ ಯಾವ ಸಮಸ್ಯೆಯೂ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ. ಯುಪಿಐ ಪಾವತಿ ವ್ಯವಸ್ಥೆ ಮೂಲಕವೂ ಶುಲ್ಕ ಪಾವತಿ ಮಾಡಬಹುದಾಗಿದೆ. ಒಟ್ಟಾರೆ ಪಾವತಿ ವ್ಯವಸ್ಥೆಯನ್ನು ಜನಸ್ನೇಹಿ‌ ಮಾಡಿರುವ ಕಾರಣಕ್ಕೆ ತಾಂತ್ರಿಕ ಸಮಸ್ಯೆಗಳು ಕಡಿಮೆ ಆಗುವ ವಿಶ್ವಾಸವಿದೆ‌ ಎಂದರು.

ಸರ್ವರ್ ಸಮಸ್ಯೆ

ಚಾಯ್ಸ್ ಆಯ್ಕೆ ನಂತರ ಶುಲ್ಕ ಪಾವತಿ ಮಾಡಲು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಒಮ್ಮೆಗೇ ಪ್ರಯತ್ನ ನಡೆಸಿದ್ದರಿಂದ ಕೆಲವೊಮ್ಮೆ ಸರ್ವರ್ ನಿಧಾನ/ ಇನ್ನು ಕೆಲವೊಮ್ಮೆ ಸ್ಥಗಿತಗೊಂಡ ಪ್ರಸಂಗ ಕೂಡ ನಡೆಯಿತು. ತಾಂತ್ರಿಕ ಸಿಬ್ಬಂದಿ ಸರಿ ಮಾಡಿ ನಂತರ ಸಹಜ ಸ್ಥಿತಿಗೆ ತಂದರು.

Continue Reading

ಕ್ರೈಂ

Protest: ಲವ್ ಜಿಹಾದ್ ಆರೋಪ: ಪೊಲೀಸ್ ಠಾಣೆ ಎದುರು ಶ್ರೀರಾಮ ಸೇನೆ ಕಾರ್ಯಕರ್ತರಿಂದ ಪ್ರತಿಭಟನೆ

ಧಾರವಾಡದಲ್ಲಿ ಲವ್ ಜಿಹಾದ್ ಪ್ರಕರಣ ನಡೆದಿದೆ ಎಂದು ಆರೋಪಿಸಿ ಶ್ರೀರಾಮ ಸೇನೆಯ ಕಾರ್ಯಕರ್ತರು ಧಾರವಾಡ ಉಪನಗರ ಠಾಣೆ ಎದುರು ಪ್ರತಿಭಟನೆ (Protest) ನಡೆಸಿದರು. ಘಟನೆಗೆ ಕಾರಣವಾದ ಳಗಾವಿ ಜಿಲ್ಲೆಯ ರಾಮದುರ್ಗದ ಮುನ್ನಾ ಮೇಲೆ ಕಿಡ್ನಾಪ್ ಕೇಸ್ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

VISTARANEWS.COM


on

By

Protest
Koo

ಧಾರವಾಡ: ಲವ್ ಜಿಹಾದ್ (love jihad) ನಡೆದಿದೆ ಎಂದು ಆರೋಪಿಸಿ ಧಾರವಾಡ (Dharwad) ಉಪನಗರ ಠಾಣೆ ಎದುರು ಶ್ರೀರಾಮ‌ ಸೇನೆ (sriram sene) ಸಂಘಟನೆಯ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ (Protest) ನಡೆಸಿದರು. ಜುಲೈ 11 ರಂದು ಆಂಜನೇಯ ನಗರದ ವಿವಾಹಿತ ಮಹಿಳೆಯು ಬೆಳಗಾವಿ ಜಿಲ್ಲೆಯ ರಾಮದುರ್ಗದವನಾಗಿರುವ ಮುನ್ನಾ ಎಂಬಾತನ ಜೊತೆ ಹೋಗಿದ್ದು ಇದನ್ನು ಲವ್ ಜಿಹಾದ್ ಎನ್ನಲಾಗಿದೆ.

ವಿವಾಹಿತ ಮಹಿಳೆ ತಂಗೆಮ್ಮಾ (20) ಬೆಳಗಾವಿ ಜಿಲ್ಲೆಯ ರಾಮದುರ್ಗದವನಾಗಿರುವ ಮುನ್ನಾ ಎಂಬಾತನೊಂದಿಗೆ ಹೋಗಿದ್ದಾಳೆ. ಮೂರು ತಿಂಗಳ ಹಿಂದೆ ಧಾರವಾಡ ಆಂಜನೇಯನಗರದ ತಂಗೆಮ್ಮ ತವರು ಮನೆಯ ಎದುರು ಮನೆಗೆ ಮುನ್ನಾ ಬಾಡಿಗೆಗೆ ಬಂದಿದ್ದ ಎನ್ನಲಾಗಿದೆ.

ಈ ವೇಳೆ ತಂಗೆಮ್ಮಳ‌ ಜೊತೆ ಪರಿಚಯ ಮಾಡಿಕೊಂಡಿದ್ದ ಮುನ್ನಾ ತಂಗೆಮ್ಮಳ‌ ಜೊತೆ ಒಡಿಹೋಗಿದ್ದಾನೆ. ಆತನಿಗೆ ಈಗಾಗಲೇ ಮದುವೆ ಆಗಿದೆ. ಆದರೂ ತಂಗೆಮ್ಮ ಗಂಡ, ಮುನ್ನಾ ಪತ್ನಿ ಮತ್ತು ಮಕ್ಕಳನ್ನ ಬಿಟ್ಟು ಓಡಿ‌ ಹೋಗಿದ್ದಾರೆ.
ಸದ್ಯ ಉಪನಗರ ಪೊಲೀಸರು ತಂಗೆಮ್ಮ ಕಾಣೆಯಾದ ದೂರನ್ನು ದಾಖಲಿಸಿಕೊಂಡಿದ್ದಾರೆ. ಇದು ಅಪಹರಣವಲ್ಲ. ಲವ್ ಜಿಹಾದ್ ಎಂದು ಆರೋಪಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ತಂಗೆಮ್ಮ ಪೋಷಕರನ್ನು ಕರೆ ತಂದು ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.

ಮುನ್ನಾ ಮೇಲೆ ಕಿಡ್ನಾಪ್ ಕೇಸ್ ಹಾಕಬೇಕು, ಒಂದು‌ ವಾರದಲ್ಲಿ ತಂಗೆಮ್ಮ ಹಾಗೂ ಮುನ್ನಾರನ್ನು ಕರೆ ತರುವಂತೆ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ 44 ಸಾವಿರ ಹಿಂದೂ ಯುವತಿಯರು ಕಾಣೆಯಾಗಿದ್ದಾರೆ. ಆದರೆ ಪೊಲೀಸರು ಕೆಲವು ಕಾಣೆಯಾದ ಪ್ರಕರಣ ಮಾತ್ರ ತೆಗೆದುಕೊಂಡಿದ್ದಾರೆ ಎಂದು ಶ್ರೀರಾಮ ಸೇನೆ ಆರೋಪಿಸಿದೆ.

ಇದನ್ನೂ ಓದಿ: Assault Case : ನಡುರಸ್ತೆಯಲ್ಲೇ ಜಾಡಿಸಿ ಒದ್ದು, ಥೂ ಎಂದು ಉಗಿದಾಡಿಕೊಂಡ ಖಾಸಗಿ ಬಸ್‌ಗಳ ಸಿಬ್ಬಂದಿ

ಕಾಣೆಯಾಗಿದ್ದ ನವ ವಿವಾಹಿತೆ ಬಾವಿಯಲ್ಲಿ ಜೀವಂತವಾಗಿ ಪತ್ತೆ!

ಕಾಣೆಯಾಗಿದ್ದ ಮಹಿಳೆ ಬಾವಿಯಲ್ಲಿ ಜೀವಂತವಾಗಿ ಪತ್ತೆಯಾಗಿರುವ ವಿಚಿತ್ರ ಘಟನೆ ಗದಗ ಜಿಲ್ಲೆ ತೋಟಗಂಟಿ ಗ್ರಾಮದಲ್ಲಿ ನಡೆದಿದೆ. ಮೂರು ದಿನ ಬಾವಿಯಲ್ಲಿದ್ದ ಮಹಿಳೆ ಬದುಕಿದ್ದೇ ಪವಾಡ. ಅಸ್ವಸ್ಥಳಾಗಿದ್ದ ಮಹಿಳೆಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಮಹಿಳೆ ಬಾವಿಗೆ‌ ಬಿದ್ದಿದ್ದು ಹೇಗೆ ಎಂಬ ಮಾಹಿತಿ ಕೇಳಿ ಗ್ರಾಮದ ಜನರು ಶಾಕ್‌ ಆಗಿದ್ದಾರೆ.

ಮಹಿಳೆ ಹೇಳುವ ಪ್ರಕಾರ ಯಾರೋ ನನ್ನ ಎಳೆದುಕೊಂಡು ಹೋದರು ಎನ್ನುತ್ತಿದ್ದಾಳೆ.

ಆರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತೆ ಆಗಸ್ಟ್‌ 20 ರಂದು ನಸುಕಿನ ಜಾವ ಮನೆಯ ಅಂಗಳದಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿಗೆ ಬಂದ ಅಪರಿಚಿತ ಮಹಿಳೆಯೊಬ್ಬಳು ಆಕೆಯನ್ನು ಎಳೆದುಕೊಂಡು ಹೋಗಿದ್ದಾಳೆ ಎನ್ನುತ್ತಿದ್ದಾಳೆ.

ನವವಿವಾಹಿತೆಯ ಕುತ್ತಿಗೆ ಭಾಗ ಹಿಡಿದು ಮನೆ ಬಿಟ್ಟು ಬರುವಂತೆ ಬಲವಂತ ಮಾಡಿದ್ದಾಳೆ. ಮಾತ್ರವಲ್ಲದೇ ನನ್ನ ಕೈಬಳೆ, ಕಾಲುಂಗರ ನೀಡುವಂತೆ ಅಪರಿಚಿತ ಮಹಿಳೆ ಒತ್ತಾಯ ಮಾಡಿದ್ದಳು. ಇನ್ನು ನನ್ನ ಕಣ್ಣಿಗೆ ಕಾಣದಂತೆ ಮರೆಯಾಗಿ ಕುತ್ತಿಗೆ ಹಿಡಿದು ಭಯಪಡಿಸಿದ್ದಳಂತೆ.

ಗೋವಿ‌ನ ಜೋಳ ಹೊಲದ ಮೂಲಕ ನನ್ನನ್ನು ಎಳೆದುಕೊಂಡು ಹೋಗಿ ಅನಂತರ ತಾಳಿ ಕೇಳಿ ನನ್ನನ್ನು ಬಾವಿಗೆ ತಳ್ಳಿದ್ದಳು. ಬಾವಿಗೆ ಬಿದ್ದ ಮಾರನೇ ದಿನ ನನಗೆ ಪ್ರಜ್ಞೆ ಬಂದಿತ್ತು. ಆಗ ಎಷ್ಟೇ ಕಿರುಚಿದರೂ ಸಹಾಯಕ್ಕೆ ಯಾರು ಬರಲಿಲ್ಲ.

ಆ. 22 ರಂದು ಧ್ವನಿ ಕೇಳಿದ ಜನರು ನನ್ನ ಕಾಪಾಡಿದ್ದಾರೆ. ಆದರೆ ಯಾರು ನನ್ನ ಹೀಗೆ ಎಳೆದುಕೊಂಡು ಹೋದರು ಎನ್ನುವ ನಿಖರ ಮಾಹಿತಿ ಇಲ್ಲ ಎಂದಿದ್ದಾಳೆ.

ಈ ವಿಚಿತ್ರ ರೀತಿಯ ಘಟನೆಗೆ ಗ್ರಾಮದ ಇತರೆ ಮಹಿಳೆಯರು ಆತಂಕಗೊಂಡಿದ್ದಾರೆ. ನಸುಕಿನ ಜಾವ ಓಡಾಡಲು ಹೆದರುವಂತಾಗಿದೆ. ಸದ್ಯ ಈ ಸಂಬಂಧ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಪೊಲೀಸರನ್ನು ಸಂಪರ್ಕಿಸಿದ್ದರೋ ಇಲ್ಲವೋ ಎನ್ನುವ ಕುರಿತು ಯಾವುದೇ ಮಾಹಿತಿ ಇಲ್ಲ.

Continue Reading
Advertisement
Dina Bhavishya
ಭವಿಷ್ಯ16 ಗಂಟೆಗಳು ago

Dina Bhavishya : ಈ ದಿನ ಹೂಡಿಕೆ ವ್ಯವಹಾರದಿಂದ ದೂರವಿರಿ

Dina bhavishya
ಭವಿಷ್ಯ1 ದಿನ ago

Dina Bhavishya: ಈ ರಾಶಿಯವರಿಗೆ ಉತ್ಸಾಹದ ವಾತಾವರಣ; ಆಪ್ತರೊಂದಿಗೆ ಪ್ರಯಾಣ ಸಾಧ್ಯತೆ

namma Metro
ಬೆಂಗಳೂರು2 ದಿನಗಳು ago

Namma Metro : ನಮ್ಮ ಮೆಟ್ರೋ ಪ್ರಯಾಣಿಕರಿಗಾಗಿ ಝೀರೋ-ಕೆವೈಸಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಲಭ್ಯ

Murder Case
ಬೆಂಗಳೂರು ಗ್ರಾಮಾಂತರ2 ದಿನಗಳು ago

Murder Case: ಆನೇಕಲ್‌ನಲ್ಲಿ ಅಣ್ಣನಿಂದಲೇ ತಮ್ಮನ ಬರ್ಬರ ಹತ್ಯೆ

Dina bhavishya
ಭವಿಷ್ಯ3 ದಿನಗಳು ago

Dina Bhavishya: ವೈವಾಹಿಕ ಜೀವನದಲ್ಲಿ ವಿರಸ ಉಂಟಾಗುವ ಸಾಧ್ಯತೆ; ಮಾತಿನಲ್ಲಿ ಹಿಡಿತವಿರಲಿ

Breast Cancer Awareness Month celebrated through bikethon
ಬೆಂಗಳೂರು3 ದಿನಗಳು ago

Breast cancer: ಬೈಕಥಾನ್‌ ಮೂಲಕ ಗಲ್ಲಿ ಗಲ್ಲಿಯಲ್ಲೂ ಸ್ತನ ಕ್ಯಾನ್ಸರ್‌ ಜಾಗೃತಿ ಮೂಡಿಸಿದ ಬೈಕರ್ಸ್‌ಗಳು

Karnataka Rain
ಮಳೆ3 ದಿನಗಳು ago

Karnataka Rain : ಧಾರಾಕಾರ ಮಳೆಗೆ ಹೊಳೆಯಂತಾದ ಬೆಂಗಳೂರು; ಈ ರಸ್ತೆಯಲ್ಲಿ ಓಡಾಡುವ ಮುನ್ನ ಹುಷಾರ್‌!

Karnataka Rain
ಮಳೆ3 ದಿನಗಳು ago

Karnataka Rain :ಸತತ ಮಳೆಗೆ ಬೆಂಗಳೂರು ಥಂಡಾ; ಶಾಲೆಗಳಿಗೆ ಇಂದು ರಜೆ ಘೋಷಣೆ

Dina Bhavishya
ಭವಿಷ್ಯ4 ದಿನಗಳು ago

Dina Bhavishya : ಹೂಡಿಕೆ ವ್ಯವಹಾರಗಳನ್ನು ಈ ದಿನ ಮಾಡುವುದು ಬೇಡವೇ ಬೇಡ

Karnataka Rain
ಮಳೆ4 ದಿನಗಳು ago

Karnataka Rain: ತೊಯ್ದು ತೊಪ್ಪೆಯಾದ ಚಿಕ್ಕಮಗಳೂರು, ಶಿವಮೊಗ್ಗ; ನಾಳೆಗೂ ಭಾರಿ ಮಳೆ ಎಚ್ಚರಿಕೆ

galipata neetu
ಕಿರುತೆರೆ11 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ3 ವಾರಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ3 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌