ಆಗಸ್ಟ್ 5ರಿಂದ ಶ್ರಾವಣ ಮಾಸ ಪ್ರಾರಂಭವಾಗಿದೆ. ಸೆಪ್ಟೆಂಬರ್ 3, 2024 ಮಂಗಳವಾರದ ಅಮಾವಾಸ್ಯೆಯ ತಿಥಿಯಂದು ಶ್ರಾವಣ ಮಾಸ ಕೊನೆಗೊಳ್ಳುತ್ತದೆ. ಈ ಮಾಸ ಹಿಂದೂಗಳಿಗೆ ಬಹಳ ಪವಿತ್ರವಾದ ಮತ್ತು ವಿಶೇಷವಾದ ಮಾಸವಾಗಿದೆ. ಈ ಮಾಸದಲ್ಲಿ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ಶ್ರಾವಣ ಮಾಸ ಶಿವನಿಗೆ ಪ್ರಿಯವಾದ ಮಾಸ. ಹಾಗಾಗಿ ಈ ಮಾಸದಲ್ಲಿ ಶಿವನ ಆರಾಧನೆಗೆ ಹೆಚ್ಚು ಮಾಡುತ್ತಾರೆ. ಶ್ರಾವಣ ಮಾಸದಲ್ಲಿ ಬರುವ ಪ್ರತಿವಾರಗಳಿಗೆ ವಿಶೇಷ ಮಹತ್ವವಿದೆ. ಹಾಗಾಗಿ ಶ್ರಾವಣ ಮಾಸದಲ್ಲಿ ಬರುವ ಪ್ರತಿ ಸೋಮವಾರವನ್ನು (Shravan 2024) ಶ್ರಾವಣ ಸೋಮವಾರ ಎಂದು ಕರೆಯುತ್ತಾರೆ. ಈ ದಿನ ಶಿವನ ಆರಾಧನೆಯನ್ನು ನಿಯಮದ ಪ್ರಕಾರ ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.
ಶ್ರಾವಣ ಮಾಸದ ಸೋಮವಾರದಂದು ಮನೆಯನ್ನು ಸ್ವಚ್ಛಗೊಳಿಸಿ ಮಡಿಯುಟ್ಟು ಮನೆಯ ದೇವರ ಕೋಣೆಯಲ್ಲಿ ರಂಗೋಲಿಯನ್ನು ಬಿಡಿಸಿ ಅದರ ಮೇಲೆ ದೀಪವನ್ನು ಹಚ್ಚಿ ಅದರಲ್ಲಿ ಒಂದು ತಟ್ಟೆಯಲ್ಲಿ ಬಿಲ್ವಪತ್ರೆಯ ಮೇಲೆ ಶಿವಲಿಂಗವನ್ನು ಇರಿಸಿ ಮೊದಲಿಗೆ “ಓಂ ನಮಃ ಶಿವಾಯ” ಹೇಳುತ್ತ ಪಂಚಾಮೃತದಿಂದ ಅಭಿಷೇಕ ಮಾಡಬೇಕು.
ವಿಗ್ರಹ ಇಲ್ಲದವರು ಶಿವನ ಪೋಟೊಗೆ ಬಿಲ್ವಪತ್ರೆ ಅರ್ಪಿಸಿ ಪೂಜೆ ಮಾಡಬಹುದು. ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ನಿಮ್ಮ ಸಮಸ್ಯೆಗಳು ಬಹಳ ಬೇಗನೆ ನಿವಾರಣೆಯಾಗಿ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ. ಹಾಗೇ ಶಿವನಿಗೆ ಪ್ರಿಯವಾದ ಹೂಗಳಿಂದ ಅಲಂಕಾರ ಮಾಡಿ. ಶಿವನಿಗೆ ಹಾಲು ಹಣ್ಣನ್ನು ಅರ್ಪಿಸಿ. ಹಾಗೇ ಬಿಲ್ವಪತ್ರೆಯ ಮೇಲೆ ಅಕ್ಕಿಹಿಟ್ಟಿನ ದೀಪವನ್ನು ಇರಿಸಿ ದೀಪಾರಾಧನೆ ಮಾಡಿದರೆ ಒಳ್ಳೆಯದು. ದೂಪವನ್ನು ಹಚ್ಚಿ ಅರ್ಚನೆ ಮಾಡಿ “ಓಂ ನಮಃ ಶಿವಾಯ” ಮಂತ್ರವನ್ನು 108 ಬಾರಿ ಪಠಿಸಿದರೆ ಶುಭ ಫಲ ದೊರೆಯುತ್ತದೆ.
ಹಾಗೆಯೇ ಶ್ರಾವಣ ಮಾಸದಲ್ಲಿ ಶಿವನು ಹಾಲಾಹಲ ವಿಷವನ್ನು ಸೇವಿಸಿದ ಕಾರಣ ಆತನ ದೇಹವನ್ನು ತಂಪಾಗಿಸುವಂತಹ ಅಭಿಷೇಕಗಳನ್ನು ಮಾಡಿದರೆ ಶಿವ ಬೇಗನೆ ಒಲಿಯುತ್ತಾನೆ ಎಂಬ ಮಾತಿದೆ. ಹಾಗಾಗಿ ಮನೆಯಲ್ಲಿಯೇ ಶಿವನ ವಿಗ್ರಹಕ್ಕೆ ಅಭಿಷೇಕ ಮಾಡಿ. ಇಲ್ಲವಾದರೆ ಶ್ರಾವಣ ಸೋಮವಾರದಂದು ಶಿವನ ದೇವಾಲಯಕ್ಕೆ ಹೋಗಿ ವಿವಿಧ ರೀತಿಯ ಅಭಿಷೇಕ ಮಾಡಿಸಿದರೆ ಜೀವನದಲ್ಲಿ ಏಳಿಗೆ ಕಾಣಬಹುದು.
ಶ್ರಾವಣ ಸೋಮವಾರದಂದು ಶಿವನಿಗೆ ಯಾವ ವಸ್ತುಗಳನ್ನು ಅರ್ಪಿಸಬೇಕು? ಯಾವುದನ್ನು ಅರ್ಪಿಸಬಾರದು?
ಶ್ರಾವಣ ಸೋಮವಾರ ಶಿವನಿಗೆ ಹಸಿಹಾಲು, ಗಂಗಾಜಲ, ಬಿಲ್ವಪತ್ರೆ, ಧಾತುರ, ಸಿಹಿತಿಂಡಿಗಳನ್ನು ಅರ್ಪಿಸಿದರೆ ಒಳ್ಳೆಯದು. ಇದರಿಂದ ಶಿವ ಪ್ರಸನ್ನನಾಗಿ ಬೇಡಿದ ವರ ನೀಡುತ್ತಾನೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ: ಶ್ರಾವಣ ಶನಿವಾರದ ವಿಶೇಷ ಏನು? ಇದನ್ನು ಹೇಗೆ ಆಚರಿಸಿದರೆ ದೋಷ ನಿವಾರಣೆಯಾಗುತ್ತದೆ?
ಆದರೆ ಶಿವನ ಪೂಜೆಯ ವೇಳೆ ತುಳಸಿ ದಳ, ಚಂಪಾ ಅಥವಾ ಕೇದಿಗೆ ಹೂ, ಕತ್ತರಿಸಲ್ಪಟ್ಟ ಮತ್ತು ಕೀಟಗಳಿಂದ ಹಾನಿಗೊಳದಗಾದ ಬಿಲ್ವಪತ್ರೆ, ಅರಿಶಿನ, ಕುಂಕುಮ, ಎಳ್ಳು, ಮುರಿದ ಅಕ್ಕಿ, ಶಂಖನಾದ, ಕೆಂಪು ಹೂಗಳು, ಕಂಚಿನ ಪಾತ್ರೆಯಲ್ಲಿ ಹಾಲನ್ನು ಅರ್ಪಿಸಬೇಡಿ. ಇದು ಶಿವನಿಗೆ ಕೋಪ ತರಿಸುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ.