Site icon Vistara News

Varamahalakshmi Festival 2024 : ವರಮಹಾಲಕ್ಷ್ಮಿ ಹಬ್ಬದ ದಿನ ಸುಲಭವಾಗಿ ಮಾಡಬಹುದಾದ ರುಚಿಕರ ಖಾದ್ಯಗಳಿವು; ವಿಡಿಯೊಗಳಿವೆ

Varamahalakshmi Festival 2024


ವರಮಹಾಲಕ್ಷ್ಮಿ ಹಬ್ಬ ಶ್ರಾವಣ ಮಾಸದ 2ನೇ ಶುಕ್ರವಾದಂದು ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ. ಇದು ಮಹಿಳೆಯರಿಗೆ ಅತ್ಯಂತ ಪ್ರಿಯವಾದ ಹಬ್ಬವಾಗಿದೆ. ವರಮಹಾಲಕ್ಷ್ಮಿ ಎಂದರೆ ನೀವು ಈ ದಿನ ಲಕ್ಷ್ಮಿಯನ್ನು ಭಕ್ತಿಯಿಂದ ಪೂಜಿಸಿದರೆ ಆಕೆ ನಿಮಗೆ ವರಗಳನ್ನು ಕರುಣಿಸುತ್ತಾಳೆ ಎಂಬ ನಂಬಿಕೆ ಇದೆ. ಈ ವರ್ಷ ಈ ವರಮಹಾಲಕ್ಷ್ಮಿ ಹಬ್ಬ (Varamahalakshmi Festival 2024 )ಆಗಸ್ಟ್ 16ರ ಶುಕ್ರವಾರದಂದು ಬಂದಿದೆ. ದಕ್ಷಿಣ ಭಾರತದ ಹೆಚ್ಚಿನ ವಿವಾಹಿತ ಮಹಿಳೆಯರು ಸಮೃದ್ಧಿಗಾಗಿ ಮತ್ತು ತಮ್ಮ ಕುಟುಂಬಗಳ ಯೋಗಕ್ಷೇಮಕ್ಕಾಗಿ ಈ ಪೂಜೆಯನ್ನು ಶ್ರದ್ಧೆ ಭಕ್ತೆಯಿಂದ ಮಾಡುತ್ತಾರೆ. ಈ ದಿನ ವಿಶೇಷ ಭಕ್ಷ್ಯಗಳನ್ನು ತಯಾರಿಸಿ ದೇವಿಗೆ ನೈವೇದ್ಯ ಇಡುತ್ತಾರೆ. ಹಾಗಾಗಿ ಆ ದಿನ ತಯಾರಿಸಬಹುದಾದ ಸುಲಭ ಹಾಗೂ ವಿಶೇಷ ಪಾಕವಿಧಾನಗಳ ವಿವರ ಇಲ್ಲಿದೆ.

Varamahalakshmi Festival 2024

ಒಬ್ಬಟ್ಟು

ಒಬ್ಬಟ್ಟು ಒಂದು ಪ್ರಸಿದ್ಧ ಸಿಹಿತಿಂಡಿ. ಒಬ್ಬಟ್ಟು ಬೆಲ್ಲದಿಂದ ತಯಾರಿಸುವ ಸಿಹಿತಿಂಡಿಯಾಗಿದೆ. ಇದು ಲಕ್ಷ್ಮಿ ದೇವಿಗೆ ಪ್ರಿಯವಾದ ನೈವೇದ್ಯವಾಗಿದೆ ಮತ್ತು ಈ ಹಬ್ಬವನ್ನು ಆಚರಿಸುವ ಎಲ್ಲಾ ಮನೆಗಳಲ್ಲಿ ಇದನ್ನು ಸಾಮಾನ್ಯವಾಗಿ ತಯಾರಿಸುತ್ತಾರೆ.

Varamahalakshmi Festival 2024

ರವಾ ಉಂಡೆ

ವರ ಮಹಾಲಕ್ಷ್ಮಿ ಹಬ್ಬಕ್ಕೆ ತಯಾರಿಸಲಾಗುವ ಅತ್ಯಂತ ರುಚಿಕರವಾದ ಪಾಕವಿಧಾನವೆಂದರೆ ಅದು ರವಾ ಉಂಡೆ. ಇದನ್ನು ತಯಾರಿಸುವುದು ಬಹಳ ಸುಲಭ ಮತ್ತು ಇದನ್ನು ಹೆಚ್ಚಿನವರು ದೇವಿಯ ನೈವೇದ್ಯಕ್ಕೆ ಇಡುತ್ತಾರೆ.

Varamahalakshmi Festival 2024

ಶಾವಿಗೆ ಪಾಯಸ

ಪಾಯಸವು ದಕ್ಷಿಣ ಭಾರತದ ಸಾಂಪ್ರದಾಯಿಕ ಸಿಹಿ ತಿಂಡಿಯಾಗಿದೆ. ಇದನ್ನು ಹಾಲಿನಿಂದ ತಯಾರಿಸಲಾಗುತ್ತದೆ. ವರಮಹಾಲಕ್ಷ್ಮಿಗೆ ಪಾಯಸ ಬಹಳ ಇಷ್ಟವಾದ ಸಿಹಿಯಾಗಿದೆ. ಶಾವಿಗೆ ಪಾಯಸವನ್ನು ಬಹಳ ಸುಲಭವಾಗಿ ಕೇವಲ 20 ನಿಮಿಷಗಳಲ್ಲಿ ತಯಾರಿಸಬಹುದು.

Varamahalakshmi Festival 2024

ತಂಬಿಟ್ಟು

ನೈವೇದ್ಯಕ್ಕಾಗಿ ಲಕ್ಷ್ಮಿ ದೇವಿಗೆ ಬಡಿಸಲಾಗುವ ಮತ್ತೊಂದು ಸಿಹಿತಿಂಡಿ ತಂಬಿಟ್ಟು. ಇದನ್ನು ಸಾಮಾನ್ಯವಾಗಿ ಅಕ್ಕಿ ಹಿಟ್ಟು ಮತ್ತು ತುಪ್ಪವನ್ನು ಬಳಸಿ ತಯಾರಿಸಲಾಗುತ್ತದೆ. ಎಲ್ಲಾ ದೇವರ ಪೂಜೆಯಲ್ಲಿ ಇದನ್ನು ಬಳಸುತ್ತಾರೆ.

Varamahalakshmi Festival 2024

ಲೆಮನ್ ರೈಸ್

ನಿಂಬೆ, ತೆಂಗಿನಕಾಯಿ, ಕಡಲೆಕಾಯಿ ಮತ್ತು ಅಕ್ಕಿಯನ್ನು ಬಳಸಿಕೊಂಡು ಲೆಮನ್ ರೈಸ್ ಅನ್ನು ತಯಾರಿಸಲಾಗುತ್ತದೆ. ಇದನ್ನು ತಯಾರಿಸುವುದು ತುಂಬಾ ಸುಲಭ ಮತ್ತು ವರಮಹಾಲಕ್ಷ್ಮಿಹಬ್ಬವನ್ನು ಆಚರಿಸುವವವರು ಇದನ್ನು ಯಾವಾಗಲೂ ತಯಾರಿಸುತ್ತಾರೆ.

Varamahalakshmi Festival 2024

ಕೋಸಂಬರಿ

ವರಮಹಾಲಕ್ಷ್ಮಿ ಹಬ್ಬದ ಪ್ರಮುಖ ಪಾಕವಿಧಾನವೆಂದರೆ ಕೋಸಂಬರಿ. ಇದನ್ನು ಹೆಸರು ಬೇಳೆ ಮತ್ತು ಸೌತೆಕಾಯಿ ಬಳಸಿ ತಯಾರಿಸಲಾಗುತ್ತದೆ. ಇದು ಸೈಡ್ ಡಿಶ್ ಆಗಿದ್ದರೂ, ಕೋಸಂಬರಿ ಇಲ್ಲದೆ ಹಬ್ಬದ ಊಟವು ಪೂರ್ಣಗೊಳ್ಳುವುದಿಲ್ಲ.

Varamahalakshmi Festival 2024

ಅಂಬೋಡೆ

ಹಬ್ಬದಲ್ಲಿ ಮಸಾಲೆಯುಕ್ತ ರುಚಿಯನ್ನು ಸೇರಿಸಲು ಅಂಬೋಡೆಯನ್ನು ತಯಾರಿಸಬಹುದು. ಇದನ್ನು ಬೇಳೆಕಾಳುಗಳು, ಹಸಿರು ಮೆಣಸಿನಕಾಯಿ, ಪುದಿನಾ ಬಳಸಿ ತಯಾರಿಸಲಾಗುತ್ತದೆ. ಇದು ನಿಮಗೆ ರುಚಿಕರವಾದ ಮಸಾಲೆ ರುಚಿಯನ್ನು ನೀಡುತ್ತದೆ.

Varamahalakshmi Festival 2024

ತರಕಾರಿ ಸಾಂಬಾರ್

ಇದು ದಕ್ಷಿಣ ಭಾರತದಲ್ಲಿ ಬೇಳೆ ಬಳಸಿ ತಯಾರಿಸುವ ಪ್ರಸಿದ್ಧವಾದ ಖಾದ್ಯವಾಗಿದೆ. ನೀವು ಈ ಹಬ್ಬಕ್ಕೆ ಭೋಜನಕ್ಕೆ ವಿವಿಧ ತರಕಾರಿಗಳು ಮತ್ತು ಮಸಾಲೆಗಳೊಂದಿಗೆ ಸಾಂಬಾರ್ ತಯಾರಿಸಬಹುದು. ಇದನ್ನು ಬಿಸಿ ಅನ್ನ ಮತ್ತು ತುಪ್ಪದೊಂದಿಗೆ ಬಡಿಸಿದರೆ ಊಟದ ರುಚಿ ಹೆಚ್ಚಾಗುತ್ತದೆ.

Varamahalakshmi Festival 2024

ರಸಂ

ವರಮಹಾಲಕ್ಷ್ಮಿ ಹಬ್ಬದ ಊಟಕ್ಕೆ ರಸಂ ಅನ್ನು ತಯಾರಿಸುತ್ತಾರೆ. ರಸಂ ಅನ್ನು ಟೊಮೆಟೊ, ಹುಣಸೆ ಮತ್ತು ತೆಂಗಿನಕಾಯಿಯಿಂದ ತಯಾರಿಸಲಾಗುತ್ತದೆ. ಈ ರಸಂ ಅನ್ನು ಬಿಸಿ ಅನ್ನ ಮತ್ತು ಪಲ್ಯದ ಜೊತೆಗೆ ತಿಂದರೆ ಹಬ್ಬದ ಸಡಗರ ಹೆಚ್ಚಾಗುತ್ತದೆ.

Varamahalakshmi Festival 2024

ಮಜ್ಜಿಗೆ ಹುಳಿ

ವರಮಹಾಲಕ್ಷ್ಮಿ ಹಬ್ಬದಂದು ವಿಶೇಷ ಮಜ್ಜಿಗೆ ಹುಳಿ (ಮೊಸರು ಸಾಂಬಾರ್) ತಯಾರಿಸಲಾಗುತ್ತದೆ. ಈ ಸಾಂಬಾರ್ ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಉತ್ತಮ ರುಚಿಯನ್ನು ನೀಡುತ್ತದೆ. ಇದನ್ನು ಹಸಿ ಮೆಣಸಿನಕಾಯಿ, ತೆಂಗಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಕಡಲೆ ಬಳಸಿ ತಯಾರಿಸಲಾಗುತ್ತದೆ.

ಇದನ್ನೂ ಓದಿ:Shravan 2024: ಶ್ರಾವಣ ಶುಕ್ರವಾರದ ವಿಶೇಷವೇನು? ಅಂದು ಏನು ಮಾಡಬೇಕು? ಏನು ಮಾಡಬಾರದು?

ಈ ರೀತಿಯ ಪಾಕವಿಧಾನಗಳನ್ನು ವರಮಹಾಲಕ್ಷ್ಮಿ ಹಬ್ಬಕ್ಕೆ ತಯಾರಿಸಿ ಅತಿಥಿಗಳಿಗೆ ಬಡಿಸಿದರೆ ಹಬ್ಬದ ಸಂಭ್ರಮ ಹೆಚ್ಚುವುದರಲ್ಲಿ ಸಂದೇಹವೇ ಇಲ್ಲ.

Exit mobile version