Site icon Vistara News

Viral News: ಮುಖಕ್ಕೆ ಎಂಜಲು ಉಗಿದು ಫೇಸ್ ಮಸಾಜ್ ಮಾಡಿದ ಅಮ್ಜದ್ ಅರೆಸ್ಟ್!

Viral News

ಹುಡುಗಿಯರ ಹಾಗೇ ಹುಡುಗರಿಗೂ ಸುಂದರವಾಗಿ ಕಾಣಬೇಕೆಂಬ ಆಸೆ ಇರುತ್ತದೆ. ಹಾಗಾಗಿ ಹುಡುಗಿಯರು ಬ್ಯೂಟಿ ಪಾರ್ಲರ್ ನಲ್ಲಿ ಫೇಸ್ ಮಸಾಜ್, ಫೇಶಿಯಲ್ ಮಾಡಿಸಿಕೊಂಡ ಹಾಗೆ ಹುಡುಗರು ಕ್ಷೌರದ ಅಂಗಡಿಯಲ್ಲಿ ಫೇಸ್ ಮಸಾಜ್, ಫೇಶಿಯಲ್ ಮಾಡಿಸಿಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ವ್ಯಕ್ತಿಯೊಬ್ಬ ಕ್ಷೌರದಂಗಡಿಯಲ್ಲಿ ಫೇಸ್ ಮಸಾಜ್ ಮಾಡಿಕೊಳ್ಳಲು ಹೋಗಿ ಅವಾಂತರ ಮಾಡಿಕೊಂಡ ವಿಡಿಯೊವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ (Viral News) ಆಗಿದೆ.

ಫೇಸ್‌ ಮಸಾಜ್‌ ಮಾಡಿಕೊಂಡರೆ ಮುಖದಲ್ಲಿ ರಕ್ತಸಂಚಲನ ಚೆನ್ನಾಗಿ ಆಗುತ್ತದೆ. ದಣಿದ ಮುಖಕ್ಕೆ ರಿಲೀಫ್‌ ಆಗುತ್ತೆ ಎಂದು ಕೆಲವರು ದುಡ್ಡು ಸುರಿದು ಮಸಾಜ್‌ ಮಾಡಿಕೊಳ್ಳುತ್ತಾರೆ. ಹೀಗೆ ಉತ್ತರ ಪ್ರದೇಶದ ಶಾಮ್ಲಿ ಎಂಬಲ್ಲಿನ ಕ್ಷೌರದಂಗಡಿಗೆ ವ್ಯಕ್ತಿಯೊಬ್ಬ ಫೇಸ್ ಮಸಾಜ್ ಮಾಡಿಕೊಳ್ಳಲು ಹೋಗಿದ್ದಾನೆ. ಆದರೆ ಕ್ಷೌರದಂಗಡಿಯವನು ಕ್ರೀಂ, ಲೋಷನ್‌ಗಳನ್ನು ಹಚ್ಚಿ ಮುಖಕ್ಕೆ ಮಸಾಜ್‌ ಮಾಡುವುದರ ಬದಲು ಎಂಜಲು ಉಗಿದು ಮಸಾಜ್‌ ಮಾಡಿದ್ದಾನಂತೆ. . ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆರೋಪಿ ಅಮ್ಜದ್ ಎಂಬುದಾಗಿ ತಿಳಿದುಬಂದಿದೆ. @TruestoryUP ಎಂಬ ಹೆಸರಿನ ಖಾತೆಯಲ್ಲಿ ಈ ವಿಡಿಯೊ ಹಂಚಿಕೊಳ್ಳಲಾಗಿದೆ. ಈತನ ಘೋರ ಕೃತ್ಯದ ದೃಶ್ಯ ವೈರಲ್ ಆಗಿದ್ದು, ಈತನ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಆರೋಪಿ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:James Wan: ಜೇಮ್ಸ್‌ ವಾನ್‌ ನಿರ್ದೇಶನದ ಈ 6 ಥ್ರಿಲ್ಲರ್‌ ಚಿತ್ರಗಳನ್ನು ತಪ್ಪದೇ ನೋಡಿ!

ಜೂನ್ 8ರಂದು ಈ ವಿಡಿಯೊ ಹಂಚಿಕೊಂಡಿದ್ದು, ಇದನ್ನು16 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ ಮತ್ತು ಈತನ ಕೃತ್ಯದ ವಿರುದ್ಧ ವೀಕ್ಷಕರು ಪ್ರತಿಕ್ರಿಯೆ ನೀಡಿದ್ದಾರೆ.

Exit mobile version