ಗುಜರಾತ್ : ಕೆಲವರು ದುಡಿಯುವುದರ ಬದಲು ಸುಲಭವಾಗಿ ಹಣ ಮಾಡುವ ದಾರಿಯನ್ನೇ ನೋಡುತ್ತಿರುತ್ತಾರೆ. ಅದರಲ್ಲಿ ಮುಖ್ಯವಾಗಿ ಕಳ್ಳತನ. ಆದರೆ ಇಲ್ಲೊಬ್ಬ ಕಿಲಾಡಿ ಕಳ್ಳನಿದ್ದಾನೆ. ಈ ಕಳ್ಳ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತ ಕಳ್ಳತನ (Rich Thief )ಮಾಡಲು ಐಷಾರಾಮಿ ಹೋಟೆಲ್‌ಗಳಲ್ಲಿ ಉಳಿಯುತ್ತಿದ್ದ, ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಹಾಗೂ ಕ್ಯಾಬ್ ಬುಕ್ ಮಾಡುತ್ತಿದ. ಇನ್ನು ಈತ ವಾಸವಿರುವ ಫ್ಲ್ಯಾಟ್ ಬಗ್ಗೆ ಕೇಳಿದ್ರೆ ಆಕ್ ಆಗ್ತೀರಾ. ಈತನ ಹೈ ಫೈ ಲೈಫ್ ಬಗ್ಗೆ ಕೇಳಿ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ(Viral News).
ಈತನ ಹೆಸರು ರೋಹಿತ್ ಸೋಲಂಕಿ ಎಂಬುದಾಗಿ ತಿಳಿದುಬಂದಿದೆ. ಈತ ಒಬ್ಬ ಅನುಭವಿ ಕಳ್ಳನಾಗಿದ್ದು, ಹಲವಾರು ವರ್ಷಗಳಿಂದ ಕಳ್ಳತನ ಮಾಡಿ ಲಕ್ಷಗಟ್ಟಲೆ ಹಣ ಸಂಪಾದಿಸಿ ಶ್ರೀಮಂತನಾಗಿದ್ದಾನೆ ಎನ್ನಲಾಗಿದೆ. ಮುಂಬೈನ ಮುಂಬ್ರಾ ಪ್ರದೇಶದಲ್ಲಿ ಸೋಲಂಕಿ 1 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಐಷಾರಾಮಿ ಫ್ಲ್ಯಾಟ್‍ನಲ್ಲಿ ವಾಸಿಸುತ್ತಿದ್ದ ಮತ್ತು ಆಡಿ (Audi)ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಂಬ ಮಾಹಿತಿ ತಿಳಿದುಬಂದಿದೆ.
ಕಳೆದ ತಿಂಗಳು ರೋಹಿತ್ ಸೋಲಂಕಿ ವಾಪಿಯಲ್ಲಿ 1 ಲಕ್ಷ ರೂ.ಗಳ ಕಳ್ಳತನ ಮಾಡಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದನು. ಆತ ಈಗಾಗಲೇ 19 ದರೋಡೆಗಳನ್ನು ಮಾಡಿದ್ದು, ಇವುಗಳಲ್ಲಿ ವಲ್ಸಾದ್‍ನಲ್ಲಿ ಮೂರು, ಸೂರತ್‍ನಲ್ಲಿ ಒಂದು, ಪೋರ್ಬಂದರ್ ನಲ್ಲಿ ಒಂದು, ಸೆಲ್ವಾಲ್‍ನಲ್ಲಿ ಒಂದು, ತೆಲಂಗಾಣದಲ್ಲಿ ಎರಡು, ಆಂಧ್ರಪ್ರದೇಶದಲ್ಲಿ ಎರಡು, ಮಧ್ಯಪ್ರದೇಶದಲ್ಲಿ ಎರಡು ಮತ್ತು ಮಹಾರಾಷ್ಟ್ರದಲ್ಲಿ ಒಂದು ಹಾಗೇ ಲಂಚದ ಮೂಲಕ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಇನ್ನೂ ಆರು ಕಳ್ಳತನಗಳನ್ನು ಮಾಡಿರುವುದಾಗಿ ಅವನು ಒಪ್ಪಿಕೊಂಡಿದ್ದಾನೆ. ಹಾಗಾಗಿ ಹಲವು ರಾಜ್ಯಗಳಲ್ಲಿ ಕಳ್ಳತನ ಮಾಡಿದ ಇತಿಹಾಸ ಈತನಿಗಿದೆ ಎನ್ನಲಾಗಿದೆ.
ಅಲ್ಲದೇ ಈತ ಮುಸ್ಲಿಂ ಮಹಿಳೆಯನ್ನು ಮದುವೆಯಾಗಲು ಸೋಲಂಕಿ ಎಂಬ ತನ್ನ ಹೆಸರನ್ನು ಅರ್ಹಾನ್ ಎಂದು ಬದಲಾಯಿಸಿಕೊಂಡಿದ್ದಾನೆ ಎಂದು ಪೊಲೀಸರಿಗೆ ತಿಳಿದುಬಂದಿದೆ. ಹಾಗೇ ಈತ ಕಳ್ಳತನಗಳನ್ನು ಮಾಡಲು ಹಗಲಿನಲ್ಲಿ ಯೋಜನೆ ನಡೆಸುತ್ತಿದ್ದನು. ಮತ್ತು ಕಳ್ಳತನ ಮಾಡಲು ಐಷಾರಾಮಿ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದನು, ಅಲ್ಲದೇ ಕೆಲವೊಮ್ಮೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಮತ್ತು ಹಗಲಿನಲ್ಲಿ ಹೋಟೆಲ್ ಕ್ಯಾಬ್ ಗಳನ್ನು ಕಾಯ್ದಿರಿಸುತ್ತಿದ್ದನು ಎಂಬುದಾಗಿ ತಿಳಿದುಬಂದಿದೆ.
ಇದನ್ನೂ ಓದಿ: ಮೆಟ್ರೋದಲ್ಲಿ ಕೋತಿ ಚೇಷ್ಟೆಗೆ ಕೊನೆಯೇ ಇಲ್ಲ! ಈ ಮಂಗ್ಯಾನ ಡ್ಯಾನ್ಸ್ ನೋಡಿ!
ಅಲ್ಲದೇ ಈತ ಮಾದಕವಸ್ತುಗಳ ವ್ಯಸನಿಯಾಗಿದ್ದು, ಅದಕ್ಕಾಗಿ ತಿಂಗಳಿಗೆ 1.50 ಲಕ್ಷ ರೂ.ಗಳನ್ನು ಖರ್ಚು ಮಾಡುತ್ತಿದ್ದ ಮತ್ತು ಈತ ಮುಂಬೈನ ಡ್ಯಾನ್ಸ್ ಬಾರ್ ಮತ್ತು ನೈಟ್‍ಕ್ಲಬ್‌ಗಳಲ್ಲಿ ಪಾರ್ಟಿ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.