ಇತ್ತೀಚಿನ ದಿನಗಳಲ್ಲಿ ಜನರು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಲು, ಹೆಚ್ಚು ಫಾಲೋವರ್ಸ್ ಅನ್ನು ಪಡೆಯಲು ಹಲವಾರು ಸರ್ಕಸ್‌ಗಳನ್ನು ಮಾಡುತ್ತಾರೆ. ಅದಕ್ಕಾಗಿ ಅಪಾಯಕಾರಿ ರೀಲ್ಸ್ ಮಾಡುವುದು, ಸ್ಟಂಟ್ ಮಾಡುವುದು ಮುಂತಾದವುಗಳನ್ನು ಮಾಡುತ್ತಿರುತ್ತಾರೆ. ಈ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದರೂ ಕೂಡ ಜನರು ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳುವಂತಹ ಕೆಲಸ ಬಿಟ್ಟಿಲ್ಲ. ಇದೀಗ ವ್ಯಕ್ತಿಯೊಬ್ಬ ಬೈಕ್‌ನಿಂದ ಮೆಟ್ಟಿಲು ಹತ್ತುವ ದುಸ್ಸಾಹಸ ಮಾಡಿದ್ದು, ಈ ವಿಡಿಯೊ ವೈರಲ್ (Viral Video) ಆಗಿದೆ.
ಈ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಎತ್ತರವಾಗಿರುವ ಮೆಟ್ಟಿಲುಗಳನ್ನು ತಮ್ಮ ಬೈಕ್ ಮೂಲಕ ಹತ್ತುತ್ತಿರುವುದು ಕಂಡುಬಂದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೊ ನೋಡಲು ರೋಮಾಂಚನಕಾರಿಯಾಗಿದ್ದು, ನೋಡುಗರನ್ನು ಬೆರಗುಗೊಳಿಸುವುದಂತು ಸತ್ಯ. ಆದರೆ ಈ ಸ್ಟಂಟ್ ಅಪಾಯಕಾರಿಯಾಗಿದ್ದು, ಒಂದು ವೇಳೆ ಎಡವಿ ಬಿದ್ದರೆ ಸಾವಿಗೆ ಕಾರಣವಾಗಬಹುದು. ಇದನ್ನು ಸ್ಟಂಟ್ ಮಾಡುವಲ್ಲಿ ಪರಿಣತರು ಮಾತ್ರ ಮಾಡಬಹುದು ಎಂಬುದನ್ನು ವೀಕ್ಷಕರು ತಿಳಿದಿರಬೇಕು.
ಈ ಬೈಕ್ ಸವಾರಿ ವಿಡಿಯೊವನ್ನು ಲೂಯಿಜಿನ್ಹೋ ಫೆರೆರಾ (@luizinhoferreiraa) ಎಂಬುವವರು ತಮ್ಮ ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಕೆಲವೇ ದಿನಗಳಲ್ಲಿ ವೈರಲ್ ಆಗಿದ್ದು, 2.3 ಕೋಟಿಗೂ ಹೆಚ್ಚು ವೀವ್ಸ್‌ಗಳನ್ನು ಗಳಿಸಿದೆ. ಈ ಪೋಸ್ಟ್ ಅನ್ನು 9.8 ಲಕ್ಷಕ್ಕೂ ಹೆಚ್ಚು ವೀಕ್ಷಕರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ವೀಡಿಯೊಗೆ ಕಾಮೆಂಟ್ ಮಾಡಿದ್ದಾರೆ. ಮೆಟ್ಟಿಲುಗಳ ಮೇಲೆ ವ್ಯಕ್ತಿ ಬಹಳ ಸುಲಭವಾಗಿ ಬೈಕ್ ಸವಾರಿ ಮಾಡುತ್ತಿರುವುದನ್ನು ನೋಡಿದ ನೆಟ್ಟಿಗರು ಆಶ್ಚರ್ಯಚಕಿತರಾದರು. ಯಮಹಾ ಕಂಪನಿಯು ಇದನ್ನು ತಮ್ಮ ಅಧಿಕೃತ ಜಾಹೀರಾತಾಗಿ ಮಾಡಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು ವ್ಯಕ್ತಿಯ ಸ್ಟಂಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ಮತ್ತೊಬ್ಬರು ವ್ಯಕ್ತಿಯನ್ನು ಸ್ಟಂಟ್ ಮಾಸ್ಟರ್ ಎಂದು ಹೊಗಳಿದ್ದಾರೆ.
ಇದನ್ನೂ ಓದಿ: ಮಹಿಳೆಯ ಬೆತ್ತಲೆ ದೇಹದ ಮೇಲೆ ಮೃಷ್ಟಾನ್ನ ಬಡಿಸುವ ರೆಸ್ಟೋರೆಂಟ್!
ಬೈಕ್ ಸಂಬಂಧಿತ ಸ್ಟಂಟ್ ವೀಡಿಯೊಗಳನ್ನು ಪೋಸ್ಟ್ ಮಾಡಲು ಈ ಬಳಕೆದಾರರು ಹೆಚ್ಚು ಪ್ರಸಿದ್ಧರಾಗಿದ್ದಾರೆ. ಹಾಗಾಗಿ ಇವರು ತಮ್ಮ ಇನ್‌ಸ್ಟಾಗ್ರಾಂ ಹ್ಯಾಂಡಲ್ ನಲ್ಲಿ 91 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಮತ್ತೊಂದು ವೀಡಿಯೊದಲ್ಲಿ, ಅವರು ಬೈಕ್ ಸವಾರಿ ಮೂಲಕ ಮೆಟ್ಟಿಲುಗಳಿಂದ ಕೆಳಗೆ ಇಳಿಯುತ್ತಿರುವುದು ಕಂಡುಬಂದಿದೆ, ಇದು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ.