Site icon Vistara News

Viral Video: ಸ್ವಾಗತಿಸಲು ಖುಷಿಯಿಂದ ಕಾಯುತ್ತಿದ್ದ ಕಪ್ಪು ವರ್ಣದ ಮಹಿಳೆಗೆ ಜೋ ಬೈಡನ್ ಅವಮಾನ; ನಾಚಿಕೆಯಾಗಬೇಕು ಅಮೆರಿಕಕ್ಕೆ!

Viral Video

ಕೆಲವೊಂದು ದೇಶಗಳಲ್ಲಿ ಕಪ್ಪು ವರ್ಣದ ಜನರನ್ನು ಕಡೆಗಣಿಸುತ್ತಾರೆ. ಈ ಬಗ್ಗೆ ಅನೇಕರು ಹೋರಾಟ ನಡೆಸಿದರೂ ಕೂಡ ಕಪ್ಪು ಮತ್ತು ಬಿಳಿ ಮನುಷ್ಯರ ನಡುವಿನ ತಾರತಮ್ಯ ನಿಂತಿಲ್ಲ. ಅದರಲ್ಲೂ ಎಲ್ಲರಿಗೂ ಮಾದರಿಯಾಗಬೇಕಾಗಿದ್ದ ದೇಶದ ದೊಡ್ಡ ದೊಡ್ಡ ವ್ಯಕ್ತಿಗಳೇ ಇಂತಹ ತಾರತಮ್ಯ ಮಾಡುತ್ತಿರುವುದು ನಿಜವಾಗಲೂ ಬೇಸರದ ವಿಚಾರವೇ ಸರಿ. ಅಮೆರಿಕದಲ್ಲಂತೂ ಇಂತಹ ಘಟನೆಗಳು ಹೆಚ್ಚು ನಡೆಯುತ್ತಿರುತ್ತದೆ. ಇದೀಗ ಯುಎಸ್ ಅಧ್ಯಕ್ಷ ಜೋ ಬೈಡನ್ ಕಪ್ಪು ವರ್ಣದ ಅಮೆರಿಕನ್ ಮಹಿಳೆಯನ್ನು ನಿರ್ಲಕ್ಷಿಸಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್(Viral Video) ಆಗಿದೆ. ಇದು ಚರ್ಚೆಗೆ ಕಾರಣವಾಗಿದೆ.

ವಿಸ್ಕಾನ್ಸಿನ್‍ನ ಮ್ಯಾಡಿಸನ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಯುಎಸ್ ಅಧ್ಯಕ್ಷ ಜೋ ಬೈಡನ್ ಜನರನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ಆ ವೇಳೆ ಅಲ್ಲಿ ಇವರಿಗಾಗಿ ಕಾತುರದಿಂದ ಕಾಯುತ್ತಿದ್ದ ಕಪ್ಪು ವರ್ಣದ ಅಮೆರಿಕನ್ ಮಹಿಳೆಯನ್ನು ಅವರು ನಿರ್ಲಕ್ಷ್ಯ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್ ವಿರುದ್ಧದ ಚರ್ಚೆಯ ನಂತರ ರಿಪಬ್ಲಿಕನ್ನರು ಈ ವಿಡಿಯೊವನ್ನು ಬಳಸಿಕೊಂಡು ಇದೀಗ ಜೋ ಬೈಡನ್ ವಿರುದ್ಧ ವಾಗ್ದಾಳಿ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಈ ವಿಡಿಯೊದಲ್ಲಿ, ಕಪ್ಪು ಅಮೆರಿಕನ್ ಯುವತಿ ಕೈಯಲ್ಲಿ ಬೈಡನ್‌-ಹ್ಯಾರಿಸ್ ಬೋರ್ಡ್‌ ಹಿಡಿದು ಬೈಡನ್ ಅವರನ್ನು ಸ್ವಾಗತಿಸಲು ಆ ಮಹಿಳೆ ಕಾಯುತ್ತಿದ್ದಳು. ಆದರೆ ಯುಎಸ್ ಅಧ್ಯಕ್ಷ ಬೈಡನ್ ಮಹಿಳೆಯನ್ನು ಕಡೆಗಣಿಸಿದ್ದಾರೆ. ಆಕೆಯ ಮೊದಲು ನಿಂತಿದ್ದ ಬಿಳಿ ವರ್ಣದ ಮಹಿಳೆಯರನ್ನು ಹಗ್ ಮಾಡಿದ ಅವರು ಆಕೆಯನ್ನು ಬಿಟ್ಟು ಆಕೆಯ ನಂತರ ನಿಂತ ಬಿಳಿ ವರ್ಣದ ಮತ್ತೊಬ್ಬ ಮಹಿಳೆಯನ್ನು ಹಗ್ ಮಾಡಿದ್ದಾರೆ. ಆಕೆಯನ್ನು ಕಣ್ಣೆತ್ತಿ ನೋಡದ ಅಧ್ಯಕ್ಷರನ್ನು ಕಂಡು ಆಕೆ ಬೇಸರಗೊಂಡಿದ್ದು ಆಕೆಯ ಮುಖದಲ್ಲಿ ಎದ್ದು ಕಾಣುತ್ತಿತ್ತು. ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಕೆ ಅಧ್ಯಕ್ಷರನ್ನು ನೋಡಿದಾಗ ತುಂಬಾ ಖುಷಿಯಾಗಿದ್ದರು ಆದರೆ ಅವಳನ್ನು ಗುರುತಿಸದಿದ್ದಾಗ ನಿರಾಶೆಗೊಂಡರು ಎಂದು ಅದರಲ್ಲಿ ಬರೆಯಲಾಗಿದೆ. ಅಲ್ಲದೇ “ತನ್ನ “ಹೀರೋ ತನ್ನ ಬಣ್ಣದ ಜನರನ್ನು ಇಷ್ಟಪಡುವುದಿಲ್ಲ ಎಂದು ಅವಳು ಅರಿತುಕೊಂಡ ಕ್ಷಣ” ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಎಕ್ಸ್ ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಬೈಡನ್ ಪ್ರಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗಿದೆ. ಯಾಕೆಂದರೆ ಬೈಡನ್ ಅವರನ್ನು ಶ್ವೇತಭವನಕ್ಕೆ ಕರೆದೊಯ್ದ ಕಪ್ಪು ವರ್ಣದ ಮತದಾರ ಬೆಂಬಲ ಕಳೆದುಕೊಳ್ಳುತ್ತಿದ್ದಾರೆ ಎಂದು ಹಲವಾರು ಸಮೀಕ್ಷೆಗಳು ತೋರಿಸಿವೆ. ಅಲ್ಲದೇ ಕೆಲವು ಕಪ್ಪು ಮತದಾರರು, ವಿಶೇಷವಾಗಿ ಯುವಕರ ಆರ್ಥಿಕತೆ ಮತ್ತು ಮತದಾರರ ಹಕ್ಕುಗಳ ಆದ್ಯತೆಗಳನ್ನು ನಿಭಾಯಿಸುವಲ್ಲಿ ಬೈಡನ್ ವಿಫಲರಾಗಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಐಷಾರಾಮಿ ಹೋಟೆಲ್‌ನಲ್ಲಿ ವಾಸ, ಫ್ಲೈಟ್‌ನಲ್ಲಿ ಓಡಾಟ; ಶ್ರೀಮಂತ ಕಳ್ಳನೀಗ ಪೊಲೀಸರ ಬಲೆಗೆ!

“ಟ್ರಂಪ್ ಇದನ್ನು ಪ್ರಚಾರದ ಜಾಹೀರಾತಾಗಿ ನಡೆಸಬೇಕು” ಎಂದು ಕೆಲವರು ಹೇಳಿದ್ದಾರೆ. ಈಗಾಗಲೇ ಜೂನ್‌ನಲ್ಲಿ ಡೆಟ್ರಾಯಿಟ್‍ನ 180 ಚರ್ಚ್‍ನಲ್ಲಿ ಸುಮಾರು 200 ಜನರನ್ನುದ್ದೇಶಿಸಿ ಮಾತನಾಡಿದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಧ್ಯಕ್ಷ ಜೋ ಬೈಡನ್ ಅವರ ಪಾತ್ರವನ್ನು ಟೀಕಿಸುವ ಮೂಲಕ ಕಪ್ಪು ಮತದಾರರನ್ನು ಆಕರ್ಷಿಸಿದರು ಎನ್ನಲಾಗಿದೆ. ಹಾಗಾಗಿ ಅಮೆರಿಕದಲ್ಲಿ ಹೆಚ್ಚಿನ ಬೆಂಬಲ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿದೆ ಎನ್ನಲಾಗಿದೆ.

Exit mobile version