Site icon Vistara News

Viral Video: ಮಕ್ಕಳು ಫುಟ್ಬಾಲ್ ಆಡುತ್ತಿದ್ದ ಮೈದಾನದ ಮೇಲೆ ಇಸ್ರೇಲ್ ಬಾಂಬ್ ದಾಳಿ; ಭೀಕರ ದೃಶ್ಯ ವಿಡಿಯೊದಲ್ಲಿ ಸೆರೆ

Viral Video

ಗಾಜಾ: ದೇಶ ದೇಶಗಳ ನಡುವೆ ಆಗಾಗ ಯುದ್ಧಗಳು ನಡೆಯುತ್ತಿರುತ್ತದೆ. ಕೆಲವೊಮ್ಮೆ ಈ ಯುದ್ಧ ಅತಿರೇಕಕ್ಕೆ ಹೋಗಿ ನೇರವಾಗಿ ಒಂದು ದೇಶದ ಮೇಲೆ ಮತ್ತೊಂದು ದೇಶ ಬಾಂಬ್ ದಾಳಿ ನಡೆಸುತ್ತದೆ. ಇದರಲ್ಲಿ ಹಲವಾರು ಜನರು ಸಾವನಪ್ಪುತ್ತುತ್ತಾರೆ. ಅಂತಹದೊಂದು ಘಟನೆ ಗಾಜಾದಲ್ಲಿ ನಡೆದಿದೆ. ಗಾಜಾದ ಅಲ್-ಅವ್ದಾ ಶಾಲೆಯಲ್ಲಿ ಫುಟ್ಬಾಲ್ ಆಡುತ್ತಿದ್ದ ಮಕ್ಕಳ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸಿದ್ದು, ಈ ಭಯಾನಕ ಕ್ಷಣವನ್ನು ತೋರಿಸುವ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video )ಆಗಿದೆ.

ವಿಡಿಯೊದಲ್ಲಿ ಅಬಾಸಾನ್‌ನ ಅಲ್-ಅವ್ದಾ ಶಾಲೆಯಲ್ಲಿ ಮಕ್ಕಳು ಫುಟ್‌ಬಾಲ್ ಆಡುತ್ತಿದ್ದರು. ಅಲ್ಲಿ ಫುಟ್ಬಾಲ್ ಪಂದ್ಯಕ್ಕಾಗಿ ಡಜನ್ ಗಟ್ಟಲೆ ಜನರು ಜಮಾಯಿಸಿದ್ದರು. ಆ ವೇಳೆ ಶಾಲೆಯ ಹೊರಗೆ ಸ್ಫೋಟ ಸಂಭವಿಸಿದ್ದು, ಜನರು ಜೀವ ಉಳಿಸಿಕೊಳ್ಳಲು ಪ್ರಾಣಭಯದಿಂದ ಓಡಾಡುತ್ತಿರುವುದು ಕಂಡುಬಂದಿದೆ. ಈ ದಾಳಿಯಲ್ಲಿ ಮಧ್ಯ ಗಾಜಾದಲ್ಲಿ ಆರು ಮಕ್ಕಳು ಮತ್ತು ಮೂವರು ಮಹಿಳೆಯರು ಸೇರಿದಂತೆ 25 ಪ್ಯಾಲೆಸ್ತೀನ್‌ಯನ್ನರು ಸಾವನ್ನಪ್ಪಿದ್ದಾರೆ, ಅವರಲ್ಲಿ ಕೆಲವರು ಇಸ್ರೇಲ್ ಮಿಲಿಟರಿ ಘೋಷಿಸಿದ “ಸುರಕ್ಷಿತ ವಲಯ” ದೊಳಗೆ ಇದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ವರದಿಗಳ ಪ್ರಕಾರ, ದಾಳಿಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ಕೂಡಲೇ, ಇಸ್ರೇಲ್ ಸೇನೆಯು ಶಾಲೆಯ ಬಳಿ ವೈಮಾನಿಕ ದಾಳಿ ಮತ್ತು ನಾಗರಿಕರ ಸಾವುನೋವುಗಳ ವರದಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದೆ. ಅಕ್ಟೋಬರ್ 7 ರಂದು ಇಸ್ರೇಲ್ ಮೇಲಿನ ದಾಳಿಯಲ್ಲಿ ಭಾಗವಹಿಸಿದ ಹಮಾಸ್ ಉಗ್ರಗಾಮಿಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿರುದಾಗಿ ತಿಳಿಸಿದೆ. ಆದರೆ ಇಸ್ರೇಲ್ ಸೈನ್ಯವು ತನ್ನ ಹೇಳಿಕೆಗಳನ್ನು ಬೆಂಬಲಿಸಲು ಯಾವುದೇ ಪುರಾವೆಗಳನ್ನು ಒದಗಿಸಲಿಲ್ಲ ಎನ್ನಲಾಗಿದೆ.

ಇದರ ಮಧ್ಯೆ ಇಸ್ರೇಲಿ ಮಿಲಿಟರಿ ಎಲ್ಲಾ ಪ್ಯಾಲೆಸ್ತೀನ್‌ರಿಗೆ ಮುತ್ತಿಗೆ ಹಾಕಿದ ನಗರವಾದ ಗಾಜಾ ನಗರದಿಂದ ಸ್ಥಳಾಂತರಿಸಗೊಳ್ಳುವಂತೆ ಆದೇಶಿಸಿ ಪತ್ರ ಬಿಡುಗಡೆ ಮಾಡಿದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಸಾವಿರಾರು ಪ್ಯಾಲೆಸ್ತೀನ್‌ಯರು ಪಲಾಯನ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ರಣವೀರ್‌ ಎದುರೇ ದೀಪಿಕಾ ಬೇಬಿ ಬಂಪ್ ಮೇಲೆ ಕೈಯಿಟ್ಟ ಒರಿ; ನೆಟ್ಟಿಗರಿಗೆ ಉರಿ!

ಅಕ್ಟೋಬರ್‌ನಿಂದ ಗಾಜಾದಲ್ಲಿ ಇಸ್ರೇಲ್‍ನ ಸಂಘರ್ಷದಲ್ಲಿ ಕನಿಷ್ಠ 38,243 ಸಾವುಗಳು ಮತ್ತು 88,243 ಜನರು ಗಾಯಗೊಂಡಿದ್ದಾರೆ. ಅಕ್ಟೋಬರ್ 7 ರಂದು ಹಮಾಸ್ ನೇತೃತ್ವದ ದಾಳಿಯಿಂದ ಇಸ್ರೇಲ್‍ನಲ್ಲಿ ಸಾವನ್ನಪ್ಪಿದವರ ಸಂಖ್ಯೆ ಸುಮಾರು 1,139 ರಷ್ಟಿದೆ, ಅನೇಕರು ಇನ್ನೂ ಗಾಜಾದಲ್ಲಿ ಸೆರೆಯಾಳುಗಳಾಗಿದ್ದಾರೆ ಎನ್ನಲಾಗಿದೆ.
.

Exit mobile version