Suicide bomb Attack: ಪಾಕ್‌ನಲ್ಲಿ ಜಪಾನೀಯರಿದ್ದ ವಾಹನಕ್ಕೆ ಆತ್ಮಹತ್ಯಾ ಬಾಂಬ್‌ ದಾಳಿ: 2 ಬಲಿ - Vistara News

ವಿದೇಶ

Suicide bomb Attack: ಪಾಕ್‌ನಲ್ಲಿ ಜಪಾನೀಯರಿದ್ದ ವಾಹನಕ್ಕೆ ಆತ್ಮಹತ್ಯಾ ಬಾಂಬ್‌ ದಾಳಿ: 2 ಬಲಿ

Suicide bomb Attack: ವಾಹನದಲ್ಲಿದ್ದ ಎಲ್ಲಾ ಐವರು ವಿದೇಶಿಗರು ದಾಳಿಯಲ್ಲಿ ಬದುಕುಳಿದಿದ್ದಾರೆ ಎಂದು ವರದಿ ತಿಳಿಸಿದೆ. ಪೊಲೀಸರು ನಡೆಸಿದ ಪ್ರತೀಕಾರದ ಗುಂಡಿನ ದಾಳಿಯಲ್ಲಿ ಆತ್ಮಹತ್ಯಾ ಬಾಂಬರ್ ಮತ್ತು ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ.

VISTARANEWS.COM


on

Suicide bomb Attack karachi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕರಾಚಿ: ಶುಕ್ರವಾರ ಪಾಕಿಸ್ತಾನದ (Pakistan) ಕರಾಚಿಯಲ್ಲಿ (Karachi) ಜಪಾನೀ ಪ್ರಜೆಗಳು (Japanese) ಪ್ರಯಾಣಿಸುತ್ತಿದ್ದ ವಾಹನಕ್ಕೆ ಆತ್ಮಹತ್ಯಾ ಬಾಂಬ್‌ (Suicide bomb Attack) ದಾಳಿ ನಡೆದಿದೆ. ಸ್ಫೋಟದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ.

ವಾಹನದಲ್ಲಿದ್ದ ಎಲ್ಲಾ ಐವರು ವಿದೇಶಿಗರು ದಾಳಿಯಲ್ಲಿ ಬದುಕುಳಿದಿದ್ದಾರೆ ಎಂದು ವರದಿ ತಿಳಿಸಿದೆ. ಪೊಲೀಸರು ನಡೆಸಿದ ಪ್ರತೀಕಾರದ ಗುಂಡಿನ ದಾಳಿಯಲ್ಲಿ ಆತ್ಮಹತ್ಯಾ ಬಾಂಬರ್ ಮತ್ತು ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ.

ಬದುಕುಳಿದಿರುವ ಹಾಗೂ ಗಾಯಗೊಂಡು ಜಪಾನೀಸ್‌ ಪ್ರಜೆಗಳನ್ನು ಪೊಲೀಸ್ ಕಸ್ಟಡಿಯಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ವಕ್ತಾರ ಅಬ್ರಾರ್ ಹುಸೇನ್ ಬಲೋಚ್ ಹೇಳಿದ್ದಾರೆ. ಯಾವುದೇ ಉಗ್ರಗಾಮಿ ಸಂಘಟನೆ ಈ ದಾಳಿಯ ಹೊಣೆಗಾರಿಕೆಯನ್ನು ತಕ್ಷಣವೇ ಹೇಳಿಕೊಂಡಿಲ್ಲ.

ಇದು ಆತ್ಮಾಹುತಿ ದಾಳಿ ಎಂದು ಕರಾಚಿ ಪೊಲೀಸರು ಖಚಿತಪಡಿಸಿದ್ದಾರೆ. ಸ್ಫೋಟದಲ್ಲಿ ಮತ್ತೊಂದು ವಾಹನಕ್ಕೂ ಹಾನಿಯಾಗಿದೆ. ಪೊಲೀಸರು ಹಂಚಿಕೊಂಡ ಆರಂಭಿಕ ವರದಿಗಳ ಪ್ರಕಾರ, ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಎರಡನೇ ಭಯೋತ್ಪಾದಕ ಸಹ ಆತ್ಮಹತ್ಯಾ ಬಾಂಬರ್ ಆಗಿದ್ದಾನೆ.

“ಭಯೋತ್ಪಾದಕರು ದೇಹಕ್ಕೆ ಆತ್ಮಹತ್ಯಾ ಜಾಕೆಟ್ ಮತ್ತು ಗ್ರೆನೇಡ್ ಅನ್ನು ಕಟ್ಟಿಕೊಂಡಿದ್ದರು” ಎಂದು ಪೊಲೀಸರು ಹೇಳಿದ್ದಾರೆ. ಬಾಂಬ್ ನಿಷ್ಕ್ರಿಯ ತಂಡವು ದಾಳಿಯ ಸ್ಥಳವನ್ನು ತಲುಪಿದೆ. ದಳಿಯ ವೇಳೆ ಭೇಟಿ ನೀಡಿದ್ದ ವಿದೇಶಿ ಪ್ರಜೆಗಳು, ರಫ್ತು ಸಂಸ್ಕರಣಾ ವಲಯದಲ್ಲಿ ಕೆಲಸ ಮಾಡುತ್ತಿದ್ದವರು.

ಮೂವರು ಗಾಯಾಳುಗಳನ್ನು ವೈದ್ಯಕೀಯ ಕೇಂದ್ರಕ್ಕೆ ಕರೆತರಲಾಗಿದ್ದು, ಅದರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಜಿನ್ನಾ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ಭದ್ರತಾ ಸಿಬ್ಬಂದಿ ಮತ್ತು ಒಬ್ಬ ದಾರಿಹೋಕ ಸೇರಿದಂತೆ ಗಾಯಗೊಂಡವರನ್ನು ನೂರ್ ಮುಹಮ್ಮದ್, ಲಂಗರ್ ಖಾನ್ ಮತ್ತು ಸಲ್ಮಾನ್ ರಫೀಕ್ ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಯಾವುದೇ ವಿದೇಶಿ ಪ್ರಜೆ ಗಾಯಗೊಂಡಿಲ್ಲ ಎಂದು ಪೊಲೀಸರು ಖಚಿತಪಡಿಸಿದ್ದಾರೆ. “ಸ್ಫೋಟದ ನಂತರ ಒಬ್ಬ ಭಯೋತ್ಪಾದಕ ವಾಹನದ ಮೇಲೆ ಗುಂಡು ಹಾರಿಸಿದ” ಎಂದು ವಿದೇಶಿ ಪ್ರಜೆಗಳ ಜೊತೆಯಲ್ಲಿದ್ದ ಮತ್ತು ಘಟನೆಗೆ ಸಾಕ್ಷಿಯಾದ ಭದ್ರತಾ ಸಿಬ್ಬಂದಿ ಹೇಳಿದರು.

ಏತನ್ಮಧ್ಯೆ, ಸಿಂಧ್ ಗವರ್ನರ್ ಕಮ್ರಾನ್ ಟೆಸ್ಸೋರಿ ಅವರು ಲಾಂಧಿಯಲ್ಲಿ ನಡೆದ ಆತ್ಮಹತ್ಯಾ ದಾಳಿಯನ್ನು ಖಂಡಿಸಿದರು. ನಗರದಲ್ಲಿ ಯಾವುದೇ ಸಂದರ್ಭದಲ್ಲೂ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ.

ಭಯೋತ್ಪಾದನೆಯ ಮೂಲಕ ಪಾಕಿಸ್ತಾನದ ಸರ್ಕಾರವನ್ನು ಉರುಳಿಸುವುದು, ತಮ್ಮದೇ ಆದ ಕಟ್ಟುನಿಟ್ಟಾದ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವುದು ಭಯೋತ್ಪಾದಕರ ಗುರಿಯಾಗಿದೆ. ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನದ ಹಲವು ಕಡೆ ಅನಾಹುತಕಾರಿ ದಾಳಿಗಳನ್ನು ಉಗ್ರರು ಮಾಡಿದ್ದಾರೆ. ಬಲೂಚಿಸ್ತಾನ ಪ್ರಾಂತ್ಯದಲ್ಲಿ ಚೀನಾಕ್ಕೆ ನೀಡಲಾಗುತ್ತಿರುವ ಪ್ರಾಶಸ್ತ್ಯದಿಂದ ಕೆರಳಿರುವ ಬಲೂಚ್‌ ಉಗ್ರರು, ಚೀನೀಯರು ಇರುವ ಸಂಸ್ಥೆಗಳು, ವಾಹನಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಬಹುಶಃ ಈ ದಾಳಿಯಲ್ಲಿ ಜಪಾನೀಯರನ್ನು ಚೀನೀಯರು ಎಂದು ಅಪಾರ್ಥ ಮಾಡಿಕೊಂಡಿರುವ ಸಾಧ್ಯತೆ ಇದೆ.

ಇದನ್ನೂ ಓದಿ: Balochistan blast: ಬಲೂಚಿಸ್ತಾನದ ಮಸೀದಿ ಬಳಿ ಆತ್ಮಹತ್ಯಾ ಸ್ಫೋಟ, ಕನಿಷ್ಠ 52 ಸಾವು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ವಿದೇಶ

Danesh Palyani: ಪಾಕಿಸ್ತಾನದಲ್ಲಿ ಹಿಂದು ಯುವತಿಯರ ಮತಾಂತರ; ಕರಾಳ ಮುಖ ಬಿಚ್ಚಿಟ್ಟ ಸಂಸದ!

Danesh Palyani: ಪಾಕಿಸ್ತಾನದ ಪ್ರಮುಖ ಹಿಂದು ನಾಯಕರೂ ಆಗಿರುವ ದಾನೇಶ್‌ ಕುಮಾರ್‌ ಪಲ್ಯಾನಿ ಅವರು, ಪಾಕ್‌ನಲ್ಲಿ ಹೇಗೆ ಹಿಂದು ಯುವತಿಯರನ್ನು ಹೇಗೆ ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ, ಹೇಗೆ ಮುಸ್ಲಿಮರು ದೌರ್ಜನ್ಯ ಎಸಗುತ್ತಿದ್ದಾರೆ ಎಂಬುದರ ಕುರಿತು ಸಂಸತ್‌ನಲ್ಲಿಯೇ ಬೆಳಕು ಚೆಲ್ಲಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

VISTARANEWS.COM


on

Danesh Palyani
Koo

ಇಸ್ಲಾಮಾಬಾದ್:‌ ಪಾಕಿಸ್ತಾನದಲ್ಲಿ (Pakistan) ಹಿಂದುಗಳನ್ನು, ಹಿಂದು ಯುವತಿಯರನ್ನು ಬಲವಂತವಾಗಿ ಮತಾಂತರ ಮಾಡುವ ಹೀನ ಕೃತ್ಯವು ಮೊದಲಿನಿಂದಲೂ ನಡೆಯುತ್ತಿದೆ. ಭಾರತ ಹಾಗೂ ಪಾಕಿಸ್ತಾನ ವಿಭಾಜನೆಯಾದಾಗಿನಿಂದಲೂ ಮುಸ್ಲಿಮರು ಮತಾಂತರಗೊಳಿಸಿದ ಕಾರಣ ನೆರೆ ರಾಷ್ಟ್ರದಲ್ಲಿ ಹಿಂದುಗಳ ಸಂಖ್ಯೆಯು ಗಣನೀಯವಾಗಿ ಕುಸಿದಿದೆ. ಪಾಕಿಸ್ತಾನದ ಹಿಂದು ಸಂಸದ, ಹಿಂದುಗಳ ನಾಯಕರೂ ಆದ ದಾನೇಶ್‌ ಕುಮಾರ್‌ ಪಲ್ಯಾನಿ (Danesh Kumar Palyani) ಅವರೀಗ ಹಿಂದು ಯುವತಿಯರನ್ನು ಹೇಗೆ ಬಲವಂತವಾಗಿ ಮತಾಂತರ (Conversion) ಮಾಡಲಾಗುತ್ತಿದೆ ಎಂಬುದನ್ನು ಸಂಸತ್‌ನಲ್ಲಿಯೇ ಬಹಿರಂಗಪಡಿಸಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಸಂಸತ್‌ನಲ್ಲಿ ಮಾತನಾಡಿದ ದಾನೇಶ್‌ ಕುಮಾರ್‌ ಪಲ್ಯಾನಿ, “ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿ ಮಾನವ ಹಕ್ಕುಗಳ ಧಕ್ಕೆಯಾಗುತ್ತಿದೆ. ಅದರಲ್ಲೂ, ಹಿಂದು ಯುವತಿಯರನ್ನು ಮುಸ್ಲಿಮರು ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ. ಹಿಂದು ಯುವತಿಯನ್ನು ಅಪಹರಣ ಮಾಡಿ, ಬಳಿಕ ಅವರನ್ನು ಇಸ್ಲಾಂಗೆ ಮತಾಂತರಗೊಳಿಸಲಾಗುತ್ತಿದೆ. ಪಾಕಿಸ್ತಾನವು ಹಿಂದುಗಳನ್ನು ಬಲವಂತವಾಗಿ ಮಾತನಾಡಬಾರದು ಎಂಬ ಹಕ್ಕು ನೀಡಿದೆ. ಆದರೆ, ಸಿಂಧ್‌ ಪ್ರಾಂತ್ಯದಲ್ಲಿ ಹಿಂದುಗಳ ಸ್ಥಿತಿಯು ದುಸ್ಥರವಾಗಿದೆ” ಎಂದು ಹೇಳಿದ್ದಾರೆ.

“ಬಲವಂತವಾಗಿ ಧರ್ಮವನ್ನು ಹೇರಬಾರದು ಎಂಬುದಾಗಿ ಕುರಾನ್‌ ಕೂಡ ಹೇಳುತ್ತದೆ. ನಿಮ್ಮ ಧರ್ಮ ನಿಮ್ಮದು, ನಮ್ಮ ಧರ್ಮ ನಮ್ಮದು ಎಂಬ ಸಂದೇಶ ಸಾರಲಾಗಿದೆ. ಆದರೆ, ಇಸ್ಲಾಂ ಧರ್ಮದ ದುಷ್ಕರ್ಮಿಗಳು ಪಾಕಿಸ್ತಾನದ ಸಂವಿಧಾನವನ್ನೂ ನಂಬಲ್ಲ, ಕುರಾನ್‌ ಷರೀಫ್‌ಅನ್ನು ಕೂಡ ನಂಬುವುದಿಲ್ಲ. ಇದರಿಂದಾಗಿ ಪಾಕಿಸ್ತಾನದಲ್ಲಿ ಹಿಂದು ಯುವತಿಯರು ಬಲವಂತವಾಗಿ ತಮ್ಮ ಧರ್ಮವನ್ನು ಬದಲಾಯಿಸಬೇಕಾಗಿದೆ. ಪ್ರಿಯಾ ಕುಮಾರಿ ಎಂಬ ಯುವತಿಯನ್ನು ಅಪಹರಿಸಿ ಎರಡು ವರ್ಷಗಳೇ ಕಳೆದಿವೆ. ಆದರೂ, ಸರ್ಕಾರ ಇಂತಹ ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ” ಎಂದು ದೂರಿದರು.

“ಪಾಕಿಸ್ತಾನದ ಸಂವಿಧಾನವಾಗಲಿ, ಪವಿತ್ರ ಕುರಾನ್‌ ಆಗಲಿ ಬಲವಂತದ ಮತದಾನವನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಹೀಗಿದ್ದರೂ, ನಮ್ಮ ಮಾತೃಭೂಮಿಯಾದ ಪಾಕಿಸ್ತಾನದ ಘನತೆಗೆ ದುಷ್ಕರ್ಮಿಗಳು ಧಕ್ಕೆ ತರುತ್ತಿದ್ದಾರೆ. ಇಂತಹವರ ವಿರುದ್ಧ ಪಾಕಿಸ್ತಾನ ಸರ್ಕಾರವು ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂಬುದಾಗಿ ಆಗ್ರಹಿಸಿದ್ದಾರೆ. ಪಾಕಿಸ್ತಾನದಲ್ಲಿ ಬಲವಂತದ ಮತಾಂತರ, ಯುವತಿಯರ ಅಪಹರಣ, ಮಕ್ಕಳ ಕಳ್ಳ ಸಾಗಣೆ, ಬಾಲ್ಯ ವಿವಾಹದಂತಹ ಸಮಸ್ಯೆಗಳು ತಲೆದೋರಿರುವ ಕುರಿತು ಕೆಲ ದಿನಗಳ ಹಿಂದಷ್ಟೇ ವಿಶ್ವಸಂಸ್ಥೆಯು ಕಳವಳ ವ್ಯಕ್ತಪಡಿಸಿತ್ತು.

ಇದನ್ನೂ ಓದಿ: Forced Conversion : ಮಹಿಳೆಯ ಖಾಸಗಿ ವಿಡಿಯೊ ಮಾಡಿ, ಇಸ್ಲಾಂಗೆ ಮತಾಂತರ ಮಾಡಲು ಯತ್ನಿಸಿದ ನೀಚ ದಂಪತಿ

Continue Reading

ಕರ್ನಾಟಕ

Prajwal Revanna: ಜರ್ಮನಿಯಲ್ಲಿ ಪ್ರಜ್ವಲ್‌ ಅಜ್ಞಾತವಾಸ, ಮಲೇಷ್ಯಾದಲ್ಲಿ ಕಾರ್ತಿಕ್‌ ಹಾಲಿಡೇಸ್?

Prajwal Revanna: ಜರ್ಮನಿಗೆ ತೆರಳಿರುವ ಪ್ರಜ್ವಲ್‌ ರೇವಣ್ಣ, ಅಲ್ಲಿಯೇ ಆಶ್ರಯ ಪಡೆದಿದ್ದಾರೆ. ಎಸ್‌ಐಟಿ ವಿಚಾರಣೆಗೆ ಹಾಜರಾಗದೆ, ಭಾರತಕ್ಕೆ ವಾಪಸಾಗದೆ ಅಲ್ಲಿಯೇ ಅವರು ತಲೆಮರೆಸಿಕೊಂಡಿದ್ದರೆ, ಅವರ ಕಾರು ಓಡಿಸಿಕೊಂಡಿದ್ದ ಕಾರ್ತಿಕ್‌ ಮಲೇಷ್ಯಾದಲ್ಲಿ ಮಜಾ ಮಾಡುತ್ತಿದ್ದಾರೆ ಎನ್ನಲಾಗಿದೆ. ಕುಮಾರಸ್ವಾಮಿ ಅವರು ಕಾರ್ತಿಕ್‌ ಬಗ್ಗೆ ಹೇಳಿಕೆ ನೀಡಿದ ಬಳಿಕವಂತೂ ಹಲವು ಚರ್ಚೆಗಳು ನಡೆಯುತ್ತಿವೆ.

VISTARANEWS.COM


on

Prajwal Revanna
Koo

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna) ಅವರ ಕಾಮಕೇಳಿಯ ವಿಡಿಯೊಗಳು ಬಹಿರಂಗವಾದ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದೆ. ಪೆನ್‌ಡ್ರೈವ್‌ ಪ್ರಕರಣವು (Pen Drive Case) ಕರ್ನಾಟಕದಲ್ಲಿ (Karnataka) ಜೆಡಿಎಸ್‌ ಹಾಗೂ ಬಿಜೆಪಿಗೆ ಮುಜುಗರ ತಂದರೆ, ಕಾಂಗ್ರೆಸ್‌ಗೆ ಅಸ್ತ್ರವಾಗಿದೆ. ಇದರ ಬೆನ್ನಲ್ಲೇ, ಪ್ರಜ್ವಲ್‌ ರೇವಣ್ಣ ಜರ್ಮನಿಯಲ್ಲಿ ಅಜ್ಞಾತವಾಸ ಅನುಭವಿಸುತ್ತಿದ್ದರೆ, ವಿಡಿಯೊ, ಫೋಟೊಗಳು ಎಲ್ಲೆಡೆ ಹರಡಲು ಕಾರಣರಾದ ಮಾಜಿ ಚಾಲಕ ಕಾರ್ತಿಕ್‌ ಮಲೇಷ್ಯಾದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪ್ರಜ್ವಲ್‌ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್‌ ಅಜ್ಞಾತಸ್ಥಳದಿಂದ ವಿಡಿಯೊ ಬಿಡುಗಡೆ ಮಾಡಿ, ಕೆಲ ಸ್ಪಷ್ಟನೆ ನೀಡಿದ್ದಾರೆ. ಇದರ ಬೆನ್ನಲ್ಲೇ, “ಕಾರ್ತಿಕ್‌ನನ್ನು ಮಲೇಷ್ಯಾಗೆ ಕಳುಹಿಸಿದ್ದು ಯಾರು” ಎಂಬುದಾಗಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಇದರೊಂದಿಗೆ ಕಾರ್ತಿಕ್‌ ಮಲೇಷ್ಯಾಗೆ ತೆರಳಿದ್ದು ದೃಢಪಟ್ಟಿದ್ದು, ಕಾರು ಚಾಲಕನೊಬ್ಬ ಮಲೇಷ್ಯಾದಲ್ಲಿ ಕಾಲ ಕಳೆಯುವುದು, ಅಲ್ಲಿಯೇ ಹಾಲಿಡೇಸ್‌ ಎಂಜಾಯ್‌ ಮಾಡುವುದು ಹೇಗೆ ಸಾಧ್ಯ ಎಂಬ ಪ್ರಶ್ನೆಗಳು ಮೂಡಿವೆ.

ಪ್ರಜ್ವಲ್‌ ರೇವಣ್ಣ ಲೈಂಗಿಕ ಶೋಷಣೆ ಮಾಡಿರುವ ಕುರಿತು ಪ್ರಕರಣ ದಾಖಲಿಸಲಾಗಿದ್ದು, ತನಿಖೆಗೆ ಎಸ್‌ಐಟಿ ರಚಿಸಲಾಗಿದೆ. ಇನ್ನು ಸಾವಿರಾರು ಅಶ್ಲೀಲ ವಿಡಿಯೊಗಳಿರುವ ಪೆನ್‌ಡ್ರೈವ್‌ ಎಲ್ಲೆಂದರಲ್ಲಿ ಸಿಕ್ಕಿರುವುದು ಹಲವು ಅನುಮಾನ ಮೂಡಿಸಿವೆ. ಇದರ ಮಧ್ಯೆಯೇ, ಜರ್ಮನಿಗೆ ತೆರಳಿರುವ ಪ್ರಜ್ವಲ್‌ ರೇವಣ್ಣ, ಅಲ್ಲಿಯೇ ಆಶ್ರಯ ಪಡೆದಿದ್ದಾರೆ. ಎಸ್‌ಐಟಿ ವಿಚಾರಣೆಗೆ ಹಾಜರಾಗದೆ, ಭಾರತಕ್ಕೆ ವಾಪಸಾಗದೆ ಅಲ್ಲಿಯೇ ಅವರು ತಲೆಮರೆಸಿಕೊಂಡಿದ್ದರೆ, ಅವರ ಕಾರು ಓಡಿಸಿಕೊಂಡಿದ್ದ ಕಾರ್ತಿಕ್‌ ಮಲೇಷ್ಯಾದಲ್ಲಿ ಮಜಾ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದು ಈಗ ಹಲವು ಚರ್ಚೆಗಳಿಗೆ ಕಾರಣವಾಗಿದೆ.

ಕಾರ್ತಿಕ್‌ ಬಗ್ಗೆ ಎಚ್‌ಡಿಕೆ ಸಿಡಿಮಿಡಿ

ಬೆಂಗಳೂರಿನ ಪದ್ಮನಾಭನಗರದ ನಿವಾಸದ ಗೇಟ್‌ ಮುಂಭಾಗದಲ್ಲಿ ಪ್ರಕರಣದ ಬಗ್ಗೆ ಪ್ರಶ್ನಿಸಿದ ಮಾಧ್ಯಮಗಳ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ಗರಂ ಆದರು. ಪದೇಪದೇ ಏನು ಕೇಳುತ್ತೀರಿ, ನಿಮಗೆ ಏನು ಕೆಲಸ, ಇಲ್ಲಿ ಯಾಕೆ ಬಂದಿದ್ದೀರಾ? ಸುದ್ದಿ ಬಿಡುವವರ ಜತೆ ಹೋಗಿ ಎಂದು ಕಿಡಿಕಾರಿದರು. ನಿನ್ನೆ ಡ್ರೈವರ್ ಒಬ್ಬ ವಿಡಿಯೋ ಮಾಡಿ ಹೇಳಿದನಲ್ಲಾ? ಯಾರು ಆ ವಿಡಿಯೊ ಮಾಡಿದ್ದು? ಇಲ್ಲಿ ಚಿಲ್ಲರೆ ಅಣ್ಣ ತಮ್ಮ ಇದ್ದಾರಲ್ಲವೇ? ಅವರು ಏನ್ ಹೇಳಿದರು? ಕುಮಾರಸ್ವಾಮಿ ಬಿಟ್ಟಿದ್ದು ಎನ್ನುತ್ತಾರೆ. ಡ್ರೈವರ್ ಕಾರ್ತಿಕ್ ಎಲ್ಲಿದ್ದಾನೆ ಈಗ? ಮಲೇಷ್ಯಾದಲ್ಲಿ ಇದಾನೆ, ಆತನನ್ನು ಮಲೇಷ್ಯಾಗೆ ಕಳುಹಿಸಿದ್ದು ಯಾರು ಎಂದು ಪ್ರಶ್ನಿಸಿದರು.

ಆ ಡ್ರೈವರ್‌ ಕಾರ್ತಿಕ್ ಏನು ಹೇಳಿಕೆ ಕೊಟ್ಟಾ? ದೇವರಾಜೇಗೌಡ ಕೈಯಲ್ಲಿ ಪೆನ್ ಡ್ರೈವ್ ಕೊಟ್ಟಿದ್ದೆ ಅಂತ ಹೇಳಿದ್ದ. ಇಂದು ಬೆಳಗ್ಗೆ ಈ ಚಿಲ್ಲರೆ ಅಣ್ಣ ತಮ್ಮ ಇದಾರಲ್ವಾ (ಡಿಕೆಶಿ ಹಾಗೂ ಡಿ.ಕೆ ಸುರೇಶ್), ಕುಮಾರಸ್ವಾಮಿನೇ ಬಿಟ್ಟಿರಬೇಕು ಅಂತ ಹೇಳಿಕೆ ಕೊಟ್ಟಿದ್ದಾರೆ. ಕುಮಾರಸ್ವಾಮಿಯನ್ನು ಈ ಮೊದಲು ದೇವರಾಜೇಗೌಡ ಭೇಟಿಯಾಗಿದ್ದ ಎಂದು ಈ 420ಗಳು ಹೇಳಿದ್ದಾರೆ. ಹಾಗಾದರೆ ಎಲ್ಲಿದ್ದಾನೆ ಈ ಕಾರ್ತಿಕ್? ಯಾರು ಕಳುಹಿಸಿದರು? ಎಲ್ಲಿಂದ ವಿಡಿಯೋ ಮಾಡಿ ಬಿಟ್ಟದ್ದಾನೆ, ಅದನ್ನು ಮೊದಲು ತಿಳಿದುಕೊಳ್ಳಿ. ನನ್ನ ಕೆಣಕಿದ್ದಾರೆ, ಸುಮ್ಮನೆ ಬಿಡಲ್ಲ ನಾನು ಎಂದು ಡಿಕೆ ಬ್ರದರ್ಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: Prajwal Revanna Case: ಸಿಂಗಾಪುರ ಮಾಧ್ಯಮಗಳಲ್ಲೂ ಪ್ರಜ್ವಲ್‌ ರೇವಣ್ಣ ಕೇಸ್‌ ಸದ್ದು!

Continue Reading

ದೇಶ

ಪಾಕ್‌ ಯುವತಿಗೆ ಭಾರತದ ಹಿಂದು ವ್ಯಕ್ತಿ ಹೃದಯದ ಕಸಿ; ತಕರಾರು ತೆಗೆದ ನೆರೆ ರಾಷ್ಟ್ರದ ಇಸ್ಲಾಂ ಧರ್ಮಗುರು!

ಕಾಲೇಜು ವಿದ್ಯಾರ್ಥಿನಿಯಾಗಿರುವ ಆಯೇಷಾ ರೆಶಾನ್‌ ಅವರು ಕಳೆದ 10 ವರ್ಷಗಳಿಂದ ಹೃದ್ರೋಗದಿಂದ ಬಳಲುತ್ತಿದ್ದರು. ಅವರಿಗೆ ಹಾರ್ಟ್‌ ಪಂಪ್‌ ಡಿವೈಸ್‌ ಅಳವಡಿಸಬೇಕಾಗಿತ್ತು. ಇದಕ್ಕಾಗಿ ಅವರು ತಮಿಳುನಾಡಿಗೆ ಆಗಮಿಸಿದ್ದರು. ಚೆನ್ನೈನಲ್ಲಿ ಅವರಿಗೆ ಬೇರೆ ವ್ಯಕ್ತಿಯ ಹೃದಯವನ್ನು ಕಸಿ ಮಾಡಲಾಗಿತ್ತು. ಇದಾದ ಬಳಿಕ ಆಯೇಷಾ, ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ್ದರು.

VISTARANEWS.COM


on

Pakistan Teen
Koo

ಇಸ್ಲಾಮಾಬಾದ್:‌ ಜಗತ್ತಿನ ಯಾವುದೇ ಧರ್ಮಗಳು, ಧರ್ಮ ಗ್ರಂಥಗಳು ಹಿಂಸೆ, ದ್ವೇಷವನ್ನು ಬೆಂಬಲಿಸುವುದಿಲ್ಲ. ಶಾಂತಿ, ಸಹಬಾಳ್ವೆ, ಮಾನವೀಯತೆಯನ್ನೇ ಪ್ರತಿಯೊಂದು ಧರ್ಮವು ಬೋಧಿಸುತ್ತದೆ. ಆದರೆ, ಧರ್ಮಪಾಲಕರ ಎಡವಟ್ಟುಗಳಿಂದಾಗಿ ಧರ್ಮಗಳ ಸಾರಕ್ಕೇ ಕೆಲವೊಮ್ಮೆ ಕೆಟ್ಟ ಹೆಸರು ಬರುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಪಾಕಿಸ್ತಾನದಿಂದ (Pakistan) ಭಾರತಕ್ಕೆ ಬಂದು, ಚೆನ್ನೈ ಆಸ್ಪತ್ರೆಯಲ್ಲಿ ಹೃದಯದ ಕಸಿ ಮಾಡಿಸಿಕೊಂಡ ಪಾಕಿಸ್ತಾನದ ಯುವತಿಯೊಬ್ಬಳನ್ನು ಅಲ್ಲಿನ ಧರ್ಮಗುರುವೊಬ್ಬ (Pakistani Imam) ಟೀಕಿಸಿದ್ದಾನೆ.

ಯುವತಿಯು ಹೃದಯದ ಕಸಿ ಮಾಡಿಸಿಕೊಂಡಿರುವ ಯುಟ್ಯೂಬರ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಇಮಾಮ್‌, “ಯುವತಿಗೆ ಹೃದಯ ದಾನ ಮಾಡಿದವನು ಸತ್ತಿದ್ದಾನೆ. ಅವನು ಖಂಡಿತವಾಗಿಯೂ ನಾಸ್ತಿಕನೇ ಆಗಿರುತ್ತಾನೆ. ಅಂತಹ ಹಿಂದುವಿನ ಹೃದಯವನ್ನು ಕಸಿ ಮಾಡಿಸಿಕೊಂಡು ಬಂದ ಪಾಕಿಸ್ತಾನದ ಯುವತಿಯ ಧೈರ್ಯವನ್ನು ಮೆಚ್ಚಬೇಕು. ಆದರೆ, ಹಿಂದುವಿನ ಹೃದಯ ಹೊಂದಿರುವ ಆಯೇಷಾ ಈಗ ಅಲ್ಲಾನ ಎದುರು ತಲೆ ಬಾಗಿ ನಿಲ್ಲಬೇಕು. ಆಗ ಆಕೆಯ ಧೈರ್ಯವನ್ನು ಮೆಚ್ಚುತ್ತೇನೆ” ಎಂಬುದಾಗಿ ಇಮಾಮ್‌ ಹೇಳಿದ್ದಾನೆ. “ಮುಸ್ಲಿಮರು ಅಂಗಾಂಗ ಹಾಗೂ ರಕ್ತವನ್ನು ದಾನ ಮಾಡುವುದು ತಪ್ಪು” ಎಂದು ಕೂಡ ಹೇಳಿದ್ದಾನೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದ್ದು, ಇಮಾಮ್‌ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೃದಯದ ಸಮಸ್ಯೆಯಿಂದಾಗಿ ಭಾರತಕ್ಕೆ ಬಂದಿದ್ದ ಪಾಕಿಸ್ತಾನದ ಆಯೇಷಾ ರೆಶಾನ್‌ (19) ಎಂಬ ಯುವತಿಗೆ ಚೆನ್ನೈನಲ್ಲಿರುವ ಎಂಜಿಎಂ ಹೆಲ್ತ್‌ಕೇರ್‌ ಆಸ್ಪತ್ರೆ ವೈದ್ಯರು ಉಚಿತವಾಗಿ ಹೃದಯದ ಕಸಿ ಮಾಡುವ ಮೂಲಕ ನೆರೆ ರಾಷ್ಟ್ರದ ಯುವತಿಯ ಬಾಳಿಗೆ ಬೆಳಕಾಗಿದ್ದಾರೆ. ಭಾರತೀಯರೊಬ್ಬರ ಹೃದಯವನ್ನು ಪಾಕಿಸ್ತಾನದ ಯುವತಿಗೆ ಕಸಿ ಮಾಡುವ ಮೂಲಕ, ಆಕೆ ಮತ್ತೆ ಬದುಕು ಕಟ್ಟಿಕೊಳ್ಳಲು ಅಪೂರ್ವ ಅವಕಾಶ ನೀಡುವ ಮೂಲಕ ಔದಾರ್ಯ ಮೆರೆದಿದ್ದಾರೆ. ಇದಕ್ಕಾಗಿ ಆಯೇಷಾ ರೆಶಾನ್‌ ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಆಯೇಷಾ ರೆಶಾನ್‌ಗೆ ಏನಾಗಿತ್ತು?

ಕಾಲೇಜು ವಿದ್ಯಾರ್ಥಿನಿಯಾಗಿರುವ ಆಯೇಷಾ ರೆಶಾನ್‌ ಅವರು ಕಳೆದ 10 ವರ್ಷಗಳಿಂದ ಹೃದ್ರೋಗದಿಂದ ಬಳಲುತ್ತಿದ್ದರು. ಅವರಿಗೆ ಹಾರ್ಟ್‌ ಪಂಪ್‌ ಡಿವೈಸ್‌ ಅಳವಡಿಸಬೇಕಾಗಿತ್ತು. ಇದಕ್ಕಾಗಿ ಅವರು ತಮಿಳುನಾಡಿಗೆ ಆಗಮಿಸಿದ್ದರು. ಆದರೆ, ಹಾರ್ಟ್‌ ಪಂಪ್‌ ಅಳವಡಿಸಿದ ಬಳಿಕ ಶಸ್ತ್ರಚಿಕಿತ್ಸೆಯು ವಿಫಲವಾಗಿತ್ತು. ಇದರಿಂದಾಗಿ ಆಯೇಷಾ ರೆಶಾನ್‌ ಅವರ ಪ್ರಾಣಕ್ಕೆ ಕುತ್ತು ಬಂದಿತ್ತು. ಆಗ, ಆಸ್ಪತ್ರೆಯ ಸರ್ಜನ್‌ಗಳು ದಾನಿಯೊಬ್ಬರ ಹೃದಯವನ್ನು ಆಯೇಷಾ ರೆಷಾನ್‌ ಅವರಿಗೆ ಅಳವಡಿಸುವ ಮೂಲಕ ಆಕೆಯ ಪ್ರಾಣ ಉಳಿಸಿದ್ದಾರೆ.

ಹೃದಯದ ಕಸಿ ಮಾಡಲು ಸುಮಾರು 35 ಲಕ್ಷ ರೂ. ಖರ್ಚಾಗುತ್ತದೆ. ಆದರೆ, ಚೆನ್ನೈನ ಐಶ್ವರ್ಯನ್‌ ಟ್ರಸ್ಟ್‌ ಹಾಗೂ ಆಸ್ಪತ್ರೆ ವೈದ್ಯರೇ ಖರ್ಚು ಭರಿಸಿ, ಉಚಿತವಾಗಿ ಕಸಿ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ದೆಹಲಿ ಮೂಲದ ದಾನಿಯಿಂದ ಹೃದಯ ಪಡೆದ ವೈದ್ಯರು, ಆಯೇಷಾಗೆ ಅಳವಡಿಸಿದ್ದಾರೆ. “ಹೃದಯ ಕಸಿ ಬಳಿಕ ನಾನೀಗ ಆರೋಗ್ಯದಿಂದ ಇದ್ದೇನೆ. ಚೆನ್ನೈ ವೈದ್ಯರಿಂದಾಗಿ ನಾನು ಉಸಿರಾಡುತ್ತಿದ್ದೇನೆ. ನನ್ನ ಜೀವ ಉಳಿಸಿದ ವೈದ್ಯರಿಗೆ ಕೃತಜ್ಞತೆಗಳು. ಪಾಕಿಸ್ತಾನಕ್ಕೆ ತೆರಳಿ ನಾನು ಪದವಿ ಪಡೆಯುತ್ತೇನೆ” ಎಂಬುದಾಗಿ ಆಯೇಷಾ ಹೇಳಿದ್ದಾರೆ.

ಇದನ್ನೂ ಓದಿ: Rahul Gandhi: ರಾಹುಲ್‌ ಗಾಂಧಿಯನ್ನು ಹೊಗಳಿದ ಪಾಕ್‌ ಮಾಜಿ ಸಚಿವ; ತಿರುಗೇಟು ಕೊಟ್ಟ ಬಿಜೆಪಿ

Continue Reading

ವೈರಲ್ ನ್ಯೂಸ್

Lottery: ಕೋಟಿ ರೂ. ಲಾಟರಿ ಗೆದ್ದಿದ್ದೀರಿ ಎಂದರೆ, ಸ್ಕ್ಯಾಮ್‌ ಎಂದು ಫೋನಿಟ್ಟ ಮಹಿಳೆ; ಕೊನೆಗೆ ದುಡ್ಡು ಸಿಕ್ತಾ?

Lottery: ಅಮೆರಿಕದ ಮಹಿಳೆಗೆ ಕರೆ ಮಾಡಿ, ನಿಮಗೆ ಲಾಟರಿ ಹೊಡೆದಿದೆ ಎಂದು ಹೇಳಿದರೂ ನಂಬದ ಕಾರಣ ಅಧಿಕಾರಿಗಳು ಗೊಂದಲಕ್ಕೀಡಾಗಿದ್ದಾರೆ. ಈಗ ಏನು ಮಾಡುವುದು ಎಂದು ಅನೆ ಅವರಿಗೆ ಮೇಲ್‌ ಮಾಡಿದ್ದಾರೆ. ಲಾಟರಿ ಕುರಿತು ವಿವರಿಸಿದ್ದಾರೆ. ಆದರೆ, ಅನೆ ಅದೇ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ. ಇ-ಮೇಲ್‌ಅನ್ನು ಅವರು ನಿರ್ಲಕ್ಷಿಸಿ ಸುಮ್ಮನಾಗಿದ್ದಾರೆ. ಇದು ಅಧಿಕಾರಿಗಳನ್ನು ಇನ್ನಷ್ಟು ತಬ್ಬಿಬ್ಬಾಗಿಸಿದೆ.

VISTARANEWS.COM


on

Lottery
Koo

ವಾಷಿಂಗ್ಟನ್:‌ ನಿಮಗೆ 5 ಕೋಟಿ ರೂ. ಲಾಟರಿ (Lottery) ಹೊಡೆದಿದೆ ಎಂದು ಕರೆ ಬರುತ್ತದೆ. ಲಾಟರಿ ಕುರಿತು ಮೆಸೇಜ್‌ ಕೂಡ ಬರುತ್ತದೆ. ನಂಬಿ ಅವರು ಕಳುಹಿಸಿದ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದರೆ, ನಿಮ್ಮ ಖಾತೆಯಲ್ಲಿರುವ ಹಣ ಕಟ್‌ ಆಗುವುದು ಗ್ಯಾರಂಟಿ. ಇಂತಹ ಸ್ಕ್ಯಾಮ್‌ಗಳಿಂದಲೇ ಜನ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಅನಾಮಧೇಯ ವ್ಯಕ್ತಿಗಳ ಕರೆಗಳಿಗೆ ಪ್ರತಿಕ್ರಿಯೆ ನೀಡಲ್ಲ. ಹೀಗೆ, ಬರುವ ಕರೆಗಳಲ್ಲ ಸ್ಕ್ಯಾಮ್‌ (Cyber Crime) ಎಂದು ತಿಳಿದುಕೊಂಡ ಅಮೆರಿಕದ (America) ಮಹಿಳೆಯೊಬ್ಬರು 1 ಕೋಟಿ ಲಾಟರಿ ಹೊಡೆದಿದೆ ಎಂಬುದಾಗಿ ಬಂದ ಕರೆಯನ್ನು ನಿರ್ಲಕ್ಷಿಸಿದ್ದಾರೆ. ಆದರೆ, ಅವರಿಗೆ ಒಂದು ಕೋಟಿ ರೂ. ಲಾಟರಿ ಮೊತ್ತವನ್ನು ತಲುಪಿಸಲು ಅಧಿಕಾರಿಗಳು ಹೆಣಗಾಡಿದ್ದಾರೆ.

ಹೌದು, ಗ್ರೇಟರ್‌ ಮ್ಯಾಂಚೆಸ್ಟರ್‌ನ ಹೀಲ್ಡ್‌ ಗ್ರೀನ್‌ನಲ್ಲಿರುವ ಅನೆ (Anne) ಎಂಬುವರು ಲಾಟರಿ ಟಿಕೆಟ್‌ ಖರೀದಿಸಿದ್ದರು. ಬಂದರೆ ಬರಲಿ, ಹೋದರೆ ಹೋಗಲಿ ಎಂಬ ಮನಸ್ಥಿತಿಯಲ್ಲಿ ಅವರು ಟಿಕೆಟ್‌ ಖರೀದಿಸಿದ್ದರು. ಟಿಕೆಟ್‌ ಖರೀದಿಸಿ ತುಂಬ ದಿನ ಆದ ಕಾರಣ ನಿರ್ಲಕ್ಷದಿಂದ ಇದ್ದರು. ಆದರೆ, ಕೆಲ ದಿನಗಳ ಹಿಂದಷ್ಟೇ ಅನೆ ಅವರಿಗೆ ಲಾಟರಿ ಕಂಪನಿಯ ಅಧಿಕಾರಿಗಳು ಅನೆ ಅವರಿಗೆ ಕರೆ ಮಾಡಿದ್ದಾರೆ. ನಿಮಗೆ ಒಂದು ಕೋಟಿ ರೂ. ಲಾಟರಿ ಹೊಡೆದಿದೆ ಎಂದು ಮಾಹಿತಿ ನೀಡಿದ್ದಾರೆ. ಆದರೆ, ಇದು ಸ್ಕ್ಯಾಮ್‌ ಎಂದ ಅನೆ, ಕಾಲ್‌ ಕಟ್‌ ಮಾಡಿದ್ದಾರೆ.

ಅನೆಗೆ ದುಡ್ಡು ಸಿಕ್ಕಿದ್ದು ಹೇಗೆ?

ಮಹಿಳೆಯು ಲಾಟರಿ ಹೊಡೆದಿದೆ ಎಂದು ಹೇಳಿದರೂ ನಂಬದ ಕಾರಣ ಅಧಿಕಾರಿಗಳು ಗೊಂದಲಕ್ಕೀಡಾಗಿದ್ದಾರೆ. ಈಗ ಏನು ಮಾಡುವುದು ಎಂದು ಅನೆ ಅವರಿಗೆ ಮೇಲ್‌ ಮಾಡಿದ್ದಾರೆ. ಲಾಟರಿ ಕುರಿತು ವಿವರಿಸಿದ್ದಾರೆ. ಆದರೆ, ಅನೆ ಅದೇ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ. ಇ-ಮೇಲ್‌ಅನ್ನು ಅವರು ನಿರ್ಲಕ್ಷಿಸಿ ಸುಮ್ಮನಾಗಿದ್ದಾರೆ. ಇದರಿಂದಲೂ ಅಧಿಕಾರಿಗಳಿಗೆ ಗೊಂದಲ ಉಂಟಾಗಿದೆ. ಈಗ ಲಾಟರಿ ಮೊತ್ತವನ್ನು ಇಟ್ಟುಕೊಳ್ಳುವ ಹಾಗೂ ಇಲ್ಲ, ಕೊಡೋಣವೆಂದರೆ ಮಹಿಳೆಯು ಸಿಗುತ್ತಿಲ್ಲ. ಹಾಗಾಗಿ, ಅಧಿಕಾರಿಗಳಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

ಲಾಟರಿ ಕಂಪನಿ ಅಧಿಕಾರಿಗಳು ಅಷ್ಟಕ್ಕೇ ಸುಮ್ಮನಾಗಿಲ್ಲ. ಅನೆ ಅವರ ವಿಳಾಸವನ್ನು ಹುಡುಕಿದ್ದಾರೆ. ಗಲ್ಲಿ ಗಲ್ಲಿ ಸುತ್ತಾಡಿ ಕೊನೆಗೂ ಅನೆ ಅವರನ್ನು ಹುಡುಕಿ, ಅವರಿಗೆ ಒಂದು ಕೋಟಿ ರೂ. ಮೌಲ್ಯದ ಚೆಕ್‌ ನೀಡಿದ್ದಾರೆ. ಇದನ್ನು ಕಂಡ ಅನೆ ಹಾಗೂ ಸುತ್ತಮುತ್ತಲಿನವರಿಗೆ ಆಶ್ಚರ್ಯ ಉಂಟಾಗಿದೆ. “ನನಗೆ ಕರೆ ಮಾಡಿದರು, ಇ-ಮೇಲ್‌ ಮಾಡಿದರು. ಇದೆಲ್ಲ ಸ್ಕ್ಯಾಮ್‌ ಇರಬಹುದು ಎಂದು ಸುಮ್ಮನಾದೆ. ಆದರೆ, ಅಧಿಕಾರಿಗಳು ಮನೆಗೇ ಬಂದು ಚೆಕ್‌ ನೀಡಿದ್ದಾರೆ. ಇದರಲ್ಲಿ ಒಂದಷ್ಟು ಹಣವನ್ನು ದಾನವಾಗಿ ನೀಡುವೆ” ಎಂದು ಅನೆ ತಿಳಿಸಿದ್ದಾರೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಮುದ್ರಾ ಯೋಜನೆಯ ಹೆಸರಲ್ಲಿ ರಾಷ್ಟ್ರವ್ಯಾಪಿ ಸೈಬರ್ ವಂಚನೆ

Continue Reading
Advertisement
PBKS vs CSK
ಕ್ರೀಡೆ2 mins ago

PBKS vs CSK: ಕೆಕೆಆರ್​ ದಾಖಲೆ ಹಿಂದಿಕ್ಕಿದ ಪಂಜಾಬ್​ ಕಿಂಗ್ಸ್

Parineeti Chopra husband Raghav Chadha doing well after eye surgery
ಬಾಲಿವುಡ್11 mins ago

Parineeti Chopra: ಪರಿಣಿತಿ ಚೋಪ್ರಾ ಪತಿ ಕಣ್ಣು ಕಳೆದುಕೊಳ್ಳುವ ಸಾಧ್ಯತೆ: ವೈದ್ಯರು ಹೇಳೋದೇನು?

Rahul Gandhi
ಪ್ರಮುಖ ಸುದ್ದಿ18 mins ago

Rahul Gandhi: ಇಂದು ಶಿವಮೊಗ್ಗದಲ್ಲಿ ರಾಹುಲ್‌ ಗಾಂಧಿ ಪ್ರಚಾರ; ಪ್ರಜ್ವಲ್‌ ರೇವಣ್ಣ ವಿಚಾರ ತೆಗೀತಾರಾ?

Job Alert
ಉದ್ಯೋಗ23 mins ago

Job Alert: ಗಮನಿಸಿ; ಹಟ್ಟಿ ಚಿನ್ನದ ಗಣಿ ಕಂಪನಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

After SSLC career options
ಶಿಕ್ಷಣ27 mins ago

Best Courses After SSLC: ವಿಜ್ಞಾನ, ವಾಣಿಜ್ಯ, ಕಲೆ; ಯಾವುದು ಉತ್ತಮ ಆಯ್ಕೆ?

Thomas Cup 2024
ಬ್ಯಾಡ್ಮಿಂಟನ್27 mins ago

Thomas Cup 2024: ಅಂತಿಮ ಲೀಗ್​ ಪಂದ್ಯದಲ್ಲಿ ಇಂಡೊನೇಷ್ಯಾಕ್ಕೆ ಮಣಿದ ಭಾರತ

Aadhaar Crads For Dog
ಪ್ರಮುಖ ಸುದ್ದಿ32 mins ago

Aadhaar Crads For Dog: ದೆಹಲಿಯಲ್ಲಿ ನಾಯಿಗಳಿಗೂ ಬಂತು ಆಧಾರ್ ಕಾರ್ಡ್!

Pushpa 2 The Rule Title track out
ಟಾಲಿವುಡ್43 mins ago

Pushpa 2: ‘ಪುಷ್ಪ 2’ ಟೈಟಲ್​ ಸಾಂಗ್ ಔಟ್‌: ಸ್ಟೈಲಿಶ್‌ ಆಗಿ ಎಂಟ್ರಿ ಕೊಟ್ಟ ಅಲ್ಲು ಅರ್ಜುನ್!

Congress Candidate List
Lok Sabha Election 202447 mins ago

Congress Candidate List: ಅಮೇಥಿ, ರಾಯ್‌ ಬರೇಲಿಯಿಂದ ರಾಹುಲ್‌, ಪ್ರಿಯಾಂಕಾ ಸ್ಪರ್ಧಿಸುತ್ತಾರಾ? ಕುತೂಹಲಕ್ಕೆ ಇಂದು ತೆರೆ

Asaduddin Owaisi
ದೇಶ49 mins ago

Asaduddin Owaisi: ಅಸಾದುದ್ದೀನ್‌ ಓವೈಸಿಯ ಭರ್ಜರಿ ಬೈಕ್‌ ರೈಡ್‌;ವಿಡಿಯೋ ವೈರಲ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ5 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌