ಆಸ್ತಿಯ ವಿಚಾರಕ್ಕೆ ಕುಟುಂಬಸ್ಥರೇ ಕಿತ್ತಾಡುವುದು ಆಗಾಗ ನಡೆಯುತ್ತಲೇ ಇರುತ್ತದೆ. ಇದು ಇಂದಿನ ಸಮಸ್ಯೆಯಲ್ಲ. ಬಹಳ ಹಿಂದಿನ ಕಾಲದಿಂದಲೂ ಅಂದರೆ ರಾಮಾಯಣ, ಮಹಾಭಾರತದಲ್ಲಿಯೂ ಆಸ್ತಿಯ ವಿಚಾರಕ್ಕೆ ಜಗಳ ನಡೆಯುತ್ತಲೇ ಇತ್ತು. ಜನರು ಆಸ್ತಿಗಾಗಿ ತಮ್ಮವರನ್ನೇ ಹೊಡೆದು ಸಾಯಿಸುತ್ತಿದ್ದಾರೆ. ಇದೀಗ ಅಂತಹದೊಂದು ಘಟನೆ ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.
ಆಂಧ್ರಪ್ರದೇಶದ ಅನಂತಪುರದ ಪೆನಕಚೆರ್ಲಾ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಸಹೋದರಿಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಭಯಾನಕ ಘಟನೆಯನ್ನು ವಿಡಿಯೊ ಮಾಡಿ @vani_mehrotra ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದು ಈಗ ವೈರಲ್ ಆಗಿದೆ. ಆಂಧ್ರಪ್ರದೇಶದ ಅನಂತಪುರದಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಅಕ್ಕನ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವ್ಯಕ್ತಿಯನ್ನು ಬಂಧಿಸಲಾಗಿದೆಯಂತೆ.
Man attacks elder sister with axe over land dispute in Andhra Pradesh's Ananthapur.
— Vani Mehrotra (@vani_mehrotra) July 10, 2024
The woman was hospitalised, while the man was arrested. pic.twitter.com/vAedJhpUKD
ವರದಿ ಪ್ರಕಾರ, ಈ ಘಟನೆಯನ್ನು ಪೊಲೀಸರ ಗಮನಕ್ಕೆ ತಂದಿದ್ದು, ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಮಹಿಳೆಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಮಹಿಳೆಯನ್ನು ಮೆಹಬೂಬಿ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಜಿಲಾನಿ ಎಂದು ಗುರುತಿಸಲಾಗಿದೆ. ಮೆಹಬೂಬಿ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೆಹಬೂಬಿ ಪೆನಕಚೆರ್ಲಾ ಗ್ರಾಮದ ನಿರ್ದಿಷ್ಟ ಸ್ಥಳದಲ್ಲಿ ವಾಸಿಸುತ್ತಿದ್ದರು. ಮನೆಯನ್ನು ಖಾಲಿ ಮಾಡುವಂತೆ ಜಿಲಾನಿ ತನ್ನ ಸಹೋದರಿಗೆ ಆಗಾಗ ಬೆದರಿಕೆ ಹಾಕುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕಾನೂನಾತ್ಮಕವಾಗಿ, ಆ ಮನೆ ನಿಜವಾಗಿಯೂ ಯಾರಿಗೆ ಸೇರಿದೆ ಎಂದು ಇನ್ನೂ ಪತ್ತೆಯಾಗಿಲ್ಲ. ಆದರೆ ಮೆಹಬೂಬಿ ಮೇಲೆ ಹಲ್ಲೆ ನಡೆಸಿದ ಜಿಲಾನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಅನಂತ್ ಅಂಬಾನಿ ಮದುವೆ ಖರ್ಚು 2672 ಕೋಟಿ ರೂ! ಇನ್ನಿಬ್ಬರು ಮಕ್ಕಳ ಮದುವೆಗೆ ಎಷ್ಟು ಖರ್ಚಾಗಿತ್ತು?
ಆಸ್ತಿ ವಿಚಾರಕ್ಕೆ ಸಂಬಂಧಿಕರು ಕಿತ್ತಾಡಿ ಹಲ್ಲೆ ಮಾಡುವುದು ಇದೇ ಮೊದಲಲ್ಲಾ. ಇದಕ್ಕೂ ಮುನ್ನ ಜುಲೈನಲ್ಲಿ, ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ದಗಡ್ಖೇಡಿ ಗ್ರಾಮದಲ್ಲಿ ಇಬ್ಬರು ರೈತರು ಹೊಲದ ವಿಚಾರಕ್ಕೆ ಜಗಳವಾಡಿ ಅವರಲ್ಲಿ ಒಬ್ಬ ಮತ್ತೊಬ್ಬನನ್ನು ಕೊಲೆ ಮಾಡಿದ್ದಾನೆ. ರೈತನನ್ನು ಟ್ರ್ಯಾಕ್ಟರ್ ನಿಂದ ಡಿಕ್ಕಿ ಹೊಡೆದು ಕೊಂದಿದ್ದಾರೆ. ಮೃತ ವ್ಯಕ್ತಿಯನ್ನು ನಾರಾಯಣ್ ಎಂದು ಗುರುತಿಸಲಾಗಿದೆ. ಈ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದರು.