Site icon Vistara News

Viral Video: ಕಾಮುಕರ ಹಾವಳಿ ಮಿತಿ‌ ಮೀರಿದೆ; ಬೀದಿ ನಾಯಿಯನ್ನೂ ಇವರು ಬಿಡುತ್ತಿಲ್ಲ! ಆಘಾತಕಾರಿ ವಿಡಿಯೊ

Viral Video


ಮುಂಬೈ : ಕಾಮುಕರು ತಮ್ಮ ಕಾಮದಾಟಕ್ಕೆ ಮನುಷ್ಯರನ್ನು ಮಾತ್ರವಲ್ಲ ಪ್ರಾಣಿಗಳನ್ನು ಕೂಡ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಲೈಂಗಿಕ ಬಯಕೆಯನ್ನು ತೀರಿಸಿಕೊಳ್ಳಲು ಮೂಕ ಪ್ರಾಣಿಗಳ ಮೇಲೂ ದೌರ್ಜನ್ಯ ಎಸಗುತ್ತಿದ್ದಾರೆ. ಇದೀಗ ಅಂತಹದೊಂದು ಘಟನೆ ಬೆಳಕಿಗೆ ಬಂದಿದ್ದು, ವಿಕೃತ ಕಾಮುಕನೊಬ್ಬ ಬೀದಿ ನಾಯಿಗೆ ಪದೇ ಪದೇ ಲೈಂಗಿಕ ಕಿರುಕುಳ ನೀಡಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಗುರ್ಗಾಂವ್‍ನ ಸೆಕ್ಟರ್ 48ರಲ್ಲಿ ವೃದ್ಧನೊಬ್ಬ ಬೀದಿಯಲ್ಲಿ ಮಲಗಿದ್ದ ಗಂಡು ನಾಯಿಯ ಖಾಸಗಿ ಭಾಗಗಳನ್ನು ಪದೇ ಪದೇ ಸ್ಪರ್ಶಿಸುವ ಮೂಲಕ ಬಹಿರಂಗವಾಗಿ ಕಿರುಕುಳ ನೀಡಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಮುಂಬೈನ ಸ್ಟ್ರೀಟ್ ಅನಿಮಲ್ಸ್ ಎಂಬ ಇನ್ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೊದಲ್ಲಿ ಕೆಲವು ಅಸಹ್ಯವಾದ ತುಣುಕುಗಳನ್ನು ಸೆನ್ಸಾರ್ ಮಾಡಲಾಗಿದ್ದು, ಅಲ್ಲಿ ವೃದ್ಧ ವ್ಯಕ್ತಿ ಬೀದಿ ನಾಯಿಯನ್ನು ತನ್ನ ಕಡೆಗೆ ಸೆಳೆಯುವುದು ಮತ್ತು ಅನುಚಿತವಾಗಿ ಸ್ಪರ್ಶಿಸುವುದು ಕಂಡುಬಂದಿದೆ.

ಇದರಲ್ಲಿ ಮೊದಲು ವ್ಯಕ್ತಿಯು ನಾಯಿಯನ್ನು ನೆಲದ ಮೇಲೆ ಮಲಗುವಂತೆ ಒತ್ತಾಯಿಸುವುದನ್ನು ತೋರಿಸುತ್ತದೆ. ಆತ ತನ್ನ ಕೈಗಳಿಂದ ನಾಯಿಯ ಮೈಯನ್ನು ಸವರುತ್ತಿದ್ದಾನೆ. ನಾಯಿ ಎಚ್ಚರಗೊಂಡು ನೇರವಾಗಿ ನಿಲ್ಲಲು ಪ್ರಯತ್ನಿಸಿದಾಗ, ಆತ ಪದೇ ಪದೇ ಪ್ರಾಣಿಯನ್ನು ವಿಶ್ರಾಂತಿ ಪಡೆಯುವಂತೆ ಮಾಡಿದ. ನಂತರ ಅವನು ಅದರ ಖಾಸಗಿ ಭಾಗಗಳನ್ನು ಸ್ಪರ್ಶಿಸುವುದನ್ನು ಮುಂದುವರಿಸಿದ.

ಮತ್ತೊಂದು ಘಟನೆಯಲ್ಲಿ, ಅದೇ ವ್ಯಕ್ತಿ ಮತ್ತೊಮ್ಮೆ ತಮ್ಮ ನಿವಾಸದ ಹೊರಗೆ ಬೀದಿ ನಾಯಿಗೆ ಕಿರುಕುಳ ನೀಡುತ್ತಿರುವುದು ಕಂಡುಬಂದಿದೆ. ಅವನು ನಾಯಿಯ ಜನನಾಂಗಗಳನ್ನು ಕಂಡುಹಿಡಿಯಲು ಮತ್ತು ಅವುಗಳನ್ನು ಮಟ್ಟಲು ಪ್ರಯತ್ನಿಸುತ್ತಿದ್ದ. ಇದಲ್ಲದೆ, ವ್ಯಕ್ತಿಯು ಕುರ್ಚಿಯ ಮೇಲೆ ಕುಳಿತು ತನ್ನ ಬರಿಗೈಯಿಂದ ನಾಯಿಯನ್ನು ಅನುಚಿತವಾಗಿ ಸ್ಪರ್ಶಿಸುವುದನ್ನು ವೀಡಿಯೊ ತೋರಿಸುತ್ತದೆ. ಆದರೆ ವ್ಯಕ್ತಿಯ ಈ ಅನುಚಿತ ವರ್ತನೆಯ ಬಗ್ಗೆ ಕ್ರಮ ಕೈಗೊಳ್ಳಲು ಸ್ಥಳೀಯ ಯುವತಿಯೊಬ್ಬಳು ಪೊಲೀಸರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಆತನ ವಿರುದ್ಧ ಯಾವುದೇ ಪೊಲೀಸ್ ಕ್ರಮ ದಾಖಲಾಗಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಮೊಬೈಲ್‌ನಲ್ಲಿ ಮಾತನಾಡುತ್ತ ರಸ್ತೆ ದಾಟಿದರೆ ಏನಾಗುತ್ತದೆ ನೋಡಿ; ಬೆಚ್ಚಿ ಬೀಳಿಸುವ ವಿಡಿಯೊ

Viral Video

ಪ್ರಾಣಿಗಳ ಮೇಲಿನ ಲೈಂಗಿಕ ದೌರ್ಜನ್ಯ ಭಾರತದಲ್ಲಿ ಮಾತ್ರವಲ್ಲ ಎಲ್ಲಾ ಕಡೆ ನಡೆಯುತ್ತಿದೆ. ಇದೀಗ ಬರೋಬ್ಬರಿ 60ಕ್ಕೂ ಹೆಚ್ಚು ನಾಯಿಗಳನ್ನು ಅತ್ಯಾಚಾರ ಮಾಡಿ, ಕೊಂದ ಪ್ರಕರಣದಲ್ಲಿ ಖ್ಯಾತ ಪ್ರಾಣಿಶಾಸ್ತ್ರಜ್ಞ ಆಡಂ ಬ್ರಿಟನ್‌ಗೆ 249 ವರ್ಷಗಳ ಜೈಲು ಶಿಕ್ಷೆಯಾಗಿದೆ. ಆತ ನಾಯಿಗಳನ್ನು ಕೋಣೆಗಳಲ್ಲಿ ಕೂಡಿ ಹಾಕಿ ವಿಚಿತ್ರವಾಗಿ ಹಿಂಸಿಸುತ್ತಿದ್ದನು. ಅತ್ಯಾಚಾರವೆಸಗಿ ಬರ್ಬರವಾಗಿ ಕೊಂದಿದ್ದನು ಎನ್ನಲಾಗಿತ್ತು. ವಿಚಾರಣೆಯ ವೇಳೆ ಈತನೂ ತನ್ನ ತಪ್ಪನ್ನು ಒಪ್ಪಿದ್ದನು. ಹೀಗಾಗಿ ಆತನಿಗೆ ಕೋರ್ಟ್ ಈಗ ಶಿಕ್ಷೆ ವಿಧಿಸಿದೆ.

Exit mobile version