Site icon Vistara News

Weight Loss: ಈ ವ್ಯಕ್ತಿ 445 ಕೆ.ಜಿ ಇದ್ದರು, ಈಗ 228 ಕೆ.ಜಿಗೆ ಇಳಿದಿದ್ದಾರೆ! ಇವರ ಬದುಕು ಕರುಣಾಜನಕ

ತೂಕ ಹೆಚ್ಚಳ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರಲ್ಲೂ ಕಾಡುವಂತಹ ಸಮಸ್ಯೆಯಾಗಿದೆ. ಹಾಗಾಗಿ ಕೆಲವರು ಈ ತೂಕವನ್ನು ಇಳಿಸಲು ಆರೋಗ್ಯಕರ ಮಾರ್ಗಗಳನ್ನು ಅನುಸರಿಸಿದರೆ ಕೆಲವರು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗುತ್ತಾರೆ. ಆದರೆ ಇದರಿಂದ ಅಡ್ಡಪರಿಣಾಮಗಳುಂಟಾಗುವ ಸಾಧ್ಯತೆ ಹೆಚ್ಚು. ಅಲ್ಲದೇ ಇದು ಜೀವಕ್ಕೂ ಅಪಾಯವಾಗಬಹುದು. ಈ ತೂಕ ಇಳಿಸಿಕೊಳ್ಳಲು ಹೋಗಿ ಅನೇಕರು ಸಾವನಪ್ಪಿರುವುದು ನಮಗೆ ಈಗಾಗಲೇ ತಿಳಿದಿದೆ. ಇದೀಗ ವ್ಯಕ್ತಿಯೊಬ್ಬ ತೂಕ (Weight Loss) ಇಳಿಸಿಕೊಳ್ಳಲು ಹೋಗಿ ತಾನು ನಡೆಯುವ ಶಕ್ತಿಯನ್ನೇ ಕಳೆದುಕೊಂಡಿದ್ದಾನೆ.

Weight Loss

ಸಫೋಲ್ಕ್ ನಿವಾಸಿ ಪಾಲ್ ಮೇಸನ್ ಒಂದು ಕಾಲದಲ್ಲಿ 444.5 ಕೆಜಿ ತೂಕವನ್ನು ಹೊಂದಿದ್ದರು. ಆದರೆ ತೂಕ ಇಳಿಸಿಕೊಂಡು ಈಗ 228 ಕೆಜಿ ತೂಕ ಹೊಂದಿದ್ದಾರೆ. ಆದರೆ ವಿಪರ್ಯಾಸವೆನೆಂದರೆ ಅವರಿಗೆ ತಮ್ಮ ಕಾಲಿನಿಂದ ನಡೆಯಲು ಆಗುತ್ತಿಲ್ಲ, ಅವರು ಕಾಲಿನ ಶಕ್ತಿ ಕಳೆದುಕೊಂಡು ಹಾಸಿಗೆ ಹಿಡಿದಿದ್ದಾರೆ. ಅವರು ಮತ್ತೆ ಎಂದಿಗೂ ನಡೆಯುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Weight Loss

ಕರೋನವೈರಸ್ ಲಾಕ್‍ಡೌನ್ ನಂತರ ಖಿನ್ನತೆಗೆ ಒಳಗಾದ ಅವರು ಅತಿಯಾಗಿ ಆಹಾರ ಸೇವನೆ ಮಾಡಿ ತಮ್ಮ ತೂಕವನ್ನು ಹೆಚ್ಚಿಸಿಕೊಂಡಿದ್ದರು. ಅಲ್ಲದೆ, ಆಗ ಬ್ರಿಟನ್‌ನ ಅತ್ಯಂತ ತೂಕಯುಳ್ಳ ವ್ಯಕ್ತಿ ಜೇಸನ್ ಹೋಲ್ಟನ್ ಅವರ ಸಾವಿನ ಸುದ್ದಿ ಇವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿತು. ಈ ಮಾನಸಿಕ ಆರೋಗ್ಯ ಸಮಸ್ಯೆಗಳು ಅವರ ತೂಕ ಹೆಚ್ಚಳಕ್ಕೆ ಕಾರಣವಾದವು. ಅಲ್ಲದೇ ಅವರಿಗೆ ಬಾಲ್ಯದಲ್ಲಿರುವಾಗ ಕುಟುಂಬಸ್ಥರು ಅವರ ಮೇಲೆ ಮೌಖಿಕ ಮತ್ತು ದೈಹಿಕ ನಿಂದನೆಗಳನ್ನು ಮಾಡುತ್ತಿದ್ದರು. ಪದೇ ಪದೇ ತಲೆಗೂ ಹೊಡೆಯುತ್ತಿದ್ದರು. ಆರು ವರ್ಷದವನಾಗಿದ್ದಾಗಿನಿಂದ ಮೂರು ವರ್ಷಗಳ ಕಾಲ ಕುಟುಂಬದ ಸದಸ್ಯರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೇನೆ ಎಂದು ಅವರು ಹೇಳಿದ್ದಾರೆ.

Weight Loss

2015 ರಲ್ಲಿ ಗ್ಯಾಸ್ಟ್ರಿಕ್ ಬೈಪಾಸ್ ಆದ ನಂತರ, ಪಾಲ್ 120 ಕೆಜಿ ತೂಕ ಕಳೆದುಕೊಂಡರು. ಮತ್ತು ಅವರು ತಮ್ಮ ಹೆಚ್ಚುವರಿ ಚರ್ಮವನ್ನು ಕತ್ತರಿಸಲು ಸರಣಿ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಲು ಯುಎಸ್‍ಗೆ ಹೋಗಿದ್ದರಂತೆ. ಅಲ್ಲಿ ತಮ್ಮ ಜೀವನ ಸಂಗಾತಿಯನ್ನು ಸಹ ಭೇಟಿಯಾಗಿದ್ದರು. ಆದರೆ ಅವರ ಮಾನಸಿಕ ಆರೋಗ್ಯವು ಹದಗೆಡುತ್ತಲೇ ಇತ್ತು ಎಂದು ಅವರು ತಿಳಿಸಿದ್ದಾರೆ. ಅವರು 40 ವರ್ಷ ಬದುಕುವುದೇ ಹೆಚ್ಚು ಎಂದು ವೈದ್ಯರು ಹೇಳಿದ್ದರಂತೆ. ಆದರೆ ಈಗ ಅವರು 64 ವರ್ಷಕ್ಕೆ ಕಾಲಿಟ್ಟಿದ್ದಾರೆ ಮತ್ತು ಬದುಕು ಸಾಗಿಸಲು ಸಾಕಷ್ಟು ಪಿಂಚಣಿ ಕೂಡ ಸಿಗುತ್ತಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅಲ್ಲದೇ ತನಗೆ ನಡೆದಾಡಲು ಕಷ್ಟವಾದರೂ ತನ್ನ ಕೆಲಸ ತಾನೇ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

Weight Loss

ಹಾಗಾಗಿ ತೂಕವನ್ನು ಕಳೆದುಕೊಳ್ಳುವುದು ಸಾಕಷ್ಟು ಕಠಿಣ ಕೆಲಸವಾಗಿದ್ದರೂ ಅದನ್ನು ಆರೋಗ್ಯಕರ ರೀತಿಯಲ್ಲಿ ಇಳಿಸಿಕೊಳ್ಳಲು ಪ್ರಯತ್ನಿಸಿ ಎಂದು ತಜ್ಞರು ತಿಳಿಸುತ್ತಾರೆ. ತಜ್ಞರ ಪ್ರಕಾರ, ಆಹಾರ ಮತ್ತು ವ್ಯಾಯಾಮ ಎರಡರ ಸಮತೋಲನವು ನಿಮ್ಮ ಗುರಿಯನ್ನು ಆರೋಗ್ಯಕರ ರೀತಿಯಲ್ಲಿ ಸಾಧಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ನೀವು ತೂಕ ಇಳಿಸಿಕೊಳ್ಳಲು ಎಂಟು ಸುಲಭ ಮಾರ್ಗಗಳನ್ನು ಅನುಸರಿಸಿ.

ಇದನ್ನೂ ಓದಿ:ಉಗ್ರರ ದಾಳಿ; ಭಾರತೀಯ ಸೇನೆಯಲ್ಲಿದ್ದ ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬ

ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ. ಆರೋಗ್ಯಕರ, ತಾಜಾ ಮತ್ತು ಕಾಲೋಚಿತ ಆಹಾರವನ್ನು ಸೇವಿಸುವತ್ತ ಗಮನ ಹರಿಸಿ. ಸಾಕಷ್ಟು ಫೈಬರ್ ಮತ್ತು ಪ್ರೋಟೀನ್ ಆಹಾರ ಸೇವಿಸಿ. ಆಹಾರದ ಜೊತೆಗೆ ಪ್ರತಿದಿನ ವಾಕಿಂಗ್, ನಿಯಮಿತವಾಗಿ ವ್ಯಾಯಾಮ ಮಾಡಿ. ಹಾಗೇ ಸಾಕಷ್ಟು ನೀರು ಕುಡಿಯಿರಿ. ಚೆನ್ನಾಗಿ ನಿದ್ರೆ ಮಾಡಿ.

Exit mobile version