Site icon Vistara News

World’s Oldest Man: ವಿಶ್ವದ ಅತ್ಯಂತ ಹಿರಿಯ 124 ವರ್ಷದ ವ್ಯಕ್ತಿ ಎಲ್ಲಿ, ಹೇಗಿದ್ದಾರೆ ನೋಡಿ!

World's oldest man

ಪೆರು: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ (World’s oldest man) ಪೆರುವಿನಲ್ಲಿ (Peru) ವಾಸವಾಗಿದ್ದು, ಶೀಘ್ರದಲ್ಲೇ ಇವರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ (Guinness Book of World Record) ಸೇರುವ ಸಾಧ್ಯತೆ ಇದೆ. ಈ ಬಗ್ಗೆ ಪೆರುವಿನ ಅಧಿಕಾರಿಗಳು ಮಾಹಿತಿ ನೀಡಿದ್ದು, ವಿಶ್ವದ ಅತ್ಯಂತ ಹಿರಿಯ 124 ವರ್ಷದ ವ್ಯಕ್ತಿಯ ಹೆಸರನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

124 ವರ್ಷದ ಮಾರ್ಸೆಲಿನೊ ಅಬಾದ್ ಟೊಲೆಂಟಿನೊ (Marcelino Abad Tolentino) ಅಥವಾ ಮಶಿಕೊ (Mashico) ವ್ಯಕ್ತಿ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ. ಇವರು 1900ರಲ್ಲಿ ಜನಿಸಿದ್ದು, ಪ್ರಸ್ತುತ ಮಧ್ಯ ಪೆರುವಿನ ಹುವಾನುಕೊ (Huanuco) ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

124ನೇ ವರ್ಷಕ್ಕೆ ಪದಾರ್ಪಣೆ

ಉತ್ತಮ ಆರೋಗ್ಯ ಮತ್ತು ಸ್ನೇಹಪರ ವ್ಯಕ್ತಿತ್ವ ಹೊಂದಿರುವ ಮಾರ್ಸೆಲಿನೊ ಅಬಾದ್ ಟೊಲೆಂಟಿನೊ, ಏಪ್ರಿಲ್ 5ರಂದು 124 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಆಗ ಇವರ ಕೇಕ್ ಮೇಲೆ 124 ಮೇಣದಬತ್ತಿಗಳನ್ನು ಉರಿಸಲಾಗಿತ್ತು. ಇವರು 12 ದಶಕಗಳ ಜೀವನಾನುಭವ ಹೊಂದಿದ್ದಾರೆ.

ಇದನ್ನೂ ಓದಿ: Dog Breeds: 23 ಅಪಾಯಕಾರಿ ತಳಿಯ ಶ್ವಾನಗಳ ನಿಷೇಧ; ಕೇಂದ್ರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ!

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ಗೆ ಇವರ ಅರ್ಜಿಯನ್ನು ಪರಿಶೀಲಿಸಲು ಅಬಾದ್‌ಗೆ ಸಹಾಯ ಮಾಡುತ್ತಿದ್ದೇವೆ ಎಂದು ಪೆರುವಿಯನ್ ಅಧಿಕಾರಿಗಳು ಹೇಳಿದ್ದಾರೆ.

ಗಿನ್ನಿಸ್ ವಿಶ್ವ ದಾಖಲೆಗಳು ಜೀವಂತವಾಗಿರುವ ಅತ್ಯಂತ ಹಿರಿಯ ವ್ಯಕ್ತಿ ಎಂದು ಕರೆಯಲ್ಪಡುವ ಹಲವರಿಂದ ಅರ್ಜಿಗಳನ್ನು ಸ್ವೀಕರಿಸುತ್ತಿವೆ. ಅಬಾದ್ ಮತ್ತು ಅವರ ವಯಸ್ಸಿಗೆ ಸಂಬಂಧಿಸಿದ ಅಧಿಕೃತ ದಾಖಲೆ ಮತ್ತು ಇತರ ಪುರಾವೆಗಳನ್ನು ಪರಿಶೀಲಿಸಲಾಗುತ್ತಿದೆ.


ಇತ್ತೀಚೆಗೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಬ್ರಿಟನ್‌ನ 111 ವರ್ಷದ ವ್ಯಕ್ತಿಯನ್ನು ಬದುಕಿರುವ ಅತ್ಯಂತ ಹಿರಿಯ ವ್ಯಕ್ತಿ ಎಂದು ಪಟ್ಟಿ ಮಾಡಿದೆ. ಹಿಂದಿನ ದಾಖಲೆ ಹೊಂದಿದ್ದ ವೆನೆಜುವೆಲಾದ 114 ವರ್ಷ ವಯಸ್ಸಿನ ವ್ಯಕ್ತಿಯ ಮರಣದ ಬಳಿಕ ಪ್ರಸ್ತುತ ಜೀವಂತವಾಗಿರುವ ಅತ್ಯಂತ ಹಿರಿಯ ಮಹಿಳೆಗೆ ಈಗ 117 ವರ್ಷ.

ಇದುವರೆಗೆ ಬದುಕಿರುವ ಅತ್ಯಂತ ಹಳೆಯ ವ್ಯಕ್ತಿ ಪೆರುವಿನ ವ್ಯಕ್ತಿಯದ್ದು. 122ನೇ ವಯಸ್ಸಿನವರು ಇವರೆಂದು ಹೇಳುವ ಪೆರುವಿಯನ್ ಅಧಿಕಾರಿಗಳ ಮಾಹಿತಿಗೆ ಸರಿಯಾದ ದಾಖಲೆಗಳು ಲಭ್ಯವಾದರೆ ಶೀಘ್ರದಲ್ಲೇ ಅವರು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಗೆ ದಾಖಲಾಗುತ್ತಾರೆ. ಆಗ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎನ್ನುವ ಖ್ಯಾತಿ ಅವರದ್ದಾಗುತ್ತದೆ.


ಸರ್ಕಾರದ ಬಳಿ ದಾಖಲೆ

ಪೆರುವಿಯನ್ ಸರ್ಕಾರದ ಪ್ರಕಾರ ಅಬಾದ್ ಸಣ್ಣ ಪಟ್ಟಣವಾದ ಚಾಗ್ಲಾದಲ್ಲಿ ಜನಿಸಿದ್ದಾರೆ. ಅಂದಿನಿಂದ ಸರ್ಕಾರದ ನೆರವಿನಿಂದಲೇ ಜೀವನ ನಡೆಸುತ್ತಿದ್ದು, 2019ರಲ್ಲಿ ಅವರು ತಮ್ಮ ಸರ್ಕಾರಿ ಗುರುತಿನ ಚೀಟಿ ಮತ್ತು ಪಿಂಚಣಿ ಪಡೆದುಕೊಂಡರು.

ಆರೋಗ್ಯದ ಗುಟ್ಟು

ತಮ್ಮ ಆರೋಗ್ಯದ ಗುಟ್ಟನ್ನು ಹಂಚಿಕೊಂಡಿರುವ ಅವರು, ಹಣ್ಣುಗಳಲ್ಲಿ ಸಮೃದ್ಧವಾಗಿರುವ ಆಹಾರ ಮತ್ತು ಕುರಿಮರಿ ಮಾಂಸವನ್ನು ಸೇವಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಪೆರುವಿನ ಆಂಡಿಯನ್ ಸಮುದಾಯಗಳಲ್ಲಿ ಚಿರಪರಿಚಿತವಾದ ಸಂಪ್ರದಾಯವಾದ ಕೋಕಾ ಎಲೆಗಳನ್ನು ಜಗಿಯುವುದನ್ನು ಇವರು ಅಭ್ಯಾಸ ಮಾಡಿಕೊಂಡಿದ್ದಾರೆ.

Exit mobile version