Site icon Vistara News

Winter Leather Jacket Styling: ವಿಂಟರ್ ಸೀಸನ್‌ ಲೆದರ್ ಜಾಕೆಟ್ ಪ್ರಿಯರಿಗೆ 5 ಸ್ಟೈಲಿಂಗ್ ಐಡಿಯಾ

Winter Leather Jacket Styling

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಲೆದರ್ ಜಾಕೆಟ್ ಫ್ಯಾಷನ್ (Winter leather jacket styling) ಪ್ರತಿ ಚಳಿಗಾಲದಲ್ಲಿ ಮರಳುತ್ತವೆ. ಪ್ರತಿಯೊಬ್ಬರ ಬಳಿ ಒಂದಲ್ಲ ಒಂದು ವಿನ್ಯಾಸದವು ಇವು ಇದ್ದೇ ಇರುತ್ತವೆ. ಈ ಜಾಕೆಟ್‌ಗಳು ನೋಡಲು ಚೆನ್ನಾಗಿ ಕಾಣುತ್ತವೆ ಮಾತ್ರವಲ್ಲ, ಬೆಲೆ ಕೂಡ ಹೆಚ್ಚು. ಹಾಗಾಗಿ ಇವನ್ನು ಮೂಲೆಗೆ ಹಾಕದೇ, ಸ್ಟೈಲಿಶ್ ಆಗಿ ಧರಿಸುವುದು ಅಗತ್ಯ. ಹಾಗೆಂದು ಪ್ರತಿ ಬಾರಿಯೂ ಒಂದೇ ರೀತಿಯ ಸ್ಟೈಲಿಂಗ್ ಮಾಡಿದಲ್ಲಿ ಚೆನ್ನಾಗಿ ಕಾಣದು. ಧರಿಸಿದಾಗ ಇವುಗಳೊಂದಿಗೆ ಔಟ್ಫಿಟ್ ಮಿಕ್ಸ್ ಮ್ಯಾಚ್ ಮಾಡುವುದರಿಂದ ಹಾಗೂ ಡಿಫರೆಂಟ್ ಸ್ಟೈಲಿಂಗ್ ಕಾನ್ಸೆಪ್ಟ್ ಅಳವಡಿಸಿಕೊಳ್ಳುವುದರಿಂದ ನಯಾ ಲುಕ್ ಪಡೆಯಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಕಂಪ್ಲೀಟ್ ಲೆದರ್ ಔಟ್​ಫಿಟ್​ ಹೀಗೆ ಮಾಡಿ

ನಿಮ್ಮ ಬಳಿ ಲೆದರ್ ಜಾಕೆಟ್ ಹಾಗೂ ಲೆದರ್ ಪ್ಯಾಂಟ್ ಇದ್ದಲ್ಲಿ ಕಂಪ್ಲೀಟ್ ಲೆದರ್ ಔಟ್ಫಿಟ್ ಲುಕ್ ನೀಡಬಹುದು. ಯುವಕರಾದಲ್ಲಿ ಕಾಲರ್ ಟೀಶರ್ಟ್ ಜೊತೆ ಧರಿಸಬಹುದು. ಇನ್‌ಶರ್ಟ್ ಮಾಡುವುದು ಬೇಡ. ಇನ್ನು ಯುವತಿಯರಾದಲ್ಲಿ ಯಾವುದೇ ಕ್ರಾಪ್ ಟಾಪ್ ಜೊತೆ ಧರಿಸಬಹುದು. ಹೆಚ್ಚು ಆಕ್ಸೆಸರೀಸ್ ಧರಿಸುವುದು ಬೇಡ. ನೋಡಲು ಆಕರ್ಷಕವಾಗಿ ಕಾಣುತ್ತದೆ.

ಲೆದರ್ ಜಿಪ್ ಹೈ ಕಾಲರ್ಡ್ ನೆಕ್ ಜಾಕೆಟ್ ಸ್ಟೈಲಿಂಗ್

ಈ ಶೈಲಿಯ ಲೆದರ್ ಜಾಕೆಟ್ ಆದಲ್ಲಿ ಯುವಕ-ಯುವತಿಯರು ಇಬ್ಬರೂ ಧರಿಸಬಹುದು. ಜೀನ್ಸ್ ಪ್ಯಾಂಟ್ ಇದಕ್ಕೆ ಮ್ಯಾಚ್ ಆಗುತ್ತದೆ. ಕುತ್ತಿಗೆವರೆಗೂ ಮುಚ್ಚುವುದರಿಂದ ಚಳಿಗಾಲದಲ್ಲಿ ಚರ್ಮ ಬಿರುಕಾಗುವುದರಿಂದ ತಪ್ಪಿಸಿಕೊಳ್ಳಬಹುದು. ಗಾಳಿಯಿಂದ ರಕ್ಷಣೆ ಪಡೆದುಕೊಳ್ಳಬಹುದು.

ವಿಂಟೇಜ್ ಸ್ಟೈಲ್ ಲೆದರ್ ಜಾಕೆಟ್ಸ್

ವಿಂಟೇಜ್ ಶೈಲಿಯವಕ್ಕೆ ಆದಷ್ಟೂ ಸಿಂಪಲ್ ಲುಕ್ ಓಕೆ. ಬೂಟ್ಸ್ ಧರಿಸಿದರೇ ಸಖತ್ತಾಗಿ ಕಾಣುತ್ತದೆ. ಜಾಕೆಟ್ ಕಲರ್ ಆಧಾರದ ಮೇಲೆ ಸ್ಟೈಲಿಂಗ್ ಮಾಡಬೇಕಾಗುತ್ತದೆ. ಮಧ್ಯ ವಯಸ್ಕ ಪುರುಷರಿಗೆ ಇದು ಪರ್ಫೆಕ್ಟ್ ಲುಕ್ ನೀಡುತ್ತದೆ.

ಹುಡುಗಿಯರಿಗೆ ಟಾಮ್ಬಾಯ್ ಇಮೇಜ್

ಕೆಲವು ಲೆದರ್ ಜಾಕೆಟ್‌ಗಳು ಯುವತಿಯರಿಗೆ ಟಾಮ್ ಬಾಯ್ ಇಮೇಜ್ ನೀಡುತ್ತವೆ. ಅದರಲ್ಲೂ ರಾಯಲ್ ಶೈಲಿಯ ಬಟನ್ಸ್ ಇರುವ ಜಾಕೆಟ್‌ಗಳು ಮತ್ತಷ್ಟು ಆಕರ್ಷಕವಾಗಿ ಕಾಣುತ್ತವೆ. ಗ್ಲೌಸ್ ಜೊತೆಗೆ ಬೂಟ್ಸ್ ಧರಿಸಿ, ಇದಕ್ಕೆ ಸೂಕ್ತವಾದ ಹೈ ಪೋನಿಟೇಲ್ ಹೇರ್‌ಸ್ಟೈಲ್ ಮಾಡುವುದು ಉತ್ತಮ.

ಪರ್ಸನಾಲಿಟಿಗೆ ತಕ್ಕಂತೆ ಸ್ಟೈಲಿಂಗ್ ಮಾಡಿ

ಉದ್ದಗಿರುವವರಿಗೆ ಯಾವುದೇ ಬಗೆಯ ಲೆದರ್ ವಿನ್ಯಾಸದ ಜಾಕೆಟ್‌ಗಳು ಸೂಟ್ ಆಗುತ್ತವೆ. ಕೊಂಚ ಕುಳ್ಳಗಿನ ದೇಹ ಹೊಂದಿರುವವರಿಗೆ ಆದಷ್ಟು ತೆಳುವಾದ ಲೇಯರ್ ಹೊಂದಿರುವ ಜಾಕೆಟ್‌ಗಳು ಉತ್ತಮ. ಪರ್ಸನಾಲಿಟಿಗೆ ತಕ್ಕಂತೆ ಧರಿಸುವುದು ಉತ್ತಮ.

ಲೆದರ್ ಜಾಕೆಟ್ ಪ್ರಿಯರ ಗಮನಕ್ಕೆ

(ಲೇಖಕಿ : ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ: Wedding Fashion: ಮದುಮಗನ ಆರತಕ್ಷತೆಯ ಗ್ರ್ಯಾಂಡ್‌ ಔಟ್‌ಫಿಟ್‌ ಆಯ್ಕೆಗೆ ಇಲ್ಲಿದೆ 5 ಸಿಂಪಲ್‌ ಸೂತ್ರ

Exit mobile version